PERL/C3/Sample-PERL-program/Kannada

From Script | Spoken-Tutorial
Jump to: navigation, search
Time
Narration
00:01 Sample PERL program (ಸ್ಯಾಂಪಲ್ ಪರ್ಲ್ ಪ್ರೊಗ್ರಾಂ) ಎಂಬ 'ಸ್ಪೋಕನ್ ಟ್ಯುಟೋರಿಯಲ್' ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ, ನಾವು ಇಲ್ಲಿಯವರೆಗೆ ತಿಳಿದುಕೊಂಡ ಎಲ್ಲ ಮುಖ್ಯ ವಿಷಯಗಳನ್ನು ಒಂದು ಸ್ಯಾಂಪಲ್ ಪರ್ಲ್ ಪ್ರೊಗ್ರಾಂನಲ್ಲಿ ಸೇರಿಸಲು ಕಲಿಯುವೆವು.
00:14 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು :
  • Ubuntu Linux 12.04 (ಉಬಂಟು ಲಿನಕ್ಸ್) ಆಪರೇಟಿಂಗ್ ಸಿಸ್ಟಂ
  • Perl 5.14.2 ಮತ್ತು
  • gedit (ಜಿ-ಎಡಿಟ್) ಟೆಕ್ಸ್ಟ್-ಎಡಿಟರ್ ಗಳನ್ನು ಬಳಸುತ್ತಿದ್ದೇನೆ.
00:25 ನೀವು, ನಿಮಗೆ ಇಷ್ಟವಾದ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ಬಳಸಬಹುದು.
00:29 ಪೂರ್ವತಯಾರಿ ಎಂದು, ನಿಮಗೆ ಪರ್ಲ್ (Perl) ಪ್ರೊಗ್ರಾಮಿಂಗ್ ಬಗ್ಗೆ ತಿಳಿದಿರುವುದು ಅವಶ್ಯಕ.
00:34 ಇಲ್ಲದಿದ್ದರೆ, ಸಂಬಂಧಿತ Perl ಸ್ಪೋಕನ್ ಟ್ಯುಟೋರಿಯಲ್ ಗಳನ್ನು Spoken Tutorial ವೆಬ್ಸೈಟ್ ಮೇಲೆ ನೋಡಿ.
00:39 ಈ ಸ್ಯಾಂಪಲ್ ಪರ್ಲ್ ಪ್ರೊಗ್ರಾಂ, ಒಂದು ಪ್ರದೇಶದ ವಿವಿಧ ಹವಾಮಾನ ಮುನ್ಸೂಚನೆ ವರದಿಗಳ ಔಟ್ಪುಟ್ ಅನ್ನು ಕೊಡುವುದು.
00:46 'Weather dot pm', ಈ ಪ್ರೊಗ್ರಾಂಗಾಗಿ ಬೇಕಾಗಿರುವ ಡೇಟಾಅನ್ನು ಇಟ್ಟುಕೊಳ್ಳಲು, ಕಾಂಪ್ಲೆಕ್ಸ್ (ಜಟಿಲ) ಡೇಟಾ-ಸ್ಟ್ರಕ್ಚರ್ ಅನ್ನು ಹೊಂದಿರುವ ಒಂದು ಮೊಡ್ಯೂಲ್ ಫೈಲ್ ಆಗಿದೆ.
00:54 ರಿಪೋರ್ಟ್ ಅನ್ನು (ವರದಿ) ತಯಾರಿಸಲು, ಇದು ವಿವಿಧ ಫಂಕ್ಷನ್ ಗಳನ್ನು ಸಹ ಒಳಗೊಂಡಿರುತ್ತದೆ.
00:59 'weather underscore report dot pl', ಬೇಕಾದ ಔಟ್ಪುಟ್ ಅನ್ನು ಕೊಡಲು ಈ ಮೊಡ್ಯೂಲ್ ಫೈಲ್ ಅನ್ನು ಬಳಸುವ ಒಂದು ಪರ್ಲ್ ಪ್ರೊಗ್ರಾಂ ಆಗಿದೆ.
01:08 ನಮ್ಮ ವೆಬ್ಸೈಟ್ ನ ಮೇಲೆ, ಈ ವೀಡಿಯೋದ ಅಡಿಯಲ್ಲಿ ಈ ಕೋಡ್ ಫೈಲ್ ಗಳು ಲಭ್ಯವಿರುತ್ತವೆ.
01:13 'code file link' (ಕೋಡ್ ಫೈಲ್ ಲಿಂಕ್) ನಲ್ಲಿ ಒದಗಿಸಲಾದ ಫೈಲ್ ಗಳನ್ನು ಡೌನ್ಲೋಡ್ ಮತ್ತು ಅನ್-ಝಿಪ್ ಮಾಡಿ.
01:18 ಈಗ ನಾವು, ನಮ್ಮ 'Weather dot pm' ಎಂಬ ಸ್ಯಾಂಪಲ್ ಪರ್ಲ್ ಪ್ರೊಗ್ರಾಂಅನ್ನು ನೋಡೋಣ.
01:24 ಈ ಪ್ರೊಗ್ರಾಂನಲ್ಲಿ ಕೋಡ್ ನ ಬ್ಲಾಕ್, 'Weather' ಎಂಬ ನೇಮ್-ಸ್ಪೇಸ್ ನ ಅಡಿಯಲ್ಲಿ ಇದೆ.
01:29 ಪರ್ಲ್, 'package' ಎಂಬ ಕೀವರ್ಡ್ ಅನ್ನು ಬಳಸಿ ನೇಮ್-ಸ್ಪೇಸ್ ಅನ್ನು ಕಾರ್ಯಗತಗೊಳಿಸುತ್ತದೆ.
01:34 'BEGIN' ಎಂಬ ಬ್ಲಾಕ್ ಅನ್ನು, main (ಮೇನ್) ಪ್ರೊಗ್ರಾಂನ ಮೊದಲು ಕಂಪೈಲ್ ಮಾಡಿ ಎಕ್ಸೀಕ್ಯೂಟ್ ಮಾಡಲಾಗುತ್ತದೆ.
01:40 ಫಂಕ್ಷನ್ ಮತ್ತು ಮೊಡ್ಯೂಲ್ ಗಳ ವೇರಿಯೇಬಲ್ ಗಳನ್ನು, ಯೂಸರ್ ನ ನೇಮ್-ಸ್ಪೇಸ್ ಗೆ ಎಕ್ಸ್ಪೋರ್ಟ್ ಮಾಡಲು 'EXPORT', ಅನುಮತಿಸುತ್ತದೆ.
01:48 'ಆಟ್ ದ ರೇಟ್ EXPORT' ಹಾಗೂ 'ಆಟ್ ದ ರೇಟ್ EXPORT ಅಂಡರ್ಸ್ಕೋರ್ OK', ಎಕ್ಸ್ಪೋರ್ಟ್ ಕ್ರಿಯೆಯಲ್ಲಿ ಬಳಸುವ ಎರಡು ಮುಖ್ಯ ವೇರಿಯೇಬಲ್ ಗಳಾಗಿವೆ.
01:57 'ಆಟ್ ದ ರೇಟ್ EXPORT', ಸಬ್-ರುಟೀನ್ ಗಳ ಮತ್ತು ಮೊಡ್ಯೂಲ್ ನ ವೇರಿಯೇಬಲ್ ಗಳ ಲಿಸ್ಟ್ ಅನ್ನು ಒಳಗೊಂಡಿದೆ.
02:03 ಇವುಗಳನ್ನು ಕಾಲರ್ ನೇಮ್-ಸ್ಪೇಸ್ ಗೆ ಎಕ್ಸ್ಪೋರ್ಟ್ ಮಾಡಲಾಗುವುದು.
02:07 'ಆಟ್ ದ ರೇಟ್ EXPORT ಅಂಡರ್ಸ್ಕೋರ್ OK', ಬೇಡಿಕೆಯ ಆಧಾರದ ಮೇಲೆ ಚಿಹ್ನೆಗಳನ್ನು ಎಕ್ಸ್ಪೋರ್ಟ್ ಮಾಡುತ್ತದೆ.
02:14 ಇಲ್ಲಿ ನಾನು, ’ವೆದರ್ ರಿಪೋರ್ಟ್’ (ಹವಾಮಾನ ವರದಿ) ಗೆ ಬೇಕಾದ ಡೇಟಾಅನ್ನು ಇಟ್ಟುಕೊಳ್ಳುವ ’ಕಾಂಪ್ಲೆಕ್ಸ್ ಡೇಟಾ-ಸ್ಟ್ರಕ್ಚರ್’ ಗಳನ್ನು ಕ್ರಿಯೇಟ್ ಮಾಡಲು, ರೆಫರೆನ್ಸ್ ಗಳನ್ನು ಬಳಸಿದ್ದೇನೆ.
02:24 '$weather_report' (ಡಾಲರ್ ವೆದರ್ ಅಂಡರ್ಸ್ಕೋರ್ ರಿಪೋರ್ಟ್), ಒಂದು ಹ್ಯಾಶ್-ರೆಫರೆನ್ಸ್ ಆಗಿದೆ. “place” ಹಾಗೂ “nstate” ಗಳು, ಸ್ಕೇಲರ್ ವ್ಯಾಲ್ಯುಗಳನ್ನು ಹೊಂದಿವೆ.
02:32 “weekly”, ಹ್ಯಾಶ್-ರೆಫರೆನ್ಸ್ ಗಳ ಹ್ಯಾಶ್ ಆಗಿದೆ.
02:37 * ವಾರದಲ್ಲಿಯ ಪ್ರತಿಯೊಂದು ದಿನವು, ನಾಲ್ಕು ಕೀಗಳನ್ನು (Keys) ಹೊಂದಿದೆ -
  • 'max underscore temp' (ಮ್ಯಾಕ್ಸ್ ಅಂಡರ್ಸ್ಕೋರ್ ಟೆಂಪ್)
  • 'min underscore temp' (ಮಿನ್ ಅಂಡರ್ಸ್ಕೋರ್ ಟೆಂಪ್)
  • 'sunrise' (ಸನ್ ರೈಸ್)
  • 'sunset' (ಸನ್ ಸೆಟ್).
02:48 'record underscore time', ಎರಡು ಇಂಡೆಕ್ಸ್ ವ್ಯಾಲ್ಯೂಗಳನ್ನು ಹೊಂದಿರುವ ಒಂದು 'ಅರೇ ರೆಫರೆನ್ಸ್' ಆಗಿದೆ.
02:54 ವಿವಿಧ ಆಯ್ಕೆಗಳ ಹವಾಮಾನದ ವರದಿಯನ್ನು (ವೆದರ್ ರಿಪೋರ್ಟ್) ಪ್ರದರ್ಶಿಸಲು, ನನ್ನ ಹತ್ತಿರ ಕೆಲವು ಸಬ್-ರುಟೀನ್ ಗಳಿವೆ. ನಾವು ಒಂದೊಂದಾಗಿ ಇವುಗಳನ್ನು ನೋಡೋಣ.
03:01 ಈ ಫಂಕ್ಷನ್, ರಿಪೋರ್ಟ್, ಪ್ಲೇಸ್ (ಸ್ಥಳ), ಸ್ಟೇಟ್ (ರಾಜ್ಯ) ಮತ್ತು ಕರೆಂಟ್ ಡೇಟ್ (ಪ್ರಸ್ತುತ ದಿನಾಂಕ) ಗಳಂತಹ ಶೀರ್ಷಿಕೆಯ ಮಾಹಿತಿಯನ್ನು ಪ್ರಿಂಟ್ ಮಾಡುತ್ತದೆ.
03:10 ಈಗ ನಾವು 'display underscore daily underscore report' ಎಂಬ ಮುಂದಿನ ಫಂಕ್ಷನ್ ಅನ್ನು ನೋಡೋಣ.
03:16 ವಾರದ ದಿನದ ಇನ್ಪುಟ್ ಅನ್ನು ಅವಲಂಬಿಸಿ, ಈ ಫಂಕ್ಷನ್, ದೈನಂದಿನ ರಿಪೋರ್ಟ್ ಅನ್ನು ಸ್ಕ್ರೀನ್ ನ ಮೇಲೆ ಪ್ರಿಂಟ್ ಮಾಡುತ್ತದೆ.
03:22 'shift()' ಫಂಕ್ಷನ್ ಅನ್ನು ಬಳಸಿ, ನಾವು ಸಬ್-ರುಟೀನ್ ಗೆ ಪಾಸ್ ಮಾಡಲಾದ ಪ್ಯಾರಾಮೀಟರ್ ಅನ್ನು ಮರಳಿ ಪಡೆಯುತ್ತೇವೆ.
03:27 ಪ್ಯಾರಾಮೀಟರ್-ವ್ಯಾಲ್ಯೂ ದ ಹಿಂದಿನ ಮತ್ತು ಮುಂದಿನ ಸ್ಪೇಸ್ ಗಳನ್ನು ತೆಗೆದುಹಾಕಲು ನಾನು 'trim()' ಫಂಕ್ಷನ್ ಅನ್ನು ಬಳಸಿದ್ದೇನೆ.
03:34 ಇಲ್ಲಿ ಇರುವುದು 'trim()' ಫಂಕ್ಷನ್ ನ ಕೋಡ್ ಆಗಿದೆ.
03:37 'lc()' ಎಂಬ ಫಂಕ್ಷನ್, ಕೊಟ್ಟಿರುವ ಇನ್ಪುಟ್ ನ ಸಣ್ಣಕ್ಷರದ ರೂಪಾಂತರವನ್ನು ಹಿಂದಿರುಗಿಸುತ್ತದೆ.
03:42 ’ಕೇಸ್ ಸೆನ್ಸಿಟಿವಿಟೀ’ ಯನ್ನು ತಡೆಗಟ್ಟಲು ಇದನ್ನು ಬಳಸಲಾಗುತ್ತದೆ.
03:45 'main' ಪ್ರೊಗ್ರಾಂನಿಂದ ಪ್ಯಾರಾಮೀಟರ್ ಎಂದು ಪಾಸ್ ಮಾಡಲ್ಪಟ್ಟ ವಾರದ ದಿನವನ್ನು, 'dollar week underscore day' ಎಂಬ ಒಂದು ಲೋಕಲ್ ವೇರಿಯೇಬಲ್ ಗೆ ಅಸೈನ್ ಮಾಡಲಾಗುತ್ತದೆ.
03:55 ಈ ಕೆಳಗಿನ ಪ್ರಿಂಟ್ ಸ್ಟೇಟ್ಮೆಂಟ್ ಗಳು, ಸೂಚಿಸಲಾದ ವಾರದ ದಿನಕ್ಕೆ ಸಂಬಂಧಿಸಿದ ಡೇಟಾಅನ್ನು ಪ್ರಿಂಟ್ ಮಾಡುತ್ತವೆ.
04:01 '$weather underscore report' ನಲ್ಲಿಯ ವ್ಯಾಲ್ಯೂಅನ್ನು 'ಡಿ-ರೆಫರೆನ್ಸ್' ಮಾಡಲು, ನಾವು 'ಆರೋ (arrow) ಆಪರೇಟರ್' ಅನ್ನು ಬಳಸುತ್ತಿದ್ದೇವೆ.
04:09 ರೆಫರೆನ್ಸ್ ಗಳೊಂದಿಗೆ ಕೆಲಸಮಾಡುವಾಗ, ಡಿ-ರೆಫರೆನ್ಸ್ ಮಾಡುತ್ತಿರುವ ಡೇಟಾ ಟೈಪನ್ನು ನಾವು ತಿಳಿದುಕೊಳ್ಳಬೇಕು.
04:15 ಇದು ಒಂದು ಹ್ಯಾಶ್ ಆಗಿದ್ದರೆ, ನಾವು ಕೀಯನ್ನು ಕರ್ಲೀ ಬ್ರಾಕೆಟ್ಸ್ ನಲ್ಲಿ ಪಾಸ್ ಮಾಡುವುದು ಅವಶ್ಯವಾಗಿದೆ.
04:20 ಇದು ಒಂದು ಆರೇ ಆಗಿದ್ದರೆ, ಇಂಡೆಕ್ಸ್ ವ್ಯಾಲ್ಯೂಗಳೊಂದಿಗೆ ನಾವು ಸ್ಕ್ವೇರ್ ಬ್ರಾಕೆಟ್ಸ್ ಅನ್ನು ಬಳಸಬೇಕಾಗುತ್ತದೆ.
04:26 ಪರ್ಲ್ ನ 'return()' ಫಂಕ್ಷನ್, ಒಂದು ವ್ಯಾಲ್ಯೂಅನ್ನು ಹಿಂದಿರುಗಿಸುತ್ತದೆ.
04:29 'main' ಪ್ರೊಗ್ರಾಂನಲ್ಲಿ, ಒಂದು ಫಂಕ್ಷನ್ ನ ಸ್ಥಿತಿಯನ್ನು ತಿಳಿಯಲು ಇದನ್ನು ಬಳಸಬಹುದು.
04:36 ಮುಂದಿನ ಫಂಕ್ಷನ್, 'write underscore daily underscore report' ಎಂದು ಆಗಿದೆ.
04:40 ಈ ಫಂಕ್ಷನ್, ರಿಪೋರ್ಟ್ ಔಟ್ಪುಟ್ ಅನ್ನು ಫೈಲ್ ನಲ್ಲಿ ಪ್ರಿಂಟ್ ಮಾಡುವುದು.
04:45 ಗ್ರೇಟರ್ ದ್ಯಾನ್ ಚಿಹ್ನೆಯೊಂದಿಗೆ (>) ಈ 'open()' ಫಂಕ್ಷನ್, 'WRITE' ಮೋಡ್ ಅನ್ನು ಡಿಫೈನ್ ಮಾಡುತ್ತದೆ.
04:50 ಫೈಲ್-ನೇಮ್ ಅನ್ನು, ದಿನದ ಹೆಸರು ಮತ್ತು 'dot txt' ಎಕ್ಸ್ಟೆನ್ಶನ್ ನೊಂದಿಗೆ ಕ್ರಿಯೇಟ್ ಮಾಡಲಾಗುತ್ತದೆ.
04:56 ಈ ಪ್ರಿಂಟ್ ಸ್ಟೇಟ್ಮೆಂಟ್ ಗಳು, ಸೂಚಿಸಲಾದ ದಿನಕ್ಕೆ ಸಂಬಂಧಿಸಿದ ಡೇಟಾಅನ್ನು ಫೈಲ್ ನಲ್ಲಿ ಪ್ರಿಂಟ್ ಮಾಡುವುವು.
05:02 ಇದು ಸಾಪ್ತಾಹಿಕ ವರದಿಯನ್ನು ಪ್ರಿಂಟ್ ಮಾಡುತ್ತದೆ.
05:05 'ಹ್ಯಾಶ್ ರೆಫರೆನ್ಸ್'ನ ಪ್ರತಿಯೊಂದು ದಿನದ ಮೂಲಕ ಲೂಪ್ ಮಾಡಲು, ನಾನು ಒಂದು 'foreach' ಲೂಪ್ ಅನ್ನು ಡಿಕ್ಲೇರ್ ಮಾಡಿದ್ದೇನೆ.
05:11 'ಹ್ಯಾಶ್ ರೆಫರೆನ್ಸ್' ಅನ್ನು ಸೂಚಿಸಲು ಕರ್ಲೀ ಬ್ರಾಕೆಟ್ಸ್ ಅನ್ನು ಮತ್ತು ಡೀ-ರೆಫರೆನ್ಸ್ ಅನ್ನು ಸೂಚಿಸಲು ’ಆರೋ’ ಆಪರೇಟರ್ ಅನ್ನು ನಾನು ಬಳಸಿದ್ದೇನೆ.
05:18 ನಾನು ಹ್ಯಾಶ್ ನ ಕೀಗಳಲ್ಲಿ ಲೂಪ್ ಮಾಡಲು “keys” ಎಂಬ ಬಿಲ್ಟ್-ಇನ್ ಫಂಕ್ಷನ್ ಅನ್ನು ಬಳಸುತ್ತಿದ್ದೇನೆ.
05:23 'display underscore daily underscore report' ಎಂಬ ಫಂಕ್ಷನ್, ಹ್ಯಾಶ್ ನ ಪ್ರತಿಯೊಂದು ಎಲಿಮೆಂಟ್ ಅನ್ನು ಪ್ರಿಂಟ್ ಮಾಡುವುದು.
05:30 ಈಗ ನಾವು 'weather underscore report dot pl ' ಎಂಬ ಒಂದು ಪರ್ಲ್ ಪ್ರೊಗ್ರಾಂಅನ್ನು ನೋಡೋಣ. ಇದರಲ್ಲಿ, ನಾವು ಈ 'Weather dot pm' ಎಂಬ ಮೊಡ್ಯೂಲ್ ಫೈಲ್ ನ ಬಳಕೆಯನ್ನು ಮಾಡುವೆವು.
05:40 ಇಲ್ಲಿ, 'use strict' ಹಾಗೂ 'use warnings' ಗಳು 'ಕಂಪೈಲರ್ ಫ್ಲ್ಯಾಗ್' ಗಳಾಗಿವೆ. ಇವು ಸಾಮಾನ್ಯವಾದ ಪ್ರೊಗ್ರಾಮಿಂಗ್ ತಪ್ಪುಗಳನ್ನು ತಡೆಗಟ್ಟಲು ಸಹಾಯಮಾಡುತ್ತವೆ.
05:48 'use Weather' ಸೆಮಿಕೋಲನ್. ಇಲ್ಲಿ, 'Weather', ಈ ಪ್ರೊಗ್ರಾಂನಲ್ಲಿ ನಾನು ಬಳಸಿರುವ ಮೊಡ್ಯೂಲ್ ನ ಹೆಸರು ಆಗಿದೆ.
05:56 ಈ ಪ್ರೊಗ್ರಾಂಗಾಗಿ ಅಗತ್ಯವಿರುವ ಫಂಕ್ಷನ್ ಗಳನ್ನು, ಈ ಮೊಡ್ಯೂಲ್ ನಲ್ಲಿ ಸ್ಟೋರ್ ಮಾಡಲಾಗಿದೆ. ಇದನ್ನು ನಾವು ಈಗಾಗಲೇ ನೋಡಿದ್ದೇವೆ.
06:03 ಇಲ್ಲಿ, 'dot pm' ಎಂಬ ಫೈಲ್-ಎಕ್ಸ್ಟೆನ್ಶನ್ ಅನ್ನು ಕೊಡುವುದು ಅಗತ್ಯವಿಲ್ಲ.
06:08 ಈ ಪ್ರೊಗ್ರಾಂನಲ್ಲಿ, ಕೊಟ್ಟಿರುವ ಆಯ್ಕೆಗಳನ್ನು ಅವಲಂಬಿಸಿ ನಾನು ವಿಭಿನ್ನ ರಿಪೋರ್ಟ್ ಗಳನ್ನು ಪ್ರಿಂಟ್ ಮಾಡುವೆನು.
06:14 ಯೂಸರ್ ನು ಇವುಗಳಿಗಾಗಿ ಒಂದು ಆಯ್ಕೆಯನ್ನು ಎಂಟರ್ ಮಾಡಬೇಕು:
  • ಯಾವುದೇ ಒಂದು ನಿರ್ದಿಷ್ಟ ದಿನದ ವೆದರ್-ರಿಪೋರ್ಟ್ ಅನ್ನು ಪ್ರಿಂಟ್ ಮಾಡಲು
  • ಒಂದು ನಿರ್ದಿಷ್ಟ ದಿನದ ವೆದರ್-ರಿಪೋರ್ಟ್ ಅನ್ನು ಔಟ್ಪುಟ್ ಫೈಲ್ ಗೆ ಪ್ರಿಂಟ್ ಮಾಡಲು
  • ಸಾಪ್ತಾಹಿಕ ವೆದರ್-ರಿಪೋರ್ಟ್ ಗಾಗಿ.
06:27 ಆಯ್ಕೆ '1' ಎಂದು ಟೈಪ್ ಮಾಡಿದರೆ, ಅದು ವಾರದಲ್ಲಿಯ ದಿನದ ಹೆಸರನ್ನು ಎಂಟರ್ ಮಾಡಲು ಯೂಸರ್ ಅನ್ನು ಕೇಳುವುದು.
06:32 ಡೈಮಂಡ್ ಆಪರೇಟರ್, 'STDIN' ಎಂದರೆ ಕೀಬೋರ್ಡ್ ನಿಂದ ಓದುವುದು.
06:38 ಉದಾಹರಣೆಗೆ– ಯೂಸರ್ ನು “Monday” ಎಂದು ಎಂಟರ್ ಮಾಡಿದರೆ, ಆಗ ಅದನ್ನು 'dollar dayoption' ಎಂಬ ಒಂದು ಲೋಕಲ್ ವೇರಿಯೇಬಲ್ ಗೆ ಅಸೈನ್ ಮಾಡಲಾಗುತ್ತದೆ.
06:47 ನಂತರ, ನಾವು ಈ ಎರಡು ಫಂಕ್ಷನ್ ಗಳನ್ನು ಕಾಲ್ ಮಾಡುತ್ತಿರುವುದನ್ನು ನೋಡಬಹುದು -
  • 'display_header()' ಮತ್ತು
  • 'display_daily_report()'.
06:56 ನಾವು 'Weather dot pm' ನಲ್ಲಿಯ ಎಲ್ಲ ಫಂಕ್ಷನ್ ಗಳನ್ನು, ಈ ಫೈಲ್ ನಲ್ಲಿಯ “use Weather” ಸ್ಟೇಟ್ಮೆಂಟ್ ನೊಂದಿಗೆ ಎಕ್ಸ್ಪೋರ್ಟ್ ಮಾಡಿದ್ದೇವೆ.
07:03 ಹೀಗಾಗಿ, ಪ್ಯಾಕೇಜ್ ನ ಒಳಗೆ, 'ಕೋಲನ್ ಕೋಲನ್ (::)' ಪ್ಯಾಕೇಜ್-ಕ್ವಾಲಿಫೈರ್ ಬಳಸಿ ಫಂಕ್ಷನ್ ಗಳನ್ನು ರೆಫರ್ ಮಾಡುವ ಅಗತ್ಯವಿಲ್ಲ.
07:10 ಈಗ ನಾವು ಮುಂದಿನ ಆಯ್ಕೆಯನ್ನು ನೋಡೋಣ.
07:13 ಆಯ್ಕೆ '2' ಎಂದು ಟೈಪ್ ಮಾಡಿದರೆ, ಅದು ಯೂಸರ್ ಅನ್ನು ವಾರದಲ್ಲಿಯ ದಿನವನ್ನು ಎಂಟರ್ ಮಾಡಲು ಪ್ರಾಂಪ್ಟ್ ಮಾಡುವುದು.
07:19 'write underscore daily underscore report' ಎಂಬ ಫಂಕ್ಷನ್ ಗೆ, '$dayoption' ಅನ್ನು ಇನ್ಪುಟ್ ಪ್ಯಾರಾಮೀಟರ್ ಎಂದು ಪಾಸ್ ಮಾಡಲಾಗುತ್ತದೆ.
07:27 'ಫಂಕ್ಷನ್'ನ ರಿಟರ್ನ್ ವ್ಯಾಲ್ಯೂಅನ್ನು 'dollar result' ಎಂಬ ವೇರಿಯೇಬಲ್ ನಲ್ಲಿ ಸ್ಟೋರ್ ಮಾಡಲಾಗುವುದು.
07:33 ಪ್ರಿಂಟ್ ಸ್ಟೇಟ್ಮೆಂಟ್, ಔಟ್ಪುಟ್ ಗಾಗಿ ಟೆಕ್ಸ್ಟ್ ಫೈಲನ್ನು ಪರಿಶೀಲಿಸಲು ಯೂಸರ್ ಅನ್ನು ಕೇಳುತ್ತದೆ.
07:38 ವಾರದಲ್ಲಿಯ ದಿನ, 'dot txt' ನೊಂದಿಗೆ ಔಟ್ಪುಟ್ ಫೈಲ್ ನ ಫೈಲ್-ನೇಮ್ ಅನ್ನು ಕ್ರಿಯೇಟ್ ಮಾಡಲಾಗುವುದು.
07:46 ಆಯ್ಕೆ '3' ಎಂದು ಟೈಪ್ ಮಾಡಿದರೆ, ಅದು ಪೂರ್ತಿ ವಾರದ ವೆದರ್-ರಿಪೋರ್ಟ್ ಅನ್ನು ಪ್ರಿಂಟ್ ಮಾಡುತ್ತದೆ.
07:51 'display underscore weekly underscore report', ಫಂಕ್ಷನ್ ನ ವಾರದ ರಿಪೋರ್ಟ್ ನ ಹೆಸರು ಆಗಿದೆ.
07:57 ಈ ಪ್ರಿಂಟ್ ಸ್ಟೇಟ್ಮೆಂಟ್, ಒಂದು ಅಡ್ಡಗೆರೆಯನ್ನು ಸೂಚಿಸಿದಷ್ಟು ಸಲ ಎಳೆಯುತ್ತದೆ.
08:02 ಇದು ರಿಪೋರ್ಟ್ ಅನ್ನು ಚೆನ್ನಾಗಿ ಕಾಣುವಂತೆ ಮಾಡಲು ಮಾತ್ರ.
08:06 ಕೊನೆಯದಾಗಿ, ಆಯ್ಕೆಯು '4' ಎಂದಾದರೆ, ಅದು ಪ್ರೊಗ್ರಾಂಅನ್ನು ಬಿಟ್ಟುಬಿಡುತ್ತದೆ.
08:11 ಸೂಚಿಸಲಾದ ಆಯ್ಕೆಗಳ ಹೊರತಾಗಿ ಬೇರೆ ಯಾವುದೇ ಆಯ್ಕೆಯನ್ನು ಕೊಟ್ಟರೆ, ಪ್ರಿಂಟ್ ಸ್ಟೇಟ್ಮೆಂಟ್, “Incorrect option” ಎಂದು ಹೇಳುತ್ತದೆ.
08:19 ಇಲ್ಲಿ, ಎಕ್ಸಿಟ್ ವ್ಯಾಲ್ಯೂ '0' (ಸೊನ್ನೆ), ಪ್ರೊಗ್ರಾಂ ಯಶಸ್ವಿಯಾಗಿ ರನ್ ಆಗಿರುವುದನ್ನು ಸೂಚಿಸುತ್ತದೆ.
08:25 '0' ಅಲ್ಲದಿರುವ ಎಕ್ಸಿಟ್ ವ್ಯಾಲ್ಯೂ, ಯಾವುದೋ ರೀತಿಯ ಎರರ್ ಇರುವುದನ್ನು ಸೂಚಿಸುತ್ತದೆ.
08:31 ಈಗ ನಾವು ಪ್ರೊಗ್ರಾಮನ್ನು ಎಕ್ಸೀಕ್ಯೂಟ್ ಮಾಡೋಣ.
08:34 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl weather underscore report dot pl' ಮತ್ತು 'Enter' ಅನ್ನು ಒತ್ತಿ.
08:41 ಸ್ಕ್ರೀನ್ ನ ಮೇಲೆ ನಾವು ನಾಲ್ಕು ಆಯ್ಕೆಗಳನ್ನು ನೋಡಬಹುದು.
08:45 '1' ಅನ್ನು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
08:48 ನಮಗೆ ವಾರದಲ್ಲಿಯ ಒಂದು ದಿನವನ್ನು ಎಂಟರ್ ಮಾಡಲು ಸೂಚನೆ ಸಿಗುತ್ತದೆ. ನಾನು 'monday' ಎಂದು ಟೈಪ್ ಮಾಡಿ 'Enter' ಅನ್ನು ಒತ್ತುತ್ತೇನೆ.
08:56 ಇದು, 'display underscore header()' ಎಂಬ ಫಂಕ್ಷನ್ ನಿಂದ ತಯಾರಿಸಲ್ಪಟ್ಟ ಹೆಡರ್ ನ ಔಟ್ಪುಟ್ ಆಗಿದೆ.
09:02 ಈಗ, ನಾವು Monday ದ ಹವಾಮಾನ ವರದಿಯನ್ನು ನೋಡಬಹುದು.
09:06 ಇನ್ನುಳಿದ ಆಯ್ಕೆಗಳನ್ನು ತೋರಿಸಲು, ಈಗ ನಾನು ಮತ್ತೊಮ್ಮೆ ಪ್ರೊಗ್ರಾಂಅನ್ನು ಎಕ್ಸೀಕ್ಯೂಟ್ ಮಾಡುವೆನು.
09:13 '2' ಎಂದು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
09:17 ಪ್ರಾಂಪ್ಟ್ ಇರುವಲ್ಲಿ, ನಾವು ಯಾವುದೋ ಒಂದು ದಿನವನ್ನು ಟೈಪ್ ಮಾಡಬೇಕು. ನಾನು “Wednesday” ಎಂದು ಟೈಪ್ ಮಾಡಿ 'Enter' ಅನ್ನು ಒತ್ತುವೆನು.
09:25 ನಾವು ಒಂದು ಮೆಸೇಜನ್ನು ನೋಡಬಹುದು. “Please check the file wednesday dot txt for report output”.
09:32 ಔಟ್ಪುಟ್ ಅನ್ನು ಈ ಟೆಕ್ಸ್ಟ್ ಫೈಲ್ ಗೆ ಬರೆಯಲಾಗಿದೆ. ನಾವು ಫೈಲ್ ಅನ್ನು ಓಪನ್ ಮಾಡೋಣ ಮತ್ತು ಅದರಲ್ಲಿರುವುದನ್ನು ನೋಡೋಣ.
09:38 ಹೀಗೆ ಟೈಪ್ ಮಾಡಿ: 'gedit wednesday dot txt' ಮತ್ತು 'Enter' ಅನ್ನು ಒತ್ತಿ.
09:44 'txt' ಎಕ್ಸ್ಟೆನ್ಶನ್ ಹಾಗೂ ಎಂಟರ್ ಮಾಡಲಾದ ದಿನದ ಹೆಸರಿನೊಂದಿಗೆ ಔಟ್ಪುಟ್ ಫೈಲನ್ನು ಕ್ರಿಯೇಟ್ ಮಾಡಲಾಗಿದೆ.
09:51 ಈಗ ನಾವು ಮುಂದಿನ ಆಯ್ಕೆಯನ್ನು ನೋಡೋಣ.
09:54 ಟರ್ಮಿನಲ್ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'perl weather underscore report dot pl' ಮತ್ತು 'Enter' ಅನ್ನು ಒತ್ತಿ.
10:00 '3' ಅನ್ನು ಟೈಪ್ ಮಾಡಿ ಮತ್ತು 'Enter' ಅನ್ನು ಒತ್ತಿ.
10:04 ಈ ಸಲ, ನಾವು ವಾರದ ಹವಾಮಾನದ ವರದಿಯನ್ನು ನೋಡಬಹುದು.
10:08 ಹ್ಯಾಶ್ ಕೀಗಳು ಮತ್ತು ಹ್ಯಾಶ್ ವ್ಯಾಲ್ಯೂಗಳನ್ನು ಗೊತ್ತುಗುರಿಯಿಲ್ಲದೆ ಸ್ಟೋರ್ ಮಾಡಲಾಗುತ್ತದೆ.
10:13 ಹೀಗಾಗಿ, ತೋರಿಸಲಾದ ಔಟ್ಪುಟ್, ಅವುಗಳನ್ನು ಸೇರಿಸಿದ ಅನುಕ್ರಮಕ್ಕೆ ಸಂಬಂಧಿಸಿಲ್ಲ.
10:19 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. ಸಂಕ್ಷಿಪ್ತವಾಗಿ,
10:24 ಈ ಟ್ಯುಟೋರಿಯಲ್ ನಲ್ಲಿ, ನಾವು ನಮ್ಮ ಹಿಂದಿನ ಟ್ಯುಟೋರಿಯಲ್ ಗಳ ಮುಖ್ಯ ವಿಷಯಗಳನ್ನು ಒಳಗೊಂಡಿರುವ ಒಂದು ಸ್ಯಾಂಪಲ್ ಪರ್ಲ್ ಪ್ರೊಗ್ರಾಮನ್ನು ನೋಡಿದ್ದೇವೆ.
10:32 ಒಂದು ಅಸೈನ್ಮೆಂಟ್:

'employee salary, designation, department, leave_balance' ಮುಂತಾದ ವಿವರಗಳನ್ನು ಪ್ರದರ್ಶಿಸಲು, 'employee underscore report.pl' ಎಂಬ ಇಂತಹುದೇ ಒಂದು ಪರ್ಲ್ ಪ್ರೊಗ್ರಾಂಅನ್ನು ಬರೆಯಿರಿ.

10:45 'Employee ID' ಅಥವಾ 'Employee name' ಅನ್ನು ಇನ್ಪುಟ್ ಎಂದು ಪಾಸ್ ಮಾಡಿ.
10:50 ಅವಶ್ಯವಿರುವ ಫಂಕ್ಷನ್ ಗಳನ್ನು 'Employee dot pm' ಫೈಲ್ ಮೊಡ್ಯೂಲ್ ನಲ್ಲಿ ಬರೆಯಿರಿ.
10:56 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
11:03 ನಾವು ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ನಮ್ಮ ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತೇವೆ.

ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ.

11:12 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

11:25 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ನವೀನ್ ಭಟ್, ಉಪ್ಪಿನಪಟ್ಟಣ.

ವಂದನೆಗಳು.

Contributors and Content Editors

Sandhya.np14