Difference between revisions of "Health-and-Nutrition/C2/Hand-expression-of-breastmilk/Kannada"

From Script | Spoken-Tutorial
Jump to: navigation, search
(Created page with "{|border=1 | <center>Time</center> |<center>Narration</center> |- |00:01 | '''Hand expression of breast milk''' ಎಂಬ ಸ್ಪೋಕನ್ ಟ್ಯುಟೋರಿಯಲ...")
 
(Blanked the page)
Line 1: Line 1:
{|border=1
 
| <center>Time</center>
 
|<center>Narration</center>
 
  
|-
 
|00:01
 
| '''Hand expression of breast milk''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|-
 
|00:06
 
| ಈ ಟ್ಯುಟೋರಿಯಲ್ ನಲ್ಲಿ ನಾವು –
 
ಎದೆಹಾಲನ್ನು ಹೊರಗೆ ತೆಗೆಯುವುದರ ಪ್ರಯೋಜನಗಳು, (expressing breastmilk - ಎಂದರೆ ತಾಯಿಯು ತನ್ನ ಸ್ತನವನ್ನು ಮೃದುವಾಗಿ ಒತ್ತಿ ಹಾಲನ್ನು ಹೊರಗೆ ತೆಗೆದು ಸಂಗ್ರಹಿಸುವುದು),
 
|-
 
|00:11
 
| ಎದೆಹಾಲನ್ನು ಕೈಯಿಂದ ಹೇಗೆ ಹೊರಗೆ ತೆಗೆಯಬೇಕು ಮತ್ತು
 
|-
 
|00:15
 
| ತಾಯಿಯು ಎಷ್ಟು ಬಾರಿ ಎದೆಹಾಲನ್ನು ತೆಗೆಯಬೇಕು ಇವುಗಳ ಬಗ್ಗೆ ಕಲಿಯುವೆವು.
 
|-
 
|00:20
 
| ಎದೆಹಾಲನ್ನು ತೆಗೆದು ಸಂಗ್ರಹಿಸುವುದು ಈ ಕೆಳಗಿನ ಸಂದರ್ಭಗಳಲ್ಲಿ ಉಪಯುಕ್ತವಾಗಿದೆ-
 
ಸ್ತನಗಳ ಎಂಗಾರ್ಜ್ಮೆಂಟ್ ನ ನಿವಾರಣೆಗಾಗಿ,
 
|-
 
|00:25
 
|ಗಾಯವಾಗಿರುವ ಮೊಲೆತೊಟ್ಟಿನ ಹಾಗೂ ಅದರ ಸುತ್ತಲೂ ಇರುವ ಗಾಢವರ್ಣದ ಜಾಗದಲ್ಲಿಯ ಒಣಚರ್ಮದ ಚಿಕಿತ್ಸೆ ಮಾಡುವಾಗ,
 
|-
 
|00:31
 
| ತಾಯಿಯ ಮೊಲೆತೊಟ್ಟಿಗೆ ಗಾಯವಾಗಿದ್ದು, ಲ್ಯಾಚಿಂಗ್ ಮಾಡುವಾಗ ಬಹಳ ನೋಯುತ್ತಿದ್ದರೆ, ಆ ಸಂದರ್ಭದಲ್ಲಿ ಮಗುವಿಗೆ ಹಾಲುಣಿಸಲು,
 
|-
 
|00:38
 
| ತಾಯಿಯ ಎದೆಹಾಲು ಪೂರೈಕೆಯನ್ನು ಹೆಚ್ಚಿಸುವುದು ಅಥವಾ ಮುಂದುವರೆಸುವುದು,
 
|-
 
|00:42
 
|ತಾಯಿಯು ಹೊರಗೆ ಅಥವಾ ಕೆಲಸಕ್ಕೆ ಹೋದಾಗ ಮಗುವಿಗೆ ಎದೆಹಾಲನ್ನು ಒದಗಿಸುವುದು,
 
|-
 
|00:49
 
|ಮೊಲೆತೊಟ್ಟಿನ ಸುತ್ತಲಿನ ಗಾಢವಾದ ಜಾಗವನ್ನು ಮೃದುವಾಗಿಸಿ, ತುಂಬಿದ ಸ್ತನಕ್ಕೆ ಜೋಡಿಸಿಕೊಳ್ಳಲು ಮಗುವಿಗೆ ಸಹಾಯ ಮಾಡುವುದು,
 
|-
 
|00:56
 
|ಮಗುವಿಗೆ ಇನ್ನೊಂದು ಸ್ತನವನ್ನು ಕೊಡುವ ಮೊದಲು, ಒಂದು ಸ್ತನದಿಂದ ಪೂರ್ತಿಯಾಗಿ ಹಾಲುಣಿಸಲಾಗಿದೆಯೆ ಎಂದು ಪರೀಕ್ಷಿಸುವುದು,
 
|-
 
|01:05
 
| ಮಗುವಿಗಾಗಿ ಪೌಷ್ಟಿಕಾಂಶಯುಕ್ತ ಪೂರಕ ಆಹಾರವನ್ನು ತಯಾರಿಸುವಾಗ ನೀರು ಅಥವಾ ಹಸುವಿನ ಹಾಲಿಗೆ ಬದಲಾಗಿ ಎದೆಹಾಲನ್ನು ಬಳಸುವುದು,
 
|-
 
|01:14
 
| ಅಲ್ಲದೆ – ಅವಧಿಗೆ ಮುನ್ನ ಹುಟ್ಟಿದ ಶಿಶುಗಳು,
 
|-
 
|01:18
 
| ಅಸ್ವಸ್ಥ ಶಿಶುಗಳು,
 
|-
 
|01:20
 
| ಸದೃಢವಾದ ಸ್ನಾಯುಗಳನ್ನು ಹೊಂದಿರದ ಶಿಶುಗಳು,
 
|-
 
|01:22
 
| ಸೀಳಿದತುಟಿ ಮತ್ತು / ಅಥವಾ ಅಂಗುಳವನ್ನು ಹೊಂದಿರುವ ಶಿಶುಗಳು ಹಾಗೂ
 
|-
 
|01:27
 
| ತಾಯಿಯ ಸ್ತನಕ್ಕೆ ಸರಿಯಾಗಿ ಹೊಂದಿಸಿಕೊಳ್ಳಲು ಕಷ್ಟಪಡುತ್ತಿರುವ ಶಿಶುಗಳಿಗೆ ಹಾಲುಣಿಸಲು ಸಹಾಯಮಾಡುವುದು.
 
|-
 
|01:32
 
|ಈಗ, ಎದೆಹಾಲನ್ನು ಹೇಗೆ ತೆಗೆಯಬೇಕೆಂದು ನಾವು ಕಲಿಯೋಣ.
 
|-
 
|01:37
 
|ತಾಯಿಯು ತನ್ನ ಕೈಗಳನ್ನು ಬಳಸಿ ಎದೆಹಾಲನ್ನು ತೆಗೆಯುವ ವಿಧಾನವನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ.
 
|-
 
|01:44
 
|ಏಕೆಂದರೆ ಈ ವಿಧಾನವು ಮೊಲೆತೊಟ್ಟಿನ ಸುತ್ತಲೂ ಇರುವ ಗಾಢವಾದ ಜಾಗದಲ್ಲಿ, ಕಡಿಮೆ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.
 
|-
 
|01:51
 
| ಅಲ್ಲದೆ, ಈ ವಿಧಾನಕ್ಕೆ ಯಾವುದೇ ಸಾಧನವು ಬೇಕಾಗಿಲ್ಲ. ಹೀಗಾಗಿ, ತಾಯಿಯು ಇದನ್ನು ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಮಾಡಬಹುದು.
 
|-
 
|02:00
 
|ಕೈಯಿಂದ ಎದೆಹಾಲನ್ನು ತೆಗೆಯಲು ನಿಪುಣತೆ ಬೇಕು ಮತ್ತು ಅಭ್ಯಾಸದೊಂದಿಗೆ ಇದು ಸುಧಾರಿಸುತ್ತದೆ.
 
|-
 
|02:08
 
|ಸ್ತನಗಳು ಮೃದುವಾಗಿದ್ದಾಗ, ಕೈಗಳಿಂದ ಎದೆಹಾಲನ್ನು ತೆಗೆಯುವುದು ಸುಲಭ.
 
|-
 
|02:13
 
|ಆದ್ದರಿಂದ, ಹೆರಿಗೆಯ ನಂತರ ಮೊದಲ ಅಥವಾ ಎರಡನೆಯ ದಿನದಂದು, ತಾಯಿಯು ಈ ವಿಧಾನವನ್ನು ಕಲಿತುಕೊಳ್ಳಬೇಕು.
 
|-
 
|02:21
 
|ತೆಗೆದ ಹಾಲನ್ನು ಸಂಗ್ರಹಿಸಲು, ಒಂದು ಸ್ಟೀಲ್ ಅಥವಾ ಗಾಜಿನ ಲೋಟವನ್ನು ತಾಯಿಯು ಎದೆಹಾಲನ್ನು ತೆಗೆಯುವ ಮೊದಲೇ ಸಿದ್ಧವಾಗಿಡಬೇಕು.
 
|-
 
| 02:29
 
|ಅಗಲವಾದ ಬಾಯಿಯಿರುವ ಒಂದು ಕಪ್, ಗ್ಲಾಸ್, ಜಗ್ ಅಥವಾ ಜಾರ್ ಅನ್ನು ಅವಳು ಆರಿಸಿಕೊಳ್ಳಬೇಕು.
 
|-
 
|02:36
 
|ಅವಳು ತಾನು ಆಯ್ಕೆಮಾಡಿಕೊಂಡ ಪಾತ್ರೆಯನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು.
 
|-
 
|02:41
 
|ನಂತರ, ಅವಳು ಪಾತ್ರೆಯನ್ನು ಕುದಿಯುವ ನೀರಿನಲ್ಲಿ ಇಡಬೇಕು ಅಥವಾ ಪಾತ್ರೆಯಲ್ಲಿ ಕುದಿಯುವ ನೀರನ್ನು ಸುರಿದು ಕೆಲವು ನಿಮಿಷ ಅದನ್ನು ಹಾಗೆಯೇ ಬಿಡಬೇಕು.
 
|-
 
|02:52
 
|ಆಮೇಲೆ, ಅವಳು ಪಾತ್ರೆಯನ್ನು ಗಾಳಿಯಲ್ಲಿ ಚೆನ್ನಾಗಿ ಒಣಗಿಸಬೇಕು ಅಥವಾ ಶುಚಿಯಾದ ಬಟ್ಟೆಯಿಂದ ಒರೆಸಿ ಒಣಗಿಸಬೇಕು.
 
|-
 
|03:02
 
|ಅಡುಗೆಮನೆಯಲ್ಲಿ ಬಳಸಿದ ಬಟ್ಟೆಯಿಂದ ಈ ಪಾತ್ರೆಯನ್ನು ಎಂದಿಗೂ ಒಣಗಿಸಬಾರದು.
 
|-
 
|03:10
 
|ಶುಚಿಮಾಡಿದ ಕಂಟೇನರ್ ಅನ್ನು ಸಂಪೂರ್ಣವಾಗಿ ಒಣಗಿಸಿದ ನಂತರ, ಮುಂದಿನ ಹಂತವು ಸ್ತನದಿಂದ ಹಾಲನ್ನು ತೆಗೆಯುವುದು ಆಗಿದೆ.
 
|-
 
|03:17
 
|ತನ್ನ ಹಾಲು ಸರಾಗವಾಗಿ ಹೊರಬರಲು, ತಾಯಿಯು ಶಾಂತಚಿತ್ತಳಾಗಿದ್ದು, ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿರಬೇಕು.
 
|-
 
|03:26
 
| ತಾಯಿಯು ಈ ಕೆಳಗಿನವುಗಳನ್ನು ಪ್ರಯತ್ನಿಸಬಹುದು:
 
ಅವಳು ಶಾಂತಿಯಿಂದ ಏಕಾಂತದಲ್ಲಿ ಅಥವಾ ಸಹಾಯಕ ಸ್ನೇಹಿತೆಯೊಂದಿಗೆ ಕುಳಿತುಕೊಳ್ಳಬಹುದು.
 
|-
 
|03:34
 
|ಕೆಲವು ತಾಯಂದಿರು, ಎದೆಹಾಲು ತೆಗೆಯುತ್ತಿರುವ ಇತರ ತಾಯಂದಿರ ಗುಂಪಿನಲ್ಲಿ ಸುಲಭವಾಗಿ ಹಾಲನ್ನು ತೆಗೆಯಬಹುದು.
 
|-
 
|03:41
 
|ಪರಸ್ಪರ ಚರ್ಮವು ಸ್ಪರ್ಶಿಸುವಂತೆ, ಅವಳು ಮಗುವನ್ನು ತನ್ನ ತೊಡೆಯ ಮೇಲೆ ಇರಿಸಿಕೊಳ್ಳಬಹುದು.
 
|-
 
|03:46
 
|ಅಥವಾ ಅವಳು ತನ್ನ ಮಗುವನ್ನು ನೋಡಬಹುದು, ಮಗುವಿನ ಧ್ವನಿಯನ್ನು ಕೇಳಬಹುದು.
 
|-
 
|03:53
 
| ಕೆಲವೊಮ್ಮೆ - ತನ್ನ ಮಗುವಿನ ಛಾಯಾಚಿತ್ರವನ್ನು ನೋಡುವುದು ಅಥವಾ ಮಗುವಿನ ಬಟ್ಟೆಯ ವಾಸನೆ ನೋಡುವುದು ಸಹ ಸಹಾಯ ಮಾಡುತ್ತದೆ.
 
|-
 
|04:00
 
|ಅವಳು ಬೆಚ್ಚಗಿನ, ಹಿತವಾದ ಪಾನೀಯವನ್ನು ತೆಗೆದುಕೊಳ್ಳಬಹುದು. ಆದರೆ ಅದು ಕಾಫಿ, ಕಟುವಾದ ಚಹಾ, ಆಲ್ಕೋಹಾಲ್ ಅಥವಾ ಯಾವುದೇ ಉತ್ತೇಜಕ ಪಾನೀಯ ಆಗಿರಬಾರದು.
 
|-
 
|04:12
 
| ಹಾಲು ಸರಾಗವಾಗಿ ಹರಿಯುವಂತೆ ಮಾಡಲು, ಅವಳು ತನ್ನ ಸ್ತನಗಳನ್ನು ಬೆಚ್ಚಗೆ ಮಾಡಬಹುದು.
 
|-
 
|04:17
 
| ತನ್ನ ಸ್ತನಗಳನ್ನು ಬೆಚ್ಚಗಾಗಿಸಲು, ಅವಳು ಬಿಸಿ ನೀರಿನಲ್ಲಿ ನೆನೆಸಿದ ಬಟ್ಟೆಯನ್ನು ತನ್ನ ಸ್ತನಗಳ ಮೇಲೆ ಇರಿಸಬಹುದು ಅಥವಾ ಬೆಚ್ಚಗಿನ ನೀರಿನ ಸ್ನಾನವನ್ನು ಮಾಡಬಹುದು.
 
|-
 
|04:28
 
| ಮೊಲೆತೊಟ್ಟುಗಳನ್ನು ನಿಧಾನವಾಗಿ ಎಳೆದು ಅಥವಾ ತನ್ನ ಬೆರಳುಗಳಿಂದ ಅವುಗಳನ್ನು ತಿರುಗಿಸುವ ಮೂಲಕ, ಅವಳು ಮೊಲೆತೊಟ್ಟು ಮತ್ತು ಅದರ ಸುತ್ತಲಿನ ಗಾಢವಾದ ಜಾಗವನ್ನು ಉತ್ತೇಜಿಸಬಹುದು.
 
|-
 
|04:38
 
|ವೃತ್ತಾಕಾರದ ಕೈಯ ಚಲನೆಯಿಂದ, ಅವಳು ಸ್ತನಗಳನ್ನು ಲಘುವಾಗಿ ಮಸಾಜ್ ಮಾಡಬಹುದು.
 
|-
 
|04:44
 
|ತಾಯಿಯು ತನ್ನ ಬೆನ್ನನ್ನು ಉಜ್ಜಲು, ಸಹಾಯಕಿಯನ್ನು ಕೇಳಬಹುದು.
 
|-
 
|04:47
 
|ಬೆನ್ನನ್ನು ಉಜ್ಜುವಾಗ, ತಾಯಿಯು ಕೆಳಗೆ ಕುಳಿತುಕೊಂಡು ಸ್ವಲ್ಪ ಮುಂದೆ ಬಾಗಬೇಕು.
 
|-
 
|04:53
 
| ತನ್ನ ಮುಂದೆ, ಒಂದು ಮೇಜಿನ ಮೇಲೆ ತನ್ನ ತೋಳುಗಳನ್ನು ಮಡಿಚಿ ಇಟ್ಟುಕೊಂಡು, ಅವುಗಳ ಮೇಲೆ ತನ್ನ ತಲೆಯನ್ನು ಇರಿಸಬೇಕು.
 
|-
 
|05:01
 
|ಅವಳ ಸ್ತನಗಳನ್ನು ಬಟ್ಟೆಯಿಂದ ಮುಚ್ಚಿರಬಾರದು ಮತ್ತು ಸಡಿಲವಾಗಿ ಇಳಿಯಬಿಡಬೇಕು.
 
|-
 
|05:07
 
| ಸಹಾಯಕಿಯು ತಾಯಿಯ ಬೆನ್ನೆಲುಬಿನ ಎರಡೂ ಬದಿಗಳನ್ನು ತಿಕ್ಕಬೇಕು.
 
|-
 
|05:12
 
|ಹೆಬ್ಬೆರಳುಗಳನ್ನು ಮುಂದೆ ಚಾಚಿರುವ ತನ್ನ ಮುಚ್ಚಿದ ಮುಷ್ಟಿಯನ್ನು ಅವಳು ಬಳಸಬೇಕು.
 
|-
 
|05:17
 
| ಅವಳು ಹೆಬ್ಬೆರಳುಗಳಿಂದ ವೃತ್ತಾಕಾರದ ಚಲನೆಯನ್ನು ಮಾಡುತ್ತ ಗಟ್ಟಿಯಾಗಿ ಒತ್ತಬೇಕು.
 
|-
 
|05:25
 
| ಕುತ್ತಿಗೆಯಿಂದ ಭುಜಗಳವರೆಗೆ ಕೆಳಮುಖವಾಗಿ, ಒಂದೇ ಸಮಯದಲ್ಲಿ ಬೆನ್ನುಮೂಳೆಯ ಎರಡೂ ಬದಿಗಳಲ್ಲಿ ಅವಳು ಇದನ್ನು ಮಾಡಬೇಕು.
 
|-
 
|05:34
 
| ಅವಳು ಇದನ್ನು ಎರಡು ಅಥವಾ ಮೂರು ನಿಮಿಷಗಳ ಕಾಲ ಮಾಡಬೇಕು.
 
|-
 
|05:38
 
|ಎದೆಹಾಲು ಸುಲಭವಾಗಿ ಹರಿದು ಬರಲು ಈ ಎಲ್ಲಾ ಹಂತಗಳು ಸಹಾಯ ಮಾಡುತ್ತವೆ.
 
|-
 
|05:43
 
|ಎದೆಹಾಲಿನ ಈ ಹರಿವನ್ನು 'ಆಕ್ಸಿಟೋಸಿನ್ ರಿಫ್ಲೆಕ್ಸ್' (Oxytocin reflex) ಅಥವಾ 'ಲೆಟ್ ಡೌನ್ ರಿಫ್ಲೆಕ್ಸ್' (let down reflex) ಎಂದು ಕರೆಯುತ್ತಾರೆ.
 
|-
 
|05:51
 
|'ಆಕ್ಸಿಟೋಸಿನ್ ರಿಫ್ಲೆಕ್ಸ್' ಆರಂಭವಾದ ನಂತರ, ತಾಯಿಯು ತನ್ನ ಕೈಗಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಬೇಕು.
 
|-
 
|05:59
 
|ಆಮೇಲೆ, ಅವಳು ಆರಾಮವಾಗಿ ಕುಳಿತುಕೊಳ್ಳಬೇಕು.
 
|-
 
|06:04
 
| ಅವಳು ಸ್ವಲ್ಪ ಮುಂದಕ್ಕೆ ಬಾಗಬೇಕು.
 
|-
 
|06:07
 
| ಅವಳು ತನ್ನ ಸ್ತನದ ಹತ್ತಿರ ಪಾತ್ರೆಯನ್ನು ಹಿಡಿದಿರಬೇಕು.
 
|-
 
|06:11
 
| ಈಗ, ಅವಳು ತನ್ನ ಹೆಬ್ಬೆರಳು ಮತ್ತು ಬೆರಳುಗಳನ್ನು ಬದಿಯಿಂದ ಎದೆಯ ಮೇಲೆ C (ಸಿ) ಆಕಾರದಲ್ಲಿ ಇಟ್ಟುಕೊಳ್ಳಬೇಕು.
 
|-
 
|06:20
 
| ಅವಳು ತನ್ನ ಸ್ತನವನ್ನು ಹಿಡಿದುಕೊಳ್ಳಲು ಯಾವುದೇ ಒಂದು ಕೈಯನ್ನು ಬಳಸಬಹುದು. ಮತ್ತು, ಒಂದು ಕೈ ದಣಿದಾಗ ಅವಳು ಇನ್ನೊಂದು ಕೈಗೆ ಬದಲಾಯಿಸಬಹುದು.
 
|-
 
|06:29
 
| ಸ್ತನವನ್ನು ಹಿಡಿದುಕೊಂಡಾಗ, ಅವಳ ಹೆಬ್ಬೆರಳು ಸ್ತನದ ಮೇಲಿನ ಭಾಗದಲ್ಲಿರಬೇಕು.
 
|-
 
|06:35
 
| ಮತ್ತು, ಅವಳ ಬೆರಳುಗಳು ಹೆಬ್ಬೆರಳಿಗೆ ವಿರುದ್ಧವಾಗಿ ಸ್ತನದ ಕೆಳ ಭಾಗದಲ್ಲಿ, ಇರಬೇಕು.
 
|-
 
|06:42
 
|ಅವಳ ಹೆಬ್ಬೆರಳು, ಮೊಲೆತೊಟ್ಟು ಮತ್ತು ಬೆರಳುಗಳು ಯಾವಾಗಲೂ ಒಂದೇ ಸಾಲಿನಲ್ಲಿ ಇರಬೇಕು.
 
|-
 
|06:48
 
| ಮತ್ತು, ಮೊಲೆತೊಟ್ಟು ಹೆಬ್ಬೆರಳು ಮತ್ತು ತೋರುಬೆರಳಿನ ಮಧ್ಯದಲ್ಲಿ ಇರಬೇಕು.
 
|-
 
|06:54
 
| ಅವಳ ಮೊಲೆತೊಟ್ಟು ಹಾಗೂ ಹೆಬ್ಬೆರಳು ಮತ್ತು ಮೊಲೆತೊಟ್ಟು ಹಾಗೂ ಬೆರಳುಗಳು ಇವುಗಳ ನಡುವೆ 2 ಬೆರಳುಗಳ ಅಂತರವಿರಬೇಕು.
 
|-
 
|07:04
 
| ಅವಳ ಬೆರಳುಗಳು ಮೊಲೆತೊಟ್ಟಿಗೆ ತುಂಬಾ ಹತ್ತಿರದಲ್ಲಿದ್ದರೆ, ಹಾಲು ಬಹಳಕಾಲ ಹರಿಯದೆ ಇರಬಹುದು.
 
|-
 
|07:10
 
| ತಾಯಿಯು ಮೊಲೆತೊಟ್ಟಿನ ಸುತ್ತಲೂ ಇರುವ ಗಾಢವಾದ ಜಾಗದ ಕೆಳಗೆ, ಹಾಲಿನ ನಾಳಗಳನ್ನು ಒತ್ತಿದಾಗ ಹೆಚ್ಚು ಹಾಲು ಕೊಡುತ್ತಾಳೆ.
 
|-
 
|07:19
 
| ಈ ಚಿತ್ರದಲ್ಲಿ, ತಾಯಿಯು ತನ್ನ ಬಲಗಡೆಯ ಸ್ತನವನ್ನು, ಬಲಗೈಯಿಂದ ಸರಿಯಾಗಿ ಹಿಡಿದಿಕೊಂಡಿದ್ದಾಳೆ.
 
|-
 
|07:27
 
| ಈಗ, ಅವಳು ಒಂದೇಸಮನಾಗಿ ಒತ್ತಡವನ್ನು ಹಾಕುವ ಮೂಲಕ ಸ್ತನವನ್ನು ಸ್ವಲ್ಪ ಒಳಗೆ, ಎಂದರೆ ಎದೆಯ ಕಡೆಗೆ ಒತ್ತಬೇಕು.
 
|-
 
|07:36
 
| ನಂತರ ಕೈಯನ್ನು ಸರಿಸದೆ, ಹೆಬ್ಬೆರಳು ಮತ್ತು ಬೆರಳುಗಳ ನಡುವಿನ ಸ್ತನವನ್ನು ಮೃದುವಾಗಿ ಒತ್ತಬೇಕು.
 
|-
 
|07:44
 
| ಆನಂತರ, ಸ್ತನದ ಮೇಲಿನ ಒತ್ತಡವನ್ನು ತೆಗೆಯಬೇಕು.
 
|-
 
|07:48
 
|ಹಿಂದಕ್ಕೆ ಒತ್ತುವುದು, ಒತ್ತಡ ಹಾಕುವುದು ಮತ್ತು ಒತ್ತಡವನ್ನು ತೆಗೆದುಬಿಡುವುದು ಈ 3 ಹಂತಗಳನ್ನು ತಾಯಿಯು ಪುನರಾವರ್ತಿಸಬೇಕು.
 
|-
 
|07:56
 
| ಸ್ತನವನ್ನು ಸ್ವಲ್ಪ ಒಳಗೆ, ಎಂದರೆ ಎದೆಯಕಡೆಗೆ ಒತ್ತುವ ಮೊದಲನೆಯ ಹಂತವು ಬಹಳ ಮುಖ್ಯವಾಗಿದೆ.
 
|-
 
|08:02
 
| ಮೊಲೆತೊಟ್ಟಿನ ಕಡೆಗೆ ಮಾತ್ರ ಒತ್ತಿದರೆ, ಬಹಳ ಕಡಿಮೆ ಹಾಲು ಸಿಗುತ್ತದೆ.
 
|-
 
|08:07
 
|ಆದರೆ ಸ್ತನವನ್ನು ಹಿಂದೆ ಒತ್ತಿದಾಗ, ದಟ್ಟವಾದ ಸ್ತನ ಅಂಗಾಂಶದಿಂದ ಹಾಲು ಬಿಡುಗಡೆಯಾಗುತ್ತದೆ.
 
|-
 
|08:15
 
|ಆದರೆ, ತುಂಬಾ ಹಿಂದಕ್ಕೆ ಒತ್ತುವುದನ್ನು ತಪ್ಪಿಸಿ. ಏಕೆಂದರೆ, ಅದು ಹಾಲಿನ ನಾಳಗಳನ್ನು ತಡೆಹಿಡಿಯಬಹುದು (block).
 
|-
 
|08:23
 
|ತಾಯಿಯು ಕೈಯಿಂದ ಎದೆಹಾಲನ್ನು ತೆಗೆಯಲು ಆರಂಭಿಸಿದಾಗ, ಮೊದಲಿಗೆ ಹಾಲಿನ ಕೆಲವೇ ಹನಿಗಳು ಹೊರಬರಬಹುದು.
 
|-
 
|08:30
 
| 'ಲೆಟ್ ಡೌನ್ ರಿಫ್ಲೆಕ್ಸ್' (let down reflex) ಶುರು ಆಗುತ್ತಿದ್ದಂತೆ, ಹಾಲು ಹೊರಗೆ ಹನಿ ಹನಿಯಾಗಿ ಬೀಳಲು ಶುರು ಆಗುತ್ತದೆ.
 
|-
 
|08:36
 
|ಮೊದಲಿನ ಕೆಲವು ಪ್ರಯತ್ನಗಳಲ್ಲಿ, ಹಾಲು ಹನಿಹನಿಯಾಗಿ ಅಥವಾ ನಿಧಾನವಾಗಿ ಹರಿದು ಬರುವುದು ಸಾಮಾನ್ಯವಾಗಿದೆ.
 
|-
 
|08:42
 
| ನಂತರ, ಎದೆಹಾಲು ಹರಿದು ಬರಬಹುದು. ಹಾಲುಣಿಸುವ ಕ್ರಿಯೆಯಂತೆಯೆ, ಹಾಲನ್ನು ಹೊರತೆಗೆಯುವುದು ಸಹ ಅಭ್ಯಾಸದಿಂದ ಕರಗತವಾಗುತ್ತದೆ.
 
|-
 
|08:53
 
|ಕೊಲೊಸ್ಟ್ರಮ್ ಎಂಬ ಜನನದ ನಂತರದ ಮೊದಲ ಹಾಲು, ಹನಿಗಳಲ್ಲಿ ಮಾತ್ರ ಬರಬಹುದು ಆದರೆ ಅದು ನವಜಾತ ಶಿಶುವಿಗೆ ಸಾಕಾಗುತ್ತದೆ.
 
|-
 
|09:01
 
| ದಟ್ಟವಾದ ಹಳದಿ ಹಾಲು, ಮಗುವಿಗಾಗಿ ಅಗಾಧವಾದ ರಕ್ಷಣಾತ್ಮಕ ಪ್ರಯೋಜನಗಳನ್ನು ಹೊಂದಿದೆ.
 
|-
 
|09:08
 
|ಹಾಲಿನ ಹರಿವು ಕಡಿಮೆಯಾಗಿ ಮತ್ತೊಮ್ಮೆ ಹನಿಹನಿಯಾಗಿ ಬೀಳುವವವರೆಗೂ ತಾಯಿಯು ಮೇಲೆ ಹೇಳಿದ 3 ಹಂತಗಳನ್ನು ಪುನರಾವರ್ತಿಸಬೇಕು.
 
|-
 
|09:16
 
|ನಂತರ, ಅವಳು ಸ್ತನದ ಇತರ ಭಾಗಗಳಿಂದ ಹಾಲನ್ನು ತೆಗೆಯಲು, ತನ್ನ ಬೆರಳುಗಳ ಸ್ಥಾನವನ್ನು ಬದಲಿಸಬೇಕು.
 
|-
 
|09:23
 
|ಸ್ತನವು ತುಂಬಿಕೊಂಡಿರುವ ಜಾಗವನ್ನು ತಿಳಿದುಕೊಂಡು, ಅವಳು ಆ ಜಾಗಗಳನ್ನು ಒತ್ತಬಹುದು.
 
|-
 
|09:30
 
|ಒಂದು ಸ್ತನದಿಂದ ಕನಿಷ್ಠ 3 ರಿಂದ 5 ನಿಮಿಷಗಳ ಕಾಲ, ಹಾಲಿನ ಹರಿವು ಕಡಿಮೆಯಾಗುವ ತನಕ ಅವಳು ಹಾಲನ್ನು ತೆಗೆಯಬೇಕು.
 
|-
 
|09:38
 
|ನಂತರ, ಅವಳು ಇನ್ನೊಂದು ಸ್ತನದಿಂದ ಇದೇ ರೀತಿಯಲ್ಲಿ ಹಾಲನ್ನು ತೆಗೆಯಬೇಕು.
 
|-
 
|09:45
 
| ಆಮೇಲೆ, ಮತ್ತೊಮ್ಮೆ ಎರಡೂ ಸ್ತನಗಳಿಂದ ಎರಡನೆಯ ಬಾರಿ ಹಾಲನ್ನು ತೆಗೆಯಬೇಕು.
 
|-
 
|09:51
 
| ಎರಡೂ ಸ್ತನಗಳಿಂದ ಎದೆಹಾಲನ್ನು ತೆಗೆಯುವುದು, ಸುಮಾರು 20 ರಿಂದ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
 
|-
 
|09:57
 
| ವಿಶೇಷವಾಗಿ ಮೊದಲ ಕೆಲವು ದಿನಗಳಲ್ಲಿ, ಇದು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಏಕೆಂದರೆ, ಆ ದಿನಗಳಲ್ಲಿ ಸ್ವಲ್ಪ ಹಾಲು ಮಾತ್ರ ತಯಾರಾಗಬಹುದು.
 
|-
 
|10:07
 
|ಕಡಿಮೆ ಸಮಯದಲ್ಲಿ ಹಾಲನ್ನು ತೆಗೆಯಲು ಪ್ರಯತ್ನಿಸದೇ ಇರುವುದು ಮುಖ್ಯವಾಗಿದೆ.
 
 
|-
 
|10:12
 
|ನೆನಪಿಡಿ, ಕೈಯಿಂದ ಎದೆಹಾಲನ್ನು ತೆಗೆಯುವಾಗ ನೋವು ಆಗಬಾರದು. ಒಂದುವೇಳೆ ನೋವಾಗುತ್ತಿದ್ದರೆ, ಮಾಡುವ ವಿಧಾನವು ಸರಿಯಾಗಿಲ್ಲ ಎಂದುಕೊಳ್ಳಿ.
 
|-
 
|10:21
 
|ಸ್ತನ ಅಂಗಾಂಶವು ನಾಜೂಕಾಗಿದೆ.
 
|-
 
|10:24
 
| ಮೊಲೆತೊಟ್ಟಿನ ಕಡೆಗೆ, ಚರ್ಮದ ಉದ್ದಕ್ಕೂ ಬೆರಳುಗಳನ್ನು ತಿಕ್ಕುವುದು, ಜಾರಿಸುವುದು ಅಥವಾ ಎಳೆಯುವುದನ್ನು ತಪ್ಪಿಸಿ. ಇದು ಸ್ತನಕ್ಕೆ ಗಾಯ ಅಥವಾ ನೋವು ಉಂಟುಮಾಡಬಹುದು.
 
|-
 
|10:36
 
| ಮೊಲೆತೊಟ್ಟಿನ ಸುತ್ತಲೂ ಇರುವ ಗಾಢಬಣ್ಣದ ಚರ್ಮವನ್ನು ಬಿಗಿಗೊಳಿಸುವುದು ಅಥವಾ ಹಿಗ್ಗಿಸುವುದನ್ನು ತಪ್ಪಿಸಿ.
 
|-
 
|10:42
 
| ಅಲ್ಲದೆ, ಮೊಲೆತೊಟ್ಟನ್ನು ಹಿಸುಕುವುದು ಅಥವಾ ಎಳೆಯುವುದನ್ನು ತಪ್ಪಿಸಿ.
 
|-
 
|10:46
 
|ಮೊಲೆತೊಟ್ಟನ್ನು ಒತ್ತುವುದರಿಂದ ಅಥವಾ ಎಳೆಯುವುದರಿಂದ ಸಾಕಷ್ಟು ಹಾಲನ್ನು ತೆಗೆಯಲು ಸಾಧ್ಯವಿಲ್ಲ.
 
|-
 
|10:51
 
|ಇದು, ಮಗು ಕೇವಲ ಮೊಲೆತೊಟ್ಟನ್ನು ಹೀರಿದಂತೆ ಇರುತ್ತದೆ.
 
|-
 
|10:57
 
| ತಾಯಿಯು ಎದೆಹಾಲನ್ನು ತೆಗೆದ ನಂತರ, ಲೋಟವನ್ನು ಶುದ್ಧವಾದ ಬಟ್ಟೆ ಅಥವಾ ಪ್ಲೇಟ್ ನಿಂದ ಮುಚ್ಚಬೇಕು.
 
|-
 
|11:04
 
| ಆಮೇಲೆ, ಅವಳು ನಂತರದ ಬಳಕೆಗಾಗಿ ತನ್ನ ಎದೆಹಾಲನ್ನು ಸುರಕ್ಷಿತವಾಗಿ ಶೇಖರಿಸಿಡಬೇಕು.
 
|-
 
|11:09
 
|ಎದೆಹಾಲನ್ನು ಸುರಕ್ಷಿತವಾಗಿ ಶೇಖರಿಸಿಡುವುದು ಮತ್ತು ಮಗುವಿಗೆ ಅದನ್ನು ಕುಡಿಸುವುದು ಇವುಗಳ ಬಗ್ಗೆ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
 
|-
 
|11:19
 
|ತಾಯಿಯು ಎಷ್ಟು ಸಲ ತನ್ನ ಎದೆಹಾಲನ್ನು ತೆಗೆಯಬೇಕು ಎಂದು ಈಗ ಚರ್ಚಿಸೋಣ.
 
|-
 
|11:24
 
|ಎದೆಹಾಲಿನ ಉತ್ಪಾದನೆಯನ್ನು ಪ್ರಾರಂಭಿಸುವುದು ಮತ್ತು ಮುಂದುವರೆಸುವುದು ಅಥವಾ ಕಡಿಮೆ ಜನನ ತೂಕದ ಮಗು ಅಥವಾ ರೋಗಪೀಡಿತ ನವಜಾತ ಶಿಶುವಿಗೆ ಹಾಲು ಕುಡಿಸುವ ಉದ್ದೇಶವಿದ್ದರೆ, ಆಗ -
 
|-
 
|11:35
 
|ಹೆರಿಗೆಯ ನಂತರ ಅವಳು ಸಾಧ್ಯವಾದಷ್ಟು ಬೇಗ ಹಾಲನ್ನು ತೆಗೆಯಬೇಕು.
 
|-
 
|11:40
 
| ಮೊದಲಿಗೆ ಅವಳು ಕೊಲೊಸ್ಟ್ರಮ್ ನ ಕೆಲವು ಹನಿಗಳನ್ನು ಮಾತ್ರ ಹೊರಗೆ ತೆಗೆಯಬಹುದು.
 
|-
 
|11:45
 
| ಇದು ಎದೆಹಾಲಿನ ಉತ್ಪಾದನೆಯು ಆರಂಭವಾಗಲು ಸಹಾಯ ಮಾಡುತ್ತದೆ.
 
|-
 
|11:48
 
| ಹೆರಿಗೆಯಾದ ತಕ್ಷಣ ಮಗು ಮೊಲೆಹೀರುವ ಕ್ರಿಯೆಯನ್ನು ಇದು ಹೋಲುತ್ತದೆ.
 
|-
 
|11:54
 
|ತಾಯಿಯು ತನಗೆ ಸಾಧ್ಯವಿದ್ದಷ್ಟು ಹಾಲನ್ನು ತೆಗೆಯಬೇಕು ಮತ್ತು ಅವಳ ಮಗು ಹಾಲುಕುಡಿಯುವಷ್ಟು ಸಲ ತೆಗೆಯಬೇಕು.
 
|-
 
|12:02
 
| ರಾತ್ರಿಯೂ ಸೇರಿದಂತೆ ಇದು ಕನಿಷ್ಠ ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ಆಗಿರಬೇಕು.
 
|-
 
|12:08
 
| ಹಾಲು ತೆಗೆಯುವ ಕ್ರಿಯೆಗಳ ನಡುವೆ ದೀರ್ಘ ಅವಧಿಯು ಇದ್ದರೆ, ಸಾಕಷ್ಟು ಹಾಲನ್ನು ಉತ್ಪಾದಿಸಲು ಅವಳಿಗೆ ಸಾಧ್ಯವಾಗುವುದಿಲ್ಲ.
 
|-
 
|12:16
 
| ತಾಯಿಯ ಹಾಲಿನ ಪೂರೈಕೆಯನ್ನು ಹೆಚ್ಚಿಸುವುದು ಉದ್ದೇಶವಾಗಿದ್ದರೆ -
 
ಮತ್ತು ಕೆಲವು ವಾರಗಳ ನಂತರ ಅದು ಕಡಿಮೆಯಾಗುತ್ತಿದೆ ಎನಿಸಿದರೆ:
 
|-
 
|12:25
 
| ಪ್ರತಿ 1 ರಿಂದ 2 ಗಂಟೆಗಳಿಗೊಮ್ಮೆ, ಮಗುವಿಗೆ ಹಾಲುಣಿಸಿದ ತಕ್ಷಣ ಅವಳು ಎದೆಹಾಲನ್ನು ತೆಗೆಯಬೇಕು ಮತ್ತು
 
|-
 
|12:33
 
| ಮಗು 3 ಗಂಟೆಗಳಿಗಿಂತ ಜಾಸ್ತಿ ಮಲಗಬಹುದು ಎನಿಸಿದರೆ, ಆಗ ಅವಳು ಹಾಲುಣಿಸುವ ನಡುವಿನ ಅವಧಿಯಲ್ಲಿ ಹಾಲು ತೆಗೆಯಬಹುದು.
 
|-
 
|12:43
 
|ಕೆಲಸದಲ್ಲಿರುವಾಗ, ಎಂಗಾರ್ಜ್ಮೆಂಟ್ (engorgement) ಅಥವಾ ಎದೆಹಾಲು ಸೋರುವಿಕೆಯಂತಹ ಲಕ್ಷಣಗಳನ್ನು ನಿವಾರಿಸುವ ಉದ್ದೇಶವಾಗಿದ್ದರೆ:
 
ತಾಯಿಯು ಅವಶ್ಯವಿರುವಷ್ಟು ಹಾಲನ್ನು ಮಾತ್ರ ತೆಗೆಯಬೇಕು.
 
|-
 
|12:53
 
| ಮೊಲೆತೊಟ್ಟಿನ ಚರ್ಮವನ್ನು ಆರೋಗ್ಯದಿಂದ ಇಡುವ ಉದ್ದೇಶವಿದ್ದರೆ:
 
ತಾಯಿಯು ತನ್ನ ಮೊಲೆತೊಟ್ಟಿನ ಮೇಲೆ ಸವರಲು, ಎದೆಹಾಲಿನ ಒಂದು ಸಣ್ಣ ಹನಿಯನ್ನು ತೆಗೆಯಬೇಕು. 
 
|-
 
|13:02
 
| ಸ್ನಾನದ ನಂತರ ಮತ್ತು ಹಾಲುಣಿಸಿದ ನಂತರ ಅವಳು ಇದನ್ನು ಮಾಡಬೇಕು.
 
|-
 
|13:07
 
| ತಾಯಿಯು ಕೆಲಸಕ್ಕೆ ಹೊರಗೆ ಹೋದಾಗ, ತನ್ನ ಮಗುವಿಗಾಗಿ ಹಾಲನ್ನು ಇಡುವುದು ಉದ್ದೇಶವಾಗಿದ್ದರೆ:
 
|-
 
|13:14
 
| ತಡೆಯಿಲ್ಲದ ಪೂರೈಕೆಗೆ ಸಹಾಯವಾಗುವಂತೆ, ತಾಯಿಯು ಕೆಲಸದಲ್ಲಿ ಇದ್ದಾಗಲೂ ಹಾಲನ್ನು ತೆಗೆಯಬೇಕು.
 
|-
 
|13:20
 
| ಮಗುವಿಗೆ ಹಾಲನ್ನು ಕೊಡಲು, ತಾಯಿಯು ಕೆಲಸಕ್ಕೆ ಹೋಗುವ ಮುನ್ನ ಎದೆಹಾಲನ್ನು ತೆಗೆದು ಅದನ್ನು ಆರೈಕೆ ಮಾಡುವವರ ಹತ್ತಿರ ಕೊಡಬೇಕು.
 
|-
 
|13:29
 
|ಇದನ್ನು ಮಾಡಲು – ತಾಯಿಯು ಕೆಲವು ವಾರಗಳ ಮೊದಲೇ ಫ್ರಿಜ್ ಅನ್ನು ಹೊಂದಿರುವ ವ್ಯವಸ್ಥೆ ಮಾಡಬೇಕು.
 
|-
 
|13:34
 
| ಅವಳು ಹೆಚ್ಚಿನ ಎದೆಹಾಲನ್ನು ತೆಗೆದು ನಂತರದ ಬಳಕೆಗಾಗಿ ಅದನ್ನು ಸಂಗ್ರಹಿಸಿ ಇಡಬೇಕು.
 
|-
 
|13:39
 
| ತಾಯಿಯು ಮಗುವಿಗೆ ಹಾಲುಣಿಸಿದ ನಂತರವೂ ಎದೆಹಾಲನ್ನು ತೆಗೆಯಬಹುದು.
 
|-
 
|13:44
 
| ಪ್ರತಿಯೊಂದು ಸಲ ಕುಡಿಸಲು, ಅವಳು 60 ರಿಂದ 90 ಮಿಲಿ ಲೀಟರ್ ನಷ್ಟು ಹಾಲನ್ನು ಇಡಬೇಕು.
 
|-
 
|13:51
 
|ತಾಯಿಯು ಹೊರಗೆ ಹೋದಾಗ, ಮಗುವಿನ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚು ಎದೆಹಾಲನ್ನು ಕೊಡಬಹುದು.
 
|-
 
|13:57
 
|ನೆನಪಿಡಿ, ಆಗಾಗ್ಗೆ ಕೈಯಿಂದ ಹಾಲು ತೆಗೆಯುವುದರಿಂದ ಈ ಕ್ರಿಯೆಯು ಸುಲಭವಾಗುತ್ತದೆ, ಹಾಲು ಶೀಘ್ರವಾಗಿ ಬರುತ್ತದೆ
 
|-
 
|14:07
 
|ಮತ್ತು ತಾಯಿಯು ಹೆಚ್ಚು ಹಾಲನ್ನು ಉತ್ಪಾದಿಸುತ್ತಾಳೆ.
 
|-
 
|14:11
 
|ಇಲ್ಲಿಗೆ, ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ. ಧನ್ಯವಾದಗಳು.
 
|}
 

Revision as of 16:44, 18 May 2019

Contributors and Content Editors

Debosmita, Sandhya.np14