Difference between revisions of "Linux-AWK/C2/Basics-of-awk/Kannada"

From Script | Spoken-Tutorial
Jump to: navigation, search
m (Nancyvarkey moved page Linux/C3/Basics-of-awk/Kannada to Linux-AWK/C2/Basics-of-awk/Kannada without leaving a redirect: New series)
 
(No difference)

Latest revision as of 06:42, 23 March 2018

Time Narration
00:01 Awk ಕಮಾಂಡ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸುಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು awk ಕಮಾಂಡ್ ನ ಬಳಕೆಯನ್ನು,
00:09 ಕೆಲವು ಉದಾಹರಣೆಗಳ ಮೂಲಕ ಕಲಿಯುವೆವು.
00:12 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು

Ubuntu Linux OS 12.04 ನೇ ಆವೃತ್ತಿ, ಮತ್ತು GNU BASH 4.2.24 ನೇ ಆವೃತ್ತಿಯನ್ನು ಬಳಸುತ್ತಿದ್ದೇನೆ.

00:23 ದಯವಿಟ್ಟು ಗಮನಿಸಿ: ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು , GNU bash ಆವೃತ್ತಿ 4 ಅಥವಾ ಅದಕ್ಕಿಂತ ಹೆಚ್ಚಿನ ಆವೃತ್ತಿಯ ಬಳಕೆಯನ್ನು ಶಿಫಾರಸು ಮಾಡಲಾಗಿದೆ.
00:29 ನಾವು awk ನ ಪರಿಚಯದೊಂದಿಗೆ ಪ್ರಾರಂಭಿಸೋಣ.
00:33 Awk ಕಮಾಂಡ್ ಎನ್ನುವುದು ಪ್ರಬಲವಾದ “ಟೆಕ್ಸ್ಟ್ ಮ್ಯಾನಿಪುಲೇಷನ್ ಟೂಲ” ಆಗಿದೆ.
00:38 Awk ಗೆ ಅಹೊ, ವೈನ್ಬರ್ಗರ್ ಮತ್ತು ಕೆರ್ನಿಘಾನ್ ಎಂದು ಅದರ ಲೇಖಕರ ಹೆಸರನ್ನು ಇಡಲಾಗಿದೆ.
00:44 ಇದು ಹಲವಾರು ಕಾರ್ಯಗಳನ್ನು ಮಾಡಬಹುದು.
00:46 ಇದು ಒಂದು ರೆಕಾರ್ಡ್ ನ ಫೀಲ್ಡ್ ನ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತದೆ.
00:51 ಆದ್ದರಿಂದ, ಇದು ರೆಕಾರ್ಡ್ ನ ಪ್ರತಿಯೊಂದು ಫೀಲ್ಡ್ ಅನ್ನು ಸುಲಭವಾಗಿ ಆಕ್ಸೆಸ್ ಮತ್ತು ಎಡಿಟ್ ಮಾಡಬಹುದು.
00:56 ನಾವು ಕೆಲವು ಉದಾಹರಣೆಗಳನ್ನು ನೋಡೋಣ.
00:59 ಈ ಕಮಾಂಡ್ ನ ಬಳಕೆಯನ್ನು ಕಲಿಸಲು, ನಾವು awkdemo.txt ಫೈಲ್ ಅನ್ನು ಬಳಸುತ್ತೇವೆ.
01:04 ನಾವು Awkdemo.txt ಫೈಲ್ ನಲ್ಲಿರುವುದನ್ನು ನೋಡೋಣ.
01:09 ಈಗ Ctrl + Alt ಮತ್ತು T ಕೀಗಳನ್ನು ನಿಮ್ಮ ಕೀಬೋರ್ಡ್ನಲ್ಲಿ ಏಕಕಾಲದಲ್ಲಿ ಒತ್ತುವ ಮೂಲಕ Terminal ವಿಂಡೋವನ್ನು ತೆರೆಯಿರಿ.
01:17 ನಾವು Awk ಕಮಾಂಡ್ ಅನ್ನು ಬಳಸಿ ಪ್ರಿಂಟ್ ಮಾಡುವುದನ್ನು ನೋಡೋಣ.
01:22 ಈಗ ಟೈಪ್ ಮಾಡಿ: awk space (within single quote) (front slash) '/Pass (front slash)/(opening curly bracket) {print (closing curly bracket)} (after the quotes) space awkdemo.txt
01:38 Enter ಅನ್ನು ಒತ್ತಿರಿ.
01:40 ಇಲ್ಲಿ, Pass ಆಯ್ಕೆಯ ನಿರ್ಣಾಯಕ ಅಂಶವಾಗಿದೆ.
01:44 awkdemo ದಲ್ಲಿ, Pass ಶಬ್ದವನ್ನು ಹೊಂದಿರುವ ಎಲ್ಲ ಸಾಲುಗಳನ್ನು ಪ್ರಿಂಟ್ ಮಾಡಲಾಗುತ್ತದೆ.
01:49 ಇಲ್ಲಿರುವ ಕ್ರಿಯೆಯು print ಎಂದು ಆಗಿದೆ.
01:52 ನಾವು awk ನಲ್ಲಿ regular expressions ಅನ್ನು ಕೂಡ ಬಳಸಬಹುದು.
01:56 ಉದಾಹರಣೆಗೆ, ನಾವು "Mira" ಎಂಬ ಹೆಸರಿನ ವಿದ್ಯಾರ್ಥಿಗಳ ರೆಕಾರ್ಡ್ ಗಳನ್ನು ಪ್ರಿಂಟ್ ಮಾಡಬೇಕೆಂದರೆ :
02:01 ಹೀಗೆ ಟೈಪ್ ಮಾಡುತ್ತೇವೆ :

awk space '/M (opening square bracket) [ ei (closing square bracket) ]*ra */{print}' space awkdemo.txt

02:27 Enter ನ್ನು ಒತ್ತಿರಿ.
02:29 * , ಅದರ ಹಿಂದಿನ ಅಕ್ಷರವು ಒಂದು ಅಥವಾ ಅದಕ್ಕಿಂತ ಹೆಚ್ಚು ಸಲ ಕಂಡುಬಂದಿರುವುದನ್ನು ಹೇಳುತ್ತದೆ .
02:33 ಹೀಗಾಗಿ, i, e ಮತ್ತು a ಗಳು ಒಂದಕ್ಕಿಂತ ಹೆಚ್ಚು ಸಲ ಕಂಡುಬಂದಿರುವ ನಮೂದುಗಳನ್ನು ಪಟ್ಟಿ ಮಾಡಲಾಗುವುದು.
02:40 ಉದಾಹರಣೆಗೆ,
02:42 ‘M I R A’ ಎಂದು ಇರುವ ಮೀರಾ,
02:45 ‘M ಡಬಲ್ E R A’ ಎಂದು ಇರುವ ಮೀರಾ,
02:47 ಮತ್ತು ‘M ಡಬಲ್ E R ಡಬಲ್ A ‘ಎಂದು ಇರುವ ಮೀರಾ.
02:52 awk, extended regular expressions (ERE) ಅನ್ನು ಬೆಂಬಲಿಸುತ್ತದೆ.
02:58 ಇದರರ್ಥ, ನಾವು PIPE ನಿಂದ ಬೇರ್ಪಟ್ಟ ಅನೇಕ ಪ್ಯಾಟರ್ನ್ ಗಳನ್ನು ಹೊಂದಿಸಬಹುದು.
03:03 ನಾನು ಪ್ರಾಂಪ್ಟನ್ನು ಕ್ಲಿಯರ್ ಮಾಡುತ್ತೇನೆ .
03:05 electrical(front slash)space (opening curly brackets)/{print}(closing curly brackets) quotes ನಂತರ space awkdemo.txt
03:23 Enter ಅನ್ನು ಒತ್ತಿರಿ.
03:26 ಈಗ "civil" ಮತ್ತು "electrical" ಎರಡಕ್ಕೂ ನಮೂದುಗಳನ್ನು ಕೊಡಲಾಗಿದೆ.
03:31 ನಮ್ಮ ಸ್ಲೈಡ್ಗಳಿಗೆ ಹಿಂತಿರುಗೋಣ.
03:34 ಪ್ಯಾರಾಮೀಟರ್ಸ್ : awk, ಒಂದು ವಾಕ್ಯದ ಪ್ರತ್ಯೇಕ ಫೀಲ್ಡ್ ಗಳನ್ನು ಗುರುತಿಸಲು ಕೆಲವು ವಿಶೇಷ ಪ್ಯಾರಾಮೀಟರ್ ಗಳನ್ನು ಹೊಂದಿದೆ.
03:41 $1 (ಡಾಲರ್ 1) ಮೊದಲನೇ ಫೀಲ್ಡ್ ಅನ್ನು ಸೂಚಿಸುತ್ತದೆ.
03:45 ಹೀಗೆಯೇ, ನಾವು $ 2, $ 3 ಈ ರೀತಿಯಲ್ಲಿ ಉಳಿದ ಫೀಲ್ಡ್ ಗಳಿಗೆ ಬಳಸಬಹುದು.
03:53 $0 ಸಂಪೂರ್ಣ ಸಾಲನ್ನು ಪ್ರತಿನಿಧಿಸುತ್ತದೆ.
03:56 ನಮ್ಮ ಟರ್ಮಿನಲ್ಗೆ ಹಿಂತಿರುಗೋಣ.
03:59 Awkdemo.txt ಫೈಲ್ನನಲ್ಲಿ ಪ್ರತ್ಯೇಕ ಪದವು PIPE ನಿಂದ ಬೇರ್ಪಟ್ಟಿದೆ ಎಂಬುದನ್ನು ಗಮನಿಸಿ.
04:05 ಈ ಸಂದರ್ಭದಲ್ಲಿ PIPE ಅನ್ನು delimiter ಎಂದು ಕರೆಯಲಾಗುತ್ತದೆ.
04:09 delimiter, ಪರಸ್ಪರ ಪದಗಳನ್ನು ಬೇರ್ಪಡಿಸುತ್ತದೆ.
04:13 delimiter, ಒಂದು ಸ್ಪೇಸ್ ಕೂಡ ಆಗಿರಬಹುದು.
04:16 delimiter ಅನ್ನು ಸೂಚಿಸಲು, ನಾವು - capital F flag ನಂತರ ಒಂದು delimiter ಅನ್ನು ಕೊಡಬೇಕು.
04:24 ಈಗ ನಾವು ನೋಡೋಣ. ಹೀಗೆ ಟೈಪ್ ಮಾಡಿ: awk space minus capital F space within double quotes PIPE space within single quote front-slash civil PIPE electrical front-slash opening curly bracket print space dollar0 closing curly bracket after the quotes space awkdemo.txt
04:51 Enter ಅನ್ನು ಒತ್ತಿರಿ.
04:53 ನಾವು $0 ಅನ್ನು ಬಳಸಿದ್ದರಿಂದ ಇದು ಸಂಪೂರ್ಣ ವಾಕ್ಯವನ್ನು ಪ್ರಿಂಟ್ ಮಾಡುತ್ತದೆ .
04:58 names ಮತ್ತು stream of students ಇವು ಎರಡನೆಯ ಮತ್ತು ಮೂರನೆಯ ಫೀಲ್ಡ್ ಗಳಾಗಿವೆ ಎಂದು ಗಮನಿಸಿ.
05:04 ನಮಗೆ ಕೇವಲ ಎರಡು ಫೀಲ್ಡ್ ಗಳನ್ನು ಪ್ರಿಂಟ್ ಮಾಡಬೇಕಾಗಿದೆ ಎನ್ನಿ .
05:08 ಮೇಲಿನ ಕಮಾಂಡ್ ನಲ್ಲಿ , ನಾವು $0 ಅನ್ನು $2 ಮತ್ತು $3 ನಿಂದ ಬದಲಾಯಿಸುತ್ತೇವೆ.
05:15 Enter ಅನ್ನು ಒತ್ತಿರಿ.
05:18 ಎರಡು ಫೀಲ್ಡ್ ಗಳನ್ನು ಮಾತ್ರ ತೋರಿಸಲಾಗಿದೆ.
05:21 ಇದು ಸರಿಯಾದ ಫಲಿತಾಂಶವನ್ನು ಕೊಡುತ್ತಿದ್ದರೂ, ಡಿಸ್ಪ್ಲೇಯು ಜ್ಯಾಗ್ಡ್ ಇದೆ ಮತ್ತು ಫಾರ್ಮ್ಯಾಟ್ ಆಗಿಲ್ಲ.
05:26 C ಶೈಲಿಯ printf ಸ್ಟೇಟ್ಮೆಂಟ್ ಅನ್ನು ಬಳಸಿ, ನಾವು ಫಾರ್ಮ್ಯಾಟ್ ಮಾಡಲಾದ ಔಟ್ಪುಟ್ ಅನ್ನು ಒದಗಿಸಬಹುದು.
05:32 ಬಿಲ್ಟ್-ಇನ್ ವೇರಿಯಬಲ್ NR ಅನ್ನು ಬಳಸಿಕೊಂಡು, ನಾವು ಸೀರಿಯಲ್ ನಂಬರ್ ಅನ್ನು ಕೂಡ ಒದಗಿಸಬಹುದು.
05:40 ನಾವು ನಂತರ ಬಿಲ್ಟ್-ಇನ್ ವೇರಿಯೇಬಲ್ ಗಳ ಬಗ್ಗೆ ಇನ್ನಷ್ಟು ನೋಡೋಣ.
05:44 ಈಗ ಟೈಪ್ ಮಾಡಿ: awk space minus capital F within double quotes (Pipe) after the double quotes space 'front-slash Pass front slash opening curly bracket printf (within double quotes) "percentage sign 4d space percentage sign -25s space percentage sign minus 15s space backslash n”, after the double quotes NR , $2, $3 closing curly bracket' after the single quote space awkdemo.txt
06:33 Enter ಅನ್ನು ಒತ್ತಿರಿ. ನಾವು ವ್ಯತ್ಯಾಸವನ್ನು ನೋಡುತ್ತೇವೆ.
06:37 ಇಲ್ಲಿ, NR ಇದು ರೆಕಾರ್ಡ್ಗಳ ಸಂಖ್ಯೆಯನ್ನು ಪ್ರತಿನಿಧಿಸುತ್ತದೆ.
06:41 ಇಲ್ಲಿ, ರೆಕಾರ್ಡ್ ಗಳು integer ಗಳಾಗಿವೆ. ಆದ್ದರಿಂದ ನಾವು %d ಎಂದು ಬರೆದಿದ್ದೇವೆ.
06:45 Name ಮತ್ತು Stream ಇವುಗಳು string ಗಳಾಗಿವೆ. ಆದ್ದರಿಂದ ನಾವು %s ಅನ್ನು ಬಳಸಿದ್ದೇವೆ.
06:50 ಇಲ್ಲಿ 25s, 25 ಸ್ಪೇಸ್ ಗಳನ್ನು Name ಫೀಲ್ಡ್ ಗಾಗಿ ಕಾಯ್ದಿರಿಸುತ್ತದೆ.
06:55 15s, 15 ಸ್ಪೇಸ್ ಗಳನ್ನು Stream ಫೀಲ್ಡ್ ಗಾಗಿ ಕಾಯ್ದಿರಿಸುವುದು.
07:01 ಔಟ್ಪುಟ್ ಅನ್ನು ಲೆಫ್ಟ್-ಜಸ್ಟಿಫೈ ಮಾಡಲು ಮೈನಸ್ ಚಿಹ್ನೆಯನ್ನು ಬಳಸಲಾಗುತ್ತದೆ.
07:05 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
07:08 ನಾವು ನಮ್ಮ ಸ್ಲೈಡ್ ಗಳಿಗೆ ಹಿಂತಿರುಗೋಣ.
07:10 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು : * awk ಅನ್ನು ಬಳಸಿ ಪ್ರಿಂಟ್ ಮಾಡಲು
07:16 *awk ನಲ್ಲಿ ರೆಗ್ಯುಲರ್ ಎಕ್ಸ್ಪ್ರೆಶನ್ ಗಳು * ಒಂದು ನಿರ್ದಿಷ್ಟ ಸ್ಟ್ರೀಮ್ ಗಾಗಿ ನಮೂದುಗಳನ್ನು ಪಟ್ಟಿ ಮಾಡಲು
07:21 * ಎರಡನೆಯ ಮತ್ತು ಮೂರನೇ ಫೀಲ್ಡ್ ಗಳನ್ನು ಮಾತ್ರ ಪಟ್ಟಿ ಮಾಡಲು
07:24 * ಫಾರ್ಮ್ಯಾಟ್ ಮಾಡಲಾದ ಔಟ್ಪುಟ್ ಅನ್ನು ಪ್ರದರ್ಶಿಸಲು ಕಲಿತಿದ್ದೇವೆ .
07:28 ಒಂದು ಅಸೈನ್ಮೆಂಟ್, Ankit Saraf ನ roll no., stream ಮತ್ತು marks ಗಳನ್ನು ಪ್ರದರ್ಶಿಸಿ.
07:34 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
07:37 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
07:40 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:45 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:48 ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
07:52 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org
07:58 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
08:01 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:07 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

08:12 IIT Bombay' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಮತ್ತು ಪ್ರವಾಚಕಿ ಗ್ಲೋರಿಯ ನಂದಿಹಾಳ

ಧನ್ಯವಾದಗಳು.

Contributors and Content Editors

Glorianandihal, Nancyvarkey