Difference between revisions of "C-and-Cpp/C2/Increment-And-Decrement-Operators/Kannada"
From Script | Spoken-Tutorial
(Created page with "{| border=1 || Time || Narration |- | 00:01 | ಸಿ ಮತ್ತು ಸಿ ಪ್ಲಸ್ ಪ್ಲಸ್ (C++) ನಲ್ಲಿ ಇಂಕ್ರಿಮೆಂಟ್ ಮತ್...") |
|||
Line 13: | Line 13: | ||
|- | |- | ||
| 00:12 | | 00:12 | ||
− | |++(ಪ್ಲಸ್ ಪ್ಲಸ್), ಉದಾಹರಣೆಗೆ a++ (ಎ ಪ್ಲಸ್ ಪ್ಲಸ್), ಇದು ಪೋಸ್ಟ್ ಫಿಕ್ಸ್ ಇಂಕ್ರಿಮೆಂಟ್ ಆಪರೇಟರ್ | + | | ++(ಪ್ಲಸ್ ಪ್ಲಸ್), ಉದಾಹರಣೆಗೆ a++ (ಎ ಪ್ಲಸ್ ಪ್ಲಸ್), ಇದು ಪೋಸ್ಟ್ ಫಿಕ್ಸ್ ಇಂಕ್ರಿಮೆಂಟ್ ಆಪರೇಟರ್ |
|- | |- | ||
| 00:18 | | 00:18 |
Revision as of 17:04, 17 October 2014
Time | Narration |
00:01 | ಸಿ ಮತ್ತು ಸಿ ಪ್ಲಸ್ ಪ್ಲಸ್ (C++) ನಲ್ಲಿ ಇಂಕ್ರಿಮೆಂಟ್ ಮತ್ತು ಡಿಕ್ರಿಮೆಂಟ್ ಆಪರೇಟರ್ ಗಳು ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವ ಅಂಶಗಳು : |
00:10 | ಇಂಕ್ರಿಮೆಂಟ್ ಮತ್ತು ಡಿಕ್ರಿಮೆಂಟ್ ಆಪರೇಟರ್ ಗಳು, |
00:12 | ++(ಪ್ಲಸ್ ಪ್ಲಸ್), ಉದಾಹರಣೆಗೆ a++ (ಎ ಪ್ಲಸ್ ಪ್ಲಸ್), ಇದು ಪೋಸ್ಟ್ ಫಿಕ್ಸ್ ಇಂಕ್ರಿಮೆಂಟ್ ಆಪರೇಟರ್ |
00:18 | ++a , ಇದು ಪ್ರಿಫಿಕ್ಸ್ ಇಂಕ್ರಿಮೆಂಟ್ ಆಪರೇಟರ್ |
00:22 | (ಮೈನಸ್ ಮೈನಸ್), a- - ಇದು ಪೋಸ್ಟ್ ಫಿಕ್ಸ್ ಡಿಕ್ರಿಮೆಂಟ್ ಆಪರೇಟರ್ |
00:27 | - -a ಇದು ಪ್ರಿಫಿಕ್ಸ್ ಡಿಕ್ರಿಮೆಂಟ್ ಆಪರೇಟರ್. |
00:31 | ನಾವು ಟೈಪ್ ಕಾಸ್ಟಿಂಗ್ ನ ಬಗ್ಗೆಯೂ ತಿಳಿಯೋಣ. |
00:35 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ನ11.10 ನೇಆವೃತ್ತಿ ಮತ್ತು gccಮತ್ತುg++ಕಂಪೈಲರ್ನ4.6.1 ನೇಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:48 | ++ ಆಪರೇಟರ್, ಆಪರಂಡ್(operand) ನ ಮೌಲ್ಯಕ್ಕೆ ಒಂದನ್ನು ಸೇರಿಸುತ್ತದೆ. |
00:54 | a++ ಮತ್ತು ++a ಎಂದರೆ, a ಈಸ್ ಏಕ್ವಲ್ ಟು a ಪ್ಲಸ್ ಒಂದು ಎಂದರ್ಥ. |
01:00 | |
01:06 | a- - ಮತ್ತು - -a ಎಂದರೆ, a ಈಸ್ ಏಕ್ವಲ್ ಟು a ಮೈನಸ್ ಒಂದು ಎಂದರ್ಥ. |
01:13 | ನಾನೀಗ, ಇಂಕ್ರಿಮೆಂಟ್ ಮತ್ತು ಡಿಕ್ರಿಮೆಂಟ್ ಆಪರೇಟರ್ ಗಳನ್ನು ಉಪಯೋಗಿಸುವ ಬಗೆಯನ್ನು c ಪ್ರೊಗ್ರಾಮ್ ನ ಸಹಾಯದಿಂದ ತೋರಿಸುತ್ತೇನೆ. |
01:19 | ನಾನೀಗಾಗಲೇ ಪ್ರೊಗ್ರಾಮ್ ಅನ್ನು ಬರೆದಿದ್ದೇನೆ, ಹಾಗಾಗಿ ಕೋಡ್ ಅನ್ನು ವಿವರಿಸುತ್ತೇನೆ. |
01:25 | ಇಂಕ್ರಿಮೆಂಟ್ ಮತ್ತು ಡಿಕ್ರಿಮೆಂಟ್ ಆಪರೇಟರ್ ಗಳನ್ನು c ಯಲ್ಲಿ ಉಪಯೋಗಿಸಲು ಇಲ್ಲಿ ಕೋಡ್ ಇದೆ. |
01:30 | ಇಲ್ಲಿ, a ಎಂದು ಒಂದು ಇಂಟಿಜರ್ ವೇರಿಯೇಬಲ್ ಅನ್ನು ತೆಗೆದುಕೊಂಡಿದ್ದೇನೆ ಮತ್ತು ಇದರ ಮೌಲ್ಯ ಒಂದು. |
01:35 | ಈ ರೀತಿಯಾಗಿ, a ನ ಮೌಲ್ಯದಲ್ಲಾಗುವ ಬದಲಾವಣೆಗಳನ್ನು ನಾವು ಗಮನಿಸಬಹುದು. |
01:39 | ಈ ರೀತಿ ಮಾಡುವುದರಿಂದ, ಆಪರೇಟರ್ ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಸುಲಭವಾಗಿ ತಿಳಿಯಬಹುದು. |
01:47 | ಪೋಸ್ಟ್ ಫಿಕ್ಸ್ ಇಂಕ್ರಿಮೆಂಟ್ ಆಪರೇಟರ್ ಹೇಗೆ ಕೆಲಸ ಮಾಡುತ್ತದೆ ಎಂದು ನೋಡೋಣ. |
01:51 | ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ ನ ಔಟ್ ಪುಟ್ ಒಂದು. |
01:55 | ಮೌಲ್ಯ ಬದಲಾಗುವುದಿಲ್ಲ. |
01:57 | ಏಕೆಂದರೆ, ಆಪರಂಡ್ ನ ಮೌಲ್ಯವನ್ನು ಪ್ರಿಂಟ್ ಮಾಡಿದ ನಂತರ ಪೋಸ್ಟ್ ಫಿಕ್ಸ್ ಆಪರೇಶನ್ ಆಗುತ್ತದೆ. |
02:04 | a++ ನ ಮೇಲೆ ಯಾವುದಾದರೂ ಆಪರೇಶನ್ ಮಾಡುವುದಿದ್ದರೆ, ಅದು ಸದ್ಯದ a ಯ ಮೌಲ್ಯದ ಮೇಲೆ ಆಗುತ್ತದೆ. |
02:10 | ನಂತರ, a ಯ ಮೌಲ್ಯ ಹೆಚ್ಚಾಗುತ್ತದೆ. |
02:17 | ಈಗ, ಇಲ್ಲಿ ನಾವು a ಯ ಮೌಲ್ಯವನ್ನು ನೋಡಿದರೆ, ಅದು ಒಂದು ಜಾಸ್ತಿಯಾಗಿರುವುದನ್ನು ಗಮನಿಸಬಹುದು. |
02:27 | ವ್ಯತ್ಯಾಸವನ್ನು ಗುರುತಿಸಲು, ನಾವು a ಯ ಮೌಲ್ಯವನ್ನು ಪುನಃ ಒಂದು ಎಂದು ಇನಿಶಿಯಲೈಸ್ ಮಾಡುತ್ತೇವೆ. |
02:35 | ನಾವೀಗ ಪ್ರಿಫಿಕ್ಸ್ ಇಂಕ್ರಿಮೆಂಟ್ ಆಪರೇಟರ್ ನೋಡುತ್ತೇವೆ, |
02:38 | ಈ ಪ್ರಿಂಟ್ ಎಫ್ ಸ್ಟೇಟ್ಮೆಂಟ್ ಎರಡು ಎಂದು ಸ್ಕ್ರೀನ್ ನ ಮೇಲೆ ಪ್ರಿಂಟ್ ಮಾಡುತ್ತದೆ. |
02:42 | ಏಕೆಂದರೆ, ಆಪರಂಡ್ ಇವ್ಯಾಲ್ಯುಯೇಟ್ ಆಗುವ ಮೊದಲು, ಪ್ರಿಫಿಕ್ಸ್ ಆಪರೇಶನ್ ಆಗುತ್ತದೆ. |
02:49 | ಹಾಗಾಗಿ, a ಯ ಮೌಲ್ಯವನ್ನು ಒಂದರಿಂದ ಹೆಚ್ಚಿಸಿ, ನಂತರ ಪ್ರಿಂಟ್ ಮಾಡುತ್ತದೆ. |
02:58 | a ಯ ಮೌಲ್ಯದಲ್ಲಿ ಬದಲಾವಣೆ ಇದೆಯೇ ಎಂದು ತಿಳಿಯಲು, ಪುನಃ a ಯನ್ನು ಪ್ರಿಂಟ್ ಮಾಡುತ್ತೇವೆ. |
03:03 | ಈಗ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
03:07 | ಕೆಳಗಿನ ಸಾಲುಗಳನ್ನು ನಾನು ಕಮೆಂಟ್ ಮಾಡುತ್ತೇನೆ. ಸ್ಲ್ಯಾಶ್ ಆಸ್ಟರಿಕ್ಸ್, ಆಸ್ಟರಿಕ್ಸ್ ಸ್ಲ್ಯಾಶ್ ಎಂದು ಟೈಪ್ ಮಾಡಿ. |
03:19 | Save ಅನ್ನುಒತ್ತಿ. |
03:22 | ನಾನು ನನ್ನ ಫೈಲ್ ಅನ್ನು ಐ ಎನ್ ಸಿ ಆರ್ ಡಿ ಇ ಸಿ ಆರ್ ಡಾಟ್ ಸಿ ಎಂದು ಟೈಪ್ ಮಾಡಿದ್ದೇನೆ. |
03:29 | ನಿಮ್ಮ ಕೀಬೋರ್ಡ ನಲ್ಲಿCtrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
03:35 | ಕಂಪೈಲ್ ಮಾಡಲು, ಹೀಗೆ ಟರ್ಮಿನಲ್ ನಲ್ಲಿ ಟೈಪ್ ಮಾಡಿ. Gcc ಸ್ಪೇಸ್ ಐ ಎನ್ ಸಿ ಆರ್ ಡಿ ಇ ಸಿ ಆರ್ ಡಾಟ್ ಸಿ ಸ್ಪೇಸ್ ಮೈನಸ್ ಒ ಸ್ಪೇಸ್ ಐ ಎನ್ ಸಿ ಆರ್. |
03:51 | ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಐ ಎನ್ ಸಿ ಆರ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
03:59 | ಸ್ಕ್ರೀನ್ ನ ಮೇಲೆ ಔಟ್ ಪುಟ್ ತೋರಿಸುತ್ತದೆ. |
04:01 | ಇದು, a++ ಅನ್ನು ಪ್ರಿಂಟ್ ಮಾಡಿದಾಗ ಬರುವ ಔಟ್ ಪುಟ್ . |
04:06 | ಇದು, ++a ಅನ್ನು ಪ್ರಿಂಟ್ ಮಾಡಿದಾಗ ಬರುವ ಔಟ್ ಪುಟ್ . |
04:09 | ಔಟ್ ಪುಟ್, ನಾವು ಮೊದಲೇ ಚರ್ಚಿಸಿದಂತಿರುವುದನ್ನು ನೋಡಬಹುದು. |
04:13 | ಈಗ ಉಳಿದ ಪ್ರೊಗ್ರಾಮ್ ಗೆ ಹಿಂದಿರುಗೋಣ. |
04:16 | ನಾನೀಗ ಪೋಸ್ಟ್ ಫಿಕ್ಸ್ ಮತ್ತು ಪ್ರಿ ಫಿಕ್ಸ್ ಡಿಕ್ರೀಮೆಂಟ್ ಆಪರೇಟರ್ ಗಳನ್ನು ವಿವರಿಸುತ್ತೇನೆ. |
04:21 | ಇಲ್ಲಿ ಮತ್ತು ಇಲ್ಲಿಂದ ಮಲ್ಟಿಲೈನ್ ಕಮೆಂಟ್ ಅನ್ನು ತೆಗೆಯಿರಿ. |
04:29 | ಪುನಃ ನಾವು a ಗೆ ಒಂದು ಎಂದು ಮೌಲ್ಯವನ್ನು ಕೊಡುತ್ತೇವೆ. |
04:35 | ಈ printf ಸ್ಟೇಟ್ಮೆಂಟ್, ಮೊದಲೇ ವಿವರಿಸಿದಂತೆ, ಒಂದು ಎಂದು ಔಟ್ ಪುಟ್ ತೋರಿಸುತ್ತದೆ. |
04:40 | ಇದು ಪೋಸ್ಟ್ ಫಿಕ್ಸ್ ಆಪರೇಶನ್ ಆಗಿರುವುದರಿಂದ, a- - ಇವ್ಯಾಲ್ಯುಯೇಟ್ ಆದ ನಂತರ, a ಯ ಮೌಲ್ಯವು ಒಂದು ಕಡಿಮೆಯಾಗುತ್ತದೆ |
04:47 | ಮುಂದಿನ ಸ್ಟೇಟ್ಮೆಂಟ್, a ಯ ಮೌಲ್ಯವನ್ನು ಸೊನ್ನೆ ಎಂದು ಪ್ರಿಂಟ್ ಮಾಡುತ್ತದೆ. |
04:51 | ಈಗ, a ನ ಮೌಲ್ಯವು ಒಂದು ಕಡಿಮೆ ಆಗಿದೆ. |
04:54 | ಈಗ ಪ್ರಿಫಿಕ್ಸ್ ಡಿಕ್ರಿಮೆಂಟ್ ಆಪರೇಟರ್ ಅನ್ನು ಗಮನಿಸೋಣ. |
04:58 | ಇದು ಪ್ರಿಫಿಕ್ಸ್ ಆಪರೇಶನ್ ಆಗಿರುವುದರಿಂದ ,ಈ printf ಸ್ಟೇಟ್ಮೆಂಟ್ ನ ಔಟ್ ಪುಟ್ ಸೊನ್ನೆ ಆಗಿರುತ್ತದೆ. |
05:05 | ಆಪರಂಡ್ ಇವ್ಯಾಲ್ಯುಯೇಟ್ ಆಗುವ ಮೊದಲು ಪ್ರಿಫಿಕ್ಸ್ ಆಪರೇಶನ್ ಆಗುತ್ತದೆ. |
05:09 | ಈ printfಸ್ಟೇಟ್ಮೆಂಟ್ ನ ಔಟ್ ಪುಟ್ ಸೊನ್ನೆ. |
05:11 | a ನ ಮೌಲ್ಯದಲ್ಲಿ ಪುನಃ ಬದಲಾವಣೆ ಮಾಡಿಲ್ಲ. |
05:15 | ರಿಟರ್ನ್ ಝೀರೋ ಎಂದು ಟೈಪ್ ಮಾಡಿ, ಮತ್ತು ಕ್ಲೋಸಿಂಗ್ ಕರ್ಲಿ ಬ್ರಾಕೆಟ್ ಅನ್ನು ಟೈಪ್ ಮಾಡಿ. |
05:21 | Save ಅನ್ನು ಒತ್ತಿ. |
05:24 | ಟರ್ಮಿನಲ್ ಗೆ ಹಿಂತಿರುಗಿ. |
05:27 | ಕಂಪೈಲ್ ಮಾಡಲು, gccಸ್ಪೇಸ್ ಐ ಎನ್ ಸಿ ಆರ್ ಡಿ ಇ ಸಿ ಆರ್ ಡಾಟ್ ಸಿ ಸ್ಪೇಸ್ ಮೈನಸ್ ಒ ಸ್ಪೇಸ್ ಐ ಎನ್ ಸಿ ಆರ್ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
05:42 | ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಐ ಎನ್ ಸಿ ಆರ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
05:52 | ಇದು a- - ಅನ್ನು ಪ್ರಿಂಟ್ ಮಾಡಿದಾಗ ಬರುವ ಔಟ್ ಪುಟ್. |
05:56 | ಇದು - -a ಅನ್ನು ಪ್ರಿಂಟ್ ಮಾಡಿದಾಗ ಬರುವ ಔಟ್ ಪುಟ್. |
05:59 | ಇಂಕ್ರಿಮೆಂಟ್ ಮತ್ತು ಡಿಕ್ರಿಮೆಂಟ್ ಆಪರೇಟರ್ ಗಳು ಹೇಗೆ ಕೆಲಸ ಮಾಡುತ್ತವೆ ಎಂದು ನಾವು ನೋಡಿದೆವು. |
06:05 | ಇದೇ ಪ್ರೊಗ್ರಾಮ್ ಅನ್ನು c++ ನಲ್ಲಿ ಬರೆಯುವುದಾದರೆ, c ಪ್ರೊಗ್ರಾಮ್ ನಲ್ಲಿಯೇ ಕೆಲವು ಬದಲಾವಣೆ ಮಾಡಬಹುದು. |
06:10 | ಎಡಿಟರ್ ಗೆ ಹಿಂತಿರುಗೋಣ. |
06:13 | ಇದು c++ಕೋಡ್ ಇರುವ ಫೈಲ್. |
06:16 | ಇಲ್ಲಿರುವ ಹೆಡರ್, c ಫೈಲ್ ನ ಹೆಡರ್ ಗಿಂತ ಭಿನ್ನವಾಗಿರುವುದನ್ನು ಗಮನಿಸಬಹುದು. |
06:20 | ಯೂಸಿಂಗ್ ನೇಮ್ ಸ್ಪೇಸ್ ಸ್ಟೇಟ್ಮೆಂಟ್ ಕೂಡಾ ಇದೆ. |
06:24 | ಮತ್ತು, c++ನ ಔಟ್ ಪುಟ್ ಸ್ಟೇಟ್ಮೆಂಟ್, ಸಿಔಟ್(cout) ಎಂದು ಇರುವುದನ್ನು ಗಮನಿಸಿ. |
06:28 | ಈ ವ್ಯತ್ಯಾಸಗಳನ್ನು ಹೊರತುಪಡಿಸಿ ಎರಡೂ ಕೋಡ್ ಗಳೂ ಒಂದೇ ರೀತಿಯಾಗಿದೆ. |
06:33 | ಫೈಲ್ ಅನ್ನು save ಮಾಡಿ. ಫೈಲ್ ಡಾಟ್ cppಎಂಬ ಎಕ್ಸ್ಟೆಂಶನ್ ನೊಂದಿಗೆ Save ಆಗಿದೆ. |
06:40 | ಕೋಡ್ ಅನ್ನು ಕಂಪೈಲ್ ಮಾಡೋಣ. |
06:42 | ಟರ್ಮಿನಲ್ ಅನ್ನು ಓಪನ್ ಮಾಡಿ, g++ ಸ್ಪೇಸ್ ಐ ಎನ್ ಸಿ ಆರ್ ಡಿ ಇ ಸಿ ಆರ್ ಡಾಟ್ ಸಿಪಿಪಿ ಸ್ಪೇಸ್ ಮೈನಸ್ ಒ ಸ್ಪೇಸ್ ಐ ಎನ್ ಸಿ ಆರ್ ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
07:00 | ಎಕ್ಸಿಕ್ಯೂಟ್ ಮಾಡಲು, ಡಾಟ್ ಸ್ಲ್ಯಾಶ್ ಐ ಎನ್ ಸಿ ಆರ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
07:07 | ಸ್ಕ್ರೀನ್ ನ ಮೇಲೆ ಔಟ್ ಪುಟ್ ಕಾಣುತ್ತದೆ. |
07:10 | ಇದು, c ಪ್ರೊಗ್ರಾಮ್ ನ ಔಟ್ ಪುಟ್ ನಂತೆಯೇ ಇರುವುದನ್ನು ನೋಡಬಹುದು. |
07:15 | ನಾವೀಗ ಟೈಪ್ ಕಾಸ್ಟಿಂಗ್ ನ ಬಗೆಗೆ ತಿಳಿಯೋಣ. |
07:17 | ಇದನ್ನು c ಮತ್ತು c++ನಲ್ಲಿ ಒಂದೇ ರೀತಿಯಲ್ಲಿ ಉಪಯೋಗಿಸಬಹುದು. |
07:22 | ಒಂದು ಟೈಪ್ ನ ವೇರಿಯೇಬಲ್ ಅನ್ನು ಬೇರೊಂದು ಟೈಪ್ ನಂತೆ ವರ್ತಿಸುವಂತೆ ಮಾಡಲು ಟೈಪ್ ಕಾಸ್ಟಿಂಗ್ ಅನ್ನು ಉಪಯೋಗಿಸುತ್ತಾರೆ. |
07:27 | ಟೈಪ್ ಕಾಸ್ಟ್ ಮಾಡಲು, ನಮಗೆ ಬೇಕಾದ ಡಾಟಾ ಟೈಪ್ ಅನ್ನು ಪ್ಯಾರಾಂಥಿಸಿಸ್ ನ ಒಳಗೆ ಬರೆಯಬೇಕು. |
07:33 | ಈ ಕಾಸ್ಟ್ ಅನ್ನು, ನಾವು ಕಾಸ್ಟ್ ಮಾಡಬೇಕಾದ ವೇರಿಯೇಬಲ್ ನ ಎದುರು ಬೆರೆಯಬೇಕು. |
07:38 | ಈ ಟೈಪ್ ಕಾಸ್ಟ್, ಒಂದೇ ಆಪರೇಶನ್ ಗೆ ಮಾತ್ರ ಮಾನ್ಯವಾಗಿರುತ್ತದೆ. |
07:42 | ಈಗ, ವೇರಿಯೇಬಲ್ a, ಒಂದು ಆಪರೇಶನ್ ನಲ್ಲಿ ಫ್ಲೋಟ್ ವೇರಿಯೇಬಲ್ ಆಗಿ ವರ್ತಿಸುತ್ತದೆ. |
07:47 | ನಾನೀಗಾಗಲೇ ಬರೆದ ಒಂದು ಉದಾಹರಣೆಯು ಇಲ್ಲಿದೆ. |
07:50 | ಕೋಡ್ ಅನ್ನು ವಿವರಿಸುತ್ತೇನೆ. |
07:54 | ಮೊದಲು, a ಮತ್ತು b ಯನ್ನು ಇಂಟಿಜರ್ ಎಂದು, ಮತ್ತು c ಯನ್ನು ಫ್ಲೋಟ್ ಎಂದೂ ಡಿಕ್ಲೇರ್ ಮಾಡೋಣ. |
08:00 | a ಗೆ ಮೌಲ್ಯ ಐದು ಮತ್ತು b ಗೆ ಮೌಲ್ಯ ಎರಡು ಎಂದೂ ಕೊಟ್ಟಿದ್ದೇವೆ. |
08:06 | a ಮತ್ತು b ಯನ್ನು ಉಪಯೋಗಿಸಿ ಕಾರ್ಯವನ್ನು ಮಾಡೋಣ. |
08:10 | a ಯನ್ನು b ಇಂದ ಭಾಗಿಸೋಣ. ಫಲಿತಾಂಶವನ್ನು c ಯಲ್ಲಿ ಇಡೋಣ. |
08:14 | ಎರಡು ಡೆಸಿಮಲ್ ಪ್ಲೇಸ್ ಗಳ ಪ್ರಿಸಿಶನ್ ಅನ್ನು ಸೂಚಿಸಲು ಪರ್ಸಂಟ್ ಟು ಎಫ್ ಅನ್ನು ಉಪಯೋಗಿಸಿದ್ದೇ೧ವೆ. |
08:20 | ಎರಡು ಪಾಯಿಂಟ್ ಐದು ಸೊನ್ನೆ ಯ ಬದಲು ಎರಡು ಪಾಯಿಂಟ್ ಸೊನ್ನೆ ಸೊನ್ನೆ ಎಂದು ಫಲಿತಾಂಶ ತೋರಿಸುತ್ತದೆ. |
08:25 | a ಮತ್ತು b ಗಳು ಇಂಟಿಜರ್ ಗಳಾಗಿರುವುದರಿಂದ, ಫ್ರ್ಯಾಕ್ಷನಲ್ ಭಾಗವು ಮೊಟಕಾಗಿದೆ. |
08:31 | ಸರಿಯಾದ ಫಲಿತಾಂಶ ಪಡೆಯಬೇಕಾದರೆ, ಎರಡರಲ್ಲಿ ಒಂದು ಆಪರಂಡ್ ಅನ್ನು ಫ್ಲೋಟ್ ಗೆ ಟೈಪ್ ಕಾಸ್ಟ್ ಮಾಡಬೇಕು. |
08:35 | ಇಲ್ಲಿ, ನಾವು a ಯನ್ನು ಫೋಟ್ ಗೆ ಟೈಪ್ ಕಾಸ್ಟ್ ಮಾಡುತ್ತಿದ್ದೇವೆ. ಈಗ c ಯಲ್ಲಿ ಸರಿಯಾದ ಫಲಿತಾಂಶವು ಇರುತ್ತದೆ. |
08:41 | ಈಗ, ಸರಿಯಾದ ಭಾಗಾಕಾರದ ಫಲಿತಾಂಶವು ತೋರಿಸುತ್ತದೆ. ನಾವು ಅಂದುಕೊಂಡಂತೆ ಫಲಿತಾಂಶವು ಎರಡು ಪಾಯಿಂಟ್ ಐದು ಸೊನ್ನೆ. |
08:47 | ರಿಟರ್ನ ಝೀರೋ ಎಂದು ಟೈಪ್ ಮಾಡಿ ಮತ್ತು ಕರ್ಲಿ ಬ್ರಾಕೆಟ್ ಅನ್ನು ಟೈಪ್ ಮಾಡಿ. |
08:51 | Save ಅನ್ನು ಒತ್ತಿ. ಫೈಲ್ ಅನ್ನು ಡಾಟ್ ಸಿ ಎಂಬ ಎಕ್ಸ್ಟೆಂಶನ್ ನೊಂದಿಗೆ ಸೇವ್ ಮಾಡಿ. |
08:55 | ನಾನು ನನ್ನ ಫೈಲ್ ಅನ್ನು ಟೈಪ್ ಕಾಸ್ಟ್ ಡಾಟ್ ಸಿ ಎಂದು ಸೇವ್ ಮಾಡಿದ್ದೇನೆ. |
08:59 | ಟರ್ಮಿನಲ್ ಅನ್ನು ಒಪನ್ ಮಾಡಿ. |
09:01 | ಕಂಪೈಲ್ ಮಾಡಲು, gccಸ್ಪೇಸ್ ಟೈಪ್ ಕಾಸ್ಟ್ ಡಾಟ್ ಸಿ ಸ್ಪೇಸ್ ಮೈನಸ್ ಒ ಸ್ಪೇಸ್ ಟೈಪ್ ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
09:17 | ಎಕ್ಸಿಕ್ಯೂಟ್ ಮಾಡಲು ಡಾಟ್ ಸ್ಲ್ಯಾಶ್ ಟೈಪ್ ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
09:25 | ಔಟ್ ಪುಟ್ ಸ್ಕ್ರೀನ್ ನ ಮೇಲೆ ಕಾಣುತ್ತದೆ. |
09:27 | ಎರಡೂ ಫಲಿತಾಂಶವನ್ನು ನೋಡಿದ ಮೇಲೆ ಟೈಪ್ ಕಾಸ್ಟ್ ನ ಪರಿಣಾಮವನ್ನು ತಿಳಿಯಬಹುದು. |
09:32 | ಈಗ, ಟ್ಯುಟೋರಿಯಲ್ ನ ಸಾರಾಂಶ ತಿಳಿಯೋಣ. |
09:34 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತ ಅಂಶಗಳು : |
09:36 | ಇಂಕ್ರಿಮೆಂಟ್ ಮತ್ತು ಡಿಕ್ರಿಮೆಂಟ್ ಆಪರೇಟರ್ ಗಳನ್ನು ಉಪಯೋಗಿಸುವುದು ಹೇಗೆ? |
09:40 | ಪೋಸ್ಟ್ ಫಿಕ್ಸ್ ಮತ್ತು ಪ್ರಿ ಫಿಕ್ಸ್ ಗಳ ವಿವಿಧ ರೋಪಗಳನ್ನು ಕಲಿತೆವು. |
09:44 | ಮತ್ತು, ಟೈಪ್ ಕಾಸ್ಟಿಂಗ್ ಮತ್ತು ಅದನ್ನು ಉಪಯೋಗಿಸುವ ವಿಧಾನವನ್ನು ಕಲಿತೆವು. |
09:47 | ಈ ಕೆಳಗಿನ ಎಕ್ಸ್ಪ್ರೆಶನ್ ಗಳನ್ನು ಬಗೆಹರಿಸಲು, ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. a ಡಿವೈಡೆಡ್ ಬೈ b ಪ್ಲಸ್ c ಡಿವೈಡೆಡ್ ಬೈ d. |
09:56 | a, b, c ಮತ್ತು d ಗಳ ಮೌಲ್ಯವನ್ನು ಯೂಸರ್ ನಿಂದ ಪಡೆಯಬೇಕು. |
10:01 | ಸರಿಯಾದ ಭಾಗಾಕಾರವನ್ನು ಮಾಡಲು, ಟೈಪ್ ಕಾಸ್ಟಿಂಗ್ ಅನ್ನು ಉಪಯೋಗಿಸಿ. |
10:05 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
10:08 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
10:10 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
10:15 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, |
10:17 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
10:20 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
10:24 | ಹೆಚ್ಚಿನ ಮಾಹಿತಿಗಾಗಿ,contact@spoken-tutorial.org ಗೆ ಬರೆಯಿರಿ. |
10:33 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
10:37 | ಇದುರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
10:44 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
10:55 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ. ಇದರ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು. |