Tux-Typing/S1/Learn-advanced-typing/Kannada

From Script | Spoken-Tutorial
Jump to: navigation, search
Time Narration
00.00 Tux Typing ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00.05 ಈ ಟ್ಯುಟೋರಿಯಲ್ ನಲ್ಲಿ ನೀವು:
00.08 ವಾಕ್ಯಗಳ ಟೈಪಿಂಗ್ ಅನ್ನು ಹೇಗೆ ಮಾಡಬೇಕು. ನಮ್ಮದೇ ಆದ ಶಬ್ದಗಳ ಸೂಚಿಯನ್ನು ಹೇಗೆ ನಿರ್ಮಿಸಬೇಕು.
00.12 ಟೈಪಿಂಗ್ ಗಾಗಿ ಭಾಷೆಯನ್ನು ಹೇಗೆ ಸೆಟ್ ಮಾಡಬೇಕು ಇತ್ಯಾದಿಗಳನ್ನು ಕಲಿಯುತ್ತೀರಿ.
00.17 ಇಲ್ಲಿ ನಾವು ಉಬಂಟು ಲಿನಕ್ಸ್ 11.10 ರಲ್ಲಿ Tux Typing 1.8.0 ಎಂಬುದರ ಉಪಯೋಗವನ್ನು ಮಾಡುತ್ತೇವೆ.
00.26 Tux Typing ಒಪನ್ ಮಾಡಿ.
00.28 Dash Home ಎಂಬಲ್ಲಿ ಕ್ಲಿಕ್ ಮಾಡಿ.
00.31 ಸರ್ಚ್ ಬಾಕ್ಸ್ ನಲ್ಲಿ Tux Typing ಎಂದು ಟೈಪ್ ಮಾಡಿ.
00.36 Tux Typing ಎಂಬ ಐಕಾನ್ ನ ಮೇಲೆ ಕ್ಲಿಕ್ ಮಾಡಿ.
00.38 ಮೇನ್ ಮೆನ್ಯುವಿನಲ್ಲಿ Options ಎಂಬಲ್ಲಿ ಕ್ಲಿಕ್ ಮಾಡಿ.
00.42 ಆಪ್ಷನ್ ನ ಮೆನ್ಯು ಕಾಣಿಸುತ್ತದೆ. ಈಗ ವಾಕ್ಯಗಳ ಟೈಪಿಂಗ್ ಅನ್ನು ಅಭ್ಯಾಸ ಮಾಡಿ.
00.47 Phrase Typing ಎಂಬಲ್ಲಿ ಒತ್ತಿ.
00.49 ಟೀಚರ್ಸ್ ಲೈನ್ ನಲ್ಲಿ ಕಾಣುವ ವಾಕ್ಯವನ್ನು ಟೈಪ್ ಮಾಡಿ.
00.53 ಪ್ರಸ್ತುತ ಇಲ್ಲಿ ಅದು ಹೀಗಿದೆ - “The quick brown fox jumps over the lazy dog”.
01.06 ಈಗ ನಾವು ಮುಂದಿನ ವಾಕ್ಯವನ್ನು ಟೈಪ್ ಮಾಡಬೇಕು. ಮಾಡಬೇಕಲ್ಲವೇ?
01.10 Enter ಒತ್ತಿ. ಮುಂದಿನ ವಾಕ್ಯವು ಕಾಣುತ್ತದೆ.
01.14 ಈಗ ನಾವು ವಾಕ್ಯದ ಟೈಪಿಂಗ್ ಅನ್ನು ಅಭ್ಯಾಸ ಮಾಡಿದ್ದೆವು.
01.17 ನೀವು ವಿಭಿನ್ನ ವಾಕ್ಯಗಳೊಂದಿಗೆ ಅಭ್ಯಾಸ ಮಾಡಬಹುದು.
01.21 ಈಗ ಮುಂಚಿನ ಮೆನ್ಯುವಿಗೆ ಹಿಂತಿರುಗಲು Esc ಒತ್ತಿ.
01.26 ಆಪ್ಶನ್ ಮೆನ್ಯು ಕಾಣುತ್ತದೆ.
01.29 ನಾವೀಗ ಹೊಸ ವಾಕ್ಯದ ಮತ್ತು ಶಬ್ದದ ಸೇರಿಸುವಿಕೆಯನ್ನು ಕಲಿಯೋಣ.
01.34 Edit Word Lists ಎಂಬಲ್ಲಿ ಕ್ಲಿಕ್ ಮಾಡಿ.
01.37 Word List Editor ನ ವಿಂಡೋ ಕಾಣುತ್ತದೆ.
01.40 ನಾವು ಹೊಸ ಶಬ್ದವನ್ನು ಸೇರಿಸೋಣವೇ?
01.42 ವರ್ಡ್ ಲಿಸ್ಟ್ ಎಡಿಟರ್ ವಿಂಡೋ ನಲ್ಲಿ NEW ಎಂಬಲ್ಲಿ ಒತ್ತಿ.
01.46 Create a New Wordlist ಎಂಬ ವಿಂಡೋ ಕಾಣಿಸುತ್ತದೆ.
01.49 Create a New Wordlist ಎಂಬ ವಿಂಡೋ ನಲ್ಲಿ Learn to Type ಎಂದು ಟೈಪ್ ಮಾಡಿ OK ಒತ್ತಿ.
02.01 Word List Editor ಎಂಬ ವಿಂಡೋ ಕಾಣಿಸುತ್ತದೆ.
02.04 Remove ಎಂಬಲ್ಲಿ ಒತ್ತಿ ನಾವು ಟೈಪ್ ಮಾಡಿದ ವಾಕ್ಯವನ್ನು ಅಥವಾ ಶಬ್ದವನ್ನು ಅಳಿಸಬಹುದು.
02.10 ಶಬ್ದವನ್ನು ಅಥವಾ ವಾಕ್ಯವನ್ನು ಸೇವ್ ಮಾಡಲು DONE ಎಂಬಲ್ಲಿ ಒತ್ತಿ ಮತ್ತು ಇಂಟರ್ನಲ್ ಮೆನ್ಯುವಿಗೆ ಹೋಗಿ.
02.17 ಆಪ್ಶನ್ ಮೆನ್ಯು ಕಾಣಿಸುತ್ತದೆ.
02.20 ಇಂಟರ್ನಲ್ ಮೆನ್ಯುವಿನಿಂದ ನೀವು Setup language ಎಂಬ ವಿಕಲ್ಪವನ್ನು ಒತ್ತಿ ಭಾಷೆಯನ್ನು ವ್ಯವಸ್ಥೆಗೊಳಿಸಬಹುದು.
02.26 ನೀವು ಆಯ್ಕೆ ಮಾಡಿದ ಭಾಷೆಯಲ್ಲಿ ಟಕ್ಸ್ ಟೈಪಿಂಗ್ ನ ಇಂಟರ್ಫೇಸ್ ಮತ್ತು ಪಾಠವು ಕಾಣಿಸುತ್ತದೆ.
02.32 ಆದರೆ, ಪ್ರಸ್ತುತ ಟಕ್ಸ್ ಟೈಪಿಂಗ್ ಬೇರೆ ಭಾಷೆಗಳಲ್ಲಿ ಪಾಠಗಳನ್ನು ತೋರಿಸಲು ಸಮರ್ಥವಾಗಿಲ್ಲ.
02.38 ಈಗ ಆಟವೊಂದನ್ನು ಆಡೋಣ.
02.40 Main Menu ಎಂಬಲ್ಲಿ ಕ್ಲಿಕ್ ಮಾಡಿ.
02.44 Fish Cascade ಎಂಬ ಬಟನ್ ಒತ್ತಿ.
02.47 ಗೇಮ್ ಮೆನ್ಯು ಕಾಣಿಸುತ್ತದೆ.
02.50 ಆಟದ ಆರಂಭದ ಮೊದಲು ಇದನ್ನು ಹೇಗೆ ಒಪನ್ ಮಾಡಬೇಕೆಂಬ ನಿರ್ದೇಶಗಳನ್ನು ಓದೋಣ. Instructions ಎಂಬಲ್ಲಿ ಒತ್ತಿ.
02.57 ಆಟವನ್ನಾಡಲು ನಿರ್ದೇಶವನ್ನು ಓದಿ.
03.03 ಅನುವರ್ತಿಸಲು space bar ಒತ್ತಿ.
03.07 ಈಗ ಟೈಪಿಂಗ್ ಅಭ್ಯಾಸಕ್ಕಾಗಿ ಸರಳವಾದ ಆಟವನ್ನು ಆಯ್ಕೆ ಮಾಡಿ. Easy ಎಂಬಲ್ಲಿ ಒತ್ತಿ.
03.13 ವಿಭಿನ್ನ ವಿಕಲ್ಪಗಳುಳ್ಳ ವಿಂಡೋ ಕಾಣುತ್ತದೆ.
03.18 ಆ ವಿಭಿನ್ನ ವಿಕಲ್ಪಗಳೆಂದರೆ, colors, fruits, plants, ಇತ್ಯಾದಿಗಳು. Colors ಎಂಬಲ್ಲಿ ಒತ್ತಿ.
03.26 ಆಕಾಶದಿಂದ ಮೀನುಗಳು ಬೀಳುತ್ತವೆ. ಅವುಗಳಲ್ಲಿ ಅಕ್ಷರಗಳೂ ಅಂಟಿಕೊಂಡಿವೆ.
03.32 ನೀವು ಆ ಅಕ್ಷರಗಳನ್ನು ಸರಿಯಾಗಿ ಟೈಪ್ ಮಾಡಿದಲ್ಲಿ ಆ ಶಬ್ದವು ಕೆಂಪು ಬಣ್ಣಕ್ಕೆ ತಿರುಗಿ ಅದೃಶ್ಯವಾಗುತ್ತದೆ.
03.38 ಆಮೇಲೆ, ಆ ಮೀನು ಕೆಳಗೆ ಬಿದ್ದಾಗ ಪೆಂಗ್ವಿನ್ ಅದನ್ನು ತಿನ್ನಲು ಓಡುತ್ತದೆ.
03.42 ಈಗ ಮೀನಿನಲ್ಲಿರದ ಅಕ್ಷರವನ್ನು ಟೈಪ್ ಮಾಡೋಣ. ಏನಾಯಿತು?
03.47 ಅಕ್ಷರಗಳು ಹಾಗೇ ಬಿಳಿಬಣ್ಣದಲ್ಲಿಯೇ ಇವೆ. ಅಂದರೆ, ನೀವು ಆ ಅಕ್ಷರಗಳನ್ನು ಸರಿಯಾಗಿ ಟೈಪ್ ಮಾಡಬೇಕೆಂದು ಅರ್ಥ.
03.52 ನಿಮಗೆ ಎಷ್ಟು ಬೇಕೋ ಅಷ್ಟು ಆಟವನ್ನಾಡಬಹುದು.
03.55 ಗೇಮ್ಸ್ ಮೆನ್ಯುವಿಗೆ ಹೋಗಲು Escape ಬಟನ್ ಅನ್ನು ಎರಡು ಬಾರಿ ಒತ್ತಿ.
04.00 ಇಲ್ಲಿ ನಿಮಗೊಂದು ಕೆಲಸವಿದೆ.
04.02 ಕಠಿನತೆಯ ಸ್ತರವನ್ನು ಮೀಡಿಯಮ್ ಅಥವಾ ಹಾರ್ಡ್ ಗೆ ಬದಲಿಸಿ ಆಟವನ್ನಾಡಿ.
04.09 ಈಗ ನಾವು ಟಕ್ಸ್ ಟೈಪಿಂಗ್ ನ ಈ ಪಾಠದ ಕೊನೆಗೆ ಬಂದಿದ್ದೇವೆ.
04.14 ಈ ಟ್ಯುಟೋರಿಯಲ್ ನಲ್ಲಿ ನಾವು ವಾಕ್ಯಗಳ ಟೈಪಿಂಗ್, ಶಬ್ದಗಳ ಸೇರಿಸುವಿಕೆ ಮತ್ತು ಆಟವನ್ನಾಡುವುದನ್ನು ಕಲಿತೆವು.
04.21 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
http://spoken-tutorial.org/What_is_a_Spoken_Tutorial
04.24 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
04.27 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
04.32 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
04.36 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
04.41 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
04.47 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
04.52 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
04.59 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
05.11 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Vasudeva ahitanal