Difference between revisions of "Jmol-Application/C2/Measurements-and-Labeling/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 | '''Time''' | '''Narration''' |- | 00:01 | '''Jmol Application''' (ಜೆ-ಮೊಲ್ ಅಪ್ಲಿಕೇಶನ್) ನಲ್ಲಿ '''Measurements and Labelin...") |
Sandhya.np14 (Talk | contribs) |
||
Line 339: | Line 339: | ||
| ಈ ಕೆಳಗಿನ ಲಿಂಕ್ ನಿಂದ ವಿಡಿಯೋಅನ್ನು ನೋಡಿ. | | ಈ ಕೆಳಗಿನ ಲಿಂಕ್ ನಿಂದ ವಿಡಿಯೋಅನ್ನು ನೋಡಿ. | ||
http://spoken-tutorial.org/What_is_a_Spoken_Tutorial | http://spoken-tutorial.org/What_is_a_Spoken_Tutorial | ||
− | |||
|- | |- | ||
| 08:51 | | 08:51 |
Revision as of 06:22, 16 March 2016
Time | Narration |
00:01 | Jmol Application (ಜೆ-ಮೊಲ್ ಅಪ್ಲಿಕೇಶನ್) ನಲ್ಲಿ Measurements and Labeling (ಮೇಜರ್ಮೆಂಟ್ಸ್ ಆಂಡ್ ಲೇಬಲಿಂಗ್) ಎಂಬ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:09 | * ಕಾರ್ಬಾಕ್ಸಿಲಿಕ್ ಆಸಿಡ್ (carboxylic acid) ಮತ್ತು ನೈಟ್ರೋಅಲ್ಕೇನ್ (nitroalkane) ಗಳ ಮಾಡೆಲ್ ಗಳನ್ನು ರಚಿಸುವುದು |
00:14 | * ಮಾಡೆಲ್ ನಲ್ಲಿಯ ಪರಮಾಣುಗಳನ್ನು, ಚಿಹ್ನೆ (symbol) ಹಾಗೂ ಸಂಖ್ಯೆ (number) ಗಳೊಂದಿಗೆ ಲೇಬಲ್ ಮಾಡುವುದು. |
00:19 | * ಬಾಂಡ್ ಲೆಂಗ್ತ್ ಗಳನ್ನು, ಬಾಂಡ್ ಆಂಗಲ್ ಗಳನ್ನು (bond angles) ಹಾಗೂ ಡೈಹೆಡ್ರಲ್ ಆಂಗಲ್ ಗಳನ್ನು (dihedral angles) ಅಳೆಯಲು ಕಲಿಯುವೆವು. |
00:24 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು, |
00:27 | ಜೆ-ಮೊಲ್ ಅಪ್ಪ್ಲಿಕೇಶನ್ ನಲ್ಲಿ, ಮೊಲೆಕ್ಯುಲರ್ ಮಾಡೆಲ್ ಗಳನ್ನು ಕ್ರಿಯೇಟ್ ಹಾಗೂ ಎಡಿಟ್ ಮಾಡುವುದನ್ನು ತಿಳಿದಿರಬೇಕು. |
00:32 | ಇಲ್ಲದಿದ್ದರೆ, ಸಂಬಂಧಪಟ್ಟ ಟ್ಯುಟೋರಿಯಲ್ ಗಳಿಗಾಗಿ ನಮ್ಮ ವೆಬ್ಸೈಟ್ ಅನ್ನು ನೋಡಿ. |
00:37 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: |
00:39 | * Ubuntu OS ಆವೃತ್ತಿ 12.04 |
00:44 | * Jmol ಆವೃತ್ತಿ 12.2.2 |
00:47 | * Java ಆವೃತ್ತಿ 7 ಇವುಗಳನ್ನು ಬಳಸುತ್ತಿದ್ದೇನೆ. |
00:50 | ಈ ಅನಿಮೇಶನ್ ಅನ್ನು ಬಳಸಿ, 'ಕಾರ್ಬಾಕ್ಸಿಲ್ ಗ್ರೂಪ್' ಅನ್ನು ರಚಿಸುವುವ ಹಂತಗಳನ್ನು ನಾವು ನೋಡೋಣ. |
00:56 | ಉದಾಹರಣೆಗೆ, ಸಾಮಾನ್ಯವಾಗಿ ಅಸಿಟಿಕ್ ಆಸಿಡ್ (Acetic acid) ಎಂದು ಪರಿಚಿತವಾಗಿರುವ ಇಥನೊಯಿಕ್ ಆಸಿಡ್ (Ethanoic acid) ನ ಒಂದು ಮಾಡೆಲ್ ಅನ್ನು ನಾವು ರಚಿಸುವೆವು. |
01:03 | ನಾವು ಇಥೇನ್ ನ ಮಾಡೆಲ್ ನೊಂದಿಗೆ ಆರಂಭಿಸುವೆವು. |
01:06 | ಮಿಥೈಲ್ ಗ್ರೂಪ್ ಗಳಲ್ಲಿ ಒಂದನ್ನು ನಾವು ಕಾರ್ಬಾಕ್ಸಿಲ್ ಗ್ರೂಪ್ ಗೆ ಪರಿವರ್ತಿಸಬೇಕು. |
01:11 | ಒಂದೇ ಕಾರ್ಬನ್ ಪರಮಾಣುವಿಗೆ ಸೇರಿಸಲಾದ ಎರಡು ಹೈಡ್ರೋಜನ್ ಗಳನ್ನು, ಹೈಡ್ರಾಕ್ಸೀ ಗ್ರೂಪ್ ನಿಂದ ಬದಲಾಯಿಸಿ. |
01:18 | ಒಂದು ಆಕ್ಸೀಜನ್ ಹಾಗೂ ಒಂದು ಕಾರ್ಬನ್ ಗಳಿಂದ ಸೇರಿಸಿರುವ ಹೈಡ್ರೋಜನ್ ಗಳನ್ನು ತೆಗೆದುಹಾಕಿ. |
01:23 | ಕಾರ್ಬನ್-ಆಕ್ಸೀಜನ್ ಬಾಂಡ್ ಅನ್ನು ಡಬಲ್-ಬಾಂಡ್ ಗೆ ಪರಿವರ್ತಿಸಿ. |
01:26 | ಮಿಥೈಲ್ ಗ್ರೂಪ್ ಅನ್ನು ಒಂದು ಕಾರ್ಬಾಕ್ಸಿಲ್ ಗ್ರೂಪ್ ಆಗಿ ಪರಿವರ್ತಿಸಲಾಗಿದೆ. |
01:31 | 'ಇಥೇನ್' ಅನ್ನು'ಇಥನೊಯಿಕ್ ಆಸಿಡ್' ಆಗಿ ಪರಿವರ್ತಿಸಲಾಗಿದೆ ಎಂದು ಗಮನಿಸಿ. |
01:35 | ನಾವು ಮೇಲಿನ ಹಂತಗಳನ್ನು ಅನುಸರಿಸಿ, ಜೆ-ಮೊಲ್ ಅಪ್ಲಿಕೇಶನ್ ನಲ್ಲಿ 'ಇಥನೊಯಿಕ್ ಆಸಿಡ್' ನ ಮಾಡೆಲ್ ಅನ್ನು ರಚಿಸುವೆವು. |
01:42 | ಜೆ-ಮೊಲ್ ಪ್ಯಾನೆಲ್ ನ ಮೇಲೆ, ಇದು 'ಇಥೇನ್' ನ ಮಾಡೆಲ್ ಆಗಿದೆ. |
01:46 | ನಾವು ಒಂದು ಮಿಥೈಲ್ ಗ್ರೂಪ್ ಅನ್ನು ಒಂದು ಕಾರ್ಬಾಕ್ಸಿಲ್ ಗ್ರೂಪ್ ಆಗಿ ಪರಿವರ್ತಿಸೋಣ. |
01:50 | ಮಾಡೆಲ್ ಕಿಟ್ (Model kit) ಮೆನ್ಯೂನಿಂದ, 'oxygen' ಅನ್ನು ಆಯ್ಕೆಮಾಡಿ. |
01:54 | ಒಂದೇ ಕಾರ್ಬನ್ ಪರಮಾಣುವಿಗೆ ಜೋಡಿಸಲಾದ ಹೈಡ್ರೋಜನ್ ಗಳ ಮೇಲೆ ಕ್ಲಿಕ್ ಮಾಡಿ. |
01:58 | ಈಗ, ಮಾಡೆಲ್ ಕಿಟ್ ಮೆನ್ಯೂನಲ್ಲಿ, 'Delete atom' ಎಂಬ ಆಯ್ಕೆಯನ್ನು ಚೆಕ್ ಮಾಡಿ. |
02:02 | 'ಆಕ್ಸೀಜನ್' ಗೆ ಜೋಡಿಸಿರುವ 'ಹೈಡ್ರೋಜನ್' ಅನ್ನು ಡಿಲೀಟ್ ಮಾಡಿ. |
02:07 | ಮತ್ತು 'ಕಾರ್ಬನ್' ಗೆ ಜೋಡಿಸಿರುವ 'ಹೈಡ್ರೋಜನ್' ಅನ್ನು ಸಹ ಡಿಲೀಟ್ ಮಾಡಿ. |
02:11 | ಆಮೇಲೆ, 'ಕಾರ್ಬನ್' ಮತ್ತು 'ಆಕ್ಸೀಜನ್' ಗಳ ನಡುವೆ ಒಂದು ಡಬಲ್-ಬಾಂಡ್ ಅನ್ನು ನಾವು ಸೇರಿಸೋಣ. |
02:16 | ಆದ್ದರಿಂದ, ಮಾಡೆಲ್ ಕಿಟ್ ಮೆನ್ಯೂನಲ್ಲಿ, 'double' ಎಂಬ ಆಯ್ಕೆಯನ್ನು ಚೆಕ್ ಮಾಡಿ |
02:20 | ಮತ್ತು 'ಕಾರ್ಬನ್' ಮತ್ತು 'ಆಕ್ಸೀಜನ್' ಗಳನ್ನು ಜೋಡಿಸುವ ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
02:25 | ಸ್ಕ್ರೀನ್ ನ ಮೇಲೆ, ನಮ್ಮ ಹತ್ತಿರ 'ಅಸಿಟಿಕ್ ಆಸಿಡ್' ನ ಒಂದು ಮಾಡೆಲ್ ಇದೆ. |
02:28 | ರಚನೆಯನ್ನು ಅತ್ಯುತ್ತಮಗೊಳಿಸಲು (optimize) ಮಾಡಲು, ಎನರ್ಜೀ ಮಿನಿಮೈಜೇಶನ್ ಅನ್ನು ಮಾಡಿ. |
02:32 | ಒಂದು 'ನೈಟ್ರೋ ಗ್ರೂಪ್' ಅನ್ನು ರಚಿಸಲು, ನಾವು ಇದೇ ರೀತಿಯ ತಂತ್ರವನ್ನು ಅನುಸರಿಸುವೆವು. |
02:37 | ಇದೋ, ಇಥೇನ್ ನ ಒಂದು ಮಾಡೆಲ್ ನೊಂದಿಗೆ ಜೆ-ಮೊಲ್ ಪ್ಯಾನೆಲ್ ಇಲ್ಲಿದೆ. |
02:40 | ಈಗ, ನಾವು ಈ ಅಣುವನ್ನು 'ನೈಟ್ರೋ-ಇಥೇನ್' ಗೆ ಪರಿವರ್ತಿಸೋಣ. |
02:45 | ಮಾಡೆಲ್ ಕಿಟ್ ಮೆನ್ಯೂದ ಮೆಲೆ ಕ್ಲಿಕ್ ಮಾಡಿ ಮತ್ತು Nitrogen (ನೈಟ್ರೋಜನ್) ಅನ್ನು ಚೆಕ್ ಮಾಡಿ. |
02:50 | ಇಥೇನ್ ಅಣುವಿನಲ್ಲಿ, ಹೈಡ್ರೋಜನ್ ಪರಮಾಣುವಿನ ಮೇಲೆ ಕ್ಲಿಕ್ ಮಾಡಿ. |
02:54 | 'ನೈಟ್ರೋಜನ್' ಪರಮಾಣುವನ್ನು ನೀಲಿ ಗೋಳದಿಂದ ತೋರಿಸಲಾಗಿದೆ. |
02:58 | ನಂತರ, ನೈಟ್ರೋಜನ್ ಗೆ ಜೋಡಿಸಲಾದ ಎರಡು ಹೈಡ್ರೋಜನ್ ಗಳ ಬದಲಾಗಿ ನಾವು ಹೈಡ್ರಾಕ್ಸೀ ಗ್ರೂಪ್ ಗಳನ್ನು ಸೇರಿಸುವೆವು. |
03:04 | ಮಾಡೆಲ್ ಕಿಟ್ ಮೆನ್ಯೂದ ಮೆಲೆ ಕ್ಲಿಕ್ ಮಾಡಿ ಮತ್ತು 'Oxygen (O)' ಅನ್ನು ಚೆಕ್ ಮಾಡಿ. |
03:10 | ಆಮೇಲೆ, ನೈಟ್ರೋಜನ್ ಗೆ ಜೋಡಿಸಲಾದ ಹೈಡ್ರೋಜನ್ ಗಳ ಮೇಲೆ ಕ್ಲಿಕ್ ಮಾಡಿ. |
03:14 | ಆಕ್ಸೀಜನ್ ಪರಮಾಣುಗಳಿಗೆ ಜೋಡಿಸಲಾದ ಹೈಡ್ರೋಜನ್ ಗಳನ್ನು ಡಿಲೀಟ್ ಮಾಡಿ. |
03:18 | ಮಾಡೆಲ್ ಕಿಟ್ ಮೆನ್ಯೂವನ್ನು ಓಪನ್ ಮಾಡಿ ಮತ್ತು 'delete atom' ಅನ್ನು ಚೆಕ್ ಮಾಡಿ. |
03:23 | ಆಕ್ಸೀಜನ್ ಪರಮಾಣುಗಳಿಗೆ ಜೋಡಿಸಲಾದ ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ. |
03:26 | ಈಗ ನಾವು, ನೈಟ್ರೋಜನ್ ಹಾಗೂ ಆಕ್ಸೀಜನ್ ಪರಮಾಣುಗಳ ನಡುವೆ ಒಂದು ಡಬಲ್-ಬಾಂಡ್ ಅನ್ನು ಸೇರಿಸುವೆವು. |
03:32 | ಮಾಡೆಲ್ ಕಿಟ್ ಮೆನ್ಯೂನಲ್ಲಿ, 'double' ಎಂಬ ಆಯ್ಕೆಯನ್ನು ಚೆಕ್ ಮಾಡಿ. |
03:36 | ನೈಟ್ರೋಜನ್ ಹಾಗೂ ಆಕ್ಸೀಜನ್ ಪರಮಾಣುಗಳನ್ನು ಜೋಡಿಸುವ ಬಾಂಡ್ ನ ಮೇಲೆ ಕ್ಲಿಕ್ ಮಾಡಿ. |
03:40 | ಸ್ಕ್ರೀನ್ ನ ಮೇಲಿರುವುದು, 'ನೈಟ್ರೋ ಇಥೇನ್' ನ ಮಾಡೆಲ್ ಆಗಿದೆ. |
03:44 | ಒಂದು ಅಸೈನ್ಮೆಂಟ್- |
03:45 | * '1 ಬ್ಯೂಟಾನೊಇಕ್ ಆಸಿಡ್' (1-butanoic acid) ಹಾಗೂ 'ಇಥೈಲ್ ಅಸಿಟೇಟ್' (ethylacetate) ನ ಮಾಡೆಲ್ ಗಳನ್ನು ರಚಿಸಿ. |
03:50 | * ಎನರ್ಜೀ ಮಿನಿಮೈಸೇಶನ್ ಮೂಲಕ ಸ್ಟ್ರಕ್ಚರ್ ಅನ್ನು ಆಪ್ಟಿಮೈಸ್ ಮಾಡಿ ಮತ್ತು |
03:53 | * ಇಮೇಜನ್ನು ಸೇವ್ ಮಾಡಿ. |
03:56 | ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್, ಈ ಕೆಳಗೆ ತೋರಿಸಿದಂತೆ ಕಾಣಬೇಕು. |
04:02 | ನಾವು ಜೆ-ಮೊಲ್ ಪ್ಯಾನೆಲ್ ಗೆ ಹಿಂದಿರುಗೋಣ. |
04:04 | ಸ್ಕ್ರೀನ್ ನ ಮೇಲಿರುವುದು, '1-butanoic acid' (1- ಬ್ಯೂಟಾನಿಕ್ ಆಸಿಡ್) ನ ಮಾಡೆಲ್ ಆಗಿದೆ. |
04:08 | ನಾವು ಮಾಡೆಲ್ ನಲ್ಲಿಯ ಪರಮಾಣುಗಳನ್ನು ಲೇಬಲ್ ಮಾಡಲು ಕಲಿಯೋಣ. |
04:12 | ನಾವು ಇದನ್ನು ಮೂಲವಸ್ತುಗಳಿಗೆ ಅನುಗುಣವಾದ ಚಿಹ್ನೆ ಮತ್ತು ಸಂಖ್ಯೆಗಳೊಂದಿಗೆ ಮಾಡುತ್ತೇವೆ. |
04:17 | 'Display' ಮೆನ್ಯೂಅನ್ನು ಓಪನ್ ಮಾಡಿ ಮತ್ತು ಸ್ಕ್ರೋಲ್ ಡೌನ್ ಮೆನ್ಯೂನಿಂದ 'Label' ಅನ್ನು ಆಯ್ಕೆಮಾಡಿ. |
04:22 | ಎಲ್ಲ ಪರಮಾಣುಗಳನ್ನು ಆಯಾ ಮೂಲವಸ್ತುಗಳ ಚಿಹ್ನೆಗಳಿಂದ ಲೇಬಲ್ ಮಾಡಲು, 'Symbol' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ. |
04:29 | 'Name' ಎಂಬ ಆಯ್ಕೆಯು ಚಿಹ್ನೆ (symbol) ಹಾಗೂ ಸಂಖ್ಯೆ (number)ಎರಡನ್ನೂ ಕೊಡುವುದು. |
04:34 | 'Number' ಎಂಬ ಆಯ್ಕೆಯು ಪರಮಾಣುಗಳ ಸಂಖ್ಯೀಕರಣವನ್ನು ಮಾತ್ರ ಕೊಡುವುದು. |
04:37 | ನಾವು 'None' ಆಯ್ಕೆಯನ್ನು ಬಳಸಿ ಮಾಡೆಲ್ ನಿಂದ ಲೇಬಲ್ ಗಳನ್ನು ಅಳಿಸಿಹಾಕಬಹುದು. |
04:43 | ಮೇಲೆ ಹೇಳಿದ ಎಲ್ಲ ಮಾರ್ಪಾಟುಗಳನ್ನು ಮಾಡಲು ನಾವು ಪಾಪ್-ಅಪ್ ಮೆನ್ಯೂಅನ್ನು ಸಹ ಬಳಸಬಹುದು. |
04:48 | ಪಾಪ್-ಅಪ್ ಮೆನ್ಯೂಅನ್ನು ಓಪನ್ ಮಾಡಲು ಪ್ಯಾನೆಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು ವಿವಿಧ ಆಯ್ಕೆಗಳನ್ನು ಪರಿಶೀಲಿಸಿ. |
04:55 | 'Tools' ಮೆನ್ಯುಅನ್ನು ಬಳಸಿ, ಒಂದು ಅಣುವಿನಲ್ಲಿಯ ಯಾವುದೇ ಎರಡು ಪರಮಾಣುಗಳ ನಡುವಿನ ದೂರವನ್ನು ಅಳೆಯಬಹುದು. |
05:01 | ನಾವು ಅಳೆಯುವ ಮೊದಲು, 'modelkit' (ಮಾಡೆಲ್ ಕಿಟ್) ಮೆನ್ಯೂಅನ್ನು ಓಪನ್ ಮಾಡಿ 'minimize' ನ ಮೇಲೆ ಕ್ಲಿಕ್ ಮಾಡಿ. |
05:07 | ಈಗ ಎನರ್ಜೀ ಮಿನಿಮೈಜೇಶನ್ ಅನ್ನು ಮಾಡಲಾಗಿದೆ ಮತ್ತು ಮಾಡೆಲ್, ಅತ್ಯಂತ ಸ್ಥಿರವಾದ ರಚನಾಕ್ರಮವನ್ನು (conformation) ಹೊಂದಿದೆ. |
05:14 | ಈಗ, 'Tools' ಮೆನ್ಯೂನ ಮೇಲೆ ಕ್ಲಿಕ್ ಮಾಡಿ, 'Distance Units' ಅನ್ನು ಆಯ್ಕೆಮಾಡಿ. |
05:20 | ಅವಶ್ಯಕತೆಗೆ ಅನುಸಾರವಾಗಿ ಸಬ್-ಮೆನ್ಯೂನಿಂದ ಆಯ್ಕೆಗಳನ್ನು ಆರಿಸಿಕೊಳ್ಳಿ. |
05:25 | ಉದಾಹರಣೆಗೆ, ನಾನು 'Angstrom' ಅನ್ನು ಆಯ್ಕೆಮಾಡುವೆನು. |
05:28 | ಹೀಗಾಗಿ, ನಾನು ಅಳೆಯುವ ಬಾಂಡ್ ಲೆಂಗ್ತ್ ಗಳು, 'Angstrom' ಯೂನಿಟ್ ಗಳಲ್ಲಿ ಇರುತ್ತವೆ. |
05:34 | 'Rotate molecule' ಐಕಾನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ಕರ್ಸರನ್ನು ಪ್ಯಾನೆಲ್ ಗೆ ತನ್ನಿ. |
05:42 | ನಾನು ಪರಮಾಣು 9 ಹಾಗೂ 4 ಇವುಗಳ ನಡುವಿನ ದೂರವನ್ನು ಅಳೆಯುವೆನು. |
05:46 | ಮೊದಲು, ಆರಂಭಿಕ ಪರಮಾಣು ಆಗಿರುವ ಪರಮಾಣು ನಂ. 9 ರ ಮೇಲೆ ಡಬಲ್-ಕ್ಲಿಕ್ ಮಾಡಿ. |
05:52 | ಅಳೆಯಲು, ಕೊನೆಯ ಪರಮಾಣು ಆಗಿರುವ ಪರಮಾಣು ನಂ. 4 ರ ಮೇಲೆ ಡಬಲ್-ಕ್ಲಿಕ್ ಮಾಡಿ. |
05:58 | ಬಾಂಡ್ ಲೆಂಗ್ತ್ (ಬಾಂಡ್ ನ ಉದ್ದಳತೆ) ಅನ್ನು, ಸ್ಕ್ರೀನ್ ನ ಮೇಲೆ ಈಗ ತೋರಿಸಲಾಗಿದೆ. |
06:02 | ನಾವು ಬಾಂಡ್ ನ ಉದ್ದಗಳನ್ನು ಇನ್ನೂ ಸ್ವಲ್ಪ ಅಳೆಯೋಣ. |
06:05 | ನಾವು 'carbon' (ಕಾರ್ಬನ್) ಹಾಗೂ 'oxygen' (ಆಕ್ಸೀಜನ್) ಗಳ ನಡುವಿನ ಡಬಲ್-ಬಾಂಡ್ ನ ಬಾಂಡ್ ಲೆಂಗ್ತ್ ಅನ್ನು ಅಳೆಯೋಣ. |
06:10 | ಆದ್ದರಿಂದ, ಪರಮಾಣು 5 ರ ಮೇಲೆ ಡಬಲ್ ಕ್ಲಿಕ್ ಮಾಡಿ ಮತ್ತು ಕರ್ಸರನ್ನು ಪರಮಾಣು ನಂ. 7 ಕ್ಕೆ ತನ್ನಿ ಹಾಗೂ ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
06:19 | ಹೀಗೆಯೇ, ನಾವು 'ಕಾರ್ಬನ್' ಹಾಗೂ 'ಆಕ್ಸೀಜನ್' ಗಳ ಸಿಂಗಲ್ ಬಾಂಡ್ ದೂರವನ್ನು ಅಳೆಯೋಣ. |
06:25 | ಆದ್ದರಿಂದ, ಪರಮಾಣು 5 ರ ಮೇಲೆ ಡಬಲ್ ಕ್ಲಿಕ್ ಮಾಡಿ ಮತ್ತು ಕರ್ಸರನ್ನು ಪರಮಾಣು ನಂ. 6 ಕ್ಕೆ ತನ್ನಿ ಹಾಗೂ ಅದರ ಮೇಲೆ ಡಬಲ್-ಕ್ಲಿಕ್ ಮಾಡಿ. |
06:34 | ಪ್ಯಾನೆಲ್ ನ ಮೇಲೆ ಎಲ್ಲ ಬಾಂಡ್ ಲೆಂಗ್ತ್ ಗಳನ್ನು ತೋರಿಸಿರುವುದನ್ನು ನಾವು ನೋಡಬಹುದು. |
06:39 | ನಾವು ಮಾಡೆಲ್ ನಲ್ಲಿಯ ಬಾಂಡ್ ಆಂಗಲ್ ಗಳನ್ನು (bond angles) ಹಾಗೂ ಡೈಹೆಡ್ರಲ್ ಆಂಗಲ್ ಗಳನ್ನು (dihedral angles) ಸಹ ಅಳೆಯಬಹುದು |
06:44 | ಉದಾಹರಣೆಗೆ- 9, 4 ಮತ್ತು1, ಈ ಪರಮಾಣುಗಳ ನಡುವಿನ 'ಬಾಂಡ್ ಆಂಗಲ್' (bond angle) ಅನ್ನು ನಾವು ಅಳೆಯುವೆವು. |
06:51 | ಪರಮಾಣು ನಂ. 9 ರ ಮೇಲೆ ಡಬಲ್-ಕ್ಲಿಕ್ ಮಾಡಿ. ಆನಂತರ ಪರಮಾಣು 4 ರ ಮೇಲೆ ಕ್ಲಿಕ್ ಮಾಡಿ. |
06:56 | ಕೋನವನ್ನು ಅಳೆಯಲು, ಪರಮಾಣು ನಂ. 1 ರ ಮೇಲೆ ಡಬಲ್-ಕ್ಲಿಕ್ ಮಾಡಿ. |
07:01 | 'ಬಾಂಡ್ ಆಂಗಲ್' (bond-angle) ಅನ್ನು ಸ್ಕ್ರೀನ್ ಮೇಲೆ ತೋರಿಸಿರುವುದನ್ನು ನಾವು ನೋಡಬಹುದು. |
07:05 | ನಾವು 1, 5 ಮತ್ತು 6 ಈ ಪರಮಾಣುಗಳ ನಡುವಿನ 'ಬಾಂಡ್ ಆಂಗಲ್' (bond-angle) ಅನ್ನು ಅಳೆಯೋಣ. |
07:12 | ಪರಮಾಣು 1 ರ ಮೇಲೆ ಡಬಲ್-ಕ್ಲಿಕ್ ಮಾಡಿ, ಪರಮಾಣು 5 ರ ಮೇಲೆ ಕ್ಲಿಕ್ ಮಾಡಿ ಮತ್ತು ಕೊನೆಯದಾಗಿ ಪರಮಾಣು ನಂ. 6 ರ ಮೇಲೆ ಡಬಲ್ ಕ್ಲಿಕ್ ಮಾಡಿ. |
07:23 | 'torsional' ಅಥವಾ 'dihedral angle' ನ ಅಳತೆಯು 4 ಪರಮಾಣುಗಳನ್ನು ಒಳಗೊಂಡಿದೆ. |
07:29 | ಹೀಗಾಗಿ, ನಾವು 8, 4, 1 ಹಾಗೂ 2 ಈ ಪರಮಾಣುಗಳನ್ನು ಆರಿಸಿಕೊಳ್ಳುವೆವು. |
07:34 | 'dihedral angle' ನ (ಡೈಹೆಡ್ರಲ್ ಆಂಗಲ್) ಅಳೆಯಲು, ಮೊದಲು ಪರಮಾಣು ನಂ. 8 ರ ಮೇಲೆ ಡಬಲ್-ಕ್ಲಿಕ್ ಮಾಡಿ. |
07:39 | ಪರಮಾಣು ನಂ. 4 ರ ಮೇಲೆ ಮತ್ತು ಆನಂತರ ಪರಮಾಣು ನಂ. 1 ರ ಮೇಲೆ ಕ್ಲಿಕ್ ಮಾಡಿ. |
07:43 | ಕೊನೆಯದಾಗಿ, 'dihedral angle' (ಡೈಹೆಡ್ರಲ್ ಆಂಗಲ್) ನ ಅಳತೆಯನ್ನು ಮಾಡಲು, ಪರಮಾಣು ನಂ. 2 ರ ಮೇಲೆ ಡಬಲ್-ಕ್ಲಿಕ್ ಮಾಡಿ. |
07:50 | ಸ್ಕ್ರೀನ್ ನ ಮೇಲೆ ತೋರಿಸಲಾದ 'ಡೈಹೆಡ್ರಲ್ ಆಂಗಲ್' (dihedral angle) ನ ಅಳತೆಯನ್ನು ನಾವು ನೋಡಬಹುದು. |
07:55 | ಮಾಡಲಾದ ಎಲ್ಲ ಅಳತೆಗಳ ವ್ಯಾಲ್ಯೂಗಳನ್ನು ಒಂದು ಕೋಷ್ಟಕದ ರೂಪದಲ್ಲಿ ನೋಡಬಹುದು. |
08:00 | ಟೂಲ್ ಬಾರ್ ನಲ್ಲಿಯ 'Click atom to measure distances' ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ. |
08:06 | ಪ್ಯಾನೆಲ್ ನ ಮೇಲೆ 'Measurements' ಎಂಬ ಡೈಲಾಗ್-ಬಾಕ್ಸ್ ತೆರೆದುಕೊಳ್ಳುವುದು. |
08:10 | ಇದು ಇಲ್ಲಿಯವರೆಗೆ ಮಾಡಿದ ಎಲ್ಲ ಅಳತೆಗಳ ಒಂದು ಲಿಸ್ಟ್ ಅನ್ನು ಹೊಂದಿದೆ. |
08:14 | ಈಗ ನಾವು ಇಮೇಜನ್ನು ಸೇವ್ ಮಾಡಿ ಅಪ್ಪ್ಲಿಕೇಶನ್ ನಿಂದ ಹೊರಗೆ ಬರಬಹುದು. |
08:17 | ಸಂಕ್ಷಿಪ್ತವಾಗಿ, |
08:19 | ಈ ಟ್ಯುಟೋರಿಯಲ್ ನಲ್ಲಿ, ನಾವು: |
08:22 | * 'ಕಾರ್ಬಾಕ್ಸಿಲಿಕ್ ಆಸಿಡ್' (carboxylic acid) ಹಾಗೂ 'ನೈಟ್ರೋಅಲ್ಕೇನ್' (nitroalkane) ಗಳ ಮಾಡೆಲ್ ಗಳನ್ನು ರಚಿಸುವುದು |
08:26 | * ಮೂಲವಸ್ತುವಿನ ಚಿಹ್ನೆ ಮತ್ತು ಸಂಖ್ಯೆಯೊಂದಿಗೆ ಮಾಡೆಲ್ ನಲ್ಲಿಯ ಪರಮಾಣುಗಳನ್ನು ಲೇಬಲ್ ಮಾಡುವುದು |
08:31 | * ಬಾಂಡ್ ಲೆಂಗ್ತ್ ಗಳನ್ನು, ಬಾಂಡ್ ಆಂಗಲ್ ಗಳನ್ನು (bond angles) ಹಾಗೂ 'ಡೈಹೆಡ್ರಲ್ ಆಂಗಲ್' ಗಳನ್ನು (dihedral angles) ಅಳೆಯುವುದು ಇತ್ಯಾದಿಗಳನ್ನು ಕಲಿತಿದ್ದೇವೆ. |
08:36 | ಅಸೈನ್ಮೆಂಟ್ ಗಾಗಿ - |
08:38 | * ಸಿಂಗಲ್, ಡಬಲ್ ಮತ್ತು ಟ್ರಿಪಲ್ ಬಾಂಡ್ ಗಳನ್ನು ಹೊಂದಿರುವ ಅಣುಗಳ ಮಾಡೆಲ್ ಗಳನ್ನು ರಚಿಸಿ. |
08:43 | * 'ಕಾರ್ಬನ್' ಪರಮಾಣುಗಳ ನಡುವಿನ ಬಾಂಡ್ ಲೆಂಗ್ತ್ ಗಳನ್ನು ಅಳೆಯಿರಿ |
08:45 | * ಮತ್ತು ಅವುಗಳನ್ನು ಹೋಲಿಸಿರಿ. |
08:48 | ಈ ಕೆಳಗಿನ ಲಿಂಕ್ ನಿಂದ ವಿಡಿಯೋಅನ್ನು ನೋಡಿ.
http://spoken-tutorial.org/What_is_a_Spoken_Tutorial |
08:51 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ. |
08:54 | ನಿಮ್ಮಲ್ಲಿ ಸರಿಯಾದ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
08:59 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್’: |
09:01 | * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
09:04 | * ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಸರ್ಟಿಫಿಕೇಟ್ ಕೊಡಲಾಗುತ್ತದೆ. |
09:08 | ಹೆಚ್ಚಿನ್ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
09:15 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್’, ‘ಟಾಕ್ ಟು ಎ ಟೀಚರ್ ಪ್ರೋಜೆಕ್ಟ್’ ನ ಭಾಗವಾಗಿದೆ. |
09:19 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದಿಂದ ಬೆಂಬಲಿಸಲ್ಪಟ್ಟಿದೆ. |
09:26 | ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ. |
09:31 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..
ವಂದನೆಗಳು. |