Difference between revisions of "Koha-Library-Management-System/C2/Create-MARC-framework/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 | '''Time''' | '''Narration''' |- |00:01 | '''Create a MARC Framework''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ...") |
Sandhya.np14 (Talk | contribs) |
||
Line 169: | Line 169: | ||
|- | |- | ||
|05:06 | |05:06 | ||
− | | ಗಮನಿಸಿ: '''Cataloging''' ನಲ್ಲಿ, ನೀವು '''Repeatable | + | | ಗಮನಿಸಿ: '''Cataloging''' ನಲ್ಲಿ, ನೀವು '''Repeatable''' ಅನ್ನು ಕ್ಲಿಕ್ ಮಾಡಿದರೆ, ಫೀಲ್ಡ್, ಅದರ ಬದಿಯಲ್ಲಿ ಒಂದು ಅಧಿಕ ಚಿಹ್ನೆಯನ್ನು ಹೊಂದಿರುತ್ತದೆ. |
|- | |- | ||
|05:16 | |05:16 |
Latest revision as of 08:56, 7 March 2019
Time | Narration |
00:01 | Create a MARC Framework ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, Koha ದಲ್ಲಿ MARC Framework ಅನ್ನು ಕ್ರಿಯೇಟ್ ಮಾಡಲು ಕಲಿಯುವೆವು. |
00:14 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux Operating System 16.04 ಹಾಗೂ Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ. |
00:27 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು. |
00:33 | ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು. ಮತ್ತು, Koha ದಲ್ಲಿ ನೀವು Admin ಆಕ್ಸೆಸ್ ಅನ್ನು (access) ಸಹ ಹೊಂದಿರಬೇಕು. |
00:44 | ಇಲ್ಲದಿದ್ದಲ್ಲಿ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ. |
00:50 | ನಾವು ಆರಂಭಿಸುವ ಮೊದಲು, ಗಮನಿಸಿ- Frameworks ಅನ್ನು ಎಡಿಟ್ ಅಥವಾ ಡಿಲೀಟ್ ಮಾಡಬಹುದು. |
00:57 | Superlibrarian, ತಮ್ಮ ಲೈಬ್ರರಿ ಗಳ ಅಗತ್ಯಕ್ಕೆ ಅನುಗುಣವಾಗಿ, ತಮ್ಮ ಸ್ವಂತದ framework ಗಳನ್ನು ಕ್ರಿಯೇಟ್ ಮಾಡಬಹುದು. |
01:05 | ಈಗ ನಾವು ಆರಂಭಿಸೋಣ. ನಾನು Koha ಇಂಟರ್ಫೇಸ್ ಗೆ ಬದಲಾಯಿಸುತ್ತೇನೆ. |
01:11 | Superlibrarian username Bella ಮತ್ತು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ. |
01:17 | ಈಗ ನಾವು ' Koha ಇಂಟರ್ಫೇಸ್' ನ ಒಳಗಡೆ, Superlibrarian Bella ಎಂದು ಇದ್ದೇವೆ. |
01:25 | Koha administration ಗೆ ಹೋಗಿ. |
01:29 | Catalog ಎಂಬ ವಿಭಾಗದ ಅಡಿಯಲ್ಲಿ, MARC bibliographic framework ಮೇಲೆ ಕ್ಲಿಕ್ ಮಾಡಿ. |
01:36 | ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. |
01:40 | plus New framework ಮೇಲೆ ಕ್ಲಿಕ್ ಮಾಡಿ. |
01:44 | ವಿವರಗಳನ್ನು ತುಂಬಲು ಸೂಚಿಸುತ್ತಿರುವ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ -
Framework code: ಮತ್ತು Description: |
01:54 | Framework code ಫೀಲ್ಡ್ ನಲ್ಲಿ, ನಾನು BK ಎಂದು ಟೈಪ್ ಮಾಡುವೆನು. |
02:01 | Description: ಗಾಗಿ, ನಾನು BOOKS ಎಂದು ಟೈಪ್ ಮಾಡುವೆನು. |
02:06 | ನಂತರ, ಕೆಳಗೆ ಇರುವ Submit ಬಟನ್ ಮೇಲೆ ಕ್ಲಿಕ್ ಮಾಡಿ. |
02:11 | ತೆರೆದುಕೊಂಡ ಹೊಸ ಪೇಜ್ ನಲ್ಲಿ, ಕೋಡ್ BK ಅರ್ಥಾತ್ BOOKS ಗೆ ಹೋಗಿ. |
02:18 | Actions ಎಂಬ ಟ್ಯಾಬ್ ನಿಂದ, MARC structure ಮೇಲೆ ಕ್ಲಿಕ್ ಮಾಡಿ. |
02:25 | MARC Framework for BOOKS (BK) ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
ಈ ಶೀರ್ಷಿಕೆಯ ಅಡಿಯಲ್ಲಿ, ಇಲ್ಲಿ OK ಬಟನ್ ಮೇಲೆ ಕ್ಲಿಕ್ ಮಾಡಿ. |
02:35 | MARC Framework for BOOKS (BK) ಇದೇ ಶೀರ್ಷಿಕೆಯೊಂದಿಗೆ, ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ. |
02:40 | ಇದು 1 to 20 of 342 tags ದಿಂದ, tags ಅನ್ನು ತೋರಿಸುತ್ತದೆ. |
02:48 | ಆದಾಗ್ಯೂ, ನಿಮ್ಮ ಸ್ಕ್ರೀನ್ ನಲ್ಲಿ, ನೀವು ಹೆಚ್ಚು ಟ್ಯಾಗ್ ಗಳನ್ನು ನೋಡಬಹುದು. |
02:53 | ಒಟ್ಟು 342 ಡೀಫಾಲ್ಟ್ tags ಇವೆ ಎಂಬುದನ್ನು ಗಮನಿಸಿ.
ನಾನು Books ಗಾಗಿ ಕೆಲವು ಟ್ಯಾಗ್ ಗಳನ್ನು ಮಾತ್ರ ಆಯ್ಕೆಮಾಡುವೆನು. ನಿಮ್ಮ ಅವಶ್ಯಕತೆಗೆ ಅನುಸಾರವಾಗಿ, ನೀವು ಟ್ಯಾಗ್ ಗಳನ್ನು ಆಯ್ಕೆ ಮಾಡಬಹುದು. |
03:08 | ಇಲ್ಲಿ ನೋಡಿ. ಟ್ಯಾಗ್ ಅನ್ನು Edit ಅಥವಾ Delete ಮಾಡಲು ಇಲ್ಲಿ ಆಯ್ಕೆಗಳಿವೆ. |
03:14 | ನಾನು ಡಿಲೀಟ್ ಹೇಗೆ ಮಾಡುವುದೆಂದು ವಿವರಿಸುತ್ತೇನೆ. |
03:17 | ನಾನು tag ನಂಬರ್ 010- Library of Congress Control Number ಅನ್ನು ಆರಿಸಿಕೊಳ್ಳುತ್ತೇನೆ. |
03:25 | ಬಲತುದಿಯಲ್ಲಿರುವ Delete ಟ್ಯಾಬ್ ಅನ್ನು ಕ್ಲಿಕ್ ಮಾಡಿದಾಗ, ಒಂದು ಪಾಪ್-ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ. ಇದು “Confirm deletion of tag '010'?” ಎಂದು ಕೇಳುತ್ತದೆ. |
03:40 | Yes, delete this tag ಮೇಲೆ ಕ್ಲಿಕ್ ಮಾಡಿ. |
03:44 | ‘Tag deleted’ ಎಂಬ ಮೆಸೇಜ್ ನೊಂದಿಗೆ ಇನ್ನೊಂದು ವಿಂಡೋ ಕಾಣಿಸಿಕೊಳ್ಳುತ್ತದೆ. Ok ಮೇಲೆ ಕ್ಲಿಕ್ ಮಾಡಿ. |
03:51 | ಇದೇ ಪೇಜ್ MARC Framework for Books (BK) ಮತ್ತೆ ಕಾಣಿಸಿಕೊಳ್ಳುತ್ತದೆ. |
03:56 | ಈ ಪೇಜ್ ನಲ್ಲಿ, ಇನ್ನುಮುಂದೆ ‘Tag’ number 010 ಅನ್ನು ತೋರಿಸಲಾಗುವುದಿಲ್ಲ. |
04:03 | ಹೀಗೆಯೇ, ಒಂದು ನಿರ್ದಿಷ್ಟ item type ಗೆ ಸಂಬಂಧಿಸದೇ ಇದ್ದ ಬೇರೆ ಯಾವುದೇ ಟ್ಯಾಗ್ ಗಳನ್ನು ಡಿಲೀಟ್ ಮಾಡಿ. |
04:11 | ಟ್ಯಾಗ್ ಗಳನ್ನು ಎಡಿಟ್ ಮಾಡಲು, Actions ಗೆ ಹೋಗಿ ಮತ್ತು Edit ಆಯ್ಕೆಯನ್ನು ಆರಿಸಿಕೊಳ್ಳಿ. |
04:17 | tag number 000, Leader ಗೆ ಹೋಗುತ್ತೇನೆ. |
04:24 | ನಂತರ Edit ಮೇಲೆ ಕ್ಲಿಕ್ ಮಾಡುತ್ತೇನೆ. |
04:27 | ಈ ಕೆಳಗಿನ ಫೀಲ್ಡ್ ಗಳನ್ನು, ಡೀಫಾಲ್ಟ್ ಆಗಿ, Koha ದಿಂದಲೇ ತುಂಬಲಾಗಿದೆ -
Label for lib: , Label for opac:. |
04:38 | ಗಮನಿಸಿ: 'Label for lib', staff client ನಲ್ಲಿ ಕಾಣಿಸಿಕೊಳ್ಳುವುದು.
'Label for OPAC', OPAC ನಲ್ಲಿ MARC view ನಲ್ಲಿ ಕಾಣಿಸಿಕೊಳ್ಳುವುದು. |
04:50 | ನಿಮ್ಮ ಅವಶ್ಯಕತೆಗೆ ಅನುಸಾರವಾಗಿ, Repeatable: ಗಾಗಿ, ಚೆಕ್-ಬಾಕ್ಸ್ ಅನ್ನು ಗುರುತು ಮಾಡಿ. |
04:56 | Koha, ಡೀಫಾಲ್ಟ್ ಆಗಿ, Mandatory ಗಾಗಿ ಚೆಕ್-ಬಾಕ್ಸ್ ಅನ್ನು ಗುರುತು ಮಾಡುವುದು. |
05:02 | ನಾನು Repeatable: ಗಾಗಿ, ಚೆಕ್-ಬಾಕ್ಸ್ ಅನ್ನು ಗುರುತು ಹಾಕುವೆನು. |
05:06 | ಗಮನಿಸಿ: Cataloging ನಲ್ಲಿ, ನೀವು Repeatable ಅನ್ನು ಕ್ಲಿಕ್ ಮಾಡಿದರೆ, ಫೀಲ್ಡ್, ಅದರ ಬದಿಯಲ್ಲಿ ಒಂದು ಅಧಿಕ ಚಿಹ್ನೆಯನ್ನು ಹೊಂದಿರುತ್ತದೆ. |
05:16 | ಇದು ಸಾಮಾನ್ಯವಾಗಿ 3 ಕ್ಕಿಂತಲೂ ಹೆಚ್ಚು ಲೇಖಕರು ಅಥವಾ ಸಂಪಾದಕರಿಗೆ ಅಗತ್ಯವಾಗಿದ್ದು, ಅದೇ ಟ್ಯಾಗ್ ನ ಹೆಚ್ಚಿನ ವಿವರಗಳನ್ನು ಸೇರಿಸಲು ನಿಮಗೆ ಅನುಮತಿಸುತ್ತದೆ. |
05:27 | 'Mandatory' ಯನ್ನು ಕ್ಲಿಕ್ ಮಾಡಿದರೆ ಅಥವಾ Koha ದಿಂದ ಸ್ವಯಂ-ಆಯ್ಕೆಯಾಗಿದ್ದರೆ, ಆಗ ಈ ರೆಕಾರ್ಡ್ ಅನ್ನು ಸೇವ್ ಮಾಡಲು ಅನುಮತಿ ಇರುವುದಿಲ್ಲ. ಸೇವ್ ಮಾಡಲು, ಈ ನಿರ್ದಿಷ್ಟ ಟ್ಯಾಗ್ ಗೆ ನೀವು ಒಂದು ವ್ಯಾಲ್ಯೂವನ್ನು ನಿಗದಿಪಡಿಸಬೇಕು. |
05:43 | ನಾವು Koha interface ಗೆ ಹಿಂದಿರುಗೋಣ. |
05:46 | ಎಲ್ಲಾ ವಿವರಗಳನ್ನು ತುಂಬಿದ ನಂತರ, Save changes ಮೇಲೆ ಕ್ಲಿಕ್ ಮಾಡಿ. |
05:52 | ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, tag number 000, Leader: ಗಾಗಿ, Repeatable ಮತ್ತು Mandatory ಇವು Yes ಎಂದು ಕಾಣುತ್ತಿರುವುದನ್ನು ಗಮನಿಸಿ. |
06:05 | ನಂತರ, ನಾವು Authority file ಅನ್ನು ಹೇಗೆ ಸಕ್ರಿಯಗೊಳಿಸಬೇಕು ಎಂದು ಕಲಿಯೋಣ. |
06:10 | Koha Administration ಗೆ ಹೋಗಿ. |
06:13 | ಮತ್ತು Global system preferences ಮೇಲೆ ಕ್ಲಿಕ್ ಮಾಡಿ. |
06:18 | Acquisitions preferences ಎಂಬ ಪೇಜ್ ತೆರೆದುಕೊಳ್ಳುತ್ತದೆ. |
06:23 | ಎಡಭಾಗದಲ್ಲಿರುವ ಟ್ಯಾಬ್ ಗಳ ಲಿಸ್ಟ್ ನಿಂದ, Authorities ಮೇಲೆ ಕ್ಲಿಕ್ ಮಾಡಿ. |
06:30 | General ಎಂಬ ವಿಭಾಗದ ಅಡಿಯಲ್ಲಿ, ಕೆಳಗೆ ಹೇಳಿದಂತೆ Value of Preference ಅನ್ನು ಬದಲಾಯಿಸಲು ಆರಂಭಿಸಿ: |
06:37 | AuthDisplayHierarchy ಗಾಗಿ, ಡ್ರಾಪ್-ಡೌನ್ ನಿಂದ Display ಅನ್ನು ಆಯ್ಕೆಮಾಡಿ. |
06:44 | AutoCreateAuthorities ಗಾಗಿ, generate ಅನ್ನು ಆಯ್ಕೆಮಾಡಿ. |
06:50 | BiblioAddsAuthorities ಗಾಗಿ, allow ಅನ್ನು ಆಯ್ಕೆಮಾಡಿ.
dontmerge ಗಾಗಿ, Do ಅನ್ನು ಆಯ್ಕೆಮಾಡಿ. |
07:01 | MARCAuthorityControlField008 ಮತ್ತು UNIMARCAuthorityField100 ಗಳನ್ನು ಇದ್ದ ಹಾಗೇ ಇಡಿ. |
07:11 | ಡೀಫಾಲ್ಟ್ ಆಗಿ, UseAuthoritiesForTracings ಗಾಗಿ, ಕೋಹಾ Use ಅನ್ನು ಆಯ್ಕೆಮಾಡುತ್ತದೆ. |
07:19 | Linker ಎಂಬ ವಿಭಾಗದ ಅಡಿಯಲ್ಲಿ, CatalogModuleRelink ಗಾಗಿ, ಡೀಫಾಲ್ಟ್ ವ್ಯಾಲ್ಯೂಗಳನ್ನು ಉಳಿಸಿಕೊಳ್ಳಬೇಕು. |
07:28 | LinkerKeepStale, LinkerModule, |
07:33 | LinkerOptions ಮತ್ತು LinkerRelink. |
07:38 | ಈಗ, Save all Authorities preferences ಮೇಲೆ ಕ್ಲಿಕ್ ಮಾಡಿ. |
07:43 | ನೀವು ಈಗ Koha ದ Superlibrarian account ನಿಂದ ಲಾಗ್-ಔಟ್ ಮಾಡಬಹುದು. |
07:48 | ಇದನ್ನು ಮಾಡಲು, ಮೇಲಿನ ಬಲಮೂಲೆಗೆ ಹೋಗಿ. |
07:52 | Spoken Tutorial Library ಮೇಲೆ ಕ್ಲಿಕ್ ಮಾಡಿ. ಮತ್ತು ಡ್ರಾಪ್-ಡೌನ್ ನಿಂದ Log out ಅನ್ನು ಆಯ್ಕೆಮಾಡಿ. |
07:59 | ಇದು MARC Framework ಗಾಗಿ ಅಗತ್ಯವಿರುವ ಎಲ್ಲಾ ಸೆಟ್-ಅಪ್ ಗಳನ್ನು ಪೂರ್ಣಗೊಳಿಸುತ್ತದೆ. |
08:04 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು, ಕೋಹಾ ದಲ್ಲಿ MARC Framework ಅನ್ನು ಕ್ರಿಯೇಟ್ ಮಾಡಲು ಕಲಿತಿದ್ದೇವೆ. |
08:13 | ಅಸೈನ್ಮೆಂಟ್ ಗಾಗಿ – Serials ಗಾಗಿ ಒಂದು ಹೊಸ MARC Framework ಅನ್ನು ಕ್ರಿಯೇಟ್ ಮಾಡಿ. |
08:20 | ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ. |
08:28 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
08:38 | ದಯವಿಟ್ಟು ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡುಗಳೊಂದಿಗೆ ಈ ಫೋರಂ ನಲ್ಲಿ ಪೋಸ್ಟ್ ಮಾಡಿ. |
08:42 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ. ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ. |
08:54 | ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.
ಧನ್ಯವಾದಗಳು. |