Difference between revisions of "Git/C2/Basic-commands-of-Git/Kannada"
From Script | Spoken-Tutorial
Sandhya.np14 (Talk | contribs) (Created page with " {| Border=1 |<center>Time</center> |<center>Narration</center> |- |00:01 | '''Basic commands of Git''' (ಬೇಸಿಕ್ ಕಮಾಂಡ್ಸ್ ಆಫ್ ಗಿಟ್)...") |
Sandhya.np14 (Talk | contribs) |
||
Line 148: | Line 148: | ||
|- | |- | ||
|04:57 | |04:57 | ||
− | | ಹೀಗೆ ಟೈಪ್ ಮಾಡಿ: | + | | ಹೀಗೆ ಟೈಪ್ ಮಾಡಿ: 'git space config space hyphen hyphen list' ಮತ್ತು ‘Enter’ ಅನ್ನು ಒತ್ತಿ. |
|- | |- | ||
|05:04 | |05:04 | ||
Line 299: | Line 299: | ||
|- | |- | ||
|10:00 | |10:00 | ||
− | | ಹೀಗೆ ಟೈಪ್ ಮಾಡಿ: | + | | ಹೀಗೆ ಟೈಪ್ ಮಾಡಿ: ' git space log' ಮತ್ತು ‘Enter’ ಅನ್ನು ಒತ್ತಿ. |
|- | |- | ||
| 10:06 | | 10:06 | ||
Line 334: | Line 334: | ||
| ಸಂಕ್ಷಿಪ್ತವಾಗಿ, | | ಸಂಕ್ಷಿಪ್ತವಾಗಿ, | ||
ಈ ಟ್ಯುಟೋರಿಯಲ್ ನಲ್ಲಿ, ನಾವು: | ಈ ಟ್ಯುಟೋರಿಯಲ್ ನಲ್ಲಿ, ನಾವು: | ||
− | * | + | * 'ಗಿಟ್ ರಿಪಾಸಿಟರಿ' ಮತ್ತು |
* 'git init, status, commit ' ಹಾಗೂ 'log' ಗಳಂತಹ Git ನ ಕೆಲವು ಪ್ರಮುಖ ಕಮಾಂಡ್ ಗಳನ್ನು ಕಲಿತಿದ್ದೇವೆ. | * 'git init, status, commit ' ಹಾಗೂ 'log' ಗಳಂತಹ Git ನ ಕೆಲವು ಪ್ರಮುಖ ಕಮಾಂಡ್ ಗಳನ್ನು ಕಲಿತಿದ್ದೇವೆ. | ||
|- | |- |
Revision as of 10:52, 22 July 2016
00:01 | Basic commands of Git (ಬೇಸಿಕ್ ಕಮಾಂಡ್ಸ್ ಆಫ್ ಗಿಟ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ, ನಾವು:
|
00:13 | ಈ ಟ್ಯುಟೋರಿಯಲ್ ಗಾಗಿ, ನಾನು:
|
00:23 | ನೀವು ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ಬಳಸಬಹುದು. |
00:27 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಟರ್ಮಿನಲ್ ನ ಮೇಲೆ ಲಿನಕ್ಸ್ ಕಮಾಂಡ್ ಗಳನ್ನು ರನ್ ಮಾಡಲು ತಿಳಿದಿರಬೇಕು. |
00:34 | ಇಲ್ಲದಿದ್ದಲ್ಲಿ, ಸಂಬಂಧಿತ 'Linux ' ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:40 | ಈಗ, 'Git ರಿಪೊಸಿಟರಿ' ಎಂದರೆ ಏನು ಎಂಬುದನ್ನು ನಾವು ನೋಡುವೆವು. |
00:44 | 'ಗಿಟ್ ರಿಪೊಸಿಟರಿ', ಒಂದು ಫೋಲ್ಡರ್ ಆಗಿದೆ. ನಮ್ಮ ಪ್ರೊಜೆಕ್ಟ್ ನ ಎಲ್ಲ ಡೇಟಾಅನ್ನು ಇದರಲ್ಲಿ ಸ್ಟೋರ್ ಮಾಡಲಾಗುವುದು. |
00:50 | ಇದನ್ನು ಸ್ಥಳೀಯ ಮಷಿನ್ ಅಥವಾ ದೂರದ ಮಷಿನ್ ಮೇಲೆ ಇಡಬಹುದು. |
00:55 | ಒಂದು ಸಾಮಾನ್ಯ ಫೋಲ್ಡರ್ ಹಾಗೂ 'ಗಿಟ್ ರಿಪೊಸಿಟರಿ'ಗಳ ನಡುವಿನ ವ್ಯತ್ಯಾಸವೇನೆಂದರೆ, |
01:00 | ಸಾಮಾನ್ಯ ಫೋಲ್ಡರ್, ಫೈಲ್ ಗಳು ಮತ್ತು ಡೈರೆಕ್ಟರಿಗಳನ್ನು ಮಾತ್ರ ಒಳಗೊಂಡಿರುತ್ತದೆ. |
01:04 | ಆದರೆ ‘ಗಿಟ್ ರಿಪೊಸಿಟರಿ’, ಹಲವು ಫೈಲ್ ಮತ್ತು ಡಿರೆಕ್ಟರಿಗಳನ್ನು ಅವುಗಳ ಸಂಪೂರ್ಣ ಇತಿಹಾಸದೊಂದಿಗೆ ಒಳಗೊಂಡಿರುತ್ತದೆ. |
01:11 | ಈಗ, ನಮ್ಮ ಲೋಕಲ್ ಮಷಿನ್ ನಲ್ಲಿ ಒಂದು ‘ಗಿಟ್ ರಿಪೊಸಿಟರಿ’ಯನ್ನು ಕ್ರಿಯೇಟ್ ಮಾಡಲು ನಾವು ಕಲಿಯೋಣ. |
01:17 | ಟರ್ಮಿನಲ್ ಅನ್ನು ಓಪನ್ ಮಾಡಲು 'Ctrl+Alt+T' ಕೀಗಳನ್ನು ಒಟ್ಟಿಗೇ ಒತ್ತಿ. |
01:22 | ನನ್ನ ಮಷಿನ್ ನ 'Home' ಡಿರೆಕ್ಟರಿಯಲ್ಲಿ, ನಾನು ‘ಗಿಟ್ ರಿಪೊಸಿಟರಿ’ಗಾಗಿ ಒಂದು ಡಿರೆಕ್ಟರಿಯನ್ನು ಕ್ರಿಯೇಟ್ ಮಾಡುವೆನು. |
01:28 | ನಿಮ್ಮ ಮಷಿನ್ ನಲ್ಲಿ, ನೀವು ಡಿರೆಕ್ಟರಿಯನ್ನು ಎಲ್ಲಿಯಾದರೂ ಕ್ರಿಯೇಟ್ ಮಾಡಬಹುದು. |
01:33 | ನಾವು ಡೀಫಾಲ್ಟ್ ಆಗಿ, ನಮ್ಮ 'Home' ಡಿರೆಕ್ಟರಿಯಲ್ಲಿ ಇದ್ದೇವೆ. |
01:37 | ಹೀಗೆ ಟೈಪ್ ಮಾಡಿ: “mkdir” ಸ್ಪೇಸ್ “mywebpage” ಮತ್ತು ‘Enter’ ಅನ್ನು ಒತ್ತಿ. |
01:44 | ಹೀಗೆ, ನಾವು ಈಗ "mywebpage" ಎಂಬ ಒಂದು ಡಿರೆಕ್ಟರಿಯನ್ನು ನಮ್ಮ 'Home' ಡಿರೆಕ್ಟರಿಯಲ್ಲಿ ಕ್ರಿಯೇಟ್ ಮಾಡಿದ್ದೇವೆ. |
01:49 | ಈ ಡಿರೆಕ್ಟರಿಯ ಒಳಗೆ ಹೋಗಲು, ಹೀಗೆ ಟೈಪ್ ಮಾಡಿ: “cd” ಸ್ಪೇಸ್ “mywebpage” ಮತ್ತು ‘Enter’ ಅನ್ನು ಒತ್ತಿ. |
02:00 | "mywebpage" ಡಿರೆಕ್ಟರಿಯನ್ನು ‘ಗಿಟ್ ರಿಪೊಸಿಟರಿ’ ಯನ್ನಾಗಿ ಮಾಡಲು, ಹೀಗೆ ಟೈಪ್ ಮಾಡಿ: “git” ಸ್ಪೇಸ್ “init” ಮತ್ತು ‘Enter’ ಅನ್ನು ಒತ್ತಿ. |
02:08 | ನೀವು “Initialized empty Git repository” ಎಂಬ ಮೆಸೇಜನ್ನು ನೋಡಬಹುದು. |
02:13 | ಇದು, 'Git', ಯಶಸ್ವಿಯಾಗಿ ಇನಿಶಿಯಲೈಸ್ ಆಗಿರುವುದನ್ನು ಸೂಚಿಸುತ್ತದೆ ಮತ್ತು |
02:17 | ಇದು, ನಮ್ಮ ಸಿಸ್ಟಂನಲ್ಲಿ ‘ಗಿಟ್ ರಿಪೊಸಿಟರಿ’ಯನ್ನು ಕ್ರಿಯೇಟ್ ಮಾಡಿರುವ ಪಾಥ್ ಆಗಿದೆ. |
02:24 | ಇನಿಶಿಯಲೈಸ್ ಮಾಡಿದ ನಂತರ, “mywebpage” ಫೋಲ್ಡರ್ ನ ಒಳಗೆ, ಅಡಗಿಕೊಂಡ ಒಂದು 'dot git' ಫೋಲ್ಡರ್ ಕ್ರಿಯೇಟ್ ಆಗುವುದು. |
02:32 | ಈ ಅಡಗಿಕೊಂಡಿರುವ ಫೋಲ್ಡರ್ ಅನ್ನು ನೋಡಲು, ಹೀಗೆ ಟೈಪ್ ಮಾಡಿ: “ls” ಸ್ಪೇಸ್ ಹೈಫನ್ “a” ಮತ್ತು ‘Enter’ ಅನ್ನು ಒತ್ತಿ. |
02:39 | ಇದು 'dot git' ಫೋಲ್ಡರ್ ಅನ್ನು ತೋರಿಸುತ್ತದೆ. ಈ 'dot git' ಫೋಲ್ಡರ್ ಅನ್ನು ಡಿಲೀಟ್ ಮಾಡಿದರೆ ಇಡೀ ರಿಪೊಸಿಟರಿ ಡಿಲೀಟ್ ಆಗುವುದು. |
02:47 | ಹೀಗಾಗಿ, ಈ 'dot git' ಫೋಲ್ಡರ್ ನೊಂದಿಗೆ ನೀವು ಅತ್ಯಂತ ಎಚ್ಚರಿಕೆಯಿಂದ ಇರಬೇಕು. |
02:51 | ಈಗ, ನಾವು 'Git' ಗೆ ನಮ್ಮ ಐಡೆಂಟಿಟಿಯನ್ನು ಸೇರಿಸಬೇಕು. |
02:55 | ಇಮೇಲ್ ಅಡ್ರೆಸ್ ಅನ್ನು ಕೊಡಲು, ಹೀಗೆ ಟೈಪ್ ಮಾಡಿ: 'git space config space hyphen hyphen global space user dot email space priya[dot]spoken@gmail.com' ಮತ್ತು ‘Enter’ ಅನ್ನು ಒತ್ತಿ. |
03:12 | ಇಲ್ಲಿ, ನಾನು 'priya[dot]spoken[at]gmail[dot]com' ಬಳಸಿದ್ದೇನೆ. |
03:18 | ನೀವು ಚಲಾವಣೆಯಲ್ಲಿರುವ ನಿಮ್ಮ ಸ್ವಂತದ ಇಮೇಲ್ ಅಡ್ರೆಸ್ ಅನ್ನು ಬಳಸಬಹುದು. |
03:21 | ಯೂಸರ್ ನೇಮ್ ಅನ್ನು ಕೊಡಲು, ಹೀಗೆ ಟೈಪ್ ಮಾಡಿ: 'git space config space hyphen hyphen global space user dot name space Priya' ಮತ್ತು ‘Enter’ ಅನ್ನು ಒತ್ತಿ. |
03:36 | ನಾನು "Priya" ಅನ್ನು ಯೂಸರ್ ನೇಮ್ ಎಂದು (username) ಬಳಸಿದ್ದೇನೆ. ದಯವಿಟ್ಟು ನೀವು "Priya" ದ ಬದಲಿಗೆ ನಿಮ್ಮ ಹೆಸರನ್ನು ಬಳಸಿ. |
03:43 | ‘ನಾವು ಕೊಟ್ಟಿರುವ name’ ಹಾಗೂ ‘email address’ ಗಳು, 'Git' ನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಗುರುತುಗಳಾಗಿವೆ. |
03:51 | ನಂತರ 'commit' ಮೆಸೇಜನ್ನು ಕೊಡಲು, ನಾನು 'gedit' ಟೆಕ್ಸ್ಟ್ ಎಡಿಟರ್ ಅನ್ನು ಕಾನ್ಫಿಗರ್ ಮಾಡುವೆನು. |
03:57 | ಹೀಗೆ ಟೈಪ್ ಮಾಡಿ: 'git space config space hyphen hyphen global space core dot editor space gedit' ಮತ್ತು ‘Enter’ ಅನ್ನು ಒತ್ತಿ. |
04:09 | ಈಗ, 'gedit'ಅನ್ನು 'Git' ಗೆ ಸಂರಚಿಸಲಾಗಿದೆ (configure). |
04:14 | ಇಲ್ಲಿ, 'global' ಫ್ಲ್ಯಾಗ್ ಐಚ್ಛಿಕವಾಗಿದೆ. |
04:17 | 'global' ಫ್ಲ್ಯಾಗ್ ನ ಬಗ್ಗೆ ಇನ್ನೂ ಹೆಚ್ಚು ತಿಳಿಯಲು, ನಾವು ನಮ್ಮ ಸ್ಲೈಡ್ ಗಳಿಗೆ ಹಿಂದಿರುಗುವೆವು. |
04:22 | ಒಂದೇ ಮಷಿನ್ ನಲ್ಲಿ ಒಂದಕ್ಕಿಂತ ಹೆಚ್ಚು ರಿಪೊಸಿಟರಿಗಳನ್ನು ಕ್ರಿಯೇಟ್ ಮಾಡಬಹುದು. |
04:26 | ನೀವು 'ಹೈಫನ್ ಹೈಫನ್ global' ಫ್ಲ್ಯಾಗ್ ಅನ್ನು ಬಳಸಿದರೆ, ಸೆಟ್ಟಿಂಗ್ ಅನ್ನು ಮಷಿನ್ ನಲ್ಲಿಯ ಎಲ್ಲ ರಿಪೊಸಿಟರಿಗಳಿಗೆ ಅನ್ವಯಿಸಲಾಗುವುದು. |
04:34 | ಆದ್ದರಿಂದ, ನೀವು ಒಂದು ಹೊಸ ‘ಗಿಟ್ ರಿಪೊಸಿಟರಿ’ಯನ್ನು ಕ್ರಿಯೇಟ್ ಮಾಡಿದಾಗಲೆಲ್ಲ ಡೀಫಾಲ್ಟ್ ಆಗಿ ಈ ಸೆಟ್ಟಿಂಗ್ ಅನ್ನು ಅನ್ವಯಿಸಲಾಗುವುದು. |
04:42 | ನಿಮಗೆ ಯಾವುದೇ ಒಂದು ನಿರ್ದಿಷ್ಟ ರಿಪೊಸಿಟರಿಗೆ ಮಾತ್ರ ಐಡೆಂಟಿಟೀ ಬೇಕಾಗಿದ್ದರೆ ಆಗ 'ಹೈಫನ್ ಹೈಫನ್ global' ಫ್ಲ್ಯಾಗ್ ಅನ್ನು ಬಳಸಬೇಡಿ. |
04:49 | ಟರ್ಮಿನಲ್ ಗೆ ಹಿಂದಿರುಗಿ. |
04:51 | ಈಗ, ನಾವು ಈ ಮೊದಲು ಸೆಟ್ ಮಾಡಿದ ಐಡೆಂಟಿಟೀಯ ಕಾನ್ಫಿಗರೇಶನ್ ನ ವಿವರಗಳನ್ನು ಪರಿಶೀಲಿಸೋಣ. |
04:57 | ಹೀಗೆ ಟೈಪ್ ಮಾಡಿ: 'git space config space hyphen hyphen list' ಮತ್ತು ‘Enter’ ಅನ್ನು ಒತ್ತಿ. |
05:04 | ಈಗ, 'ಎಡಿಟರ್ ನೇಮ್, ಇಮೇಲ್ ಅಡ್ರೆಸ್' ಹಾಗೂ 'ಯೂಸರ್ ನೇಮ್' ಗಳನ್ನು ನೀವು ನೋಡಬಹುದು. |
05:10 | ಮಾಡಿತೋರಿಸಲು, ನಾನು 'html' ಫೈಲ್ ಗಳನ್ನು ಬಳಸುತ್ತಿರುವೆನು. |
05:14 | ನೀವು ನಿಮಗೆ ಇಷ್ಟವಾದ ಯಾವುದೇ ವಿಧದ ಫೈಲನ್ನು ಬಳಸಬಹುದು. ಉದಾಹರಣೆಗೆ, ಟೆಕ್ಸ್ಟ್ ಫೈಲ್ ಗಳು ಅಥವಾ doc ಫೈಲ್ ಗಳು. |
05:22 | ಟರ್ಮಿನಲ್ ಗೆ ಹಿಂದಿರುಗಿ. ನಾನು ಪ್ರಾಂಪ್ಟ್ ಅನ್ನು ತೆಗೆದುಹಾಕುತ್ತೇನೆ. |
05:26 | ಈಗ, ಹೀಗೆ ಟೈಪ್ ಮಾಡಿ: 'gedit space mypage.html space ampersand'. |
05:34 | ನೀವು ಬೇರೊಂದು ಫೈಲನ್ನು ಬಳಸುತ್ತಿದ್ದರೆ, ಆಗ "mypage.html" ನ ಬದಲಾಗಿ ಆ ಫೈಲ್ ನ ಹೆಸರನ್ನು ಕೊಡಿ. |
05:41 | ನಾವು ಪ್ರಾಂಪ್ಟ್ ಅನ್ನು ತೆಗೆದುಹಾಕಲು '&' (ಆಂಪರ್ಸಂಡ್) ಅನ್ನುಬಳಸುತ್ತೇವೆ. ಈಗ ‘Enter’ ಅನ್ನು ಒತ್ತಿ. |
05:47 | ಈ ಮೊದಲು ಸೇವ್ ಮಾಡಿದ ನನ್ನ 'Writer' ಡಾಕ್ಯೂಮೆಂಟ್ ನಿಂದ, ನಾನು ಸ್ವಲ್ಪ ಕೋಡ್ ಅನ್ನು ಈ ಫೈಲ್ ನಲ್ಲಿ ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ. |
05:54 | ಹೀಗೆಯೇ, ನಿಮ್ಮ ಫೈಲ್ ನಲ್ಲಿ ಏನಾದರೂ ಸೇರಿಸಿ. |
05:58 | ಈಗ, ನನ್ನ ಫೈಲನ್ನು ಸೇವ್ ಮಾಡುವೆನು. |
06:00 | ಹೀಗಾಗಿ, ನನ್ನ ಹತ್ತಿರ ಸ್ವಲ್ಪ ಕೋಡ್ ಅನ್ನು ಹೊಂದಿರುವ ಒಂದು 'html' ಫೈಲ್ ಇದೆ. |
06:05 | ಸೂಚನೆ: ನಾನು 'mypage.html' ಅನ್ನು ಬಳಸಿದಲ್ಲೆಲ್ಲ ನೀವು ನಿಮ್ಮ ಫೈಲ್ ನ ಹೆಸರನ್ನು ಸೇರಿಸಬೇಕು. |
06:13 | ಆಮೇಲೆ, ನಾವು "mypage.html" ಫೈಲನ್ನು ಅನುಸರಿಸಲು ಗಿಟ್ ಅನ್ನು ಕೇಳುವೆವು. |
06:18 | ಟರ್ಮಿನಲ್ ಗೆ ಹಿಂದಿರುಗಿ, ಹೀಗೆ ಟೈಪ್ ಮಾಡಿ: 'git space add space mypage.html' ಮತ್ತು ‘Enter’ ಅನ್ನು ಒತ್ತಿ. |
06:27 | ಈಗ, ನಾವು ಗಿಟ್ ನ ಈಗಿನ ಸ್ಟ್ಯಾಟಸ್ ಅನ್ನು ಪರಿಶೀಲಿಸುವೆವು. ಆದ್ದರಿಂದ, ಹೀಗೆ ಟೈಪ್ ಮಾಡಿ: 'git space status' ಮತ್ತು ‘Enter’ ಅನ್ನು ಒತ್ತಿ. |
06:36 | ನೀವು “new file: mypage.html” ಅನ್ನು ನೋಡಬಹುದು. ಗಿಟ್, "mypage.html" ಫೈಲ್ ಗೆ ಮಾಡಿದ ಬದಲಾವಣೆಗಳನ್ನು ಅನುಸರಿಸಲು ಆರಂಭಿಸಿದೆ ಎಂದು ಇದರ ಅರ್ಥ. |
06:48 | ಇದನ್ನು 'ಟ್ರ್ಯಾಕಿಂಗ್' (tracking) ಎಂದು ಕರೆಯಲಾಗುತ್ತದೆ. |
06:51 | ನಾವು ನಮ್ಮ 'mypage.html' ಫೈಲ್ ಗೆ ಹಿಂದಿರುಗೋಣ |
06:55 | ಮತ್ತು ಈ ಫೈಲ್ ಗೆ ಇನ್ನೂ ಕೆಲವು ಸಾಲು ಕೋಡ್ ಅನ್ನು ಸೇರಿಸೋಣ. |
06:58 | ಈಮೊದಲು ಮಾಡಿದಂತೆ, ನನ್ನ 'Writer' ಫೈಲ್ ನಿಂದ ಕಾಪಿ-ಪೇಸ್ಟ್ ಮಾಡುವೆನು. |
07:06 | ಫೈಲನ್ನು ಸೇವ್ ಮಾಡಿ ಮತ್ತು ಕ್ಲೋಸ್ ಮಾಡಿ. |
07:10 | ಆಮೇಲೆ ಟರ್ಮಿನಲ್ ಗೆ ಹಿಂದಿರುಗಿ. ಮೊದಲು ಮಾಡಿದಂತೆ, 'Git' ನ ಈಗಿನ ಸ್ಟ್ಯಾಟಸ್ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ: 'git space status' ಮತ್ತು ‘Enter’ ಅನ್ನು ಒತ್ತಿ. |
07:21 | ಅದು, “Changes not staged for commit:” ಹಾಗೂ “modified: mypage.html” ಎಂದು ತೋರಿಸುತ್ತದೆ. |
07:28 | 'ಸ್ಟೇಜಿಂಗ್ ಏರಿಯಾ' ಗೆ, ನಾವು ಮಾಡಿದ ಬದಲಾವಣೆಗಳನ್ನು ಸೇರಿಸಲಾಗಿಲ್ಲ ಎಂದು ಇದರ ಅರ್ಥ. |
07:34 | 'ಸ್ಟೇಜಿಂಗ್ ಏರಿಯಾ'ದ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲು, ನಾವು ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ. |
07:39 | 'ಸ್ಟೇಜಿಂಗ್ ಏರಿಯಾ', ಕಮೀಟ್ ಮಾಡಬೇಕಾದ ಬದಲಾವಣೆಗಳ ಮಾಹಿತಿಯನ್ನು ಸಂಗ್ರಹ ಮಾಡುವ ಒಂದು ಫೈಲ್ ಆಗಿದೆ. |
07:46 | ಫೈಲ್ ನಲ್ಲಿರುವ ವಿಷಯಗಳನ್ನು ಕಮೀಟ್ ಮಾಡುವ ಮೊದಲು ಅವುಗಳನ್ನು 'ಸ್ಟೇಜಿಂಗ್ ಏರಿಯಾ'ಗೆ ಸೇರಿಸಬೇಕು. |
07:51 | ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ 'ಕಮೀಟ್' ನ ಬಗ್ಗೆ ಇನ್ನೂ ಹೆಚ್ಚು ಚರ್ಚಿಸುವೆವು. |
07:56 | ಹಳೆಯ 'Git' ಆವೃತ್ತಿಗಳು, 'staging area' ಗೆ ಬದಲಾಗಿ 'index' ಎಂಬ ಪದವನ್ನು ಬಳಸುತ್ತಿದ್ದವು. |
08:01 | ಈಗ, ಫೈಲ್ ನ ‘ಸ್ಟೇಜಿಂಗ್ ಏರಿಯಾ’ ಗೆ ಹೊಸ ಬದಲಾವಣೆಗಳನ್ನು ಹೇಗೆ ಸೇರಿಸುವುದೆಂದು ನಾವು ನೋಡೋಣ. |
08:07 | ಟರ್ಮಿನಲ್ ಗೆ ಹಿಂದಿರುಗಿ. ನಾನು ಪ್ರಾಂಪ್ಟ್ ಅನ್ನು ತೆಗೆದುಹಾಕುತ್ತೇನೆ. |
08:11 | ಹೀಗೆ ಟೈಪ್ ಮಾಡಿ: 'git space add space mypage dot html' ಮತ್ತು 'Enter' ಅನ್ನು ಒತ್ತಿ. |
08:19 | Git ಸ್ಟ್ಯಾಟಸ್ ಅನ್ನು ನೋಡಲು, ಹೀಗೆ ಟೈಪ್ ಮಾಡಿ: “git” ಸ್ಪೇಸ್ “status” ಮತ್ತು ‘Enter’ ಅನ್ನು ಒತ್ತಿ. |
08:26 | ಈಗ ನೀವು “Changes to be committed: ” ಎಂಬ ಮೆಸೇಜನ್ನು ನೋಡಬಹುದು. |
08:30 | ಎಂದರೆ, ಫೈಲ್ ಅನ್ನು 'ಸ್ಟೇಜಿಂಗ್ ಏರಿಯಾ' ಗೆ (staging area) ಸೇರಿಸಲಾಗಿದೆ ಮತ್ತು ಅದನ್ನು ಈಗ ‘ಕಮೀಟ್’ ಮಾಡಬಹುದು ಎಂದರ್ಥ. |
08:37 | ಈಗ, ನಾವು ಈ ಘಟ್ಟದಲ್ಲಿ ನಮ್ಮ ಕೋಡ್ ಅನ್ನು ಫ್ರೀಜ್ ಮಾಡುವೆವು. |
08:40 | ನಮ್ಮ ಕೆಲಸದಲ್ಲಿ, ನಾವು ಒಂದು ನಿರ್ದಿಷ್ಟ್ಟ ಹಂತವನ್ನು ಮುಟ್ಟಿದಾಗ ‘ರಿಪಾಸಿಟರೀ’ಯಲ್ಲಿ ಅವುಗಳನ್ನು ಸೇವ್ ಮಾಡಬಹುದು. ಇದನ್ನು ‘ಕಮೀಟ್’ ಎಂದು ಕರೆಯಲಾಗುವುದು. |
08:49 | ಪ್ರತಿಯೊಂದು ಕಮೀಟ್ ಅನ್ನು 'ಯೂಸರ್ ನೇಮ್, ಇಮೇಲ್-id, ಡೇಟ್, ಟೈಮ್' ಮತ್ತು ‘ಕಮೀಟ್ ಮೆಸೇಜ್’ ಗಳ ಮಾಹಿತಿಯೊಂದಿಗೆ ಸೇವ್ ಮಾಡಲಾಗುವುದು. |
08:57 | ಈಗ, ನಾವು ಹೇಗೆ ‘ಕಮೀಟ್’ ಮಾಡುವುದೆಂದು ನೋಡೋಣ. ಟರ್ಮಿನಲ್ ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: 'git space commit' ಮತ್ತು ‘Enter’ ಅನ್ನು ಒತ್ತಿ. |
09:07 | 'gedit ಟೆಕ್ಸ್ಟ್ ಎಡಿಟರ್', ‘ಕಮೀಟ್ ಮೆಸೇಜ್’ಅನ್ನು ಪಡೆಯಲು ತನ್ನಷ್ಟ್ಟಕ್ಕೆ ತಾನೇ ತೆರೆದುಕೊಳ್ಳುತ್ತದೆ. |
09:13 | ನಾನು ಮೊದಲನೇ ಸಾಲಿನಲ್ಲಿ, ‘ಕಮೀಟ್ ಮೆಸೇಜ್’ಅನ್ನು “Initial commit” ಎಂದು ಟೈಪ್ ಮಾಡುವೆನು. |
09:18 | ನಿಮಗೆ ಬೇಕಾದ ಯಾವುದೇ ಮಾಹಿತಿಯುಕ್ತ ಮೆಸೇಜನ್ನು ನೀವು ಟೈಪ್ ಮಾಡಬಹುದು. |
09:22 | ಇಲ್ಲಿ, ಕೆಲವು ಸಾಲುಗಳು ಹ್ಯಾಶ್ ನೊಂದಿಗೆ ಆರಂಭವಾಗುವುದನ್ನು ನೀವು ನೋಡಬಹುದು. ನೀವು ಅವುಗಳನ್ನು ಇದ್ದ ಹಾಗೆಯೇ ಇಡಬಹುದು ಅಥವಾ ಡಿಲೀಟ್ ಮಾಡಬಹುದು. |
09:30 | ದಯವಿಟ್ಟು ‘ಹ್ಯಾಶ್ ಲೈನ್’ ನ ಮೊದಲು ಅಥವಾ ನಂತರ ‘ಕಮೀಟ್ ಮೆಸೇಜ್’ ಅನ್ನು ಬರೆಯಿರಿ. |
09:35 | ಇನ್ನುಮುಂದೆ, ಈ ‘ಕಮೀಟ್ ಮೆಸೇಜ್’ ನಿಂದ, ಇಲ್ಲಿಯವರೆಗೆ ನಾವು ಮಾಡಿರುವುದನ್ನು ಗುರುತಿಸಬಹುದು. |
09:41 | ನಾನು ಎಡಿಟರ್ ಅನ್ನು ಸೇವ್ ಮಾಡಿ ನಂತರ ಕ್ಲೋಸ್ ಮಾಡುತ್ತೇನೆ. |
09:44 | ನೀವು ಕೆಳಗೆ ಹೇಳಿದಂತಹ ಹಲವು ವಿವರಗಳನ್ನು ನೋಡುವಿರಿ:
|
09:56 | ಈಗ ನಾವು 'git log' ಎಂಬ ಕಮಾಂಡನ್ನು ಬಳಸಿ, 'commit' ನ ವಿವರಗಳನ್ನು ನೋಡೋಣ. |
10:00 | ಹೀಗೆ ಟೈಪ್ ಮಾಡಿ: ' git space log' ಮತ್ತು ‘Enter’ ಅನ್ನು ಒತ್ತಿ. |
10:06 | ನಾವು ನಮ್ಮ ರಿಪಾಸಿಟರೀಯಲ್ಲಿ ಒಂದೇ ಒಂದು 'ಕಮೀಟ್' ಅನ್ನು (commit) ಹೊಂದಿದ್ದೇವೆ. |
10:09 | ಅದು ಒಂದು ಏಕಮಾತ್ರ ID ಯನ್ನು ತೋರಿಸುತ್ತದೆ. ಇದನ್ನು 'ಕಮೀಟ್ ಹ್ಯಾಶ್' ಅಥವಾ 'SHA-1 ಹ್ಯಾಶ್' ಎಂದು ಕರೆಯಲಾಗುತ್ತದೆ. |
10:16 | 'SHA-1 ಹ್ಯಾಶ್' ನ ಬಗ್ಗೆ ಇನ್ನೂ ಹೆಚ್ಚು ತಿಳಿಯಲು, ನಮ್ಮ ಸ್ಲೈಡ್ ಗಳಿಗೆ ಹಿಂದಿರುಗಿ. |
10:20 | 'SHA-1' ಹ್ಯಾಶ್, 40 ಅಲ್ಫಾ-ನ್ಯೂಮೆರಿಕ್ ಅಕ್ಷರಗಳ ಒಂದು ಏಕಮಾತ್ರ ID ಆಗಿದೆ. |
10:25 | ಗಿಟ್, ತನ್ನ ಡೇಟಾಬೇಸ್ ನಲ್ಲಿಯ ಎಲ್ಲ ಮಾಹಿತಿಯನ್ನು 'ಹ್ಯಾಶ್ ವ್ಯಾಲ್ಯೂ'ದ ಮೂಲಕ ಸ್ಟೋರ್ ಮಾಡುತ್ತದೆ. |
10:31 | 'ಗಿಟ್ ಕಮೀಟ್' ಗಳು 'SHA-1 ಹ್ಯಾಶ್' ನಿಂದ ಗುರುತಿಸಲ್ಪಡುತ್ತವೆ. |
10:35 | 'SHA-1 ಹ್ಯಾಶ್' ನ ಪ್ರಾಮುಖ್ಯತೆಯನ್ನು ನೀವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ತಿಳಿಯುವಿರಿ. |
10:41 | ನಾವು ನಮ್ಮ ಟರ್ಮಿನಲ್ ಗೆ ಹಿಂದಿರುಗೋಣ. |
10:43 | ಇದು 'commit' ನ ಆಥರ್ ನೇಮ್, (Author), ಇಮೇಲ್ ಅಡ್ರೆಸ್, ಡೇಟ್, ಟೈಮ್ ಹಾಗೂ ಈಮೊದಲು ನಾವು ಕೊಟ್ಟಿರುವ 'ಕಮೀಟ್ ಮೆಸೇಜ್' ಗಳಂತಹ ವಿವರಗಳನ್ನು ತೋರಿಸುತ್ತದೆ. |
10:56 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
11:00 | ಸಂಕ್ಷಿಪ್ತವಾಗಿ,
ಈ ಟ್ಯುಟೋರಿಯಲ್ ನಲ್ಲಿ, ನಾವು:
|
11:14 | ಒಂದು ಅಸೈನ್ಮೆಂಟ್- ನಿಮ್ಮ ಮಷಿನ್ ನಲ್ಲಿ ಒಂದು ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿ ಮತ್ತು ಅದನ್ನು ರಿಪಾಸಿಟರೀಯನ್ನಾಗಿ ಮಾಡಿ. |
11:20 | ಒಂದು ಟೆಕ್ಸ್ಟ್-ಫೈಲನ್ನು ಕ್ರಿಯೇಟ್ ಮಾಡಿ ಹಾಗೂ ಅದರಲ್ಲಿ ಕೆಲವು ವಿಷಯಗಳನ್ನು ಸೇರಿಸಿ. |
11:25 | ಫೈಲನ್ನು ಗಿಟ್ ರಿಪಾಸಿಟರೀಯ ಸ್ಟೇಜಿಂಗ್ ಏರಿಯಾಗೆ ಸೇರಿಸಿ. |
11:29 | ಫೈಲನ್ನು ನಿಮ್ಮ ರಿಪಾಸಿಟರೀಗೆ 'ಕಮೀಟ್' ಮಾಡಿ. |
11:32 | ಮತ್ತು, 'git log' ಕಮಾಂಡನ್ನು ಬಳಸಿ 'commit' ನ ವಿವರಗಳನ್ನು ನೋಡಿ. |
11:35 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
11:43 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: contact@spoken-tutorial.org |
11:55 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. |
12:02 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: |
12:08 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..
ವಂದನೆಗಳು. |