Difference between revisions of "Avogadro/C2/Edit-molecules/Kannada"

From Script | Spoken-Tutorial
Jump to: navigation, search
(Created page with "{| border=1 ||'''Time''' ||'''Narration''' |- ||00:01 || ಎಲ್ಲರಿಗೂ '''Edit molecules''' ಎಂಬ ಟ್ಯುಟೋರಿಯಲ್ ಗೆ ಸ್ವಾಗತ....")
 
Line 29: Line 29:
 
ಇಲ್ಲಿ ನಾನು  ''' Ubuntu Linux OS'''  14.04 ಆವೃತ್ತಿ,
 
ಇಲ್ಲಿ ನಾನು  ''' Ubuntu Linux OS'''  14.04 ಆವೃತ್ತಿ,
 
'''  Avogadro '''  1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ.
 
'''  Avogadro '''  1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ.
1.1.
 
 
 
|-
 
|-
 
|| 00:37
 
|| 00:37

Revision as of 21:08, 9 April 2018

Time Narration
00:01 ಎಲ್ಲರಿಗೂ Edit molecules ಎಂಬ ಟ್ಯುಟೋರಿಯಲ್ ಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು- ಅಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
00:14 ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
00:16 ಬಾಂಡ್ ಗಳನ್ನು ರೋಟೇಟ್ ಮಾಡುವುದು(ತಿರುಗಿಸುವುದು) ,
00:18 ಬಾಂಡ್ ನ ಉದ್ದವನ್ನು ಬದಲಿಸುವುದು,
00:20 ಹೈಡ್ರೋಜನ್ ಅನ್ನು ಮೀಥೈಲ್ ಗುಂಪಾಗಿ ಬದಲಿಸುವುದು ,
00:23 ಸ್ಟ್ರಕ್ಚರ್ ಗಳನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಸೇರಿಸುವುದು- ಇವುಗಳ ಕುರಿತು ಕಲಿಯುವೆವು.
00:27

ಇಲ್ಲಿ ನಾನು Ubuntu Linux OS 14.04 ಆವೃತ್ತಿ, Avogadro 1.1.1 ಆವೃತ್ತಿ - ಇವುಗಳನ್ನು ಬಳಸುತ್ತಿದ್ದೇನೆ.

00:37 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು Avogadro ಇಂಟರ್ಫೇಸ್ ಅನ್ನು ತಿಳಿದಿರಬೇಕು.
00:43 ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಗೆ ಭೇಟಿಕೊಡಿ.
00:49 ಇಲ್ಲಿ ನಾನು Terminal ಅನ್ನು ಬಳಸಿ Avogadro ವನ್ನು ಓಪನ್ ಮಾಡುವುದು ಹೇಗೆ ಎಂದು ತೋರಿಸುವೆನು.
00:55 ಟರ್ಮಿನಲ್ ಅನ್ನು ಓಪನ್ ಮಾಡಲು, CTRL, ALT ಮತ್ತು T ಕೀ ಗಳನ್ನು ಒಟ್ಟಿಗೆ ಒತ್ತಿ.
01:03 ಪ್ರಾಂಪ್ಟ್ ನಲ್ಲಿ avogadro ಎಂದು ಟೈಪ್ ಮಾಡಿ , ಎಂಟರ್ ಅನ್ನು ಒತ್ತಿ.
01:08 Avogadro ಅಪ್ಲಿಕೇಷನ್ ವಿಂಡೋ ಓಪನ್ ಆಗುತ್ತದೆ.
01:12 ವಿವರಣೆಗಾಗಿ ನಾನು , Fragment ಲೈಬ್ರರಿಯಿಂದ n-butane ನ ಮೊಲಿಕ್ಯೂಲ್ ಅನ್ನು ಡಿಸ್ಪ್ಲೇ ಮಾಡುವೆನು.
01:19 Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. Insert->Fragment ಗೆ ಹೋಗಿ.
01:25 Insert fragment ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
01:29 ಫ್ರ್ಯಾಗ್ಮೆಂಟ್ ಗಳ ಪಟ್ಟಿಯಲ್ಲಿ alkanes ಫೋಲ್ಡರ್ ಅನ್ನು ಓಪನ್ ಮಾಡಲು ಅದನ್ನು ಡಬಲ್ ಕ್ಲಿಕ್ ಮಾಡಿ.
01:35 ಕಾಣಿಸುವ ಡ್ರಾಪ್ ಡೌನ್ ಲಿಸ್ಟ್ ನಲ್ಲಿ butane.cml ಅನ್ನು ಆಯ್ಕೆ ಮಾಡಿ.
01:41 Insert ಬಟನ್ ಅನ್ನು ಕ್ಲಿಕ್ ಮಾಡಿ. Insert Fragment ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, X(ಕ್ಲೋಸ್) ಅನ್ನು ಕ್ಲಿಕ್ ಮಾಡಿ.
01:49 ನೀಲಿ ಬಣ್ಣದಲ್ಲಿ ಹೈಲೈಟ್ ಆದ Butane ಮೊಲಿಕ್ಯೂಲ್ ಪ್ಯಾನಲ್ ನ ಮೇಲೆ ಕಾಣಿಸುತ್ತದೆ.
01:54 ಹೈಲೈಟ್ ಅನ್ನು ತೆಗೆಯಲು, Ctrl, Shift ಮತ್ತು A ಕೀಗಳನ್ನು ಒಟ್ಟಿಗೆ ಒತ್ತಿ.
02:02 ಸರಿಯಾಗಿ ಅಲೈನ್ ಮಾಡಲು Navigation ಟೂಲ್ ಅನ್ನು ಬಳಸಿ ಸ್ಟ್ರಕ್ಚರ್ ಅನ್ನು ತಿರುಗಿಸಿ.
02:09 ಈಗ ಮೊಲಿಕ್ಯೂಲ್ ಗೆ ಅಣುಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು.
02:14 ಟೂಲ್ ಬಾರ್ ನಲ್ಲಿರುವ Draw tool ಐಕಾನ್ ಅನ್ನು ಕ್ಲಿಕ್ ಮಾಡಿ.
02:18 ಕೊನೆಯ Carbon ಅಣುವಿನ ಮೇಲೆ ಕ್ಲಿಕ್ ಮಾಡಿ ಮತ್ತು ಪ್ಯಾನಲ್ ನ ಮೇಲೆ ಡ್ರ್ಯಾಗ್ ಮಾಡಿ.
02:23 ಅವಶ್ಯವಿರುವಷ್ಟು ಜಲಜನಕ ಅಣುಗಳ ಜತೆಗೆ ಒಂದು ಕಾರ್ಬನ್ ಅಣು ಸೇರ್ಪಡೆಯಾಗುತ್ತದೆ.
02:27 ಈಗ ನಾವು ಪ್ಯಾನಲ್ ನಲ್ಲಿ pentane ನ ಮೊಲಿಕ್ಯೂಲ್ ಅನ್ನು ಹೊಂದಿದ್ದೇವೆ.
02:32 ಹಾಗೆಯೇ, ನೀವು ಆಲ್ಕೇನ್ ಗಳ ಸರಣಿಯನ್ನು ತಯಾರಿಸಲು, Draw tool ಅನ್ನು ಬಳಸಿ, ಅಣುಗಳನ್ನು ಸೇರಿಸಿಬಹುದು.
02:39 ಒಂದು ಹೊಸ ವಿಂದೋವನ್ನು ಓಪನ್ ಮಾಡಿ. Draw tool ಅನ್ನು ಬಳಸಿ ಪ್ರೊಪೇನ್ ಅನ್ನು ಬರೆಯಿರಿ.
02:45 ಈಗ Ethane ಮೊಲಿಕ್ಯೂಲ್ ಅನ್ನು ಪಡೆಯಲು, ಹೈಡ್ರೋಜನ್ ಗಳ ಜತೆ ಕೊನೆಯ ಕಾರ್ಬನ್ ಅಣುವನ್ನು ಡಿಲೀಟ್ ಮಾಡೋಣ.
02:52 ಅಣುಗಳನ್ನು ಡಿಲೀಟ್ ಮಾಡಲು, ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ.
02:57 ಆಯ್ಕೆ ಮಾಡಿಕೊಳ್ಳಲು, ಕೊನೆಯ ಕಾರ್ಬನ್ ಅಣುವಿನ ಮೇಲೆ ಕ್ಲಿಕ್ ಮಾಡಿ ಡ್ರ್ಯಾಗ್ ಮಾಡಿ.
03:02 ಆಯ್ಕೆ ಮಾಡಿದ ಅಣುಗಳು ನೀಲಿ ಬಣ್ಣದಲ್ಲಿ ಕಾಣುತ್ತದೆ.
03:06 ಡಿಲೀಟ್ ಮಾಡಲು Backspace ಅನ್ನು ಒತ್ತಿ, ಅಥವಾ Edit ಮೆನ್ಯುವಿನಲ್ಲಿ clear ಆಯ್ಕೆಯನ್ನು ಸಹ ಆರಿಸಿಕೊಳ್ಳಬಹುದು.
03:14 ರಿಡೂ ಮಾಡಲು, Ctrl and Z ಕೀ ಗಳನ್ನು ಒಟ್ಟಿಗೆ ಒತ್ತಿ.
03:20 ನಾವು ಮೊಲಿಕ್ಯೂಲ್ ನಲ್ಲಿ ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು ಹೇಗೆಂದು ನೋಡುವೆವು.
03:26 ಬಾಂಡ್ ಗಳನ್ನು ಸೇರಿಸಲು, ಟೂಲ್ ಬಾರ್ ನಲ್ಲಿರುವ Draw tool ಐಕಾನ್ ಅನ್ನು ಆಯ್ಕೆ ಮಾಡಿ.
03:31 ಎಡ ಭಾಗದಲ್ಲಿ Draw Settings ಮೆನ್ಯು ಓಪನ್ ಆಗುತ್ತದೆ.
03:35 Element ಡ್ರಾಪ್ ಡೌನ್ ಮೆನ್ಯುವಿನಲ್ಲಿ ಡಿಫಾಲ್ಟ್ ಆಗಿ Carbon ಆಯ್ಕೆಯಾಗಿರುತ್ತದೆ.
03:40 ಡಬಲ್ ಬಾಂಡ್ ಅನ್ನು ಪರಿಚಯಿಸಲು, Bond Order ಡ್ರಾಪ್ ಡೌನ್ ಮೆನ್ಯುವಿನಲ್ಲಿ, Double ಅನ್ನು ಆಯ್ಕೆ ಮಾಡಿ.
03:46 ಡಬಲ್ ಬಾಂಡ್ ಆಗಿ ಪರಿವರ್ತಿಸಲು, C-1 ಮತ್ತು C-2 ಗಳ ನಡುವಿನ ಬಾಂಡ್ ಅನ್ನು ಕ್ಲಿಕ್ ಮಾಡಿ.
03:52 ಡಬಲ್ ಬಾಂಡ್ ಅನ್ನು ಟ್ರಿಪಲ್ ಬಾಂಡ್ ಆಗಿ ಪರಿವರ್ತಿಸಲು, Bond Order ನಿಂದ Triple ಅನ್ನು ಆಯ್ಕೆ ಮಾಡಿಕೊಳ್ಳಿ. ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
03:59 ಬಾಂಡ್ ಗಳನ್ನು ಡಿಲೀಟ್ ಮಾಡಲು, ಮೌಸ್ ನ ಬಲ ಬಟನ್ ಅನ್ನು ಹಿಡಿದು ಬಾಂಡ್ ಗಳ ಮೇಲೆ ಕ್ಲಿಕ್ ಮಾಡಿ.
04:04 ಇದರಿಂದ ಎರಡು ಬೇರೆ ಬೇರೆ ಮೊಲಿಕ್ಯೂಲ್ ಗಳು ಆಗುತ್ತವೆ.
04:08 ಈಗ ಈ ಮೊಲಿಕ್ಯೂಲ್ ಗಳನ್ನು ಪುನರ್ಜೋಡಿಸೋಣ.
04:11 ಒಂದು ಮೊಲಿಕ್ಯೂಲ್ ನ ಕಾರ್ಬನ ಮೇಲೆ ಕ್ಲಿಕ್ ಮಾಡಿಕೊಂಡು, ಇನ್ನೊಂದು ಮೊಲಿಕ್ಯೂಲ್ ನ ಕಾರ್ಬನ್ ನ ಮೇಲೆ ಡ್ರ್ಯಾಗ್ ಮಾಡಿ, ಕ್ಲಿಕ್ ಮಾಡಿ.
04:18 ನಾವು Bond Centric Manipulation (ಬಾಂಡ್ ಸೆಂಟ್ರಿಕ್ ಮ್ಯಾನಿಪ್ಯುಲೇಷನ್) ಟೂಲ್ ಅನ್ನು ಬಳಸಿ, ಬಾಂಡ್ ಗಳನ್ನು ರೋಟೇಟ್ ಮಾಡಬಹುದು(ತಿರುಗಿಸಬಹುದು) ಅಥವಾ ಬಾಂಡ್ ನ ಉದ್ದವನ್ನು ಬದಲಿಸಬಹುದು.
04:24 ಟೂಲ್ ಬಾರ್ ನಲ್ಲಿ Bond Centric Manipulation tool ನ ಮೇಲೆ ಕ್ಲಿಕ್ ಮಾಡಿ.
04:29 ಎಡಭಾಗದಲ್ಲಿ, Bond Centric Manipulate ಸೆಟ್ಟಿಂಗ್ ಗಳ ಮೆನ್ಯು ತೆರೆದುಕೊಳ್ಳುತ್ತದೆ.
04:34 ಡಿಫಾಲ್ಟ್ ಆಗಿ, Show Angles ಮತ್ತು Snap-to Bonds ಆಯ್ಕೆಗಳು ಚೆಕ್ ಆಗಿರುತ್ತವೆ.
04:39 Snap-to Threshold 10ಡಿಗ್ರಿ ಎಂದು ಸೆಟ್ ಆಗಿದೆ.
04:43 ಬಳಕೆದಾರರು, ಅವರ ಅವಶ್ಯಕತೆಗೆ ತಕ್ಕಂತೆ ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳಬಹುದು.
04:49 ಕೋನಗಳನ್ನು ತೋರಿಸಲು, ಎರಡು ಅಣುಗಳ ನಡುವಿನ ಬಾಂಡ್ ನ ಮೇಲೆ ಕ್ಲಿಕ್ ಮಾಡಿ.
04:55 ನಾವು ಬಾಂಡ್ ಗಳ ಪರಿಭ್ರಮಣ(ರೊಟೇಷನ್) ದ ಸಮತಲವನ್ನು (ಪ್ಲೇನ್) ಹೊಂದಿಸಬೇಕು.
04:59 ಸಮತಲವನ್ನು ಹೊಂದಿಸಲು, ಬಾಂಡ್ ನ ಮೇಲೆ ಕ್ಲಿಕ್ ಮಾಡಿಕೊಂಡು, ಮೇಲೆ ಕೆಳಗೆ ಚಲಿಸಿ.
05:05 ಅಣುಗಳ ನಡುವಿನ ಸಮತಲ ನೀಲಿ ಅಥವಾ ಹಳದಿ ಬಣ್ಣದಲ್ಲಿ ಕಾಣಿಸುತ್ತದೆ.
05:11 ತಿರುಗಿಸಲು, ಅಣುಗಳಲ್ಲಿ ಒಂದನ್ನು ಕ್ಲಿಕ್ ಮಾಡಿ, ಚಲಿಸಿ.
05:16 ಅಣುಗಳೊಂದಿಗೆ ಹೊಂದಿಕೊಂಡ ಬಾಂಡ್ ಅಣುಗಳ ಸಮೇತ ನಿಗದಿತ ಸಮತಲದಲ್ಲಿ ಪರಿಭ್ರಮಣೆ (ರೋಟೇಟ್) ಆಗುತ್ತದೆ.
05:21 ಬಾಂಡ್ ನ ಉದ್ದವನ್ನು ಬದಲಿಸಲು, ಮೌಸ್ ನ ಬಲ ಬಟನ್ ಅನ್ನು ಹಿಡಿದುಕೊಂಡು ಡ್ರ್ಯಾಗ್ ಮಾಡಿ.
05:27 ಈಗ ನಾವು ಹೈಡ್ರೋಜನ್ ಗಳನ್ನು ಮೀಥೈಲ್ ಗುಂಪುಗಳಾಗಿ ಪರಿವರ್ತಿಸುವುದು ಹೇಗೆ ಎಂದು ತೋರಿಸುವೆವು.
05:32 Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ ಮತ್ತು Change H To Methyl ಅನ್ನು ಕ್ಲಿಕ್ ಮಾಡಿ.
05:38 ಎಲ್ಲಾHydrogen ಗಳು ಈಗ Methyl ಗುಂಪುಗಾಳಾಗಿ ಪರಿವರ್ತನೆಗೊಂಡಿವೆ.
05:43 ಬದಲಾವಣೆಗಳನ್ನು ಅಂಡೂ ಮಾಡಲು, CTRL ಮತ್ತು Z ಕೀಲಿಗಳನ್ನು ಒಟ್ಟಿಗೆ ಒತ್ತಿ.
05:49 ನಾವು ನಿರ್ದಿಷ್ಟವಾದ hydrogen ಅಣುವನ್ನು ಆಯ್ಕೆ ಮಾಡಿಕೊಂಡು ಅದನ್ನು methyl ಗುಂಪಾಗಿ ಪರಿವರ್ತಿಸಬಹುದು.
05:55 ಟೂಲ್ ಬಾರ್ ನಲ್ಲಿರುವ Selection tool ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:59 ಆಯ್ಕೆಮಾಡಿಕೊಳ್ಳಲು ಕೊನೆಯ ಕಾರ್ಬನ್ ಅಣುವಿಗೆ ಹೊಂದಿಕೊಂಡಿರುವ hydrogen ಅನ್ನು ಕ್ಲಿಕ್ ಮಾಡಿ.
06:04 Build ಮೆನ್ಯುವಿಗೆ ಹೋಗಿ , Change H to Methyl ನ ಮೇಲೆ ಕ್ಲಿಕ್ ಮಾಡಿ.
06:10 ಆಯ್ಕೆ ಮಾಡಿಕೊಂಡ Hydrogen , methyl ಗುಂಪಾಗಿ ಬದಲಿಸ್ಪಡುತ್ತದೆ.
06:15 ಡಿಸೆಲೆಕ್ಟ್ ಮಾಡಲು, Ctrl, Shift ಮತ್ತು A ಕೀಲಿಗಳನ್ನು ಒಟ್ಟಿಗೆ ಒತ್ತಿ.
06:22 ಈಗ ಸ್ಟ್ರಕ್ಚರ್ ಗಳನ್ನು ಕಾಪಿ, ಪೇಸ್ಟ್ ಮತ್ತು ಜಾಯಿನ್(ಕೂಡಿಸುವುದು) ಹೇಗೆ ಎಂದು ನೋಡೋಣ.
06:28 ಹೊಸ ವಿಂಡೋವನ್ನು ಓಪನ್ ಮಾಡಲು, File-> New ಅನ್ನು ಕ್ಲಿಕ್ ಮಾಡಿ.
06:33 ನಾವು Maltose(ಮಾಲ್ಟೋಸ್) ಮೊಲಿಕ್ಯೂಲ್ ಅನ್ನು ರಚಿಸುವುದನ್ನು ಕಲಿಯುವೆವು.
06:37 Maltose ಇದು ಎರಡು glucose (ಗ್ಲುಕೋಸ್) ಮೊಲಿಕ್ಯೂಲ್ ಗಳಿಂದ ಮಾಡಲ್ಪಟ್ಟಿದೆ.
06:41 glucose ಮೊಲಿಕ್ಯೂಲ್ ಅನ್ನು ಇನ್ಸರ್ಟ್ ಮಾಡಲು, Build ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
06:46 ಕೆಳಕ್ಕೆ ಸ್ಕ್ರೋಲ್ ಮಾಡಿ, Insert -> Fragment ಅನ್ನು ಕ್ಲಿಕ್ ಮಾಡಿ.
06:51 Insert -> Fragment ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
06:55 ಈ ಪಟ್ಟಿಯ ಕೆಳಕ್ಕೆ ಸ್ಕ್ರೋಲ್ ಮಾಡಿ, Cyclic sugar (ಸೈಕ್ಲಿಕ್ ಶುಗರ್) ಫೋಲ್ಡರ್ ಅನ್ನು ಕ್ಲಿಕ್ ಮಾಡಿ.
07:01 ಒಂದು ಸಬ್-ಮೆನ್ಯು ಕಾಣಿಸುತ್ತದೆ.
07:04 ಕೆಳಕ್ಕೆ ಹೋಗಿ beta-d-glucopyranose.cml.(ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ಅನ್ನು ಆಯ್ಕೆ ಮಾಡಿ.
07:10 Insert ಬಟನ್ ನ ಮೇಲೆ ಕ್ಲಿಕ್ ಮಾಡಿ. ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ.
07:16 ಪ್ಯಾನಲ್ ನಲ್ಲಿ beta-D-glucopyranose.cml (ಬೀಟಾ-ಡಿ-ಗ್ಲುಕೋಪೈರಾನೋಸ್ ಡಾಟ್ ಸಿಎಮೆಲ್) ನೀಲಿ ಬಣ್ಣದಲ್ಲಿ ಕಾಣಿಸುತ್ತದೆ.
07:24 hand ಟೂಲ್ ಅನ್ನು ಬಳಸಿ ಇದನ್ನು ಮಧ್ಯಕ್ಕೆ ತನ್ನಿ.
07:28 ಈಗ ಇನ್ನೊಂದು glucose ಮೊಲಿಕ್ಯೂಲ್ ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡೋಣ.
07:33 ಮೆನ್ಯು ಬಾರ್ ನಲ್ಲಿರುವ Edit ಮೆನ್ಯುವನ್ನು ಕ್ಲಿಕ್ ಮಾಡಿ.
07:36 Copy ಯ ಮೇಲೆ ಕ್ಲಿಕ್ ಮಾಡಿ. ಮತ್ತೆ ಎಡಿಟ್ ಮೆನ್ಯುವಿನ ಕೆಳಗೆ ಸ್ಕ್ರೋಲ್ ಮಾಡಿ, Paste ಅನ್ನು ಕ್ಲಿಕ್ ಮಾಡಿ.
07:44 ಗಮನಿಸಿ: ಕಾಪಿ ಪೇಸ್ಟ್ ಮಾಡುವಾಗ ವಿಂಡೋ ಒಂದು ಕ್ಷಣ ಮಬ್ಬಾಗಿ(ಡಿಮ್) ನಂತರ ಸರಿಹೋಗುತ್ತದೆ.
07:51 ಪ್ಯಾನಲ್ ನಲ್ಲಿ ಮೊದಲಿರುವ ಮೊಲಿಕ್ಯೂಲ್ ನ ಮೇಲೆ ಹೊಸ ಮೊಲಿಕ್ಯೂಲ್ ಕಾಪಿಆಗಿ ಪೇಸ್ಟ್ ಆಗುತ್ತದೆ.
07:58 ಕರ್ಸರ್ ಹ್ಯಾಂಡ್ ಟೂಲ್ ಆಗಿ ಬದಲಾಗುತ್ತದೆ.
08:01 ಮೊದಲ ಮೊಲಿಕ್ಯೂಲ್ ನಿಂದ ಕಾಪಿ ಮಾಡಿದ ಮೊಲಿಕ್ಯೂಲ್ ಅನ್ನು ಹೊರತೆಗೆಯಿರಿ.
08:06 ಈಗ ಪ್ಯಾನಲ್ ನಲ್ಲಿ ಎರಡು ಬೇರ್ಪಟ್ಟ ಮೊಲಿಕ್ಯೂಲ್ ಗಳಿವೆ.
08:10 ಡಿಸೆಲೆಕ್ಟ್ ಮಾಡಲು Ctrl, Shift ಮತ್ತು A ಕೀಲಿಗಳನ್ನು ಒಟ್ಟಿಗೆ ಒತ್ತಿ.
08:17 ಈಗ ನಾವು ಮೊಲಿಕ್ಯೂಲ್ ಗಳಿಗೆ ಲೇಬಲ್ ಮಾಡೋಣ. ಇದು ಎಲ್ಲಾ ಅಣುಗಳ ಸ್ಥಾನವನ್ನು ಗುರುತಿಸಲು ಸಹಾಯಕವಾಗಿದೆ.
08:25 ಲೇಬಲ್ ಮಾಡಲು, Display Types ಡ್ರಾಪ್ ಡೌನ್ ಮೆನ್ಯುವಿನಲ್ಲಿ Label ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:32 Maltose ಅನ್ನು ಪಡೆಯಲು ನಾವು ನೀರಿನ ಅಣುವನ್ನು ತೆಗೆಯುವುದು ಅವಶ್ಯವಾಗಿದೆ.
08:37 ಮೊದಲ ಮೊಲಿಕ್ಯೂಲ್ ನ C-1 ನ OH ಗುಂಪನ್ನು ಮತ್ತು ಎರಡನೆಯ ಮೊಲಿಕ್ಯೂಲ್ ನ C-9 ದ ಹೈಡ್ರೋಜನ್ ಅನ್ನು ಡಿಲೀಟ್ ಮಾಡಿ.
08:46 Draw tool settings ನಲ್ಲಿ Carbon ಅನ್ನು ಆಯ್ಕೆ ಮಾಡಿ.
08:50 Bond Order ನಲ್ಲಿ Single ಅನ್ನು ಆಯ್ಕೆ ಮಾಡಿ.
08:54 Adjust Hydrogens ಚೆಕ್ ಬಾಕ್ಸ್ ಅನ್ನು ಅನ್ಚೆಕ್ ಮಾಡಿ.
08:58 ಮೊದಲ ಮೊಲಿಕ್ಯೂಲ್ ನ C-1 ಮತ್ತು ಎರಡನೇ ಮೊಲಿಕ್ಯೂಲ್ ನ C-9 ಗಳನ್ನುoxygen ಅಣುವಿನ ಮೂಲಕ ಜೋಡಿಸಲು , ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ.
09:07 ಈಗ ನಾವು ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಬೇಕು.
09:11 Auto Optimization tool ಅನ್ನು ಆಯ್ಕೆ ಮಾಡಿ.
09:15 ಎಡ ಭಾಗದಲ್ಲಿ , Auto Optimization settings ಮೆನ್ಯು ಕಾಣಿಸುತ್ತದೆ.
09:20 MMFF94 ಫೋರ್ಸ್ ಫೀಲ್ಡ್ ಅನ್ನು ಆಯ್ಕೆ ಮಾಡಿ ಮತ್ತು Start ನ ಮೇಲೆ ಕ್ಲಿಕ್ ಮಾಡಿ.
09:27 ಆಪ್ಟಿಮೈಜೇಶನ್ ಪೂರ್ಣಗೊಳ್ಳಲು ಕೆಲವು ಸೆಕೆಂಡ್ ಗಳನ್ನು ತೆಗೆದುಕೊಳ್ಳಬಹುದು. ಈಗ ನೀವು ಲೇಬಲ್ ಗಳನ್ನು ತೆಗೆಯಬಹುದು.
09:35 ಈಗ ನಾವು ಪ್ಯಾನಲ್ ನಲ್ಲಿ ಆಪ್ಟಿಮೈಜ್ ಆಗಿರುವ Maltose ನ ಸ್ಟ್ರಕ್ಚರ್ ಅನ್ನು ನೋಡಬಹುದು.
09:40 ಸಂಕ್ಷಿಪ್ತವಾಗಿ, ನಾವು ಈ ಟ್ಯುಟೋರಿಯಲ್ ನಲ್ಲಿ ನಾವು: ಅಣುಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
09:47 ಬಾಂಡ್ ಗಳನ್ನು ಸೇರಿಸುವುದು ಮತ್ತು ಡಿಲೀಟ್ ಮಾಡುವುದು,
09:50 ಬಾಂಡ್ ಗಳನ್ನು ತಿರುಗಿಸಿವುದು(ರೊಟೇಟ್ ಮಾಡುವುದು)
09:52 ಬಾಂಡ್ ನ ಉದ್ದವನ್ನು ಬದಲಿಸುವುದು,
09:54 ಹೈಡ್ರೋಜನ್ ಅನ್ನು ಮೀಥೈಲ್ ಗುಂಪಾಗಿ ಬದಲಿಸುವುದು,
09:56 ಸ್ಟ್ರಕ್ಚರ್ ಅನ್ನು ಕಾಪಿ ಮಾಡುವುದು, ಪೇಸ್ಟ್ ಮಾಡುವುದು ಮತ್ತು ಸೇರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
10:00 ಅಸೈನ್ಮೆಂಟ್: draw tool ಅನ್ನು ಬಳಸಿ, ಬ್ಯೂಟೇನ್ ಮೊಲಿಕ್ಯೂಲ್ ಅನ್ನು ರಚಿಸಿ.
10:06 ಇದನ್ನು 2,3 dimethyl Butane(2,3 ಡೈಮಿಥೈಲ್ ಬ್ಯೂಟೇನ್) ಆಗಿ ಪರಿವರ್ತಿಸಿ.
10:10 ಬಾಂಡ್ ಗಳನ್ನು ತಿರುಗಿಸಿ(ರೊಟೇಟ್ ಮಾಡಿ) ಮತ್ತು ಬಾಂಡ್ ನ ಉದ್ದಗಳನ್ನು ಬದಲಿಸಿ.
10:14 cellulose(ಸೆಲ್ಯುಲೋಸ್) ಮೊಲಿಕ್ಯೂಲ್ ಅನ್ನು ರಚಿಸಿ. (ಸುಳಿವು: Insert fragment library ಯಲ್ಲಿ D- glucose monomer ದೊರೆಯುತ್ತದೆ.)
10:22 UFF ಫೋರ್ಸ್ ಫೀಲ್ಡ್ ಅನ್ನು ಬಳಸಿ, ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಿ.
10:27 ಈ ವಿಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಕುರಿತು ಸಂಕ್ಷಿಪ್ತವಾಗಿ ತಿಳಿಸಿಕೊಡುತ್ತದೆ.

ನೀವು ಒಳ್ಳೆಯ ಬ್ಯಾಂಡ್ವಿಡ್ತ್ ಹೊಂದಿಲ್ಲದಿದ್ದಲ್ಲಿ ಡೌನ್ಲೋಡ್ ಮಾಡಿ ನೋಡಿಕೊಳ್ಳಬಹುದು.

10:36 ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಾಶಾಲೆಗಳನ್ನು ಏರ್ಪಡಿಸುತ್ತದೆ. ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
10:44 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD ಭಾರತ ಸರ್ಕಾರ ಧನಸಹಾಯ ಮಾಡುತ್ತದೆ.
10:52 ಅನುವಾದ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು

Contributors and Content Editors

Anjana310312, Sandhya.np14