Difference between revisions of "Java/C2/First-Java-Program/Kannada"
From Script | Spoken-Tutorial
PoojaMoolya (Talk | contribs) |
|||
(One intermediate revision by one other user not shown) | |||
Line 39: | Line 39: | ||
|ನಾನು gedit ಅನ್ನು ನನ್ನ Text Editor ಆಗಿ ಉಪಯೋಗಿಸುತ್ತಿದ್ದೇನೆ. | |ನಾನು gedit ಅನ್ನು ನನ್ನ Text Editor ಆಗಿ ಉಪಯೋಗಿಸುತ್ತಿದ್ದೇನೆ. | ||
|- | |- | ||
− | |01:01 | + | | 01:01 |
|Text editor ನಲ್ಲಿ, ನಾವು ಮೊದಲು HelloWorld ಎಂಬ ಕ್ಲಾಸ್ ಅನ್ನು ರಚಿಸೋಣ. | |Text editor ನಲ್ಲಿ, ನಾವು ಮೊದಲು HelloWorld ಎಂಬ ಕ್ಲಾಸ್ ಅನ್ನು ರಚಿಸೋಣ. | ||
|- | |- | ||
Line 85: | Line 85: | ||
|- | |- | ||
| 02:33 | | 02:33 | ||
− | |Dot java | + | |Dot java ಎಂಬುದು ಜಾವಾ ಫೈಲ್ ಗೆ ಕೊಟ್ಟ ಫೈಲ್ ಎಕ್ಸ್ಟೆನ್ಶನ್ ಆಗಿದೆ. |
|- | |- | ||
|02:39 | |02:39 | ||
Line 94: | Line 94: | ||
|- | |- | ||
| 02:53 | | 02:53 | ||
− | |ಹಾಗಾದರೆ ಹೀಗೆ ಟೈಪ್ ಮಾಡಿ: | + | |ಹಾಗಾದರೆ ಹೀಗೆ ಟೈಪ್ ಮಾಡಿ: public static void main ಪೆರಂಥಿಸಿಸ್ "()", ಆ ಪೆರಂಥಿಸಿಸ್ ನ ಒಳಗೆ String arg ಮತ್ತು ಸ್ಕ್ವೇರ್ ಬ್ರಾಕೆಟ್ಸ್ "[]". |
− | + | ||
− | + | ||
− | + | ||
|- | |- | ||
| 03:10 | | 03:10 | ||
Line 109: | Line 106: | ||
|- | |- | ||
| 03:27 | | 03:27 | ||
− | |Enter ಒತ್ತಿ ಹಾಗೂ ಕ್ಲೋಸ್ | + | |Enter ಒತ್ತಿ ಹಾಗೂ ಕ್ಲೋಸ್ ಕರ್ಲಿ ಬ್ರಾಕೆಟ್ "}" ಅನ್ನು ಒತ್ತಿ. |
|- | |- | ||
Line 149: | Line 146: | ||
|- | |- | ||
| 04:56 | | 04:56 | ||
− | | ls | + | |ಪುನಃ ls ಎಂದು ಬರೆದು Enter ಒತ್ತಿ. |
|- | |- | ||
| 04:59 | | 04:59 | ||
Line 219: | Line 216: | ||
|ಜಾವಾ ದಲ್ಲಿ, ಎಲ್ಲಾ ಸ್ಟೇಟ್ಮೆಂಟ್ ಗಳು ಸೆಮಿ ಕೊಲೊನ್ ನೊಂದಿಗೆ ಕೊನೆಗೊಳ್ಳುತ್ತವೆ. | |ಜಾವಾ ದಲ್ಲಿ, ಎಲ್ಲಾ ಸ್ಟೇಟ್ಮೆಂಟ್ ಗಳು ಸೆಮಿ ಕೊಲೊನ್ ನೊಂದಿಗೆ ಕೊನೆಗೊಳ್ಳುತ್ತವೆ. | ||
|- | |- | ||
− | | | + | | 07:06 |
|ಹಾಗಾಗಿ, 5 ನೇ ಲೈನ್ ಗೆ ಹೋಗಿ ಹಾಗೂ ಸೆಮಿ ಕೊಲೊನ್ ಅನ್ನು ಸೇರಿಸಿ. | |ಹಾಗಾಗಿ, 5 ನೇ ಲೈನ್ ಗೆ ಹೋಗಿ ಹಾಗೂ ಸೆಮಿ ಕೊಲೊನ್ ಅನ್ನು ಸೇರಿಸಿ. | ||
Line 252: | Line 249: | ||
|- | |- | ||
| 08:06 | | 08:06 | ||
− | | | + | | ಕ್ಲಾಸ್ ನ ಹೆಸರು ಯಾವಾಗಲೂ ಕ್ಯಾಮಲ್ ಕೇಸ್ ನಲ್ಲಿಯೇ ಇರಬೇಕು. |
|- | |- | ||
| 08:10 | | 08:10 | ||
− | | | + | | ಅಂದರೆ, ಇಲ್ಲಿ ಪ್ರತಿ ಹೊಸ ಪದವು ಅಪ್ಪರ್ ಕೇಸ್ ನಿಂದ ಶುರುವಾಗುತ್ತದೆ. |
|- | |- | ||
| 08:14 | | 08:14 | ||
− | | | + | | ಉದಾಹರಣೆಗೆ: class HelloWorld, class ChessGame. |
|- | |- | ||
| 08:19 | | 08:19 | ||
Line 281: | Line 278: | ||
|ಉದಾಹರಣೆಗಾಗಿ: showString(), main(), goToHelp(). ಇಲ್ಲಿ show ಎಂಬಲ್ಲಿನ s ಎಂಬುದು ಲೋವರ್ ಕೇಸ್ ನಲ್ಲಿದೆ ಹಾಗೂ String ಎಂಬಲ್ಲಿನ S ಎಂಬುದು ಅಪ್ಪರ್ ಕೇಸ್ ನಲ್ಲಿದೆ. | |ಉದಾಹರಣೆಗಾಗಿ: showString(), main(), goToHelp(). ಇಲ್ಲಿ show ಎಂಬಲ್ಲಿನ s ಎಂಬುದು ಲೋವರ್ ಕೇಸ್ ನಲ್ಲಿದೆ ಹಾಗೂ String ಎಂಬಲ್ಲಿನ S ಎಂಬುದು ಅಪ್ಪರ್ ಕೇಸ್ ನಲ್ಲಿದೆ. | ||
|- | |- | ||
− | |09:02 | + | | 09:02 |
|ವೇರಿಯೇಬಲ್ ನ ಹೆಸರು ಅಂಕೆಗಳಿಂದ ಶುರುವಾಗುವುದಿಲ್ಲ. | |ವೇರಿಯೇಬಲ್ ನ ಹೆಸರು ಅಂಕೆಗಳಿಂದ ಶುರುವಾಗುವುದಿಲ್ಲ. | ||
|- | |- |
Latest revision as of 11:53, 20 March 2017
Time' | Narration |
00:02 | First java program ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:09 | ಈ ಟ್ಯುಟೋರಿಯಲ್ ನಲ್ಲಿ ನಾವು, |
00:11 | ಸರಳವಾದ ಜಾವಾ ಪ್ರೊಗ್ರಾಮ್ ಅನ್ನು ರಚಿಸುವುದು, |
00:14 | ಪ್ರೊಗ್ರಾಮ್ ಅನ್ನು ಕಂಪೈಲ್ ಮಾಡುವುದು, |
00:16 | ಪ್ರೊಗ್ರಾಮ್ ಅನ್ನು ರನ್ ಮಾಡುವುದು ಮತ್ತು |
00:19 | ಜಾವಾ ದಲ್ಲಿ ಅನುಸರಿಸುವ ನೇಮಿಂಗ್ ಕನ್ವೆನ್ಶನ್ ಗಳ ಬಗ್ಗೆ ಕಲಿಯಲಿದ್ದೇವೆ. |
00:23 | ಇಲ್ಲಿ ನಾವು Ubuntu ವಿನ 11.10 ನೇ ಆವೃತ್ತಿಯನ್ನು ಹಾಗೂ jdk 1.6 ಅನ್ನು ಉಪಯೋಗಿಸುತ್ತಿದ್ದೇವೆ. |
00:32 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮ್ಮ ಸಿಸ್ಟಮ್ ನಲ್ಲಿ JDK 1.6 ಇನ್ಸ್ಟಾಲ್ ಆಗಿರುವುದು ಅನಿವಾರ್ಯವಾಗಿದೆ. |
00:39 | ಇಲ್ಲವಾದಲ್ಲಿ ಅದಕ್ಕೆ ಸಂಬಂಧಿಸಿದ ಟ್ಯುಟೋರಿಯಲ್ ಗಳನ್ನು ಕೆಳಕಂಡ ವೆಬ್ಸೈಟ್ ನಲ್ಲಿ ನೋಡಬಹುದು. |
00:46 | ಈಗ ನಾವು ನಮ್ಮ ಮೊದಲ ಜಾವಾ ಪ್ರೊಗ್ರಾಮ್ ಅನ್ನು ರಚಿಸೋಣ. |
00:51 | ಇದಕ್ಕಾಗಿ ನೀವು Terminal ಹಾಗೂ Text Editor ಅನ್ನು ಹೊಂದಿರಬೇಕು. |
00:56 | ನಾನು gedit ಅನ್ನು ನನ್ನ Text Editor ಆಗಿ ಉಪಯೋಗಿಸುತ್ತಿದ್ದೇನೆ. |
01:01 | Text editor ನಲ್ಲಿ, ನಾವು ಮೊದಲು HelloWorld ಎಂಬ ಕ್ಲಾಸ್ ಅನ್ನು ರಚಿಸೋಣ. |
01:06 | ಹಾಗಾದರೆ, class HelloWorld ಎಂದು ಟೈಪ್ ಮಾಡಿ. HelloWorld ಎಂಬುದು ಕ್ಲಾಸ್ ನ ಹೆಸರಾಗಿದೆ. |
01:17 | ಈಗ Open curly bracket ಅನ್ನು ಒತ್ತಿ. Enter ಒತ್ತಿ ಹಾಗೂ close curly bracket ಅನ್ನು ಒತ್ತಿ. |
01:24 | ಈ ಎರಡು ಕರ್ಲಿ ಬ್ರೆಕೆಟ್ ಗಳ ನಡುವಿನ ಕೋಡ್ HelloWorld ಗೆ ಸೇರಿದ್ದಾಗಿರುತ್ತವೆ. |
01:33 | ಈಗ ಮೇಲಿರುವ Save ಐಕಾನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಈ ಫೈಲ್ ಅನ್ನು ಸೇವ್ ಮಾಡಿ. |
01:37 | ಹೀಗೆ ಆಗಾಗ ಫೈಲ್ ಅನ್ನು ಸೇವ್ ಮಾಡುವುದು ಉತ್ತಮ ಅಭ್ಯಾಸವಾಗಿದೆ. |
01:43 | ಈಗ Save As ಎಂಬ ಡೈಯಲಾಗ್ ಬಾಕ್ಸ್ ಕಾಣಿಸುತ್ತದೆ. |
01:46 | ನೀವು ಫೈಲ್ ಅನ್ನು ಸೇವ್ ಮಾಡಬಯಸಿದ ಸ್ಥಾನವನ್ನು ಹುಡುಕಿ. |
01:51 | ಇಲ್ಲಿ, ನಾನು ಹೋಮ್ ಡೈರಕ್ಟರಿಯಲ್ಲಿ ಒಂದು ಫೋಲ್ಡರ್ ಅನ್ನು ರಚಿಸುತ್ತೇನೆ. |
01:57 | ಅದಕ್ಕೆ Demo ಎಂದು ಹೆಸರಿಡೋಣ. Enter ಒತ್ತಿ. |
02:02 | ಈ ಫೋಲ್ಡರ್ ನ ಒಳಗೆ ನಾವು ಫೈಲ್ ಅನ್ನು ಸೇವ್ ಮಾಡೋಣ. |
02:08 | Name ಎಂಬ ಬಾಕ್ಸ್ ನಲ್ಲಿ ಕ್ಲಾಸ್ ನ ಹೆಸರನ್ನು ಟೈಪ್ ಮಾಡಿ. |
02:13 | ಜಾವಾ ದಲ್ಲಿ ಕ್ಲಾಸ್ ನ ಹೆಸರು ಮತ್ತು ಫೈಲ್ ನ ಹೆಸರು ಒಂದೇ ಆಗಿರಬೇಕು. |
02:20 | ನೆನಪಿಸಿಕೊಳ್ಳಿ, ನಾವು HelloWorld ಎಂಬ ಕ್ಲಾಸ್ ಅನ್ನು ರಚಿಸಿದ್ದೆವು. |
02:25 | ಹಾಗಾದರೆ ನಾವು ಫೈಲ್ ಅನ್ನು HelloWorld dot java ಎಂದು ಸೇವ್ ಮಾಡೊಣ. |
02:33 | Dot java ಎಂಬುದು ಜಾವಾ ಫೈಲ್ ಗೆ ಕೊಟ್ಟ ಫೈಲ್ ಎಕ್ಸ್ಟೆನ್ಶನ್ ಆಗಿದೆ. |
02:39 | ನಂತರ Save ಬಟನ್ ಮೇಲೆ ಕ್ಲಿಕ್ ಮಾಡಿ, ಇದರಿಂದ ಫೈಲ್ ಸೇವ್ ಆಗುತ್ತದೆ. |
02:47 | ಕ್ಲಾಸ್ ನ ಒಳಗೆ ನಾವು main ಎಂಬ ಮೆಥೆಡ್ ಅನ್ನು ಬರೆಯೋಣ. |
02:53 | ಹಾಗಾದರೆ ಹೀಗೆ ಟೈಪ್ ಮಾಡಿ: public static void main ಪೆರಂಥಿಸಿಸ್ "()", ಆ ಪೆರಂಥಿಸಿಸ್ ನ ಒಳಗೆ String arg ಮತ್ತು ಸ್ಕ್ವೇರ್ ಬ್ರಾಕೆಟ್ಸ್ "[]". |
03:10 | Main ಎಂಬ ಕ್ರಿಯೆಯು ಪ್ರೊಗ್ರಾಮ್ ನ ಸ್ಟಾರ್ಟಿಂಗ್ ಪೋಯಿಂಟ್ ಅನ್ನು ಗುರುತಿಸುತ್ತದೆ. |
03:15 | ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ public, static, void ಮತ್ತು String ಗಳ ಬಗ್ಗೆ ವಿವರಿಸಲಿದ್ದೇವೆ. |
03:23 | ಹಾಗಾದರೆ, ಪುನಃ ಓಪನ್ ಕರ್ಲಿ ಬ್ರಾಕೆಟ್ "{" ಅನ್ನು ಒತ್ತಿ. |
03:27 | Enter ಒತ್ತಿ ಹಾಗೂ ಕ್ಲೋಸ್ ಕರ್ಲಿ ಬ್ರಾಕೆಟ್ "}" ಅನ್ನು ಒತ್ತಿ. |
03:32 | ಈ ಎರಡು ಕರ್ಲಿ ಬ್ರೆಕೆಟ್ ಗಳ ನಡುವಿನ ಕೋಡ್ main ಎಂಬ ಮೆಥಡ್ ಗೆ ಸೇರಿದ್ದಾಗಿರುತ್ತವೆ. |
03:41 | ನಾವೀಗ Terminal ನಲ್ಲಿ ಲೈನ್ ಪ್ರದರ್ಶಿತವಾಗಲು ಒಂದು ಕೋಡ್ ಅನ್ನು ಬರೆಯೋಣ. |
03:46 | ಹಾಗಾಗಿ, main ಎಂಬ ಮೆಥಡ್ ನ ಒಳಗೆ System dot out dot println parentheses semi-colon ಎಂದು ಟೈಪ್ ಮಾಡಿ. |
03:59 | ಈ ಸ್ಟೇಟ್ಮೆಂಟ್ ಅನ್ನು ಲೈನ್ ಅನ್ನು ಪ್ರಿಂಟ್ ಮಾಡಲು ಉಪಯೋಗಿಸುತ್ತಾರೆ. |
04:05 | semi-colon ಎಂಬುದು ಲೈನ್ ಅನ್ನು ಟರ್ಮಿನೇಟ್ ಮಾಡಲು ಉಪಯೋಗಿಸುತ್ತಾರೆ. |
04:10 | ಈಗ ನಾವು ಜಾವಾ ಗೆ ಏನು ಪ್ರಿಂಟ್ ಮಾಡಬೇಕೆಂದು ಹೇಳೋಣ. |
04:13 | ಹಾಗಾಗಿ parentheses ನ ಒಳಗೆ double quotes ನಲ್ಲಿ My first java program ಆಶ್ಚರ್ಯಸೂಚಕ ಚಿಹ್ನೆ ಹೀಗೆ ಟೈಪ್ ಮಾಡಿ. |
04:30 | ನಾವೀಗ ಈ ಫೈಲ್ ಅನ್ನು Save ಐಕಾನ್ ಮೇಲೆ ಕ್ಲಿಕ್ ಮಾಡಿ ಸೇವ್ ಮಾಡೋಣ. |
04:36 | ಈಗ Terminal ಗೆ ಹೋಗೋಣ. |
04:38 | ನೀವು HelloWorld.java ಎಂಬುದು ಎಲ್ಲಿ ಸೇವ್ ಆಗಿದೆಯೋ ಅದೇ ಡೈರಕ್ಟರಿಯಲ್ಲಿ ಇದ್ದೀರಾ ಎಂದು ಖಚಿತಪಡಿಸಿಕೊಳ್ಳಿ. |
04:46 | ನೆನಪಿಸಿಕೊಳ್ಳಿ, ನಾನು ನನ್ನ ಹೋಮ್ ಡೈರಕ್ಟರಿಯಲ್ಲಿದ್ದೇನೆ. |
04:50 | ಈಗ, cd Space Demo ಎಂದು ಟೈಪ್ ಮಾಡಿ Enter ಒತ್ತಿ. |
04:56 | ಪುನಃ ls ಎಂದು ಬರೆದು Enter ಒತ್ತಿ. |
04:59 | ನಾವು HelloWorld.java ಎಂಬ ಫೈಲ್ Demo ಎಂಬ ಫೋಲ್ಡರ್ ನಲ್ಲಿ ಇದೆ ಎಂದು ನೋಡುತ್ತೇವೆ. |
05:06 | ಈಗ ಈ ಫೈಲ್ ಅನ್ನು ಕಂಪೈಲ್ ಮಾಡೋಣ, javac Space HelloWorld dot java ಎಂದು ಟೈಪ್ ಮಾಡಿ Enter ಒತ್ತಿ. |
05:21 | ಇದು ನಾವು ರಚಿಸಿದ ಫೈಲ್ ಅನ್ನು ಕಂಪೈಲ್ ಮಾಡುತ್ತದೆ. |
05:25 | ಸರಿ, ಯಾವುದೇ ಎರರ್ ಗಳಿಲ್ಲದೆಯೇ ಫೈಲ್ ಕಂಪೈಲ್ ಆಗಿದೆ. |
05:30 | ನಾವು HelloWorld.class ಎಂಬ ಫೈಲ್ ರಚಿತವಾಗಿದೆ ಎಂದು ನೋಡಬಹುದು. |
05:36 | ಈ ಫೈಲ್ ಅನ್ನು ಎಲ್ಲಿ ಕೂಡಾ ರನ್ ಮಾಡಬಹುದು. |
05:38 | ಅಂದರೆ, ಯಾವ ಆಪರೇಟಿಂಗ್ ಸಿಸ್ಟಮ್ ನಲ್ಲಿ ಕೂಡಾ ರನ್ ಮಾಡಬಹುದೆಂದರ್ಥ. |
05:41 | ಇಲ್ಲಿ ನಮಗೆ ಜಾವಾ ಕಂಪೈಲರ್ ನ ಆವಶ್ಯಕತೆಯಿರುವುದಿಲ್ಲ. |
05:45 | ಹಾಗಾಗಿಯೇ, ಜಾವಾ ದ ವಿವರಣೆ ಹೀಗಿರುವುದು, "ಒಮ್ಮೆ ಬರೆಯಿರಿ ಹಾಗೂ ಎಲ್ಲೆಡೆ ರನ್ ಮಾಡಿ". |
05:51 | ಹಾಗಾಗಿ, ಒಮ್ಮೆ ಕಂಪೈಲೇಶನ್ ಎಂಬುದು ಯಶಸ್ವಿಯಾಗಿ ಆದ ಮೇಲೆ ಕಮಾಂಡ್ ನ ಉಪಯೋಗದಿಂದ ಪ್ರೊಗ್ರಾಮ್ ಅನ್ನು ರನ್ ಮಾಡಿ, |
05:56 | java (ಈ ಬಾರಿ c ಎಂಬುದಿಲ್ಲ) space HelloWorld (dot java ಎಂಬುದೂ ಇಲ್ಲ) ಮತ್ತು Enter ಒತ್ತಿ. |
06:07 | ನೀವು My first java program! ಎಂಬ ಔಟ್ಪುಟ್ ಅನ್ನು ಪಡೆಯುತ್ತೀರಿ. |
06:13 | ಈಗ ನಾವು ನಮ್ಮ ಮೊದಲ ಜಾವಾ ಪ್ರೊಗ್ರಾಮ್ ಅನ್ನು ಬರೆದಿದ್ದೇವೆ. ನಾವೀಗ editor ಗೆ ಹಿಂತಿರುಗೋಣ. |
06:22 | ಈಗ ಸ್ಟೇಟ್ಮೆಂಟ್ ನ ಕೊನೆಯಲ್ಲಿರುವ semi-colon ಅನ್ನು ತೆಗೆಯೋಣ. |
06:27 | Save ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
06:29 | Terminal ಗೆ ಹಿಂತಿರುಗೋಣ. |
06:33 | javac HelloWorld dot java ಎಂಬ ಕಮಾಂಡ್ ಅನ್ನು ರನ್ ಮಾಡಿ. |
06:41 | ಕಂಪೈಲರ್ ಎಂಬುದು ಎರರ್ ಅನ್ನು ತೋರಿಸುತ್ತದೆ. |
06:44 | ಅದು, 5 ನೇ ಲೈನ್ ನಲ್ಲಿ ಸೆಮಿ ಕೊಲೊನ್ ಎಂಬುದರ ಅಗತ್ಯ ಇದೆ ಎಂದು ಹೇಳುತ್ತದೆ. |
06:52 | ಅಪ್ ಏರೋ ಎಂಬುದು ಎರರ್ ಸ್ಟೇಟ್ಮೆಂಟ್ ಅನ್ನು ಸೂಚಿಸುತ್ತದೆ. |
06:57 | ನಾವೀಗ Editor ಗೆ ಹಿಂತಿರುಗೋಣ. |
07:01 | ಜಾವಾ ದಲ್ಲಿ, ಎಲ್ಲಾ ಸ್ಟೇಟ್ಮೆಂಟ್ ಗಳು ಸೆಮಿ ಕೊಲೊನ್ ನೊಂದಿಗೆ ಕೊನೆಗೊಳ್ಳುತ್ತವೆ. |
07:06 | ಹಾಗಾಗಿ, 5 ನೇ ಲೈನ್ ಗೆ ಹೋಗಿ ಹಾಗೂ ಸೆಮಿ ಕೊಲೊನ್ ಅನ್ನು ಸೇರಿಸಿ. |
07:13 | Save ಐಕಾನ್ ನ ಮೇಲೆ ಕ್ಲಿಕ್ ಮಾಡಿ. ಕಂಪೈಲಿಂಗ್ ಗೂ ಮೊದಲು ಫೈಲ್ ಅನ್ನು ಸೇವ್ ಮಾಡುವುದು ಅನಿವಾರ್ಯವಾಗಿದೆ. |
07:22 | Terminal ಗೆ ಹಿಂತಿರುಗೋಣ. |
07:25 | javac HelloWorld dot java ಎಂಬುದರ ಸಹಾಯದಿಂದ ಫೈಲ್ ಅನ್ನು ಕಂಪೈಲ್ ಮಾಡಿ. |
07:32 | ಫೈಲ್ ಎಂಬುದು ಯಾವುದೇ ಎರರ್ ಇಲ್ಲದೆಯೇ ಯಶಸ್ವಿಯಾಗಿ ಕಂಪೈಲ್ ಆಗಿದೆಯೆಂದು ನಾವು ನೋಡಬಹುದು. |
07:36 | ಈಗ, java HelloWorld ಎಂಬ ಕಮಾಂಡ್ ನ ಸಹಾಯದಿಂದ ಪ್ರೊಗ್ರಾಮ್ ಅನ್ನು ರನ್ ಮಾಡಿ. |
07:45 | ಈಗ ನಾವು My first java program! ಎಂಬ ಔಟ್ಪುಟ್ ಅನ್ನು ನೋಡುತ್ತೇವೆ. |
07:49 | ನಾವು ಜಾವಾದಲ್ಲಿ ಹೀಗೆ ಎರರ್ ಅನ್ನು ನಿರ್ವಹಿಸುತ್ತೇವೆ. |
07:54 | ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ಎರರ್ ಗಳ ಬಗ್ಗೆ ಇನ್ನೂ ಹೆಚ್ಚು ತಿಳಿಯೋಣ. |
08:02 | ಈಗ ನಾವು ಜಾವಾ ದಲ್ಲಿ ನೇಮಿಂಗ್ ಕನ್ವೆನ್ಶನ್ ಎಂದರೇನು ಎಂಬುದನ್ನು ತಿಳಿಯೋಣ. |
08:06 | ಕ್ಲಾಸ್ ನ ಹೆಸರು ಯಾವಾಗಲೂ ಕ್ಯಾಮಲ್ ಕೇಸ್ ನಲ್ಲಿಯೇ ಇರಬೇಕು. |
08:10 | ಅಂದರೆ, ಇಲ್ಲಿ ಪ್ರತಿ ಹೊಸ ಪದವು ಅಪ್ಪರ್ ಕೇಸ್ ನಿಂದ ಶುರುವಾಗುತ್ತದೆ. |
08:14 | ಉದಾಹರಣೆಗೆ: class HelloWorld, class ChessGame. |
08:19 | ಇಲ್ಲಿ, Hello ನಲ್ಲಿನ H ಹಾಗೂ World ನಲ್ಲಿನ W ಎಂಬುದು ಅಪ್ಪರ್ ಕೇಸ್ ನಲ್ಲಿದೆ. |
08:25 | ಹಾಗೆಯೇ, ChessGame ಎಂಬಲ್ಲಿನ C ಮತ್ತು G ಗಳೂ ಕೂಡಾ ಅಪ್ಪರ್ ಕೇಸ್ ನಲ್ಲಿಯೇ ಇದೆ. |
08:31 | ಮೆಥಡ್ ನ ಹೆಸರು ಯಾವಾಗಲೂ ಮಿಕ್ಸಡ್ ಕೇಸ್ ನಲ್ಲಿರಬೇಕು. |
08:35 | ಅಂದರೆ, ಅದರ ಮೊದಲ ಪದವು ಲೋವರ್ ಕೇಸ್ ನಲ್ಲಿರಬೇಕು. |
08:39 | ಹಾಗೂ ಉಳಿದ ಎಲ್ಲಾ ಹೊಸ ಪದಗಳು ಅಪ್ಪರ್ ಕೇಸ್ ನಲ್ಲಿರಬೇಕು. |
08:44 | ಹಾಗೂ ಮೆಥಡ್ ನ ಹೆಸರು ಕ್ರಿಯಾಪದವಾಗಿರಬೇಕು. |
08:48 | ಉದಾಹರಣೆಗಾಗಿ: showString(), main(), goToHelp(). ಇಲ್ಲಿ show ಎಂಬಲ್ಲಿನ s ಎಂಬುದು ಲೋವರ್ ಕೇಸ್ ನಲ್ಲಿದೆ ಹಾಗೂ String ಎಂಬಲ್ಲಿನ S ಎಂಬುದು ಅಪ್ಪರ್ ಕೇಸ್ ನಲ್ಲಿದೆ. |
09:02 | ವೇರಿಯೇಬಲ್ ನ ಹೆಸರು ಅಂಕೆಗಳಿಂದ ಶುರುವಾಗುವುದಿಲ್ಲ. |
09:06 | ನಾವು ನಮ್ಮ ಕ್ಲಾಸ್, ಮೆಥಡ್ ಹಾಗೂ ವೇರಿಯೇಬಲ್ ನ ಹೆಸರುಗಳಿಗೆ ಕೀವರ್ಡ್ ಅನ್ನು ಉಪಯೋಗಿಸುವುದಿಲ್ಲ. |
09:13 | ಉದಾಹರಣೆಗೆ: public, private, void, static ಎಂಬೀ ಮುಂತಾದ ಕೀವರ್ಡ್ ಗಳನ್ನು ಉಪಯೋಗಿಸುವುದಿಲ್ಲ. |
09:22 | ಒಟ್ಟಿನಲ್ಲಿ ನಾವು ಈ ಟ್ಯುಟೋರಿಯಲ್ ನಲ್ಲಿ ನಾವು ಸರಳವಾದ ಜಾವಾ ಪ್ರೊಗ್ರಾಮ್ ಅನ್ನು ಬರೆಯಲು, ಕಂಪೈಲ್ ಮಾಡಲು ಹಾಗೂ ರನ್ ಮಾಡಲು ಕಲಿತೆವು. |
09:30 | ಹಾಗೂ ನಾವು ಜಾವಾ ದಲ್ಲಿನ ನೇಮಿಂಗ್ ಕನ್ವಿನ್ಶನ್ ಗಳನ್ನು ಕೂಡಾ ನೋಡಿದೆವು. |
09:35 | ಸ್ವಕೀಯ ಮೌಲ್ಯಮಾಪನಕ್ಕಾಗಿ ನೀವು Java file name and class name should be same ಎಂಬುದನ್ನು ಪ್ರಿಂಟ್ ಮಾಡಲು ಜಾವಾ ಪ್ರೊಗ್ರಾಮ್ ಅನ್ನು ಬರೆಯಿರಿ. |
09:47 | ಈ ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು spoken-tutorial.org/What_is_a_Spoken_Tutorial ಎಂಬ ಲಿಂಕ್ ನಲ್ಲಿ ಸಿಗುವ ವೀಡಿಯೋ ವನ್ನು ನೋಡಿ. |
09:58 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ. |
10:02 | ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ನೀವಿದನ್ನು ಡೌನ್ಲೋಡ್ ಮಾಡಿ ಕೂಡಾ ನೋಡಬಹುದು. |
10:08 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
10:13 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
10:17 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
10:25 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
10:30 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
10:38 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
10:49 | ಈಗ ನಾವು ಈ ಪಾಠದ ಕೊನೆಗೆ ಬಂದಿದ್ದೇವೆ. |
10:51 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ. ಐ. ಟಿ ಬಾಂಬೆ ಯಿಂದ ವಾಸುದೇವ.
ಧನ್ಯವಾದಗಳು. |