LibreOffice-Suite-Math/C2/Markup-Language-for-writing-formula-Formula-Formatting/Kannada

From Script | Spoken-Tutorial
Jump to: navigation, search
Time Narration
00:00 ಲಿಬ್ರೆ ಆಫೀಸಿನ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ.
00:04 ಈ ಟ್ಯುಟೊರಿಯಲ್ ನಲ್ಲಿ ನಾವು ಕಲಿಯುವ ವಿಷಯಗಳು ಇಂತಿವೆ:
00:08 ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್, ಅಲೈನ್ಮೆಂಟ್, ಹಾಗು ಸ್ಪೇಸಿಂಗ್.
00:18 ಕಳೆದ ಟ್ಯುಟೊರಿಯಲ್ ನಲ್ಲಿ ನಾವು ಮ್ಯಾತ್ ನ ಮಾರ್ಕಪ್ ಲಾಂಗ್ವೇಜ್ ಅನ್ನು ಪರಿಚಯಿಸಿದ್ದೆವು.
00:24 ಈಗ ಮಾರ್ಕಪ್ ಲಾಂಗ್ವೆಜ್ ನ ಬಗ್ಗೆ ಮತ್ತಷ್ಟು ಕಲಿಯೋಣ.
00:28 ಮೊದಲು ನಾವು ಒಂದು ರೈಟರ್ ಡಾಕ್ಯುಮೆಂಟ್ ಒಪನ್ ಮಾಡಿ ಅದರಲ್ಲಿ ಮ್ಯಾತ್ ಅಪ್ಪ್ಲಿಕೇಶನ್ ಅನ್ನು ತರಿಸೋಣ.
00:35 ರೈಟರ್ ಮೆನು ಮೊದಲೇ ಒಪನ್ ಆಗಿದ್ದಲ್ಲಿ ಇನ್ಸೆರ್ಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಆಬ್ಜೆಕ್ಟ್ ಅನ್ನು ಆಯ್ಕೆ ಮಾಡಿ ಫಾರ್ಮುಲಾವನ್ನು ಆಯ್ಕೆ ಮಾಡಿ.
00:46 ರೈಟರ್ ಒಪೆನ್ ಆಗಿರದಿದ್ದಲ್ಲಿ ಅದನ್ನು ವಿಂಡೋಸ್ ನ ಸ್ಟಾರ್ಟ್ ಮೆನುವಿನಿಂದ ಒಪನ್ ಮಾಡಬಹುದು.
00:55 ಎಲೆಮೆಂಟ್ಸ್ ವಿಂಡೋ ವನ್ನು ಬಳಸುವುದು , ಫಾರ್ಮುಲಾ ಬರೆಯಲು ಅತೀ ಸುಲಭ ವಿಧಾನ.
01:01 ಆದರೆ ನೇರವಾಗಿ ಫಾರ್ಮುಲಾ ಎಡಿಟರ್ ನಲ್ಲಿ ಮಾರ್ಕಪ್ ಲ್ಯಾಂಗ್ವೇಜ್ ನಿಂದ ಬರೆಯುವುದು ಅತೀ ವೇಗದ

ವಿಧಾನ.

01:10 ಯಾಕೆಂದರೆ ಮಾರ್ಕಪ್ ಲ್ಯಾಂಗ್ವೇಜ್ ನಲ್ಲಿ ಫಾರ್ಮುಲ ನಾವು ಸಹಜವಾಗಿ ಆಂಗ್ಲ ಭಾಷೆಯಲ್ಲಿ ಹೇಳುವ ವಾಕ್ಯದಂತಿರುತ್ತದೆ.
01:18 ಉದಾಹರಣೆಗೆ : " 4 ಇಂಟು 3 " ಅನ್ನು ಬರೆಯಲು , ಫಾರ್ಮುಲಾ ಎಡಿಟರ್ ವಿಂಡೋ ನಲ್ಲಿ ನಾವು ಟೈಪ್

ಮಾಡಬೇಕಾದ್ದು " 4 ಟೈಮ್ಸ್ 3 " ಎಂದು.

01:28 ಮುಂದಿನ ಉದಾಹರಣೆಗೆ ಹೋಗುವ ಮುನ್ನ ನಾವು ಇಲ್ಲಿ ಬ್ಲ್ಯಾಂಕ್ ಲೈನ್ ಅನ್ನು ಇನ್ಸರ್ಟ್ ಮಾಡುವ ಬಗ್ಗೆ ತಿಳಿಯೋಣ.
01:36 ಮಾರ್ಕಪ್ನಲ್ಲಿ ಸರಳವಾಗಿ “ನ್ಯೂ ಲೈನ್" ಎಂದು ಟೈಪ್ ಮಾಡಿ ಮತ್ತು ರೈಟರ್ ನ ಗ್ರೇ ಬಾಕ್ಸ್ ನಲ್ಲಿ ಒಂದು

ಹೊಸ ಲೈನ್ ಬಂದಿರುವುದನ್ನು ಗಮನಿಸಿ.

01:46 ಈಗ ನಾವು "ಸಮ್ ಮೋರ್ ಎಕ್ಸಾಂಪಲ್ ಫಾರ್ಮುಲೇ; ನ್ಯೂ ಲೈನ್ " ಎಂದು ಟೈಪ್ ಮಾಡೋಣ.
01:51 ಸುಲಭ ಓದುವಿಕೆಗಾಗಿ ಎಂಟರ್ ಕೀಲಿಯನ್ನು ಪ್ರೆಸ್ಸ್ ಮಾಡೋಣ.
01:57 ಮತ್ತು " x ಗ್ರೇಟರ್ ದ್ಯಾನ್ ಈಕ್ವಲ್ ಟೊ y" ಎಂದು ಟೈಪ್ ಮಾಡಿ.
02:03 ಇಲ್ಲಿ ನಾವು ಫಾರ್ಮುಲಾವನ್ನು ನಂಬರ್ ಮಾಡೋಣ.
02:07 ಆದ್ದರಿಂದ, " 1. x ಗ್ರೇಟರ್ ದ್ಯಾನ್ ಈಕ್ವಲ್ ಟೊ y ನ್ಯೂ ಲೈನ್ ಎಂದು ಟೈಪ್ ಮಾಡಿ ಎಂಟರ್ ಪ್ರೆಸ್ಸ್

ಮಾಡಿ.

02:18 ಗ್ರೇ ಬಾಕ್ಸ್ ನ ಕಂಟೆಂಟ್ಸ್ ರೆಫ್ರೆಶ್ ಹಾಗು ಸೆಂಟರಡ್ ಆಗಿರುವುದನ್ನು ಕಾಣಬಹುದು.
02:25 ನಂತರ : "a ಟು ದ ಪವರ್ ಆಫ್ 2" ಎಂದು ಬರೇಯೋಣ.
02:30 ಮತ್ತು ಇದರ ಮಾರ್ಕಪ್ "2. 'ಏ' ಮೇಲೆಕ್ಕೆ ತೋರುವ ಒಂದು ಆರೊ 10 ' ನ್ಯೂ ಲೈನ್ " ಮತ್ತು ಎಂಟರ್ ಪ್ರೆಸ್ಸ್ ಮಾಡಿ .
02:42 ರೈಟರ್ ನ ಗ್ರೇ ಬಾಕ್ಸ್ನಲ್ಲಿ ಮ್ಯಾಥಮೆಟಿಕಲ್ ಚಿಹ್ನೆಯನ್ನು ಗಮನಿಸಿ.
02:48 ಈಗ ನಾವು " ಸ್ಕ್ವೇರ್ ರೂಟ್ ಆಫ್ 16 = 4" ಎಂಬುದನ್ನು ಬರೆಯೋಣ.
02:55 ಇದಕ್ಕಾಗಿ " 3. Sqrt '16' ಕರ್ಲೀ ಬ್ರಾಕೆಟ್ಸ್ ನ ಒಳಗೆ ಈಕ್ವಲ್ಸ್ 4 ನ್ಯೂ ಲೈನ್"ಎಂದು ಟೈಪ್ ಮಾಡಿ,

ಎಂಟರ್ ಪ್ರೆಸ್ಸ್ ಮಾಡಿ.

03:06 ಈ ಫಾರ್ಮುಲಾವನ್ನು ಗ್ರೇ ಬಾಕ್ಸ್ನಲ್ಲಿ ಗಮನಿಸಿ.
03:10 ಈಗ ನಾವು a1+a2+a3 ಹಾಗೆಯೆ+’an’ ಅನ್ನು ನಿರ್ದೇಶಿಸಲು, ‘a suffix n’ ಸಮ್ಮೇಶನ್ ಚಿಹ್ನೆಯನ್ನು ಬರೆಯೋಣ.
03:28 ಇದಕ್ಕೆ ಮಾರ್ಕಪ್ : ' 4. sum a_n , ನ್ಯೂ ಲೈನ್ " ಎಂಟರ್ ಪ್ರೆಸ್ಸ್ ಮಾಡಿ.
03:37 ಈಗ ನಾವು ಒಂದು ಇಂಟೆಗ್ರಲ್ ಫಂಕ್ಷನ್ ಬರೆಯಲು ಪ್ರಯತ್ನಿಸೋಣ . "integral fx dx" ಗೆ ಮಾರ್ಕಪ್ ಬರೆಯಲು : '

5 . ಇಂಟ್ ಎಫ್ ಎಕ್ಸ್ ಡೀ ಎಕ್ಸ್, ನ್ಯೂ ಲೈನ್ '

03:54 ರೈಟರ್ ನಲ್ಲಿ ಇಂಟೆಗ್ರಲ್ ಚಿಹ್ನೆಯನ್ನು ಗಮನಿಸಲು ಮರೆಯದಿರಿ.
04:00 ಈಗ ನಮ್ಮ ಕೆಲಸವನ್ನು ಸೇವ್ ಮಾಡೋಣ . ಮೇಲಿನ ಫೈಲ್ ಮೆನುವಿಗೆ ಹೋಗಿ , ಸೇವ್ ಅನ್ನು ಕ್ಲಿಕ್ ಮಾಡಿ.
04:09 ಡಾಕ್ಯುಮೆಂಟ್ ಅನ್ನು "MATH EXAMPLE 1 " ಎಂದು ನೇಮ್ ಮಾಡಿ.
04:16 ಈಗ ನಾವು ಬರೆದ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡುವ ಪರಿಯನ್ನು ತಿಳಿಯೋಣ.
04:21 ನೀವೆ ಕಾಣುವಂತೆ ಯೆಲ್ಲ ಫಾರ್ಮುಲಾಗಳು ಮಧ್ಯ ಭಾಗಕ್ಕೆ ಅಲೈನ್ ಆಗಿರುತ್ತವೆ ಅವುಗಳ ಮಧ್ಯೆ ಸ್ಪೇಸ್ ಇರುವುದಿಲ್ಲ.
04:28 ನಾವು ಮೇಲ್ಕಾಣುವ ಫಾರ್ಮೆಟ್ ಮೆನುವಿನಿಂದ ಹಲವು ಫಾರ್ಮೆಟ್ ಬದಲಾವಣೆ ಗಳನ್ನು ಮಾಡಬಹುದು.
04:35 ನಾವು ಮೊದಲಿಗೆ ಎಲ್ಲಾ ಫಾರ್ಮುಲಾ ಗಳನ್ನು ಎಡಕ್ಕೆ ಅಲೈನ್ ಮಾಡೋಣ.
04:40 ಇದಕ್ಕಾಗಿ ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಅಲೈನ್ಮೆಂಟ್ ಅನ್ನು ಆಯ್ಕೆ ಮಾಡಿ.
04:46 ಹೊಸಾ ವಿಂಡೋವಿನಲ್ಲಿ "ಲೆಫ್ಟ್ " ಆಪ್ಷನ್ ಕ್ಲಿಕ್ ಮಾಡಿ " ಓ ಕೆ " ಬಟನ್ ಕ್ಲಿಕ್ ಮಾಡಿ .
04:54 ಫಾರ್ಮುಲಾ ಗಳೂ ಎಡಕ್ಕೆ ಅಲೈನ್ ಆಗಿರುವುದನ್ನು ಗಮನಿಸಿ.
04:58 ನಾವು ಫಾಂಟ್ ಸ್ಟೈಲ್ ಅನ್ನು ಫಾರ್ಮೆಟ್ ಮೆನುವಿನ ‘ಫಾಂಟ್’ ಆಪ್ಸನ್ ಅಲ್ಲಿ ಕಾಣಾಬಹುದು.
05:06 ಇಲ್ಲಿರುವ ಹಲವು ಕೆಟಗರಿಗಳನ್ನು ಗಮನಿಸಿ.
05:10 ನಾವು ವರಿಯಬಲ್ಸ್ , ಫಂಕ್ಷನ್ಸ್ , ನಂಬರ್ ಗಳು ಹಾಗು ಟೆಕ್ಸ್ಟ್ ಗಳಿಗೆ ವಿವಿಧ ಫಾಂಟ್ ಅನ್ನು ಸೆಟ್ ಮಾಡಬಹುದು.
05:23 ಫಾಂಟ್ ಸ್ಟೈಲ್ ಅನ್ನು ಬದಲಾಯಿಸಲು ಮಾಡಿಫೈ ಬಟ್ಟನ್ ಕ್ಲಿಕ್ ಮಾಡಿ ಕಟೆಗರಿ ವರಿಯಬಲ್ಸ್ ಅನ್ನು ಆಯ್ಕೆ ಮಾಡಿ.
05:34 ಲಿಸ್ಟ್ ನಲ್ಲಿ ಎರಿಯಲ್ ಬ್ಲಾಕ್ ಅನ್ನು ಆಯ್ಕೆ ಮಾಡಿ ಓ ಕೆ ಕ್ಲಿಕ್ ಮಾಡಿ.
05:43 ಮತ್ತು - ಫಾಂಟ್ ನ್ನು ಸೇವ್ ಮಾಡಲು ಇಲ್ಲಿರುವ ಓಕೇ ಬಟನ್ ಕ್ಲಿಕ್ ಮಾಡಿ.
05:50 ರೈಟರ್ ಗ್ರೇ ಬಾಕ್ಸ್ ನಲ್ಲಿ ಫಾಂಟ್ ಬದಲಾವಣೆ ಗಳನ್ನು ಗಮನಿಸಿ.
05:56 ಫಾಂಟ್ ಗಾತ್ರವನ್ನು ಹೆಚ್ಚಿಸಲು ,ಫಾರ್ಮೆಟ್ ಮೆನು ವಿಗೆ ಹೋಗಿ ,ಫಾಂಟ್ ಸೈಜ್ ನ ಮೇಲೆ ಕ್ಲಿಕ್ ಮಾಡಿ.
06:06 ಬೇಸ್ ಗಾತ್ರವನ್ನು ‘18 ಪಾಯಿಂಟ್’ ಗೆ ಜಾಸ್ತಿ ಮಾಡಿ , ಓ ಕೆ ಬಟ್ಟನ್ ಕ್ಲಿಕ್ ಮಾಡಿ.
06:15 ವಿವಿಧ ಕೆಟಗರಿಗಳಾದ ಟೆಕ್ಸ್ಟ್ ,ಇಂಡೆಕ್ಸೆಸ್ ಅಥವಾ ಆಪ್ರೆಟರ್ಸ್ ನ ರೆಲೆಟಿವೆ ಗಾತ್ರವನ್ನು ಬದಲಿಸಬಹುದು.
06:25 ನಾವು ಡೀಫಾಲ್ಟ್ ಬಟನ್ ಬಳಸಿ ಹಿಂದೆ ಮಾಡಿದ ಯಾವುದೇ ಫಾಂಟ್ ಬದಲಾವಣೆಗಳನ್ನು ಸರಿಪಡಿಸಬಹುದು.
06:32 ಫಾರ್ಮುಲೆ ನ ಫಾಂಟ್ ಗಾತ್ರ ಬದಲಿಯಾಗಿರುವುದನ್ನು ಗಮನಿಸಿ.
06:37 ಈಗ, ಫಾರ್ಮುಲೆ ಸ್ಪೇಸಿಂಗನ್ನು ಬದಲು ಮಾಡೋಣ.
06:42 ಫಾರ್ಮೆಟ್ ಮೆನುವಿನ ಮೇಲೆ ಕ್ಲಿಕ್ ಮಾಡಿ ಸ್ಪೇಸಿಂಗ್ ಆಪ್ಶನ್ ಅನ್ನು ಆಯ್ಕೆ ಮಾಡಿ.
06:47 ಸ್ಪೇಸಿಂಗ್, ಲೈನ್ ಸ್ಪೇಸಿಂಗ್ ಹಾಗು ರೂಟ್ ಸ್ಪೇಸಿಂಗಳನ್ನು 20 ಶೇಕಡ ಬದಲಾಯಿಸೋಣ.
06:56 ನಾವು ಪ್ರತೀ ಸ್ಪೇಸಿಂಗ್ ವಿಧದ ಮೇಲೆ ಕ್ಲಿಕ್ ಮಾಡಿದಾಗಲೂ , ಮಧ್ಯ ಭಾಗದಲ್ಲಿರುವ ಚಿತ್ರವು ಸ್ಪೇಸಿಂಗ್ ಶೈಲಿಯ ಲೋಕೇಶನ್ ತೋರಿಸುತ್ತದೆ.
07:05 ಕೆಟಗರಿ ಬಟ್ಟನ್ ಮೇಲೆ ಕ್ಲಿಕ್ ಮಾಡಿ ಮತ್ತೇ ಸ್ಪೇಸಿಂಗ್ ವಿಧಗಳನ್ನು ಆಯ್ಕೆ ಮಾಡುವೆವು.
07:16 ಅಥವಾ ಡೀಫಾಲ್ಟ್ ಬಟನ್ ಬಳಸಿ ನಾವು ಮಾಡಿರುವ ಬದಲಾವಣೆಗಳನ್ನು ಸರಿಪಡಿಸಬಹುದು.
07:22 ಈಗ ಓಕೆ ಬಟನ್ ಮೇಲೆ ಕ್ಲಿಕ್ ಮಾಡೋಣ.
07:25 ರೈಟರ್ ನ ಗ್ರೇ ಬಾಕ್ಸ್ ನಲ್ಲಿ ಸ್ಪೇಸಿಂಗ್ ನ ಬದಲಾವಣೆಗಳನ್ನು ಗಮನಿಸಿ.
07:30 ಇತರೆ ಫಾರ್ಮೆಟಿಂಗಳು ಎಲೆಮೆಂಟ್ಸ್ ವಿಂಡೊ ವಿನಲ್ಲಿ ಕಾಣಬಹುದು.
07:36 ವ್ಯುವ್ ಮೆನುವಿನಿಂದ ಎಲೆಮೆಂಟ್ಸ್ ವಿಂಡೊ ವನ್ನು ಕರೆತರೋಣ.
07:40 ಇಲ್ಲಿ ನಾವು ಕೆಟಗರಿಯ ಎರಡನೇ ಪಂಕ್ತಿಯ ಕೋನೇಯ ಐಕಾನ್ ಮೇಲೆ ಕ್ಲಿಕ್ ಮಾಡೋಣ.
07:47 ಇಲ್ಲಿನ ಟೂಲ್ ಟಿಪ್ ‘ಫಾರ್ಮೆಟ್ಸ್’ ಎಂದು ಹೇಳುತ್ತದೆ.
07:51 ಇದರಲ್ಲಿ , ಸಬ್ ಸ್ಕ್ರಿಪ್ಟ್ ನ ಪ್ಲೇಸ್ ಮೆಂಟ್ ಮತ್ತು ಸೂಪರ್ ಸ್ಕ್ರಿಪ್ಟ್ , ಅಲೈನ್ಮೆಂಟ್ಸ್ , ಮ್ಯಟ್ರಿಕ್ಸ್ , ನ್ಯೂ ಲೈನ್ಸ್

ಹಾಗು ಗ್ಯಾಪ್ಸ್ ಆಯ್ಕೆ ಮಾಡಬಹುದು.

08:03 ಈಗ ನಾವು ನಮ್ಮ 5ನೇ ಉದಾಹರಣೆಯಲ್ಲಿ ಉದ್ದವಾದ ಗ್ಯಾಪ್ ಅನ್ನು ಬರಿಸೋಣ ನಂಬರ್ 5 ರ ನಂತರ . 5ರ ನಂತರ ಕ್ಲಿಕ್ ಮಾಡಿ.
08:13 ಎಲೆಮೆಂಟ್ಸ್ ವಿಂಡೊ ವಿನಿಂದ ಫಾರ್ಮೆಟ್ಸ್ ಮೇಲೆ ಕ್ಲಿಕ್ ಮಾಡಿ > ಲಾಂಗ್ ಗ್ಯಾಪ್ ಆಯ್ಕೆ ಮಾಡಿ.
08:20 ಲಾಂಗ್ ಗ್ಯಾಪ್ ನ ಮಾರ್ಕಪ್ ಕ್ಯಾರೆಕ್ಟರ್ " ಟಿಲ್ಡೆ" ಹಾಗು ಸ್ಮಾಲ್ ಗ್ಯಾಪ್ ಗೆ " ಟೈರೇ".
08:29 ಈಗ 5 ರ ನಂತರ ಹೊಸಾ ಗ್ಯಾಪ್ ಅನ್ನು ಗಮನಿಸಿ.
08:33 ಹಾಗಾಗಿ ಈ ರೀತಿಗಳಿಂದ ನಮ್ಮ ಫಾರ್ಮುಲಾಗಳನ್ನು ಫಾರ್ಮೆಟ್ ಮಾಡಬಹುದು.
08:38 ಮ್ಯಾಥ್ ನಲ್ಲಿ ಸಿಗುವ ಎಲ್ಲಾ ಫಾರ್ಮೆಟಿಂಗ್ ಆಪ್ಶನ್ ಗಳನ್ನು ಬಳಸಲು ಹಿಂಜರಿಯಬೇಡಿ.
08:44 ಸರಿ ಇಗೋ ಇಲ್ಲಿದೇ ನಿಮಗೋಂದು ಕೆಲಸ : -
08:47 ರೈಟರ್ ವಿಂಡೊ ನಲ್ಲಿ ಈ ಫಾರ್ಮುಲಾಗಳಾನ್ನು ಮಾರ್ಕಪ್ ಬಳಸಿ ಬರೆಯಿರಿ.
08:53 Use Elements window if necessary,
08:57 Summation of x to the power of 2,
09:02 Sin to the power of x plus cos to the power of x = 1 ಬೇಕಾದಲ್ಲಿ ಎಲೆಮೆಂಟ್ಸ್ ವಿಂಡೊ ನ ಸಹಾಯ ಪಡೆಯಿರಿ.

Sin to the power of x+cos to the power of x=1(ಎಲೆಮೆಂಟ್ಸ್ ವಿಂಡೊ ನ Functions ಕ್ಯಾಟ್ಗೋರಿ ಸಹಾಯ ಪಡೆಯಿರಿ.

09:15 ಹಿಂದಿನ ಸ್ಲೈಡ್ ನಿಂದ ಮುಂದುವರೆದಿದೆ 1 to n of x summation ಬರೆಯಿರಿ.
09:23 ಆಪ್ರೇಟರ್ಸ್ ಕೆಟಗರಿ ಯಿಂದ ಲಿಮಿಟ್ಸ್ ಅನ್ನು ಸೆಟ್ ಮಾಡಿ.
09:29 ಫಾಂಟ್ ಅನ್ನು ಅರಿಯಲ್ ಗೆ ಹಾಗು ಗಾತ್ರ ವನ್ನು 18 ಕ್ಕೆ ಬದಲಾಯಿಸಿ.
09:35 ಚಿಹ್ನೆ ಗಳ ನಡುವೆ ಆದಷ್ಟು ಸ್ಪೇಸಿಂಗ್ ನೀಡಿರಿ.
09:40 ಇದರೊಂದಿಗೆ  ; ಮಾರ್ಕಪ್ ಲಾಂಗ್ವೆಜ್ ಪರಿಚಯ ದ ಸ್ಪೊಕನ್ ಟ್ಯುಟೊರಿಯಲ್ ನ ಮುಕ್ತಾಯಕ್ಕೆ ಬಂದಿರುವೆವು.
09:49 ನಾವು ಕಲಿತದ್ದನ್ನು ಸಂಕ್ಷಿಪ್ತವಾಗಿ ತಿರುವು ಹಾಕೋಣ.
09:52 ಫಾರ್ಮುಲಾಗಳನ್ನು ಬರೆಯಲು ಮಾರ್ಕಪ್ ಲಾಂಗ್ವೆಜ್ ಮತ್ತು ಫಾರ್ಮುಲಾ ಫಾರ್ಮೆಟಿಂಗ್ : ಫಾಂಟ್ಸ್ ,ಅಲೈನ್ಮೆಂಟ್ ,ಹಾಗು ಸ್ಪೇಸಿಂಗ್.
10:01 ಸ್ಪೋಕನ್ ಟುಟೊರಿಯಲ್ ಪ್ರೋಜಕ್ಟ್ ಎಂಬುದು ಟಾಕ್ ಟು ಎ ಟೀಚರ್ ನ ಒಂದು ಭಾಗ,ಇದಕ್ಕೆ ಐ.ಸಿ.ಟಿ ಮೂಲಕ ಸಫೋರ್ಟ್ ಮಾಡಿದವರು "ನ್ಯಾಷನಲ್ ಮಿಶನ್ ಆನ್ ಎಜುಕೇಷನ್",ಭಾರತ ಸರ್ಕಾರ.
10:14 ಈ ಪ್ರಾಜೆಕ್ಟ್ ಅನ್ನು ಏರ್ಪಡಿಸಿದವರು http://spoken-tutorial.org.
10:19 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಹೋಗಬಹುದು http://spoken-tutorial.org/NMEICT-Intro.
10:23 ಈ ಸ್ಕ್ರಿಪ್ಟ್ ಅನ್ನು ಸಾದರಪಡಿಸಿದವರು ಪ್ರಿಯಾ ಸುರೇಶ್ , ಡೇಸಿ ಕ್ರೀವ್ ಸಲ್ಯುಷನ್ಸ್, ಮತ್ತು ದ್ವನಿ ರಿಯಾ ವಿದಾಯ ಹೇಳುತ್ತೇನೆ.
10:33 ವಂದನೆಗಳು.

Contributors and Content Editors

Pratik kamble, Sandhya.np14, Udaya, Vasudeva ahitanal