Difference between revisions of "PERL/C2/Data-Structures/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 |'''Time''' |'''Narration''' |- | 00:00 | '''Perl'''ನಲ್ಲಿ '''Data Structures''' ಎನ್ನುವ ಸ್ಪೋಕನ್ ಟ್ಯುಟೋರಿಯಲ...") |
Sandhya.np14 (Talk | contribs) |
||
Line 236: | Line 236: | ||
|- | |- | ||
| 06:10 | | 06:10 | ||
− | | gedit perlHash ಡಾಟ್ pl ಸ್ಪೇಸ್ & (ಆಂಪರ್ಸಂಡ್) ಮತ್ತು Enter ಅನ್ನು ಒತ್ತಿ. |- | + | | gedit perlHash ಡಾಟ್ pl ಸ್ಪೇಸ್ & (ಆಂಪರ್ಸಂಡ್) ಮತ್ತು Enter ಅನ್ನು ಒತ್ತಿ. |
+ | |- | ||
| 06:18 | | 06:18 | ||
| ಇದು, 'gedit' ನಲ್ಲಿ 'perlHash ಡಾಟ್ pl' ಎಂಬ ಫೈಲನ್ನು ಓಪನ್ ಮಾಡುತ್ತದೆ. | | ಇದು, 'gedit' ನಲ್ಲಿ 'perlHash ಡಾಟ್ pl' ಎಂಬ ಫೈಲನ್ನು ಓಪನ್ ಮಾಡುತ್ತದೆ. |
Revision as of 09:12, 4 November 2015
Time | Narration |
00:00 | Perlನಲ್ಲಿ Data Structures ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ, ನಾವು, Perl ನಲ್ಲಿ ಲಭ್ಯವಿರುವ ‘ಡೇಟಾ ಸ್ಟ್ರಕ್ಚರ್’ಗಳ ಬಗ್ಗೆ ಕಲಿಯುವೆವು. |
00:11 | ಇಲ್ಲಿ, ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಬಳಸುತ್ತಿದ್ದೇನೆ. |
00:18 | ನಾನು gedit ‘ಟೆಕ್ಸ್ಟ್ ಎಡಿಟರ್’ಅನ್ನು ಸಹ ಬಳಸುತ್ತಿರುವೆನು. |
00:22 | ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು. |
00:25 | ನೀವು Perl (ಪರ್ಲ್) ನಲ್ಲಿ ವೇರಿಯೆಬಲ್ ಗಳ ಬಗ್ಗೆ ತಿಳಿದಿರುವುದು ಅವಶ್ಯಕ. |
00:29 | ‘ಕಾಮೆಂಟ್ಸ್, ಲೂಪ್ಸ್’ ಮತ್ತು ‘ಕಂಡಿಶನಲ್ ಸ್ಟೇಟ್ಮೆಂಟ್ಸ್’ ಗಳ ಬಗ್ಗೆ ತಿಳಿದಿರುವುದು ಹೆಚ್ಚು ಅನುಕೂಲವಾಗುತ್ತದೆ. |
00:36 | ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು spoken tutorial ವೆಬ್ಸೈಟ್ ಮೇಲೆ ದಯವಿಟ್ಟು ಅನುಸರಿಸಿ. |
00:41 | Perl, 3 (ಮೂರು) ಪ್ರಕಾರದ ‘ಡೇಟಾ ಸ್ಟ್ರಕ್ಚರ್’ಗಳನ್ನು ಹೊಂದಿದೆ: |
00:44 | * ಸ್ಕೇಲಾರ್ (Scalar) |
00:45 | * ಆರೇ (Array) |
00:46 | * ಹ್ಯಾಶ್ (Hash), ಇದನ್ನು ‘ಅಸೋಸಿಯೇಟಿವ್ ಆರೇ’ (Associative Array) ಎಂದು ಸಹ ಕರೆಯಲಾಗುತ್ತದೆ. |
00:50 | ಸ್ಕೇಲಾರ್ (Scalar): ಈ ಪ್ರಕಾರದ ‘ಡೇಟಾ ಸ್ಟ್ರಕ್ಚರ್’, ಯಾವುದೇ ಡೇಟಾ ಟೈಪ್ ನ ವ್ಯಾಲ್ಯೂ ಅನ್ನು ಇಟ್ಟುಕೊಳ್ಳುತ್ತದೆ. |
00:56 | ಡೇಟಾ ಟೈಪ್, ಸ್ಟ್ರಿಂಗ್, ನಂಬರ್, ಡಬಲ್ ಇತ್ಯಾದಿ ಆಗಿರಬಹುದು. |
01:01 | ಇದು ಯಾವುದೇ ಒಂದು ‘ಆರೇ’ಯ ಅಥವಾ ಹ್ಯಾಶ್ ನ ರೆಫರೆನ್ಸ್ ಅನ್ನು ಸಹ ಇಟ್ಟುಕೊಳ್ಳಬಹುದು. |
01:06 | ಸೂಚನೆ: Perl ನಲ್ಲಿ Reference ಎಂಬುದನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗುವುದು. |
01:11 | ಸ್ಕೇಲಾರ್ ಟೈಪ್ ನ ‘ಡೇಟಾ ಸ್ಟ್ರಕ್ಚರ್’, ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿದಷ್ಟೇ ಸರಳವಾಗಿದೆ. |
01:16 | $count = 12 ಸೆಮಿಕೋಲನ್. |
01:20 | $string = ಸಿಂಗಲ್ ಕೋಟ್ಸ್ ನಲ್ಲಿ 'I am scalar of type string' ಸೆಮಿಕೋಲನ್. |
01:26 | ನಾವು ಸ್ಕೇಲಾರ್ ನ ಮೇಲೆ ಈ ಕೆಳಗಿನ ಕ್ರಿಯೆಗಳನ್ನು (operations) ಮಾಡಬಹುದು. |
01:30 | * ಇದಕ್ಕೆ ಒಂದು ವ್ಯಾಲ್ಯೂ ಅನ್ನು ಅಸೈನ್ ಮಾಡುವುದು. |
01:32 | * ಒಂದು ಸ್ಕೇಲಾರ್ ಗೆ ಇನ್ನೊಂದು ಸ್ಕೇಲಾರ್ ಅನ್ನು ಅಸೈನ್ ಮಾಡುವುದು. |
01:35 | * ‘ನಂಬರ್ ಟೈಪ್’ನ ಸ್ಕೇಲಾರ್ ಗಳ ಮೇಲೆ ಸಂಕಲನ, ವ್ಯವಕಲನದಂತಹ ಅಂಕಗಣಿತದ ಕ್ರಿಯೆಗಳನ್ನು ಮಾಡುವುದು. |
01:41 | * ‘ಸ್ಟ್ರಿಂಗ್ ಸ್ಕೇಲಾರ್’ನ ಮೇಲೆ concatenation (ಕೊಂಕ್ಯಾಟಿನೇಶನ್), substr (ಸಬ್ s-t-r) ಗಳಂತಹ ‘ಸ್ಟ್ರಿಂಗ್ ಆಪರೇಶನ್’ಗಳನ್ನು ಮಾಡುವುದು. |
01:48 | ಈಗ ನಾವು ‘ಸ್ಕೇಲಾರ್ ಡೇಟಾ ಸ್ಟ್ರಕ್ಚರ್’ನ ಒಂದು ಉದಾಹರಣೆಯನ್ನು ನೋಡೋಣ. |
01:52 | ‘ಟರ್ಮಿನಲ್’ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'gedit scalars ಡಾಟ್ pl ಸ್ಪೇಸ್ &' ಮತ್ತು Enter ಅನ್ನು ಒತ್ತಿ. |
02:01 | ಇದು, 'gedit' ನಲ್ಲಿ, 'scalars dot pl' ಎಂಬ ಫೈಲನ್ನು ಓಪನ್ ಮಾಡುವುದು. |
02:05 | ಸ್ಕ್ರೀನ್ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
02:09 | ಇದು ಡಿಕ್ಲೆರೇಶನ್ ಮತ್ತು ಸ್ಕೇಲರ್ ಗೆ ಅಸೈನ್ಮೆಂಟ್ ಆಗಿದೆ. |
02:13 | ಇವುಗಳು, ‘ನಂಬರ್ ಟೈಪ್’ ಸ್ಕೇಲಾರ್ ನ ಮೇಲೆ ಮಾಡಬಹುದಾದ ಅಂಕಗಣಿತದ ಕೆಲವು ಕ್ರಿಯೆಗಳಾಗಿವೆ. |
02:19 | ಇವುಗಳು, ‘ಸ್ಟ್ರಿಂಗ್ ಟೈಪ್’ ಸ್ಕೇಲಾರ್ ನ ಮೇಲೆ ಮಾಡಬಹುದಾದ ‘ಸ್ಟ್ರಿಂಗ್ ಆಪರೇಶನ್’ಗಳಾಗಿವೆ. |
02:25 | 'substr', ಸ್ಟ್ರಿಂಗ್ ನ ಒಂದು ಭಾಗವನ್ನು ಔಟ್ಪುಟ್ ನಂತೆ ಕೊಡುವ PERL ಫಂಕ್ಷನ್ ಆಗಿದೆ. |
02:30 | ಇಲ್ಲಿ, ‘ಇಂಡೆಕ್ಸ್ 0’ (ಜೀರೊ) ಸ್ಟ್ರಿಂಗ್ ನ ಆರಂಭವನ್ನು ಎಂದರೆ, ನಾವು ಎಲ್ಲಿಂದ ಸ್ಟ್ರಿಂಗ್ ಅನ್ನು ಆಯ್ಕೆಮಾಡಬೇಕು ಎಂಬುದನ್ನು ಸೂಚಿಸುತ್ತದೆ. |
02:39 | ಮತ್ತು11, ನಮಗೆ ಎಲ್ಲಿಯವರೆಗೆ ಸ್ಟ್ರಿಂಗ್, ಔಟ್ಪುಟ್ ನಲ್ಲಿ ಇರಬೇಕಾಗಿದೆ ಎಂಬ ಆಫ್ಸೆಟ್ ಅನ್ನು ಸೂಚಿಸುತ್ತದೆ. |
02:46 | ಫೈಲನ್ನು ಸೇವ್ ಮಾಡಲು 'Ctrl + s' ಒತ್ತಿ. |
02:50 | ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು Perl ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ: |
02:55 | perl scalars ಡಾಟ್ pl ಮತ್ತು Enter ಅನ್ನು ಒತ್ತಿ. |
03:00 | ‘ಟರ್ಮಿನಲ್’ನ ಮೇಲೆ ತೋರಿಸಲಾದ ಔಟ್ಪುಟ್ ಅನ್ನು ಹೈಲೈಟ್ ಮಾಡಿದೆ. |
03:05 | ಈಗ, ನಾವು Perl ನಲ್ಲಿ ‘ಆರೇ’ (array) ಎಂಬ ‘ಡೇಟಾ ಸ್ಟ್ರಕ್ಚರ್’ಅನ್ನು ನೋಡೋಣ. |
03:09 | ‘ಆರೇ’ (array): ಇದು ಎಲಿಮೆಂಟ್ ಗಳ ಒಂದು ಲಿಸ್ಟ್ ಆಗಿದೆ. |
03:12 | ಎಲಿಮೆಂಟ್ ಗಳು ಸ್ಟ್ರಿಂಗ್, ನಂಬರ್ ಇತ್ಯಾದಿ ಆಗಿರಬಹುದು. |
03:16 | ಇದು ಒಂದು ಇಂಡೆಕ್ಸ್ ಅನ್ನು ಹೊಂದಿದೆ. ‘ಆರೇ’ಯ ಮೇಲೆ ವಿವಿಧ ಆಪರೇಶನ್ ಗಳನ್ನು ಮಾಡಲು ಇದನ್ನು ಬಳಸಲಾಗುವುದು. |
03:22 | ಇಂಡೆಕ್ಸ್, ಸೊನ್ನೆಯಿಂದ ಆರಂಭವಾಗುತ್ತದೆ. |
03:25 | ಇತರ ಪ್ರೊಗ್ರಾಮಿಂಗ್ ಭಾಷೆಗಳಂತೆ, Perl ನಲ್ಲಿ, ಆರೇಯನ್ನು ಅಥವಾ ಅದರ ಸೈಜ್ ಅನ್ನು ಬಳಸುವ ಮುನ್ನ ಡಿಕ್ಲೇರ್ ಮಾಡಬೇಕಾದ ಅವಶ್ಯಕತೆಯಿಲ್ಲ. |
03:33 | ‘Perl ಆರೇ’, ಅದಕ್ಕೆ ಸೇರಿಸಿದ ಅಥವಾ ಅದರಿಂದ ತೆಗೆದುಹಾಕಿದ ಎಲಿಮೆಂಟ್ ಗಳಿಗೆ ಅನುಸಾರವಾಗಿ ಹಿಗ್ಗುತ್ತದೆ ಅಥವಾ ಕುಗ್ಗುತ್ತದೆ. |
03:39 | ‘ಆರೇ’ಯನ್ನು ಬರೆಯಲು ಸಿಂಟ್ಯಾಕ್ಸ್ ಹೀಗಿದೆ: |
03:41 | ಆಟ್ ದ ರೇಟ್ variableName ಸ್ಪೇಸ್ ಇಕ್ವಲ್ ಟು ಸ್ಪೇಸ್ ಓಪನ್ ಬ್ರಾಕೆಟ್, ಕಾಮಾದಿಂದ ಬೇರ್ಪಡಿಸಿದ ಎಲಿಮೆಂಟ್ ಗಳ ಲಿಸ್ಟ್, ಕ್ಲೋಸ್ ಬ್ರಾಕೆಟ್ ಸೆಮಿಕೋಲನ್. |
03:54 | ಈಗ ನಾವು, ‘ಆರೇ’ (array) ‘ಡೇಟಾ ಸ್ಟ್ರಕ್ಚರ್’ನ ಒಂದು ಉದಾಹರಣೆಯನ್ನು ನೋಡೋಣ. |
03:57 | ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: gedit perlArray ಡಾಟ್ pl ಸ್ಪೇಸ್ & (ಆಂಪರ್ಸಂಡ್) ಮತ್ತು Enter ಅನ್ನು ಒತ್ತಿ. |
04:08 | ಇದು, gedit ನಲ್ಲಿ 'perlArray ಡಾಟ್ pl' ಎಂಬ ಫೈಲನ್ನು ಓಪನ್ ಮಾಡುವುದು. |
04:12 | ಸ್ಕ್ರೀನ್ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
04:18 | ಇದು ‘ನಂಬರ್ ಟೈಪ್’ನ ಎಲಿಮೆಂಟ್ ಗಳನ್ನು ಹೊಂದಿರುವ ‘ನಂಬರ್ ಆರೇ’ ಆಗಿದೆ. |
04:23 | ಇದು, ಸ್ಟ್ರಿಂಗ್ ಟೈಪ್ ನ ಎಲಿಮೆಂಟ್ ಗಳನ್ನು ಹೊಂದಿರುವ ‘ಸ್ಟ್ರಿಂಗ್ ಆರೇ’ ಆಗಿದೆ. |
04:29 | ಈ ಆರೇ, ನಂಬರ್ ಮತ್ತು ಸ್ಟ್ರಿಂಗ್ ಎರಡೂ ಟೈಪ್ ನ ಎಲಿಮೆಂಟ್ ಗಳನ್ನು ಹೊಂದಿದೆ. |
04:34 | ಈ ಉದಾಹರಣೆಯು Perl ನ ವಿವಿಧ ಪ್ರಕಾರದ ಆರೇಗಳನ್ನು ತೋರಿಸುತ್ತದೆ. |
04:39 | Perl ನಲ್ಲಿ, ‘ಆರೇ’ಯನ್ನು ಈ ರೀತಿಯಲ್ಲಿ ನಾವು ಪ್ರಿಂಟ್ ಮಾಡಬಹುದು. |
04:43 | ಫೈಲನ್ನು ಸೇವ್ ಮಾಡಲು 'Ctrl + S' ಒತ್ತಿ. |
04:47 | ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು Perl ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ: |
04:52 | 'perl perlArray ಡಾಟ್ pl' ಮತ್ತು Enter ಅನ್ನು ಒತ್ತಿ. |
04:59 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗಿದೆ. |
05:04 | ಈಗ ನಾವು, Perl ನಲ್ಲಿ ‘ಹ್ಯಾಶ್’ (Hash) ಎಂಬ ‘ಡೇಟಾ ಸ್ಟ್ರಕ್ಚರ್’ಅನ್ನು ನೋಡೋಣ. |
05:08 | ‘ಹ್ಯಾಶ್’ (Hash), ಪರ್ಯಾಯವಾಗಿ ‘ಅಸೋಸಿಯೇಟಿವ್ ಆರೇ’ (Associative Array) ಎಂದು ಕರೆಯಲ್ಪಡುತ್ತದೆ. |
05:12 | ಇದು ‘ಕೀ-ವ್ಯಾಲ್ಯೂ’ ಜೋಡಿ ‘ಡೇಟಾ ಸ್ಟ್ರಕ್ಚರ್’ ಆಗಿದೆ. |
05:15 | ‘ಹ್ಯಾಶ್’ನಲ್ಲಿ ‘ಕೀ’ ಏಕಮಾತ್ರ (unique) ಆಗಿದೆ. |
05:18 | ಒಂದುವೇಳೆ, ಒಂದೇ ‘ಕೀ’ಯನ್ನು ಮತ್ತೊಮ್ಮೆ ಸೇರಿಸಿದರೆ ಆಗ ಆ ‘ಕೀ’ಯ ವ್ಯಾಲ್ಯೂ, ಇತ್ತೀಚೆಗೆ ಅಸೈನ್ ಮಾಡಿದ ‘ಕೀ’ಯ ವ್ಯಾಲ್ಯೂದಿಂದ ಅತಿಕ್ರಮಿಸಲ್ಪಡುತ್ತದೆ. |
05:28 | ‘ವ್ಯಾಲ್ಯೂ’, ನಕಲು (duplicate) ಆಗಿರಬಹುದು. |
05:30 | ಇದು ಸಹ ಯಾವುದೇ ಡೇಟಾ ಟೈಪ್ ನ ‘ವ್ಯಾಲ್ಯೂ’ಅನ್ನು ಹೊಂದಬಹುದು. |
05:34 | ‘ಹ್ಯಾಶ್’ನ ಸಿಂಟ್ಯಾಕ್ಸ್ ಹೀಗಿದೆ: |
05:36 | ಪರ್ಸೆಂಟೇಜ್ ವೇರಿಯೆಬಲ್-ನೇಮ್ ಸ್ಪೇಸ್ ಇಕ್ವಲ್ ಟು ಸ್ಪೇಸ್ ಓಪನ್ ಬ್ರಾಕೆಟ್ |
05:41 | Enter ಅನ್ನು ಒತ್ತಿ. |
05:42 | ಸಿಂಗಲ್ ಕೋಟ್ ಕೀ-ನೇಮ್ ಸಿಂಗಲ್ ಕೋಟ್ ಸ್ಪೇಸ್ ಇಕ್ವಲ್ ಟು ಗ್ರೇಟರ್ ದ್ಯಾನ್ ಸೈನ್ ಸ್ಪೇಸ್ ವ್ಯಾಲ್ಯೂ ಕಾಮಾ |
05:50 | Enter ಅನ್ನು ಒತ್ತಿ. |
05:52 | ಸಿಂಗಲ್ ಕೋಟ್ ಕೀ-ನೇಮ್ ಸಿಂಗಲ್ ಕೋಟ್ ಸ್ಪೇಸ್ ಇಕ್ವಲ್ ಟು ಗ್ರೇಟರ್ ದ್ಯಾನ್ ಸೈನ್ ಸ್ಪೇಸ್ ವ್ಯಾಲ್ಯೂ |
05:58 | Enter ಅನ್ನು ಒತ್ತಿ. |
06:00 | ಕ್ಲೋಸ್ ಬ್ರಾಕೆಟ್ ಸೆಮಿಕೋಲನ್. |
06:03 | ಈಗ ನಾವು ‘ಹ್ಯಾಶ್’ (hash) ‘ಡೇಟಾ ಸ್ಟ್ರಕ್ಚರ್’ನ ಒಂದು ಉದಾಹರಣೆಯನ್ನು ನೋಡೋಣ. |
06:07 | ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
06:10 | gedit perlHash ಡಾಟ್ pl ಸ್ಪೇಸ್ & (ಆಂಪರ್ಸಂಡ್) ಮತ್ತು Enter ಅನ್ನು ಒತ್ತಿ. |
06:18 | ಇದು, 'gedit' ನಲ್ಲಿ 'perlHash ಡಾಟ್ pl' ಎಂಬ ಫೈಲನ್ನು ಓಪನ್ ಮಾಡುತ್ತದೆ. |
06:22 | ಸ್ಕ್ರೀನ್ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ. |
06:27 | ಈ ಹ್ಯಾಶ್, ಒಂದು Subject ನಲ್ಲಿ ಪಡೆದ Marks ಅನ್ನು ಸೂಚಿಸುತ್ತದೆ. |
06:31 | ಈ ಉದಾಹರಣೆಯು ಹ್ಯಾಶ್ ನ ಬಳಕೆಯನ್ನು ತೋರಿಸುತ್ತದೆ. |
06:35 | ಹ್ಯಾಶ್ ಅನ್ನು ಹೇಗೆ ಪ್ರಿಂಟ್ ಮಾಡುವುದೆಂದು ಈಗ ನಾವು ನೋಡೋಣ. |
06:38 | ಸಧ್ಯಕ್ಕೆ, ನಾನು ಹ್ಯಾಶ್ ಅನ್ನು ಪ್ರಿಂಟ್ ಮಾಡಿದ ರೀತಿಯನ್ನು ಮಾತ್ರ ನೋಡಿ. |
06:42 | ವಿಸ್ತಾರವಾದ ವಿವರಣೆಯನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ಕೊಡಲಾಗುವುದು. |
06:47 | ಫೈಲನ್ನು ಸೇವ್ ಮಾಡಲು 'Ctrl + S' ಒತ್ತಿ. |
06:50 | ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು Perl ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ: |
06:55 | 'perl perlHash ಡಾಟ್ pl' ಮತ್ತು Enter ಅನ್ನು ಒತ್ತಿ. |
07:01 | ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗಿದೆ. |
07:05 | ಸಂಕ್ಷಿಪ್ತವಾಗಿ, |
07:06 | ಈ ಟ್ಯುಟೋರಿಯಲ್ ನಲ್ಲಿ ನಾವು, Perl ನಲ್ಲಿ ಸ್ಯಾಂಪಲ್ ಪ್ರೊಗ್ರಾಂಗಳನ್ನು ಬಳಸಿ |
07:09 | * ಸ್ಕೇಲಾರ್ (scalar) |
07:10 | * ಆರೇ (Array) ಮತ್ತು |
07:11 | * ಹ್ಯಾಶ್ (Hash) ‘ಡೇಟಾ ಸ್ಟ್ರಕ್ಚರ್’ ಗಳನ್ನು ಕಲಿತಿದ್ದೇವೆ. |
07:15 | ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
07:17 | ಸ್ಕೇಲಾರ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ. |
07:19 | ಅದಕ್ಕೆ float ಟೈಪ್ ನ ವ್ಯಾಲ್ಯೂ ಅನ್ನು ಅಸೈನ್ ಮಾಡಿ. ನಂತರ ಅದನ್ನು ಪ್ರಿಂಟ್ ಮಾಡಿ. |
07:23 | 'Red', 'Yellow' ಮತ್ತು 'Green' ಕಲರ್ ಗಳ ಒಂದು ‘ಆರೇ’ಯನ್ನು ಡಿಕ್ಲೇರ್ ಮಾಡಿ ಮತ್ತು ಪ್ರಿಂಟ್ ಮಾಡಿ. |
07:28 | Employee Name ಮತ್ತು ಅವರ department ನ ‘ಹ್ಯಾಶ್’ ಒಂದನ್ನು ಡಿಕ್ಲೇರ್ ಮಾಡಿ ಮತ್ತು ಪ್ರಿಂಟ್ ಮಾಡಿ. |
07:33 | Hint: 'Employee' =>(ಇಕ್ವಲ್ ಟು ಗ್ರೇಟರ್ ದ್ಯಾನ್ ಸೈನ್) 'John' ಕಾಮಾ |
07:38 | 'Department' =>( ಇಕ್ವಲ್ ಟು ಗ್ರೇಟರ್ ದ್ಯಾನ್ ಸೈನ್) 'Engineering'. |
07:42 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
07:46 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
07:49 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:53 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:59 | *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:03 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
contact@spoken-tutorial.org |
08:10 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
08:15 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
08:22 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
spoken hyphen tutorial dot org slash NMEICT hyphen Intro. |
08:33 | ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. |
08:35 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . |
08:38 | ವಂದನೆಗಳು. |