Difference between revisions of "LibreOffice-Suite-Math/C2/Derivatives-Differential-Equations-Integral-Equations-Logarithms/Kannada"
From Script | Spoken-Tutorial
Anjana310312 (Talk | contribs) |
Anjana310312 (Talk | contribs) |
||
Line 30: | Line 30: | ||
|- | |- | ||
||01:03 | ||01:03 | ||
− | || ಮತ್ತು ಸರಿಯಾಗಿ ಓದಲು ಅನುಕೂಲವಾಗುವಂತೆ , ಪ್ರತಿಯೊಂದು ಉದಾಹರಣೆಯ ನಡುವೆ '''newline''' ಗಳನ್ನು ಸೇರಿಸಿ. | + | || ಮತ್ತು ಸರಿಯಾಗಿ ಓದಲು ಅನುಕೂಲವಾಗುವಂತೆ ಮಾಡಲು, ಪ್ರತಿಯೊಂದು ಉದಾಹರಣೆಯ ನಡುವೆ '''newline''' ಗಳನ್ನು ಸೇರಿಸಿ. |
|- | |- | ||
||01:11 | ||01:11 | ||
Line 39: | Line 39: | ||
|- | |- | ||
||01:25 | ||01:25 | ||
− | || ನಾವು ಅವುಗಳನ್ನು | + | || ನಾವು ಅವುಗಳನ್ನು ಭಿನ್ನರಾಶಿಗಳಾಗಿ ಪರಿಗಣಿಸಬೇಕು ಮತ್ತು '''over''' ಎಂಬ ಮಾರ್ಕ್ಅಪ್ ಅನ್ನು ಬಳಸಬೇಕು. |
|- | |- | ||
||01:33 | ||01:33 |
Revision as of 14:16, 25 May 2018
Time | Narration |
00:01 | LibreOffice Math ನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು ಡೆರಿವೇಟಿವ್ ಗಳು, ಡಿಫರೆನ್ಷಿಯಲ್ ಇಕ್ವೇಷನ್ ಗಳು, ಇಂಟಿಗ್ರಲ್ ಇಕ್ವೇಷನ್ ಗಳು ಮತ್ತು ಲೊಗ್ಯಾರಿದಮ್ ನೊಂದಿಗೆ ಸೂತ್ರಗಳನ್ನು ಬರೆಯುವುದನ್ನು ಕಲಿಯುವೆವು. |
00:17 | ಇದಕ್ಕಾಗಿ, ಮೊದಲು ನಾವು ಹಿಂದಿನ ಟ್ಯುಟೋರಿಯಲ್ ನಲ್ಲಿ ರಚಿಸಿದ ನಮ್ಮ Writer document ನ ಉದಾಹರಣೆಯಾದ "MathExample1.odt" ಯನ್ನು ಓಪನ್ ಮಾಡೋಣ. |
00:29 | ಇಲ್ಲಿ, ಡಾಕ್ಯುಮೆಂಟ್ ನ ಕೊನೆಯ ಪುಟಕ್ಕೆ ಸ್ಕ್ರೋಲ್ ಮಾಡೋಣ. ನಂತರ ಹೊಸ ಪುಟಕ್ಕೆ ಹೋಗಲು Control, Enter ಅನ್ನು ಒತ್ತೋಣ. |
00:37 | ಈಗ ಹೀಗೆ ಟೈಪ್ ಮಾಡಿ: “Derivatives and Differential Equations: ” ಮತ್ತು Enter ಕೀಯನ್ನು ಎರಡು ಬಾರಿ ಒತ್ತಿ. |
00:45 | ಈಗ , ಕ್ರಮವಾಗಿ Insert ಮೆನ್ಯು >> Object >> Formula ಇವುಗಳನ್ನು ಕ್ಲಿಕ್ ಮಾಡಿ, Math ಅನ್ನು ಕಾಲ್ ಮಾಡೋಣ. |
00:54 | ಮುಂದುವರಿಯುವ ಮೊದಲು, ಫಾಂಟ್ ಸೈಜ್ ಅನ್ನು 18 ಪಾಯಿಂಟ್ ಗೆ ಹೆಚ್ಚಿಸಿಕೊಳ್ಳೋಣ. |
01:00 | Alignment ಅನ್ನು Left ಗೆ ಬದಲಾಯಿಸಿ. |
01:03 | ಮತ್ತು ಸರಿಯಾಗಿ ಓದಲು ಅನುಕೂಲವಾಗುವಂತೆ ಮಾಡಲು, ಪ್ರತಿಯೊಂದು ಉದಾಹರಣೆಯ ನಡುವೆ newline ಗಳನ್ನು ಸೇರಿಸಿ. |
01:11 | ಈಗ ನಾವು ಡೆರಿವೇಟಿವ್ ಗಳು ಮತ್ತು ಡಿಫರೆನ್ಷಿಯಲ್ ಇಕ್ವೇಷನ್ ಗಳನ್ನು ಬರೆಯಲು ಕಲಿಯೋಣ. |
01:19 | Math, ಈ ಸೂತ್ರಗಳು ಮತ್ತು ಸಮೀಕರಣಗಳನ್ನು ಬರೆಯುವ ಒಂದು ಸುಲಭವಾದ ಮಾರ್ಗವನ್ನು ಒದಗಿಸುತ್ತದೆ. |
01:25 | ನಾವು ಅವುಗಳನ್ನು ಭಿನ್ನರಾಶಿಗಳಾಗಿ ಪರಿಗಣಿಸಬೇಕು ಮತ್ತು over ಎಂಬ ಮಾರ್ಕ್ಅಪ್ ಅನ್ನು ಬಳಸಬೇಕು. |
01:33 | ಉದಾಹರಣೆಗೆ- ಟೋಟಲ್ ಡೆರಿವೇಟಿವ್ df by dx ಅನ್ನು ಬರೆಯಲು, ಫಾರ್ಮುಲಾ ಎಡಿಟರ್ ವಿಂಡೋದಲ್ಲಿ "df over dx" ಎಂಬ ಮಾರ್ಕಪ್ ಇದೆ. |
01:50 | ನಂತರ, ಪಾರ್ಷಿಯಲ್ ಡೆರಿವೇಟಿವ್ ಗಾಗಿ ನಾವು ‘partial’ ಎಂಬ ಶಬ್ದವನ್ನು ಬಳಸಬಹುದು ಮತ್ತು ಮಾರ್ಕಪ್, del f over del x ಎಂದು ಇರುತ್ತದೆ. |
02:02 | ‘partial’ ಎಂಬ ಮಾರ್ಕಪ್ ಅನ್ನು ಬಳಸುವಾಗ, ನಾವು ಕರ್ಲಿ ಬ್ರ್ಯಾಕೆಟ್ ಗಳನ್ನು ಬಳಸಬೇಕು. |
02:08 | Writer gray box ನಲ್ಲಿ (ರೈಟರ್ ಗ್ರೇ ಬಾಕ್ಸ್), ಪಾರ್ಷಿಯಲ್ ಡೆರಿವೇಟಿವ್ ಗಳಿಗಾಗಿ ಇರುವ 'del' ಚಿಹ್ನೆಯನ್ನು ಗಮನಿಸಿ. |
02:14 | ಇಲ್ಲಿ ಇನ್ನೊಂದು ಉದಾಹರಣೆಯಿದೆ: ನ್ಯೂಟನ್ ನ ಚಲನೆಯ ಎರಡನೆಯ ನಿಯಮ. |
02:21 | ಇದು ವೇಗೋತ್ಕರ್ಷ ಮತ್ತು ಬಲ (force) ಇವುಗಳ ನಡುವಿನ ಸಂಬಂಧವನ್ನು ವಿವರಿಸುತ್ತದೆ - |
02:26 | F is equal to m a. |
02:30 | ಇದನ್ನು ಒಂದು ಸಾಮಾನ್ಯ ಡಿಫರೆನ್ಷಿಯಲ್ ಇಕ್ವೇಷನ್ ನಂತೆ ಹೀಗೆ ಬರೆಯಬಹುದು: F of t is equal to m into d squared x over d t squared. |
02:45 | ಗಮನಿಸಿ: ನಾವು ಆಪರೇಷನ್ ಗಳ ಕ್ರಮವನ್ನು ತಿಳಿಸಲು, ಹಲವಾರು ಕರ್ಲಿ ಬ್ರ್ಯಾಕೆಟ್ ಗಳನ್ನು ಬಳಸಿದ್ದೇವೆ. |
02:56 | ಮತ್ತು ಸಮೀಕರಣವು, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಇರುತ್ತದೆ. |
03:01 | ಇಲ್ಲಿ ಡಿಫರೆನ್ಷಿಯಲ್ ಇಕ್ವೇಷನ್ ನ ಇನ್ನೊಂದು ಉದಾಹರಣೆಯಿದೆ. |
03:05 | ನ್ಯೂಟನ್ ನ ಕೂಲಿಂಗ್ ನ ನಿಯಮ. |
03:08 | ಟೈಮ್ t ಆಗಿದ್ದಾಗ, theta (ಥೀಟಾ) of t, ಒಂದು ವಸ್ತುವಿನ ಉಷ್ಣತೆಯಾಗಿದ್ದರೆ, ಆಗ ನಾವು ಡಿಫರೆನ್ಷಿಯಲ್ ಇಕ್ವೇಷನ್ ಅನ್ನು ಹೀಗೆ ಬರೆಯಬಹುದು: |
03:18 | d of theta over d of t is equal to minus k into theta minus S |
03:30 | ಇಲ್ಲಿ, 'S' ಇದು ಸುತ್ತಲಿನ ವಾತಾವರಣದ ತಾಪಮಾನವಾಗಿರುತ್ತದೆ. |
03:35 | 'ರೈಟರ್ ಗ್ರೇ ಬಾಕ್ಸ್' ನಲ್ಲಿರುವ ಇಕ್ವೇಷನ್ ಅನ್ನು ಗಮನಿಸಿ. |
03:39 | ಈಗ ನಮ್ಮ ಕೆಲಸವನ್ನು ಸೇವ್ ಮಾಡೋಣ. File ಗೆ ಹೋಗಿ,Save ಮೇಲೆ ಕ್ಲಿಕ್ ಮಾಡಿ. |
03:45 | ಈಗ 'ಇಂಟಿಗ್ರಲ್ ಇಕ್ವೇಷನ್' ಗಳನ್ನು ಹೇಗೆ ಬರೆಯುವುದು ಎಂದು ನೋಡೋಣ. |
03:50 | ಈಗ 'ರೈಟರ್ ಗ್ರೇ ಬಾಕ್ಸ್' ನ ಹೊರಭಾಗದಲ್ಲಿ ಮೂರು ಬಾರಿ ನಿಧಾನವಾಗಿ ಕ್ಲಿಕ್ ಮಾಡಿ, |
03:58 | ನಂತರ Control, Enter ಅನ್ನು ಒತ್ತಿ, ಒಂದು ಹೊಸ ಪೇಜ್ ಗೆ ಹೋಗೋಣ. |
04:03 | ಹೀಗೆ ಟೈಪ್ ಮಾಡಿ: “Integral Equations: ” |
04:06 | Enter ಅನ್ನು ಎರಡು ಬಾರಿ ಒತ್ತಿ. |
04:11 | ಈಗ Insert > Object ಮೆನ್ಯುವಿನಿಂದ, Math ಅನ್ನು ಕಾಲ್ ಮಾಡೋಣ. |
04:17 | Font size ಅನ್ನು 18 point ಗಳಿಗೆ ಹೆಚ್ಚಿಸಿ. |
04:22 | ಮತ್ತು Alignment ಅನ್ನು, Left ಎಂದು ಬದಲಾಯಿಸಿ. |
04:25 | integral ಚಿಹ್ನೆಯನ್ನು ಬರೆಯಲು, 'ಫಾರ್ಮುಲಾ ಎಡಿಟರ್ ವಿಂಡೋ' ದಲ್ಲಿ, ನಾವು “int” ಎಂಬ ಮಾರ್ಕಪ್ ಅನ್ನು ಬಳಸಬೇಕು. |
04:35 | ಇಲ್ಲಿ, ರಿಯಲ್ ವೇರಿಯೇಬಲ್ 'x' ನ ಒಂದು ಫಂಕ್ಷನ್ ಮತ್ತು x-axis ನ ಮೇಲೆ, ರಿಯಲ್ ಲೈನ್ ನಲ್ಲಿ 'a, b' ವ್ಯಾಪ್ತಿಯನ್ನು ಕೊಡಲಾಗಿದೆ. ಡೆಫಿನಿಟ್ ಇಂಟಿಗ್ರಲ್ ಅನ್ನು ಹೀಗೆ ಬರೆಯುತ್ತೇವೆ : Integral from a to b f of x dx. |
04:58 | ಇಂಟಿಗ್ರಲ್ ಚಿಹ್ನೆಯನ್ನು ಸೂಚಿಸಲು, ನಾವು ‘int’ ಮಾರ್ಕಪ್ ಅನ್ನು ಬಳಸಿದ್ದೇವೆ. |
05:04 | 'ಲಿಮಿಟ್' ಗಳಾದ 'a' ಮತ್ತು 'b' ಗಳನ್ನು ಸೂಚಿಸಲು, ನಾವು ‘from’ ಮತ್ತು ‘to’ ಎಂಬ ಮಾರ್ಕಪ್ ಗಳನ್ನು ಬಳಸಿದ್ದೇವೆ. |
05:13 | 'ರೈಟರ್ ಗ್ರೇ ಬಾಕ್ಸ್' ನಲ್ಲಿರುವ ಸೂತ್ರವನ್ನು ಗಮನಿಸಿ. |
05:17 | ನಂತರ, ಒಂದು ಆಯತ-ಘನದ ಗಾತ್ರವನ್ನು ಕಂಡುಹಿಂಡಿಯಲು, 'ಡಬಲ್ ಇಂಟಿಗ್ರಲ್ ಫಾರ್ಮುಲಾ' ದ ಒಂದು ಉದಾಹರಣೆಯನ್ನು ನಾವು ಬರೆಯೋಣ. |
05:26 | ಇದರ ಸೂತ್ರವು ಪರದೆಯ ಮೇಲೆ ತೋರಿಸಿದಂತೆ ಇರುತ್ತದೆ. |
05:30 | ನಾವು ಇಲ್ಲಿ ನೋಡುವಂತೆ, ಡಬಲ್ ಇಂಟಿಗ್ರಲ್ ನ ಮಾರ್ಕಪ್, ‘i i n t’ ಎಂದಾಗಿದೆ. |
05:38 | ಹೀಗೆಯೇ, ಆಯತ-ಘನದ ಗಾತ್ರವನ್ನು ಕಂಡುಹಿಡಿಯಲು, ಟ್ರಿಪಲ್ ಇಂಟಿಗ್ರಲ್ ಅನ್ನು ಕೂಡ ನಾವು ಬಳಸಬಹುದು. |
05:46 | ಮತ್ತು, ಟ್ರಿಪಲ್ ಇಂಟಿಗ್ರಲ್ ಗಾಗಿ, ಮಾರ್ಕಪ್ ‘i i i n t’ ಎಂದಾಗಿದೆ. |
05:52 | ಇಂಟಿಗ್ರಲ್ ನ ಲಿಮಿಟ್ ಗಳನ್ನು ಸೂಚಿಸಲು, ನಾವು 'ಸಬ್-ಸ್ಕ್ರಿಪ್ಟ್ ಮಾರ್ಕಪ್' (subscript mark up) ಅನ್ನು ಕೂಡ ಬಳಸಬಹುದು. |
06:00 | Math, 'ಸಬ್-ಸ್ಕ್ರಿಪ್ಟ್' ಅನ್ನು ಬಳಸಿ, ಅಕ್ಷರವನ್ನು ಇಂಟಿಗ್ರಲ್ ನ ಕೆಳಗಡೆಯ ಬಲಭಾಗದಲ್ಲಿ ಇಡುತ್ತದೆ. |
06:06 | ಹೀಗೆ, ಈ ವಿಧಾನಗಳಿಂದ, math ನಲ್ಲಿ, ನಾವು ಇಂಟಿಗ್ರಲ್ ಫಾರ್ಮುಲಾ ಗಳನ್ನು ಮತ್ತು ಸಮೀಕರಣಗಳನ್ನು ಬರೆಯಬಹುದು. |
06:13 | ಈಗ, ನಾವು ಲೊಗ್ಯಾರಿದಮ್ ಗಳನ್ನು ಒಳಗೊಂಡ ಸೂತ್ರಗಳನ್ನು ಹೇಗೆ ಬರೆಯುವುದು ಎಂದು ನೋಡೋಣ. |
06:19 | ಇವುಗಳನ್ನು ಹೊಸ 'ಮ್ಯಾಥ್ ಗ್ರೇ ಬಾಕ್ಸ್' ಅಥವಾ 'ಮ್ಯಾತ್ ಒಬ್ಜೆಕ್ಟ್' ನಲ್ಲಿ ಬರೆಯೋಣ. |
06:24 | "Logarithms: " ಎಂದು ಟೈಪ್ ಮಾಡಿ, Enter ಅನ್ನು ಎರಡು ಬಾರಿ ಒತ್ತಿ. |
06:29 | ಇನ್ನೊಮ್ಮೆMath ಅನ್ನು ಕಾಲ್ ಮಾಡಿ. |
06:35 | ಮತ್ತು ಫಾಂಟ್ ಅನ್ನು 18 point ಗೆ ಬದಲಿಸಿ. |
06:39 | ಮತ್ತು ಅವುಗಳನ್ನು Left ಗೆ align ಮಾಡಿ. |
06:42 | ಲೊಗ್ಯಾರಿದಮ್ ಅನ್ನು ಬಳಸಿ ಒಂದು ಸರಳ ಸೂತ್ರ : log 1000 to the base 10 is equal to 3 ಆಗಿದೆ. |
06:52 | ಇಲ್ಲಿ ಮಾರ್ಕಪ್ ಅನ್ನು ಗಮನಿಸಿ. |
06:55 | ಇಲ್ಲಿ ಇನ್ನೊಂದು ಉದಾಹರಣೆ ಇದೆ: log 64 to the base 2 is equal to 6. |
07:03 | ಈಗ ನಾವು ನ್ಯಾಚುರಲ್ ಲೊಗ್ಯಾರಿದಮ್ ನ ಇಂಟಿಗ್ರಲ್ ನಿರೂಪಣೆಯನ್ನು ಬರೆಯೋಣ. |
07:10 | natural logarithm of t is equal to the integral of 1 by x, dx, from 1 to t. |
07:20 | ಮತ್ತು ಇದರ ಮಾರ್ಕಪ್, ಸ್ಕ್ರೀನ್ ನ ಮೇಲೆ ತೋರಿಸಿದಂತೆ ಕಾಣಿಸುತ್ತದೆ. |
07:25 | ಈಗ ನಮ್ಮ ಉದಾಹರಣೆಗಳನ್ನು ಸೇವ್ ಮಾಡೋಣ. |
07:29 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ: |
07:31 | ಈ ಕೆಳಗಿನ 'ಡೆರಿವೇಟಿವ್' ಫಾರ್ಮುಲಾ ಅನ್ನು ಬರೆಯಿರಿ: |
07:35 | d squared y, by, d x squared, is equal to d by dx of dy by dx. |
07:47 | ಆರೋಹ್ಯಕ್ರಮದಲ್ಲಿ ಬ್ರ್ಯಾಕೆಟ್ ಗಳನ್ನು ಬಳಸಿ. |
07:51 | ಈ ಕೆಳಗಿನ 'ಇಂಟಿಗ್ರಲ್' ಅನ್ನು ಬರೆಯಿರಿ: |
07:53 | Integral with limits 0 to 1 of {square root of x } dx. |
08:04 | ನಂತರ, ಈ ಕೆಳಗೆ ಹೇಳಿದಂತೆ ಒಂದು 'ಡಬಲ್ ಇಂಟಿಗ್ರಲ್' ಅನ್ನು ಬರೆಯಿರಿ: |
08:09 | Double integral from T of { 2 Sin x – 3 y cubed + 5 } dx dy. |
08:23 | ಮತ್ತು, |
08:25 | log x to the power of p to the base b is equal to p into log x to the base b ಈ ಸೂತ್ರವನ್ನು ಬಳಸಿ, |
08:35 | log 1024 to the base 2 ಇದರ ಉತ್ತರವನ್ನು ಕಂಡುಹಿಡಿಯಿರಿ. |
08:41 | ನಿಮ್ಮ ಸೂತ್ರ ಗಳನ್ನು Format ಮಾಡಿ. |
08:43 | ಇಲ್ಲಿಗೆ ನಾವು, LibreOffice Math ನಲ್ಲಿ, 'ಡಿಫರೆನ್ಷಿಯಲ್' ಮತ್ತು ಇಂಟಿಗ್ರಲ್ ಇಕ್ವೇಷನ್ ಗಳು ಮತ್ತು ಲೊಗ್ಯಾರಿದಮ್ ಗಳನ್ನು ಬರೆಯುವುದರ ಕುರಿತು ಇರುವ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
08:52 | ಸಂಕ್ಷಿಪ್ತವಾಗಿ, ನಾವು : 'ಡೆರಿವೇಟಿವ್' ಗಳು ಮತ್ತು 'ಡಿಫರೆನ್ಷಿಯಲ್ ಇಕ್ವೇಷನ್' ಗಳು, |
08:58 | 'ಇಂಟಿಗ್ರಲ್ ಇಕ್ವೇಷನ್' ಗಳು ಮತ್ತು ಲೊಗ್ಯಾರಿದಮ್ ಗಳೊಂದಿಗೆ ಸೂತ್ರಗಳನ್ನು ಬರೆಯುವುದನ್ನು ಕಲಿತಿದ್ದೇವೆ. |
09:02 | 'ಸ್ಪೋಕನ್ ಟ್ಯುಟೋರಿಯಲ್ಸ್' ಪ್ರೊಜೆಕ್ಟ್, 'ಟಾಕ್ ಟು ಎ ಟೀಚರ್' ಪ್ರೊಜೆಕ್ಟ್ ನ ಒಂದು ಭಾಗವಾಗಿದೆ. |
09:06 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ , ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
09:13 | ಈ ಪ್ರಾಜೆಕ್ಟ್ ಅನ್ನು http://spoken-tutorial.org ನಿಂದ ಸಂಘಟಿಸಲಾಗಿದೆ. |
09:18 | ಇದರ ಕುರಿತು ಹೆಚ್ಚಿನ ಮಾಹಿತಿ ಈ ಲಿಂಕ್ ನಲ್ಲಿ ಲಭ್ಯವಿದೆ. |
09:24 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |