Difference between revisions of "LibreOffice-Suite-Impress/C2/Creating-a-presentation-document/Kannada"
From Script | Spoken-Tutorial
Line 293: | Line 293: | ||
|- | |- | ||
|06:23 | |06:23 | ||
− | + | || ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | |
|- | |- |
Latest revision as of 14:42, 7 May 2014
Time | Narration |
00:00 | LibreOffice Impress ನಲ್ಲಿ presentation document ಅನ್ನು ತಯಾರಿಸುವುದು ಮತ್ತು basic formatting ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್ ನಲ್ಲಿ ನಾವು Impress window ದ ಭಾಗಗಳ ಬಗ್ಗೆ, ಮತ್ತು ಸ್ಲೈಡ್ ನ್ನು ಇನ್ಸರ್ಟ್ ಮಾಡುವುದು ಹೇಗೆ, ಸ್ಲೈಡ್ ನ್ನು copy ಮಾಡುವುದು ಹೇಗೆ ಹಾಗೂ font ಗಳ ಬಗ್ಗೆ ಮತ್ತು font ನ್ನು format ಮಾಡುವುದರ ಬಗ್ಗೆ ಕಲಿಯುತ್ತೇವೆ. |
00:21 | ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ Operating System ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ನ ಆವೃತ್ತಿ 3.3.4 ಬಳಸುತ್ತೇವೆ |
00:29 | ಈಗ ನಾವು ಮೊದಲಿನ ಟ್ಯುಟೋರಿಯಲ್ ನಲ್ಲಿ ತಯಾರಿಸಿದ “Sample Impress” presentation ಅನ್ನು ತೆರೆಯೋಣ. |
00:35 | ಈಗ ನಾವು ಸ್ಕ್ರೀನ್ ನಲ್ಲಿ ಏನೆಲ್ಲಾ ಇವೆ ಎಂದು ಒಮ್ಮೆ ತಿಳಿಯೋಣ. |
00:39 | ಮಧ್ಯ ಭಾಗದಲ್ಲಿ ‘Workspace’ ಇದೆ, ಅದು ನಾವು ಕೆಲಸ ಮಾಡುವ ಜಾಗವಾಗಿದೆ. |
00:44 | ‘Workspace’ ನಲ್ಲಿ 5 ಟ್ಯಾಬ್ ಗಳಿರುವುದನ್ನು ನೀವು ಕಾಣಬಹುದು, ಅವುಗಳಿಗೆ “View buttons” ಎನ್ನುತ್ತಾರೆ. |
00:49 | ಸಾಮಾನ್ಯವಾಗಿ “Normal” ಟ್ಯಾಬ್ ಸೆಲೆಕ್ಟ್ ಆಗಿರುತ್ತದೆ. |
00:52 | ಇದು ಒಂದೊಂದಾಗಿ ಸ್ಲೈಡ್ ತಯಾರಿಸಲು ಇರುವ main view ಆಗಿದೆ. |
00:55 | “Outline” ವ್ಯೂ ಎಂಬುದು topic title ಗಳನ್ನು, ಹಾಗೂ bulleted ಮತ್ತು numbered ಲಿಸ್ಟ್ ಗಳನ್ನು ಪ್ರತಿ ಸ್ಲೈಡ್ ನಲ್ಲಿ outline format ನಲ್ಲಿ ತೋರಿಸುತ್ತದೆ. |
01:03 | “Notes” view ಎಂಬುದು ನಿಮಗೆ ಪ್ರತೀ ಸ್ಲೈಡ್ ನಲ್ಲಿ ನೋಟ್ ಅನ್ನು ಬರೆಯಲು ಅವಕಾಶ ಮಾಡಿಕೊಡುತ್ತದೆ ಹಾಗೂ presentation ತೋರಿಸುವಾಗ ಈ ನೋಟ್ ಗಳು ಕಾಣಿಸುವುದಿಲ್ಲ. |
01:10 | “Handout” view ಎಂಬುದು ಸ್ಲೈಡ್ ಗಳನ್ನು handout ಗಾಗಿ ಪ್ರಿಂಟ್ ಮಾಡಲು ಅವಕಾಶ ಮಾಡುತ್ತದೆ. |
01:14 | ಇಲ್ಲಿ ನಮಗೆ ಪ್ರಿಂಟ್ ಮಾಡಲು ಇಚ್ಚಿಸುವ ಸ್ಲೈಡ್ ಗಳ ಸಂಖ್ಯೆಯನ್ನು ಆರಿಸಬಹುದು. |
01:19 | “Slide Sorter” view ಎಂಬುದು ಸ್ಲೈಡ್ ಗಳ thumbnail ಅನ್ನು ತೋರಿಸುತ್ತದೆ. |
01:23 | ಈಗ ನಾವು ಪುನಃ “Normal” ವ್ಯೂ ಅನ್ನು ಕ್ಲಿಕ್ ಮಾಡೋಣ. |
01:26 | ಸ್ಕ್ರೀನ್ ನ ಎಡಬದಿಯಲ್ಲಿ ನೀವು “Slides” pane ಅನ್ನು ಕಾಣಬಹುದು. ಅದು presentation ನಲ್ಲಿ ಸ್ಲೈಡ್ ಗಳ ‘thumbnails’ ಅನ್ನು ಹೊಂದಿರುತ್ತದೆ. |
01:34 | ಬಲಬದಿಯಲ್ಲಿ ನೀವು “Tasks” pane ನ್ನು ಕಾಣಬಹುದು. ಅದರಲ್ಲಿ 5 ವಿಭಾಗಗಳಿವೆ. |
01:40 | layout ವಿಭಾಗದಲ್ಲಿ ಮೊದಲೇ ತಯಾರಿಸಿದ layout ಗಳಿವೆ. |
01:43 | ಅವನ್ನು ನಾವು ನೇರವಾಗಿ ಬಳಸಬಹುದು ಅಥವಾ ನಮಗೆ ಬೇಕಾದಂತೆ ಬದಲಾಯಿಸಿ ಬಳಸಬಹುದು. |
01:48 | ನಾವು ಟ್ಯುಟೋರಿಯಲ್ ನಲ್ಲಿ ಮುಂದೆ ಕಲಿಯುತ್ತಾ ಹೋದಂತೆ ಈ ವಿಭಾಗಗಳ ಬಗ್ಗೆ ಆಳವಾಗಿ ತಿಳಿಯಬೇಕು. |
01:53 | ಈಗ ನಾವು ಸ್ಲೈಡ್ ನ್ನು ಹೇಗೆ ಸೇರಿಸುವುದು ಎಂದು ಕಲಿಯೋಣ. Slides ಪೇನ್ ನಲ್ಲಿ ಎರಡನೇ ಸ್ಲೈಡ್ ನ್ನು ಕ್ಲಿಕ್ ಮಾಡುವುದರ ಮೂಲಕ ಆಯ್ಕೆ ಮಾಡಿ. |
02:02 | ಈಗ ನಾವು “Insert” ಮತ್ತು “Slide” ಮೇಲೆ ಕ್ಲಿಕ್ ಮಾಡಬೇಕು. |
02:05 | ಈಗ ಎರಡನೇ ಸ್ಲೈಡ್ ನ ನಂತರ ಒಂದು ಖಾಲಿ ಸ್ಲೈಡ್ ಸೇರಿರುವುದನ್ನು ನಾವು ಕಾಣಬಹುದು. |
02:10 | ಈಗ ಸ್ಲೈಡ್ ಗೆ ಟೈಟಲ್ ಕೊಡಲು, ‘Click to add Title’ ಎಂದು ಬರೆದ ಟೆಕ್ಸ್ಟ್ ಬಾರ್ ಮೇಲೆ ಕ್ಲಿಕ್ ಮಾಡಿ. |
02:17 | ಈಗ ‘Short Term Strategy’ ಎಂದು ಬರೆದು ಹೊರಗಡೆ ಕ್ಲಿಕ್ ಮಾಡಿ. |
02:23 | ಟೈಟಲ್ ನ್ನು ಈ ರೀತಿಯಲ್ಲಿ ಸೇರಿಸಬಹುದು. |
02:26 | ನಮಗೆ ಸ್ಲೈಡ್ ನ್ನು ನಕಲು ಮಾಡಲು ಎರಡು ವಿಧಾನಗಳಿವೆ. |
02:30 | ಈಗ ಮೊದಲನೆಯದನ್ನು ನೋಡೋಣ; “Insert” ಮೇಲೆ ಕ್ಲಿಕ್ ಮಾಡಿ ನಂತರ “Duplicate Slide” ಮೇಲೆ ಕ್ಲಿಕ್ ಮಾಡಿ. |
02:35 | ನಾವು ನಾವು ಹಿಂದಿನ ಹಂತದಲ್ಲಿ ರಚಿಸಿದ ಸ್ಲೈಡ್ ನ ನಂತರ ಒಂದು ಹೊಸ ಡುಪ್ಲಿಕೇಟ್ ಸ್ಲೈಡ್ insert ಆಗಿರುವುದನ್ನು ನಾವು ನೋಡಬಹುದು. |
02:42 | ಇದಕ್ಕೆ ಹೊರತಾಗಿ, “Workspace” pane ನಲ್ಲಿ “Slide Sorter” ಟ್ಯಾಬ್ ಮೇಲೆ ಕ್ಲಿಕ್ ಮಾಡಿ sorter view ಗೆ ಹೋಗಿ. |
02:50 | ರೈಟ್ ಕ್ಲಿಕ್ ಮಾಡಿ ನಂತರ context ಮೆನುವಲ್ಲಿ “Copy” ಸೆಲೆಕ್ಟ್ ಮಾಡುವುದರ ಮೂಲಕ 7ನೆ ಸ್ಲೈಡ್ ನ್ನು copy ಮಾಡಿ. |
02:58 | ಕೊನೆಯ ಸ್ಲೈಡ್ ಮೇಲೆ ರೈಟ್ ಕ್ಲಿಕ್ ಮಾಡಿ >> ಪೇಸ್ಟ್ ಮೇಲೆ ಕ್ಲಿಕ್ ಮಾಡಿ >> |
03:01 | ‘After’ ಸೆಲೆಕ್ಟ್ ಮಾಡಿ ನಂತರ OK ಕ್ಲಿಕ್ ಮಾಡಿ. |
03:04 | ಈಗ ನೀವು presentation ನ ಕೊನೆಯಲ್ಲಿ ಸ್ಲೈಡ್ ನ copy ಯನ್ನು ತಯಾರಿಸಿದ್ದೀರಿ. |
03:10 | ಈಗ ನಾವು font ಗಳನ್ನು ಮತ್ತು font ಅನ್ನು format ಮಾಡುವ ಕೆಲವು ವಿಧಾನಗಳನ್ನು ಗಮನಿಸೋಣ. |
03:15 | ಡಬಲ್ ಕ್ಲಿಕ್ ಮಾಡುವುದರ ಮೂಲಕ ‘Long term goal’ ಸ್ಲೈಡ್ ನ್ನು ಸೆಲೆಕ್ಟ್ ಮಾಡಿ. |
03:20 | “Body” ಟೆಕ್ಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ನಂತರ ಎಲ್ಲಾ ಟೆಕ್ಸ್ಟ್ ನ್ನೂ ಸೆಲೆಕ್ಟ್ ಮಾಡಿ. ಈಗ ಡಿಲೀಟ್ ಮಾಡಿ. |
03:26 | ಈಗ ಇವುಗಳನ್ನು ಟೈಪ್ ಮಾಡಿ : reduce costs , reduce dependence on few vendors, develop customized applications |
03:37 | font type ಮತ್ತು font size ನ ಬದಲಾಯಿಸುವಿಕೆ ಎಂಬುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡುವಂತೆಯೇ ಆಗಿದೆ. |
03:43 | ಟೆಕ್ಸ್ಟ್ ನ ಒಂದು ಸಾಲನ್ನು ಸೆಲೆಕ್ಟ್ ಮಾಡಿ. “Text Format” ಟೂಲ್ ಬಾರ್ ನಲ್ಲಿ Font type ನ್ನು “Albany” ಯಿಂದ “Arial Black” ಗೆ ಬದಲಾಯಿಸಿ. |
03:52 | ಮತ್ತು font size ನ್ನು “32” ಯಿಂದ “40”. |
03:56 | ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗಡೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
03:59 | ಈಗ font ಬದಲಾಗಿರುವುದನ್ನು ಗಮನಿಸಿ. |
04:02 | ನಾವು ಮೇನ್ ಮೆನು ವಿನಲ್ಲಿ Format ನ್ನು ಕ್ಲಿಕ್ ಮಾಡಿ ನಂತರ Character ಆಯ್ಕೆಯನ್ನು ಕ್ಲಿಕ್ ಮಾಡುವುದರಿಂದಲೂ ಕೂಡ font ನ್ನು ಬದಲಾಯಿಸಬಹುದು. |
04:09 | ಇದು ಒಂದು ಡೈಲಾಗ್ ಬಾಕ್ಸ್ ನ್ನು ಓಪನ್ ಮಾಡುತ್ತದೆ. ಇಲ್ಲಿ ನಾವು Font, Style ಮತ್ತು Size ಗಳನ್ನು ನಮಗೆ ಬೇಕಾದಂತೆ ಸೆಟ್ ಮಾಡಬಹುದು. |
04:16 | ಈಗ ಡೈಲಾಗ್ ಬಾಕ್ಸ್ ನ್ನು ಕ್ಲೋಸ್ ಮಾಡೋಣ. |
04:19 | font ನ ಬಣ್ಣವನ್ನು ಬದಲಾಯಿಸಲು ನಾವು ‘Development up to present’ ಎಂದು ಬರೆದಿರುವ ಸ್ಲೈಡ್ ನ್ನು ಆರಿಸೋಣ. |
04:25 | body text box ಮೇಲೆ ಕ್ಲಿಕ್ ಮಾಡಿ ನಂತರ ಎಲ್ಲಾ ಟೆಕ್ಸ್ಟ್ ಗಳನ್ನೂ ಸೆಲೆಕ್ಟ್ ಮಾಡಿ. |
04:30 | ಐಕಾನ್ ನ ಮುಂದೆ ಇರುವ downward arrow ನ್ನು ಕ್ಲಿಕ್ ಮಾಡಿ ನಂತರ ನಿಮಗೆ ಬೇಕಾಗಿರುವ ಬಣ್ಣವನ್ನು ಸೆಲೆಕ್ಟ್ ಮಾಡಿ. |
04:37 | ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
04:40 | ಈಗ ಬಣ್ಣ ಬದಲಾಗಿರುವುದನ್ನು ಗಮನಿಸಿ. |
04:43 | Bold, Italics and Underline ನಂತಹ format ಗಳನ್ನು ಮಾಡುವುದು LibreOffice Writer ನ ಡಾಕ್ಯುಮೆಂಟ್ ನಲ್ಲಿ ಮಾಡಿದಂತೆಯೇ ಆಗಿದೆ. |
04:50 | ‘Recommendations’ ಎಂದು ಬರೆದ ಸ್ಲೈಡ್ ನ್ನು ಸೆಲೆಕ್ಟ್ ಮಾಡಿ. |
04:53 | “Body” text box ಮೇಲೆ ಕ್ಲಿಕ್ ಮಾಡಿ ನಂತರ ಟೆಕ್ಸ್ಟ್ ನ ಸಾಲನ್ನು ಸೆಲೆಕ್ಟ್ ಮಾಡಿ. |
04:58 | ಈಗ Bold Italics ಮತ್ತು Underline ಐಕಾನ್ ಗಳ ಮೇಲೆ ಕ್ಲಿಕ್ ಮಾಡಿ. |
05:03 | ಈಗ ಟೆಕ್ಸ್ಟ್ ಬಾಕ್ಸ್ ನ ಹೊರಗೆಡೆ ಎಲ್ಲಿಯಾದರೂ ಕ್ಲಿಕ್ ಮಾಡಿ. |
05:06 | ಟೆಕ್ಸ್ಟ್ ನಲ್ಲಿ ಬದಲಾವಣೆಯಾಗಿರುವುದನ್ನು ಗಮನಿಸಿ. |
05:08 | ಈಗ ನಾವು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ. |
05:11 | ಸಾರಾಂಶವಾಗಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು : Impress window ದ ಭಾಗಗಳು, ಮತ್ತು ಸ್ಲೈಡ್ ಗಳನ್ನು ಇನ್ಸರ್ಟ್ ಮಾಡುವುದು ಹೇಗೆ, ಸ್ಲೈಡ್ ಗಳನ್ನು copy ಮಾಡುವುದು ಹೇಗೆ ಹಾಗೂ font ಗಳ ಬಗ್ಗೆ ಮತ್ತು font ಗಳನ್ನು format ಮಾಡುವುದು. |
05:24 | ಮಾಡಬೇಕಾದ ಅಭ್ಯಾಸಗಳು : |
05:28 | ಹೊಸ presentation ನ್ನು ತಯಾರಿಸಿ. |
05:30 | 3ನೇ ಮತ್ತು 4ನೇ ಸ್ಲೈಡ್ ಗಳ ನಡುವೆ ಸ್ಲೈಡ್ ನ್ನು Insert ಮಾಡಿ. |
05:35 | presentation ನ ಕೊನೆಯಲ್ಲಿ 4ನೇ ಸ್ಲೈಡ್ ನ copy ಅನ್ನು ತಯಾರಿಸಿ. |
05:40 | 2ನೇ ಸ್ಲೈಡ್ ನಲ್ಲಿ ಒಂದು ಟೆಕ್ಸ್ಟ್ ಬಾಕ್ಸ್ ನ್ನು ತಯಾರಿಸಿ ಮತ್ತು ಅದರಲ್ಲಿ ಏನಾದರೂ ಟೆಕ್ಸ್ಟ್ ಬರೆಯಿರಿ. |
05:45 | ಟೆಕ್ಸ್ಟ್ ನ font size ನ್ನು 32 ಗೆ ಬದಲಾಯಿಸಿ. |
05:49 | ಟೆಕ್ಸ್ಟ್ ನ್ನು bold, italic, underlined ಮತ್ತು ನೀಲಿ ಬಣ್ಣ ಮಾಡಿ. |
05:56 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
05:59 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
06:02 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
06:07 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
06:12 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
06:16 | ಹೆಚ್ಚಿನ ಮಾಹಿತಿಗಾಗಿ ಈ ಈ-ಮೇಲ್ ಮೂಲಕ ಸಂಪರ್ಕಿಸಿ. contact@spoken-tutorial.org |
06:23 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
06:27 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
06:35 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಎಂಬಲ್ಲಿ ನೋಡಿ. |
06:46 | ಈ ಪಾಠವು ದೇಸೀ ಕ್ರ್ಯೂ ನಿಂದ ಅನುವಾದಿಸಲ್ಪಟ್ಟಿದ್ದು ಇದರ ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. |
06:51 | ಧನ್ಯವಾದಗಳು. |