Difference between revisions of "Thunderbird/C2/How-to-Use-Thunderbird/Kannada"
From Script | Spoken-Tutorial
(Created page with '{| border=1 !Time !Narration |- |00.00 |ಥಂಡರ್ ಬರ್ಡ್ ನ ಬಳಕೆಯನ್ನು ತಿಳಿಸಿಕೊಡುವ ಟ್ಯುಟೋರಿಯಲ್ ಗೆ…') |
PoojaMoolya (Talk | contribs) |
||
Line 18: | Line 18: | ||
|- | |- | ||
|00.17 | |00.17 | ||
− | |ಇದರೊಂದಿಗೆ | + | |ಇದರೊಂದಿಗೆ, ಸೇವ್ ಆಸ್( Save As) ಮತ್ತು ಪ್ರಿಂಟ್ ಮೆಸೇಜ್ |
− | + | ||
− | + | ||
− | + | ||
|- | |- | ||
|00.21 | |00.21 | ||
− | |ಫೈಲ್ ನ ಲಗತ್ತಿಸುವಿಕೆ (Attach) | + | |ಫೈಲ್ ನ ಲಗತ್ತಿಸುವಿಕೆ (Attach), ಆರ್ಚಿವ್(Archive) ಮೆಸೇಜ್ |
− | + | ||
− | + | ||
− | + | ||
|- | |- | ||
|00.24 | |00.24 |
Latest revision as of 16:01, 20 March 2017
Time | Narration |
---|---|
00.00 | ಥಂಡರ್ ಬರ್ಡ್ ನ ಬಳಕೆಯನ್ನು ತಿಳಿಸಿಕೊಡುವ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00.05 | ಈ ಟ್ಯುಟೋರಿಯಲ್ ನಲ್ಲಿ ನಾವು |
00.07 | ಥಂಡರ್ ಬರ್ಡ್ ನ ಶಾರ್ಟ್ ಕಟ್ ಅನ್ನು ಲಾಂಚರ್ ಗೆ ಹೇಗೆ ಸೇರಿಸುವುದೆಂದು ತಿಳಿಯಲಿದ್ದೇವೆ. |
00.10 | ಮೆಸೇಜ್ ಅನ್ನು ಟ್ಯಾಗ್ ಮಾಡಲು,
ಕ್ವಿಕ್ ಫಿಲ್ಟರ್, ಮೆಸೇಜ್ ನ ವರ್ಗೀಕರಣ ಮತ್ತು ಕ್ರಮದಲ್ಲಿ ಜೋಡಣೆಯನ್ನು ಕಲಿಯಲಿದ್ದೇವೆ. |
00.17 | ಇದರೊಂದಿಗೆ, ಸೇವ್ ಆಸ್( Save As) ಮತ್ತು ಪ್ರಿಂಟ್ ಮೆಸೇಜ್ |
00.21 | ಫೈಲ್ ನ ಲಗತ್ತಿಸುವಿಕೆ (Attach), ಆರ್ಚಿವ್(Archive) ಮೆಸೇಜ್ |
00.24 | ಆಕ್ಟಿವಿಟಿ ಮ್ಯಾನೇಜರ್ ಅನ್ನು ವೀಕ್ಷಿಸುವುದು ಮುಂತಾದವುಗಳನ್ನು ಕಲಿಯಲಿದ್ದೆವೆ. |
00.27 | ಇಲ್ಲಿ ನಾವು ಉಬಂಟು(Ubuntu) 12.04 ರಲ್ಲಿ ಮೋಜಿಲ್ಲಾ ಥಂಡರ್ ಬರ್ಡ್ (Mozilla Thunderbird) 13.0.1 ಅನ್ನು ಉಪಯೋಗಿಸುತ್ತಿದ್ದೇವೆ. |
00.36 | ಥಂಡರ್ ಬರ್ಡ್ ಅನ್ನು ಪುನಃ ಪುನಃ ಉಪಯೋಗಿಸುವುದರಿಂದ ಅದರ ಶಾರ್ಟ್ ಕಟ್ ಅನ್ನು ರಚಿಸಿಕೊಳ್ಳೋಣ. |
00.43 | ಲಾಂಚರ್ ಗೆ Thunderbird ಶಾರ್ಟ್ ಕಟ್ ಐಕಾನ್ ಅನ್ನು ಡ್ರ್ಯಾಗ್ ಮಾಡಿ ಬಿಡೋಣ. |
00.49 | ಮೊದಲಿಗೆ, Dash Home ಅನ್ನು ಕ್ಲಿಕ್ ಮಾಡಿ. |
00.52 | ಅಲ್ಲಿ ಕಾಣಿಸುವ ಸರ್ಚ್ ಫೀಲ್ಡ್ ನಲ್ಲಿ Thunderbird ಎಂದು ಟೈಪ್ ಮಾಡಿ. |
00.57 | Thunderbird ಐಕಾನ್ ಸರ್ಚ್ ಫೀಲ್ಡ್ ನ ಕೆಳಗೆ ಕಾಣಿಸುತ್ತದೆ. |
01.01 | ಅದನ್ನು ಸೆಲೆಕ್ಟ್ ಮಾಡಿ ಮತ್ತು ಮೌಸ್ ನ ಎಡ ಬಟನ್ ಅನ್ನು ಬಿಡಬೇಡಿ. |
01.06 | ಮೌಸ್ ನ ಎಡ ಬಟನ್ ಅನ್ನು ಬಳಸಿ ಐಕಾನ್ ಅನ್ನು ಎಳೆದು ಲಾಂಚರ್ ನಲ್ಲಿ ಬಿಡಿ. |
01.09 | ಈಗ ಮೌಸ್ ನ ಎಡ ಬಟನ್ ಅನ್ನು ಬಿಡಿ. |
01.12 | ಕ್ಲೋಸ್ ಮಾಡಲು Dash home ಅನ್ನು ಕ್ಲಿಕ್ ಮಾಡಿ. |
01.14 | ಲಾಂಚರ್ ನಲ್ಲಿರುವ Thunderbird ಐಕಾನ್ ಅನ್ನು ಕ್ಲಿಕ್ ಮಾಡಿ. |
01.19 | ಥಂಡರ್ ಬರ್ಡ್ ಓಪನ್ ಅಗುತ್ತದೆ. |
01.23 | STUSERONE at gmail dot com ಐ.ಡಿ ಯ , Inbox ಅನ್ನು ಕ್ಲಿಕ್ ಮಾಡಿ. |
01.29 | ಕೆಲವು ಮೆಸೇಜ್ ಗಳು ದಪ್ಪ ಅಕ್ಷರದಲ್ಲಿರುವುದನ್ನು ಗಮನಿಸಿ. |
01.32 | ಇವು ಓದದೇ ಇರುವ ಮೆಸೇಜ್ ಗಳು. |
01.35 | Get Mail ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು Get All New Messages ಅನ್ನು ಸೆಲೆಕ್ಟ್ ಮಾಡಿ. |
01.41 | ಜೀಮೇಲ್ ಅಕೌಂಟ್ ನಿಂದ ನಾವು ಮೆಸೇಜ್ ಗಳನ್ನು ಪಡೆದಿದ್ದೇವೆ. |
01.45 | ಈಗ ಮೆಸೇಜ್ ಗಳನ್ನು ವಿಂಗಡಿಸಲು ಇಚ್ಛಿಸೋಣ. |
01.49 | ಕಲಮ್ ನ ಹೆಡ್ಡಿಂಗ್ ಆದ From ಅನ್ನು ಕ್ಲಿಕ್ ಮಾಡಿ. |
01.52 | ವರ್ಣಮಾಲೆಯ ಕ್ರಮದಲ್ಲಿ ಮೆಸೇಜ್ ಗಳು ವರ್ಗೀತಕೃತವಾಗಿವೆ. |
01.57 | From ಅನ್ನು ಪುನಃ ಕ್ಲಿಕ್ ಮಾಡೋಣ. |
02.01 | ಈಗ ಮೆಸೇಜ್ ಗಳು ವರ್ಣಮಾಲೆಯ ವಿಪರೀತ ಕ್ರಮದಲ್ಲಿ ವರ್ಗೀಕೃತವಾಗಿವೆ! |
02.06 | ಈಗ ವಿಷಯಾಧಾರಿತವಾಗಿ ವರ್ಗೀಕರಿಸೋಣ. |
02.09 | Subject ಅನ್ನು ಕ್ಲಿಕ್ ಮಾಡಿ. |
02.12 | ಮೆಸೆಜ್ ಗಳು ವಿಷಯಾಧಾರಿತವಾಗಿ ವರ್ಗೀಕರಿಸಲ್ಪಟ್ಟಿವೆ! |
02.16 | ಟ್ಯುಟೋರಿಯಲ್ ಅನ್ನು ಸ್ವಲ್ಪ ನಿಲ್ಲಿಸಿ ಈ ವಿಷಯಗಳನ್ನು ಮತ್ತೊಮ್ಮೆ ಅಭ್ಯಾಸ ಮಾಡಿ. |
02.20 | ಮೆಸೇಜ್ ಗಳನ್ನು ಪಡೆದ ದಿನಾಂಕದ ಕ್ರಮದಲ್ಲೂ ವರ್ಗೀಕರಿಸಬಹುದು. |
02.24 | ನೀವು ಮೆಸೇಜ್ ಗಳನ್ನು ಟ್ಯಾಗ್ ಕೂಡ ಮಾಡಬಹುದು. |
02.26 | ಈ ರೀತಿಯಲ್ಲಿ ನೀವು ನಿಮಗೆ ಬೆಕಾದ ರೀತಿಯಲ್ಲಿ ಸುಲಭವಾಗಿ ಪುನಃ ಓಪನ್ ಮಾಡುವ ಮೆಸೇಜ್ ಗಳನ್ನು ಗುರುತಿಸಬಹುದು. |
02.32 | ಸಮಾನವಾದ ಮೆಸೇಜ್ ಗಳನ್ನು ಒಂದೆಡೆ ಇರಿಸಲು ಕೂಡ ಟ್ಯಾಗ್ ಅನ್ನು ಬಳಸಬಹುದು. |
02.37 | ಈಗ ಒಂದು ಮೇಲ್ ಅನ್ನು ಮುಖ್ಯವಾದ ಮೇಲ್ ಎಂದು ಟ್ಯಾಗ್ ಮಾಡಬೇಕೆಂದುಕೊಳ್ಳೋಣ. |
02.40 | Inbox ಅನ್ನು ಕ್ಲಿಕ್ ಮಾಡಿ ಮೊದಲ ಮೆಲ್ ಅನ್ನ್ನು ಆಯ್ಕೆ ಮಾಡಿರಿ. |
02.44 | ಟೂಲ್ ಬಾರ್ ನಿಂದ Tag ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು Important ಅನ್ನು ಆರಿಸಿ. |
02.51 | ಕೆಂಪು ಬಣ್ಣದಲ್ಲಿ ಕಾಣುತ್ತಿರುವ ಮೇಲ್ ಅನ್ನು ಗಮನಿಸಿ. |
02.54 | ಕೆಳಗಿನ (bottom) ಪ್ಯಾನಲ್ ಅನ್ನು ನೋಡಿ. |
02.57 | ಈ ಮೇಲ್ Important ಎಂದು ಟ್ಯಾಗ್ ಆಗಿರುತ್ತದೆ. |
03.00 | ಟ್ಯಾಗ್ ಅನ್ನು ತೆಗೆಯಲು ಮೊದಲು ಮೇಲ್ ಅನ್ನು ಸೆಲೆಕ್ಟ್ ಮಾಡಿ. |
03.04 | ಟೂಲ್ ಬಾರ್ ನಿಂದ Tag ಅನ್ನು ಕ್ಲಿಕ್ ಮಾಡಿ ನಂತರ Important ಅನ್ನು ಕ್ಲಿಕ್ ಮಾಡಿ. |
03.09 | ಈಗ ಇನ್ ಬಾಕ್ಸ್ ನ ಮೊದಲ ಮೆಲ್ ಅನ್ನು Important ಎಂದು ಎರಡನೆಯದನ್ನು Work ಎಂದು ಟ್ಯಾಗ್ ಮಾಡೋಣ. |
03.17 | ಈಗ ನಾವು ಬಲ ಪ್ಯಾನಲ್ ನಲ್ಲಿ ಟ್ಯಾಗ್ ಆಗಿರುವ ಮೇಲ್ ಗಳನ್ನು ಮಾತ್ರ ನೋಡಲು ಬಯಸುತ್ತೇವೆ. |
03.22 | ಈ ರೀತಿಯಲ್ಲಿ ನೋಡಲು ಸಾಧ್ಯವೇ ? |
03.25 | Quick Filter ಟೂಲ್ ಬಾರ್ ಅನ್ನು ಉಪಯೋಗಿಸಿ ಮೆಸೆಜ್ ಗಳನ್ನು ವೇಗವಾಗಿ ಫಿಲ್ಟರ್ ಮಾಡಿ ನೋಡಬಹುದು. |
03.31 | Quick Filter ಟೂಲ್ ಬಾರ್ ನ ಸಹಾಯದಿಂದ ಟ್ಯಾಗ್ ಆದ ಮೆಸೇಜ್ ಗಳನ್ನು ನೋಡಲು Tagged ಐಕಾನ್ ಅನ್ನು ಕ್ಲಿಕ್ ಮಾಡಿ. |
03.37 | ಕೇವಲ ಟ್ಯಾಗ್ ಅಗಿರುವ ಮೆಸೇಜ್ ಗಳು ಕಾಣಿಸುತ್ತವೆ! |
03.42 | Tagged ಐಕಾನ್ ಅನ್ನು ಪುನಃ ಕ್ಲಿಕ್ ಮಾಡಿ. |
03.45 | ಈಗ ನಾವು ಎಲ್ಲಾ ಮೇಲ್ ಗಳನ್ನು ನೋಡಬಹುದು! |
03.49 | ಮೆಸೇಜ್ Threads ನ ಬಗ್ಗೆ ತಿಳಿಯೋಣ. |
03.52 | ಮೆಸೇಜ್ Threads ಎಂದರೇನು? ಪರಸ್ಪರ ಸಂಬಧಪಟ್ಟ ಮೆಸೇಜ್ ಗಳನ್ನು |
03.57 | ಒಂದು ಕ್ರಮದಲ್ಲಿ ಅಥವಾ ಒಂದು ಸಂಭಾಷಣೆಯ ರೀತಿಯಲ್ಲಿ ಜೋಡಿಸಿರುವುದೇ ಮೆಸೇಜ್ ಥ್ರೆಡ್ಸ್(Threads). |
04.02 | ಪರಸ್ಪರ ಸಂಬಧಪಟ್ಟ ಮೆಸೇಜ್ ಗಳನ್ನು ಒಂದು ಸಂಭಾಷಣೆಯ ರೀತಿಯಲ್ಲಿ ನೋಡಲು ನಾವು ಮೆಸೇಜ್ threads ಅನ್ನು ಬಳಸುತ್ತೇವೆ. |
04.10 | ಈಗ ಇದನ್ನು ಹೇಗೆ ಮಾಡುವುದೆಂದು ಕಲಿಯೋಣ. |
04.14 | ಇನ್ ಬಾಕ್ಸ್ ನ ಎಡ ಮೂಲೆಯಲ್ಲಿರುವ threads ಐಕಾನ್ ಅನ್ನು ಕ್ಲಿಕ್ ಮಾಡಿ. |
04.21 | ಮೇಲ್ ಗಳು ಸಂಭಾಷಣೆಯ ರೀತಿಯಲ್ಲಿ ಕಾಣುತ್ತವೆ. |
04.24 | ಸಂಪೂರ್ಣ ಸಂಭಾಷಣೆಯನ್ನು ನೋಡಲು ಅನುಗುಣವಾದ ಥ್ರೆಡ್ ನ ಪಕ್ಕದಲ್ಲಿರುವ Threading ಚಿನ್ಹೆಯನ್ನು ಕ್ಲಿಕ್ ಮಾಡಿ. |
04.33 | ಮೆಸೇಜ್ ಪ್ರೀವ್ಯೂವ್(message preview) ಪ್ಯಾನಲ್ ನಲ್ಲಿ ಸಂಪೂರ್ಣ ಸಂಭಾಷಣೆ ಕಾಣುತ್ತದೆ. |
04.38 | ಸಂಭಾಷಣೆಯ ನೋಟದಿಂದ (Thread view) ಹೊರಗೆ ಬರಲು, Thread ಐಕಾನ್ ಅನ್ನು ಪುನಃ ಕ್ಲಿಕ್ ಮಾಡಿ. |
04.45 | ಈಗ ಮೇಲ್ ಅನ್ನು ಒಂದು ಫೋಲ್ಡರ್ ಗೆ ಸೇವ್ ಮಾಡಲು ಮತ್ತು ಅದನ್ನು ಪ್ರಿಂಟ್ ಮಾಡಲು ಕಲಿಯೋಣ. |
04.50 | ಈ ಟ್ಯುಟೋರಿಯಲ್ ಗಾಗಿ ನಾವು |
04.53 | ಡೆಸ್ಕ್ ಟಾಪ್ ನಲ್ಲಿ ಒಂದು ಫೋಲ್ಡರ್ ಅನ್ನು ರಚಿಸಿದ್ದೇವೆ. |
04.56 | ಮತ್ತು Saved Mails ಎಂದು ಹೆಸರಿಸಿದ್ದೇವೆ. |
05.00 | ಈಗ ಮೊದಲ ಮೇಲ್ ಅನ್ನು ಆಯ್ಕೆ ಮಾಡಿ ಅದನ್ನು ಸೇವ್ ಮಾಡೋಣ. |
05.04 | ಮೇಲ್ ನ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ. |
05.06 | ಅದು ಪ್ರತ್ಯೇಕವಾದ ಟ್ಯಾಬ್ ನಲ್ಲಿ ತೆರೆದುಕೊಳ್ಳುತ್ತದೆ. |
05.09 | ಟೂಲ್ ಬಾರ್ ನಿಂದ File ಮತ್ತು Save As ಅನ್ನು ಕ್ಲಿಕ್ ಮಾಡಿ. |
05.15 | Save Message As ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
05.19 | ಡೆಸ್ಕ್ ಟಾಪ್ ಗೆ ಹೋಗಿ Saved Mails ಫೋಲ್ಡರ್ ಅನ್ನು ಆಯ್ಕೆ ಮಾಡಿ Save ಅನ್ನು ಕ್ಲಿಕ್ ಮಾಡಿ. |
05.26 | ಮೆಸೇಜ್ ಫೋಲ್ಡರ್ ನಲ್ಲಿ ಸೇವ್ ಆಗಿರುತ್ತದೆ. |
05.29 | Saved Mails ಫೋಲ್ಡರ್ ಗೆ ಹೋಗೋಣ. |
05.33 | ಅದನ್ನು ಎರಡು ಸಲ ಕ್ಲಿಕ್ ಮಾಡಿ, ಓಪನ್ ಆಗುತ್ತದೆ. |
05.35 | Gedit ನಲ್ಲಿ ಮೆಲ್ ಓಂದು ಫೈಲ್ ನ ರೂಪದಲ್ಲಿ ಓಪನ್ ಅಗುತ್ತದೆ. |
05.40 | ಇದನ್ನು ಕ್ಲೊಸ್ ಮಾಡೋಣ. |
05.42 | ನೀವು ಮೆಸೇಜ್ ಅನ್ನು ಒಂದು template ಆಗಿ ಕೂಡ ಸೇವ್ ಮಾಡಬಹುದು. |
05.46 | ಟೂಲ್ ಬಾರ್ ನಲ್ಲಿ file, save as ಮತ್ತು templates ಅನ್ನು ಕ್ಲಿಕ್ ಮಾಡಿ. |
05.52 | ಮೆಸೇಜ್ ಈಗ ಥಂಡರ್ ಬರ್ಡ್ ನ Templates ಫೋಲ್ಡರ್ ನಲ್ಲಿ ಸೇವ್ ಅಗಿದೆ. |
05.56 | ಥಂಡರ್ ಬರ್ಡ್ ನ ಎಡ ಪ್ಯಾನಲ್ ನಿಂದ Templates ಫೋಲ್ಡರ್ ಅನ್ನು ಕ್ಲಿಕ್ ಮಾಡಿ. |
06.01 | ಮೇಲ್ ಅನ್ನು ಆಯ್ಕೆ ಮಾಡಿ ಅದರ ಮೇಲ್ ಎರಡು ಬಾರಿ ಕ್ಲಿಕ್ ಮಾಡಿ. |
06.04 | ಮೂಲ ಮೇಲ್ ನಲ್ಲಿರುವ ವಿಳಾಸಗಳ ಸಹಿತವಾಗಿರುವ ಅಡ್ಡ್ರೆಸ್ ಫೀಲ್ಡ್ ನೊಂದಿಗೆ ಬೇರೆಯ ಟ್ಯಾಬ್ ನಲ್ಲಿ ಮೇಲ್ ಓಪನ್ ಅಗುತ್ತದೆ. |
06.13 | ಈಗ ನೀವು ಮೇಲ್ ಅನ್ನು ನಿಮಗೆ ಬೆಕಾದ ರೇತಿಯಲ್ಲಿ ಬದಲಾಯಿಸಿಕೊಂಡು, ವಿಳಾಸಗಳನ್ನು ಸೇರಿಸಿ ಅಥವಾ ತೆಗೆದು, ನಿಮಗೆ ಬೇಕಾದ ವಿಳಾಸಗಳಿಗೆ ಕಳಿಸಬಹುದು. |
06.20 | ಅಂಕೆ 1 ಅನ್ನು ಸಬ್ಜೆಕ್ಟ್ ನಲ್ಲಿ ಸೇರಿಸಿ. |
06.23 | template ಅನ್ನು ಕ್ಲೋಸ್ ಮಾಡಲು ಟ್ಯಾಬ್ ನ ಮೇಲಿಂದ ಎಡ ಭಾಗದಲ್ಲಿರುವ X ಐಕಾನ್ ಅನ್ನು ಕ್ಲಿಕ್ ಮಾಡಿ. |
06.29 | Save Message ಡಯಲಾಗ್ ಬಾಕ್ಸ್ ಕಾಣಿಸುತ್ತದೆ, Don’t Save ಅನ್ನು ಕ್ಲಿಕ್ ಮಾಡಿ. |
06.36 | ಈಗ ಮೆಸೇಜ್ ಅನ್ನು ಪ್ರಿಂಟ್ ಮಾಡಲು ಕಲಿಯೋಣ. |
06.39 | ಬಲ ಪ್ಯಾನಲ್ ನಲ್ಲಿರುವ Inbox ಅನ್ನು ಕ್ಲಿಕ್ ಮಾಡಿ ಎರಡನೆಯ ಮೇಲ್ ಅನ್ನು ಆಯ್ಕೆ ಮಾಡಿ ಮತ್ತು ಅದರ ಮೇಲೆ ಎರಡು ಬಾರಿ ಕ್ಲಿಕ್ ಮಾಡಿ. |
06.46 | ಹೊಸ ಟ್ಯಾಬ್ ನಲ್ಲಿ ಇದು ಓಪನ್ ಅಗುತ್ತದೆ. |
06.50 | ಮೈನ್ ಮೆನುವಿನಿಂದ File ಗೆ ಹೋಗಿ ಅಲ್ಲಿ Print ಅನ್ನು ಆಯ್ಕೆ ಮಾಡಿ.. |
06.55 | Print ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
06.58 | A4 ಅಳತೆಯ ಹಾಳೆಯಲ್ಲಿ ಪೋರ್ಟ್ ರೈಟ್ ನ ಆಕೃತಿಯಲ್ಲಿ ನಾವು ಪ್ರಿಂಟ್ ಮಾಡಿ ಈ ಮೇಲ್ ನ ಎರಡು ಪ್ರತಿಗಳನ್ನು ಗಳಿಸಬೇಕಾಗಿದೆ. |
07.08 | Page Setup ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
07.11 | Paper Size ಫೀಲ್ಡ್ ನಲ್ಲಿ ಕೆಳ ಮುಖದ ಚಿನ್ಹೆಯನ್ನು ಕ್ಲಿಕ್ ಮಾಡಿ ಮತ್ತು A4 ಅನ್ನು ಆಯ್ಕೆ ಮಾಡಿ. |
07.16 | Orientation ಫೀಲ್ಡ್ ನಲ್ಲಿರುವ ಕೆಳಮುಖದ ಚಿನ್ಹೆಯನ್ನು ಕ್ಲಿಕ್ ಮಾಡಿ ಮತ್ತು Portrait ಅನ್ನು ಆಯ್ಕೆ ಮಾಡಿ. |
07.22 | ಈಗ General ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
07.25 | Copies ಫೀಲ್ಡ್ ನಲ್ಲಿ 2 ಎಂದು ಎಂಟರ್ ಮಾಡಿ ಮತ್ತು Print ಅನ್ನು ಕ್ಲಿಕ್ ಮಾಡಿ. |
07.31 | ನಿಮ್ಮ ಪ್ರಿಂಟರ್ ವ್ಯವಸ್ಥಿತವಾಗಿದ್ದಲ್ಲಿ ಮೇಲ್ ಎಂಬುದು ಪ್ರಿಂಟ್ ಆಗುತ್ತದೆ. |
07.38 | Cancel ಅನ್ನು ಕ್ಲಿಕ್ ಮಾಡಿ Print ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ ಮತ್ತು ಮೇಲ್ ಟ್ಯಾಬ್ ಅನ್ನು ಕೂಡ ಕ್ಲೋಸ್ ಮಾಡೋಣ. |
07.46 | ಯಾಹೂ (Yahoo) ಅಕೌಂಟ್ ಗೆ ಒಂದು ವೀಡಿಯೋ ಅನ್ನು ಸೇರಿಸಿ ಕಳುಹಿಸೋಣ. |
07.51 | ಹೊಸ ಮೆಸೇಜ್ ಅನ್ನು ಬರೆಯೋಣ. |
07.54 | ಮೆನು ಬಾರ್ ನಿಂದ Write ಅನ್ನು ಕ್ಲಿಕ್ ಮಾಡಿ, ಮೆಸೇಜ್ ಬರೆಯಲು ಹೊಸ ವಿಂಡೋ ಕಾಣಿಸುತ್ತದೆ. |
08.00 | To ಫೀಲ್ಡ್ ನಲ್ಲಿ ಯಾಹೂ ಐ.ಡಿ ಯ ಮೊದಲ ಅಕ್ಷರವಾದ ‘S’ ಅನ್ನು ಟೈಪ್ ಮಾಡೋಣ. |
08.06 | ಯಾಹೂ ಮೇಲ್ ಐ.ಡಿ ಸ್ವತಃ ಪೂರ್ತಿಗೊಳ್ಳುವುದನ್ನು ಗಮನಿಸಿ. |
08.11 | ಸಬ್ಜೆಕ್ಟ್ ಫೀಲ್ಡ್ ನಲ್ಲಿ Video Attachment ಎಂದು ಟೈಪ್ ಮಾಡಿ. |
08.16 | ಟೂಲ್ ಬಾರ್ ನಲ್ಲಿನ Attach ಅನ್ನು ಕ್ಲಿಕ್ ಮಾಡಿ, Attach Files ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
08.23 | ಡೆಸ್ಕ್ ಟಾಪ್ ನಲ್ಲಿ, What is a Spoken Tutorial ಎಂಬ ಫೈಲ್ ಅನ್ನು ಸೆಲೆಕ್ಟ್ ಮಾಡಿ, ನಂತರ Open ಅನ್ನು ಕ್ಲಿಕ್ ಮಾಡಿ. |
08.34 | ಈಗ ನಿಮ್ಮ ಫೈಲ್ ಅಟ್ಯಾಚ್ ಆಗಿದೆ ಹಾಗು ಅಟ್ಯಾಚ್ ಆಗಿರುವ ಫೈಲ್ ಮೇಲಿನ ಬಲ ಮೂಲೆಯಲ್ಲಿ ಕಾಣಿಸುತ್ತಿದೆ. ಈಗ Send ಅನ್ನು ಕ್ಲಿಕ್ ಮಾಡಿ.. |
08.44 | ಯಾಹೂ ಅಕೌಂಟ್ ಗೆ ಲಾಗ್ ಇನ್ ಅಗೋಣ. |
08.56 | ನಾವೀಗ ಅಟ್ಯಾಚ್ ಆಗಿರುವ ಮೆಸೇಜ್ ಅನ್ನು ಪಡೆದಿರುತ್ತೇವೆ. |
08.59 | ಯಾಹೂ ಅಕೌಂಟ್ ಅನ್ನು ಕ್ಲೋಸ್ ಮಾಡೋಣ. |
09.03 | ನಾವು ಗಮನಿಸಲು ಇಚ್ಛಿಸುವ ಮುಖ್ಯವಾದ ಮೆಸೇಜ್ ಅನ್ನು ಪಡೆಯಬಹುದು. |
09.07 | ಆದರೆ ಮೇಲ್ ಬಾಕ್ಸ್ ನಲ್ಲಿ ತುಂಬ ಮೇಲ್ ಗಳು ಇರುವುದರಿಂದ ಅಸ್ತವ್ಯಸ್ತತೆ ಉಂಟಾಗಿರಬಹುದು. |
09.12 | ಥಂಡರ್ ಬರ್ಡ್ ಆ ರೀತಿಯ ಮೆಸೇಜ್ ಗಳನ್ನು ಸಂಗ್ರಹಿಸಿಡುತ್ತದೆ. |
09.16 | ಆರ್ಚಿವ್ ಸೆಟ್ಟಿಂಗ್ ಅನ್ನು ನಾವು ಮೊದಲು ಗಮನಿಸಬೇಕು. |
09.20 | ಎಡ ಪ್ಯಾನಲ್ ನಿಂದ STUSERONE gmail account ಅನ್ನು ಕ್ಲಿಕ್ ಮಾಡಿ. |
09.25 | ಬಲ ಪ್ಯಾನಲ್ ನಿಂದ, Accounts ನ ಅಡಿಯಲ್ಲಿನ View Settings ಅನ್ನು ಈ ಅಕೌಂಟ್ ಗೆ ಕ್ಲಿಕ್ ಮಾಡಿ. |
09.31 | Accounts Settings ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
09.35 | ಎಡ ಪ್ಯಾನಲ್ ನಿಂದ STUSERONE gmail ಅಕೌಂಟ್ ಅನ್ನು, Copies ಹಾಗು Folders ಅನ್ನು ಕ್ಲಿಕ್ ಮಾಡಿ. |
09.43 | Message Archives ಆಯ್ಕೆ ಕಾರ್ಯನಿರತವಾಗುತ್ತದೆ. |
09.48 | ಈ ಆಯ್ಕೆಗಳು ಮೆಸೇಜ್ ಗಳು ಸಂಗ್ರಹಿತವಾದ ಫೋಲ್ಡರ್ ಗಳನ್ನು ನಿರ್ಧರಿಸುತ್ತವೆ. |
09.53 | ಈ ಅಯ್ಕೆಗಳನ್ನು ಸಮರ್ಥಗೊಳಿಸದಿದ್ದಲ್ಲಿ: |
09.57 | Keep message archives in ಎಂಬ ಬಾಕ್ಸ್ ಅನ್ನು ಸಮರ್ಥಗೊಳಿಸಿ. |
10.01 | STUSERONE at gmail.com ನಲ್ಲಿ “Archives” ಫೋಲ್ಡರ್ ಎಂಬ ಅಯ್ಕೆಯನ್ನು ಸೆಲೆಕ್ಟ್ ಮಾಡಿ OK ಕ್ಲಿಕ್ ಮಾಡಿ. |
10.10 | ಈಗ STUSERONE Gmail ಅಕೌಂಟ್ ನ ಇನ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. |
10.15 | ಇದೀಗ 3 ನೇ ಮೆಸೇಜ್ ಅನ್ನು Archive (ಆರ್ಚಿವ್) ಮಾಡೋಣ. |
10.19 | ಎಡ ಪ್ಯಾನಲ್ ನಿಂದ ಅದನ್ನು ಆಯ್ಕೆ ಮಾಡಿ. |
10.21 | ಕಾಂಟೆಕ್ಸ್ಟ್ ಮೆನುವಿನ ಮೇಲೆ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು Archive ಅನ್ನು ಆರಿಸಿ. |
10.27 | STUSERONE Gmail account ನ ಮೆಸೇಜ್, Archives ಫೋಲ್ಡರ್ ಗೆ ವರ್ಗಾಯಿಸಲ್ಪಟ್ಟಿದೆ. |
10.36 | ಹಾಗಾಗಿ ಇನ್ ಬಾಕ್ಸ್ ನಲ್ಲಿ ಇನ್ನು ಮೆಸೇಜ್ ಕಾಣಿಸಿಕೊಳ್ಳುವುದಿಲ್ಲ. |
10.39 | ಥಂಡರ್ ಬರ್ಡ್ ಅನ್ನು ಉಪಯೋಗಿಸಿ ಮಾಡಿದ ಕ್ರಿಯಗಳನ್ನು ಪುನಃ ನೋಡಲು ಬಯಸಿದಾದಲ್ಲಿ ನಾವೇನು ಮಾಡಬೇಕು? |
10.44 | ಇದು ಅತ್ಯಂತ ಸುಲಭ! Activity Manager ನಾವು ಥಂಡರ್ ಬರ್ಡ್ ಅನ್ನು ಉಪಯೋಗಿಸಿ ಮಾಡಿದ ಕ್ರಿಯೆಗಳನ್ನು ತೋರಿಸುತ್ತದೆ. |
10.52 | ಮೈನ್ ಮೆನುವಿನಿಂದ Tools ಮತ್ತು Activity Manager ಅನ್ನು ಕ್ಲಿಕ್ ಮಾಡಿ. |
10.57 | Activity Manager ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
11.01 | ಈಗ ನೀವು ಎಲ್ಲಾ ಈಮೇಲ್ ಚಟುವಟಿಕೆಗಳ ಪಟ್ಟಿಯನ್ನು ಪರಿಶೀಲಿಸಬಹುದು! |
11.05 | ಈಗ Activity Manager ಡಯಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡೋಣ. |
11.09 | ಥಂಡರ್ ಬರ್ಡ್ ವಿಂಡೋ ವಿನ ಎಡ ಮೂಲೆಯಲ್ಲಿರುವ ಕೆಂಪು ಕ್ರಾಸ್ ಅನ್ನು ಒತ್ತುವ ಮೂಲಕ ಥಂಡರ್ ಬರ್ಡ್ ನಿಂದ ಹೊರಬರಬಹುದು. |
11.16 | ಈ ಟ್ಯುಟೋರಿಯಲ್ ನಲ್ಲಿ ನಾವು: |
11.20 | ಥಂಡರ್ ಬರ್ಡ್ ನ ಶಾರ್ಟ್ ಕಟ್ ಅನ್ನು ಲಾಂಚರ್ ಗೆ ಸೇರಿಸುವುದು, |
11.23 | ಟ್ಯಾಗ್ ಮೆಸೇಜ್, ಕ್ವಿಕ್ ಫಿಲ್ಟರ್ (Quick Filter),
ಸಾರ್ಟ್ (Sort) ಮತ್ತು ಥ್ರೆಡ್ ಮೆಸೇಜ್ ಗಳನ್ನು ಕಲಿತಿದ್ದೇವೆ. |
11.28 | ಇದರೊಂದಿಗೆ ನಾವು: |
11.30 | ಸೇವ್ ಆಸ್(Save As) ಮತ್ತು ಪ್ರಿಂಟ್ ಮೆಸೇಜ್,
ಅಟ್ಯಾಚ್(Attach) ಫೈಲ್, |
11.34 | ಆರ್ಚಿವ್(Archive)ಮೆಸೇಜ್,
ವ್ಯೂ ದ ಆಕ್ಟಿವಿಟಿ (Activity) ಮ್ಯಾನೇಜರ್ ಅನ್ನು ಕಲಿತಿದ್ದೇವೆ. |
11.38 | ನಿಮಗೆ ಇಲ್ಲಿ ಒಂದು ಅಸೈನ್ ಮೆಂಟ್ ಕೊಡಲಾಗಿದೆ. |
11.41 | ಥಂಡರ್ ಬರ್ಡ್ ಗೆ ಲಾಗ್ ಇನ್ ಆಗಿ, |
11.44 | ಒಂದು ಮೆಸೇಜ್ ಥ್ರೆಡ್ ಅನ್ನು ನೋಡಿ.
ಮೆಸೇಜ ಅನ್ನು ಸೇವ್ ಮತ್ತು ಪ್ರಿಂಟ್ ಮಾಡಿ. |
11.48 | ಒಂದು ಈಮೇಲ್ ಅನ್ನು ಆಯ್ದುಕೊಳ್ಳಿ, ಕಾಂಟೆಕ್ಸ್ಟ್ ಮೆನುವಿನಲ್ಲಿ ಮೌಸ್ ನ ಬಲ ಬಟನ್ ಅನ್ನು ಕ್ಲಿಕ್ ಮಾಡಿ. |
11.53 | ಅಲ್ಲಿರುವ ಎಲ್ಲಾ ಆಯ್ಕೆಗಳನ್ನು ಪರಿಶೀಲಿಸಿ. |
11.56 | Activity Manager ಡಯಲಾಗ್ ಬಾಕ್ಸ್ ಅನ್ನು ನೋಡಿ. |
12.00 | ಥಂಡರ್ ಬರ್ಡ್ ಅನ್ನು ಲಾಗ್ ಔಟ್ ಮಾಡಿ. |
12.03 | Activity Manager ಡಯಲಾಗ್ ಬಾಕ್ಸ್ ಅನ್ನು ಪುನಃ ಲಾಗ್ ಇನ್ ಆಗುವಾಗ ಪರಿಶೀಲಿಸಿ. |
12.07 | ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ: |
12.10 | ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ. |
12.13 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
12.18 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
12.23 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
12.27 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
12.33 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
12.37 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
12.45 | ಈ ಯೋಜನೆಯ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ. |
12.56 | ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |