Difference between revisions of "Digital-Divide/C2/How-to-use-FOSSEE-Netbook/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 107: | Line 107: | ||
|- | |- | ||
|2.33 | |2.33 | ||
− | |FOSSEE | + | |FOSSEE ನೆಟ್ಬುಕ್ ನ Power Off ಮಾಡಿ. |
|- | |- | ||
|2.35 | |2.35 | ||
Line 146: | Line 146: | ||
|- | |- | ||
|3.35 | |3.35 | ||
− | | ನನ್ನ ಮಷಿನ್ ನಲ್ಲಿ | + | | ನನ್ನ ಮಷಿನ್ ನಲ್ಲಿ ಲಭ್ಯವಿರುವ ನೆಟ್ವರ್ಕ್ ಗಳಲ್ಲಿ ಒಂದನ್ನು ನಾನು ಆರಿಸಿಕೊಳ್ಳುವೆನು. |
|- | |- | ||
|3.40 | |3.40 | ||
Line 200: | Line 200: | ||
|- | |- | ||
|5.03 | |5.03 | ||
− | |ಈ ಪೇಜ್ ನ ಮೇಲೆ, ಸ್ಪೋಕನ್ ಟ್ಯುಟೋರಿಯಲ್ ಗಳೊಂದಿಗೆ | + | |ನೆಟ್ಬುಕ್ ನ ಈ ಪೇಜ್ ನ ಮೇಲೆ, ಸ್ಪೋಕನ್ ಟ್ಯುಟೋರಿಯಲ್ ಗಳೊಂದಿಗೆ ಇಂತಹ ಇನ್ನೂ ಅನೇಕ ಉಚಿತ ಸಾಫ್ಟ್ವೇರ್ ಗಳು ಇರುತ್ತವೆ. |
|- | |- | ||
|5.10 | |5.10 | ||
Line 224: | Line 224: | ||
|- | |- | ||
|5.46 | |5.46 | ||
− | | ‘Spoken Tutorial’ ವೆಬ್ಸೈಟ್ ನಲ್ಲಿ, 'GIMP, Inkscape' ಹಾಗೂ 'XFig' ನ ಕುರಿತು ಅನೇಕ | + | | ‘Spoken Tutorial’ ವೆಬ್ಸೈಟ್ ನಲ್ಲಿ, 'GIMP, Inkscape' ಹಾಗೂ 'XFig' ನ ಕುರಿತು ಅನೇಕ ಟ್ಯುಟೋರಿಯಲ್ ಗಳು ಇರುತ್ತವೆ. |
|- | |- | ||
|5.54 | |5.54 | ||
Line 246: | Line 246: | ||
|- | |- | ||
|6.31 | |6.31 | ||
− | |ನಾವು ‘Spoken Tutorial’ ವೆಬ್ಸೈಟ್ ನ ಮೇಲೆ, | + | |ನಾವು ‘Spoken Tutorial’ ವೆಬ್ಸೈಟ್ ನ ಮೇಲೆ, ಪೂರ್ತಿ 'LibreOffice Suite' ಅನ್ನು ಕಲಿಯಲು ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ. |
|- | |- | ||
|6.37 | |6.37 | ||
Line 279: | Line 279: | ||
|- | |- | ||
|7.22 | |7.22 | ||
− | |ಮತ್ತು ಇಲ್ಲಿ ಅದನ್ನು ಬಳಸುವುದನ್ನು ಕಲಿಯಲು ಬೇಕಾಗುವ ಟ್ಯುಟೋರಿಯಲ್ ಗಳು ಇರುತ್ತವೆ. | + | |ಮತ್ತು, ಇಲ್ಲಿ ಅದನ್ನು ಬಳಸುವುದನ್ನು ಕಲಿಯಲು ಬೇಕಾಗುವ ಟ್ಯುಟೋರಿಯಲ್ ಗಳು ಇರುತ್ತವೆ. |
|- | |- | ||
|7.26 | |7.26 | ||
− | |'Preferences' (ಪ್ರಿಫರನ್ಸಸ್): ಇದು, 'Desktop, Keyboard, Monitor, Network' ಇತ್ಯಾದಿಗಳನ್ನು ಕಸ್ಟಮೈಜ್ | + | |'Preferences' (ಪ್ರಿಫರನ್ಸಸ್): ಇದು, 'Desktop, Keyboard, Monitor, Network' ಇತ್ಯಾದಿಗಳನ್ನು ಕಸ್ಟಮೈಜ್ ಮಾಡಲು ಆಯ್ಕೆಗಳನ್ನು ಹೊಂದಿದೆ. |
|- | |- | ||
|7.33 | |7.33 | ||
Line 312: | Line 312: | ||
|- | |- | ||
|8.12 | |8.12 | ||
− | |ಇದು | + | |ಇದು ತೆರೆಯಲಾದ ಎಲ್ಲ ವಿಂಡೋಗಳನ್ನು ಐಕಾನ್ ಗಳೊಂದಿಗೆ ತೋರಿಸುತ್ತದೆ ಹಾಗೂ ಕೇವಲ ಡೆಸ್ಕ್ಟಾಪ್ ಅನ್ನು ಮಾತ್ರ ಪ್ರದರ್ಶಿಸುತ್ತದೆ. |
|- | |- | ||
|8.18 | |8.18 |
Revision as of 16:29, 15 September 2016
Time | Narration |
---|---|
0.01 | IIT Bombay ಯಲ್ಲಿ ಆರಂಭಿಸಲಾದ, ಕಡಿಮೆ ಬೆಲೆಯ FOSSEE Netbook (ಫೊಸೀ ನೆಟ್ಬುಕ್) ಅನ್ನು ಉಪಯೋಗಿಸುವ ವಿಧಾನದ ಬಗ್ಗೆ ಇರುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
0.09 | ಈ ಟ್ಯುಟೋರಿಯಲ್ ನಲ್ಲಿ, ನಾವು: |
0.12 | * FOSSEE Netbook (ಫೊಸೀ ನೆಟ್ಬುಕ್) ನ ಡೆಸ್ಕ್ಟಾಪ್, |
0.14 | * ಇದರೊಂದಿಗೆ ಬರುವ ಕೆಲವು ಪ್ರೊಗ್ರಾಂಗಳು ಮತ್ತು |
0.17 | * ಇದರ ‘ಆಪರೇಟಿಂಗ್ ಸಿಸ್ಟಂ’ಅನ್ನು ಹೇಗೆ ಅಪ್ಡೇಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು. |
0.22 | ನಾವು ಇದನ್ನು 'FOSSEE Netbook' (ಫೊಸೀ ನೆಟ್ಬುಕ್) ಎಂದು ಕರೆಯುತ್ತೇವೆ. ಏಕೆಂದರೆ, |
0.26 | FOSSEE (ಫೊಸೀ) ತಂಡವು: * ಇದಕ್ಕಾಗಿ ಸೂಕ್ತ ವಿಶೇಷಣಗಳನ್ನು ಕಂಡುಹಿಡಿದಿದೆ. |
0.30 | * ‘ಆಪರೇಟಿಂಗ್ ಸಿಸ್ಟಂ’ಅನ್ನು ಮೊಟಕುಗೊಳಿಸಿದೆ. |
0.32 | * ‘ಸಾಫ್ಟ್ವೇರ್ ಡಿಸ್ಟ್ಟ್ರೀಬ್ಯೂಶನ್’ (ವಿತರಣೆ) ಅನ್ನು ಪಡೆದಿದೆ ಮತ್ತು |
0.35 | * ಅಪ್ಡೇಟ್ ಗಳನ್ನು ಹಾಗೂ ತರಬೇತಿಯನ್ನು ಒದಗಿಸುತ್ತದೆ. |
0.38 | ‘ಆಪರೇಟಿಂಗ್ ಸಿಸ್ಟಂ’ಅನ್ನು, 'Ubuntu Linux' ನ ಇತ್ತೀಚಿನ ಬಿಡುಗಡೆಯಿಂದ ಪಡೆಯಲಾಗಿದೆ. |
0.43 | * 'FOSSEE Netbook'- ಇದು ಒಂದು ಕಡಿಮೆ ಬೆಲೆಯ, IIT Bombay ಯಲ್ಲಿ ಪರೀಕ್ಷಿಸಲಾದ ಲ್ಯಾಪ್ಟಾಪ್ ಆಗಿದೆ. |
0.49 | * ಅದರ ವಿಶಿಷ್ಟತೆಗಳೊಂದಿಗೆ, Basics Comtech Pvt. Ltd. ಅವರಿಂದ ತಯಾರಿಸಲ್ಪಟಿದೆ. |
0.55 | * ಶಿಕ್ಷಣ ಮತ್ತು ಸಂಶೋಧನೆಗಳಿಗಾಗಿ ಇದನ್ನು ವಿನ್ಯಾಸಗೊಳಿಸಲಾಗಿದೆ |
0.58 | * ಮತ್ತು ಇದರ ಬೆಲೆ Rs. 5,000 ಹಾಗೂ ಕಸ್ಟಮ್ಸ್, ತೆರಿಗೆ ಇತ್ಯಾದಿ. |
1.03 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
|
1.08 |
|
1.12 |
|
1.17 | ಈಗ ನಾವು FOSSEE Netbook ಅನ್ನು ನೋಡೋಣ. |
1.20 | 'FOSSEE ನೆಟ್ಬುಕ್' ಹೀಗೆ ಕಾಣುತ್ತದೆ. |
1.24 | ಇದರ ತೂಕ ಸುಮಾರು 700 ಗ್ರಾಂ ಇರುತ್ತದೆ. |
1.28 | ಇದು: * 10 ಇಂಚುಗಳ ಒಂದು 'ಡಿಸ್ಪ್ಲೇ' ಹಾಗೂ ಒಂದು 'ಟಚ್ ಪ್ಯಾಡ್' |
1.31 | * ಒಂದು ಫ್ರಂಟ್ ಕ್ಯಾಮರಾ (front camera) ಹಾಗೂ ಎರಡು ಬಿಲ್ಟ್-ಇನ್ 'ಸ್ಪೀಕರ್'ಗಳು |
1.35 | * 2 ಸಾಮಾನ್ಯ USB ಪೋರ್ಟ್ ಗಳು, 1 mini HDMI ಪೋರ್ಟ್, 1 Lan ಪೋರ್ಟ್ |
1.43 | * 'ಆಡಿಯೋ' ಸಪೋರ್ಟ್ ಗಾಗಿ ಒಂದು ಪ್ರತ್ಯೇಕ 'ಹೆಡ್ ಫೋನ್' (headphone) ಹಾಗೂ 'ಮಿಕ್ ಜ್ಯಾಕ್' ಗಳು (mic jacks) |
1.49 | * ಇದರಲ್ಲಿ, 32GB ಗಳ ವರೆಗೆ ಸಪೋರ್ಟ್ ಮಾಡಲು ಸಾಧ್ಯವಿರುವ ಒಂದು 'SD card' ಸ್ಲಾಟ್ ಇದೆ. |
1.56 | *ಒಂದು 5000 mAH ಬ್ಯಾಟರಿ. |
1.59 | ಇದು, ಬಳಸಲಾದ ಪ್ರೊಗ್ರಾಂಅನ್ನು ಅವಲಂಬಿಸಿ 4 ರಿಂದ 8 ಗಂಟೆಗಳ ಬ್ಯಾಕ್-ಅಪ್ ಅನ್ನು ಕೊಡುತ್ತದೆ. |
2.04 | 1GB RAM ಹಾಗೂ 8GB ROM, |
2.07 | ಅಲ್ಲದೇ wi-fi ಮತ್ತು 'bluetooth' ಗಳ ಆಧಾರವನ್ನು ಸಹ ಪಡೆದಿದೆ. |
2.11 | ‘ಹಾರ್ಡ್ವೇರ್ ಸ್ಪೆಸಿಫಿಕೇಶನ್’ ಗಳ (hardware specifications) ಬಗ್ಗೆ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ಕೆಳಗಿನ ಲಿಂಕ್ ಅನ್ನು ನೋಡಿ. |
2.19 | FOSSEE OS ನ ರಿಕವರೀ/ಅಪ್ಡೇಟ್/ರಿ-ಇನ್ಸ್ಟಾಲೇಶನ್ ಗಳಿಗಾಗಿ, ಯೂಸರ್ ನು ಈ ಕೆಳಗೆ ಹೇಳಿದಂತೆ ಮಾಡಬೇಕು. |
2.25 | 'netbook.fossee.in/recovery' ಯಲ್ಲಿ ಕೊಟ್ಟಿರುವ ಸೂಚನೆಗಳಿಗೆ ಅನುಸಾರವಾಗಿ 'sdcard' ಅನ್ನು ತಯಾರಿಸಿ. |
2.33 | FOSSEE ನೆಟ್ಬುಕ್ ನ Power Off ಮಾಡಿ. |
2.35 | 'sdcard' ಅನ್ನು 'ಸ್ಲಾಟ್' ನಲ್ಲಿ (slot) ಸೇರಿಸಿ. ಆಮೇಲೆ 'Power key' (ಪವರ್ ಕೀ) ಯನ್ನು ಸ್ವಲ್ಪ ಹೆಚ್ಚು ಹೊತ್ತು ಒತ್ತಿ. |
2.41 | ಈಗ ಸ್ಕ್ರೀನ್, "Entering recovery mode..." ಎಂಬ ಟೆಕ್ಸ್ಟ್ ಮೆಸೇಜನ್ನು ತೋರಿಸಬೇಕು. |
2.46 | ಮುಂದಿನ ಸ್ಕ್ರೀನ್ ನಲ್ಲಿ ತೋರಿಸಲಾದ ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಿ. |
2.51 | ನೀವು ಇಲ್ಲಿ ನೋಡುತ್ತಿರುವುದು 'FOSSEE OS' ನೊಂದಿಗೆ 'FOSSEE Netbook' ನ ಡೆಸ್ಕ್ಟಾಪ್ ಆಗಿದೆ. |
2.57 | ನೀವು ಡೆಸ್ಕ್ಟಾಪ್ ನ ಮೇಲೆ, ಡೀಫಾಲ್ಟ್ ಆಗಿ ಕೆಲವು ಐಕಾನ್ ಗಳನ್ನು ನೋಡುವಿರಿ. |
3.01 | ಎಲ್ಲ ಕಂಪ್ಯೂಟರ್ ಗಳಲ್ಲಿ ಇರುವಂತೆ, ಇದರಲ್ಲಿಯೂ ಸಹ ಯಾವುದೇ ಐಕಾನ್ ನ ಮೇಲೆ ಡಬಲ್-ಕ್ಲಿಕ್ ಮಾಡಿದಾಗ ಸಂಬಂಧಿತ ಅಪ್ಲಿಕೇಶನ್ ಓಪನ್ ಆಗುತ್ತದೆ. |
3.09 | ಇಲ್ಲಿ, ಕೆಳಗೆ ಬಲತುದಿಯಲ್ಲಿ, 'Network connection' (ನೆಟ್ವರ್ಕ್ ಕನೆಕ್ಷನ್) ಎಂಬ ಐಕಾನ್ ಇದೆ. |
3.15 | ಈಗ ಸದ್ಯಕ್ಕೆ, ಇದು “No network connection" ಎಂದು ಹೇಳುತ್ತಿದೆ. |
3.18 | ನಾವು ನೆಟ್ವರ್ಕ್ ಅನ್ನು ಸಂಪರ್ಕಿಸುವುದರ ಬಗ್ಗೆ ಕಲಿಯೋಣ. |
3.21 | wi-fi ಕನೆಕ್ಷನ್ ಗಳಿಗಾಗಿ, ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
3.25 | ಈಗಾಗಲೇ ಲಭ್ಯವಿರುವ ಕನೆಕ್ಷನ್ ಗಳ ಒಂದು ಪಟ್ಟಿಯನ್ನು ತೋರಿಸಲಾಗುವುದು. |
3.30 | ಪಾಸ್ವರ್ಡ್ ಗೊತ್ತಿದ್ದರೆ, ನೀವು ಇವುಗಳಲ್ಲಿ ಯಾವುದೇ ಒಂದು wi-fi ನೆಟ್ವರ್ಕ್ ನ ಜೊತೆಗೆ ಸಂಪರ್ಕವನ್ನು ಪಡೆಯಬಹುದು. |
3.35 | ನನ್ನ ಮಷಿನ್ ನಲ್ಲಿ ಲಭ್ಯವಿರುವ ನೆಟ್ವರ್ಕ್ ಗಳಲ್ಲಿ ಒಂದನ್ನು ನಾನು ಆರಿಸಿಕೊಳ್ಳುವೆನು. |
3.40 | ಆಮೇಲೆ, ಪಾಸ್ವರ್ಡ್ ಅನ್ನು ಟೈಪ್ ಮಾಡಿ ನಂತರ 'Connect' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ. |
3.46 | 'System Tray' ಯಲ್ಲಿ, 'Network' ಎಂಬ ಐಕಾನ್ ಅನ್ನು ಗಮನಿಸಿ. |
3.50 | ಐಕಾನ್ ಈಗ ಬದಲಾಗಿದೆ. |
3.52 | ಇದು, ನಾನು ಈಗ ಸಂಪರ್ಕವನ್ನು ಹೊಂದಿರುವ ನೆಟ್ವರ್ಕ್ ನ ಹೆಸರನ್ನು ಸೂಚಿಸುತ್ತದೆ. |
3.57 | ಈಗ ನಾವು ಡೆಸ್ಕ್ಟಾಪ್ ನ ಕೆಳಗಿನ ಎಡಮೂಲೆಯತ್ತ ನೋಡೋಣ. |
4.03 | ಇಲ್ಲಿ ನಮಗೆ 'Start' ಮೆನ್ಯು ಕಂಡುಬರುತ್ತದೆ. ಇದು main (ಮುಖ್ಯ) ಮೆನ್ಯು ಆಗಿದೆ. |
4.07 | 'Start' ಮೆನ್ಯು, ಲಭ್ಯವಿರುವ ಎಲ್ಲ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ವರ್ಗೀಕರಿಸಲಾದ ರೀತಿಯಲ್ಲಿ ಪಟ್ಟಿಮಾಡುತ್ತದೆ. |
4.14 | ಯಾವ ಸಾಫ್ಟ್ವೇರ್ ಮತ್ತು ಅಪ್ಲಿಕೇಶನ್ ಗಳನ್ನು ಪಟ್ಟಿ ಮಾಡಲಾಗಿದೆ ಎಂಬುದನ್ನು ತಿಳಿಯಲು ಪ್ರತಿಯೊಂದು ವರ್ಗವನ್ನು ಕ್ಲಿಕ್ ಮಾಡಿನೋಡಿ. |
4.21 | ಇವುಗಳಲ್ಲಿ ಕೆಲವನ್ನು ನಾವು ನೋಡೋಣ. |
4.24 | 'Education' ವರ್ಗದಲ್ಲಿ, ಈ ಎಲ್ಲ ಅಪ್ಲಿಕೇಶನ್ ಗಳನ್ನು ಲಿಸ್ಟ್ ಮಾಡಲಾಗಿದೆ. |
4.28 | ಇಲ್ಲಿ 'Geogebra' ಇದೆ. |
4.31 | ಬೀಜಗಣಿತ ಮತ್ತು ರೇಖಾಗಣಿತದ ಸಂಗತಿಗಳನ್ನು ತಿಳಿದುಕೊಳ್ಳಲು ಇದೊಂದು ಅತ್ಯುತ್ತಮ ಹಾಗೂ ಉಚಿತ ಸಾಫ್ಟ್ವೇರ್ ಆಗಿದೆ. |
4.37 | ವಿಶೇಷವಾಗಿ, ಇದು 6ನೇ ವರ್ಗದ ನಂತರ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದೆ. |
4.41 | ಸ್ಪೋಕನ್ ಟ್ಯುಟೊರಿಯಲ್ ಪ್ರೊಜೆಕ್ಟ್, 'Geogebra' ಅನ್ನು ಕಲಿಯಲು ಅತ್ಯುತ್ತಮ ಟ್ಯುಟೋರಿಯಲ್ ಗಳನ್ನುತಯಾರಿಸಿದೆ. |
4.47 | ಇವುಗಳು http://spoken-tutorial.org ಲಿಂಕ್ ನ ಮೂಲಕ ಉಚಿತವಾಗಿ ಲಭ್ಯವಿರುತ್ತವೆ. |
4.53 | ಈ ಲಿಂಕ್, ಬ್ರೌಸರ್ ವಿಂಡೋದಲ್ಲಿ ಹೇಗೆ ಕಾಣುತ್ತದೆ ಎಂದು ನೀವು ನೋಡಬಹುದು |
4.57 | ಮತ್ತು, ಈ ಟ್ಯುಟೋರಿಯಲ್ ಗಳು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುವುದನ್ನು ಸಹ ನೀವು ನೋಡಬಹುದು. |
5.03 | ನೆಟ್ಬುಕ್ ನ ಈ ಪೇಜ್ ನ ಮೇಲೆ, ಸ್ಪೋಕನ್ ಟ್ಯುಟೋರಿಯಲ್ ಗಳೊಂದಿಗೆ ಇಂತಹ ಇನ್ನೂ ಅನೇಕ ಉಚಿತ ಸಾಫ್ಟ್ವೇರ್ ಗಳು ಇರುತ್ತವೆ. |
5.10 | ನಾನು ಬೇಗನೆ ಅವುಗಳನ್ನು ನಿಮಗೆ ತೋರಿಸುತ್ತೇನೆ. |
5.13 | ನಾವು Start' ಮೆನ್ಯುಗೆ ಹಿಂದಿರುಗೋಣ. |
5.15 | ಈಗ 'Jmol' ಎಂಬ ಇನ್ನೊಂದು ಸಾಫ್ಟ್ವೇರ್ ಅನ್ನು ನೋಡೋಣ. |
5.19 | ಅಣುಗಳು, ಬಾಂಡ್ ಗಳಂತಹ ರಾಸಾಯನಿಕ ರಚನೆಗಳನ್ನು 3D ಯಲ್ಲಿ ನೋಡಲು ಇದು ಬಹಳ ಉಪಯುಕ್ತವಾಗಿದೆ. |
5.26 | “Spoken Tutorial” ವೆಬ್ಸೈಟ್, 'Jmol' ನ ಟ್ಯುಟೋರಿಯಲ್ ಗಳನ್ನು ಅನೇಕ ಭಾಷೆಗಳಲ್ಲಿ ಹೊಂದಿದೆ. |
5.33 | 'Start' ಮೆನ್ಯುನಲ್ಲಿ, ನಾವು 'Graphics' ಎಂಬ ಇನ್ನೊಂದು ವರ್ಗವನ್ನು ನೋಡೋಣ. |
5.40 | 'GIMP, Inkscape' ಹಾಗೂ 'XFig' ಗಳನ್ನು ಇಲ್ಲಿ ನೀವು ನೋಡಬಹುದು. |
5.46 | ‘Spoken Tutorial’ ವೆಬ್ಸೈಟ್ ನಲ್ಲಿ, 'GIMP, Inkscape' ಹಾಗೂ 'XFig' ನ ಕುರಿತು ಅನೇಕ ಟ್ಯುಟೋರಿಯಲ್ ಗಳು ಇರುತ್ತವೆ. |
5.54 | ಈ ‘ಗ್ರಾಫಿಕ್ ಸಾಫ್ಟ್ವೇರ್’ ಅನ್ನು ಬಳಸುವುದನ್ನು ಕಲಿಯಲು ನೀವು ಈ ಟ್ಯುಟೋರಿಯಲ್ ಗಳನ್ನು ಉಪಯೋಗಿಸಬಹುದು. |
6.01 | ನಾವು ಈಗ 'Internet' ವರ್ಗದತ್ತ ನೋಡೋಣ. ಇವುಗಳು, ಇಲ್ಲಿ ಲಭ್ಯವಿರುವ ಆಯ್ಕೆಗಳಾಗಿವೆ. |
6.07 | ಇಲ್ಲಿ, ಇದು 'Firefox Web Browser' ಆಗಿದೆ. |
6.10 | ಮತ್ತು, ಇಲ್ಲಿ 'Firefox' ಅನ್ನು ಬಳಸುವ ವಿಧಾನವನ್ನು ಕಲಿಯಲು ಸ್ಪೋಕನ್ ಟ್ಯುಟೋರಿಯಲ್ ಗಳಿರುತ್ತವೆ. |
6.15 | ಮತ್ತೆ, ಇವು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿರುತ್ತವೆ. |
6.20 | 'Office' ವರ್ಗದಡಿಯಲ್ಲಿ, ನಾವು 'LibreOffice Suite' -
'Writer, Calc, Impress, Base, Draw' ಹಾಗೂ 'Math' ಎಲ್ಲ ಪಡೆದಿದ್ದೇವೆ. |
6.31 | ನಾವು ‘Spoken Tutorial’ ವೆಬ್ಸೈಟ್ ನ ಮೇಲೆ, ಪೂರ್ತಿ 'LibreOffice Suite' ಅನ್ನು ಕಲಿಯಲು ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ. |
6.37 | ಈಗ ನಾವು 'Programming' ವರ್ಗಕ್ಕೆ ನಡೆಯೋಣ. |
6.40 | ಇಲ್ಲಿ, ನಾವು 'iPython' ಅನ್ನು ನೋಡಬಹುದು. |
6.43 | ‘Spoken Tutorial’ ವೆಬ್ಸೈಟ್ ನ ಮೇಲೆ 'Python' ಎಂಬ ಒಂದು ಸರಣಿಯು ಇದೆ. |
6.47 | ಇಲ್ಲಿ ನಾವು 'Scilab' ಅನ್ನು ಸಹ ಪಡೆದಿದ್ದೇವೆ. |
6.50 | ಮತ್ತೆ, ‘Spoken Tutorial’ ವೆಬ್ಸೈಟ್ ಮೇಲೆ, 'Scilab' ಅನ್ನು ಹೇಗೆ ಕಲಿಯುವುದು ಎಂಬುದರ ಬಗ್ಗೆ ಟ್ಯುಟೋರಿಯಲ್ ಗಳನ್ನು ಪಡೆದಿದ್ದೇವೆ. |
6.56 | ನಾವು 'Code Blocks' ಹಾಗೂ 'Geany' ಗಳಂತಹ ಕೆಲವು 'IDE'ಗಳನ್ನು ಸಹ ಪಡೆದಿದ್ದೇವೆ. |
7.01 | ಇವುಗಳಿಗಾಗಿ ಸ್ಪೋಕನ್ ಟ್ಯುಟೋರಿಯಲ್ ಗಳು ಸಧ್ಯಕ್ಕೆ ಲಭ್ಯವಿಲ್ಲ. |
7.05 | ಆದರೆ ನೀವು ಇಂಟರ್ನೆಟ್ ನಲ್ಲಿ ಶೋಧಿಸಿದರೆ, ಇವುಗಳನ್ನು ಕಲಿಯಲು ಸಹ ಉಪಯುಕ್ತ ಮಾಹಿತಿಯು ನಿಮಗೆ ಸಿಗುವುದು. |
7.12 | ನಾವು 'Sound & Video' ದ ಅಡಿಯಲ್ಲಿ ಲಭ್ಯವಿರುವ ಅಪ್ಲಿಕೇಶನ್ ಗಳನ್ನು ನೋಡೋಣ. |
7.17 | 'audio tracks' (ಆಡಿಯೋ ಟ್ರಾಕ್ಸ್) ಗಳನ್ನು ರೆಕಾರ್ಡ್ ಮಾಡಲು ಬಳಸಲಾಗುವ 'Audacity' (ಓಡಾಸಿಟೀ) ಯನ್ನು ಪಡೆದಿದ್ದೇವೆ. |
7.22 | ಮತ್ತು, ಇಲ್ಲಿ ಅದನ್ನು ಬಳಸುವುದನ್ನು ಕಲಿಯಲು ಬೇಕಾಗುವ ಟ್ಯುಟೋರಿಯಲ್ ಗಳು ಇರುತ್ತವೆ. |
7.26 | 'Preferences' (ಪ್ರಿಫರನ್ಸಸ್): ಇದು, 'Desktop, Keyboard, Monitor, Network' ಇತ್ಯಾದಿಗಳನ್ನು ಕಸ್ಟಮೈಜ್ ಮಾಡಲು ಆಯ್ಕೆಗಳನ್ನು ಹೊಂದಿದೆ. |
7.33 | ನಾವು 'Customize Look and Feel' ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ. |
7.37 | ಡೀಫಾಲ್ಟ್ ಆಗಿ, ನಾವು 'Widget' ಎಂಬ ಟ್ಯಾಬ್ ನಲ್ಲಿದ್ದೇವೆ. |
7.40 | ಇಲ್ಲಿ, ಪ್ರದರ್ಶಿಸಲಾದ ವಿಂಡೋಗಳ ಡೀಫಾಲ್ಟ್ 'Theme' (ಥೀಮ್) ಅನ್ನು ಬದಲಾಯಿಸಬಹುದು. |
7.45 | ಕೊಟ್ಟಿರುವ ಲಿಸ್ಟ್ ನಿಂದ ನಿಮಗೆ ಇಷ್ಟವಾದ 'theme' (ಥೀಮ್) ಅನ್ನು ಆರಿಸಿಕೊಳ್ಳಿ. |
7.51 | ಇತರ ಟ್ಯಾಬ್ ಗಳು ಮತ್ತು ಅವುಗಳ ಆಯ್ಕೆಗಳ ಬಗ್ಗೆ ಮುಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ವಿವರವಾಗಿ ಕಲಿಯುವೆವು. |
7.57 | 'Logout': ಇದು, ಸ್ಕ್ರೀನ್ ಅನ್ನು ಲಾಕ್ ಮಾಡಲು, ‘ಶಟ್-ಡೌನ್’ ಅಥವಾ ಲಾಗ್-ಔಟ್ ಮಾಡಲು ಬಳಸುವ ಆಯ್ಕೆಯಾಗಿದೆ. |
8.03 | ನಾನು 'Cancel' ಬಟನ್ ನ ಮೇಲೆ ಕ್ಲಿಕ್ ಮಾಡುತ್ತೇನೆ. |
8.05 | 'Start' ಮೆನ್ಯುದ ಪಕ್ಕದಲ್ಲಿರುವ ಐಕಾನ್, ಡೆಸ್ಕ್ಟಾಪ್ ಗೆ ಶಾರ್ಟ್ಕಟ್ ಆಗಿದೆ. |
8.10 | ನಾವು ಇದರ ಮೇಲೆ ಕ್ಲಿಕ್ ಮಾಡೋಣ. |
8.12 | ಇದು ತೆರೆಯಲಾದ ಎಲ್ಲ ವಿಂಡೋಗಳನ್ನು ಐಕಾನ್ ಗಳೊಂದಿಗೆ ತೋರಿಸುತ್ತದೆ ಹಾಗೂ ಕೇವಲ ಡೆಸ್ಕ್ಟಾಪ್ ಅನ್ನು ಮಾತ್ರ ಪ್ರದರ್ಶಿಸುತ್ತದೆ. |
8.18 | ಈಗ, ಡೆಸ್ಕ್ಟಾಪ್ ನ ಮೇಲೆ ನಾವು ಕೆಲವು ಐಕಾನ್ ಗಳನ್ನು ನೋಡೋಣ. |
8.23 | ಇಲ್ಲಿ ಟರ್ಮಿನಲ್ ಇದೆ. |
8.25 | ಇದು 'command line interface' (ಕಮಾಂಡ್ ಲೈನ್ ಇಂಟರ್ಫೇಸ್) ಆಗಿದೆ. |
8.28 | ಟರ್ಮಿನಲ್ ಅನ್ನು ಉಪಯೋಗಿಸುವುದನ್ನು ಕಲಿಯಲು, ದಯವಿಟ್ಟು 'BOSS Linux, Spoken Tutorial' ಸರಣಿಯನ್ನು ನೋಡಿ. |
8.34 | 'File Manager' (ಫೈಲ್ ಮೆನೇಜರ್), 'Windows OS' ನಲ್ಲಿಯ 'My Computer' ಆಯ್ಕೆಯಂತೆ ಕೆಲಸಮಾಡುತ್ತದೆ. |
8.39 | ಈ ವಿಂಡೋದಿಂದ ನೀವು ಯಾವುದೇ ಫೈಲ್ ಅಥವಾ ಫೋಲ್ಡರ್ ಗೆ ಹೋಗಬಹುದು. |
8.47 | 'Software Center' ( ಸಾಫ್ಟ್ವೇರ್ ಸೆಂಟರ್), ನಮಗೆ ಬೇಕಾಗಿರುವ ಎಲ್ಲ ಸಾಫ್ಟ್ವೇರ್ ಗಳನ್ನು ಇನ್ಸ್ಟಾಲ್ ಮಾಡಲು ಸಹಾಯಮಾಡುತ್ತದೆ. |
8.58 | 'Language Support', 'FOSSEE OS' ನಿಂದ ಬೆಂಬಲಿಸಲ್ಪಟ್ಟ ಎಲ್ಲ ಭಾಷೆಗಳನ್ನು ಪಟ್ಟಿ ಮಾಡುತ್ತದೆ. |
9.05 | ಡೆಸ್ಕ್ಟಾಪ್ ಮೇಲಿನ 'Readme' ಎಂಬ ಹೆಸರಿನ pdf ಅನ್ನು ಗಮನಿಸಿ. |
9.10 | ದಯವಿಟ್ಟು ಈ pdf ಅನ್ನು ಓಪನ್ ಮಾಡಿ ಓದಿ. |
9.17 | ಇದು, 'Netbook' ನ ಬಗ್ಗೆ ನಿಮಗೆ ಸಂಕ್ಷಿಪ್ತ ಮಾಹಿತಿಯನ್ನು ಕೊಡುತ್ತದೆ. |
9.27 | ಇದರೊಂದಿಗೆ, ನಾವು How to use the FOSSEE Netbook ಎಂಬ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
9.33 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ವೀಕ್ಷಿಸಿ. |
9.40 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
|
9.48 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: |
9.51 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
9.57 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. |
10.04 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ --------.
ಧನ್ಯವಾದಗಳು. |