Difference between revisions of "Linux-AWK/C2/Loops-in-awk/Kannada"
Sandhya.np14 (Talk | contribs) |
Sandhya.np14 (Talk | contribs) |
||
Line 68: | Line 68: | ||
|- | |- | ||
| 02:04 | | 02:04 | ||
− | | ಇಲ್ಲಿ, ನಾವು ಇನ್ನೂ ಒಂದು ವೇರಿಯಬಲ್ '''f''' ಅನ್ನು ತೆಗೆದುಕೊಂಡು, ಅದನ್ನು 1 ಗೆ ಇನಿಶಿಯಲೈಸ್ ಮಾಡಿದ್ದೇವೆ. | + | | ಇಲ್ಲಿ, ನಾವು ಇನ್ನೂ ಒಂದು ವೇರಿಯಬಲ್ ''''f'''' ಅನ್ನು ತೆಗೆದುಕೊಂಡು, ಅದನ್ನು 1 ಗೆ ಇನಿಶಿಯಲೈಸ್ ಮಾಡಿದ್ದೇವೆ. |
|- | |- | ||
| 02:10 | | 02:10 | ||
− | | ವೇರಿಯಬಲ್ '''f''', ಪ್ರತಿಯೊಂದು ರೆಕಾರ್ಡ್ ಗಾಗಿ, 'ಫೀಲ್ಡ್ ಕೌಂಟರ್' ಅಥವಾ ಫೀಲ್ಡ್ ಗಳ ಸ್ಥಾನವನ್ನು ಪ್ರತಿನಿಧಿಸುತ್ತದೆ. | + | | ವೇರಿಯಬಲ್ ''''f'''', ಪ್ರತಿಯೊಂದು ರೆಕಾರ್ಡ್ ಗಾಗಿ, 'ಫೀಲ್ಡ್ ಕೌಂಟರ್' ಅಥವಾ ಫೀಲ್ಡ್ ಗಳ ಸ್ಥಾನವನ್ನು ಪ್ರತಿನಿಧಿಸುತ್ತದೆ. |
|- | |- | ||
| 02:17 | | 02:17 | ||
− | | ಈಗ, ನಾವು '''while ''' ಕಂಡಿಶನ್ ನಲ್ಲಿ | + | | ಈಗ, ನಾವು '''while ''' ಕಂಡಿಶನ್ ನಲ್ಲಿ ''''i',''' 3 ಕ್ಕಿಂತ ಕಡಿಮೆ ಅಥವಾ ಸಮನಾಗಿದೆಯೇ ಎಂದು ನೋಡುತ್ತೇವೆ. |
|- | |- | ||
| 02:23 | | 02:23 | ||
− | | ಹೌದು ಎಂದಾದರೆ, ಅದು ಆ ರೆಕಾರ್ಡ್ ಗಾಗಿ '''awkdemo.txt ''' ಫೈಲ್ ನಲ್ಲಿ '''f'''<sup>th</sup> | + | | ಹೌದು ಎಂದಾದರೆ, ಅದು ಆ ರೆಕಾರ್ಡ್ ಗಾಗಿ '''awkdemo.txt ''' ಫೈಲ್ ನಲ್ಲಿ '''f'''<sup>th</sup> ಫೀಲ್ಡ್ ನಲ್ಲಿಯ ವ್ಯಾಲ್ಯೂವನ್ನು ಪ್ರಿಂಟ್ ಮಾಡುತ್ತದೆ. |
|- | |- | ||
| 02:31 | | 02:31 |
Latest revision as of 22:22, 31 July 2019
|
|
00:01 | Loops in awk ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು, awk ನಲ್ಲಿ:
while, do-while, for ಮತ್ತು ಇನ್ನೂ ಹಲವು ‘ಲೂಪಿಂಗ್ ಕನ್ಸ್ಟ್ರಕ್ಟ್’ ಗಳ (looping constructs) ಬಗ್ಗೆ ಕಲಿಯುವೆವು. |
00:16 | ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು. |
00:20 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux 16.04 ಆಪರೇಟಿಂಗ್ ಸಿಸ್ಟಂ ಹಾಗೂ gedit ಟೆಕ್ಸ್ಟ್-ಎಡಿಟರ್ 3.20.1 ಅನ್ನು ಬಳಸುತ್ತಿದ್ದೇನೆ. |
00:32 | ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು. |
00:36 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ನಮ್ಮ ವೆಬ್ಸೈಟ್ನಲ್ಲಿಯ ಹಿಂದಿನ awk ಟ್ಯುಟೋರಿಯಲ್ ಗಳನ್ನು ನೋಡಿರಬೇಕು. |
00:43 | ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯ ಪರಿಚಯವಿರಬೇಕು. |
00:50 | ಇಲ್ಲದಿದ್ದರೆ, ದಯವಿಟ್ಟು ನಮ್ಮ ವೆಬ್ಸೈಟ್ನಲ್ಲಿನ ಸಂಬಂಧಿತ ಟ್ಯುಟೋರಿಯಲ್ ಗಳನ್ನು ನೋಡಿ. |
00:56 | ಈ ಟ್ಯುಟೋರಿಯಲ್ ನಲ್ಲಿ ಬಳಸಲಾದ ಫೈಲ್ಗಳು, ಇದೇ ಪೇಜ್ ನಲ್ಲಿನ Code Files ಲಿಂಕ್ನಲ್ಲಿ ಲಭ್ಯವಿರುತ್ತವೆ.
ದಯವಿಟ್ಟು ಅವುಗಳನ್ನು ಡೌನ್ಲೋಡ್ ಮಾಡಿ, ಎಕ್ಸ್ಟ್ರ್ಯಾಕ್ಟ್ (extract) ಮಾಡಿ. |
01:06 | ಒಂದು ಅಥವಾ ಹೆಚ್ಚು ಕ್ರಿಯೆಗಳನ್ನು ಪದೇ ಪದೇ ಮಾಡಲು 'ಲೂಪ್' ನಮಗೆ ಅನುಮತಿಸುತ್ತದೆ. |
01:12 | while, do-while ಮತ್ತು for ಇವು awk ನಲ್ಲಿ ಲಭ್ಯವಿರುವ ಲೂಪ್ ಗಳಾಗಿವೆ. |
01:18 | while ಲೂಪ್ ನ ಸಿಂಟ್ಯಾಕ್ಸ್ ಅನ್ನು ಇಲ್ಲಿ ನೋಡಬಹುದು. |
01:22 | While ಲೂಪ್, ಗೊತ್ತುಪಡಿಸಿದ ಕಂಡಿಶನ್ true ಆಗಿದೆಯೇ ಎಂದು ಮೊದಲು ಪರೀಕ್ಷಿಸುತ್ತದೆ. |
01:27 | ಹೌದು ಎಂದಾದರೆ, ಅದು body ಯಲ್ಲಿನ ಕೋಡ್ ಅನ್ನು ಎಕ್ಸೀಕ್ಯೂಟ್ ಮಾಡುತ್ತದೆ.
ಗೊತ್ತುಪಡಿಸಿದ while ಕಂಡಿಶನ್ true ಇರುವವರೆಗೂ ಈ 'ಲೂಪ್' ಪುನರಾವರ್ತನೆಯಾಗುತ್ತದೆ. |
01:37 | ನಾವು ಮೊದಲು ಬಳಸಿದ awkdemo.txt ಫೈಲ್ ಅನ್ನೇ ಮತ್ತೆ ಬಳಸುತ್ತೇವೆ. |
01:43 | ನಾನು ಈಗಾಗಲೇ while_loop.awk ಎಂಬ ಹೆಸರಿನ ಸ್ಕ್ರಿಪ್ಟ್ ಅನ್ನು ಬರೆದಿದ್ದೇನೆ. |
01:48 | ಇದೇ ಫೈಲ್, ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯವಿದೆ. |
01:53 | ಇಲ್ಲಿ, ನಾವು Pipe ಚಿಹ್ನೆಯನ್ನು, 'ಫೀಲ್ಡ್ ಸೆಪರೇಟರ್' ಎಂದು ಸೆಟ್ ಮಾಡಿದ್ದೇವೆ. |
01:58 | ಮೊದಲಿಗೆ, ನಾವು 'ಲೂಪ್ ವೇರಿಯೇಬಲ್ i' ನ ವ್ಯಾಲ್ಯೂಅನ್ನು 1 ಎಂದು ಸೆಟ್ ಮಾಡಬೇಕು. |
02:04 | ಇಲ್ಲಿ, ನಾವು ಇನ್ನೂ ಒಂದು ವೇರಿಯಬಲ್ 'f' ಅನ್ನು ತೆಗೆದುಕೊಂಡು, ಅದನ್ನು 1 ಗೆ ಇನಿಶಿಯಲೈಸ್ ಮಾಡಿದ್ದೇವೆ. |
02:10 | ವೇರಿಯಬಲ್ 'f', ಪ್ರತಿಯೊಂದು ರೆಕಾರ್ಡ್ ಗಾಗಿ, 'ಫೀಲ್ಡ್ ಕೌಂಟರ್' ಅಥವಾ ಫೀಲ್ಡ್ ಗಳ ಸ್ಥಾನವನ್ನು ಪ್ರತಿನಿಧಿಸುತ್ತದೆ. |
02:17 | ಈಗ, ನಾವು while ಕಂಡಿಶನ್ ನಲ್ಲಿ 'i', 3 ಕ್ಕಿಂತ ಕಡಿಮೆ ಅಥವಾ ಸಮನಾಗಿದೆಯೇ ಎಂದು ನೋಡುತ್ತೇವೆ. |
02:23 | ಹೌದು ಎಂದಾದರೆ, ಅದು ಆ ರೆಕಾರ್ಡ್ ಗಾಗಿ awkdemo.txt ಫೈಲ್ ನಲ್ಲಿ fth ಫೀಲ್ಡ್ ನಲ್ಲಿಯ ವ್ಯಾಲ್ಯೂವನ್ನು ಪ್ರಿಂಟ್ ಮಾಡುತ್ತದೆ. |
02:31 | ನಂತರ, ನಾವು 'ಫೀಲ್ಡ್ ಕೌಂಟರ್ f ' ಅನ್ನು 1 ರಿಂದ ಹೆಚ್ಚಿಸುತ್ತೇವೆ. |
02:36 | ಆನಂತರ, ನಾವು 'ಲೂಪ್ ವೇರಿಯಬಲ್ i ' ನ ವ್ಯಾಲ್ಯೂವನ್ನು ಸಹ 1 ರಿಂದ ಹೆಚ್ಚಿಸುತ್ತೇವೆ. |
02:43 | ಈ printf, ಪ್ರತಿಯೊಂದು ಸಾಲಿನ ಕೊನೆಯಲ್ಲಿ newline character ಅನ್ನು ಪ್ರಿಂಟ್ ಮಾಡಲು ಇದೆ. |
02:49 | awkdemo.txt ಫೈಲ್ನಲ್ಲಿರುವ ಎಲ್ಲಾ ರೆಕಾರ್ಡ್ ಗಳಿಗಾಗಿ, ಈ 'ಲೂಪ್' ಅನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ. |
02:55 | ಎಂದರೆ, ಪ್ರತಿಯೊಂದು ರೆಕಾರ್ಡ್ ನ ಮೊದಲ 3 ಫೀಲ್ಡ್ ಗಳನ್ನು ಪ್ರಿಂಟ್ ಮಾಡಲಾಗುತ್ತದೆ. |
03:00 | ಈಗ ಈ ಕೋಡ್ ಅನ್ನು ನಾವು ಎಕ್ಸೀಕ್ಯೂಟ್ ಮಾಡೋಣ. |
03:03 | CTRL, ALT ಮತ್ತು T ಕೀಗಳನ್ನು ಒತ್ತುವ ಮೂಲಕ 'ಟರ್ಮಿನಲ್' ಅನ್ನು ತೆರೆಯಿರಿ. |
03:09 | cd ಕಮಾಂಡ್ ಅನ್ನು ಬಳಸಿಕೊಂಡು, Code Files ಅನ್ನು ನೀವು ಡೌನ್ಲೋಡ್ ಮಾಡಿ, ಎಕ್ಸ್ಟ್ರ್ಯಾಕ್ಟ್ (extract) ಮಾಡಿರುವ ಫೋಲ್ಡರ್ಗೆ ಹೋಗಿ. |
03:16 | ಈಗ, ಹೀಗೆ ಟೈಪ್ ಮಾಡಿ: awk space hyphen small f space while_loop.awk space awkdemo.txt
Enter ಅನ್ನು ಒತ್ತಿ. |
03:29 | ಔಟ್ಪುಟ್ನಲ್ಲಿ, ಎಲ್ಲಾ ಸಾಲುಗಳ ಮೊದಲ ಮೂರು ಫೀಲ್ಡ್ ಗಳು ಇರುವುದನ್ನು ಗಮನಿಸಿ. |
03:35 | do-while ಲೂಪ್ ನೊಂದಿಗೆ ನಾವು ಇದನ್ನೇ ಮಾಡೋಣ. |
03:38 | do-while ಲೂಪ್ ನ ಸಿಂಟ್ಯಾಕ್ಸ್ ಅನ್ನು ಇಲ್ಲಿ ಕಾಣಬಹುದು. |
03:42 | do-while ಲೂಪ್, ಯಾವಾಗಲೂ body ಒಳಗಿನ ಕೋಡ್ ಅನ್ನು ಒಮ್ಮೆ ಎಕ್ಸೀಕ್ಯೂಟ್ ಮಾಡುತ್ತದೆ. |
03:47 | ನಂತರ ಅದು ಗೊತ್ತುಪಡಿಸಿದ ಕಂಡಿಶನ್ ಅನ್ನು ಪರೀಕ್ಷಿಸುತ್ತದೆ. ಈ ಕಂಡಿಶನ್, true ಆಗಿರುವವರೆಗೆ body ಒಳಗಿನ ಕೋಡ್ ಅನ್ನು ಪುನರಾವರ್ತಿಸುತ್ತದೆ. |
03:56 | ನಾನು ಈಗಾಗಲೇ ಸ್ಕ್ರಿಪ್ಟ್ ಅನ್ನು ಬರೆದು ಅದನ್ನು do_loop.awk ಎಂದು ಹೆಸರಿಸಿದ್ದೇನೆ.
ಇದೇ ಫೈಲ್ Code Files ಲಿಂಕ್ ನಲ್ಲಿ ಲಭ್ಯವಿದೆ. |
04:06 | ಈ ಕೋಡ್ನಲ್ಲಿ, ಇವುಗಳು do ಲೂಪ್ನೊಳಗಿನ ಸ್ಟೇಟ್ಮೆಂಟ್ ಗಳಾಗಿವೆ. ಇವುಗಳನ್ನು ಮೊದಲು ಎಕ್ಸೀಕ್ಯೂಟ್ ಮಾಡಲಾಗುತ್ತದೆ. ಇದು ಪರೀಕ್ಷಿಸಲಾಗುವ ಕಂಡಿಶನ್ ಆಗಿದೆ. |
04:15 | ಆನಂತರ, ಕಂಡಿಶನ್ true ಎಂದು ಇರುವವರೆಗೂ, ಲೂಪ್ ಒಳಗಿನ ಸ್ಟೇಟ್ಮೆಂಟ್ ಗಳನ್ನು ಪದೇ ಪದೇ ಎಕ್ಸೀಕ್ಯೂಟ್ ಮಾಡಲಾಗುತ್ತದೆ. |
04:23 | ಈ ಲೂಪ್, awkdemo.txt ಫೈಲ್ನಲ್ಲಿನ ಎಲ್ಲಾ ರೆಕಾರ್ಡ್ ಗಳಿಗಾಗಿ ಪುನರಾವರ್ತಿಸುತ್ತದೆ.
ಎಂದರೆ, ಎಲ್ಲಾ ರೆಕಾರ್ಡ್ ಗಳಿಗಾಗಿ, ಮೊದಲ 3 ಫೀಲ್ಡ್ ಗಳು ಪ್ರಿಂಟ್ ಮಾಡಲ್ಪಡುತ್ತವೆ. |
04:33 | ಟರ್ಮಿನಲ್ ಗೆ ಬದಲಾಯಿಸುತ್ತೇನೆ ಮತ್ತು ಅದನ್ನು ಖಾಲಿ ಮಾಡುತ್ತೇನೆ. |
04:38 | ಈಗ, ಹೀಗೆ ಟೈಪ್ ಮಾಡಿ: awk space hyphen small f space do underscore loop dot awk space awkdemo dot txt.
Enter ಅನ್ನು ಒತ್ತಿ. |
04:52 | ನಾವು ಅದೇ ಔಟ್ಪುಟ್ ಅನ್ನು ಪಡೆಯುತ್ತೇವೆ. ಹಾಗಿದ್ದಲ್ಲಿ, while ಮತ್ತು do-while ಎರಡೂ ಲೂಪ್ಗಳು ಏಕೆ ಇರುತ್ತವೆ? |
04:58 | ನಾವು ಈ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳೋಣ. |
05:00 | while underscore loop dot awk ಫೈಲ್ಗೆ ಬದಲಾಯಿಸಿ. |
05:05 | ಈಗ, 'ಲೂಪ್ ಕೌಂಟರ್ i ' ನ ವ್ಯಾಲ್ಯೂಅನ್ನು 1 ರಿಂದ 4 ಕ್ಕೆ ಬದಲಾಯಿಸಿ. |
05:11 | ಇದು ಗೊತ್ತುಪಡಿಸಿದ ಕಂಡಿಶನ್ ಅನ್ನು ಮೊದಲಿನಿಂದ false ಮಾಡುತ್ತದೆ.
ಇದರ ಅರ್ಥ, ನಾವು ಯಾವುದೇ ಔಟ್ಪುಟ್ ಅನ್ನು ಪಡೆಯಬಾರದು. |
05:19 | ಫೈಲ್ ಅನ್ನು ಸೇವ್ ಮಾಡಿ ಮತ್ತು ಟರ್ಮಿನಲ್ ಗೆ ಬದಲಾಯಿಸಿ. |
05:22 | ಟರ್ಮಿನಲ್ ಅನ್ನು ಖಾಲಿ ಮಾಡುತ್ತೇನೆ.
ಈಗ, while ಲೂಪ್ ಅನ್ನು ಎಕ್ಸೀಕ್ಯೂಟ್ ಮಾಡಲು ನಿಮಗೆ ಕಮಾಂಡ್ ಸಿಗುವವರೆಗೆ, ಅಪ್-ಆರೋ (up arrow) ಕೀಯನ್ನು ಒತ್ತಿ. |
05:30 | ಈಗ Enter ಅನ್ನು ಒತ್ತಿ. |
05:32 | ನೋಡಿ, ಖಾಲಿ ಸಾಲುಗಳ ಹೊರತು ನಾವು ಯಾವುದೇ ಔಟ್ಪುಟ್ ಪಡೆಯುತ್ತಿಲ್ಲ. |
05:37 | awkdemo.txt ಫೈಲ್ನಲ್ಲಿನ ಪ್ರತಿಯೊಂದು ರೆಕಾರ್ಡ್ಗಾಗಿ, ಔಟ್ಪುಟ್ನಲ್ಲಿ ಖಾಲಿ ಸಾಲುಗಳು ಪ್ರಿಂಟ್ ಮಾಡಲ್ಪಡುತ್ತವೆ. |
05:44 | ಈಗ, do ಲೂಪ್ ಫೈಲ್ನಲ್ಲಿ ಕೆಲವು ಬದಲಾವಣೆಗಳನ್ನು ಮಾಡೋಣ. |
05:48 | do underscore loop dot awk ಫೈಲ್ಗೆ ಬದಲಾಯಿಸಿ. |
05:53 | ‘i’ ವ್ಯಾಲ್ಯೂ ಅನ್ನು 1 ರಿಂದ 4 ಕ್ಕೆ ಬದಲಾಯಿಸಿ. |
05:57 | ಫೈಲ್ ಅನ್ನು ಸೇವ್ ಮಾಡಿ ಮತ್ತು ಟರ್ಮಿನಲ್ ಗೆ ಬದಲಾಯಿಸಿ. |
06:01 | ಟರ್ಮಿನಲ್ ಅನ್ನು ಖಾಲಿ ಮಾಡಿ.
ಈಗ, do ಲೂಪ್ ಗಾಗಿ ನಿಮಗೆ ಕಮಾಂಡ್ ಸಿಗುವವರೆಗೆ, ಅಪ್-ಆರೋ (up arrow) ಕೀಯನ್ನು ಒತ್ತಿ. ಮತ್ತು Enter ಅನ್ನು ಒತ್ತಿ. |
06:10 | ಔಟ್ಪುಟ್ನಲ್ಲಿ, ಪ್ರತಿಯೊಂದು ಸಾಲಿನ ಮೊದಲನೆಯ ಫೀಲ್ಡ್ ಅನ್ನು ಮಾತ್ರ ಪ್ರಿಂಟ್ ಮಾಡಲಾಗಿದೆ. ಏನು ಕಾರಣವಿರಬಹುದು? |
06:16 | ಮೊದಲು, ಪ್ರತಿಯೊಂದು ಸಾಲಿಗಾಗಿ awk ಮೊದಲನೆಯ ಫೀಲ್ಡ್ ನ ವ್ಯಾಲ್ಯೂವನ್ನು ಪ್ರಿಂಟ್ ಮಾಡುತ್ತದೆ. ಏಕೆಂದರೆ, ವೇರಿಯಬಲ್ f ನ ವ್ಯಾಲ್ಯೂ, '1' ರಿಂದ ಅರಂಭವಾಗುತ್ತದೆ.
ನಂತರ ಕಂಡಿಶನ್ ಅನ್ನು ಪರೀಕ್ಷಿಸಲಾಗುತ್ತದೆ. |
06:28 | 'ಲೂಪ್ ಕೌಂಟರ್ i' ನ ವ್ಯಾಲ್ಯೂ 4 ಆಗಿರುವುದರಿಂದ, ಕಂಡಿಶನ್ ಇಲ್ಲಿ false ಆಗಿದೆ.
ಆದ್ದರಿಂದ, 'ಲೂಪ್' ಅನ್ನು ಆ ರೆಕಾರ್ಡ್ ಗಾಗಿ ಅಲ್ಲಿಯೇ ಕೊನೆಗೊಳಿಸಲಾಗುತ್ತದೆ. |
06:39 | ಈ ಲೂಪ್, awkdemo.txt ಫೈಲ್ನಲ್ಲಿಯ ಎಲ್ಲಾ ರೆಕಾರ್ಡ್ ಗಳಿಗಾಗಿ ಪುನರಾವರ್ತಿಸುತ್ತದೆ. |
06:44 | ಇದರರ್ಥ, ಪ್ರತಿಯೊಂದು ರೆಕಾರ್ಡ್ ಗಾಗಿ, ಮೊದಲನೆಯ ಫೀಲ್ಡ್, ಪ್ರಿಂಟ್ ಮಾಡಲ್ಪಡುತ್ತದೆ. |
06:49 | ಪ್ರತಿಯೊಂದು ರೆಕಾರ್ಡ್ ಗಾಗಿ, ಒಮ್ಮೆಯಾದರೂ ನಾವು ಔಟ್ಪುಟ್ ಅನ್ನು ಪಡೆಯುತ್ತಿದ್ದೇವೆ. |
06:53 | ಬೇರೆ ಯಾವುದೇ ಕಂಡಿಶನ್ ಅನ್ನು ಲೆಕ್ಕಿಸದೆ, ಒಮ್ಮೆಯಾದರೂ ಎಕ್ಸೀಕ್ಯೂಟ್ ಮಾಡಬೇಕಾದ ಕೆಲಸಕ್ಕಾಗಿ do-while ಲೂಪ್ ಅನ್ನು ಬಳಸಿ. |
07:01 | for ಲೂಪ್ ನೊಂದಿಗೆ ಸಹ ನಾವು ಇದನ್ನೇ ಮಾಡಬಹುದು. |
07:05 | for ಲೂಪ್ ನ ಸಿಂಟ್ಯಾಕ್ಸ್ ಅನ್ನು ಇಲ್ಲಿ ನೋಡಬಹುದು. |
07:09 | initialization ಅನ್ನು ಎಕ್ಸೀಕ್ಯೂಟ್ ಮಾಡುವ ಮೂಲಕ, for ಸ್ಟೇಟ್ಮೆಂಟ್ ಆರಂಭವಾಗುತ್ತದೆ. |
07:14 | ಕಂಡಿಶನ್ true ಇರುವವರೆಗೆ ಅದು ಒಳಗಿನ ಸ್ಟೇಟ್ಮೆಂಟ್ ಗಳನ್ನು ಎಕ್ಸೀಕ್ಯೂಟ್ ಮಾಡುತ್ತದೆ, ನಂತರ ಇನ್ಕ್ರಿಮೆಂಟ್ ಮಾಡುತ್ತದೆ. ಹೀಗೆ ಲೂಪ್ ನ ಪುನರಾವರ್ತನೆಯಾಗುತ್ತದೆ. |
07:23 | ನಿಮಗೆ C ಅಥವಾ C++ ನಂತಹ ಭಾಷೆಗಳ ಪರಿಚಯವಿದೆ ಎಂದು ಭಾವಿಸಿ, ನಾನು ಸಿಂಟ್ಯಾಕ್ಸ್ ಅನ್ನು ಹೆಚ್ಚು ವಿವರಿಸುತ್ತಿಲ್ಲ. |
07:30 | ಈ ಕಂಡಿಶನ್ ಗಾಗಿ, for ಲೂಪ್ ಈ ರೀತಿಯಾಗಿ ಕಾಣುತ್ತದೆ. |
07:35 | ಇಲ್ಲಿ, ಇನಿಶಿಯಲೈಜೇಶನ್, ಕಂಡಿಶನ್ ನ ಪರೀಕ್ಷೆ ಮತ್ತು ವೇರಿಯೆಬಲ್ ಅನ್ನು ಹೆಚ್ಚಿಸುವುದನ್ನು ಒಂದೇ ಸಾಲಿನಲ್ಲಿ ಮಾಡಲಾಗುತ್ತದೆ. |
07:43 | ಇದನ್ನು ನೀವೇ ಪ್ರಯತ್ನಿಸಿ. |
07:46 | break, continue, exit ಎಂಬ ಇನ್ನೂ ಕೆಲವು ‘ಲೂಪಿಂಗ್ ಕನ್ಸ್ಟ್ರಕ್ಟ್’ ಗಳು (looping constructs) ಇವೆ. |
07:53 | ಇವುಗಳಿಗೆ ಸಂಬಂಧಿತ ಉದಾಹರಣೆಗಳನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನೋಡುತ್ತೇವೆ. |
07:58 | ನಮ್ಮ ಫೈಲ್ನಲ್ಲಿ, ಒಂದೇ ಸಾಲು ಮತ್ತು ಅನೇಕ ಸಾಲುಗಳಿರುವ ಕಾಮೆಂಟ್ಗಳನ್ನು ನಾವು ಹೊಂದಿರಬಹುದು. |
08:03 | ಇಲ್ಲಿ, ಒಂದೇ ಸಾಲಿನ ಕಾಮೆಂಟ್ ಗಳನ್ನು ಒಂದೇ ಹ್ಯಾಶ್(#) ಚಿಹ್ನೆಯೊಂದಿಗೆ ಡಿಕ್ಲೇರ್ ಮಾಡಿರುವುದನ್ನು ಗಮನಿಸಿ. |
08:10 | ಅನೇಕ ಸಾಲುಗಳಿರುವ ಕಾಮೆಂಟ್ ಗಳನ್ನು, ಡಬಲ್ ಹ್ಯಾಶ್ (##) ಚಿಹ್ನೆಯೊಂದಿಗೆ ಡಿಕ್ಲೇರ್ ಮಾಡಲಾಗುತ್ತದೆ. |
08:16 | ಈಗ, ಈ ಕಾಮೆಂಟ್ಗಳನ್ನು ಪರಿಶೀಲಿಸಿ, ಔಟ್ಪುಟ್ನಲ್ಲಿ ಪ್ರಿಂಟ್ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. |
08:22 | ನಾವು 'ಹ್ಯಾಶ್' (##) ಚಿಹ್ನೆಯಿಂದ ಪ್ರಾರಂಭವಾಗುವ ಸಾಲುಗಳನ್ನು ಬಿಟ್ಟುಬಿಡಬೇಕು.
ನಾವು ಇದನ್ನು ಹೇಗೆ ಮಾಡಬಹುದು? |
08:28 | 8000 ಕ್ಕಿಂತ ಹೆಚ್ಚು ಸ್ಟೈಪೆಂಡ್ ಪಡೆಯುತ್ತಿರುವವರಿಗೆ, 50% ಇನ್ಕ್ರಿಮೆಂಟ್ ಅನ್ನು ಕೊಡುವ ಉದಾಹರಣೆಯನ್ನು ನೆನಪಿಸಿಕೊಳ್ಳಿ. |
08:36 | ಕಾಮೆಂಟ್ಗಳನ್ನು ಬಿಟ್ಟುಬಿಡಲು ನಾವು ಅದೇ ಉದಾಹರಣೆಯನ್ನು ಬಳಸುತ್ತೇವೆ. |
08:40 | ಈ ಎಕ್ಸೀಕ್ಯೂಶನ್ ಗಾಗಿ, ಇಲ್ಲಿ ತೋರಿಸಿದಂತೆ ನಾನು next.awk ಹೆಸರಿನ ಫೈಲ್ ಅನ್ನು ಕ್ರಿಯೇಟ್ ಮಾಡಿದ್ದೇನೆ. |
08:47 | ಈಗ, ಈ ಕಮಾಂಡ್ ನ ಅರ್ಥವೇನು? |
08:50 | awk, ಪ್ರತಿಯೊಂದು ಸಾಲಿನ ಆರಂಭದಲ್ಲಿ, caret sign hash symbol(^#) ಪ್ಯಾಟರ್ನ್ ಗಾಗಿ ಹುಡುಕುತ್ತದೆ. |
08:57 | ಪ್ಯಾಟರ್ನ್ ಸಿಕ್ಕರೆ, next ಕೀವರ್ಡ್, ಪ್ರಸ್ತುತ ಸಾಲನ್ನು ತಕ್ಷಣ ಬಿಟ್ಟುಬಿಡಲು awk ಗೆ ಹೇಳುತ್ತದೆ. |
09:04 | ಆಗ ಫೈಲ್ನಲ್ಲಿಯ ಮುಂದಿನ ಸಾಲಿನಿಂದ, awk ಪ್ರೊಸೆಸ್ ಮಾಡಲು ಆರಂಭಿಸುತ್ತದೆ.
ಇದು ಪ್ರೊಸೆಸ್ ಮಾಡುವ ಸಮಯವನ್ನು ಉಳಿಸುತ್ತದೆ. |
09:12 | 'ಟರ್ಮಿನಲ್' ಗೆ ಬದಲಾಯಿಸಿ. ಇಲ್ಲಿ ತೋರಿಸಿದಂತೆ ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ. |
09:20 | ಯಾವುದೇ ಕಾಮೆಂಟ್ಗಳಿಲ್ಲದೆ ನಾವು ಔಟ್ಪುಟ್ ಅನ್ನು ಪಡೆಯುತ್ತೇವೆ. |
09:24 | ನಾವು ವಿದ್ಯಾರ್ಥಿಗಳ ರೆಕಾರ್ಡ್ ಗಳನ್ನು ಒಂದೇ ಫಾರ್ಮ್ಯಾಟ್ ನ ಅನೇಕ ಫೈಲ್ಗಳಲ್ಲಿ, ಎಂದರೆ awkdemo_mod.txt ಮತ್ತು awkdemo2.txt ಗಳಲ್ಲಿ ಹೊಂದಿದ್ದೇವೆ ಎಂದು ಭಾವಿಸೋಣ. |
09:37 | ನೋಡಿ, ಇದು ನಮ್ಮ ಹಿಂದಿನ ಫೈಲ್ ಅನ್ನು ಹೋಲುತ್ತದೆ. |
09:41 | ಇದು 'ಹ್ಯಾಶ್' ಚಿಹ್ನೆಯೊಂದಿಗೆ ಆರಂಭವಾಗುವ ಕಾಮೆಂಟ್ಗಳನ್ನು ಸಹ ಹೊಂದಿದೆ. |
09:45 | ಮತ್ತು, ಇದು ಕೊನೆಯಲ್ಲಿ ಡಬಲ್ ಹ್ಯಾಶ್ ಚಿಹ್ನೆಯೊಂದಿಗೆ (##) ಬಹಳಷ್ಟು ಟೆಕ್ಸ್ಟ್ ಅನ್ನು ಹೊಂದಿದೆ. |
09:50 | ನಮ್ಮ ಡೇಟಾ, ಎರಡು ವಿಭಿನ್ನ ಫೈಲ್ಗಳಲ್ಲಿದೆ.
ಎಲ್ಲಾ ವಿದ್ಯಾರ್ಥಿಗಳಿಗೆ ಇನ್ಕ್ರಿಮೆಂಟ್ ಅನ್ನು ಕೊಡಲು, awk ಎರಡೂ ಫೈಲ್ಗಳನ್ನು ಪ್ರೊಸೆಸ್ ಮಾಡಬೇಕು. |
09:59 | ನಾವು ಮೊದಲನೆಯ ಫೈಲ್ ನ 'ಎರಡು ಹ್ಯಾಶ್' (##) ಚಿಹ್ನೆಯನ್ನು ತಲುಪಿದ ನಂತರ, awk ಆ ಫೈಲ್ ಅನ್ನು ಪ್ರೊಸೆಸ್ ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. |
10:06 | ನಂತರ ಅದು ಮುಂದಿನ ಫೈಲ್ ಅನ್ನು ಎಕ್ಸೀಕ್ಯೂಟ್ ಮಾಡಲು ಪ್ರಾರಂಭಿಸಬೇಕು.
ಇದು ಪ್ರೊಸೆಸ್ ಮಾಡುವ ಸಮಯವನ್ನು ಉಳಿಸುತ್ತದೆ. |
10:13 | next.awk ಅನ್ನು ಇಲ್ಲಿ ತೋರಿಸಿದಂತೆ ಮಾರ್ಪಡಿಸಿ. |
10:17 | BEGIN ಸ್ಟೇಟ್ಮೆಂಟ್ ಕೆಳಗೆ, ನಾನು: dollar zero tilde slash caret symbol double hash slash within braces nextfile semicolon ಎಂದು ಸೇರಿಸಿದ್ದೇನೆ. |
10:29 | ಇದು, ಪ್ರತಿಯೊಂದು ಸಾಲಿನ ಆರಂಭದಲ್ಲಿ, 'ಡಬಲ್ ಹ್ಯಾಶ್' (#) ಚಿಹ್ನೆಗಾಗಿ ಹುಡುಕುವುದು. |
10:34 | ಸಿಕ್ಕರೆ, awk ಮುಂದಿನ ಫೈಲ್ ಅನ್ನು ಪ್ರೊಸೆಸ್ ಮಾಡಲು, ಪ್ರಸ್ತುತ ಫೈಲ್ ಅನ್ನು ಬಿಟ್ಟುಬಿಡುತ್ತದೆ. |
10:39 | ಈ ಫೈಲ್ ಅನ್ನು ಸೇವ್ ಮಾಡಿ. |
10:41 | 'ಟರ್ಮಿನಲ್' ಗೆ ಬದಲಾಯಿಸಿ ಮತ್ತು ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ.
Enter ಅನ್ನು ಒತ್ತಿ. |
10:48 | ನೋಡಿ, ನಾವು ಎರಡೂ ಫೈಲ್ಗಳಿಂದ ಔಟ್ಪುಟ್ ಅನ್ನು ಪಡೆಯುತ್ತಿದ್ದೇವೆ. |
10:53 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
10:58 | ಈ ಟ್ಯುಟೋರಿಯಲ್ ನಲ್ಲಿ ನಾವು, awk ನಲ್ಲಿ :
while, do… while, for, next, nextfile ಇವುಗಳ ಬಗ್ಗೆ ಕಲಿತಿದ್ದೇವೆ. |
11:06 | ಒಂದು ಅಸೈನ್ಮೆಂಟ್:
awkdemo2.txt ನಲ್ಲಿ, ವಿದ್ಯಾರ್ಥಿಗಳ ರೆಕಾರ್ಡ್ ಗಳಿಗಾಗಿ, 'ಇನ್ಪುಟ್ ಫೈಲ್' ನಲ್ಲಿ ಎಷ್ಟು ಫೀಲ್ಡ್ ಗಳಿವೆ ಎಂದು ಲೆಕ್ಕಿಸದೆ ‘ಸರಿ’ ಫೀಲ್ಡ್ ಗಳನ್ನು, ಎಂದರೆ, ಫೀಲ್ಡ್ 2, ಫೀಲ್ಡ್ 4 etc. ಮಾತ್ರ ಪ್ರಿಂಟ್ ಮಾಡಿ. |
11:22 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:30 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನು ಕೊಡುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
11:43 | ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ?
ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ: |
11:49 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ. |
12:01 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |