Difference between revisions of "Firefox/C3/Bookmarks/English-timed"
From Script | Spoken-Tutorial
Line 388: | Line 388: | ||
|- | |- | ||
|10:10 | |10:10 | ||
− | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. | + | |ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
|- | |- | ||
|10:15 | |10:15 |
Revision as of 16:26, 20 August 2014
Narration | |
0:00 | ಮೊಝಿಲ್ಲ ಫೈರ್ಫಾಕ್ಸ್ ನಲ್ಲಿ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು ಮತ್ತು ಪ್ರಿಂಟ್ ಮಾಡುವ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
0:07 | ಈ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಕಲಿಯಲಿದ್ದೇವೆ. |
0:11 | ಅಷ್ಟೇ ಅಲ್ಲದೆ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು, ಫೈರ್ ಫಾಕ್ಸ್ ಪೇಜ್ ಅನ್ನು ಸೆಟ್ ಅಪ್ ಮಾಡುವುದು, ಪ್ರಿವ್ಯೂ ಮತ್ತು ಪ್ರಿಂಟ್ ಈ ವಿಷಯಗಳನ್ನೂ ನಾವಿಲ್ಲಿ ಕಲಿಯಲಿದ್ದೇವೆ. |
0:18 | ಇಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ಫಾಕ್ಸ್ 7.0 ಯನ್ನು ಬಳಸುತ್ತಿದ್ದೇವೆ. |
0:26 | ನಾವೀಗ ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ. |
0:29 | ಡಿಫಾಲ್ಟ್ ಆಗಿ ಯಾಹೂ ಹೋಮ್ ಪೇಜ್ ತೆರೆದುಕೊಳ್ಳುತ್ತದೆ. |
0:32 | ನೀವು ಆಗಾಗ ಉಪಯೋಗಿಸುವ ಪೇಜ್ ಗೆ ನ್ಯಾವಿಗೇಟ್ ಆಗಲು ಬುಕ್ ಮಾರ್ಕ್ಸ್ ಗಳು ಸಹಕರಿಸುತ್ತವೆ. |
0:37 | ಈ ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಸ್ವಲ್ಪ ಕಲಿತಿದ್ದೇವೆ. |
0:42 | ಅಲ್ಲಿ gmail ಗಾಗಿ ಬುಕ್ ಮಾರ್ಕ್ ಅನ್ನು ಕೂಡಾ ಆಡ್ ಮಾಡಿದ್ದೆವು. |
0:46 | gmail ಹೋಮ್ ಪೇಜನ್ನು ತೆರೆಯಲು ಇದರ ಮೇಲೆ ಕ್ಲಿಕ್ ಮಾಡೋಣ. |
0:50 | ಆಗ ನೀವು gmail ಹೋಮ್ ಪೇಜ್ ಗೆ ಹೋಗುತ್ತೀರಿ. |
0:53 | ಅಡ್ರೆಸ್ಸ್ ಬಾರ್ ನ gmail ಅಡ್ರೆಸ್ಸ್ ನ ಬಲ ಭಾಗದಲ್ಲಿ ಹಳದಿ ನಕ್ಷತ್ರದ ಗುರುತನ್ನು ಗಮನಿಸಿದ್ದೀರಾ? |
0:59 | ಅದು ಈ ಸೈಟ್ ಬುಕ್ ಮಾರ್ಕ್ ಆಗಿದೆ ಎಂಬುದನ್ನು ಸೂಚಿಸುತ್ತದೆ. |
1:03 | ಬುಕ್ ಮಾರ್ಕ್ ನ ಹೆಸರನ್ನು ಬದಲಿಸಲು ಮತ್ತು ಅದನ್ನು ಬೇರೆ ಫೋಲ್ಡರ್ ನಲ್ಲಿಡಲೂ ಕೂಡಾ ಸ್ಟಾರ್ ಅನ್ನು ಬಳಸಬಹುದು. |
1:09 | ನಾವೀಗ gmail ನ ಹೆಸರನ್ನು mygmailpage (ಮೈ ಜೀಮೇಲ್ ಪೇ ಜ್) ಎಂದು ಬದಲಿಸೋಣ ಮತ್ತು ಇದನ್ನು MyBookmark (ಮೈಬುಕ್ ಮಾರ್ಕ್) ಎಂಬ ಹೊಸ ಫೋಲ್ಡರ್ ನಲ್ಲಿ ಇಡೋಣ. |
1:18 | ಅಡ್ರಸ್ ಬಾರ್ ನಲ್ಲಿನ ಹಳದಿ ಬಣ್ಣದ ಸ್ಟಾರನ್ನು ಕ್ಲಿಕ್ ಮಾಡೋಣ. |
1:22 | Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
1:25 | ಹೆಸರಿನ ಜಾಗದಲ್ಲಿ mygmailpage (ಮೈ ಜಿಮೇಲ್ ಪೇಜ್) ಎಂದು ಬರೆಯಿರಿ. |
1:29 | Folder (ಫೋಲ್ಡರ್) ನಲ್ಲಿ ಕ್ಲಿಕ್ ಮಾಡಿ ಕೆಳಗೆ ಬನ್ನಿ, Choose (ಛೂಸ್) ಅನ್ನು ಆಯ್ಕೆ ಮಾಡಿ. |
1:34 | Bookmarks menu (ಬುಕ್ ಮಾರ್ಕ್ಸ್ ಮೆನ್ಯು) ವನ್ನು ಆರಿಸಿ ಮತ್ತು New Folder (ನ್ಯೂ ಫೋಲ್ಡರ್) ಬಟನ್ ಮೇಲೆ ಕ್ಲಿಕ್ ಮಾಡಿ. |
1:39 | ನ್ಯೂ ಫೋಲ್ಡರ್ ಬಂದಿರುತ್ತದೆ.. |
1:41 | ಈ ಫೋಲ್ಡರ್ ನ ಹೆಸರನ್ನು MyBookmarks (ಮೈ ಬುಕ್ ಮಾರ್ಕ್ಸ್) ಎಂದು ಬದಲಿಸಿ. |
1:45 | Tags (ಟ್ಯಾಗ್ಸ್) ನಲ್ಲಿ email (ಈಮೇಲ್) ಎಂದು ಟೈಪ್ ಮಾಡಿ. |
1:49 | ಟ್ಯಾಗ್ ಗಳು ಬುಕ್ ಮಾರ್ಕ್ಸ್ ಗಳನ್ನು ವಿಂಗಡಿಸಲು ಸಹಕರಿಸುತ್ತವೆ. |
1:52 | ಬುಕ್ ಮಾರ್ಕ್ಸ್ ನ ಜೊತೆಗೆ ಹಲವು ಟ್ಯಾಗ್ ಗಳನ್ನೂ ನೀವು ಸೇರಿಸಬಹುದು. |
1:55 | ಉದಾಹರಣೆಗೆ, ಒಂದು ಶಾಪಿಂಗ್ ಸೈಟ್ ಅನ್ನು ನೀವು ಬುಕ್ ಮಾರ್ಕ್ ಮಾಡಿದಾಗ, |
1:58 | ಗಿಫ್ಟ್ಸ್, ಬುಕ್ಸ್, ಅಥವಾ ಟಾಯ್ಸ್ ಎಂಬ ಪದಗಳಿಂದ ಟ್ಯಾಗ್ ಮಾಡಬಹುದು. |
2:03 | Done (ಡನ್) ಮೇಲೆ ಕ್ಲಿಕ್ ಮಾಡಿ. |
2:06 | ಪೇಜನ್ನು ಬುಕ್ ಮಾರ್ಕ್ ಮಾಡಲು ಪರ್ಯಾಯವಾಗಿ Ctrl ಮತ್ತು D ಕೀ ಯನ್ನು ಒತ್ತಬಹುದು. |
2:12 | ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನೆ ಮೇಲೆ ಕ್ಲಿಕ್ ಮಾಡಿ. |
2:16 | ಬುಕ್ ಮಾರ್ಕ್ಸ್ ಮೆನ್ಯುವಿನಲ್ಲಿ MyBookmarks (ಮೈ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ಗೋಚರವಾಗುತ್ತದೆ. . |
2:20 | ಕ್ರಸರ್ ಅನ್ನು ಫೋಲ್ಡರ್ ನ ಮೇಲೆ ತನ್ನಿ. |
2:23 | mygmailpage (ಮೈ ಜಿಮೇಲ್ ಪೇಜ್) ಎಂಬ ಬುಕ್ ಮಾರ್ಕ್ ಇಲ್ಲಿ ಸೇವ್ ಆಗಿದೆ. |
2:27 | ಈಗ ಅಡ್ರೆಸ್ ಬಾರ್ ನಲ್ಲಿ email ಎಂಬ ಟ್ಯಾಗನ್ನು ಟೈಪ್ ಮಾಡಿ. |
2:31 | mygmailpage (ಮೈ ಜಿಮೇಲ್ ಪೇಜ್) ಸೈಟ್ ಪಟ್ಟಿಯ ಮೊದಲ ಆಯ್ಕೆಯಾಗಿ ಗೋಚರಿಸುವುದನ್ನು ಗಮನಿಸಿ. |
2:38 | ನಾವೀಗ ಬುಕ್ ಮಾರ್ಕ್ ನ ಹೆಸರನ್ನು ಬದಲಿಸಿದೆವು, ನಂತರ ಬೇರೆ ಫೋಲ್ಡರ್ ನಲ್ಲಿ ಸೇವ್ ಮಾಡಿದೆವು ಮತ್ತು ಟ್ಯಾಗ್ ಬಳಸುವ ಮುಖಾಂತರ ಅದನ್ನು ಗುರುತಿಸಿದೆವು. |
2:45 | ಈಗ www.google.com ( ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬ ವೆಬ್ ಸೈಟ್ ಅನ್ನು ಬುಕ್ ಮಾರ್ಕ್ ಮಾಡೋಣ. <Pause> |
2:53 | ಆಡ್ರೆಸ್ ಬಾರ್ ನಲ್ಲಿ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ಡಿಲಿಟ್ ಮಾಡಿರಿ. |
2:56 | ಈಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ. |
3:01 | ಎಂಟರ್ ಅನ್ನು ಒತ್ತಿರಿ. |
3:03 | ಈಗ ಅಡ್ರೆಸ್ ಬಾರ್ ನ ಬಲ ಮೂಲೆಯಲ್ಲಿರುವ ಸ್ಟಾರ್ ನ ಮೇಲೆ ಕ್ಲಿಕ್ ಮಾಡಿ. |
3:08 | ಗೂಗಲ್ ವೆಬ್ ಸೈಟ್ ಬುಕ್ ಮಾರ್ಕ್ ಆಗಿದೆ. |
3:12 | ಇದೇ ರೀತಿಯಲ್ಲಿ ಇನ್ನೂ ನಾಲ್ಕು ಸೈಟ್ ಗಳನ್ನು ಬುಕ್ ಮಾರ್ಕ್ ಮಾಡೋಣ. Spoken Tutorial (ಸ್ಪೋಕನ್ ಟ್ಯುಟೋರಿಯಲ್), Yahoo (ಯಾಹೂ), Fairefox Add-ons (ಫೈರ್ ಫಾಕ್ಸ್ ಆಡ್ ಆನ್ಸ್) ಮತ್ತು Ubuntu (ಉಬಂಟು). |
3:36 | ಗಮನಿಸಿ, ಈ ಬುಕ್ ಮಾರ್ಕ್ ಗಳನ್ನು ನಾವು ಫೋಲ್ಡರ್ ಗೆ ಸೇವ್ ಮಾಡಿಲ್ಲ. |
3:40 | ನಾವು ಕ್ರಿಯೆಟ್ ಮಾಡಿದ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡುವುದಾದರೂ ಹೇಗೆ? |
3:44 | Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove Bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ನೀವು ಈಗಾಗಲೇ ಗಮನಿಸಿರುತ್ತೀರಿ. |
3:50 | ನಾವೀಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬುದರ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡೋಣ. |
3:55 | ಅಡ್ರೆಸ್ ಬಾರ್ ನಲ್ಲಿ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ. ನಂತರ ಹಳದಿ ನಕ್ಷತ್ರದ ಮೇಲೆ ಕ್ಲಿಕ್ ಮಾಡಿ. |
4:03 | ಎಡಿಟ್ ದಿಸ್ ಬುಕ್ ಮಾರ್ಕ್ ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ಕ್ಲಿಕ್ ಮಾಡಿ. |
4:09 | ಮೆನ್ಯು ಬಾರ್ ನಲ್ಲಿ Bookmarks ಮತ್ತು MyBookmarks ಎಂಬ ಬಟನ್ ಗಳ ಮೇಲೆ ಕ್ಲಿಕ್ ಮಾಡಿ. |
4:14 | ಇನ್ನು ಮುಂದೆ ಗೂಗಲ್ ಬುಕ್ ಮಾರ್ಕ್, ಬುಕ್ ಮಾರ್ಕ್ ಮೆನ್ಯುವಿನಲ್ಲಿ ಕಾಣಸಿಗುವುದಿಲ್ಲ. |
4:19 | ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಹೇಗೆ ಬಳಸುತ್ತೀರಿ? |
4:23 | ಬುಕ್ ಮಾರ್ಕ್ ಗಳನ್ನು ಅನೇಕ ರೀತಿಯಲ್ಲಿ ಬಳಸಬಹುದು. |
4:26 | ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಬಳಸುವ ಅತಿ ಸರಳ ಮಾರ್ಗವೆಂದರೆ ಅದರ ಹೆಸರನ್ನು ಅಡ್ರೆಸ್ ಬಾರ್ ನಲ್ಲಿ ಬರೆಯುವುದು. |
4:33 | ಅಡ್ರೆಸ್ ಬಾರ್ ನಲ್ಲಿ ಕ್ಲಿಕ್ ಮಾಡಿ. ತೋರಿಸುತ್ತಿರುವ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ನಂತರ ಡಿಲಿಟ್ ಮಾಡಿ. |
4:39 | ಈಗ ಅಡ್ರೆಸ್ ಬಾರ್ ನಲ್ಲಿ g ಎಂದು ಟೈಪ್ ಮಾಡಿ. |
4:43 | g ಎಂಬ ಅಕ್ಷರದಿಂದ ಆರಂಭವಾಗುವ ವೆಬ್ ಸೈಟ್ ಗಳ ಪಟ್ಟಿ ಗೋಚರವಾಗುವುದನ್ನು ಗಮನಿಸಿ. |
4:49 | ಇವುಗಳು ನೀವು ಬುಕ್ ಮಾರ್ಕ್ ಮಾಡಿದ ಅಥವಾ ಟ್ಯಾಗ್ ಮಾಡಿದ ಅಥವಾ ಮೊದಲು ನೋಡಿದ ಸೈಟ್ ಗಳಾಗಿರುತ್ತವೆ. |
4:55 | ಲೈಬ್ರರಿ ವಿಂಡೋವಿನಲ್ಲಿ ಬುಕ್ ಮಾರ್ಕ್ ಗಳನ್ನು ನೋಡಬಹುದು ಮತ್ತು ಜೋಡಿಸಲೂಬಹುದು. |
5:00 | ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನ ಮೇಲೆ ಕ್ಲಿಕ್ ಮಾಡಿ, ನಂತರ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ. |
5:06 | Library (ಲೈಬ್ರರಿ) ಎಂಬ ವಿಂಡೋ ತೆರೆದುಕೊಳ್ಳುತ್ತದೆ. |
5:09 | ನೀವು ಮಾಡಿದ ಎಲ್ಲಾ ಬುಕ್ ಮಾರ್ಕ್ ಗಳು ಡಿಫಾಲ್ಟ್ ಆಗಿ Unsorted Bookmarks (ಅನ್ ಸ್ಟೋರ್ಡ್ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ನಲ್ಲಿ ಸೇವ್ ಆಗಿರುತ್ತದೆ. |
5:16 | Yahoo, Spoken Tutorial, Ubuntu ಮತ್ತು Firefox Add-ons ಎಂಬ ಬುಕ್ ಮಾರ್ಕ್ ಗಳು ಪಟ್ಟಿಯಲ್ಲಿರುವುದನ್ನು ಗಮನಿಸಿ. |
5:24 | ಬುಕ್ ಮಾರ್ಕ್ ಮೆನ್ಯುವಿಗೆ Yahoo India (ಯಾಹೂ ಇಂಡಿಯಾ) ಎಂಬ ಬುಕ್ ಮಾರ್ಕನ್ನು ಸೇರಿಸಬೇಕೆಂದಿಟ್ಟುಕೊಳ್ಳೋಣ. |
5:29 | ಮೊದಲಿಗೆ Library ವಿಂಡೋ ವನ್ನು ಸ್ಕ್ರೀನ್ ನ ಮಧ್ಯ ಭಾಗಕ್ಕೆ ತರೋಣ. |
5:34 | ಈಗ ನಾವು ಮೆನ್ಯು ಬಾರ್ ಮತ್ತು ಆಪ್ಷನ್ ಗಳನ್ನು ಸ್ಪಷ್ಟವಾಗಿ ನೋಡಬಹುದು. |
5:39 | Unsorted Bookmarks (ಅನ್ ಸಾರ್ಟೆಡ್ ಬುಕ್ ಮಾರ್ಕ್) ಫೋಲ್ಡರ್ ನಲ್ಲಿ ಯಾಹೂ ಬುಕ್ ಮಾರ್ಕ್ ಅನ್ನು ಸೆಲೆಕ್ಟ್ ಮಾಡಿ. |
5:43 | ಮೌಸ್ ನ ಎಡ ಬಟನ್ ನನ್ನು ಒತ್ತಿಕೊಂಡು ಯಾಹೂ ಬುಕ್ ಮಾರ್ಕನ್ನು ಬುಕ್ ಮಾರ್ಕ್ ಮೆನ್ಯುವಿನ ವರೆಗೆ ಎಳೆದುಕೊಂಡು ಬನ್ನಿ. |
5:49 | ಕ್ರಸರ್ ಬುಕ್ ಮಾರ್ಕ್ ಮೆನ್ಯುವಿನ ಮೇಲೆಯೇ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. |
5:53 | ಬುಕ್ ಮಾರ್ಕ್ ಮೆನ್ಯು ವಿಸ್ತೃತಗೊಳ್ಳುತದೆ. |
5:56 | ಮೆನ್ಯುವಿನ ಮೇಲೆ ಮೌಸ್ ಪಾಯಿಂಟರನ್ನು ನಿಲ್ಲಿಸಿ ಮೌಸ್ ನ ಎಡ ಬಟನ್ ನನ್ನು ಬಿಡಿ. |
6:01 | ಈಗ ಬುಕ್ ಮಾರ್ಕ್ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
6:04 | ಯಾಹೂ ಬುಕ್ ಮಾರ್ಕ್ ಈಗ ಬುಕ್ ಮಾರ್ಕ್ ಮೆನ್ಯುವಿನಲ್ಲಿ ಗೋಚರಿಸುತ್ತದೆ. |
6:08 | Library ಲೈಬ್ರರಿ ವಿಂಡೋವಿನಿಂದ ನೇರವಾಗಿ ಬುಕ್ ಮಾರ್ಕನ್ನು ತೆರೆಯಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. |
6:15 | ನಾವೀಗ ಲೈಬ್ರರಿ ವಿಂಡೋವನ್ನು ಮುಚ್ಚೋಣ. |
6:19 | ಫೈರ್ ಫಾಕ್ಸ್, ಬುಕ್ ಮಾರ್ಕ್ ಗಳನ್ನು ಜೋಡಿಸಲು ಕೂಡಾ ಅವಕಾಶ ಮಾಡಿಕೊಡುತ್ತದೆ. |
6:23 | ಈಗ ಬುಕ್ ಮಾರ್ಕ್ ಗಳನ್ನು ಹೆಸರಿನ ಅನುಗುಣವಾಗಿ ಜೋಡಿಸೋಣ. |
6:26 | ಮೆನ್ಯು ಬಾರ್ ನಲ್ಲಿ View ಮೇಲೆ ಕ್ಲಿಕ್ ಮಾಡಿ ನಂತರ Sidebar (ಸೈಡ್ ಬಾರ) ಅನ್ನು ಸೆಲೆಕ್ಟ್ ಮಾಡಿ ಮತ್ತು Bookmarks (ಬುಕ್ ಮಾರ್ಕ್ಸ್) ಅನ್ನು ಕ್ಲಿಕ್ ಮಾಡಿ. |
6:32 | ಎಡಬದಿಯಲ್ಲಿ Bookmarks (ಬುಕ್ ಮಾರ್ಕ್ಸ್) ಎಂಬ ಸ್ಲೈಡ್ ಬಾರ್ ತೆರೆದುಕೊಳ್ಳುತ್ತದೆ. |
6:37 | ಗೂಗಲ್ ಡಾಟ್ ಕಾಮನ್ನು ಮತ್ತೊಮ್ಮೆ ಬುಕ್ ಮಾರ್ಕ್ ಮಾಡೋಣ. <Pause> |
6:42 | Bookmarks ಎಂಬ ಸ್ಲೈಡ್ ಬಾರ್ ನಲ್ಲಿ Unsorted Bookmarks ಎಂಬ ಫೋಲ್ಡರನ್ನು ಸೆಲೆಕ್ಟ್ ಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ. |
6:48 | Sort By Name (ಸಾರ್ಟ್ ಬೈ ನೇಮ್) ಅನ್ನು ಸೆಲೆಕ್ಟ್ ಮಾಡಿ. |
6:51 | ಬುಕ್ ಮಾರ್ಕ್ ಗಳು ಹೆಸರಿನ ಆಧಾರದಲ್ಲಿ ಜೋಡಿಸಲ್ಪಡುತ್ತದೆ. |
6:54 | ನಿಮಗೆ ಬೇಕಾದ ಹಾಗೆಯೂ ಬುಕ್ ಮಾರ್ಕ್ ಗಳನ್ನು ಜೋಡಿಸಬಹುದು. |
6:57 | Bookmarks ಸ್ಲೈಡ್ ಬಾರ್ ನಲ್ಲಿ Bookmarks Menu ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ. |
7:03 | ನಂತರ, Unsorted Bookmarks ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ. |
7:08 | ಮೌಸನ್ನು Spoken Tutorial ಬುಕ್ ಮಾರ್ಕ್ ನ ಮೇಲೆ ತನ್ನಿ. |
7:12 | ಈಗ ಮೌಸ್ ನ ಎಡ ಬಟನ್ ಅನ್ನು ಒತ್ತಿಕೊಂಡು ಆ ಬುಕ್ ಮಾರ್ಕನ್ನು ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನ Ubuntu and Free Software ಎಂಬ ಫೋಲ್ಡರ್ ಗೆ ಎಳೆದು ತನ್ನಿ. |
7:22 | ಮೌಸ್ ಬಟನ್ ಅನ್ನು ಬಿಡಿ. |
7:25 | ಈ ಬುಕ್ ಮಾರ್ಕ್, Ubuntu and Free Software ಎಂಬ ಫೋಲ್ಡರ್ ಗೆ ರವಾನೆಯಾಗಿರುತ್ತದೆ. |
7:30 | ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನಲ್ಲಿ ನೀವು ಮಾಡಿದ ಬದಲಾವಣೆಗಳು ಬುಕ್ ಮಾರ್ಕ್ಸ್ ಮೆನ್ಯುವಿನಲ್ಲೂ ಗೋಚರವಾಗುತ್ತವೆ. |
7:35 | ನೀವು ಬುಕ್ ಮಾರ್ಕ್ ಗಳನ್ನು ಸ್ವಯಂಚಾಲಿತವಾಗಿಯೂ ಜೋಡಿಸಬಹುದು. |
7:39 | ಮನ್ಯು ಬಾರ್ ನಲ್ಲಿ Bookmarks ನ ಮೇಲೆ ಕ್ಲಿಕ್ ಮಾಡಿ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ. |
7:45 | Library ವಿಂಡೋವಿನ ಎಡಬದಿಯಲ್ಲಿ ಅದು ಗೋಚರಗೊಳ್ಳುತ್ತದೆ. Unsorted Bookmarks ಅನ್ನು ಸೆಲೆಕ್ಟ್ ಮಾಡಿ. |
7:51 | ಈಗ Views ಮೇಲೆ ಕ್ಲಿಕ್ ಮಾಡಿ ನಂತರ Sort ಮತ್ತು Sort by Added ಮೇಲೆ ಕ್ಲಿಕ್ ಮಾಡಿ. |
7:57 | ಅಡ್ರೆಸ್ಸ್ ಗಳು ಆಡ್ ಆದ ಕ್ರಮದಲ್ಲಿ ಜೋಡಿಸಲ್ಪಟ್ಟಿರುತ್ತದೆ. ಕ್ಲೋಸ್ ಬಟನ್ ಮೇಲೆ ಕ್ಲಿಕ್ ಮಾಡಿ. |
8:04 | ಕೊನೆಯದಾಗಿ ಈ ವೆಬ್ ಪೇಜನ್ನು ಪ್ರಿಂಟ್ ಮಾಡುವುದು ಹೇಗೆ ಎಂಬುದನ್ನು ಕಲಿಯೋಣ. |
8:08 | ಮೊದಲಿಗೆ ಈ ವೆಬ್ ಪೇಜನ್ನು ಪ್ರಿಂಟ್ ಗಾಗಿ ಸೆಟ್ ಅಪ್ ಮಾಡಿಕೊಳ್ಳೋಣ. |
8:12 | ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಅನ್ನು ಕ್ಲಿಕ್ ಮಾಡಿ Page Setup ಅನ್ನು ಆಯ್ಕೆ ಮಾಡಿ. |
8:17 | Page Setup ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ. |
8:21 | ಪೇಪರ್ ನ ಅಳತೆಯನ್ನು A4 (ಎ ಫೋರ್) ಎಂದು ಆಯ್ಕೆ ಮಾಡಿ. |
8:24 | Orientation (ಓರಿಎಂಟೇಷನ್) ಅನ್ನು Portrait (ಪೋರ್ಟ್ರೇಟ್) ಎಂದು ಆಯ್ಕೆ ಮಾಡಿ. |
8:28 | Apply (ಅಪ್ಲೈ) ಬಟನ್ ಅನ್ನು ಕ್ಲಿಕ್ ಮಾಡಿ. |
8:30 | ಸೆಟ್ಟಿಂಗ್ಸ್ ನ ಅನ್ವಯದ ಬಗ್ಗೆ ತಿಳಿಯಲು File ಮೇಲೆ ಕ್ಲಿಕ್ ಮಾಡಿ ನಂತರ Print Preview (ಪ್ರಿಂಟ್ ಪ್ರಿವ್ಯೂ) ಅನ್ನು ಸೆಲೆಕ್ಟ್ ಮಾಡಿ. |
8:36 | ಪ್ರಿಂಟ್ ಆದಾಗ ಪೇಜ್ ಹೇಗೆ ಕಾಣುವುದೋ ಹಾಗೆಯೇ ಇಲ್ಲಿ ಕಾಣಸಿಗುತ್ತದೆ. |
8:40 | ಹೊರಗೆ ಬರಲು Close ಬಟನ್ ಕ್ಲಿಕ್ ಮಾಡಿ. |
8:42 | ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಮೇಲೆ ಕ್ಲಿಕ್ ಮಾಡಿ Print ಅನ್ನು ಆರಿಸಿ. |
8:47 | Print ಎಂಬ ಡಯಲಾಗ್ ಬಾಕ್ಸ್ ಸ್ಕ್ರೀನ್ ಮೇಲೆ ಗೋಚರವಾಗುತ್ತದೆ. |
8:50 | General ಟ್ಯಾಬ್ ನಲ್ಲಿ GenericPrinter (ಜೆನೆರಿಕ್ ಪ್ರಿಂಟರ್) ಆಯ್ಕೆಯನ್ನು ನಾವಿಲ್ಲಿ ಆರಿಸಿಕೊಳ್ಳೋಣ. |
8:55 | ನಂತರ, Range (ರೇಂಜ್) ನಲ್ಲಿ All Pages (ಆಲ್ ಪೇಜಸ್) ಅನ್ನು ಸೆಲೆಕ್ಟ್ ಮಾಡಿ. |
9:01 | Copies (ಕಾಪೀಸ್) ನಲ್ಲಿ ಒಂದನ್ನು ನಾವು ಆರಿಸೋಣ. |
9:04 | Options (ಆಪ್ಷನ್ಸ್) ಟ್ಯಾಬನ್ನು ಕ್ಲಿಕ್ ಮಾಡಿ ಮತ್ತು Ignore Scaling and Shrink To Fit Page Width (ಇಗ್ನೋರ್ ಸ್ಕೇಲಿಂಗ್ ಅಂಡ್ ಶ್ರಿಂಕ್ ಟು ಫಿಟ್ ಪೇಜ್ ವಿಡ್ಥ್) ಅನ್ನು ಸೆಲೆಕ್ಟ್ ಮಾಡಿ. |
9:10 | Print ಬಟನ್ ಕ್ಲಿಕ್ ಮಾಡಿ. |
9:12 | ಪ್ರಿಂಟರ್ ಸರಿಯಾಗಿ ಸಂರಚನೆಗೊಂಡಿದ್ದಲ್ಲಿ ಈಗಲೇ ಪ್ರಿಂಟ್ ಶುರುವಾಗುತ್ತದೆ. |
9:17 | ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು. ಈ ಟ್ಯುಟೋರಿಯಲ್ ನಲ್ಲಿ ನಾವು |
9:23 | ಬುಕ್ ಮಾರ್ಕ್ಸ್, |
9:24 | ಬುಕ್ಮಾರ್ಕ್ಸ್ ಅನ್ನು ಜೋಡಿಸುವ ಬಗೆ, ಫೈರ್ ಫಾಕ್ಸ್ ಪೇಜ್ ಅನ್ನು ಸೆಟ್ ಮಾಡುವ ಬಗೆ, ಪ್ರಿವ್ಯೂ ಮತ್ತು ಪ್ರಿಂಟ್ ಎಂಬ ವಿಚಾರಗಳ ಬಗ್ಗೆ ಕಲಿತಿದ್ದೇವೆ. |
9:32 | ಇಲ್ಲಿ ನಿಮಗೆ ಅಭ್ಯಾಸವಿದೆ. |
9:35 | ಹೊಸ ಮೊಝಿಲ್ಲಾ ಫೈರ್ ಫಾಕ್ಸ್ ವಿಂಡೋವನ್ನು ತೆರೆಯಿರಿ, |
9:38 | ಹೊಸ ಐದು ಸೈಟ್ ಗಳಿಗೆ ಭೇಟಿ ಕೊಡಿ. |
9:41 | ಅವುಗಳೆಲ್ಲವನ್ನೂ ಬುಕ್ ಮಾರ್ಕ್ ಮಾಡಿ. |
9:43 | ಎಲ್ಲಾ ಬುಕ್ ಮಾರ್ಕ್ ಗಳನ್ನೂ ಹೊಸ ಫೋಲ್ಡರ್ ನಲ್ಲಿ ಸೇವ್ ಮಾಡಿ. |
9:47 | ಬುಕ್ಮಾರ್ಕ್ ಗಳನ್ನು ಅಕ್ಷರ ಕ್ರಮದ ವಿರುದ್ಧವಾಗಿ ಜೋಡಿಸಿ. |
9:51 | ಕೊನೆಗೆ ಬುಕ್ ಮಾರ್ಕ್ ಮಾಡಿದ ಸೈಟ್ ಗೆ ಹೋಗಿ. |
9:55 | ವೆಬ್ ಪೇಜನ್ನು ಪ್ರಿಂಟ್ ಗೆ ಸೆಟ್ ಅಪ್ ಮಾಡಿ ಮತ್ತು ಪ್ರಿಂಟ್ ಮಾಡಿ. |
9:58 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. |
10:02 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
10:05 | ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
10:10 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
10:15 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
10:18 | ಹೆಚ್ಚಿನ ಮಾಹಿತಿಗಾಗಿ contact at spoken hyphen tutorial dot org ಎಂಬ ಈ-ಮೇಲ್ ಮೂಲಕ ಸಂಪರ್ಕಿಸಿ. |
10:25 | ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ. |
10:29 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
10:37 | ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ |
10:40 | spoken hyphen tutorial dot org slash NMEICT hyphen Intro |
10:47 | ಈ ಪಾಠದ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ .
ಸಹಯೊಗಕ್ಕಾಗಿ ಧನ್ಯವಾದಗಳು. |