Difference between revisions of "Netbeans/C2/Adding-a-File-Chooser/Kannada"
From Script | Spoken-Tutorial
Sandhya.np14 (Talk | contribs) (Created page with "{| Border=1 | '''Time''' | '''Narration''' |- | 00:00 |ನಮಸ್ಕಾರ. |- | 00:01 | ಒಂದು ಜಾವಾ ಅಪ್ಲಿಕೇಶನ್ ಗೆ, ಫೈಲ್ ಚ...") |
Sandhya.np14 (Talk | contribs) |
||
Line 126: | Line 126: | ||
|- | |- | ||
| 02:32 | | 02:32 | ||
− | |'Palette' ನಲ್ಲಿ, 'Swing Menus'ಎಂಬ ವಿಭಾಗವನ್ನು ಓಪನ್ ಮಾಡಿ. | + | |'Palette' ನಲ್ಲಿ, 'Swing Menus' ಎಂಬ ವಿಭಾಗವನ್ನು ಓಪನ್ ಮಾಡಿ. |
|- | |- | ||
Line 210: | Line 210: | ||
|- | |- | ||
| 04:48 | | 04:48 | ||
− | | ಫಾರ್ಮ್ ನಲ್ಲಿಯ 'ಮೆನ್ಯೂ ಬಾರ್ 'ಗೆ, 'Open ' ಎಂಬ ಮೆನ್ಯೂ ಐಟಂ ನ ಕೆಳಗೆ | + | | ಫಾರ್ಮ್ ನಲ್ಲಿಯ 'ಮೆನ್ಯೂ ಬಾರ್ 'ಗೆ ಹೋಗಿ, 'Open ' ಎಂಬ ಮೆನ್ಯೂ ಐಟಂ ನ ಕೆಳಗೆ ಇದನ್ನು ಎಳೆಯಿರಿ. |
|- | |- | ||
| 04:53 | | 04:53 |
Latest revision as of 15:40, 2 October 2018
Time | Narration |
00:00 | ನಮಸ್ಕಾರ. |
00:01 | ಒಂದು ಜಾವಾ ಅಪ್ಲಿಕೇಶನ್ ಗೆ, ಫೈಲ್ ಚೂಜರ್ ಅನ್ನು ಸೇರಿಸುವ ಬಗ್ಗೆ ತಿಳಿಸುವ Adding a File Chooser ಎಂಬ ಈ ಟ್ಶುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಶುಟೋರಿಯಲ್ ನಲ್ಲಿ, ನಾವು: |
00:09 | ಅಪ್ಲಿಕೇಶನ್ ಮತ್ತು ಅಪ್ಲಿಕೇಶನ್ ಫಾರ್ಮ್ ಅನ್ನು ಕ್ರಿಯೇಟ್ ಮಾಡುವುದು, |
00:12 | 'File Chooser' (ಫೈಲ್ ಚೂಜರ್) ಅನ್ನು ಸೇರಿಸುವುದು, |
00:14 | ಫೈಲ್ ಚೂಜರ್ ಅನ್ನು ಕಾನ್ಫಿಗರ್ ಮಾಡುವುದು ಮತ್ತು |
00:17 | 'ಅಪ್ಲಿಕೇಶನ್' ಅನ್ನು 'ರನ್' ಮಾಡುವುದು ಇವುಗಳನ್ನು ಕಲಿಯುತ್ತೇವೆ. |
00:19 | ಇಲ್ಲಿ ವಿವರಿಸಲು, ನಾನು 'Linux ಆಪರೇಟಿಂಗ್ ಸಿಸ್ಟಂ, Ubuntu' ಆವೃತ್ತಿ 12.04 ಹಾಗೂ |
00:26 | 'Netbeans IDE', ಆವೃತ್ತಿ 7.1.1 ಇವುಗಳನ್ನು ಬಳಸುತ್ತೇನೆ. |
00:31 | ಈ ಟ್ಶುಟೋರಿಯಲ್ ನಲ್ಲಿ, ನಾವು 'javax.swing.JFileChooser' ಎಂಬ ಘಟಕವನ್ನು ಬಳಸಿ, 'File chooser' ಅನ್ನು 'ಜಾವಾ ಅಪ್ಲಿಕೇಶನ್ 'ಗೆ ಸೇರಿಸುವುದನ್ನು ಕಲಿಯುವೆವು. |
00:42 | ಇದರಲ್ಲಿ, ಒಂದು '.txt' ಫೈಲ್ ಅನ್ನು 'ಟೆಕ್ಟ್ಸ ಏರಿಯಾ' ದಲ್ಲಿ ಲೋಡ್ ಮಾಡುವ ಒಂದು ಚಿಕ್ಕ ' ಜಾವಾ ಅಪ್ಲಿಕೇಶನ್' ಅನ್ನು ಕ್ರಿಯೇಟ್ ಮಾಡಲು ನಾವು ಕಲಿಯುವೆವು. |
00:52 | ಮೊದಲು, ನಾವು ' ಜಾವಾ ಅಪ್ಲಿಕೇಶನ್ ' ಅನ್ನು ಕ್ರಿಯೇಟ್ ಮಾಡೋಣ. |
00:55 | 'IDE' ಅನ್ನು ಲಾಂಚ್ ಮಾಡಿ. |
00:57 | ಮೇನ್ ಮೆನ್ಯುವಿನಿಂದ 'File' > 'New Project' ಗಳನ್ನು ಆಯ್ಕೆಮಾಡಿ. |
01:03 | ನಂತರ, Categories ನಲ್ಲಿ 'Java' ಮತ್ತು Projects ನಲ್ಲಿ "Java Application" ಗಳನ್ನು ಆಯ್ಕೆ ಮಾಡಿ. |
01:08 | ಮತ್ತು 'Next ' ಅನ್ನು ಕ್ಲಿಕ್ ಮಾಡಿ. |
01:10 | 'Project Name' ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: 'JFileChooserDemo' |
01:20 | 'Create Main Class' ಎಂಬ ಚೆಕ್-ಬಾಕ್ಸ್ ಅನ್ನು ಖಾಲಿ ಮಾಡಿ. |
01:23 | ' Set as Main Project' ಎಂಬ ಚೆಕ್-ಬಾಕ್ಸ್, ಆಯ್ಕೆಯಾಗಿರುವುದನ್ನು ಖಚಿತಪಡಿಸಿಕೊಳ್ಳಿ. |
01:27 | 'Finish' ಮೇಲೆ ಕ್ಲಿಕ್ ಮಾಡಿ. |
01:31 | ಇಲ್ಲಿ ನಾವು 'JFrame' 'container' ಅನ್ನು ಕ್ರಿಯೇಟ್ ಮಾಡಿ, ಅದರಲ್ಲಿ ಕೆಲವು ಘಟಕಗಳನ್ನು ಸೇರಿಸುವೆವು. |
01:37 | 'Source Packages' ಎಂಬ ನೋಡ್ ನ ಮೇಲೆ ರೈಟ್-ಕ್ಲಿಕ್ ಮಾಡಿ. |
01:41 | 'New > other' ಅನ್ನು ಆಯ್ಕೆಮಾಡಿ. |
01:45 | Categories ನಲ್ಲಿ 'Swing GUI Forms' ಅನ್ನು ಮತ್ತು File type ನಲ್ಲಿ JFrameForm ಅನ್ನು ಆಯ್ಕೆಮಾಡಿ. |
01:51 | 'Next' ಅನ್ನು ಕ್ಲಿಕ್ ಮಾಡಿ. |
01:54 | 'Class Name'ಗಾಗಿ, ಹೀಗೆ ಟೈಪ್ ಮಾಡಿ: 'JFileChooserDemo' |
02:02 | ' Package' ಎಂಬ ಫೀಲ್ಡ್ ನಲ್ಲಿ, ಹೀಗೆ ಟೈಪ್ ಮಾಡಿ: 'jfilechooserdemo.resources'. |
02:12 | 'Finish' ಮೇಲೆ ಕ್ಲಿಕ್ ಮಾಡಿ. |
02:17 | 'Properties' ಎಂಬ ವಿಂಡೋದಲ್ಲಿ, ' Title ' ಎಂಬ ಪ್ರಾಪರ್ಟೀಯನ್ನು ಆರಿಸಿ. |
02:22 | ಮತ್ತು ' Demo Application ' ಎಂದು ಟೈಪ್ ಮಾಡಿ. |
02:30 | ಖಚಿತಪಡಿಸಲು 'Enter' ಅನ್ನು ಒತ್ತಿ. |
02:32 | 'Palette' ನಲ್ಲಿ, 'Swing Menus' ಎಂಬ ವಿಭಾಗವನ್ನು ಓಪನ್ ಮಾಡಿ. |
02:40 | Menu Bar ಎಂಬ ಕಾಂಪೊನೆಂಟ್ ಅನ್ನು ಆಯ್ಕೆ ಮಾಡಿ, ಅದನ್ನು'Jframe 'ನ ಮೇಲ್ತುದಿಯ ಎಡಮೂಲೆಗೆ ಎಳೆಯಿರಿ. |
02:50 | Menu Bar ಕಾಂಪೊನೆಂಟ್ ನ 'Edit' ಐಟಂ ಮೇಲೆ ರೈಟ್-ಕ್ಲಿಕ್ ಮಾಡಿ. |
02:55 | ಕಾಂಟೆಕ್ಸ್ಟ್ ಮೆನ್ಯೂದಲ್ಲಿ, 'Delete' ಅನ್ನು ಆಯ್ಕೆಮಾಡಿ. |
02:59 | ನಂತರ, ರನಿಂಗ್ ಅಪ್ಲಿಕೇಶನ್ ನಿಂದ 'FileChooser' ಅನ್ನು ಓಪನ್ ಮಾಡುವ, ಒಂದು ಮೆನ್ಯೂ ಐಟಂ ಅನ್ನು ನಾವು ಸೇರಿಸೋಣ. |
03:07 | ಇಲ್ಲಿ ಮತ್ತೊಂದು 'ಮೆನ್ಯೂಐಟಂ' ಅನ್ನು ಎಳೆದು ತರುವ ಮೊದಲು, 'ಮೆನ್ಯೂ ಬಾರ್' ಅನ್ನು ಆಯ್ಕೆಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. |
03:14 | 'Palette' ನಲ್ಲಿಯ 'Swing Menus' ವಿಭಾಗದಲ್ಲಿ, ಒಂದು ಹೊಸ Menu Item ಅನ್ನು (ಮೆನ್ಯೂಐಟಂ) ಆಯ್ಕೆಮಾಡಿ. |
03:22 | ಅದನ್ನು 'ಮೆನ್ಯೂ ಬಾರ್' ಗೆ ಎಳೆದುತಂದು, ಅಲ್ಲಿಯ 'File' ಐಟಂನ ಮೇಲೆ ಡ್ರಾಪ್ ಮಾಡಿ. |
03:30 | 'Design' ವ್ಹ್ಯೂ ನಲ್ಲಿ, ' jMenuItem1 ' ಮೇಲೆ ರೈಟ್-ಕ್ಲಿಕ್ ಮಾಡಿ |
03:35 | ಮತ್ತು ಕಾಂಟೆಕ್ಸ್ಟ್ ಮೆನ್ಯೂ ದಿಂದ, 'Change Variable Name' ಅನ್ನು ಆರಿಸಿಕೊಳ್ಳಿ. |
03:41 | ಐಟಂ ಅನ್ನು Open ಎಂದು ರಿ-ನೇಮ್ (Rename) ಮಾಡಿ ಮತ್ತು 'OK' ಮೇಲೆ ಕ್ಲಿಕ್ ಮಾಡಿ. |
03:48 | 'Design' ವ್ಹ್ಯೂ ನಲ್ಲಿ, 'JMenuItem1' ಇನ್ನೂ ಆಯ್ಕೆಯಾಗಿಯೇ ಇದೆ ಎಂದು ಖಚಿತಪಡಿಸಿಕೊಳ್ಳಿ. |
03:53 | ಕಾಂಪೊನೆಂಟ್ ನ ಟೆಕ್ಸ್ಟ್ ಅನ್ನು ಎಡಿಟ್ ಮಾಡಲು, 'ಸ್ಪೇಸ್ ಬಾರ್' ಅನ್ನು ಒತ್ತಿ. |
03:58 | ಟೆಕ್ಟ್ಸ ಅನ್ನು 'Open' ಎಂದು ಬದಲಿಸಿ ಮತ್ತು ಖಚಿತಪಡಿಸಿಕೊಳ್ಳಲು 'Enter' ಅನ್ನು ಒತ್ತಿ. |
04:04 | 'Open' ಮೆನ್ಯೂ ಐಟಂಗಾಗಿ, ಆಕ್ಷನ್ ಹ್ಯಾಂಡ್ಲರ್ ಅನ್ನು (action handler) ಸೂಚಿಸಿ. |
04:08 | 'Open' ಎಂಬ ಮೆನ್ಯೂ ಐಟಂಅನ್ನು ರೈಟ್-ಕ್ಲಿಕ್ ಮಾಡಿ ಮತ್ತು ಕಾಂಟೆಕ್ಸ್ಟ್ ಮೆನ್ಯೂವಿನಿಂದ ಕ್ರಮವಾಗಿ 'Events > Action > Action Performed' ಗಳನ್ನು ಆಯ್ಕೆಮಾಡಿ. |
04:20 | 'GUI ಬಿಲ್ಡರ್', Source ವ್ಹ್ಯೂ ಗೆ ತನ್ನಷ್ಟಕ್ಕೆ ತಾನೇ ಬದಲಾಯಿಸುತ್ತದೆ. |
04:25 | 'OpenActionPerformed ()' ಎಂಬ ಒಂದು ಹೊಸ 'ಇವೆಂಟ್ ಹ್ಯಾಂಡ್ಲರ್ ಮೆಥಡ್' ಅನ್ನು ರಚಿಸಲಾಗಿದೆ. |
04:31 | ನಾವು ಮತ್ತೆ 'Design' ವ್ಹ್ಯೂ ಗೆ ಹಿಂತಿರುಗೋಣ. |
04:35 | ನಾವು 'File Chooser' ನಿಂದ ಹೊರ ಬರಲು, ಒಂದು ಮೆನ್ಯೂ ಐಟಂ ಅನ್ನು ಸೇರಿಸೋಣ. |
04:39 | 'Palette' ನಲ್ಲಿ, 'Swing Menus' ಅನ್ನು ಆರಿಸಿಕೊಳ್ಳಿ. |
04:45 | 'Menu Item ಅನ್ನು ಆಯ್ಕೆ ಮಾಡಿ. |
04:48 | ಫಾರ್ಮ್ ನಲ್ಲಿಯ 'ಮೆನ್ಯೂ ಬಾರ್ 'ಗೆ ಹೋಗಿ, 'Open ' ಎಂಬ ಮೆನ್ಯೂ ಐಟಂ ನ ಕೆಳಗೆ ಇದನ್ನು ಎಳೆಯಿರಿ. |
04:53 | 'jmenuItem1' ಅನ್ನು ಎಲ್ಲಿ ಇಡಲಾಗುತ್ತದೆ ಎಂದು ಸೂಚಿಸುತ್ತಿರುವ ಆರೇಂಜ್ ಹೈಲೈಟ್ ಅನ್ನು ಗಮನಿಸಿ. |
05:03 | ' Design' ವ್ಹ್ಯೂ ನಲ್ಲಿ, 'jMenuItem1' ಅನ್ನು ರೈಟ್-ಕ್ಲಿಕ್ ಮಾಡಿ. |
05:07 | ಕಾಂಟೆಕ್ಸ್ಟ್ ಮೆನ್ಯೂ ನಿಂದ, 'Change Variable Name ' ಅನ್ನು ಆರಿಸಿಕೊಳ್ಳಿ. |
05:12 | ಐಟಂಅನ್ನು 'Exit' ಎಂದು ರಿ-ನೇಮ್ ಮಾಡಿ ಮತ್ತು 'OK' ಮೇಲೆ ಕ್ಲಿಕ್ ಮಾಡಿ. |
05:20 | 'Design' ವ್ಹ್ಯೂ ನಲ್ಲಿ, 'JMenuItem1' ಅನ್ನು ಆಯ್ಕೆಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ. |
05:25 | ಕಾಂಪೊನೆಂಟ್ ನ ಟೆಕ್ಸ್ಟ್ ಅನ್ನು ಎಡಿಟ್ ಮಾಡಲು, 'ಸ್ಪೇಸ್ ಬಾರ್' ಅನ್ನು ಒತ್ತಿ. |
05:30 | ಟೆಕ್ಸ್ಟ್ ಅನ್ನು 'Exit' ಎಂದು ಬದಲಿಸಿ ಮತ್ತು 'Enter' ಅನ್ನು ಒತ್ತಿ ಖಚಿತಪಡಿಸಿ. |
05:36 | 'Exit' ಮೆನ್ಯೂ ಐಟಂಗಾಗಿ, ' ಆಕ್ಷನ್ ಹ್ಯಾಂಡ್ಲರ್ ' (action handler) ಅನ್ನು ಸೂಚಿಸಿ. |
05:41 | 'Exit' ಮೆನ್ಯೂ ಐಟಂ ಅನ್ನು ರೈಟ್-ಕ್ಲಿಕ್ ಮಾಡಿ. |
05:44 | ಕಾಂಟೆಕ್ಸ್ಟ್ ಮೆನ್ಯೂ ದಲ್ಲಿ, ಕ್ರಮವಾಗಿ 'Events > Action > Action Performed' ಇವುಗಳನ್ನು ಆರಿಸಿಕೊಳ್ಳಿ. |
05:51 | 'GUI ಬಿಲ್ಡರ್', ತನ್ನಿಂದ ತಾನೆ source ವ್ಹ್ಯೂ ಗೆ ಬದಲಾಯಿಸುತ್ತದೆ. |
05:56 | 'ExitActionPerformed()' ಎಂಬ ಒಂದು ಹೊಸ 'ಇವೆಂಟ್ ಹ್ಯಾಂಡ್ಲರ್ ಮೆಥಡ್' ತಯಾರಾಗಿದೆ. |
06:02 | 'ನ್ಯಾವಿಗೇಟರ್' ವಿಂಡೋದಲ್ಲಿ, 'OpenActionPerformed()' ನೋಡ್ ನ ಮೇಲ್ಗಡೆ, ' ExitActionPerformed()' ನೋಡ್ ಕಾಣಿಸಿಕೊಳ್ಳುತ್ತದೆ. |
06:12 | ಒಂದುವೇಳೆ ನಿಮಗೆ ನಿಮ್ಮ 'ನ್ಯಾವಿಗೇಟರ್' ಕಾಣದೆ ಇದ್ದಲ್ಲಿ, |
06:14 | ಮೆನ್ಯೂ ಬಾರ್ ನಲ್ಲಿ, Window ಎಂಬ ಮೆನ್ಯೂ ಗೆ ಹೋಗಿ. |
06:18 | Navigatingಅನ್ನು ಆರಿಸಿ ಮತ್ತು Navigator ಮೇಲೆ ಕ್ಲಿಕ್ ಮಾಡಿ. |
06:25 | ಇಲ್ಲಿ, ನೀವು 'OpenActionPerformed' ನೋಡ್ ನ ಮೇಲ್ಗಡೆ, 'ExitActionPerformed' ನೋಡ್ ಇರುವುದನ್ನು ನೋಡಬಹುದು. |
06:33 | 'Exit' ಮೆನ್ಯೂ-ಐಟಂ ಅನ್ನು ಕಾರ್ಯಗತ ಮಾಡಲು, |
06:36 | 'System.exit(0);' ಎಂಬ ಸ್ಟೇ ಟ್ಮೆಂಟ್ ಅನ್ನು 'ExitActionPerformed()' ಎಂಬ ಮೆಥಡ್ ನ body ಒಳಗೆ ಸೇರಿಸೋಣ. |
06:47 | 'Design' ಮೋಡ್ ಗೆ ಹಿಂತಿರುಗಿ. |
06:50 | 'Palette'ದಲ್ಲಿಯ 'Swing Controls' ಎಂಬ ವರ್ಗದಿಂದ ಒಂದು Text Area ಅನ್ನು'ಫಾರ್ಮ್ ' ಗೆ ಎಳೆದುತನ್ನಿ. |
07:06 | ನಂತರ 'File Chooser' ನಿಂದ ಪ್ರದರ್ಶಿಸಲಾಗುವ ಟೆಕ್ಟ್ಸ ಗಾಗಿ ಸ್ಥಳವನ್ನು ಮಾಡಲು, ಸೇರಿಸಲಾದ ಕಾಂಪೊನೆಂಟ್ ಗಳನ್ನು' ರಿ-ಸೈಜ ' ಮಾಡಿ. |
07:18 | ವೈರಿಯೇಬಲ್ ಅನ್ನು, “textarea” (ಟೆಕ್ಟ್ಸ ಎರಿಯಾ) ಎಂದು ರಿ-ನೇಮ್ ಮಾಡಿ. |
07:26 | ಈಗ ನಿಜವಾದ 'File Chooser' ಅನ್ನು ಸೇರಿಸೋಣ. |
07:31 | ನಿಮ್ಮ Navigator ವಿಂಡೋ ತೆರೆದಿರದಿದ್ದರೆ, ಅದನ್ನು ತೆರೆಯಲು ನೀವು 'Window > Navigating > Navigator' ಇವುಗಳನ್ನು ಆಯ್ಕೆಮಾಡಿ. |
07:38 | ಮತ್ತು, Navigator ನಲ್ಲಿ, 'Jframe' ನೋಡ್ ಅನ್ನು ರೈಟ್-ಕ್ಲಿಕ್ ಮಾಡಿ. |
07:44 | ಕಾಂಟೆಕ್ಸ್ಟ್ ಮೆನ್ಯೂ ನಿಂದ, ಕ್ರಮವಾಗಿ Add From Palette > Swing Windows > File Chooser ಗಳನ್ನು ಆಯ್ಕೆಮಾಡಿರಿ. |
07:54 | 'ಫಾರ್ಮ್'ಗೆ ಒಂದು 'JFileChooser' ಅನ್ನು ಸೇರಿಸಿರುವುದನ್ನು Navigator ನಲ್ಲಿ ನೀವು ಗಮನಿಸಬಹುದು. |
08:01 | 'JFileChooser' ನೋಡ್ ಅನ್ನು ರೈಟ್-ಕ್ಲಿಕ್ ಮಾಡಿ ಮತ್ತು ವೇರಿಯೇಬಲ್ ಅನ್ನು 'fileChooser' ಎಂದು ರಿ-ನೇಮ್ ಮಾಡಿ. |
08:16 | 'OK' ಅನ್ನು ಕ್ಲಿಕ್ ಮಾಡಿ. |
08:19 | ಈಗ ನಾವು 'File Chooser' ಅನ್ನು ಸೇರಿಸಿದ್ದೇವೆ. |
08:21 | ಮುಂದಿನ ಹಂತದಲ್ಲಿ, ' File Chooser ' ಅನ್ನು ನಿಮಗೆ ಬೇಕಾದ ಟೈಟಲ್ ಅನ್ನು ಪ್ರದರ್ಶಿಸುವ ಹಾಗೆ ಕಾನ್ಫಿಗರ್ ಮಾಡಬೇಕು. |
08:27 | ನಾವು ಒಂದು 'custom file filter' ಅನ್ನು ಸಹ ಸೇರಿಸುವೆವು. ಮತ್ತು, 'File Chooser' ಅನ್ನು ನಿಮ್ಮ 'ಅಪ್ಲಿಕೇಶನ್ ' ನಲ್ಲಿ ಸಂಯೋಜಿಸುವೆವು (ಇಂಟಿಗ್ರೇಟ್ ಮಾಡುವೆವು). |
08:34 | Navigator ವಿಂಡೋ ದಲ್ಲಿ, 'JfileChooser' ಅನ್ನು ಆಯ್ಕೆಮಾಡಲು ಕ್ಲಿಕ್ ಮಾಡಿ. |
08:38 | ಈಗ ನಾವು ಅದರ ಪ್ರಾಪರ್ಟೀಗಳನ್ನು 'Properties' ಡೈಲಾಗ-ಬಾಕ್ಸ್ ನಲ್ಲಿ ಎಡಿಟ್ ಮಾಡೋಣ. |
08:43 | 'Palette'ನ ಕೆಳಗೆ, 'Properties' ವಿಂಡೋದಲ್ಲಿ, |
08:47 | dialogTitle ಅನ್ನು 'This is my open dialog' ಎಂದು ಬದಲಿಸಿ. |
09:00 | ಖಚಿತಪಡಿಸಲು, 'Enter' ಅನ್ನು ಒತ್ತಿ. |
09:03 | ಈಗ, 'Source' ಮೋಡ್ ಗೆ ಬದಲಾಯಿಸಿ. |
09:07 | ಈಗ, ' FileChooser' ಅನ್ನು ನಿಮ್ಮ ಅಪ್ಲಿಕೇಶನ್ ನಲ್ಲಿ ಇಂಟಿಗ್ರೇಟ್ ಮಾಡಲು (ಸಂಯೋಜಿಸಲು), |
09:12 | ನನ್ನ ಹತ್ತಿರ ಒಂದು 'code snippet' ಇದೆ. ಅದನ್ನು ನಾನು ಕಾಪಿ ಮಾಡಿ 'OpenActionPerformed()' ಮೆಥಡ್ ನಲ್ಲಿ, ಪೇಸ್ಟ್ ಮಾಡುವೆನು. |
09:20 | ಈ ಉದಾಹರಣೆಯು, ಫೈಲ್ ನಲ್ಲಿರುವುದನ್ನು ಓದುತ್ತದೆ ಮತ್ತು ಅದನ್ನು 'ಟೆಕ್ಟ್ಸ ಏರಿಯಾ' ದಲ್ಲಿ ಪ್ರದರ್ಶಿಸುತ್ತದೆ. |
09:27 | ಯೂಸರ್ ನು ಯಾವ ಫೈಲ್ ಅನ್ನು ಕ್ಲಿಕ್ ಮಾಡಿದ್ದಾನೆ ಎಂದು ನಿರ್ಧರಿಸಲು, 'FileChooser' ನ 'getSelectedFile()' ಎಂಬ ಮೆಥಡ್ ಅನ್ನು ನಾವು ಈಗ ಕಾಲ್ ಮಾಡುತ್ತೇವೆ. |
09:36 | ನಾನು ಈ ಕೋಡ್ ಅನ್ನು ನನ್ನ ಕ್ಲಿಪ್-ಬೋರ್ಡ್ ನಲ್ಲಿ ಕಾಪಿ ಮಾಡಿ IDEಯ 'Source' ವ್ಹ್ಯೂ ದಲ್ಲಿ, 'OpenActionPerformed()' ಮೆಥಡ್ ನ ಒಳಗೆ ಅದನ್ನು ಪೇಸ್ಟ್ ಮಾಡುತ್ತೇನೆ. |
09:51 | ಒಂದುವೇಳೆ, ಎಡಿಟರ್ ನಿಮ್ಮ ಕೋಡ್ ನಲ್ಲಿ ಎರರ್ ಅನ್ನು ತೋರಿಸಿದರೆ, ಕೋಡ್ ನಲ್ಲಿ ಎಲ್ಲಾದರೂ ರೈಟ್-ಕ್ಲಿಕ್ ಮಾಡಿ ಮತ್ತು 'Fix Imports' ಅನ್ನು ಆಯ್ಕೆಮಾಡಿ. |
10:00 | ಈಗ, ನಾವು ಒಂದು 'custom file filter' ಅನ್ನು ಸೇರಿಸೋಣ. ಇದು, 'ಫೈಲ್ ಚೂಸರ್' '.txt' ಫೈಲ್ ಗಳನ್ನು ಮಾತ್ರ ಪ್ರದರ್ಶಿಸುವ ಹಾಗೆ ಮಾಡುತ್ತದೆ. |
10:09 | 'Design' ಮೋಡ್ ಗೆ ಹೋಗಿ. Navigator ವಿಂಡೋ ದಲ್ಲಿ, 'fileChooser' ಅನ್ನು ಆಯ್ಕೆಮಾಡಿ. |
10:16 | 'Properties' ವಿಂಡೋದಲ್ಲಿ, 'fileFilter' ಪ್ರಾಪರ್ಟೀ ನಂತರ ಇರುವ 'ellipsis' ಬಟನ್ ಅನ್ನು ಕ್ಲಿಕ್ ಮಾಡಿ. |
10:25 | 'fileFilter' ಡೈಲಾಗ್- ಬಾಕ್ಸ್ ನಲ್ಲಿ, ಕಾಂಬೊ-ಬಾಕ್ಸ್ ನಿಂದ 'Custom Code' ಅನ್ನು ಆಯ್ಕೆಮಾಡಿ. |
10:31 | ಟೆಕ್ಸ್ಟ್ ಫೀಲ್ಡ್ ನಲ್ಲಿ, 'new MyCustomFilter()' ಎಂದು ಟೈಪ್ ಮಾಡಿ |
10:41 | ಮತ್ತು 'OK' ಯನ್ನು ಕ್ಲಿಕ್ ಮಾಡಿ. |
10:44 | ಕಸ್ಟಮ್ ಕೋಡ್ ಅನ್ನು ಕಾರ್ಯಗತ ಮಾಡಲು, ನಾವು 'MyCustomFilter ' ಕ್ಲಾಸ್ ಅನ್ನು ಬರೆಯುವೆವು. |
10:52 | ಈ ಇನ್ನರ್ ಅಥವಾ ಔಟರ್ ಕ್ಲಾಸ್, 'fileFilter' ಕ್ಲಾಸ್ ಅನ್ನು extend ಮಾಡುತ್ತದೆ. |
10:57 | ನಾನು ಈ 'ಕೋಡ್ ಸ್ನಿಪೆಟ್' ಅನ್ನು ಕಾಪಿ ಮಾಡಿ, ನಮ್ಮ 'class' ನ ಸೋರ್ಸ್ ನಲ್ಲಿ, 'import' ಸ್ಟೇಟ್ಮೆಂಟ್ ಗಳ ಕೆಳಗೆ ಅದನ್ನು ಪೇಸ್ಟ್ ಮಾಡುತ್ತೆನೆ. |
11:11 | ಈ ಇನ್ನರ್ ಅಥವಾ ಔಟರ್ ಕ್ಲಾಸ್, 'fileFilter' ಕ್ಲಾಸ್ ಅನ್ನು extend (ಎಕ್ಸ್ಟೆಂಡ್) ಮಾಡುವುದು. |
11:20 | Project ವಿಂಡೋ ದಲ್ಲಿ, 'JFileChooserDemo' ಪ್ರಾಜೆಕ್ಟ್ ನ ಮೇಲೆ ರೈಟ್-ಕ್ಲಿಕ್ ಮಾಡಿ. ಸ್ಯಾಂಪಲ್ ಪ್ರಾಜೆಕ್ಟ್ ಅನ್ನು ಆರಂಭಿಸಲು Run ಅನ್ನು ಆಯ್ಕೆಮಾಡಿ. |
11:31 | Run Project ಡೈಲಾಗ್- ಬಾಕ್ಸ್ ನಲ್ಲಿ, 'jfilechooserdemo.resources.JFileChooserDemo' ಎಂಬ ಮೇನ್ ಕಾಸ್ಲ್ ಅನ್ನು ಆಯ್ಕೆಮಾಡಿ. |
11:41 | 'OK' ಮೇಲೆ ಕ್ಲಿಕ್ ಮಾಡಿ. |
11:47 | ರನ್ ಆಗುತ್ತಿರುವ 'Demo Application' ನಲ್ಲಿ, ಕ್ರಿಯೆಗೆ ಚಾಲನೆಯನ್ನು ನೀಡಲು File ಮೆನ್ಯುನಲ್ಲಿ 'Open' ಅನ್ನು ಆರಿಸಿಕೊಳ್ಳಿ. |
11:55 | ಯಾವುದೇ ಒಂದು ಟೆಕ್ಸ್ಟ್- ಫೈಲ್ ನಲ್ಲಿ ಇರುವುದನ್ನು, ಟೆಕ್ಸ್ಟ್-ಏರಿಯಾದಲ್ಲಿ ತೋರಿಸಲು, ಆ ಫೈಲ್ ಅನ್ನು ಓಪನ್ ಮಾಡಿ. |
12:00 | ನಾನು 'Sample.txt' ಎಂಬ ಫೈಲ್ ಅನ್ನು ಆಯ್ಕೆ ಮಾಡಿ, Open ಅನ್ನು ಆರಿಸಿಕೊಳ್ಳುತ್ತೇನೆ. |
12:06 | 'fileChooser', ಟೆಕ್ಸ್ಟ್- ಫೈಲ್ ನಲ್ಲಿ ಇರುವುದನ್ನು ಡಿಸ್ಪ್ಲೇ ಮಾಡುತ್ತದೆ. |
12:10 | ಈ ಅಪ್ಲಿಕೇಶನ್ ಅನ್ನು ಕ್ಲೋಸ್ ಮಾಡಲು, File ಮೆನ್ಯುವಿನಿಂದ 'Exit' ಅನ್ನು ಆಯ್ಕೆಮಾಡಿ. |
12:17 | ಈ ಟ್ಯುಟೋರಿಯಲ್ ನಲ್ಲಿ, ನಾವು: |
12:19 | ಜಾವಾ ಅಪ್ಲಿಕೇಶನ್ ಗೆ, ಫೈಲ್ ಚೂಜರ್ ಅನ್ನು ಸೇರಿಸಲು ಮತ್ತು |
12:23 | ಫೈಲ್ ಚೂಜರ್ ಅನ್ನು ಕಾನ್ಫಿಗರ್ ಮಾಡಲು ಕಲಿತಿದ್ದೇವೆ. |
12:27 | ಅಸೈನ್ಮೆಂಟ್ ಗಾಗಿ- ನಾವು ರಚಿಸಿದ ಇದೇ 'demo project' ಅನ್ನು ಬಳಸಿ, ಈ ಕೆಳಗಿನ ವಿಶೇಷತೆಗಳನ್ನು ಸೇರಿಸಿ: |
12:35 | ಮೆನ್ಯುಬಾರ್ ನಲ್ಲಿ, 'Save' ಎಂಬ ಒಂದು ಮೆನ್ಯೂ ಐಟಂ ಅನ್ನು ಸೇರಿಸಿ. |
12:38 | ಎಲ್ಲ ಮೆನ್ಯೂ ಐಟಂ ಗಳಿಗಾಗಿ, ಕೀಬೋರ್ಡ್ ಶಾರ್ಟ್-ಕಟ್ ಗಳನ್ನು ಸೇರಿಸಿ. |
12:42 | ಪೈಲ್ ಅನ್ನು ಸೇವ್ ಮಾಡಲು, 'Save' ಕ್ರಿಯೆಗೆ, ಒಂದು ಕೋಡ್ ಸ್ನಿಪೆಟ್ (code snippet) ಸೇರಿಸಿ. |
12:51 | ನಾನು ಈಗಾಗಲೇ ಇದೇ ರೀತಿಯ ಅಸೈನ್ಮೆಂಟ್ ಅನ್ನು ಕ್ರಿಯೇಟ್ ಮಾಡಿದ್ದೇನೆ. ಇದರಲ್ಲಿ, 'ಫೈಲ್ ಚೂಜರ್', File ಮೆನ್ಯೂನಲ್ಲಿ Save ಎಂಬ ಆಯ್ಕೆಯನ್ನು ತೋರಿಸುತ್ತದೆ. |
13:01 | ಮತ್ತು, ನೀವು ಓಪನ್ ಮಾಡುವ ಟೆಕ್ಸ್ಟ್- ಫೈಲ್ ಅನ್ನು ಸೇವ್ ಮಾಡುವ ಆಯ್ಕೆಯನ್ನು ನಿಮಗೆ ಕೊಡುತ್ತದೆ. |
13:09 | ಈಗ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಬಗ್ಗೆ ಮಾಹಿತಿ: |
13:12 | ಸ್ಕ್ರೀನ್ ಮೇಲೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋಅನ್ನು ವೀಕ್ಷಿಸಿ. |
13:15 | ಇದು 'ಸ್ಪೋಕನ್ ಟ್ಯುಟೋರಿಯಲ್' ಪ್ರಾಜೆಕ್ಟ್ ನ ಸಾರಾಂಶವಾಗಿದೆ. |
13:19 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ವೀಡಿಯೋಅನ್ನು ಡೌನ್ಲೋಡ್ ಮಾಡಿ ನೋಡಬಹುದು. |
13:24 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
13:30 | ಮತ್ತು, ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ಕೊಡಲಾಗುತ್ತದೆ. |
13:33 | ಹೆಚ್ಚಿನ ಮಾಹಿತಿಗಾಗಿ, ಈಕೆಳಗೆ ಕೊಟ್ಟಿರುವ ಲಿಂಕ್ ಅನ್ನು ಸಂರ್ಪಕಿಸಬಹುದು.
'contact@spoken-tutorial.org' |
13:41 | 'Spoken Tutorial' ಪ್ರಕಲ್ಪವು , 'Talk to a Teacher' ಎಂಬ ಪ್ರಕಲ್ಪದ ಒಂದು ಭಾಗವಾಗಿದೆ. |
13:46 | ಇದು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
13:53 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ:
spoken-tutorial.org/NMEICT-Intro |
13:59 | ಈ ಟ್ಯುಟೋರಿಯಲ್, 'IT for Change' ಅವರ ಕೊಡುಗೆಯಾಗಿದೆ. |
14:04 | ವಂದನೆಗಳು. |