Difference between revisions of "Drupal/C2/Displaying-Contents-using-Views/Kannada"

From Script | Spoken-Tutorial
Jump to: navigation, search
 
Line 8: Line 8:
 
|-
 
|-
 
| 00:07
 
| 00:07
|ಈ ಟ್ಯುಟೋರಿಯಲ್ ನಲ್ಲಿ ನಾವು: “ವ್ಯೂಸ್”, “ಟೀಸರ್” ಅನ್ನು ಬಳಸಿ ಪೇಜ್ ನಿರ್ಮಾಣ ಮತ್ತು, ಸರಳವಾದ “ಬ್ಲಾಕ್ ವ್ಯೂವ್” ಅನ್ನು ಕಲಿಯಲಿದ್ದೇವೆ.
+
|ಈ ಟ್ಯುಟೋರಿಯಲ್ ನಲ್ಲಿ ನಾವು ವ್ಯೂಸ್, ಟೀಸರ್ ಅನ್ನು ಬಳಸಿ ಪೇಜ್ ನಿರ್ಮಾಣ ಮತ್ತು, ಸರಳವಾದ “ಬ್ಲಾಕ್ ವ್ಯೂವ್” ಅನ್ನು ಕಲಿಯಲಿದ್ದೇವೆ.
 
|-
 
|-
 
|00:15
 
|00:15

Latest revision as of 16:37, 17 October 2016

Time Narration
00:01 Views ಅನ್ನು ಬಳಸಿ ವಿಷಯಗಳನ್ನು (ಕಂಟೆಟ್ಸ್) ಗಳನ್ನು ಪ್ರದರ್ಶಿಸುವುದನ್ನು ತಿಳಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ .
00:07 ಈ ಟ್ಯುಟೋರಿಯಲ್ ನಲ್ಲಿ ನಾವು ವ್ಯೂಸ್, ಟೀಸರ್ ಅನ್ನು ಬಳಸಿ ಪೇಜ್ ನಿರ್ಮಾಣ ಮತ್ತು, ಸರಳವಾದ “ಬ್ಲಾಕ್ ವ್ಯೂವ್” ಅನ್ನು ಕಲಿಯಲಿದ್ದೇವೆ.
00:15 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು: ಉಬಂಟು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್, ಡ್ರುಪಲ್ 8 ಮತ್ತು, ಫೈರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಬಳಸಿದ್ದೇನೆ.ನಿಮ್ಮ ಅನುಕೂಲತೆಗೆ ತಕ್ಕಂತೆ ನೀವು ಯಾವುದೇ ವೆಬ್ ಬ್ರೌಸರ್ ಅನ್ನು ಬಳಸಬಹುದು.
00:31 ಮೊದಲಿಗೆ ವ್ಯೂಸ್ ಬಗ್ಗೆ ತಿಳಿದುಕೊಳ್ಳೋಣ. ವ್ಯೂಸ್ ಅನ್ನು ಸದೃಶ ವಿಷಯಗಳನ್ನು(ಕಂಟೆಂಟ್) ಪ್ರದರ್ಶಿಸಲು ಬಳಸುತ್ತೇವೆ.ವ್ಯೂಸ್ ಅನೇಕ ಸ್ವರೂಪಗಳಲ್ಲಿ ಪ್ರದರ್ಶಿತವಾಗುತ್ತದೆ.
00:43 ಟೇಬಲ್ಸ್, ಲಿಸ್ಟ್ಸ್,ಗ್ಯಾಲರಿ ಮುಂತಾದುವುಗಳು.
00:49 ಇದು ವಿಷಯಗಳನ್ನು ನಾವು ವ್ಯಾಖ್ಯಾನಿಸಿದ ಮಾನದಂಡಗಳಿಗೆ ಅನುಸಾರವಾಗಿ “ಆಯ್ಕೆ, ವ್ಯವಸ್ಥಾಪನೆ, ಶೋಧನೆ” ಮತ್ತು “ಪ್ರಸ್ತುತ” ಮಾಡಬಲ್ಲದು. ಬೇರೆ ತಂತ್ರಾಂಶಗಳಲ್ಲಿ (ಸಾಫ್ಟ್ ವೇರ್)ವ್ಯೂಸ್ ಮೂಲಭೂತವಾಗಿ ವರದಿ (ರಿಪೋರ್ಟ್) ಅಥವಾ ಪ್ರಶ್ನೆಗಳ ಫಲಿತಾಂಶವಾಗಿ(ಕ್ವ್ಯಾರಿ ರಿಸಲ್ಟ್ಸ್) ಪರಿಗಣಿತವಾಗಿದೆ.
01:04 ಉದಾಹರಣೆಗಾಗಿ ಗ್ರಂಥಾಲಯಕ್ಕೆ ಹೋಗಿ ನೀವು ಗ್ರಂಥಪಾಲಕನಿಗೆ ಈ ಕೆಳಗಿನ ಮಾನದಂಡಗಳಲ್ಲಿ ಪುಸ್ತಕಗಳನ್ನು ಕೇಳಿದಿರಿ ಎಂದಿಟ್ಟುಕೊಳ್ಳಿ; ಅವುಗಳೆಂದರೆ: 1905 ಗಿಂತ ಹಿಂದೆ ಪ್ರಕಾಶಿತವಾದವುಗಳು, “ಎಮ್” ನಿಂದ ಆರಂಭವಾಗುವ ಹೆಸರುಳ್ಳ ಲೇಖಕನಿಂದ ಬರೆಯಲ್ಪಟ್ಟವು,
01:19 ನೂರಕ್ಕಿಂತ ಹೆಚ್ಚು ಪುಟಗಳನ್ನು ಹೊಂದಿರುವವು ಮತ್ತು ಕೆಂಪು ಬಣ್ಣದ ಮುಖ ಪುಟವನ್ನು ಹೊಂದಿರುವವು.
01:25 ಈ ಪ್ರಶ್ನೆಗಳನ್ನು ಕೇಳುವುದರಿಂದ ನೀವು ಗ್ರಂಥಾಲಯದಿಂದ ಹೊರ ದೂಡಲ್ಪಡುವುದು ನಿಶ್ಚಿತ. ಆದರೆ ಡ್ರುಪಲ್ ನಲ್ಲಿ ವ್ಯೂಸ್ ಅನ್ನು ಬಳಸಿ ಈ ಅನ್ವೇಷಣೆಗಳನ್ನುಸರಳವಾಗಿ ಮಾಡಬಹುದು.
01:34 ನಮ್ಮ “ವ್ಯೂಸ್” ಅನ್ನು ಸೆಟ್ ಮಾಡಲು ಸರಳವಾದ 5 ಹಂತಗಳ ಪ್ರಕ್ರಿಯೆಯನ್ನು ಅನುಸರಿಸಬೇಕಾಗಿದೆ. ವ್ಯೂಸ್ ನ ಸೆಟ್ ಮಾಡುವ ಪ್ರಕ್ರಿಯೆ ಹೀಗಿದೆ-ನಿಮ್ಮ ಡಿಸ್ಪ್ಲೇ ಅನ್ನು ಆಯ್ಕೆ ಮಾಡಿ. ನಿಮ್ಮಫಾರ್ಮೇಟ್ ಅನ್ನು ಸಿದ್ಧಪಡಿಸಿ.
01:45 ನಿಮ್ಮ ಕ್ಷೇತ್ರಗಳನ್ನು ಗುರುತಿಸಿಕೊಳ್ಳಿ.ಶೋಧಕವನ್ನು(ಫಿಲ್ಟರ್) ಅನ್ನು ಅನ್ವಯಿಸಿ ಮತ್ತು ಫಲಿತಾಂಶವನ್ನುಸಾರ್ಟ್ ಮಾಡಿರಿ.
01:53 ಈಗ, ಡ್ರುಪಲ್ ಸೈಟ್ ನಲ್ಲಿ ಪ್ರಮಾಣಿತ ವ್ಯೂಸ್ ಅನ್ನು ರಚಿಸುವುದನ್ನು ಕಲಿಯೋಣ.
01:53 ಈಗ, ನಾವು ಈ ಹಿಂದೆ ರಚಿಸಿರುವ ವೆಬ್ ಸೈಟ್ ತೆರೆಯೋಣ.
01:58 ಡ್ರುಪಲ್ ಸೈಟ್ ನಲ್ಲಿ “ವ್ಯೂಸ್” ಅನ್ನು ರಚಿಸುವುದನ್ನು ಕಲಿಯೋಣ.
02:04 “ಸ್ಟ್ರಕ್ಚರ್” ಅನ್ನು ಕ್ಲಿಕ್ ಮಾಡಿ, ನಂತರ ವ್ಯೂಸ್ ನ ಮೇಲೆ ಕ್ಲಿಕ್ಕಿಸಿ.
02:09 ಡ್ರುಪೆಲ್ ನಲ್ಲಿ ಹಲವು ಅಂತರ್ನಿರ್ಮಿತ ವ್ಯೂಸ್ ಗಳಿದ್ದಾವೆ. ಉದಾಹರಣೆಗಾಗಿ - ಕಂಟೆಂಟ್ ವ್ಯೂವ್ ನಿರ್ವಾಹಕರಿಗೆ(ಅಡ್ಮಿನಿಸ್ಟ್ರೇಟರ್) ನಿರ್ವಹಿಸುವ ಅವಕಾಶವನ್ನು ನೀಡುತ್ತದೆ.
02:20 ಇದೇ ರೀತಿಯಲ್ಲಿ “ಕಸ್ಟಮ್ ಬ್ಲಾಕ್ ಲೈಬ್ರರಿ, ಫೈಲ್ಸ್, ಫ್ರಂಟ್ ಪೇಜ್, ಪೀಪಲ್, ರೀಸೆಂಟ್ ಕಮೆಂಟ್ಸ್, ರೀಸೆಂಟ್ ಕಂಟೆಂಟ್, ಟ್ಯಾಕ್ಸಿನೋಮಿ ಟರ್ಮ್ಸ್, ಹೂ ಈಸ್ ನ್ಯೂ” ಮತ್ತು “ಹೂ ಈಸ್ ಆನ್ ಲೈನ್” ವ್ಯೂಸ್ ಗಳನ್ನು ನಿರ್ವಹಿಸಬಹುದು.
02:37 ಇವುಗಳು ಡ್ರುಪೆಲ್ ನಲ್ಲಿ ದೊರಕುವ ಅಪ್ ಡೇಟ್ ಮಾಡಬಹುದಾದ ಅಥವಾ ಬದಲಿಸಬಹುದಾದ ವ್ಯೂಸ್ ಗಳು.
02:44 ಮೊದಲು ಟೀಸರ್ ಅನ್ನು ಬಳಸಿ ಸರಳವಾದ ಪುಟವೊಂದನ್ನು (ಪೇಜ್) ನಿರ್ಮಿಸೋಣ. ಇದು ನಮ್ಮ ಈವೆಂಟ್ಸ್ ಕಂಟೆಂಟ್ ಟೈಪ್ ಆಧಾರಪುಟವಾಗುವುದು.
02:54 “ಆಡ್ (Add)ನ್ಯೂ ವ್ಯೂಸ್ ಅನ್ನು” ಕ್ಲಿಕ್ ಮಾಡಿ ಮತ್ತು ಇದಕ್ಕೆ " ಈವೆಂಟ್ಸ್ ಸ್ಪೋನ್ಸರ್ಡ್" ಎಂದು ಹೆಸರಿಸಿ.
03:02 ಕಂಟೆಂಟ್ “ಆಫ್ ಟೈಪ್” ಅನ್ನು “ಆಲ್” ನಿಂದ “ಈವೆಂಟ್ಸ್” ಗೆ ಹಾಗು “ಸೊರ್ಟೆಡ್ ಬೈ” ಅನ್ನು “ನ್ಯೂಯೆಸ್ಟ್ ಫಸ್ಟ್” ಎಂದು ಬದಲಿಸಿ.
03:11 “ಕ್ರಿಯೇಟ್ ಪೇಜ್” ಅನ್ನು ಕ್ಲಿಕ್ ಮಾಡಿ. “ಡಿಸ್ಪ್ಲೇ ಫಾರ್ಮೆಟ್” ಅನ್ನು “ಅನ್ ಫಾರ್ಮೆಟೆಡ್ ಲಿಸ್ಟ್ ಆಫ್ ಟೀಸರ್ಸ್” ಎಂದಿರಿಸಿ.
03:20 ಇದು ಯಾಕೆಂದರೆ ನಾವೀಗಾಗಲೇ ನಮ್ಮ ಮ್ಯಾನೇಜಿಂಗ್ ಡಿಸ್ಪ್ಲೇ ನಲ್ಲಿ“ಟೀಸರ್ ಮೋಡ್” ಅನ್ನು ನಿರ್ಧರಿಸಿದ್ದೇವೆ.
03:26 “ಕ್ರಿಯೇಟ್ ಅ ಮೆನು ಲಿಂಕ್” ಅನ್ನು ಗುರುತಿಸಿರಿ. ಮೆನು ಡ್ರಾಪ್ ಡೌನ್ ನ ಕೆಳಗಿನ “ಮೈನ್ ನೇವಿಗೇಶನ್” ಅನ್ನು ಆಯ್ಕೆ ಮಾಡಿಕೊಳ್ಳಿ.
03:35 ಇದು ನಮ್ಮ ತಾಣಕ್ಕೆ ಸೇರಿಸಿರುವ ಎಲ್ಲಾ ಈವೆಂಟ್ಸ್ ನೋಡಲು ನಮಗೆ ಸಹಕಾರಿಯಾಗುತ್ತದೆ.
03:41 “ಸೇವ್ ಎಂಡ್ ಎಡಿಟ್” ಅನ್ನು ಕ್ಲಿಕ್ ಮಾಡಿ. ಈಗ ನಾವು ಆರಂಭದಲ್ಲಿ ತಿಳಿಸಿದ ಸ್ಕ್ರೀನ್ ಅನ್ನು ಉಪಯೋಗಿಸಲು ಶಕ್ತರಾಗಿದ್ದೇವೆ.
03:51 ಈ ಸ್ಕ್ರೀನ್ ಪೇಜ್ ಒಂದನ್ನು ಪ್ರದರ್ಶಿಸುತ್ತದೆ, ಇಲ್ಲಿಟೀಸರ್ ,“ಅನ್ ಫಾರ್ಮೆಟೆಡ್ ಲಿಸ್ಟ್” ಎನ್ನುವ ಫಾರ್ಮೆಟ್ ಅನ್ನು ಹೊಂದಿದೆ.
03:59 ನಾವು ನಮ್ಮ ಟೀಸರ್ ಮೋಡ್ ಅನ್ನು ಸ್ಥಾಪಿಸಿರುವುದರಿಂದ ನಮಗಿಲ್ಲಿ ಯಾವುದೇ ಫೀಲ್ಡ್ ನ ಅಗತ್ಯತೆ ಇರುವುದಿಲ್ಲ.
04:05 “ಫಿಲ್ಟರ್ ಕ್ರೈಟೇರಿಯ”, ಈವೆಂಟ್ ಗಳನ್ನು ಪ್ರದರ್ಶಿಸಿದೆ ಮತ್ತು “ಸಾರ್ಟ್ ಕ್ರೈಟೇರಿಯ” ನಲ್ಲಿ ಅವರೋಹಣ ಕ್ರಮದಲ್ಲಿ ಪ್ರಕಾಶನದ ದಿನಾಂಕ ಪ್ರದರ್ಶಿತವಾಗುತ್ತದೆ.
04:16 ಪರೆದೆಯ ಕೆಳ ಭಾಗದಲ್ಲಿ ನಾವು ಪ್ರೀವ್ಯೂವ್ ಮಾಡಬಹುದು.
04:21 ನಿಮಗಿದು ಇಷ್ಟವಾಗದೇ ಇದ್ದಲ್ಲಿ, ಸರಳವಾಗಿ ಇದನ್ನು ಬದಲಿಸಬಹುದು ಕೂಡ. ಇದನ್ನು ನಾವು ಇನ್ನೊಂದು ಟ್ಯುಟೋರಿಯಲ್ ನಲ್ಲಿ ತಿಳಿಯೋಣ.
04:28 ಸಧ್ಯ,“ಸೇವ್” ಅನ್ನು ಕ್ಲಿಕ್ ಮಾಡಿ. ನಂತರ “ಬ್ಯಾಕ್ ಟು ಸೈಟ್” ಅನ್ನು ಕ್ಲಿಕ್ಕಿಸಿ.
04:35 ಮುಖ್ಯ ಮೆನುವಿನಲ್ಲಿ ನಮ್ಮೆಲ್ಲಾ ಈವೆಂಟ್ ಗಳ ಪಟ್ಟಿಯಿರುವ “ಈವೆಂಟ್” ಎನ್ನುವ ಟ್ಯಾಬ್ ಅನ್ನು ಹೊಂದಿದ್ದೇವೆ.
04:44 ಇಲ್ಲಿ ವಿಭಿನ್ನ ಆಕಾರ ಮತ್ತು ಗಾತ್ರಗಳನ್ನು ಹೊಂದಿರುವ ಎಲ್ಲಾಈವೆಂಟ್ ಲೋಗೋ ಗಳನ್ನು ನಾವು ಕಾಣಬಹುದು.
04:50 ಇಲ್ಲಿ “ಈವೆಂಟ್ ವೆಬ್ ಸೈಟ್” ಮತ್ತು ಈವೆಂಟ್ ಡೇಟ್ ಗಳನ್ನು ಕಾಣಬಹುದು.
04:55 ಇದನ್ನು ಬದಲಿಸಬೇಕಾದಲ್ಲಿ ನಮ್ಮ ಟೀಸರ್ ಮೋಡ್ ನಲ್ಲಿ ಈವೆಂಟ್ ಕಂಟೆಂಟ್ ಮಾದರಿಗಳನ್ನು ಬದಲಿಸಿಕೊಳ್ಳಬಹುದು.
05:04 ಇಷ್ಟೇ! ಇದು ನಮ್ಮೆಲ್ಲಾ ಈವೆಂಟ್ ಗಳಿಗೆ ಆಧಾರ ಪುಟವಾಗಿದೆ.
05:09 ಮಾಹಿತಿಗಳನ್ನು ಬ್ಲಾಕ್ ರೀಜನ್ ಅಥವಾ ಸೈಡ್ ಬಾರ್ ನಲ್ಲಿ ತೋರಿಸಬಹುದಾದುದು ಡ್ರುಪಲ್ ನ ಪ್ರಮುಖ ವಿಶೇಷತೆಯಾಗಿದೆ.
05:19 ಈ ಹಿಂದೆ ನಾವು ಹೊಸ ಈವೆಂಟ್ ಅನ್ನು ಸೇರಿಸಿದಲ್ಲಿ , ಆ ಈವೆಂಟ್ ಇರುವ ಪ್ರತಿ ಪುಟದ ಸೈಡ್ ಬಾರ್ ಅನ್ನು ಅಪ್ ಡೇಟ್ ಮಾಡಬೇಕಿತ್ತು.
05:31 ಆದರೀಗ ವ್ಯೂಸ್, ವಿಷಯಗಳನ್ನು ಸ್ವತಃ ಅಪ್ ಡೇಟ್ ಮಾಡುತ್ತದೆ.
05:36 “ಸ್ಟ್ರಕ್ಚರ್” ಅನ್ನು ಕ್ಲಿಕ್ಕಿಸಿ. ನಂತರದಲ್ಲಿ “ವ್ಯೂಸ್” ಅನ್ನು ಕ್ಲಿಕ್ ಮಾಡಿ.
05:41 ಇದನ್ನು ಪುನಃ ಪುನಃ ಬಳಸುತ್ತಿರುವುದರಿಂದ , ಸ್ಟಾರ್ ಅನ್ನು ಕ್ಲಿಕ್ ಮಾಡಿ ನೇರ ಉಪಯೋಗಕ್ಕೆ (ಶಾರ್ಟ್ ಕಟ್) ಅನುವು ಮಾಡಿಕೊಳ್ಳೋಣ. ಈಗ “ಆಡ್ ನ್ಯೂ ವ್ಯೂವ್” ಅನ್ನು ಕ್ಲಿಕ್ ಮಾಡಿ.
05:53 “ವ್ಯೂವ್ ನೇಮ್” ಕ್ಷೇತ್ರದಲ್ಲಿ “ರೀಸೆಂಟ್ ಈವೆಂಟ್ಸ್ ಆಡೆಡ್” ಎಂದು ಟೈಪ್ ಮಾಡಿರಿ. ಇದು ನಮ್ಮ ಸೈಟ್ ಗೆ ಸೇರಿಸಲ್ಪಟ್ಟ ಹೊಸ ಈವೆಂಟ್ಸ್ ಗಳ ಪಟ್ಟಿಯಾಗಿರುತ್ತದೆ.
06:04 ಈಗ ಕಂಟೆಂಟ್ ಟೈಪ್ ಅನ್ನು ವಿಷಯದ ಮಾದರಿಯನ್ನು ಆಲ್ ನಿಂದ ಈವೆಂಟ್ಸ್ ಗೆ ಬದಲಿಸಿ.
06:09 “ಕ್ರಿಯೇಟ್ ಬ್ಲಾಕ್” ಅನ್ನು ಆಯ್ಕೆ ಮಾಡಿ. “ಸಾರ್ಟೆಡ್ ಬೈ” ಅನ್ನು “ನ್ಯೂಯೆಸ್ಟ್ ಫಸ್ಟ್” ಎಂದು ಇರಿಸಿಕೊಳ್ಳಿ.
06:18 ನಾವು ಬೇರೆ ಹೆಸರು ಮತ್ತು ಶೀರ್ಷಿಕೆಯನ್ನು ಹೊಂದಬಹುದೆಂದು ತಿಳಿಯಲು , “ಬ್ಲಾಕ್ ಟೈಟಲ್” ನಲ್ಲಿ“ರೀಸೆಂಟ್ಲಿ ಆಡೆಡ್ ಈವೆಂಟ್ಸ್” ಎಂದು ಟೈಪ್ ಮಾಡಿ.
06:28 ಡ್ರುಪಲ್ ನಮಗೆ ವ್ಯೂಸ್ ನಲ್ಲಿ ವಿಭಿನ್ನ ಶೈಲಿಗಳನ್ನು ರಚಿಸಲು ಕೂಡ ಅನುವು ಮಾಡಿಕೊಡುತ್ತದೆ. ಇದನ್ನು ನಾವು “ಅನ್ ಫಾರ್ಮೆಟೆಡ್ ಲಿಸ್ಟ್ ಆಫ್ ಟೈಟಲ್ಸ್” ಎಂದೂ “ಐಟಮ್ಸ್ ಪರ್ ಬ್ಲಾಕ್” ಅನ್ನು 5 ಎಂದೂ ಇರಿಸಿಕೊಳ್ಳೋಣ.
06:40 “ಯೂಸ್ ಅ ಪೇಜ್” ಆಯ್ಕೆಯನ್ನು ಗುರುತಿಸದಿರಿ. ಗುರುತಿಸದ ಪಕ್ಷದಲ್ಲಿ ಮೂರನೆಯ ಒಂದು, ಮೂರನೆಯ ಎರಡು ಮುಂತಾದ ರೀತಿಯಲ್ಲಿ ಪುಟ ಸಂಖ್ಯೆಗಳು ದೊರಕುವವು.
06:53 “ಸೇವ್ ಎಂಡ್ ಎಡಿಟ್” ಅನ್ನು ಕ್ಲಿಕ್ ಮಾಡಿ. ಇದೀಗ ನಾವು ಪ್ರಿವ್ಯೂ ನೋಡೋಣ. ಇದು ನಮಗೆ ತೀರಾ ಇತ್ತಿಚೆಗೆ ಸೇರಿಸಿದ ಈವೆಂಟ್ ಗಳ ಪಟ್ಟಿಯನ್ನು ತೋರಿಸುತ್ತದೆ.
07:05 ಇಲ್ಲಿ ನಾವು ಡಿಸ್ಪ್ಲೇಯನ್ನು“ಬ್ಲಾಕ್” ಆಗಿ, ಫಾರ್ಮೆಟ್ ಅನ್ನು“ಅನ್ ಫಾರ್ಮೆಟೆಡ್ ಲಿಸ್ಟ್” ಆಗಿ, “ಫೀಲ್ಡ್ಸ್” ಅನ್ನು “ಟೈಟಲ್” ಎಂದು ನಿರ್ಧಾರಿತವಾಗಿರುವುದನ್ನು ನೋಡಬಹುದು.
07:16 “ಫಿಲ್ಟ್ರರ್ ಕ್ರೈಟೇರಿಯ” ಅವರೋಹಣ ಕ್ರಮದಲ್ಲಿ ಪ್ರಕಾಶನದ ದಿನಾಂಕವನ್ನು ಹೊಂದಿದ “ಪಬ್ಲಿಶ್ ಈವೆಂಟ್ಸ್” ಎಂದು ನಿರ್ಧಾರಿತವಾಗಿದೆ.
07:24 “ಸೇವ್” ಅನ್ನು ಕ್ಲಿಕ್ ಮಾಡೋಣ. ನಾವು ಬ್ಲಾಕ್ ಅನ್ನುನಿರ್ಧರಿಸದೇ ಇರುವ ಕಾರಣಕ್ಕೆ ಇದು ನಮಗೆ ಕಾಣಸಿಗುವುದಿಲ್ಲ.
07:33 “ಸ್ಟ್ರಕ್ಚರ್” ಮತ್ತು“ಬ್ಲಾಕ್ ಲೇಯೌಟ್” ಅನ್ನು ಕ್ಲಿಕ್ ಮಾಡಿ. ಬ್ಲಾಕ್ ಅನ್ನು “ಸೈಡ್ ಬಾರ್ ಫಸ್ಟ್” ಪ್ರದೇಶದಲ್ಲಿ ಸ್ಥಾಪಿಸೋಣ.
07:43 “ಪ್ಲೇಸ್ ಬ್ಲಾಕ್” ಅನ್ನು ಕ್ಲಿಕ್ ಮಾಡಿ. ಪರದೆಯನ್ನು ಕೆಳ ಸರಿಸಿದಾಗ “ರೀಸೆಂಟ್ ಈವೆಂಟ್ಸ್ ಆಡೆಡ್” ಎನ್ನುವ ಬ್ಲಾಕ್ ನಮಗೆ ಗೋಚರಿಸುವುದು. “ಪ್ಲೇಸ್ ಬ್ಲಾಕ್” ಅನ್ನು ಕ್ಲಿಕ್ ಮಾಡಿ.
07:54 ಬ್ಲಾಕ್ ನ ಬಗ್ಗೆ ಅಧಿಕ ಮಾಹಿತಿಗಳನ್ನು ತಿಳಿಯದಿರುವುದರಿಂದ, ಕೇವಲ “ಸೇವ್” ಅನ್ನು ಕ್ಲಿಕ್ ಮಾಡಿ. ಇದು ಪ್ರತಿ ಪುಟದಲ್ಲಿ ಕಾಣಸಿಗುವುದು. ಇದನ್ನು ನಂತರದಲ್ಲಿ ಸರಿಪಡಿಸೋಣ.
08:06 “ಸರ್ಚ್” ನ ನಂತರದಲ್ಲಿ ಇದು ನಮಗೆ ಕಾಣಸಿಗಲಿದೆ. “ಸೇವ್ ಬ್ಲಾಕ್” ಅನ್ನು ಕ್ಲಿಕ್ ಮಾಡಿ.
08:13 “ಬ್ಯಾಕ್ ಟು ಸೈಟ್” ಅನ್ನು ಕ್ಲಿಕ್ ಮಾಡಿ. ಈಗ ನಾವು ಪ್ರತಿ ಪುಟದಲ್ಲಿ ಬ್ಲಾಕ್ ಅನ್ನು ಹೊಂದಿದ್ದೇವೆ. ಇದು ನಮ್ಮ ಸೈಟ್ ನಲ್ಲಿನ ತೀರಾ ಇತ್ತೀಚಿನ ಈವೆಂಟ್ ಗಳನ್ನು ತೋರಿಸುತ್ತದೆ.
08:24 ಇದನ್ನು ಮತ್ತೆ ಕಾನ್ ಫಿಗರ್ ಮಾಡುವ ಅಗತ್ಯವಿಲ್ಲ.ಇದನ್ನು ನಿಮಗ ಬೇಕಾದಲ್ಲಿ ಇರಿಸಿರಿ. ಇದು ಯಾವತ್ತೂ ಅಪ್ ಟು ಡೇಟ್ ಇರುತ್ತದೆ.
08:33 ಇದು ಪ್ರಕಾಶಿತ ದಿನಾಂಕದ ಕ್ರಮದಲ್ಲಿ ಈವೆಂಟ್ ಕಂಟೆಂಟ್ ಮಾದರಿಯನ್ನು ಬಳಸಿದ “ಬ್ಲಾಕ್ ವ್ಯೂವ್” ಗೆ ಉದಾಹರಣೆಯಾಗಿದೆ.
08:42 ಇದರೊಂದಿಗೆ ನಮ್ಮ ಟ್ಯುಟೋರಿಯಲ್ ಮುಕ್ತಾಯವಾಗುವುದು.
08:46 ಈ ಟ್ಯುಟೋರಿಯಲ್ ನಲ್ಲಿ ನಾವು: ವ್ಯೂಸ್,ಟೀಸರ್ ಗಳೊಂದಿಗೆ ಪುಟವನ್ನು ರಚಿಸುವುದನ್ನು ಮತ್ತು ಸರಳವಾದಬ್ಲಾಕ್ ವ್ಯೂವ್ ರಚಿಸುವುದನ್ನು ಕಲಿತಿದ್ದೇವೆ.
09:01 ಈ ವೀಡಿಯೋ Acquia (ಆಕ್ವಿಯಾ) ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ.
09:12 ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ. ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೊಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
09:29 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು: NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ, NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
09:42 ಈ ಟ್ಯುಟೋರಿಯಲ್ ನ ಅನುವಾದಕ ಮಂಗಳೂರಿನಿಂದ ಪ್ರಜ್ವಲ್ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

PoojaMoolya, Sandhya.np14, Vasudeva ahitanal