Difference between revisions of "Xfig/C2/Feedback-diagram-with-Maths/Kannada"

From Script | Spoken-Tutorial
Jump to: navigation, search
 
(2 intermediate revisions by the same user not shown)
Line 152: Line 152:
 
|-
 
|-
 
|05:26
 
|05:26
|'''includegraphics''' ಮತ್ತು '''color''' ಪ್ಯಾಕೆಜ್ ಗಳನ್ನು ಸಹ ಇದು ಬಳಸುತ್ತದೆ. ಈ ಅಗತ್ಯವನ್ನು ಗಮನದಲ್ಲಿಡಲು ನಾವು LaTeX ಗೆ ಹೇಳಬೇಕಾಗುತ್ತದೆ.
+
|'''includegraphics''' ಮತ್ತು '''color''' ಪ್ಯಾಕೇಜ್ ಗಳನ್ನು ಸಹ ಇದು ಬಳಸುತ್ತದೆ. ಈ ಅಗತ್ಯವನ್ನು ಗಮನದಲ್ಲಿಡಲು ನಾವು LaTeX ಗೆ ಹೇಳಬೇಕಾಗುತ್ತದೆ.
 
|-
 
|-
 
|05:41
 
|05:41
Line 206: Line 206:
 
|-
 
|-
 
|08:04
 
|08:04
|ನಾನು ಟೆಕ್ಸ್ಟ್ ಅನ್ನು ಎಡಿಟ್ ಮಾಡುತ್ತೇನೆ.  '''Special Flag''' ಅನ್ನು '''Normal''' ಗೆ ಬದಲಾಯಿಸುತ್ತೆನೆ. ಆಯಿತು.
+
|ನಾನು ಟೆಕ್ಸ್ಟ್ ಅನ್ನು ಎಡಿಟ್ ಮಾಡುತ್ತೇನೆ.  '''Special Flag''' ಅನ್ನು '''Normal''' ಗೆ ಬದಲಾಯಿಸುತ್ತೇನೆ. ಆಯಿತು.
 
|-
 
|-
 
|08:25
 
|08:25
Line 212: Line 212:
 
|-.
 
|-.
 
|08:37
 
|08:37
|ಕಂಪೈಲ್ ಮಾಡುತ್ತೇನೆ. ನಾನಿಲ್ಲಿಗೆ ಬರುತ್ತೆನೆ.
+
|ಕಂಪೈಲ್ ಮಾಡುತ್ತೇನೆ. ನಾನಿಲ್ಲಿಗೆ ಬರುತ್ತೇನೆ.
 
|-
 
|-
 
|08:41
 
|08:41

Latest revision as of 20:01, 1 February 2019

Time Narration
00:00 Xfig ನಲ್ಲಿ ಗಣಿತವನ್ನು ಸೇರಿಸುವ (ಎಂಬೆಡಿಂಗ್ ಮಾಡುವ) ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ, ನಾನು ಈ ಆಕೃತಿಯನ್ನು ಹೇಗೆ ರಚಿಸಬೇಕೆಂದು ವಿವರಿಸುವೆನು.
00:11 ಎರಡನೆಯ ಬ್ಲಾಕ್ ನಲ್ಲಿರುವ ಗಣಿತದ ಎಕ್ಸ್ಪ್ರೆಷನ್ ಅನ್ನು (expression) ಗಮನಿಸಿ.
00:16 ಈ ಟ್ಯುಟೋರಿಯಲ್ ಅನ್ನು ಕಲಿತ ನಂತರ, ನೀವು ಯಾವುದೇ ಗಣಿತದ ಎಕ್ಸ್ಪ್ರೆಷನ್ ನ್ನು ಒಳಸೇರಿಸಬಹುದು (ಎಂಬೆಡ್).
00:23 ನಾವು, ಈ ಆಕೃತಿಯಿಂದ ಆರಂಭಿಸಿ, ಹಿಂದಿನ ಸ್ಲೈಡ್ ನಲ್ಲಿಯ ಆಕೃತಿಯನ್ನು ರಚಿಸುವೆವು. ಇದನ್ನು “Feedback Diagrams through Xfig” ಎಂಬ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ರಚಿಸಲಾಗಿತ್ತು.
00:36 ಸಧ್ಯದ ಟ್ಯುಟೋರಿಯಲ್ ಅನ್ನು ಆರಂಭಿಸುವ ಮೊದಲು, ನೀವು ಈ ಟ್ಯುಟೋರಿಯಲ್ ಅನ್ನು ಕಲಿಯಬೇಕು.
00:42 ಈ ಕೋರ್ಸ್ ನಲ್ಲಿ ಕಲಿಸಿರುವ ವಿಷಯವನ್ನು ತಿಳಿದುಕೊಳ್ಳಲು, ನಿಮಗೆ ಏನೇನು ಅಗತ್ಯವಿದೆ ಎನ್ನುವುದನ್ನು ನಾನೀಗ ವಿವರಿಸುತ್ತೇನೆ.
00:48 ಇಲ್ಲಿ ನಾನು 'Xfig' ಆವೃತ್ತಿಯ 3.2, patch level 5 ಅನ್ನು ಬಳಸುತ್ತಿದ್ದೇನೆ.
00:52 ನಿಮಗೆ LaTeX ನ ಅಗತ್ಯವಿದೆ. ಅದರ ಪರಿಚಯವನ್ನು ಸಹ ಹೊಂದಿರಬೇಕು.
00:56 ನಿಮಗೆ image cropping software ಕೂಡ ಅಗತ್ಯವಿದೆ.
01:01 pdfcrop, Linux ಮತ್ತು Mac OS X ಗಳಲ್ಲಿ ಕೆಲಸ ಮಾಡುತ್ತದೆ. ಈ ಟ್ಯುಟೋರಿಯಲ್ ನಲ್ಲಿ ನಾವಿದನ್ನು ವಿವರಿಸಲಿದ್ದೇವೆ.
01:09 Briss, Windows ನಲ್ಲೂ ಕೆಲಸ ಮಾಡುತ್ತದೆ, ಆದರೆ ಇದನ್ನು ಈ ಟ್ಯುಟೊರಿಯಲ್ ನಲ್ಲಿ ವಿವರಿಸಿಲ್ಲ.
01:15 Xfig ಗೆ ಹೋಗೋಣ.
01:19 File ಅನ್ನು, ನಂತರ Open ಅನ್ನು ಆಯ್ಕೆ ಮಾಡೋಣ .
01:26 ನಾವು ಲಿಸ್ಟ್ ನಲ್ಲಿ ಸ್ಕ್ರೋಲ್ ಮಾಡಿದರೆ, “feedback.fig” ಫೈಲ್ ಅನ್ನು ನೋಡುವೆವು. ಇದನ್ನು “Feedback Diagrams through Xfig” ಎಂಬ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಕ್ರಿಯೇಟ್ ಮಾಡಲಾಗಿತ್ತು. ಇದನ್ನು ಕ್ಲಿಕ್ ಮಾಡೋಣ.
01:42 ಈ ಬಾಕ್ಸ್ ನ ಒಳಗೆ ನಾವು ಆಕೃತಿಯನ್ನು ನೋಡುವೆವು.
01:45 ಇದನ್ನು ಓಪನ್ ಮಾಡೋಣ.
01:53 ಇದನ್ನು ಒಳಗೆ ತರೋಣ.
02:01 ಇದನ್ನು ಝೂಮ್ ಕೂಡ ಮಾಡೋಣ.
02:05 “File” ನಲ್ಲಿಯ Save as ಆಯ್ಕೆಯನ್ನು ಬಳಸಿ, ಈ ಆಕೃತಿಯನ್ನು maths ಎಂದು ಸೇವ್ ಮಾಡುವೆವು.
02:20 ಇದನ್ನು save ಮಾಡೋಣ.
02:24 ನಮ್ಮ ಬಳಿ ಈಗ "maths.fig" ಎನ್ನುವ ಫೈಲ್ ಇದೆ.
02:27 ನಾವು “Edit” ಅನ್ನು ಆಯ್ಕೆಮಾಡಿ, “Plant” ಟೆಕ್ಸ್ಟ್ ಅನ್ನು ಕ್ಲಿಕ್ ಮಾಡೋಣ.
02:34 ಮೌಸ್ ಅನ್ನು ಇಲ್ಲಿಗೆ ತರುತ್ತೇನೆ. ಇದನ್ನು ಡಿಲೀಟ್ ಮಾಡಿ $G(z) = \frac z{z-1}$ ಅನ್ನು ನಮೂದಿಸುತ್ತೇನೆ.
02:50 ಟೈಪ್ ಮಾಡುವಾಗ, ಮೌಸ್, ಬಾಕ್ಸ್ ನ ಒಳಗಡೆ ಇರುವುದನ್ನು ಖಚಿತಪಡಿಸಿಕೊಳ್ಳಿ.
02:56 “Flag” ನ ಡಿಫಾಲ್ಟ್ ವ್ಯಾಲ್ಯು, “Normal” ಆಗಿರುತ್ತದೆ – ಅದನ್ನು “Special” ಗೆ ಬದಲಾಯಿಸಿ.
03:01 “Done” ಅನ್ನು ಕ್ಲಿಕ್ ಮಾಡಿ.
03:07 ಟೆಕ್ಸ್ಟ್ ಉದ್ದವಿರುವುದರಿಂದ, ಇದು ಇತರ ನಮೂದುಗಳನ್ನು ಅತಿಕ್ರಮಿಸುತ್ತದೆ.
03:12 ಟೆಕ್ಸ್ಟ್ ನ್ನು ಬಾಕ್ಸ್ ನ ಹೊರಗೆ ತಂದು ಅದರೊಂದಿಗೆ ಕೆಲಸ ಮಾಡೋಣ.
03:23 ನಾನಿಲ್ಲಿ ಕ್ಲಿಕ್ ಮಾಡುತ್ತೇನೆ .
03:26 Grid Mode ನ್ನು ಆಯ್ಕೆ ಮಾಡುತ್ತೇನೆ.
03:31 ಇಲ್ಲಿ ನಮಗೆ ಬೇಕಾಗಿದ್ದ ಬದಲಾವಣೆಗಳು ನಮಗೆ ಸಿಕ್ಕಿದೆ ಎನಿಸಿದರೆ, ನಾವು ಪುನಃ ಇದನ್ನು ಬಾಕ್ಸ್ ನ ಒಳಗೆ ಸೇರಿಸಬಹುದು.
03:39 ಈ ಫೈಲ್ ನ್ನು ಸೇವ್ ಮಾಡೋಣ.
03:44 pdf ಮತ್ತು Latex ಫೈಲ್ ಗಳನ್ನು ಒಟ್ಟಿಗೆ ಬಳಸಿ, ಎಕ್ಸ್ಪೋರ್ಟ್ (export) ಮಾಡೋಣ.
03:51 File > Export > Combined pdf/LaTeX. Export ಮಾಡೋಣ.
04:03 ನನಗೆ ಇಲ್ಲಿ ಒಂದು ಎರರ್ ಮೆಸೇಜ್ ಸಿಗುತ್ತದೆ. ಆದರೆ, ನಮಗೆ ಇದರ ಬಗ್ಗೆ ಚಿಂತೆ ಬೇಡ.
04:11 ನಾನು ಟರ್ಮಿನಲ್ ಗೆ ಹೋಗುತ್ತೇನೆ.
04:13 ls -lrt (ಎಲ್ ಎಸ್ ಮೈನಸ್ ಎಲ್ ಆರ್ ಟಿ) ಎಂದು ಟೈಪ್ ಮಾಡುತ್ತೇನೆ .
04:21 ನಮಗೆ ಫೈಲ್ ಗಳ ಪಟ್ಟಿಯೊಂದು ಸಿಗುತ್ತದೆ. ಇವುಗಳಲ್ಲಿ ಕೊನೆಯದು, ಇತ್ತೀಚಿನ ಫೈಲ್ ಆಗಿದೆ.
04:26 maths.pdf_t ಮತ್ತು maths.pdf ಕೊನೆಯ ಎರಡು ಫೈಲ್ ಗಳಾಗಿವೆ .
04:33 open maths.pdf ಎಂಬ ಕಮಾಂಡ್ ಅನ್ನು ಕೊಡೋಣ.
04:42 ಇದನ್ನು ಒಳಗೆ ತರೋಣ.
04:45 ಗಣಿತದ ಎಕ್ಸ್ಪ್ರೆಷನ್ ಗಳಿಲ್ಲದ, ಬ್ಲಾಕ್ ಡೈಗ್ರಾಮ್ ಅನ್ನು ನಾವು ನೋಡಬಹುದು.
04:50 ನಾನಿದನ್ನು ಕ್ಲೊಸ್ ಮಾಡುತ್ತೇನೆ.
04:52 ಈಗಾಗಲೆ ನಾನು ಒಪನ್ ಮಾಡಿರುವ emacs ಎಡಿಟರ್ ನಲ್ಲಿ, maths.pdf_t ಅನ್ನು ನಾವು ನೊಡೋಣ.
05:01 ಇದು ಇಲ್ಲಿದೆ. ಇದನ್ನು ಓಪನ್ ಮಾಡುತ್ತೇನೆ.
05:14 ದಯವಿಟ್ಟು ಗಮನಿಸಿ, ನೀವು emacs ಅನ್ನೇ ಬಳಸಬೇಕು ಎಂದೇನಿಲ್ಲ,
05:17 ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು.
05:22 “picture” ಎನ್ವೈರ್ನಮೆಂಟ್ ಬಳಸಿದ್ದನ್ನು ನೀವು ನೋಡಬಹುದು.
05:26 includegraphics ಮತ್ತು color ಪ್ಯಾಕೇಜ್ ಗಳನ್ನು ಸಹ ಇದು ಬಳಸುತ್ತದೆ. ಈ ಅಗತ್ಯವನ್ನು ಗಮನದಲ್ಲಿಡಲು ನಾವು LaTeX ಗೆ ಹೇಳಬೇಕಾಗುತ್ತದೆ.
05:41 ಈ ಟ್ಯುಟೋರಿಯಲ್ ಗಾಗಿ, ನಾನು ಈಗಾಗಲೇ ರಚಿಸಿದ maths-bp.tex ಎನ್ನುವ ಫೈಲ್ ನ್ನು ನಾನೀಗ ತೆರೆಯುತ್ತೇನೆ.
05:59 ನಾನು “article” ಎಂಬ class ಅನ್ನು ಬಳಸಿದ್ದೇನೆ.
06:02 ನಾನು color ಮತ್ತು graphicx ಎಂಬ ಪ್ಯಾಕೆಜ್ ಗಳನ್ನು ಬಳಸಿದ್ದೇನೆ. ಏಕೆಂದರೆ, ನಾವು ಈ ಮೊದಲು ನೋಡಿದ pdf_t ಫೈಲ್ ನಲ್ಲಿ ಇವುಗಳನ್ನು ಬಳಸಲಾಗಿದೆ.
06:15 ನನಗೆ ಪುಟಸಂಖ್ಯೆಯ ಅಗತ್ಯವಿಲ್ಲ. ಆದ್ದರಿಂದ ನನಗೆ pagestyle ಅನ್ನು ಖಾಲಿ ಇಡಬೇಕು.
06:20 ಕೊನೆಯದಾಗಿ, ನನಗೆ maths.pdf_t ಫೈಲ್ ಅನ್ನು ಸೇರಿಸಬೇಕಾಗಿದೆ.
06:27 ನಾವೀಗ ಟರ್ಮಿನಲ್ ನಲ್ಲಿ, pdflatex maths-bp ಎಂದು ಕಮಾಂಡ್ ಅನ್ನು ಟೈಪ್ ಮಾಡೋಣ.
06:42 maths-bp.pdf ಅನ್ನು ಕ್ರಿಯೇಟ್ ಮಾಡಲಾಗಿದೆ ಎಂಬ ಸಂದೇಶವನ್ನು ನಾವು ಪಡೆಯುತ್ತೇವೆ.
06:48 ಇದನ್ನು ನಾವು open maths-bp.pdf ಎಂಬ ಕಮಾಂಡ್ ನಿಂದ ಓಪನ್ ಮಾಡೋಣ.
06:58 ನಮಗೆ ಬೇಕಾದ ಫೈಲ್ ನಮ್ಮಲ್ಲಿ ಇದೆ. ಇದನ್ನು ನಾನು ಝೂಮ್ ಮಾಡುತ್ತೇನೆ.
07:07 ನಮಗೆ ಗಣಿತದ ಎಕ್ಸ್ಪ್ರೆಷನ್, ಕೆಲಸ ಮಾಡುತ್ತಿದೆ ಎಂದು ಗೊತ್ತಾಗಿದೆ. ಈಗ ಟೆಕ್ಸ್ಟ್ ನ್ನು ಬಾಕ್ಸ್ ನ ಒಳಗೆ ಸೇರಿಸೋಣ.
07:30 ಇದನ್ನು ಸೇವ್ ಮಾಡಿ ಎಕ್ಸ್ಪೋರ್ಟ್ ಮಾಡೋಣ. ಇದು ಈಗಾಗಲೆ ಬೇಕಾಗಿರುವ ಭಾಷೆಯಲ್ಲಿದೆ. Export.
07:38 ಈ ಎಚ್ಚರಿಕೆಯನ್ನು (warning) ನಿರ್ಲಕ್ಷಿಸೋಣ.
07:41 ನಾನು ಪುನಃ ಇದನ್ನು ಕಂಪೈಲ್ ಮಾಡುತ್ತೇನೆ.
07:44 ಫೈಲ್ ಅನ್ನು ಹೊಂದಿರುವ pdf ಬ್ರೌಸರ್ ಅನ್ನು ಕ್ಲಿಕ್ ಮಾಡೋಣ.
07:49 ಈಗ, ನಮಗೆ ಬೇಕಾದ ಹಾಗೇ ಬಾಕ್ಸ್ ನ ಒಳಗೆ, ಗಣಿತದ ಎಕ್ಸ್ಪ್ರೆಷನ್ ಅನ್ನು ನೀವು ನೋಡುತ್ತೀರಿ.
07:56 ಒಂದು ವೇಳೆ ನಾವು Special ಫ್ಲ್ಯಾಗ್ ನ್ನು ಆಯ್ಕೆ ಮಾಡದಿದ್ದರೆ ಏನಾಗುವುದೆಂದು ನಾವು ಈಗ ನೋಡೋಣ.
08:01 ನಾನಿಲ್ಲಿಗೆ ಬರುತ್ತೇನೆ.
08:04 ನಾನು ಟೆಕ್ಸ್ಟ್ ಅನ್ನು ಎಡಿಟ್ ಮಾಡುತ್ತೇನೆ. Special Flag ಅನ್ನು Normal ಗೆ ಬದಲಾಯಿಸುತ್ತೇನೆ. ಆಯಿತು.
08:25 File > Save. ನಾನು ಎಕ್ಸ್ಪೋರ್ಟ್ ಮಾಡುತ್ತೇನೆ.
08:37 ಕಂಪೈಲ್ ಮಾಡುತ್ತೇನೆ. ನಾನಿಲ್ಲಿಗೆ ಬರುತ್ತೇನೆ.
08:41 ಈಗ ಸೂತ್ರವು ನಮಗೆ ಬೇಕಾದ ರೂಪದಲ್ಲಿ ಇಲ್ಲ.
08:46 ನಾವು “Special Flag” ನ್ನು ಮತ್ತೆ “Special” ಎಂದು ಬದಲಾಯಿಸೋಣ.
09:03 Save ಮಾಡಿ, ಹಾಗೂ Export ಮಾಡಿ.
09:12 ಮತ್ತೆ ಕಂಪೈಲ್ ಮಾಡಿ. ಫೈಲ್, ನಮಗೆ ಬೇಕಾದ ಹಾಗೆ ಇರುವುದನ್ನು ನೀವು ನೋಡುತ್ತೀರಿ.
09:18 ನಾವೀಗ ಈ ಸೂತ್ರದ ರೂಪವನ್ನು ಸುಧಾರಿಸೋಣ.
09:22 ಈ ಸಂದರ್ಭದಲ್ಲಿ, 'dfrac' ನ ಬಳಕೆಯು, ಭಿನ್ನರಾಶಿಯನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ.
09:28 ಆದ್ದರಿಂದ, 'frac' ನ್ನು 'dfrac' ಎಂದು ಬದಲಾಯಿಸೋಣ.
09:38 ನಾನಿಲ್ಲಿ ಕ್ಲಿಕ್ ಮಾಡುತ್ತೇನೆ. ಮೌಸ್ ಅನ್ನು ಬಾಕ್ಸ್ ಒಳಗೆ ಇರಿಸಿ.
09:43 ಇಲ್ಲಿ 'd' ಯನ್ನು ಟೈಪ್ ಮಾಡಿ. ಆಯಿತು. Save, Export ಮಾಡಿ.
09:52 ಮತ್ತೊಮ್ಮೆ pdflatex ಬಳಸಿ, ನಾವು ಕಂಪೈಲ್ ಮಾಡೋಣ.
10:03 ನಮಗೆ “Undefined control sequence” "\dfrac" ಎಂಬ ಎರರ್ ಮೆಸೇಜ್ ಸಿಗುತ್ತದೆ.
10:11 LaTeX (ಲೇಟೆಕ್) ಆಕ್ಷೇಪಿಸುತ್ತದೆ. ಏಕೆಂದರೆ, \dfrac ಕಮಾಂಡ್ ಅನ್ನು “Amsmath” ಪ್ಯಾಕೇಜ್ ನಲ್ಲಿ ಡಿಫೈನ್ ಮಾಡಲಾಗಿದೆ. ಆದರೆ ನಾವು ಅದನ್ನು ಸೇರಿಸಿಕೊಂಡಿಲ್ಲ.
10:21 ನಾವು ಇದನ್ನು maths-bp.tex' ಫೈಲ್ ನಲ್ಲಿ ಸೇರಿಸುವುದು ಅಗತ್ಯವಾಗಿದೆ.
10:27 ಇದನ್ನು ಮಾಡೋಣ. emacs ಗೆ (ಇಮ್ಯಾಕ್ಸ್) ಹೋಗೋಣ.
10:35 “\usepackage{amsmath}” (ಯೂಸ್-ಪ್ಯಾಕೇಜ್-a m s-ಮ್ಯಾಥ್) ಎಂದು ನಮೂದಿಸಿ.
10:41 ಫೈಲ್ ನ್ನು ಸೇವ್ ಮಾಡೋಣ. ಮತ್ತೊಮ್ಮೆ ಕಂಪೈಲ್ ಮಾಡೋಣ. ಮೊದಲು ನಾನು ಹೊರಬರುತ್ತೇನೆ.
10:49 ನಾನೀಗ ಮತ್ತೆ ಕಂಪೈಲ್ ಮಾಡುತ್ತೇನೆ. ಅದು ಈಗ ಕಂಪೈಲ್ ಆಗುತ್ತದೆ. ಇದನ್ನು ಕ್ಲಿಕ್ ಮಾಡೋಣ.
10:59 ಈಗ ಭಿನ್ನರಾಶಿಯು ಚೆನ್ನಾಗಿ ಕಾಣುತ್ತಿರುವುದನ್ನುನಾವು ನೋಡುತ್ತೇವೆ.
11:03 Xfig ನಲ್ಲಿ ಗಣಿತದ ಎಕ್ಸ್ಪ್ರೆಷನ್ ಗಳನ್ನು ಹೇಗೆ ಒಳಸೇರಿಸಬಹುದು ಎಂದು ಕಲಿಯುವ ನಮ್ಮ ಉದ್ದೇಶವನ್ನು ನಾವೀಗ ಸಾಧಿಸಿದ್ದೇವೆ.
11:11 LaTeX ನ ಕಮಾಂಡ್ ಗಳನ್ನು, Xfig ಅರ್ಥಮಾಡಿಕೊಳ್ಳುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ.
11:16 pdflatex” ಕಮಾಂಡ್ ನಿಂದ ಇದನ್ನು ಅರ್ಥಮಾಡಿಕೊಳ್ಳಲಾಗಿದೆ.
11:20 ಕಂಪೈಲ್ ಮಾಡುವಾಗ, LaTeX ಕಮಾಂಡ್ ಗಳು ಸರಿಯಾಗಿ ಮತ್ತು ಒಂದೇತೆರನಾಗಿ ಇರಬೇಕು.
11:25 ಆಕೃತಿಯ ಸುತ್ತಲೂ ಇರುವ ಬಿಳಿಯ ಜಾಗವನ್ನು ಹೇಗೆ ತೆಗೆಯಬೇಕೆಂದು ಈಗ ನಾವು ವಿವರಿಸುವೆವು.
11:31 ನಾನು ಟರ್ಮಿನಲ್ ಗೆ ಹೋಗುತ್ತೇನೆ.
11:33 pdfcrop maths-bp.pdf” ಎಂಬ ಕಮಾಂಡ್ ಅನ್ನು ಟೈಪ್ ಮಾಡುತ್ತೇನೆ. ಇದು, “maths-out.pdf”ನಲ್ಲಿ ನಾವು ರಚಿಸಿದ ಫೈಲ್ ಆಗಿದೆ.
11:53 ಈ ಫೈಲ್ ನಲ್ಲಿ ಒಂದು ಪೇಜ್ ಅನ್ನು ಬರೆಯಲಾಗಿದೆ ಎಂದು Pdfcrop ಹೇಳುತ್ತದೆ.
11:57 pdfcrop”, ಒಂದು ಇನ್ಪುಟ್ ಫೈಲ್ ಅನ್ನು ತೆಗೆದುಕೊಂಡು, ಚಿತ್ರದ ಸುತ್ತಲೂ ಇರುವ ಅನವಶ್ಯಕ ಜಾಗವನ್ನು ತೆಗೆದುಹಾಕಿ, ಕ್ರಾಪ್ ಮಾಡಿದ ಫೈಲ್ ಅನ್ನು, ಔಟ್ಪುಟ್ ಫೈಲ್ ನಲ್ಲಿ ಬರೆಯುತ್ತದೆ.
12:09 ನನ್ನ ಸಿಸ್ಟ್ಂ ನಲ್ಲಿ ಈಗಾಗಲೇ “pdfcrop” ಇನ್ಸ್ಟಾಲ್ ಆಗಿದೆ.
12:12 ಇದು ನಿಮ್ಮಲ್ಲಿ ಇರದಿದ್ದರೆ, ಮೊದಲು ನೀವು ಇದನ್ನು ಇನ್ಸ್ಟಾಲ್ ಮಾಡಬೇಕಾಗುತ್ತದೆ.
12:15 “open maths-out.pdf” ಕಮಾಂಡ್ ಮೂಲಕ, ನಾವು ಈ ಔಟ್ಪುಟ್ ಫೈಲ್ ಅನ್ನು ನೋಡೋಣ.
12:29 ಇದನ್ನು ನಾನು ಒಳಗೆ ತರುತ್ತೇನೆ.
12:31 ಈಗ ಚಿತ್ರವು ಅತ್ಯಂತ ಒತ್ತೊತ್ತಾಗಿದೆ (compact).
12:34 ಇಲ್ಲಿದ್ದ ಬಿಳಿಯ ಜಾಗವನ್ನು ಸಂಪೂರ್ಣವಾಗಿ ತೆಗೆಯಲಾಗಿದೆ.
12:38 ನಾವೀಗ ಇದನ್ನು ಡಾಕ್ಯುಮೆಂಟ್ ಗಳಲ್ಲಿ ಸೇರಿಸಬಹುದು.
12:42 ನಾನು ಇದನ್ನು ಕ್ಲೋಸ್ ಮಾಡುತ್ತೇನೆ, ಇದನ್ನು ಹಾಗೂ ಇದನ್ನು ಕೂಡ ಕ್ಲೋಸ್ ಮಾಡುತ್ತೇನೆ.
12:52 ನಾನು ಮತ್ತೆ ಸ್ಲೈಡ್ ಗಳಿಗೆ ಮರಳುತ್ತಿದ್ದೇನೆ.
12:57 ಬಿಳಿಯ ಜಾಗವನ್ನು ಕ್ರಾಪ್ ಮಾಡಲು, “briss” ಎಂಬ ಸಾಫ್ಟ್ವೇರ್ ಅನ್ನು ಸಹ ಬಳಸಬಹುದು.
13:01 ಇದು, Linux, Mac OS X ಮತ್ತು Windows ನಲ್ಲಿ ಕೂಡ ಕಾರ್ಯ ನಿರ್ವಹಿಸುತ್ತದೆ.
13:08 ಇದು Mac OS X ನಲ್ಲಿ ಕೆಲಸ ಮಾಡುವುದನ್ನು ನಾನು ಪರೀಕ್ಷಿಸಿದ್ದೇನೆ. ಆದರೆ ಇಲ್ಲಿ ನಾವು ಅದನ್ನು ಮಾಡಿತೋರಿಸುತ್ತಿಲ್ಲ.
13:17 ನಾವು ಈ ಟ್ಯುಟೋರಿಯಲ್ ನ ಕೊನೆಯ ಭಾಗಕ್ಕೆ ಬಂದಿದ್ದೇವೆ.
13:20 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. ಈ ಟ್ಯುಟೋರಿಯಲ್ ನಲ್ಲಿ ರಚಿಸಲಾದ ಡೈಗ್ರಾಮ್ ಅನ್ನು, ಇನ್ನಷ್ಟು ಸಿಮೆಟ್ರಿಕ್ (ಸಮ್ಮಿತೀಯ) ಹಾಗೂ ಸುಂದರವಾಗಿ ಕಾಣುವಂತೆ ಮಾಡಿ.
13:27 ಗಣಿತದ ವಿವಿಧ ಎಕ್ಸ್ಪ್ರೆಷನ್ ಗಳನ್ನು ಪ್ರಯತ್ನಿಸಿ ನೋಡಿ.
13:30 ಈ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ವಿವರಿಸದೇ ಇರುವ flip (ಫ್ಲಿಪ್) ಮತ್ತು rotate (ರೊಟೇಟ್) ಗಳಂತಹ ಆಯ್ಕೆಗಳನ್ನು ಪ್ರಯತ್ನಿಸಿ.
13:36 ವಿವಿಧ ಡೈಗ್ರಾಮ್ ಗಳನ್ನು ರಚಿಸಲು ಪ್ರಯತ್ನಿಸಿ. library ಯ ಬಗ್ಗೆ ತಿಳಿದುಕೊಳ್ಳಿ.
13:41 Xfig ಗೆ ಸಂಬಂಧಿತ ಮಾಹಿತಿಯನ್ನು ಇಂಟರ್ನೆಟ್ ನಲ್ಲಿ ಹುಡುಕಿ.
13:47 ಕಲಿಯಲು ಉಪಯುಕ್ತವಾದ ವಿಷಯವು spoken-tutorial.org ನಲ್ಲಿ ಲಭ್ಯವಿದೆ. ಅದು ಇಲ್ಲಿದೆ.
14:02 ಸ್ಪೋಕನ್ ಟ್ಯುಟೋರಿಯಲ್ ಗಳ ಬಗೆಗಿನ ಪರಿಕಲ್ಪನೆಯನ್ನು "What is a Spoken Tutorial?" ನಲ್ಲಿ ವಿವರಿಸಲಾಗಿದೆ.
14:09 ಇಲ್ಲಿ ಲಭ್ಯವಿರುವ ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನೀವು LaTeX ಅನ್ನು ಕಲಿಯಬಹುದು. ಇವುಗಳನ್ನು, ಈ ಟ್ಯಾಬ್ ನಲ್ಲಿ ನಾನು ಡೌನ್ಲೋಡ್ ಮಾಡಿದ್ದೇನೆ.
14:19 ಗಣಿತವನ್ನು LaTeX ನಲ್ಲಿ ಹೇಗೆ ಮಾಡಬಹುದು ಎನ್ನುವುದನ್ನು Mathematical Typesetting ಬಗೆಗಿನ ಈ ಟ್ಯುಟೋರಿಯಲ್ ವಿವರಿಸುತ್ತದೆ.
14:29 ಈ ಟ್ಯುಟೋರಿಯಲ್ ನಲ್ಲಿ ರಚಿಸಿರುವಂತಹ ಆಕೃತಿಗಳನ್ನು, ಡಾಕ್ಯುಮೆಂಟ್ ಗಳಲ್ಲಿ ಹೇಗೆ ಸೇರಿಸುವುದೆಂದು, Tables and Figures ಬಗ್ಗೆ ಇರುವ ಟ್ಯುಟೋರಿಯಲ್ ವಿವರಿಸುತ್ತದೆ.
14:38 ಈ ವೆಬ್ಸೈಟ್, Xfig ಟ್ಯುಟೋರಿಯಲ್ ಗಳೊಂದಿಗೆ ಇನ್ನೂ ಸಾಕಷ್ಟುಮಾಹಿತಿಯನ್ನು ಹೊಂದಿದೆ. ಸ್ಲೈಡ್ ಗಳಿಗೆ ಹಿಂದಿರುಗಿ.
14:53 'ಸ್ಪೋಕನ್ ಟ್ಯುಟೋರಿಯಲ್', 'ಟಾಕ್ ಟು ಎ ಟೀಚರ್ ' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. ಇದು, ICT (NMEICT), MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
15:03 ಈ ಮಿಶನ್ ಬಗ್ಗೆ ಅಧಿಕ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ.

spoken-tutorial.org/NMEICT-Intro.

15:12 ನಾವು ನಿಮ್ಮ ಭಾಗವಹಿಸುವಿಕೆ ಮತ್ತು ಪ್ರತಿಕ್ರಿಯೆಯನ್ನು ಸ್ವಾಗತಿಸುತ್ತೇವೆ.
15:16 ಈ ಸ್ಕ್ರಿಪ್ಟ್ ನ ಅನುವಾದಕಿ ಸುಚೇತಾ ವಸುವಜ ಹಾಗೂ ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಭಾಗವಹಿಸಿದ್ದಕ್ಕೆ ಧನ್ಯವಾದಗಳು.

Contributors and Content Editors

Sandhya.np14