Difference between revisions of "Jmol-Application/C4/Animation-using-Script-Commands/Kannada"

From Script | Spoken-Tutorial
Jump to: navigation, search
(Created page with " {| Border=1 ! <center>Time</center> ! <center>Narration</center> |- |00:01 | '''Animation using Script Commands''' ಎಂಬ ಈ ಟ್ಯುಟೋರಿಯಲ್ ಗೆ ನ...")
 
Line 44: Line 44:
 
|-
 
|-
 
| 01:23
 
| 01:23
|'loop'ಕಮಾಂಡ್: ಇದು ಸ್ಕ್ರಿಪ್ಟ್, ಐಚ್ಛಿಕ ಸಮಯ ವಿಳಂಬದೊಂದಿಗೆ (time delay)
+
|'loop'ಕಮಾಂಡ್: ಇದು ಸ್ಕ್ರಿಪ್ಟ್, ಐಚ್ಛಿಕ ಸಮಯ ವಿಳಂಬದೊಂದಿಗೆ (time delay) ಆರಂಭದಲ್ಲಿ ರಿಸ್ಟಾರ್ಟ್ ಆಗುವಂತೆ ಮಾಡುತ್ತದೆ.  
ಆರಂಭದಲ್ಲಿ ರಿಸ್ಟಾರ್ಟ್ ಆಗುವಂತೆ ಮಾಡುತ್ತದೆ.  
+
 
|-
 
|-
 
| 01:30
 
| 01:30

Revision as of 17:13, 8 July 2016

Time
Narration
00:01 Animation using Script Commands ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು 'ಜೆ-ಮೊಲ್ ಸ್ಕ್ರಿಪ್ಟ್ ಕಮಾಂಡ್' ಗಳನ್ನು ಬಳಸಿ ಅನಿಮೇಶನ್ ಗಳನ್ನು ಪ್ರದರ್ಶಿಸಲು ಕಲಿಯುವೆವು.
00:12 ಇದನ್ನು ಮಾಡಿತೋರಿಸಲು, ನಾವು 'ಇಥೇನ್' ಮತ್ತು' ಹಿಮೋಗ್ಲೋಬಿನ್' ಗಳ ಮಾಡೆಲ್ ಗಳನ್ನು ಉದಾಹರಣೆಗೆಂದು ಬಳಸುವೆವು.
00:19 ಅನಿಮೇಶನ್ ಗಾಗಿ, 'ಜೆ-ಮೊಲ್ ಸ್ಕ್ರಿಪ್ಟ್ ಕಮಾಂಡ್' ಗಳನ್ನು ಈ ಕೆಳಗಿನ ಕೀವರ್ಡ್ ಗಳೊಂದಿಗೆ ಬಳಸಲಾಗುವುದು.
00:24 'move, delay, slab, loop' ಹಾಗೂ 'capture' (ಮೂವ್, ಡಿಲೇ, ಸ್ಲ್ಯಾಬ್, ಲೂಪ್ ಹಾಗೂ ಕ್ಯಾಪ್ಚರ್).
00:30 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನಿಮಗೆ ಹೈಸ್ಕೂಲ್ ಕೆಮಿಸ್ಟ್ರಿ ಮತ್ತು ' ಜೆ-ಮೊಲ್ ವಿಂಡೋ' ದಲ್ಲಿನ ಆಪರೇಶನ್ ಗಳ ಬಗ್ಗೆ ಪರಿಚಯವಿರಬೇಕು.
00:39 ಇಲ್ಲದಿದ್ದರೆ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:44 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: Ubuntu ಆಪರೇಟಿಂಗ್ ಸಿಸ್ಟಂ ಆವೃತ್ತಿ 14.10
00:51 Jmol ಆವೃತ್ತಿ 14.1.11 ಹಾಗೂ Java ಆವೃತ್ತಿ 7 ಇವುಗಳನ್ನು ಬಳಸುತ್ತಿದ್ದೇನೆ.
00:58 ಈ ಸ್ಲೈಡ್, ಪ್ರತಿಯೊಂದು ಅನಿಮೇಶನ್ ಕಮಾಂಡ್ ನ ಕಾರ್ಯವನ್ನು ವಿವರವಾಗಿ ತೋರಿಸುತ್ತದೆ.
01:03 'move' ಕಮಾಂಡ್, ಒಂದು ಮಾಡೆಲ್ ಅನ್ನು ಸೂಚಿಸಲಾದ ಅವಧಿಯಲ್ಲಿ 'rotate, zoom' ಹಾಗೂ 'translate' ಮಾಡಲು ನಿಮಗೆ ಅನುಮತಿಸುತ್ತದೆ.
01:11 ಸೂಚಿಸಲಾದ ಸೆಕೆಂಡ್ ಗಳವರೆಗೆ ಸ್ಕ್ರಿಪ್ಟ್ ಅನ್ನು ನಿಲ್ಲಿಸಲು 'delay' ಕಮಾಂಡ್ ಅನ್ನು ಬಳಸಲಾಗುತ್ತದೆ.
01:17 ಪ್ಯಾನೆಲ್ ನ ಮೇಲೆ ತೋರಿಸಬೇಕಾದ ಅಣುವಿನ ಪರ್ಸೆಂಟೇಜನ್ನು ನಿಯಂತ್ರಿಸಲು 'slab' ಕಮಾಂಡ್ ಅನ್ನು ಬಳಸಲಾಗುತ್ತದೆ.
01:23 'loop'ಕಮಾಂಡ್: ಇದು ಸ್ಕ್ರಿಪ್ಟ್, ಐಚ್ಛಿಕ ಸಮಯ ವಿಳಂಬದೊಂದಿಗೆ (time delay) ಆರಂಭದಲ್ಲಿ ರಿಸ್ಟಾರ್ಟ್ ಆಗುವಂತೆ ಮಾಡುತ್ತದೆ.
01:30 'capture'ಕಮಾಂಡ್, ಅನಿಮೇಶನ್ ಗಳನ್ನು ಅನಿಮೇಟೆಡ್ 'GIF' ಫೈಲ್ ಗಳೆಂದು ಹಿಡಿದಿಡುತ್ತದೆ.
01:36 ಜೆ-ಮೊಲ್ ಸ್ಕ್ರಿಪ್ಟ್ ಕಮಾಂಡ್ ಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ 'Jmol interactive script documentation' ಎಂಬ ವೆಬ್-ಪೇಜ್ ಅನ್ನು ನೋಡಿ.
01:44 ನಾವು ಜೆ-ಮೊಲ್ ವಿಂಡೋಅನ್ನು ತೆರೆಯೋಣ ಮತ್ತು 'move' ಕಮಾಂಡ್ ಅನ್ನು ಬಳಸಿ ಒಂದು ಅನಿಮೇಶನ್ ಅನ್ನು ಮಾಡಿತೋರಿಸೋಣ.
01:50 ನಾನು 'ಇಥೇನ್' ಅನ್ನು ಉದಾಹರಣೆಗೆಂದು ಬಳಸುತ್ತ, ಸರಳವಾದ ಒಂದು 'move' ಕಮಾಂಡ್ ನೊಂದಿಗೆ ಆರಂಭಿಸುವೆನು.
01:55 'ಮಾಡೆಲ್ ಕಿಟ್' ಮೆನ್ಯುವನ್ನು ಬಳಸಿ 'ಇಥೇನ್' ನ ಒಂದು ಮಾಡೆಲ್ ಅನ್ನು ರಚಿಸಿ.
01:59 'ಮಾಡೆಲ್ ಕಿಟ್' ಐಕಾನ್ ನ ಮೇಲೆ ಕ್ಲಿಕ್ ಮಾಡಿ. 'ಸ್ಕ್ರೀನ್' ನ ಮೇಲೆ, 'ಮಿಥೇನ್' ನ ಒಂದು ಮಾಡೆಲ್ ಕಾಣಿಸಿಕೊಳ್ಳುತ್ತದೆ.
02:06 'ಹೈಡ್ರೋಜನ್' ನ ಮೇಲೆ ಕ್ಲಿಕ್ ಮಾಡಿ. ಈಗ ನಾವು ಸ್ಕ್ರೀನ್ ನ ಮೇಲೆ 'ಇಥೇನ್' ನ ಒಂದು ಮಾಡೆಲ್ ಅನ್ನು ಪಡೆದಿದ್ದೇವೆ.
02:13 'File' ಮೆನ್ಯುವನ್ನು ಬಳಸಿ 'Console' ಅನ್ನು ತೆರೆಯಿರಿ.
02:17 ಪ್ರಾಂಪ್ಟ್ ಇರುವಲ್ಲಿ, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ.
02:21 'ಕಮಾಂಡ್ ಲೈನ್', “move” ಎಂಬ ಶಬ್ದದೊಂದಿಗೆ ಆರಂಭವಾಗುತ್ತದೆ.
02:24 ನಂತರ 'ಅನಿಮೇಶನ್ ಪ್ಯಾರಾಮೀಟರ್' ಗಳನ್ನು ಪ್ರಮಾಣೀಕರಿಸುವ ಸಂಖ್ಯೆಗಳು ಇರುತ್ತವೆ.
02:29 'move' ಕಮಾಂಡ್ ನ ಬಗ್ಗೆ ಹೆಚ್ಚಿನ ಮಾಹಿತಿ: 'move' ಕಮಾಂಡ್ ನಲ್ಲಿ ಒಂಭತ್ತು ಪ್ಯಾರಾಮೀಟರ್ ಗಳಿರುತ್ತವೆ.
02:36 ಮೊದಲ ಮೂರು ಪ್ಯಾರಾಮೀಟರ್ ಗಳು X, Y ಹಾಗೂ Z ಆಕ್ಸಿಸ್ ಗಳ ಸುತ್ತಲಿನ ರೊಟೇಶನ್ ಗಳಾಗಿವೆ. ನಾಲ್ಕನೆಯದು, ಧನಾತ್ಮಕ ಅಥವಾ ಋಣಾತ್ಮಕ ಸಂಖ್ಯೆಗಳಲ್ಲಿ ವ್ಯಕ್ತಪಡಿಸಲಾದ ಝೂಮ್ ಮಾಡಿಫೈಯರ್ (zoom modifier) ಆಗಿರುತ್ತದೆ.
02:48 ಇದು 'ಝೂಮ್-ಇನ್' ಗಾಗಿ ಧನಾತ್ಮಕ ಹಾಗೂ 'ಝೂಮ್-ಔಟ್' ಗಾಗಿ ಋಣಾತ್ಮಕ ಆಗಿರುತ್ತದೆ.
02:52 ನಂತರದ ಮೂರು ಪ್ಯಾರಾಮೀಟರ್ ಗಳು, ಮೂರು ಆಕ್ಸಿಸ್ ಗಳ ಜೊತೆಗಿನ ಟ್ರಾನ್ಸ್ಲೇಶನ್ ಗೆ ಸಂಬಂಧಿಸಿರುತ್ತವೆ.
02:57 ಎಂಟನೆಯದು ಸ್ಲ್ಯಾಬ್ (slab) ಎಂಬ ಪ್ಯಾರಾಮೀಟರ್ ಆಗಿದೆ. ಇದು ಅಣುವನ್ನು ಸ್ಲೈಸ್ ಮಾಡುತ್ತದೆ.
03:03 ಇದು, ಒಂದು ನಿರ್ದಿಷ್ಟ ಆಳದವರೆಗೆ ಪರಮಾಣುಗಳನ್ನು ತೆಗೆದುಹಾಕುವುದರಿಂದ ಒಳಗಿನ ವೈಶಿಷ್ಟ್ಯಗಳನ್ನು ಸುಲಭವಾಗಿ ನೋಡಬಹುದು.
03:10 9 ನೆಯ ಪ್ಯಾರಾಮೀಟರ್, 'move' ಕಮಾಂಡ್ಅನ್ನು ನಿರ್ವಹಿಸಲು ಬೇಕಾದ ಸಮಯವನ್ನು ಸೆಕೆಂಡುಗಳಲ್ಲಿ ಸೂಚಿಸುತ್ತದೆ.
03:17 'Jmol' ಪ್ಯಾನೆಲ್ ಗೆ ಹಿಂದಿರುಗೋಣ.
03:20 'Enter' ಅನ್ನು ಒತ್ತಿ ಮತ್ತು ಪ್ಯಾನೆಲ್ ಅನ್ನು ಗಮನಿಸಿ.
03:25 ಈಗಿರುವ ಕಮಾಂಡ್ ಗಳಿಗೆ ಇನ್ನೂ ಹೆಚ್ಚು ಕಮಾಂಡ್ ಗಳನ್ನು ಸೇರಿಸುವುದರ ಮೂಲಕ ನಾವು ಹೆಚ್ಚು ಆಸಕ್ತಿಕರ ಅನಿಮೇಶನ್ ಅನ್ನು ರಚಿಸಬಹುದು.
03:31 ಹಿಂದಿನ ಕಮಾಂಡ್ ಅನ್ನು ಪಡೆಯಲು, ಕೀಬೋರ್ಡ್ ಮೇಲಿನ ಅಪ್-ಆರೋ ಕೀಯನ್ನು ಒತ್ತಿ.
03:36 ಸೆಮಿಕೋಲನ್ ನ ನಂತರ ಹೀಗೆ ಟೈಪ್ ಮಾಡಿ: 'delay ಸ್ಪೇಸ್ 2'.
03:41 ಇಲ್ಲಿ, ಮುಂದಿನ ಕಮಾಂಡ್ ಅನ್ನು ಎಕ್ಸೀಕ್ಯೂಟ್ ಮಾಡುವ ಮೊದಲು, 'delay' ಕಮಾಂಡ್, 2 ಸೆಕೆಂಡುಗಳವರೆಗೆ ಸ್ಕ್ರಿಪ್ಟ್ ಅನ್ನು ತಡೆಯುತ್ತದೆ.
03:48 ಈ 'delay' ಕಮಾಂಡ್ ನ ನಂತರ, ಇನ್ನೊಂದು 'move' ಕಮಾಂಡ್ ಅನ್ನು ಟೈಪ್ ಮಾಡಿ.
03:52 ಪ್ರತಿಯೊಂದು ಕೀವರ್ಡ್ ಕಮಾಂಡ್ ನ ಕೊನೆಯಲ್ಲಿ ಸೆಮಿಕೋಲನ್ ಅನ್ನು ಸೇರಿಸಲು ಮರೆಯಬೇಡಿ. 'Enter' ಅನ್ನು ಒತ್ತಿ ಮತ್ತು ಪ್ಯಾನೆಲ್ ಅನ್ನು ಗಮನಿಸಿ.
04:06 ಈ ಅನಿಮೇಶನ್ ನ ಅವಧಿಯಲ್ಲಿ ನಾವು ಪರಮಾಣುಗಳ ಬಣ್ಣವನ್ನು ಸಹ ಬದಲಾಯಿಸಬಹುದು.
04:10 ಮತ್ತೊಮ್ಮೆ ಹಿಂದಿನ ಕಮಾಂಡ್ ಅನ್ನು ಪಡೆಯಲು ಅಪ್-ಆರೋ ಕೀಯನ್ನು ಒತ್ತಿ.
04:15 ಇಲ್ಲಿ, ಕನ್ಸೋಲ್ ನ ಮೇಲೆ ನಾನು ತೋರಿಸಿದಂತೆ ಕಮಾಂಡ್ ಅನ್ನು ಎಡಿಟ್ ಮಾಡಿ.
04:19 ಹೈಡ್ರೋಜನ್ ಗಳ ಹಾಗೂ ಕಾರ್ಬನ್ ಗಳ ಬಣ್ಣವನ್ನು ಬದಲಾಯಿಸಲು 'select' ಕೀವರ್ಡ್ ಗಳನ್ನು ಬಳಸಿ. 'Enter' ಅನ್ನು ಒತ್ತಿ.
04:27 ಮತ್ತೊಮ್ಮೆ ಪ್ಯಾನೆಲ್ ಅನ್ನು ಗಮನಿಸಿ.
04:34 ಅಣುವಿನ ಕೆಲವು ಭಾಗಗಳು ಕಾಣುವಂತೆ ಮತ್ತು ಕಾಣದಂತೆ ಮಾಡಲು ಒಂದು “slab” ಕಮಾಂಡ್ ಅನ್ನು ಸೇರಿಸಿ.
04:41 ಮತ್ತೊಮ್ಮೆ ಅಪ್-ಆರೋ ಕೀಯನ್ನು ಒತ್ತಿ ಮತ್ತು ಕನ್ಸೋಲ್ ನ ಮೇಲೆ ತೋರಿಸಿದಂತೆ ಹಿಂದಿನ ಕಮಾಂಡ್ ಅನ್ನು ಎಡಿಟ್ ಮಾಡಿ.
04:47 'select' ಕಮಾಂಡ್ ನ ನಂತರ “slab on” ಎಂದು ಟೈಪ್ ಮಾಡಿ.
04:51 ಕಮಾಂಡ್ ನ ಕೊನೆಯಲ್ಲಿ "slab off" ಎಂದು ಟೈಪ್ ಮಾಡಿ.
04:55 'Enter' ಅನ್ನು ಒತ್ತಿ ಮತ್ತು ಪ್ಯಾನೆಲ್ ಅನ್ನು ಗಮನಿಸಿ.
05:01 ಅಣುವಿನ ಭಾಗಗಳು ಕಣ್ಮರೆಯಾಗುವುದು ಹಾಗೂ ಮತ್ತೆ ಕಾಣಿಸಿಕೊಳ್ಳುವುದನ್ನು ನೀವು ನೋಡಬಹುದು.
05:06 'capture' ಕೀವರ್ಡ್ ಅನ್ನು ಬಳಸಿ ಈ ಅನಿಮೇಶನ್ ಅನ್ನು ನೀವು 'GIF' ಫೈಲ್ ನಂತೆ ಸೇವ್ ಮಾಡಬಹುದು.
05:11 ಹಿಂದಿನ ಕಮಾಂಡ್ ಅನ್ನು ಪಡೆಯಲು ಅಪ್-ಆರೋ ಕೀಯನ್ನು ಒತ್ತಿ.
05:15 "capture" ಕಮಾಂಡ್ ಅನ್ನು ಟೈಪ್ ಮಾಡಿ ಮತ್ತು ಕಮಾಂಡ್ ನ ಆರಂಭದಲ್ಲಿ ಫೈಲ್ ನ ಹೆಸರು ಮತ್ತು path (ಪಾಥ್) ಗಳನ್ನು ಸೂಚಿಸಿ.
05:21 ನೀವು 'GIF' ಫೈಲನ್ನು ಸೇವ್ ಮಾಡಲು, ನಿಮ್ಮ ‘home’ ಫೋಲ್ಡರ್ ನ ಹೆಸರನ್ನು ಟೈಪ್ ಮಾಡಬಹುದು.
05:26 ನಾನು ಈ ಅನಿಮೇಶನ್ ಅನ್ನು ಡೆಸ್ಕ್ಟಾಪ್ ನ ಮೇಲೆ “sneha” ಫೈಲ್ ಎಂದು ಸೇವ್ ಮಾಡುತ್ತಿದ್ದೇನೆ. 'Enter' ಅನ್ನು ಒತ್ತಿ.
05:36 ಈಗ ಅನಿಮೇಶನ್ ಅನ್ನು ನನ್ನ ಡೆಸ್ಕ್ಟಾಪ್ ನ ಮೇಲೆ 'GIF' ಫೈಲ್ ಎಂದು ಸೇವ್ ಮಾಡಲಾಗುವುದು.
05:41 'GIF' ಫೈಲ್ ಇರುವಲ್ಲಿಗೆ ಹೋಗಿ.
05:44 'Image Viewer' ಎಂಬ ಸಾಫ್ಟ್ವೇರ್ ನೊಂದಿಗೆ ಸೇವ್ ಮಾಡಲಾದ 'GIF' ಫೈಲನ್ನು ತೆರೆಯಿರಿ.
05:50 ಜೆ-ಮೊಲ್ ಪ್ಯಾನೆಲ್ ಗೆ ಹಿಂದಿರುಗಿ.
05:54 ಹೀಗೆಯೇ, ಯಾವುದೋ ಒಂದು ಮ್ಯಾಕ್ರೋಮೊಲೆಕ್ಯುಲ್ ನ 'pdb' ಫೈಲನ್ನು ತೆರೆಯಿರಿ; ಉದಾಹರಣೆಗೆ- ‘pdb ಕೋಡ್ 2DN1’ ಹೊಂದಿರುವ 'ಆಕ್ಸಿಜಿನೇಟೆಡ್ ಹಿಮೋಗ್ಲೋಬಿನ್'.
06:06 'File' ಮೆನ್ಯುವನ್ನು ಬಳಸಿ, 'pdb' ಡೇಟಾಬೇಸ್ ನಿಂದ ಸ್ಟ್ರಕ್ಚರ್ ಅನ್ನು ನೇರವಾಗಿ ಡೌನ್ಲೋಡ್ ಮಾಡಿ.
06:11 ಟೆಕ್ಸ್ಟ್-ಬಾಕ್ಸ್ ನಲ್ಲಿ, 'pdb' ಕೋಡ್ ಅನ್ನು "2DN1" ಎಂದು ಟೈಪ್ ಮಾಡಿ. 'OK' ಯನ್ನು ಒತ್ತಿ.
06:19 ಹಿಮೋಗ್ಲೋಬಿನ್ ನ ಒಂದು ಮಾಡೆಲ್ ಅನ್ನು ಪ್ಯಾನೆಲ್ ನ ಮೇಲೆ ತೋರಿಸಲಾಗಿದೆ.
06:23 ಕನ್ಸೋಲ್ ನಲ್ಲಿ, ಈ ಕೆಳಗಿನ ಕಮಾಂಡ್ ಅನ್ನು ಟೈಪ್ ಮಾಡಿ.
06:26 ಪ್ರೋಟೀನ್ ನ ವಿವಿಧ ಘಟಕಗಳ ಬಣ್ಣವನ್ನು ಬದಲಾಯಿಸಲು, ನಾವು 'select' ಕೀವರ್ಡ್ ಕಮಾಂಡ್ ಅನ್ನು ಬಳಸಿದ್ದೇವೆ.
06:32 ನಾವು 'move' ಕಮಾಂಡ್ ಅನ್ನು ಸಹ ಬಳಸಿದ್ದೇವೆ.
06:35 ಈ ಕಮಾಂಡ್, ಪ್ರೋಟೀನ್ ಅನ್ನು ಕೆಂಪು ಬಣ್ಣದ ಕಾರ್ಟೂನ್ ಗಳಲ್ಲಿ,
06:40 'ಹೇಮ್' ಭಾಗವನ್ನು ಹಳದಿ ಬಣ್ಣ, ಸ್ಪೇಸ್-ಫಿಲ್ (spacefill) ಡಿಸ್ಪ್ಲೇಯಲ್ಲಿ ಪ್ರದರ್ಶಿಸುವುದು ಮತ್ತು ಅಣುವಿನ 50% ಅನ್ನು ತೆಗೆದುಹಾಕುವುದು.
06:48 4 ಸೆಕೆಂಡುಗಳಲ್ಲಿ X-ಆಕ್ಸಿಸ್ ನ ಮೇಲೆ 360º ತಿರುಗಿಸಿ (rotate) ಮತ್ತು ಎಲ್ಲ ಪರಮಾಣುಗಳನ್ನು ಪೂರ್ವಸ್ಥಿತಿಗೆ ತನ್ನಿ.
06:56 'Enter' ಅನ್ನು ಒತ್ತಿ ಮತ್ತು ಪ್ಯಾನೆಲ್ ಅನ್ನು ಗಮನಿಸಿ.
07:07 ಈಗ, ಮೇಲೆ ಹೇಳಿದ ಎಲ್ಲ ಹಂತಗಳನ್ನು ಪುನರಾವರ್ತಿಸಲು ನಾವು 'loop' ಕಮಾಂಡ್ ಅನ್ನು ಬಳಸೋಣ.
07:13 ಅದೇ ಕಮಾಂಡ್ ಅನ್ನು ಪಡೆಯಲು ಅಪ್-ಆರೋ ಕೀಯನ್ನು ಒತ್ತಿ. ಕಮಾಂಡ್ ನ ಕೊನೆಯಲ್ಲಿ "loop 2" ಎಂದು ಟೈಪ್ ಮಾಡಿ.
07:20 "loop 2", 2 ಸೆಕೆಂಡುಗಳ ವಿಳಂಬದ ನಂತರ ಪುನರಾವರ್ತಿಸುವ ಹಿಂದಿನ ಸ್ಕ್ರಿಪ್ಟ್ ಕಮಾಂಡ್ ಗಳನ್ನು ತೋರಿಸುತ್ತದೆ.

'Enter' ಅನ್ನು ಒತ್ತಿ.

07:34 ಅನಿಮೇಟ್ ಮಾಡಲು ನೀವು ಇಂತಹ ಇನ್ನೂ ಅನೇಕ ಕಮಾಂಡ್ ಗಳನ್ನು ಟೈಪ್ ಮಾಡಬಹುದು.
07:39 ಈಗ ಸಂಕ್ಷಿಪ್ತವಾಗಿ- ಈ ಟ್ಯುಟೋರಿಯಲ್ ನಲ್ಲಿ ನಾವು,
07:44 'move', 'delay' ಗಳಂತಹ ಸ್ಕ್ರಿಪ್ಟ್ ಕಮಾಂಡ್ ಗಳನ್ನು ಬಳಸಿ, 'ಇಥೇನ್' ನ ಹಾಗೂ ಹಿಮೋಗ್ಲೋಬಿನ್ ಗಳ ಅನಿಮೇಶನ್ ಅನ್ನು ಕ್ರಿಯೇಟ್ ಮಾಡಲು ಕಲಿತಿದ್ದೇವೆ.
07:54 ನಾವು 'loop' ಮತ್ತು 'slab' ಕಮಾಂಡ್ ಗಳನ್ನು ಸಹ ಬಳಸಿಕೊಂಡಿದ್ದೇವೆ.
07:58 'capture' ಕಮಾಂಡ್ ಅನ್ನು ಬಳಸಿ, ಅನಿಮೇಶನ್ ಗಳನ್ನು 'GIF' ಫೈಲ್ ಎಂದು ಸೇವ್ ಮಾಡಿದ್ದೇವೆ.
08:03 ಒಂದು ಅಸೈನ್ಮೆಂಟ್ ಗಾಗಿ:

ನಿಮಗೆ ಇಷ್ಟವಾದ ಒಂದು ಅಣುವನ್ನು ತೆಗೆದುಕೊಳ್ಳಿ. 'move' ಹಾಗೂ 'delay' ಕಮಾಂಡ್ ಗಳನ್ನು ಬಳಸಿ ಅನಿಮೇಶನ್ ಅನ್ನು ಕ್ರಿಯೇಟ್ ಮಾಡಿ.

08:11 ಅನಿಮೇಶನ್ ಅನ್ನು ಕ್ರಿಯೇಟ್ ಮಾಡಲು, ಬಾಂಡ್ ಗಳ ಡಿಸ್ಪ್ಲೇ, ಕಲರ್ ಮತ್ತು ಸೈಜ್ ಗಳನ್ನು ಬದಲಾಯಿಸಿ.
08:17 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
08:25 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ನ ತಂಡವು: ಕಾರ್ಯಶಾಲೆಗಳನ್ನು ನಡೆಸುತ್ತದೆ ಹಾಗೂ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ.
08:32 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
08:36 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
08:43 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

[1]

08:48 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..

ವಂದನೆಗಳು.

Contributors and Content Editors

Sandhya.np14