LibreOffice-Writer-on-BOSS-Linux/C3/Search-Replace-and-Auto-correct/Kannada

From Script | Spoken-Tutorial
Jump to: navigation, search

Resources for recording Search And Replace Auto Correct

Time Narration
00:00 ಲಿಬ್ರೆ ಆಫೀಸ್ ರೈಟರ್ ನಲ್ಲಿ ಫೈಂಡ್ ಮತ್ತು ರೀಪ್ಲೇಸ್ ವೈಶಿಷ್ಟ್ಯತೆಯನ್ನು ತಿಳಿಸಿಕೊಡುವ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು,
00:12 ಫೈಂಡ್ ಮತ್ತು ರೀಪ್ಲೇಸ್,
00:14 ಸ್ಪೆಲ್ ಚೆಕ್,
00:15 ಅಟೊ ಕರಕ್ಟ್ ಎಂಬೀ ಮುಂತಾದವುಗಳ ಬಗ್ಗೆ ತಿಳಿಯಲಿದ್ದೇವೆ.
00:17 ಇಲ್ಲಿ ನಾವು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ GNU ಲಿನಕ್ಸ್ ಹಾಗೂ ಲಿಬ್ರೆ ಆಫೀಸ್ ಸೂಟ್ ನ 3.3.4 ನೇ ಆವೃತ್ತಿಯನ್ನು ಬಳಸುತ್ತಿದ್ದೇವೆ.
00:26 ಈಗ ರೈಟರ್ ನಲ್ಲಿ “Find and Replace” ಬಟನ್ ನ ಬಗ್ಗೆ ಕಲಿಯೋಣ.
00:32 ಈ ವೈಶಿಷ್ಟ್ಯವು ಪದಗಳನ್ನು ಹುಡುಕುತ್ತದೆ ಹಾಗೂ ಅವುಗಳನ್ನು ಇಡೀ ಡಾಕ್ಯುಮೆಂಟ್ ನಲ್ಲಿ ರೀಪ್ಲೇಸ್ ಮಾಡುತ್ತದೆ.
00:36 ಉದಾಹರಣೆಯೊಂದಿಗೆ ಇದರ ಬಗ್ಗೆ ಇನ್ನೂ ಹೆಚ್ಚು ಕಲಿಯೋಣ.
00:40 ಹಾಗಾದರೆ, ಮೊದಲು ನಮ್ಮ “resume.odt” ಫೈಲ್ ಅನ್ನು ತೆರೆಯೋಣ.
00:44 ಈಗ “Edit” ಅನ್ನು ಒತ್ತಿ ನಂತರ “Find and Replace” ನ ಮೇಲೆ ಕ್ಲಿಕ್ ಮಾಡಿ.
00:51 ಅಥವಾ, ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿರುವ ಬಟನ್ ಅನ್ನು ಒತ್ತಿ.
00:56 “Search for” ಮತ್ತು “Replace with” ಎಂಬ ಸ್ಥಾನಗಳನ್ನೊಳಗೊಂಡ ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
01:01 ನೀವು ಹುಡುಕಲಿಚ್ಛಿಸುವ ಪದವನ್ನು “Search for” ಸ್ಥಾನದಲ್ಲಿ ನಮೂದಿಸಿ.
01:06 ಉದಾಹರಣೆಗೆ, ಈ ಡಾಕ್ಯುಮೆಂಟ್ ನಲ್ಲಿ ಇರುವ ಎಲ್ಲಾ “Ramesh” ಎಂಬ ಪದವನ್ನು ಹುಡುಕಬೇಕು.
01:12 ಹಾಗಾದರೆ, Search For ಎಂಬಲ್ಲಿ “Ramesh” ಎಂದು ಟೈಪ್ ಮಾಡಿ.
01:15 ಈಗ “Find All” ಎಂಬಲ್ಲಿ ಕ್ಲಿಕ್ ಮಾಡಿ.
01:19 ಈಗ ಗಮನಿಸಿ, ನಿಮ್ಮ ಡಾಕ್ಯುಮೆಂಟ್ ನಲ್ಲಿ ಎಲ್ಲೆಲ್ಲಿ “Ramesh” ಎಂಬ ಪದಗಳಿದ್ದಾವೋ ಅವೆಲ್ಲಾ ಹೈಲೆಟ್ ಆಗಿವೆ.
01:25 ಈ ಪದದ ಜಾಗದಲ್ಲಿ ರೀಪ್ಲೇಸ್ ಮಾಡಬೇಕಾದ ಪದವನ್ನು “Replace with” ಎಂಬಲ್ಲಿ ನಮೂದಿಸಿ.
01:31 ಉದಾಹರಣೆಗೆ, ನಾವು ನಮ್ಮ ಡಾಕ್ಯುಮೆಂಟ್ ನಲ್ಲಿ “Ramesh” ಎಂಬ ಜಾಗದಲ್ಲಿ "MANISH" ಎಂದು ರೀಪ್ಲೇಸ್ ಮಾಡಬೇಕೆಂದಿದ್ದೇವೆ.
01:37 ಹಾಗಾದರೆ, ನಾವು “Replace with” ಎಂಬಲ್ಲಿ “Manish” ಎಂದು ಟೈಪ್ ಮಾಡುತ್ತೇವೆ.
01:41 ಈಗ “Replace All” ಎಂಬಲ್ಲಿ ಕ್ಲಿಕ್ ಮಾಡಿ.
01:44 ನೋಡಿ, ಈ ಡಾಕ್ಯುಮೆಂಟ್ ನಲ್ಲಿ ಎಲ್ಲೆಲ್ಲಿ “Ramesh” ಎಂದಿತ್ತೋ ಅವೆಲ್ಲಾ “Manish” ಎಂದು ಬದಲಾಗಿದೆ.
01:51 ಡಯಲಾಗ್ ಬಾಕ್ಸ್ ನ ಕೆಳಗಡೆ “More Options” ಎಂಬ ಬಟನ್ ಕಾಣುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
01:57 “More Options” ಎಂಬ ಬಟನ್ "Find and Replace" ಎಂಬ ವೈಶಿಷ್ಟ್ಯದ ನಿರ್ದಿಷ್ಟ ಆಯ್ಕೆಗಳ ಸೂಚಿಯನ್ನು ಹೊಂದಿದೆ.
02:03 ಅದರಲ್ಲಿ “Backwards” ಎಂಬ ಆಯ್ಕೆಯು ಟೆಕ್ಸ್ಟ್ ಅನ್ನು ಕೆಳಗಿನಿಂದ ಮೇಲೆ ಹುಡುಕುತ್ತದೆ, “Current selection only” ಎಂಬ ಆಯ್ಕೆಯು ನಾವು ಆಯ್ಕೆಮಾಡಿದ ಟೆಕ್ಸ್ಟ್ ನಲ್ಲಿ ಹುಡುಕುತ್ತದೆ.
02:15 ಇದರಲ್ಲಿ ಇತರ ಮುಂದುವರಿದ ಆಯ್ಕೆಗಳಾದ “Regular expressions”, “Search for Styles” ಮುಂತಾದವುಗಳಿವೆ.
02:26 ಡಯಲಾಗ್ ಬಾಕ್ಸ್ ನ ಬಲಭಾಗದಲ್ಲಿ ಇನ್ನೂ ಮೂರು ವಿಕಲ್ಪಗಳಿವೆ.
02:31 ಅವುಗಳೆಂದರೆ, “Attributes”, ”Format” ಮತ್ತು “No Format”.
02:36 ಇವುಗಳು ನಮಗೆ ಫೈಂಡ್ ಮತ್ತು ರೀಪ್ಲೇಸ್ ಗೆ ಬೇಕಾದ ವಿವಿಧ ಪ್ರಕಾರದ ಹೆಚ್ಚು ಸೌಲಭ್ಯಗಳುಳ್ಳ ವಿಕಲ್ಪಗಳನ್ನು ಒದಗಿಸುತ್ತವೆ.
02:41 ಇದನ್ನು ಈಗ ಕ್ಲೋಸ್ ಮಾಡೋಣ.
02:44 ಇವುಗಳನ್ನು ನಾವು ಮುಂದಿನ ಸ್ತರಗಳ ಟ್ಯುಟೋರಿಯಲ್ ಗಳಲ್ಲಿ ಕಲಿಯೋಣ.
02:48 “Find and Replace” ಎಂಬ ವೈಶಿಷ್ಟ್ಯದ ಬಗ್ಗೆ ಕಲಿತ ನಂತರ ನಾವೀಗ ಲಿಬ್ರೆ ಆಫೀಸ್ ನಲ್ಲಿ “Spellcheck” ನ ಸಹಾಯದಿಂದ ಸ್ಪೆಲ್ಲಿಂಗ್ ಅನ್ನು ಹೇಗೆ ಪರಿಶೀಲಿಸುವುದೆಂದು ತಿಳಿಯೋಣ.
02:57 ಸ್ಪೆಲ್ ಚೆಕ್ ಎಂಬುದನ್ನು ನಮ್ಮ ಡಾಕ್ಯುಮೆಂಟ್ ನಲ್ಲಿ ಸಂಪೂರ್ಣವಾಗಿ ಅಥವಾ ಆಯ್ಕೆ ಮಾಡಿದ ಟೆಕ್ಸ್ಟ್ ನಲ್ಲಿ ಸ್ಪೆಲಿಂಗ್ ಅನ್ನು ಪರಿಶೀಲಿಸಲು ಬಳಸುತ್ತೇವೆ.
03:05 ಸ್ಪೆಲ್ ಚೆಕ್ ಎಂಬುದು ಪ್ರಸ್ತುತ ಕರ್ಸರ್ ಇರುವ ಜಾಗದಿಂದ ಆರಂಭಿಸಿ ಡಾಕ್ಯುಮೆಂಟ್ ನ ಕೊನೆಯ ತನಕ ಅಥವಾ ಆಯ್ಕೆ ಮಾಡಿದ ಟೆಕ್ಸ್ಟ್ ನ ಕೊನೆಯ ತನಕ ಪರಿಶೀಲಿಸುತ್ತದೆ.
03:12 ಆಮೇಲೆ ನೀವು ಪುನಃ ಆಯ್ಕೆ ಮಾಡುವುದರ ಮೂಲಕ ಸ್ಪೆಲ್ ಚೆಕ್ ಅನ್ನು ಡಾಕ್ಯುಮೆಂಟ್ ನ ಮೊದಲಿನಿಂದ ಆರಂಭಿಸಬಹುದು.
03:17 ಸ್ಪೆಲ್ ಚೆಕ್ ಎಂಬುದು ಪದಗಳಲ್ಲಿನ ಸ್ಪೆಲ್ಲಿಂಗ್ ತಪ್ಪುಗಳನ್ನು ಹುಡುಕುತ್ತದೆ ಮತ್ತು ಗೊತ್ತಿರದ ಪದಗಳನ್ನು ನಮ್ಮ ಪದಕೋಶಕ್ಕೆ ಸೇರಿಸುತ್ತದೆ.
03:26 ಈಗ ಇದನ್ನು ಹೇಗೆ ಕಾರ್ಯರೂಪಕ್ಕೆ ತರುವುದೆಂದು ನೋಡೋಣ.
03:29 ಸ್ಪೆಲ್ ಚೆಕ್ ವೈಶಿಷ್ಟ್ಯವು ಪ್ರತಿಯೊಂದು ಭಾಷೆಗೂ ವಿಭಿನ್ನವಾಗಿರುತ್ತದೆ.
03:33 ಉದಾಹರಣೆಗೆ, ಮೆನ್ಯು ಬಾರ್ ನಲ್ಲಿ “Tools” ಎಂಬಲ್ಲಿ ಒತ್ತಿ ನಂತರ “Options” ಎಂಬುದನ್ನು ಒತ್ತಿ.
03:39 ಈಗ ಕಾಣುವ ಡಯಲಾಗ್ ಬಾಕ್ಸ್ ನಲ್ಲಿ “Language Settings” ಎಂಬಲ್ಲಿ ಕ್ಲಿಕ್ ಮಾಡಿ ಕೊನೆಗೆ “Languages” ಎಂಬುದನ್ನು ಕ್ಲಿಕ್ ಮಾಡಿ.
03:47 ಅಲ್ಲಿ ಆಪ್ಶನ್ ನ ಅಡಿಯಲ್ಲಿ “User interface” ಎಂಬಲ್ಲಿ “English USA” ಎಂಬುದು ಡೀಫಾಲ್ಟ್ ಆಪ್ಶನ್ ಆಗಿ ಇದೆ ಎಂದು ಖಚಿತಪಡಿಸಿಕೊಳ್ಳಿ.
03:56 ಅದರ ಕೆಳಗೆ “Locale setting” ಎಂಬಲ್ಲಿ ಡೌನ್ ಏರೋ ಮಾರ್ಕ್ ಅನ್ನು ಒತ್ತಿ ಹಾಗೂ ಅಲ್ಲಿ “English USA” ಎಂಬ ವಿಕಲ್ಪವನ್ನು ಒತ್ತಿ.
04:03 ಈಗ “Default languages for documents” ಎಂಬ ಶೀರ್ಷಕದ ಕೆಳಗಿರುವ “Western” ಎಂಬ ಜಾಗದಲ್ಲಿ ಡೀಫಾಲ್ಟ್ ಭಾಷೆಯಾಗಿ “English India” ಎಂದಿದೆ.
04:12 “English India” ಎಂಬುದಕ್ಕೆ ಸ್ಪೆಲ್ ಚೆಕ್ ಗೆ ಬೇಕಾದ ಪದಕೋಶವು ಇಲ್ಲದಿರುವುದರಿಂದ ನಾವು ಭಾಷೆಯನ್ನು “English USA” ಗೆ ಬದಲಾಯಿಸೋಣ.
04:21 ಹಾಗಾಗಿ, “Western” ಎಂಬಲ್ಲಿನ ಡೌನ್ ಏರೋ ವನ್ನು ಒತ್ತಿ ಅಲ್ಲಿ “English USA” ವಿಕಲ್ಪವನ್ನು ಒತ್ತಿ.
04:27 ಕೊನೆಯಲ್ಲಿ “OK” ಬಟನ್ ಅನ್ನು ಒತ್ತಿ.
04:31 ಈಗ ನಾವು ಸ್ಪೆಲ್ ಚೆಕ್ ಎಂಬ ವೈಶಿಷ್ಟ್ಯವು “English USA” ಎಂಬ ಭಾಷೆಗೆ ಹೇಗೆ ಅನ್ವಯವಾಗಿ ಕೆಲಸ ಮಾಡುತ್ತದೆಯೆಂದು ನೋಡಲು ತಯಾರಿದ್ದೇವೆ.
04:38 “Spelling and Grammar” ವೈಶಿಷ್ಟ್ಯವನ್ನು ಉಪಯೋಗಿಸಲು “AutoSpellCheck” ಎಂಬ ಆಯ್ಕೆಯು ಸಕ್ರಿಯವಾಗಿದೆಂಬುದನ್ನು ಖಚಿತಪಡಿಸಿಕೊಳ್ಳಿ.
04:45 ಸಕ್ರಿಯವಾಗಿರದಿದ್ದಲ್ಲಿ ಟೂಲ್ ಬಾರ್ ನಲ್ಲಿ ಇರುವ “AutoSpellCheck” ಎಂಬ ಬಟನ್ ಅನ್ನು ಕ್ಲಿಕ್ ಮಾಡಿ.
04:52 ನಮ್ಮ “resume.odt” ಎಂಬ ಫೈಲ್ ನಲ್ಲಿ “Mother’s Occupation” ಎಂಬಲ್ಲಿ, ನಾವು “housewife” ಎಂಬುದರ ಸ್ಪೆಲಿಂಗ್ ಅನ್ನು “husewife” ಎಂದು ತಪ್ಪಾಗಿ ಬರೆದು ಸ್ಪೇಸ್ ಬಾರ್ ಅನ್ನು ಒತ್ತಿ.
05:05 ತಪ್ಪಾದ ಪದದ ಕೆಳಗೆ ಕೆಂಪು ಗೆರೆಯನ್ನು ನೀವು ನೋಡಬಹುದು.
05:10 ಈಗ “husewife” ಎಂಬ ಪದದ ಮೇಲೆ ಕರ್ಸರ್ ಅನ್ನು ಇಟ್ಟು ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿರುವ “Spelling and Grammar” ಎಂಬ ಐಕಾನ್ ಅನ್ನು ಕ್ಲಿಕ್ ಮಾಡಿ.
05:18 ಈಗ ನಾವು ಆ ಪದವನ್ನು “Not in dictionary” ಎಂಬ ಜಾಗದಲ್ಲಿ ಕಾಣುತ್ತೇವೆ.
05:22 ತಪ್ಪಾಗಿರುವ ಪದವು ಕೆಂಪು ಬಣ್ಣದಲ್ಲಿ ಹೈಲೆಟ್ ಆಗಿದ್ದು ಕೆಳಗೆ “Suggestions” ಎಂಬ ಬಾಕ್ಸ್ ನಲ್ಲಿ ಸರಿಯಾಗಿರಬಹುದಾದ ಪದಗಳು ಕಾಣಿಸುತ್ತವೆ, ಅವುಗಳಿಂದ ನಾವು ಸರಿಯಾದದ್ದನ್ನು ನಾವು ಆರಿಸಬಹುದು.
05:34 “Suggestions” ಎಂಬ ಬಾಕ್ಸ್ ನಲ್ಲಿ “housewife” ಎಂಬ ಪದದ ಮೇಲೆ ಕ್ಲಿಕ್ ಮಾಡಿ ನಂತರ “Change” ಬಟನ್ ಅನ್ನು ಕ್ಲಿಕ್ ಮಾಡಿ.
05:40 ಈಗ ಕಾಣುವ ಸಣ್ಣ ಡಯಲಾಗ್ ಬಾಕ್ಸ್ ನಲ್ಲಿ “OK” ಒತ್ತಿ.
05:44 ಈಗ ನೋಡಿ, ಡಾಕ್ಯುಮೆಂಟ್ ನಲ್ಲಿ ಸರಿಯಾದ ಪದವು ಕಾಣಿಸುತ್ತದೆ.
05:48 ಈಗ ಈ ಬದಲಾವಣೆಯನ್ನು ರದ್ದು ಮಾಡೋಣ.
05:50 ಈಗ ನಾವು “AutoCorrect” ಎಂಬ ಇನ್ನೊಂದು ಸ್ಟಾಂಡರ್ಡ್ ಟೂಲ್ ಬಾರ್ ನ ಬಗ್ಗೆ ಕಲಿಯೋಣ.
05:56 “AutoCorrect” ಎಂಬ ವೈಶಿಷ್ಟ್ಯವು ಸ್ಪೆಲ್ ಚೆಕ್ ನ ಎಕ್ಸ್ಟೆನ್ಶನ್ ಆಗಿದೆ.
06:00 ಆಟೋಕರಕ್ಟ್ ಎಂಬುದು ಮೆನ್ಯು ಬಾರ್ ನಲ್ಲಿರುವ “Format” ಎಂಬ ಆಯ್ಕೆಯ ಡ್ರಾಪ್ ಡೌನ್ ಮೆನ್ಯುವಿನಲ್ಲಿ ಸಿಗುತ್ತದೆ.
06:06 ಆಟೋಕರಕ್ಟ್ ಎಂಬುದು ಫೈಲ್ ಅನ್ನು ತಾನಾಗಿಯೇ ನೀವು ವ್ಯವಸ್ಥಾಪಿಸಿದಂತೆ ರೂಪಿಸುತ್ತದೆ.
06:12 ಈ ವಿಕಲ್ಪಗಳು “AutoCorrect Options” ಎಂಬುದನ್ನು ಕ್ಲಿಕ್ ಮಾಡುವುದರಿಂದ ಆಯ್ಕೆಯಾಗುತ್ತವೆ.
06:18 ಈಗ AutoCorrect ಎಂಬ ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
06:21 AutoCorrect ಎಂಬ ವೈಶಿಷ್ಟ್ಯವು ನೀವು ಬರಹವನ್ನು ಬರೆಯುತ್ತಾ ಹೋದಂತೆ ಅದನ್ನು ತಾನಾಗಿಯೇ ಸರಿಮಾಡುತ್ತಾ ಹೋಗುತ್ತದೆ.
06:26 “Options” ಎಂಬ ಟ್ಯಾಬ್ ನಲ್ಲಿ ನೀವು ಯಾವ ಆಯ್ಕೆಗಳನ್ನು ಆರಿಸಿದ್ದೀರೋ ಅದರನುಸಾರವಾಗಿ ಪರಿಷ್ಕರಣೆಯು ಆಗುತ್ತದೆ.
06:32 ಅಲ್ಲಿ “Delete spaces at the end and beginning of paragraph”, “Ignore double spaces” ಎಂಬೀ ಮುಂತಾದ ಹಲವು ಆಯ್ಕೆಗಳಿವೆ.
06:44 ಹಾಗಾಗಿ ಉದಾಹರಣೆಯ ಮೂಲಕ ಅವು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ತಿಳಿಯೋಣ.
06:48 ನಮ್ಮ resume ಫೈಲ್ ನಲ್ಲಿ ಕೆಲವೆಡೆ ನಾವು ಪದಗಳ ನಡುವೆ ಒಂದು ಸ್ಪೇಸ್ ಅನ್ನು ಇಡೋಣ ಹಾಗೂ ಇನ್ನು ಕೆಲವೆಡೆ ಎರಡು ಅಥವಾ ಮೂರು ಸ್ಪೇಸ್ಗಳನ್ನು ಇಡೋಣ.
07:02 ಈಗ ಇಡೀ ಬರಹವನ್ನು ಆಯ್ಕೆಮಾಡಿ.
07:05 ಮೆನ್ಯು ಬಾರ್ ನಲ್ಲಿ “Format” ಬಟನ್ ಅನ್ನು ಒತ್ತಿ.
07:09 ನಂತರ ಕ್ರಮವಾಗಿ “AutoCorrect” ಹಾಗೂ “AutoCorrect Options” ನ ಮೇಲೆ ಕ್ಲಿಕ್ ಮಾಡಿ.
07:17 ಅಲ್ಲಿ “Options” ಟ್ಯಾಬ್ ಕ್ಲಿಕ್ ಮಾಡಿ.
07:20 ಇಲ್ಲಿ “Ignore double spaces” ಎಂಬ ಬಾಕ್ಸ್ ಅನ್ನು ಚೆಕ್ ಮಾಡಿ “OK” ಬಟನ್ ಒತ್ತಿ.
07:26 ಈಗ ನೀವು ಟೈಪ್ ಮಾಡುವಾಗ ಎರಡು ಸ್ಪೇಸ್ ಟೈಪ್ ಆಗುವುದಿಲ್ಲ.
07:34 ನಾವೀಗ ಕರ್ಸರ್ ಅನ್ನು ”MANISH” ಎಂಬ ಹೆಸರಿನ ನಂತರ ಇಡೋಣ. ಈಗ ಕೀಬೋರ್ಡ್ ನಲ್ಲಿ ಸ್ಪೇಸ್ ಬಾರ್ ಅನ್ನು ಎರಡು ಬಾರಿ ಒತ್ತಿ.
07:41 ಗಮನಿಸಿ, ಕರ್ಸರ್ ಒಂದು ಬಾರಿ ಮಾತ್ರ ಚಲಿಸುತ್ತದೆ, ಅಂದರೆ ಎರಡು ಸ್ಪೇಸ್ ಗೆ ಅವಕಾಶ ಕೊಡುತ್ತಿಲ್ಲ.
07:48 ಒಂದು ಸ್ಪೇಸ್ ಆದಮೇಲೆ ಅಡ್ಡಹೆಸರಾಗಿ “KUMAR” ಎಂದು ಬರೆಯೋಣ.
07:53 ಆಟೋಕರಕ್ಟ್ ಎಂಬುದು ತುಂಬಾ ಸಂಕ್ಷಿಪ್ತವಾದ ಪದವನ್ನು ಅರ್ಥಪೂರ್ಣವಾದ ಅಥವಾ ಉದ್ದದ ಬರಹವನ್ನಾ ಬದಲಾಯಿಸುವ ಸಾಮರ್ಥ್ಯವನ್ನೂ ಹೊಂದಿದೆ.
08:02 ಹೀಗೆ ಸಂಕ್ಷಿಪ್ತಪದಗಳ ಬಳಕೆಯಿಂದ ನಮ್ಮ ಟೈಪಿಂಗ್ ನ ಸಮಯವನ್ನು ರಕ್ಷಿಸುತ್ತದೆ.
08:09 ಉದಾಹರಣೆಗಾಗಿ, ನಮ್ಮ resume.odt ಫೈಲ್ ನಲ್ಲಿ ಕೆಲವು ಪದಗಳು ಬಹುಬಾರಿ ಮರುಬಂದಿರಬಹುದು.
08:19 ಅವುಗಳನ್ನು ಪದೆ ಪದೆ ಬರೆಯುವುದರಿಂದ ಬರವಣಿಗೆಯಲ್ಲಿ ತೊಡಕುಂಟಾಗಬಹುದು.
08:24 ಉದಾಹರಣೆಗೆ, “This is a Spoken Tutorial Project” ಎಂಬುದನ್ನು ನಮ್ಮ ಫೈಲ್ ನಲ್ಲಿ ಬರೆಯಬೇಕೆಂದುಕೊಳ್ಳೋಣ.
08:31 ಹೀಗಿರುವಾಗ ನಾವು ಇದನ್ನು ಸಂಕ್ಷಿಪ್ತವಾಗಿಸಬಹುದು. ಅದು ತಾನಾಗಿಯೇ ನಮಗೆ ಬೇಕಾದ ಬರಹಕ್ಕೆ ಬದಲಾಗುತ್ತದೆ.
08:38 ಹಾಗಾದರೆ ನಾವೀಗ “stp” ಎಂಬ ಸಂಕ್ಷೇಪವು ಹೇಗೆ “Spoken Tutorial Project” ಎಂದು ವಿಸ್ತೃತಗೊಳ್ಳುತ್ತದೆ ಎಂಬುದನ್ನು ನೋಡೋಣ.
08:46 ಈಗ ಮೆನ್ಯುಬಾರ್ ನಲ್ಲಿ “Format” ಎಂಬುದರ ಮೇಲೆ ಕ್ಲಿಕ್ ಮಾಡಿ ಅಲ್ಲಿ “AutoCorrect” ಎಂಬಲ್ಲಿ ಹೋಗಿ ನಂತರ “AutoCorrect Options” ನ ಮೇಲೆ ಕ್ಲಿಕ್ ಮಾಡಿ.
08:57 ಈಗ ಕಾಣಿಸುವ ಡಯಲಾಗ್ ಬಾಕ್ಸ್ ನಲ್ಲಿ “Replace” ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡಿ.
09:02 ನಮ್ಮ ಭಾಷೆಯ ಆಯ್ಕೆಯಾಗಿ “English USA” ಎಂಬುದು ಇದೇಯೇ ಎಂದು ಪರಿಶೀಲಿಸಿ.
09:06 ಈಗ “Replace” ಎಂಬ ಜಾಗದಲ್ಲಿ ಸಂಕ್ಷೇಪವನ್ನು ಅಂದರೆ “stp” ಯನ್ನು ಟೈಪ್ ಮಾಡಿ.
09:14 “With” ಎಂಬ ಜಾಗದಲ್ಲಿ ವಿಸ್ತೃತರೂಪವಾದ “Spoken Tutorial Project” ಎಂದು ಟೈಪ್ ಮಾಡಿ.
09:20 ಡಯಲಾಗ್ ಬಾಕ್ಸ್ ನಲ್ಲಿ “New” ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
09:24 ನೀವು ಅದು ರೀಪ್ಲೇಸ್ಮೆಂಟ್ ಟೇಬಲ್ ನಲ್ಲಿ ಎಂಟ್ರಿಯಾಗಿರುವುದನ್ನು ನೋಡಬಹುದು.
09:28 ಈಗ “OK” ಬಟನ್ ಮೇಲೆ ಕ್ಲಿಕ್ ಮಾಡಿ.
09:31 ಈಗ ನಾವು “This is a stp” ಎಂದು ಬರೆದು ಸ್ಪೇಸ್ ಬಾರ್ ಒತ್ತುತ್ತಿದ್ದಂತೆಯೇ “stp” ಎಂಬ ಸಂಕ್ಷೇಪವು “Spoken Tutorial Project” ಎಂಬುದಾಗಿ ವಿಸ್ತೃತಗೊಳ್ಳುತ್ತದೆ.
09:43 ಈ ವೈಶಿಷ್ಟ್ಯವು ಒಂದು ಡಾಕ್ಯುಮೆಂಟ್ ನಲ್ಲಿ ಒಂದು ದೀರ್ಘ ಪದವು ಅನೇಕ ಬಾರಿ ಬಂದಿದ್ದಲ್ಲಿ ಬಹಳ ಸಹಾಯಕವಾಗುತ್ತದೆ.
09:49 ಈಗ ಬದಲಾವಣೆಗಳನ್ನು ಅಂಡು ಮಾಡೋಣ.
09:52 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದೆವು.
09:57 ಸಾರಾಂಶವಾಗಿ ಹೇಳುವುದಾದರೆ, ನಾವು ಈವರೆಗೆ,
10:00 ಫೈಂಡ್ ಮತ್ತು ರೀಪ್ಲೇಸ್
10:01 ಸ್ಪೆಲ್ ಚೆಕ್
10:02 ಅಟೋ ಕರಕ್ಟ್ ಎಂಬ ವೈಶಿಷ್ಟ್ಯಗಳ ಬಗ್ಗೆ ಕಲಿತೆವು.
10:04 ನಿಮಗೊಂದು ಅಭ್ಯಾಸ.
10:06 ಈ ಮುಂದಿನ ಟೆಕ್ಸ್ಟ್ ಅನ್ನು ರೈಟರ್ ನಲ್ಲಿ ಟೈಪ್ ಮಾಡಿ - ”This is a new document. The document deals with find and replace”.
10:15 ಈಗ “document” ಎಂಬ ಪದವನ್ನು ಫೈಂಡ್ ಮತ್ತು ರೀಪ್ಲೇಸ್ ವೈಶಿಷ್ಟ್ಯವನ್ನುಪಯೋಗಿಸಿ “file” ಎಂಬ ಪದಕ್ಕೆ ಬದಲಾಯಿಸಿ.
10:21 ನಿಮ್ಮ ಡಾಕ್ಯುಮೆಂಟ್ ನಲ್ಲಿ “text” ಎಂಬ ಪದವನ್ನು “t x t” ಎಂದು ರೀಪ್ಲೇಸ್ ಮಾಡಿ.
10:27 ”text” ಎಂಬುದರ ಸ್ಪೆಲ್ ಅನ್ನು ಸರಿಪಡಿಸಲು Spellcheck ವೈಶಿಷ್ಟ್ಯವನ್ನು ಉಪಯೋಗಿಸಿ.
10:31 English(USA) ಎಂಬುದನ್ನು ನಿಮ್ಮ ಡೀಫಾಲ್ಟ್ ಭಾಷೆಯಾಗಿ ಉಪಯೋಗಿಸಿ.
10:36 AutoCorrect ವೈಶಿಷ್ಟ್ಯದ ಸಹಾಯದಿಂದ “This is LibreOffice Writer” ಎಂಬುದಕ್ಕೆ “TLW” ಎಂಬ ಸಂಕ್ಷೇಪವನ್ನು ಕೊಟ್ಟು ಪರಿಶೀಲಿಸಿ.
10:48 ಈ ಕೆಳಗಿನ ಲಿಂಕ್ ನಲ್ಲಿ ಸಿಗುವ ವಿಡೀಯೋ ವನ್ನು ನೋಡಿ, ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ಹೇಳುತ್ತದೆ.
10:55 ನಿಮ್ಮಲ್ಲಿ ಉತ್ತಮ ಬ್ಯಾಂಡ್ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ಲೋಡ್ ಮಾಡಿ ನೋಡಿ.
10:59 ಸ್ಪೋಕನ್ ಟ್ಯುಟೋರಿಯಲ್ ಗಣವು ಈ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರವನ್ನು ನಡೆಸುತ್ತದೆ. ಆನ್ ಲೈನ್ ಪರೀಕ್ಷೆಯಲ್ಲಿ ಯಾರು ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
11:09 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಎಂಬ ಈಮೇಲ್ ಗೆ ಬರೆಯಿರಿ.
11:15 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟಾಕ್ ಟು ಅ ಟೀಚರ್ ಎಂಬ ಪ್ರಾಜೆಕ್ಟ್ ನ ಭಾಗವಾಗಿದೆ.
11:19 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
11:27 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
11:38 ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ.

Contributors and Content Editors

Vasudeva ahitanal