Difference between revisions of "Health-and-Nutrition/C2/Cradle-Hold-for-Breastfeeding/Kannada"
From Script | Spoken-Tutorial
Sandhya.np14 (Talk | contribs) (Created page with "{|border=1 |<center>Time</center> |<center>Narration</center> |- |00:01 | '''Cradle hold for Breastfeeding''' (ಸ್ತನ್ಯಪಾನಕ್ಕಾಗಿ ಕ್ರೇಡ...") |
Sandhya.np14 (Talk | contribs) |
||
Line 22: | Line 22: | ||
| ನಾವು ಈಗ ಆರಂಭಿಸೋಣ. | | ನಾವು ಈಗ ಆರಂಭಿಸೋಣ. | ||
ಪ್ರಪಂಚದಾದ್ಯಂತ, ತಾಯಂದಿರು ವಿವಿಧ ರೀತಿಯಲ್ಲಿ ತಮ್ಮ ಶಿಶುವನ್ನು ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ. | ಪ್ರಪಂಚದಾದ್ಯಂತ, ತಾಯಂದಿರು ವಿವಿಧ ರೀತಿಯಲ್ಲಿ ತಮ್ಮ ಶಿಶುವನ್ನು ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ. | ||
+ | |||
ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ಚರ್ಚಿಸಿದಂತೆ, ತಾಯಿಯು ತನ್ನ ಮಗುವಿಗೆ ಹಾಲುಣಿಸುವ ಅತ್ಯುತ್ತಮ ವಿಧಾನದಲ್ಲಿ - | ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ಚರ್ಚಿಸಿದಂತೆ, ತಾಯಿಯು ತನ್ನ ಮಗುವಿಗೆ ಹಾಲುಣಿಸುವ ಅತ್ಯುತ್ತಮ ವಿಧಾನದಲ್ಲಿ - | ||
|- | |- | ||
Line 196: | Line 197: | ||
|- | |- | ||
|06:25 | |06:25 | ||
− | | ಯಾಕೆ? | + | | ಯಾಕೆ? ಸರಳವಾದ ಒಂದು ಉದಾಹರಣೆಯನ್ನು ಬಳಸಿ, ನಾವು ಇದನ್ನು ತಿಳಿದುಕೊಳ್ಳೋಣ. |
− | ಸರಳವಾದ ಒಂದು ಉದಾಹರಣೆಯನ್ನು ಬಳಸಿ, ನಾವು ಇದನ್ನು ತಿಳಿದುಕೊಳ್ಳೋಣ. | + | |
|- | |- | ||
|06:30 | |06:30 |
Revision as of 18:17, 25 April 2019
00:01 | Cradle hold for Breastfeeding (ಸ್ತನ್ಯಪಾನಕ್ಕಾಗಿ ಕ್ರೇಡಲ್ ಹೋಲ್ಡ್) ಎಂಬ ಈ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು - |
00:09 | ತಾಯಿಯು ಮಗುವಿಗೆ ಹಾಲುಣಿಸುವಾಗ ಆರಿಸಿಕೊಳ್ಳಬೇಕಾದ ಸರಿಯಾದ ವಿಧಾನ, |
00:15 | ಹಾಲುಣಿಸುವ ಮೊದಲು ತಾಯಿಯ ಪೂರ್ವ ಸಿದ್ಧತೆಗಳು ಮತ್ತು |
00:18 | 'ಕ್ರೇಡಲ್ ಹೋಲ್ಡ್' ಅನ್ನು ಹೇಗೆ ಮಾಡುವುದು ಇವುಗಳ ಬಗ್ಗೆ ಕಲಿಯುತ್ತೇವೆ. |
00:22 | ನಾವು ಈಗ ಆರಂಭಿಸೋಣ.
ಪ್ರಪಂಚದಾದ್ಯಂತ, ತಾಯಂದಿರು ವಿವಿಧ ರೀತಿಯಲ್ಲಿ ತಮ್ಮ ಶಿಶುವನ್ನು ಹಿಡಿದುಕೊಂಡು ಸ್ತನ್ಯಪಾನ ಮಾಡಿಸುತ್ತಾರೆ. ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ಚರ್ಚಿಸಿದಂತೆ, ತಾಯಿಯು ತನ್ನ ಮಗುವಿಗೆ ಹಾಲುಣಿಸುವ ಅತ್ಯುತ್ತಮ ವಿಧಾನದಲ್ಲಿ - |
00:39 | ತಾಯಿ ಮತ್ತು ಮಗು ಇಬ್ಬರೂ ಹಾಲುಣಿಸುವ ಸಂಪೂರ್ಣ ಅವಧಿಯಲ್ಲಿ ಆರಾಮವಾಗಿ ಇರುತ್ತಾರೆ. |
00:45 | ಮಗು, ತಾಯಿಯ ಸ್ತನಕ್ಕೆ ಸರಿಯಾಗಿ ಅಂಟಿಕೊಳ್ಳಲು (attach) |
00:50 | ಮತ್ತು ಸಾಕಷ್ಟು ಹಾಲನ್ನು ಪಡೆಯಲು ಸಾಧ್ಯವಾಗಿರುತ್ತದೆ. |
00:54 | 'ಕ್ರೇಡಲ್ ಹೋಲ್ಡ್' ಎಂಬ ವಿಧಾನದ ಬಗ್ಗೆ ನಾವು ಕಲಿಯೋಣ. |
00:59 | ಮಗುವಿಗೆ ಹಾಲುಣಿಸುವ ಮೊದಲು, ತಾಯಿಯು ಸಾಬೂನು ಮತ್ತು ನೀರಿನಿಂದ ತನ್ನ ಕೈಗಳನ್ನು |
01:05 | ತೊಳೆದುಕೊಂಡು ಚೆನ್ನಾಗಿ ಒಣಗಿಸಿಕೊಳ್ಳಬೇಕು. |
01:10 | ನಂತರ, ಅವಳು ಒಂದು ಲೋಟ ಕುದಿಸಿ ಆರಿಸಿದ ನೀರನ್ನು ಕುಡಿಯಬೇಕು. |
01:15 | ಹಾಲುಣಿಸುವ ತಾಯಂದಿರು, ದಿನದಲ್ಲಿ ಸರಾಸರಿ 750 ರಿಂದ 850 ಮಿಲಿಲೀಟರ್ ಹಾಲನ್ನು ಉತ್ಪಾದಿಸುತ್ತಾರೆ. |
01:22 | ಆದ್ದರಿಂದ, ಅವರು ತಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸುವುದು ಅವಶ್ಯವಾಗಿದೆ. |
01:27 | ನಂತರ, ನಾವು ತಾಯಿಯ ಸ್ಥಿತಿ ಯ ಬಗ್ಗೆ (position) ಚರ್ಚಿಸೋಣ. |
01:31 | ತಾಯಿಯು ನೆಲದ ಮೇಲೆ ಅಥವಾ ಹಾಸಿಗೆಯ ಮೇಲೆ, ಸುಖಾಸನದಲ್ಲಿ (cross legged position) |
01:36 | ಅಥವಾ, ಕುರ್ಚಿಯಲ್ಲಿ ನೆಲದ ಮೇಲೆ ತನ್ನ ಪಾದಗಳನ್ನು ಊರಿಕೊಂಡು ಕುಳಿತುಕೊಳ್ಳಬೇಕು. |
01:41 | ಕುರ್ಚಿ ತುಂಬಾ ಎತ್ತರವಾಗಿದ್ದು ಅವಳ ಪಾದಗಳು ನೆಲಕ್ಕೆ ತಲುಪದಿದ್ದರೆ, ಆಗ- |
01:47 | ಆಕೆಯು ತನ್ನ ಪಾದಗಳನ್ನು ಸಣ್ಣ ಸ್ಟೂಲ್ ಮೇಲೆ ಅಥವಾ ನೆಲದ ಮೇಲೆ ಇರಿಸಿದ ದಿಂಬುಗಳ ಮೇಲೆ ಇಟ್ಟುಕೊಳ್ಳಬಹುದು. |
01:53 | ಕುಳಿತಿರುವಾಗ ಬೆನ್ನು ನೋವನ್ನು ತಪ್ಪಿಸಲು- ಅವಳ ಬೆನ್ನು ನೇರವಾಗಿದ್ದು |
02:00 | ಭುಜಗಳು ಏರಿಸಿದ ಅಥವಾ ಇಳಿಸಿದ ಸ್ಥಿತಿಯಲ್ಲಿರದೆ, ವಿರಾಮದಲ್ಲಿ ಇರುವುದನ್ನು ಅವಳು ಖಚಿತಪಡಿಸಿಕೊಳ್ಳಬೇಕು. |
02:05 | ಈ ವಿರಾಮದ ಸ್ಥಿತಿಯು ಹಾಲುಣಿಸುವ ಅವಧಿಯ ಉದ್ದಕ್ಕೂ ಹಾಗೆಯೇ ಇರಬೇಕು. |
02:12 | ಈಗ, ತಾಯಿಯು ಮಗುವಿಗೆ ಹಾಲುಣಿಸುವ ಸ್ತನವನ್ನು ಮಾತ್ರ ಹೊರಗೆ ತೆಗೆಯಬೇಕು. |
02:18 | ಅವಳು ಸ್ತನದ ಮೇಲೆ ತನ್ನ ಬ್ರಾ ಅಥವಾ ರವಿಕೆಯ ಒತ್ತಡವು ಬಾರದಂತೆ ನೋಡಿಕೊಳ್ಳಬೇಕು. |
02:25 | ತಾಯಿಯು ಆರಾಮವಾಗಿ ಕುಳಿತುಕೊಂಡ ನಂತರ, ಮಗುವನ್ನು ಅವಳ ಬಳಿಗೆ ತರಬೇಕು. |
02:29 | ತಾಯಿಯು ಹಾಲುಣಿಸುವ ಸ್ತನದ ಬದಿಯ ತೋಳಿನಿಂದ, ತನ್ನ ಮಗುವನ್ನು ಹಿಡಿದಿರಬೇಕು. |
02:37 | ಮಗುವಿನ ತಲೆಯನ್ನು ಅದೇ ಕೈಯ ಮೊಣಕೈನ ಒಳಭಾಗದಲ್ಲಿ ಆರಾಮವಾಗಿ ಇರಿಸಬೇಕು. |
02:44 | ಅದೇ ತೋಳಿನಿಂದ, ತಾಯಿಯು ತನ್ನ ಶಿಶುವಿನ ತಲೆ, ಕುತ್ತಿಗೆ ಮತ್ತು ದೇಹವನ್ನು ಹಿಡಿದುಕೊಂಡಿರಬೇಕು. |
02:51 | ಈ ಚಿತ್ರದಲ್ಲಿ, ತಾಯಿಯು ಮಗುವಿಗೆ ತನ್ನ ಬಲಗಡೆಯ ಸ್ತನದಿಂದ ಹಾಲುಣಿಸುವಳು. |
02:56 | ಆದ್ದರಿಂದ, ಮಗುವಿನ ಶರೀರವನ್ನು ಹಿಡಿದುಕೊಳ್ಳಲು ಅವಳು ತನ್ನ ಬಲತೋಳನ್ನು ಬಳಸುತ್ತಿದ್ದಾಳೆ ಮತ್ತು |
03:04 | ಮಗುವಿನ ತಲೆಯು ಬಲಗಡೆಯ ಮೊಣಕೈನ ಒಳಭಾಗದಲ್ಲಿ ಆರಾಮವಾಗಿ ಇರಿಸಲ್ಪಟ್ಟಿದೆ. |
03:10 | ಮಗುವನ್ನು ಎತ್ತಿಕೊಳ್ಳಲು ತಾಯಿಗೆ ಸಹಾಯವು ಬೇಕಾಗಿದ್ದರೆ, ಅವಳು ಮಗುವಿನ ಕೆಳಗೆ, ತನ್ನ ತೊಡೆಯ ಮೇಲೆ ಒಂದು ದಿಂಬನ್ನು ಇಟ್ಟುಕೊಳ್ಳಬಹುದು. |
03:19 | ನೆನಪಿಡಿ, ತಾಯಿಯು ಯಾವಾಗಲೂ ತನ್ನ ಬೆನ್ನನ್ನು ಬಗ್ಗಿಸಿ ಸ್ತನವನ್ನು ಮಗುವಿನ ಹತ್ತಿರ ತರಬಾರದು. |
03:25 | ಇದರಿಂದ ಅವಳಿಗೆ ತೊಂದರೆಯಾಗುತ್ತದೆ ಮತ್ತು ಬೆನ್ನು ನೋವು ಬರುತ್ತದೆ. |
03:30 | ಅವಳು ಯಾವಾಗಲೂ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳಬೇಕು ಮತ್ತು ತನ್ನ ಎದೆಗೆ ತಲುಪುವಂತೆ ಮಗುವನ್ನು ಎತ್ತಿಕೊಳ್ಳಬೇಕು. |
03:36 | ನಂತರ, ಮಗುವನ್ನು ಸರಿಯಾಗಿ ಹೇಗೆ ಇರಿಸುವುದು ಎಂದು ನಾವು ಕಲಿಯೋಣ. |
03:42 | ಮಗುವಿನ ಹೊಟ್ಟೆಯು, ತಾಯಿಯ ದೇಹಕ್ಕೆ ಮೃದುವಾಗಿ ಒತ್ತಿರಬೇಕು. |
03:47 | ಅವರಿಬ್ಬರ ದೇಹಗಳ ನಡುವಿನ ದೂರವು ಕಡಿಮೆಯಾದಷ್ಟು, ಸ್ತನವನ್ನು ತಲುಪುವ ಮಗುವಿನ ಪ್ರಯತ್ನವು ಸಹ ಕಡಿಮೆ ಆಗುತ್ತದೆ. |
03:54 | ಮತ್ತು, ಮಗುವಿಗೆ ಸರಿಯಾಗಿ ಹೊಂದಿಸಿಕೊಳ್ಳಲು ಸುಲಭವಾಗುತ್ತದೆ. |
04:00 | ಮಗುವಿನ ಸಂಪೂರ್ಣ ದೇಹವನ್ನು ಹಿಡಿದುಕೊಳ್ಳಬೇಕಾದ ವಿಧಾನವು ಎರಡನೇ ಪ್ರಮುಖ ಅಂಶವಾಗಿದೆ. |
04:08 | ನಾವು ಆಹಾರವನ್ನು ಸೇವಿಸುವಾಗ ನಮ್ಮ ತಲೆ, ಕುತ್ತಿಗೆ ಮತ್ತು ದೇಹವು ಯಾವಾಗಲೂ ಒಂದೇ ದಿಕ್ಕಿನಲ್ಲಿ ಇರುವುದನ್ನು ನೀವು ಗಮನಿಸಿರಬಹುದು. |
04:16 | ಆದರೆ ಸ್ತನ್ಯಪಾನ ಮಾಡಿಸುವಾಗ, ಕೆಲವು ಸಲ ತಾಯಂದಿರು ಮಗುವಿನ ತಲೆಯನ್ನು ಪಕ್ಕಕ್ಕೆ ತಿರುಗಿಸಿರುತ್ತಾರೆ. |
04:23 | ಹಾಲುಣಿಸುವಾಗ ಇದು ಮಗುವಿಗೆ ಅನಾನುಕೂಲವನ್ನು ಮಾಡುತ್ತದೆ. |
04:28 | ಸ್ತನ್ಯಪಾನ ಮಾಡಿಸುವಾಗ, ಮಗುವಿನ ತಲೆ, ಕುತ್ತಿಗೆ ಮತ್ತು ದೇಹವು ಒಂದೇ ಸಾಲಿನಲ್ಲಿರಬೇಕು. |
04:35 | ಇದರಿಂದ ಮಗುವಿಗೆ ಹಾಲನ್ನು ನುಂಗಲು ಸುಲಭವಾಗುತ್ತದೆ. |
04:41 | ಮಗುವಿನ ದೇಹವನ್ನು ಹೊಂದಿಸುವ ಬಗ್ಗೆ, ಈಗ ನಾವು ಮೂರನೆಯ ಅಂಶಕ್ಕೆ ಬರುತ್ತೇವೆ. |
04:46 | ತಾಯಿಯು ತನ್ನ ಮಗುವಿನ ಪೂರ್ತಿ ಶರೀರವನ್ನು ಹಿಡಿದುಕೊಳ್ಳಬೇಕು. |
04:51 | ಇಲ್ಲದಿದ್ದರೆ, ಮಗುವು ತಾಯಿಯ ಸ್ತನಕ್ಕೆ ಗಟ್ಟಿಯಾಗಿ ಹೊಂದಿಸಿಕೊಳ್ಳಲು (attach) ಬಹಳ ಪ್ರಯತ್ನಿಸಬೇಕಾಗುವುದು. |
04:58 | ನಂತರ, ನಾವು ಮಗುವಿನ ಮೂಗು ಮತ್ತು ಗದ್ದಗಳ ಸ್ಥಾನವನ್ನು ನೋಡೋಣ. |
05:03 | ಶಿಶುವಿನ ಮೂಗು ಮತ್ತು ತಾಯಿಯ ಮೊಲೆತೊಟ್ಟು ಒಂದೇ ಸಾಲಿನಲ್ಲಿರಬೇಕು. |
05:07 | ಮತ್ತು, ಗದ್ದವು ಮುಂದೆ ಬಂದಿದ್ದು ಸ್ತನಕ್ಕೆ ಅತೀ ಹತ್ತಿರವಾಗಿರಬೇಕು. |
05:13 | ಲ್ಯಾಚಿಂಗ್ ಸಮಯದಲ್ಲಿ, ಶಿಶು ಅರಿಯೋಲಾದ ಕೆಳಗಿನ ಹೆಚ್ಚು ಭಾಗವನ್ನು ಒಳಗೆ ತೆಗೆದುಕೊಳ್ಳುವುದನ್ನು ಇದು ಖಚಿತಪಡಿಸುತ್ತದೆ. |
05:19 | ಹೀಗಾಗಿ, ಹೆಚ್ಚು ಹಾಲನ್ನು ಕುಡಿಯಲು ಕೆಳದವಡೆಯನ್ನು ಬಳಸುತ್ತದೆ. |
05:26 | ದಯವಿಟ್ಟು ಗಮನಿಸಿ: ಅರಿಯೋಲಾ, ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗವಾಗಿದೆ. |
05:32 | ಈಗ ಮಗುವನ್ನು ಸರಿಯಾಗಿ ಹಿಡಿದುಕೊಂಡಿರುವುದರಿಂದ, |
05:35 | ಸ್ತನವನ್ನು ಹೇಗೆ ಹಿಡಿದುಕೊಳ್ಳಬೇಕು ಎಂದು ನಾವು ಕಲಿಯೋಣ. |
05:39 | ತಾಯಿಯು ತನ್ನ ಖಾಲಿ ಇರುವ ಕೈಯ ಬೆರಳುಗಳನ್ನು ಬಳಸಿ, U ಆಕಾರದಲ್ಲಿ ಇರುವಂತೆ ಮೇಲಿನಿಂದ ತನ್ನ ಸ್ತನವನ್ನು ಹಿಡಿಯಬೇಕು. |
05:48 | ಈ ಚಿತ್ರದಲ್ಲಿ, ತಾಯಿಯು ತನ್ನ ಬಲಗಡೆಯ ಸ್ತನವನ್ನು ಹಿಡಿದುಕೊಳ್ಳಲು ಎಡಗೈಯನ್ನು ಬಳಸುತ್ತಾಳೆ. |
05:55 | ಹೆಬ್ಬೆರಳು ಮತ್ತು ಬೆರಳುಗಳ ಸರಿಯಾದ ಸ್ಥಾನವನ್ನು ತಿಳಿದುಕೊಳ್ಳಲು, ತಾಯಿಯ ಬಲ ಮೊಲೆಯಲ್ಲಿ, ಮೊಲೆತೊಟ್ಟನ್ನು ಗಡಿಯಾರದ ಕೇಂದ್ರ ಎಂದು ಊಹಿಸಿ. |
06:04 | ತಾಯಿಯು ತನ್ನ ಎಡ ಹೆಬ್ಬೆರಳನ್ನು, ಈ ಗಡಿಯಾರದಲ್ಲಿ ಗಂಟೆ 3 ಆದ ಹಾಗೆ ಇಡಬೇಕು. |
06:10 | ಅವಳ ಎಡ ತೋರುಬೆರಳು ಮತ್ತು ಮಧ್ಯದ ಬೆರಳನ್ನು ಗಂಟೆ 9 ಆದಾಗಿನ ಹಾಗೆ ಇಡಬೇಕು. |
06:18 | ಸ್ತನವನ್ನು ಹಿಡಿದಿರುವ ತಾಯಿಯ ಬೆರಳುಗಳು, ಯಾವಾಗಲೂ ಮಗುವಿನ ತುಟಿಗಳಿರುವ ದಿಕ್ಕಿನಲ್ಲಿಯೇ ಇರಬೇಕು. |
06:25 | ಯಾಕೆ? ಸರಳವಾದ ಒಂದು ಉದಾಹರಣೆಯನ್ನು ಬಳಸಿ, ನಾವು ಇದನ್ನು ತಿಳಿದುಕೊಳ್ಳೋಣ. |
06:30 | ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಮ್ಮ ತುಟಿಗಳು ಅಡ್ಡಲಾಗಿ ತೆರೆದುಕೊಳ್ಳುತ್ತವೆ. |
06:35 | ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ನಾವು ವಡಾ-ಪಾವ್ ಅಥವಾ ಬರ್ಗರ್ ಅನ್ನು ಅಡ್ಡಲಾಗಿ ಹಿಡಿದುಕೊಳ್ಳುತ್ತೇವೆ. |
06:40 | ಇಲ್ಲಿ, ಹೆಬ್ಬೆರಳು ಮತ್ತು ಬೆರಳುಗಳನ್ನು ತುಟಿಗಳ ದಿಕ್ಕಿನಲ್ಲಿ ಇರಿಸಲಾಗುತ್ತದೆ. |
06:46 | ವಡಾ-ಪಾವ್ ಅಥವಾ ಬರ್ಗರ್ ಅನ್ನು ಲಂಬವಾಗಿ ಹಿಡಿದಿದ್ದರೆ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ. |
06:53 | ಹಾಗೆಯೇ, ಮಗುವಿನ ತುಟಿಗಳ ದಿಕ್ಕನ್ನು ಗಮನಿಸಿ. ತುಟಿಗಳು ಇಲ್ಲಿ ಲಂಬವಾಗಿವೆ. |
07:00 | ಆದ್ದರಿಂದ, ಬೆರಳುಗಳು ಮತ್ತು ಹೆಬ್ಬೆರಳನ್ನು ಕೂಡ ಸ್ತನದ ಮೇಲೆ ಲಂಬವಾಗಿ ಇಡಬೇಕು. |
07:06 | ಇದು, ಮಗುವಿಗೆ ತನ್ನ ಬಾಯಿಯಲ್ಲಿ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. |
07:13 | ಮಗುವಿನ ತುಟಿಗಳ ದಿಕ್ಕಿನಲ್ಲಿ ಇರುವುದರ ಜೊತೆಗೆ, ತಾಯಿಯ ಹೆಬ್ಬೆರಳು ಮತ್ತು ಬೆರಳುಗಳು ಯಾವಾಗಲೂ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರದಲ್ಲಿ ಇರಬೇಕು. |
07:23 | ಮತ್ತೆ, ವಡಾ-ಪಾವ್ ಅಥವಾ ಬರ್ಗರ್ ಅನ್ನು ತಿನ್ನುವಾಗ, ನಾವು ಅದನ್ನು ಬಹಳ ಹತ್ತಿರದಲ್ಲಿ ಹಿಡಿದುಕೊಂಡರೆ, ನಮ್ಮ ಬೆರಳುಗಳು ದೊಡ್ಡ ತುತ್ತನ್ನು ತೆಗೆದುಕೊಳ್ಳದಂತೆ ಬಾಯಿಗೆ ಅಡ್ಡಬರುತ್ತವೆ. |
07:34 | ನಾವು ಅದನ್ನು ತುಂಬಾ ದೂರದಲ್ಲಿ ಹಿಡಿದರೆ, ಅದು ನಮ್ಮ ಬಾಯಿಯಲ್ಲಿ ಹೋಗಬಹುದಾದ ಆಕಾರದಲ್ಲಿ ಇರುವುದಿಲ್ಲ. |
07:41 | ಆದ್ದರಿಂದ, ದೊಡ್ಡ ತುತ್ತನ್ನು ತೆಗೆದುಕೊಳ್ಳಲು, ಅದನ್ನು ಸರಿಯಾದ ದೂರದಲ್ಲಿ ಹಿಡಿದುಕೊಳ್ಳುತ್ತೇವೆ. |
07:47 | ಹೀಗೆಯೇ, ಈ ಚಿತ್ರದಲ್ಲಿ ತೋರಿಸಿರುವಂತೆ, ಮಗುವಿಗೆ ಮೊಲೆತೊಟ್ಟಿನಿಂದ 3 ಬೆರಳುಗಳ ಅಂತರವು ಸರಿಯಾಗಿದೆ. |
07:55 | ಈ ಅಂತರವು, ಕೆಳಗಿನ ಅಂಶಗಳನ್ನು ಖಚಿತಪಡಿಸುತ್ತದೆ-
ಮಗುವು ತನ್ನ ಬಾಯಿಯಲ್ಲಿ ಅರಿಯೋಲಾದ ದೊಡ್ಡ ಭಾಗವನ್ನು ತೆಗೆದುಕೊಳ್ಳುವಾಗ ತಾಯಿಯ ಬೆರಳುಗಳು ಅಡ್ಡಬರುವುದಿಲ್ಲ, |
08:05 | ತಾಯಿಯು ಕೇವಲ ಮೊಲೆತೊಟ್ಟನ್ನು ಮಾತ್ರ ಒತ್ತುವುದಿಲ್ಲ. ಏಕೆಂದರೆ, ಇದರಿಂದ ತುಂಬಾ ಕಡಿಮೆ ಹಾಲು ಸಿಗುತ್ತದೆ. |
08:11 | ತಾಯಿಯು ಹೆಚ್ಚು ಹಾಲು ಹೊರಗೆ ಬರಲು, ಅರಿಯೋಲಾದ ಕೆಳಗಿನ ಹಾಲಿನ ದೊಡ್ಡ ನಾಳಗಳನ್ನು ಒತ್ತುತ್ತಾಳೆ. |
08:17 | ಮತ್ತು, ಮಗುವಿಗೆ ಗಟ್ಟಿಯಾಗಿ ಅಂಟಿಕೊಳ್ಳಲು ಸಹಾಯವಾಗುವಂತೆ, ಸ್ತನವನ್ನು ಸರಿಯಾಗಿ ಹಿಡಿಯಲಾಗಿದೆ. |
08:23 | ನೆನಪಿಡಿ-
ಮಗುವಿನ ಗದ್ದ ಇರುವ ಸ್ತನದ ಬದಿಯಲ್ಲಿ, ತಾಯಿಯ ಹೆಬ್ಬೆರಳು ಇರಬೇಕು. |
08:30 | ಮತ್ತು, ಮಗುವಿನ ಮೂಗು ಇರುವ ಸ್ತನದ ಬದಿಯಲ್ಲಿ, ಅವಳ 2 ಬೆರಳುಗಳು ಇರಬೇಕು. |
08:36 | ನಾವು ವಡಾ- ಪಾವ್ ಅಥವಾ ಬರ್ಗರ್ ನ ಉದಾಹರಣೆಗೆ ಹಿಂತಿರುಗೋಣ. |
08:41 | ವಡಾ-ಪಾವ್ ಅಥವಾ ಬರ್ಗರ್ ಅನ್ನು ಸರಿಯಾಗಿ ಹಿಡಿದ ನಂತರ, ನಾವು ದೊಡ್ಡ ತುತ್ತು (bite) ತೆಗೆದುಕೊಳ್ಳಲು ಅದನ್ನು ಅದುಮಿ ಹಿಡಿಯುತ್ತೇವೆ. |
08:48 | ಹೀಗೆಯೇ, ತಾಯಿಯು ಮೇಲಿನಿಂದ U ಆಕಾರದಲ್ಲಿ, ತನ್ನ ಸ್ತನವನ್ನು ಮೆತ್ತಗೆ ಒತ್ತಿ ಹಿಡಿಯಬೇಕು. |
08:54 | ಇದು, ಮಗುವಿಗೆ ಕೆಳಗಿನ ಅರಿಯೋಲಾದ ದೊಡ್ಡ ಭಾಗವನ್ನು ತನ್ನ ಬಾಯಿಯಲ್ಲಿ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. |
09:01 | ಆದರೆ ನೆನಪಿಡಿ, ತಾಯಿಯು ತನ್ನ ಸ್ತನವನ್ನು ತಲೆಕೆಳಗಾದ V ಆಕಾರದಲ್ಲಿ ಅದುಮಬಾರದು. |
09:07 | V ಆಕಾರದ ಒತ್ತುವಿಕೆಯು ಸ್ತನವನ್ನು ಹಿಸುಕುತ್ತದೆ ಮತ್ತು ನಿಪ್ಪಲ್ ಫೀಡಿಂಗ್ ಅನ್ನು ಉಂಟುಮಾಡುತ್ತದೆ. |
09:14 | ಅಲ್ಲದೆ, ಹೆಬ್ಬೆರಳು ಮತ್ತು ಬೆರಳುಗಳಿಂದ ಸ್ತನವನ್ನು ಸಮನಾಗಿ ಒತ್ತಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಿ. |
09:21 | ಇಲ್ಲದಿದ್ದರೆ, ಮೊಲೆತೊಟ್ಟು ಬಲ ಅಥವಾ ಎಡಭಾಗಕ್ಕೆ ಸರಿಯುತ್ತದೆ |
09:27 | ಮತ್ತು ಸ್ತನಕ್ಕೆ ಸರಿಯಾಗಿ ಹೊಂದಿಸಿಕೊಳ್ಳಲು ಮಗುವಿಗೆ ಸಾಧ್ಯವಾಗುವುದಿಲ್ಲ. |
09:32 | ನೆನಪಿಡಿ, ಮಗುವಿನ ಕಡೆಗೆ ಸ್ತನವನ್ನು ಬದಿಯಿಂದ ತಳ್ಳುವ ಮೂಲಕ ಅದನ್ನು ಮಗುವಿನೆಡೆಗೆ ತರಬೇಡಿ. |
09:39 | ಯಾವಾಗಲೂ ಮಗುವನ್ನು ಸ್ತನದ ಕಡೆಗೆ ತನ್ನಿ. |
09:43 | ಈಗ, ಮಗು 'ಕ್ರೇಡಲ್ ಹೋಲ್ಡ್' ನಲ್ಲಿದೆ ಮತ್ತು ಸ್ತನ್ಯಪಾನಕ್ಕಾಗಿ ಹೊಂದಿಸಿಕೊಳ್ಳಲು ಸಿದ್ಧವಾಗಿದೆ. |
09:49 | ತಾಯಿಯ ಸ್ತನಕ್ಕೆ ಮಗುವನ್ನು ಸರಿಯಾದ ಜೋಡಿಸುವ ವಿಧಾನದ ಬಗ್ಗೆ, ಇದೇ ಸರಣಿಯ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ. |
09:58 | ಒಮ್ಮೆ ಮಗು ಸ್ತನಕ್ಕೆ ಸರಿಯಾಗಿ ಅಂಟಿಕೊಂಡಿತೆಂದರೆ ಮತ್ತು ಸ್ತನವು ತುಂಬಾ ಭಾರವಾಗಿರದಿದ್ದರೆ ಆಗ - |
10:05 | ತಾಯಿಯು ಸ್ತನವನ್ನು ತನ್ನ ಕೈಯಿಂದ ಬಿಡಬೇಕು. |
10:09 | ಮತ್ತು ಆ ಕೈಯನ್ನು ಮಗುವಿನ ಆಧಾರಕ್ಕಾಗಿ ಕೆಳಗೆ ತರಬೇಕು. |
10:14 | ಈ ಸ್ಥಾನದಲ್ಲಿ, ತಾಯಿಯು ತನ್ನ ಎರಡೂ ತೋಳುಗಳನ್ನು ತನ್ನ ಶರೀರದ ತುಂಬಾ ಹತ್ತಿರಕ್ಕೆ ತರಬೇಕು. |
10:21 | ಹಾಲುಣಿಸುವ ಸಮಯದಲ್ಲಿ ಇದು ಅವಳನ್ನು ಆರಾಮವಾಗಿಡುತ್ತದೆ. |
10:26 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
10:29 | ಧನ್ಯವಾದಗಳು. |