Difference between revisions of "Scilab/C2/Scripts-and-Functions/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 267: | Line 267: | ||
|- | |- | ||
| 13:10 | | 13:10 | ||
− | |ಧನ್ಯವಾದಗಳು | + | |ಧನ್ಯವಾದಗಳು. |
|} | |} |
Latest revision as of 23:01, 7 November 2017
Time | Narration |
00:01 | ಸೈಲ್ಯಾಬ್ ನ Scripts and Functions ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆಲ್ಲಾ ಸ್ವಾಗತ. |
00:06 | ಸೈಲ್ಯಾಬ್ ನಲ್ಲಿರುವ file formats ನ ಸಂಕ್ಷಿಪ್ತ ಪರಿಚಯದೊಂದಿಗೆ ನಾವು ಪ್ರಾರಂಭಿಸೋಣ. |
00:12 | ನಮಗೆ ಹಲವಾರು ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡಬೇಕಾದಾಗ, ಈ ಸ್ಟೇಟ್ಮೆಂಟ್ ಗಳನ್ನು ಸೈಲ್ಯಾಬ್-ಎಡಿಟರ್ ನೊಂದಿಗೆ ಒಂದು ಫೈಲ್ ನಲ್ಲಿ ಬರೆದುಕೊಳ್ಳುವುದು ಹೆಚ್ಚು ಅನುಕೂಲಕರ ಆಗಬಹುದು. |
00:21 | ಇವುಗಳನ್ನು SCRIPT ಫೈಲ್ ಗಳು ಎಂದು ಕರೆಯುತ್ತಾರೆ. |
00:24 | ಇಂತಹ ಸ್ಕ್ರಿಪ್ಟ್ ಫೈಲ್ ನಲ್ಲಿ ಬರೆದ ಕಮಾಂಡ್ ಗಳನ್ನು ಎಕ್ಸಿಕ್ಯೂಟ್ ಮಾಡಲು, exec ಫಂಕ್ಷನ್, ನಂತರ ಸ್ಕ್ರಿಪ್ಟ್ ಫೈಲ್-ನೇಮ್ ಇವುಗಳನ್ನು ಬಳಸಬಹುದು. |
00:34 | ಈ ಫೈಲ್ ಗಳು, ಸಾಮಾನ್ಯವಾಗಿ ಅದರಲ್ಲಿರುವ ವಿಷಯವನ್ನು ಆಧರಿಸಿ, .sce ಅಥವಾ .sci ಎಕ್ಸ್ಟೆನ್ಷನ್ ಅನ್ನು ಹೊಂದಿರುತ್ತವೆ. |
00:42 | .sci ಎಕ್ಸ್ಟೆನ್ಷನ್ ಅನ್ನು ಹೊಂದಿದ ಫೈಲ್ ಗಳು, ಸೈಲ್ಯಾಬ್ ಫಂಕ್ಷನ್ ಅಥವಾ ಯೂಸರ್ ಡಿಫೈನ್ಡ್ ಫಂಕ್ಷನ್ ಅಥವಾ ಎರಡನ್ನೂ ಹೊಂದಿರುತ್ತವೆ. |
00:51 | ಈ ಫೈಲ್ ಗಳನ್ನು ಎಕ್ಸಿಕ್ಯೂಟ್ ಮಾಡಿದಾಗ, ಫಂಕ್ಷನ್ ಗಳನ್ನು ‘ಸೈಲ್ಯಾಬ್ ಎನ್ವಿರಾನ್ಮೆಂಟ್’ ಗೆ (Scilab environment) ಲೋಡ್ ಮಾಡಲಾಗುತ್ತದೆ, ಆದರೆ ಅವುಗಳನ್ನು ಎಕ್ಸಿಕ್ಯೂಟ್ ಮಾಡುವುದಿಲ್ಲ. |
01:00 | ಆದರೆ .sce ಎಕ್ಸ್ಟೆನ್ಷನ್ ಅನ್ನು ಹೊಂದಿದ ಫೈಲ್ ಗಳು, ಸೈಲ್ಯಾಬ್ ಫಂಕ್ಷನ್ ಮತ್ತು ಯೂಸರ್ ಡಿಫೈನ್ಡ್ ಫಂಕ್ಷನ್ ಗಳನ್ನು ಹೊಂದಿರುತ್ತವೆ. |
01:08 | ದಯವಿಟ್ಟು ಗಮನಿಸಿ: ಎಕ್ಸ್ಟೆನ್ಷನ್ ಅನ್ನು .sce ಮತ್ತು .sci ಎಂದು ಹೆಸರಿಸುವುದು ನಿಯಮವೇನೂ ಅಲ್ಲ. ಆದರೆ ಇದು ಸೈಲ್ಯಾಬ್ ಸಮುದಾಯದವರು ಅನುಸರಿಸುವ ಒಂದು ಸಂಪ್ರದಾಯ. |
01:21 | ನಾವು ಕಂಪ್ಯೂಟರ್ ನಲ್ಲಿ ‘ಸೈಲ್ಯಾಬ್ ಕಾನ್ಸೋಲ್ ವಿಂಡೋ’ವನ್ನು ಓಪನ್ ಮಾಡೋಣ. |
01:27 | ‘ಕಮಾಂಡ್ ಪ್ರಾಂಪ್ಟ್’ ನಲ್ಲಿ pwd ಕಮಾಂಡ್ ಅನ್ನು ಟೈಪ್ ಮಾಡಿ ‘ಪ್ರೆಸೆಂಟ್ ವರ್ಕಿಂಗ್ ಡೈರಕ್ಟರಿ’ ಯಾವುದೆಂದು ನೋಡಿ. |
01:35 | ‘ಸೈಲ್ಯಾಬ್ ಎಡಿಟರ್’ ಅನ್ನು ತೆರೆಯಲು, ‘ಸೈಲ್ಯಾಬ್ ಕನ್ಸೋಲ್ ವಿಂಡೋ’ ನ ಟಾಸ್ಕ್-ಬಾರ್ ಗೆ ಹೋಗಿ ಮತ್ತು Editor ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
01:49 | ನಾನು ಒಂದು ಫೈಲ್ ನಲ್ಲಿ ಈಗಾಗಲೇ ಕಮಾಂಡ್ ಗಳನ್ನು ಟೈಪ್ ಮಾಡಿದ್ದೇನೆ ಮತ್ತು ಅದನ್ನು helloworld.sce ಎಂದು ಸೇವ್ ಮಾಡಿದ್ದೇನೆ. ಆದ್ದರಿಂದ, ನಾನು ಆ ಫೈಲ್ ಅನ್ನು Open a file ಶಾರ್ಟ್ಕಟ್ ಐಕಾನ್ ಅನ್ನು ಒತ್ತಿ ಓಪನ್ ಮಾಡುತ್ತೇನೆ. |
02:03 | helloworld.sce ಫೈಲ್ ಅನ್ನು ಆರಿಸಿಕೊಂಡು, 'Open' ನ ಮೇಲೆ ಕ್ಲಿಕ್ ಮಾಡಿ. |
02:10 | ನೀವು ಕಮಾಂಡ್ ಗಳನ್ನು ಒಂದು ಹೊಸ ಫೈಲ್ ನಲ್ಲಿ ಟೈಪ್ ಮಾಡಿ, ಆ ಫೈಲನ್ನು, 'File' ಮೆನ್ಯುವಿನ ಮೂಲಕ, ‘ಕರೆಂಟ್ ವರ್ಕಿಂಗ್ ಡೈರಕ್ಟರಿ’ಯಲ್ಲಿ, helloworld.sce ಎಂದು ಸೇವ್ ಮಾಡಬಹುದು. |
02:20 | ‘ಸೈಲ್ಯಾಬ್ ಎಡಿಟರ್’ ನ ಮೆನ್ಯು ಬಾರ್ ನಲ್ಲಿರುವ Execute ಬಟನ್ ಗೆ ಹೋಗಿ ಮತ್ತು Load into Scilab ಆಯ್ಕೆಯನ್ನು ಆರಿಸಿಕೊಳ್ಳಿ. |
02:29 | ಇದು ಫೈಲ್ ಅನ್ನು, ‘ಸೈಲ್ಯಾಬ್ ಕನ್ಸೋಲ್’ ನಲ್ಲಿ ಲೋಡ್ ಮಾಡುವುದು. |
02:34 | ಫೈಲ್ ಅನ್ನು ಕನ್ಸೋಲ್ ನಲ್ಲಿ ಲೋಡ್ ಮಾಡಿದ ನಂತರ, ಈ ಸ್ಕ್ರಿಪ್ಟ್, ನೀವು ನೋಡುತ್ತಿರುವ ಔಟ್ಪುಟ್ ಅನ್ನು ಕೊಡುತ್ತದೆ. |
02:43 | ಇದು, ಕಮಾಂಡ್ ಗಳು ಮತ್ತು ಅವುಗಳಿಂದ ಪಡೆದ ಔಟ್ಪುಟ್ ಗಳು ಎರಡನ್ನೂ ಒಳಗೊಂಡಿದೆ. |
02:49 | ಈಗ ‘a’ ದ ವ್ಯಾಲ್ಯೂವನ್ನು 1 ಎಂದು ಬದಲಾಯಿಸಿ. |
02:55 | ಎಡಿಟರ್ ನಲ್ಲಿ, File ಮೆನ್ಯುಗೆ ಹೋಗಿ ಮತ್ತು Save ಅನ್ನು ಕ್ಲಿಕ್ ಮಾಡಿ. |
03:02 | ನಾವು ‘ಸೈಲ್ಯಾಬ್ ಇಂಟರ್ಪ್ರಿಟರ್’ ನಲ್ಲಿ, exec ಕಮಾಂಡ್ ಅನ್ನು ಬಳಸಿ, ಸ್ಕ್ರಿಪ್ಟ್ ಅನ್ನು ನೇರವಾಗಿ ಎಕ್ಸಿಕ್ಯೂಟ್ ಮಾಡಬಹುದು. ಸ್ಕ್ರಿಪ್ಟ್ ಫೈಲ್ ಗೆ ಪಾಥ್ ಅನ್ನು ಈ ರೀತಿಯಾಗಿ ಕೊಡಿ: |
03:12 | exec into brackets into double quotes helloworld.sce, ಎಂದರೆ ಫೈಲ್ ನೇಮ್, ಮತ್ತು Enter ಅನ್ನು ಒತ್ತಿ. |
03:31 | exec ಫಂಕ್ಷನ್ ನ ಬಳಕೆಯಿಂದ ಸಹ, ಸ್ಕ್ರಿಪ್ಟ್ ಫೈಲ್, ಅದೇರೀತಿಯ ಔಟ್ಪುಟ್ ಅನ್ನು ಕೊಡುತ್ತದೆ. |
03:37 | ಈಗ ನಾವು function ಗಳ ಬಗ್ಗೆ ತಿಳಿದುಕೊಳ್ಳೋಣ. |
03:39 | ಒಂದು ಫಂಕ್ಷನ್ ನ ಡೆಫಿನೇಶನ್, function ಎಂಬ ಕೀವರ್ಡ್ ನೊಂದಿಗೆ ಪ್ರಾರಂಭವಾಗಿ endfunction ಕೀವರ್ಡ್ ನೊಂದಿಗೆ ಕೊನೆಗೊಳ್ಳುತ್ತದೆ. |
03:46 | ನಾನು ‘ಸೈಲ್ಯಾಬ್ ಎಡಿಟರ್’ ಅನ್ನು ಬಳಸಿ, function.sci ನಲ್ಲಿ ಒಂದು ಫಂಕ್ಷನ್ ಫೈಲ್ ಅನ್ನು ಈಗಾಗಲೇ ಸೇವ್ ಮಾಡಿದ್ದೇನೆ. |
03:57 | ನಾನು ಆ ಫೈಲ್ ಅನ್ನು ಓಪನ್ ಮಾಡುತ್ತೇನೆ. |
04:03 | ನೀವು ನೋಡುವಂತೆ, ಫಂಕ್ಷನ್ ಅನ್ನು ಇಲ್ಲಿ ಡಿಫೈನ್ ಮಾಡಲಾಗಿದೆ. |
04:08 | ಇಲ್ಲಿ, ಫಂಕ್ಷನ್ ನ ಹೆಸರು radians2degrees (ರೇಡಿಯನ್ಸ್ ಟು ಡಿಗ್ರೀಸ್) ಆಗಿದ್ದು, degrees, ಔಟ್ಪುಟ್ ಪ್ಯಾರಾಮೀಟರ್ ಮತ್ತು |
04:21 | radians, ಇನ್ಪುಟ್ ಪ್ಯಾರಾಮೀಟರ್ ಆಗಿವೆ. |
04:26 | Execute ಮೆನು ಆಯ್ಕೆಯನ್ನು ಬಳಸಿ, ನಾನು ಈ ಫಂಕ್ಷನ್ ಅನ್ನು ಸೈಲ್ಯಾಬ್ ನಲ್ಲಿ ಲೋಡ್ ಮಾಡುತ್ತೇನೆ. |
04:40 | ಈಗ ಸೈಲ್ಯಾಬ್ ಕನ್ಸೋಲ್ ನಲ್ಲಿ, ಫಂಕ್ಷನ್, ಲೋಡ್ ಆಗಿದೆ. |
04:44 | ಇದನ್ನು exec ಕಮಾಂಡ್ ಅನ್ನು ಬಳಸಿ ಕೂಡ ಲೋಡ್ ಮಾಡಬಹುದು. |
04:47 | ಒಮ್ಮೆ ಫಂಕ್ಷನ್ ಲೋಡ್ ಆದಮೇಲೆ, ಇದನ್ನು ಬೇರೆ ಯಾವುದೇ ಸೈಲ್ಯಾಬ್ ಫಂಕ್ಷನ್ ನಂತೆ, ನಿರ್ದಿಷ್ಟವಾದ ಆರ್ಗ್ಯುಮೆಂಟ್ ಗಳನ್ನು ಇದಕ್ಕೆ ಪಾಸ್ ಮಾಡುವುದರ ಮೂಲಕ ಕಾಲ್ ಮಾಡಬಹುದು. |
04:56 | ಪರ್ಸೆಂಟ್ ಚಿಹ್ನೆಯನ್ನು (%) ಮತ್ತು ಅದರ ಬಳಕೆಯ ಕಾರಣವನ್ನು ನೆನಪಿಸಿಕೊಳ್ಳಿ. |
05:02 | ಈಗ ನಾವು radians2degrees of %pi/2 (ರೇಡಿಯನ್ಸ್ ಟು ಡಿಗ್ರೀಸ್ ಆಫ್ ಪರ್ಸೆಂಟ್ ಪೈ ಬೈ ಟು) ಮತ್ತು radians2degrees of %pi/4 (ರೇಡಿಯನ್ಸ್ ಟು ಡಿಗ್ರೀಸ್ ಆಫ್ ಪರ್ಸೆಂಟ್ ಪೈ ಬೈ ಫೋರ್) ಗಳ ವ್ಯಾಲ್ಯೂ ಗಳನ್ನು ಕಂಡುಹಿಡಿಯೋಣ. |
05:17 | percent pi/2 ಮತ್ತು radians2degrees percent pi by 4 (%pi/4). |
05:28 | ಈಗ ನಾವು, ಒಂದಕ್ಕಿಂತ ಹೆಚ್ಚು ಇನ್ಪುಟ್ ಮತ್ತು ಔಟ್ಪುಟ್ ಆರ್ಗ್ಯುಮೆಂಟ್ ಗಳನ್ನು ಹೊಂದಿರುವ ಒಂದು ಫಂಕ್ಷನ್ ಅನ್ನು ನೋಡುವೆವು. |
05:33 | ಈ ಫಂಕ್ಷನ್, polar (ಪೋಲಾರ್) ಕೋ-ಆರ್ಡಿನೇಟ್ ಗಳನ್ನು ಇನ್ಪುಟ್ ಆರ್ಗ್ಯೂಮೆಂಟ್ ಆಗಿ ಪಡೆದುಕೊಂಡು, rectangular ಕೋ-ಆರ್ಡಿನೇಟ್ ಗಳನ್ನು ಔಟ್ಪುಟ್ ಆರ್ಗ್ಯೂಮೆಂಟ್ ಆಗಿ ಹಿಂದಿರುಗಿಸುತ್ತದೆ. |
05:44 | ನಾನು ಈಗಾಗಲೇ ಟೈಪ್ ಮಾಡಿರುವ ಫೈಲ್ ಅನ್ನು ಓಪನ್ ಮಾಡುವೆನು. |
05:51 | ಇಲ್ಲಿ, polar2rect (ಪೋಲಾರ್ ಟು ರೆಕ್ಟ್) ಎಂಬ ಫಂಕ್ಷನ್ ಗೆ, x ಮತ್ತು y ಗಳು ಔಟ್ಪುಟ್ ಪ್ಯಾರಾಮೀಟರ್ ಗಳು ಮತ್ತು r ಮತ್ತು theta (ಥೀಟಾ) ಗಳು ಇನ್ಪುಟ್ ಪ್ಯಾರಾಮೀಟರ್ ಗಳಾಗಿರುವುದನ್ನು ನೀವು ನೋಡಬಹುದು. |
06:06 | ನಾನು exec ಆಯ್ಕೆಯನ್ನು ಬಳಸಿ, ಈ ಫಂಕ್ಷನ್ ಅನ್ನು ಸೈಲ್ಯಾಬ್ ನಲ್ಲಿ ಲೋಡ್ ಮಾಡುವೆನು. |
06:21 | ಒಮ್ಮೆ ಫಂಕ್ಷನ್ ಲೋಡ್ ಆಯಿತೆಂದರೆ, ನಾವು ಫಂಕ್ಷನ್ ಅನ್ನು ಕಾಲ್ ಮಾಡಬೇಕಾಗುತ್ತದೆ. ಈ ಫಂಕ್ಷನ್ ಗೆ, ಎರಡು ಇನ್ಪುಟ್ ಆರ್ಗ್ಯುಮೆಂಟ್ ಗಳು ಮತ್ತು ಎರಡು ಔಟ್ಪುಟ್ ಆರ್ಗ್ಯುಮೆಂಟ್ ಗಳು ಬೇಕು. |
06:31 | ಆದ್ದರಿಂದ, r = 2, |
06:37 | theta = 45; |
06:44 | ಈಗ ನಾವು ಇದನ್ನು ಕಾಲ್ ಮಾಡೋಣ. x1 ಕಾಮಾ y1, ಔಟ್ಪುಟ್ ಪ್ಯಾರಾಮೀಟರ್ ಗಳು, is equal to, ಫಂಕ್ಷನ್ ನ ಹೆಸರು polar2rect ಬ್ರಾಕೆಟ್ ನಲ್ಲಿ r ಕಾಮಾ theta, ಮತ್ತು Enter ಅನ್ನು ಒತ್ತಿ. |
07:25 | ನೀವು x1 ಮತ್ತು y1 ಗಳ ವ್ಯಾಲ್ಯು ಗಳನ್ನು ನೋಡುವಿರಿ. |
07:29 | ಸೈಲ್ಯಾಬ್ ನ ಒಂದು ವೈಶಿಷ್ಟ್ಯವೆಂದರೆ, ನೀವು ಒಂದೇ .sci ಫೈಲ್ ನಲ್ಲಿ, ಬೇಕಾದಷ್ಟು ಫಂಕ್ಷನ್ ಗಳನ್ನು ಡಿಫೈನ್ ಮಾಡಬಹುದು. |
07:38 | ಹೀಗೆ ಮಾಡುವಾಗ ದಯವಿಟ್ಟು ಇದನ್ನು ನೆನಪಿನಲ್ಲಿಡಿ: ಡಿಫಾಲ್ಟ್ ಆಗಿ, ಒಂದು ಫಂಕ್ಷನ್ ನಲ್ಲಿ ಡಿಫೈನ್ ಮಾಡಿದ ಎಲ್ಲಾ ವೇರಿಯೇಬಲ್ ಗಳೂ ಲೋಕಲ್ ಆಗಿರುತ್ತವೆ. ಒಂದು ಫಂಕ್ಷನ್ ನಲ್ಲಿ ಬಳಸಿದ ಈ ವೇರಿಯೇಬಲ್ ಗಳ ವ್ಯಾಪ್ತಿಯು (ಸ್ಕೋಪ್), ಫಂಕ್ಷನ್ ಡೆಫಿನಿಷನ್ ನ endfunction ಕೀ ವರ್ಡ್ ನೊಂದಿಗೆ ಕೊನೆಗೊಳ್ಳುತ್ತದೆ. |
07:55 | ಈ ವೈಶಿಷ್ಟ್ಯದ ಮುಖ್ಯ ಪ್ರಯೋಜನವೆಂದರೆ, ನಾವು ವೇರಿಯೇಬಲ್ ನ ಅದೇ ಹೆಸರುಗಳನ್ನು ವಿಭಿನ್ನ ಫಂಕ್ಷನ್ ಗಳಲ್ಲಿ ಬಳಸಬಹುದು. |
08:05 | ನಾವು 'global' ಆಯ್ಕೆಯನ್ನು ಬಳಸದಿದ್ದರೆ, ಈ ವೇರಿಯೇಬಲ್ ಗಳು ಬೆರಕೆಯಾಗುವುದಿಲ್ಲ. |
08:10 | ಗ್ಲೋಬಲ್ ವೇರಿಯೇಬಲ್ ಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, help global ಎಂದು ಟೈಪ್ ಮಾಡಿ. |
08:18 | ದಯವಿಟ್ಟು ಗಮನಿಸಿ, ಯಾವುದಾದರೂ ವೇರಿಯೇಬಲ್ ಅನ್ನು "watch" ಮಾಡಬೇಕಾಗಿದ್ದರೆ ಅಥವಾ ಫಂಕ್ಷನ್ ನಲ್ಲಿ ಮೊನಿಟರ್ ಮಾಡಬೇಕಿದ್ದರೆ, disp ಅವಶ್ಯಕವಾಗಿದೆ. |
08:26 | ಫಂಕ್ಷನ್ ಫೈಲ್ ನಲ್ಲಿ, ಸ್ಟೇಟ್ಮೆಂಟ್ ನ ಕೊನೆಯಲ್ಲಿ, ಸೆಮಿಕೋಲನ್ ಅನ್ನು (;) ಸೇರಿಸುವುದರಿಂದ ಆಗುವ ಪರಿಣಾಮವನ್ನು ನಿಮ್ಮಷ್ಟಕ್ಕೆ ನೀವೇ ತಿಳಿದುಕೊಳ್ಳಿ. |
08:34 | disp ಸ್ಟೇಟ್ಮೆಂಟ್ ಗಳಿಗೆ ಸಹ ಇದನ್ನು ಪ್ರಯತ್ನಿಸಿ. |
08:38 | Inline Functions: ಫಂಕ್ಷನ್ ಗಳು, ಸೂಕ್ತವಾಗಿ ಡಿಫೈನ್ ಮಾಡಿದ ಇನ್ಪುಟ್, ಔಟ್ಪುಟ್ ಗಳನ್ನು ಮತ್ತು ಲೋಕಲ್ ವೇರಿಯೇಬಲ್ ಗಳನ್ನು ಹೊಂದಿದ ಕೋಡ್ ನ ಭಾಗಗಳಾಗಿವೆ. |
08:46 | ಒಂದು ಫಂಕ್ಷನ್ ಅನ್ನು ಡಿಫೈನ್ ಮಾಡುವ ಅತ್ಯಂತ ಸರಳವಾದ ವಿಧಾನವೆಂದರೆ, deff() ಕಮಾಂಡ್ ಅನ್ನು ಬಳಸುವುದು. |
08:53 | ಸೈಲ್ಯಾಬ್, ಇನ್ಲೈನ್ ಫಂಕ್ಷನ್ ಗಳನ್ನು ಕ್ರಿಯೇಟ್ ಮಾಡಲು ಅನುಮತಿಸುತ್ತದೆ. ಮತ್ತು, ಇವು ಚಿಕ್ಕ body ಇರುವ ಫಂಕ್ಷನ್ ಗಳಿಗೆ ಉಪಯುಕ್ತವಾಗಿವೆ. |
09:02 | ಇದನ್ನು deff() ಫಂಕ್ಷನ್ ನ ಸಹಾಯದಿಂದ ಮಾಡಬಹುದು. |
09:07 | ಇದು ಎರಡು ಸ್ಟ್ರಿಂಗ್ ಪ್ಯಾರಾಮೀಟರ್ ಗಳನ್ನು ತೆಗೆದುಕೊಳ್ಳುತ್ತದೆ. |
09:10 | ಮೊದಲನೆಯ ಸ್ಟ್ರಿಂಗ್, ಫಂಕ್ಷನ್ ಗೆ ಇಂಟರ್ಫೇಸ್ ಅನ್ನು ಮತ್ತು ಎರಡನೆಯ ಸ್ಟ್ರಿಂಗ್, ಫಂಕ್ಷನ್ ನ ಸ್ಟೇಟ್ಮೆಂಟ್ ಗಳನ್ನು ಡಿಫೈನ್ ಮಾಡುತ್ತವೆ. |
09:19 | deff ಕಮಾಂಡ್, ಸೈಲ್ಯಾಬ್ ನಲ್ಲಿ ಫಂಕ್ಷನ್ ಅನ್ನು ಡಿಫೈನ್ ಮಾಡುತ್ತದೆ ಮತ್ತು ಅದನ್ನು ಲೋಡ್ ಮಾಡುತ್ತದೆ. |
09:26 | deff ಕಮಾಂಡ್ ಅನ್ನು ಬಳಸಿ ಡಿಫೈನ್ ಮಾಡಿದ ಫಂಕ್ಷನ್ ಅನ್ನು, Execute ಮೆನ್ಯು ಆಯ್ಕೆಯನ್ನು ಬಳಸಿ ಮತ್ತೆ ಲೋಡ್ ಮಾಡುವ ಅವಶ್ಯಕತೆಯಿಲ್ಲ. |
09:34 | ಈ ಪರಿಕಲ್ಪನೆಯನ್ನು ವಿವರಿಸುವ ಒಂದು ಉದಾಹರಣೆಯನ್ನು ನಾವು ನೋಡೋಣ: |
09:41 | ನಾನು, ಇನ್ಲೈನ್ ಫಂಕ್ಷನ್ ಅನ್ನು ಬರೆದಿರುವ inline.sci ಫೈಲ್ ಅನ್ನು ಓಪನ್ ಮಾಡುವೆನು. |
09:51 | ನಾನು ಎಡಿಟರ್-ವಿಂಡೋವನ್ನು ರಿಸೈಜ್ ಮಾಡುವೆನು. |
09:57 | ಮೊದಲೇ ಹೇಳಿದಂತೆ, ಒಂದನೆಯ ಸ್ಟ್ರಿಂಗ್, ಫಂಕ್ಷನ್ ಡಿಕ್ಲೆರೇಶನ್ ಅನ್ನು ಡಿಫೈನ್ ಮಾಡುತ್ತದೆ ಮತ್ತು ಎರಡನೆಯ ಸ್ಟ್ರಿಂಗ್, ಫಂಕ್ಷನ್ ನ ಸ್ಟೇಟ್ಮೆಂಟ್ ಗಳನ್ನು ಡಿಫೈನ್ ಮಾಡುತ್ತದೆ. |
10:13 | ನಾವು ಸೈಲ್ಯಾಬ್-ಎಡಿಟರ್ ನಲ್ಲಿ, ಈ ಫಂಕ್ಷನ್ ಅನ್ನು ಲೋಡ್ ಮಾಡುವೆವು ಮತ್ತು ಇದನ್ನು degrees2radians of 90 ಮತ್ತು degrees2radians of 45 ಗಳ ವ್ಯಾಲ್ಯೂಗಳನ್ನು ಕಂಡುಹಿಡಿಯಲು ಬಳಸುವೆವು. |
10:54 | ಒಂದು ಫಂಕ್ಷನ್, ಇತರ ಫಂಕ್ಷನ್ ಗಳನ್ನು ಕಾಲ್ ಮಾಡುವುದರ ಜತೆಗೆ ತನ್ನನ್ನೇ ತಾನು ಸಹ ಕಾಲ್ ಮಾಡಿಕೊಳ್ಳಬೇಕು. |
11:00 | ಇದನ್ನು ಫಂಕ್ಷನ್ ನ 'ರಿಕರ್ಸಿವ್ ಕಾಲಿಂಗ್' (recursive calling) ಎಂದು ಕರೆಯುತ್ತಾರೆ. |
11:03 | ಇದು ಅವಶ್ಯವಾಗಿದೆ. ಉದಾಹರಣೆಗೆ, ಒಂದು ಇಂಟೀಜರ್ ನ ಫ್ಯಾಕ್ಟೋರಿಯಲ್ ಅನ್ನು ಕಂಡುಹಿಡಿಯಲು, ಫಂಕ್ಷನ್ ಅನ್ನು ಬರೆಯುವಾಗ ಇದು ಬೇಕು. |
11:10 | ಸೈಲ್ಯಾಬ್ ನಲ್ಲಿಯ ಫೈಲ್ ಫಾರ್ಮ್ಯಾಟ್ ಗಳ ಬಗ್ಗೆ ನಮ್ಮ ಚರ್ಚೆಯನ್ನು ಮುಂದುವರಿಸೋಣ. |
11:14 | ಮೊದಲೇ ಹೇಳಿದಂತೆ, ಸೈಲ್ಯಾಬ್, .sce ಮತ್ತು .sci ಎಂಬ ಎರಡು ರೀತಿಯ ಫೈಲ್ ಫಾರ್ಮ್ಯಾಟ್ ಗಳನ್ನು ಬಳಸುತ್ತದೆ. |
11:23 | .sce ಫೈಲ್ ಎಕ್ಸ್ಟೆನ್ಷನ್ ಅನ್ನು (extension) ಹೊಂದಿದ ಫೈಲ್ ಗಳು, ಸ್ಕ್ರಿಪ್ಟ್ ಫೈಲ್ ಗಳಾಗಿವೆ. ಇವುಗಳು, ’ಇಂಟರ್ಯಾಕ್ಟಿವ್ ಸೈಲ್ಯಾಬ್ ಸೆಶನ್’ ನಲ್ಲಿ ನೀವು ನಮೂದಿಸಿದ ಸೈಲ್ಯಾಬ್ ಕಮಾಂಡ್ ಗಳನ್ನು ಒಳಗೊಂಡಿರುತ್ತವೆ. |
11:35 | ಅವುಗಳು, ಫಂಕ್ಷನ್ ಅನ್ನು ಡಾಕ್ಯುಮೆಂಟ್ ಮಾಡುವಾಗ ಬಳಸಿದ ಕಾಮೆಂಟ್ ಲೈನ್ ಗಳನ್ನು ಹೊಂದಿರಬಹುದು. ಮತ್ತು, ಅವು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಲು exec ಕಮಾಂಡ್ ಅನ್ನು ಬಳಸಬಹುದು. |
11:52 | .sci ಫೈಲ್ ಎಕ್ಸ್ಟೆನ್ಷನ್ ಅನ್ನು (extension) ಹೊಂದಿದ ಫೈಲ್ ಗಳು, ಫಂಕ್ಷನ್ ಸ್ಟೇಟ್ಮೆಂಟ್ ನಿಂದ ಪ್ರಾರಂಭವಾಗುವ ಫಂಕ್ಷನ್ ಫೈಲ್ ಗಳಾಗಿವೆ. |
12:00 | ಒಂದು .sci ಫೈಲ್, ಅನೇಕ ಫಂಕ್ಷನ್ ಡೆಫಿನಿಷನ್ ಗಳನ್ನು ಹೊಂದಿರಬಹುದು. ಮತ್ತು, ಈ ಫಂಕ್ಷನ್ ಗಳು ಬೇಕಾದಷ್ಟು ಸೈಲ್ಯಾಬ್ ಸ್ಟೇಟ್ಮೆಂಟ್ ಗಳನ್ನು ಹೊಂದಿರಬಹುದು. ಈ ಸ್ಟೇಟ್ಮೆಂಟ್ ಗಳು ಇವ್ಯಾಲ್ಯುಯೇಟ್ ಆದ ಮೇಲೆ, ಫಂಕ್ಷನ್ ಆರ್ಗ್ಯುಮೆಂಟ್ ಗಳ ಮೇಲೆ ಅಥವಾ ಔಟ್ಪುಟ್ ವೇರಿಯೇಬಲ್ ಗಳ ಮೇಲೆ ಅನೇಕ ಕ್ರಿಯೆಗಳನ್ನು ಮಾಡುತ್ತವೆ. |
12:20 | ಇಲ್ಲಿಗೆ ಸೈಲ್ಯಾಬ್ ನಲ್ಲಿ Scripts and Functions ಎಂಬ ಸ್ಪೋಕನ್ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. |
12:25 | ಸೈಲ್ಯಾಬ್ ನಲ್ಲಿ ಇನ್ನೂ ಅನೇಕ ಫಂಕ್ಷನ್ ಗಳಿವೆ. ಅವುಗಳನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗುವುದು. |
12:31 | ಸೈಲ್ಯಾಬ್ ಲಿಂಕ್ ಗಳನ್ನು ವೀಕ್ಷಿಸುತ್ತಿರಿ. |
12:33 | ಈ ಸ್ಪೋಕನ್-ಟ್ಯುಟೋರಿಯಲ್, Free and Open Source Software in Science and Engineering Education (FOSSEE) ತಂಡದವರಿಂದ ರಚಿಸಲ್ಪಟ್ಟಿದೆ. |
12:40 | FOSSEE ಪ್ರೊಜೆಕ್ಟ್ ನ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು, ಈ ಕೆಳಗಿನ ಲಿಂಕ್ ಗಳಿಂದ ಪಡೆಯಬಹುದು. |
12:50 | ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್, ICT, MHRD ಮೂಲಕ ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
12:56 | ಇದರ ಬಗ್ಗೆ ಹೆಚ್ಚಿನ ವಿವರಗಳಿಗಾಗಿ, ಈ ಕೆಳಗಿನ ಲಿಂಕ್ ಅನ್ನು ನೋಡಿ. http://spoken-tutorial.org/NMEICT-Intro |
13:06 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ನವೀನ್ ಭಟ್ಟ, ಉಪ್ಪಿನ ಪಟ್ಟಣ. |
13:10 | ಧನ್ಯವಾದಗಳು. |