LibreOffice-Suite-Calc/C3/Linking-Calc-Data/Kannada

From Script | Spoken-Tutorial
Jump to: navigation, search
Time Narration
00:00 ಲೀಬ್ರ್ ಆಫಿಸ್ ಕ್ಯಾಲ್ಕ್ ನಲ್ಲಿ ಕ್ಯಾಲ್ಕ್ ಗಳ ಪರಸ್ಪರ ಲಿಂಕಿಂಗ್ ಅನ್ನು ಕಲಿಯುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ಈ ಕೆಳಗಿನವುಗಳನ್ನು ಕಲಿಯಲಿದ್ದೇವೆ:
00:10 ಕ್ಯಾಲ್ಕ್ ನಲ್ಲಿ ಬೇರೆ ಶೀಟ್ ಗಳ ರೆಫ್ರೆನ್ಸ್,
00:13 ಹೈಪರ್ ಲಿಂಕ್ ಗಳ ಉಪಯೋಗ.
00:17 ಇಲ್ಲಿ ನಾವು ಉಬಂಟು ಲಿನಕ್ಸ್ ನ 10.04 ಆವೃತ್ತಿ ಮತ್ತು ಲೀಬ್ರೆ ಆಫಿಸ್ ಸೂಟ್ ನ 3.3.4 ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
00:29 ಲಿಬ್ರೆ ಆಫಿಸ್ ಕ್ಯಾಲ್ಕ್ ನಿಮಗೆ
00:33 ಬೇರೆ ಶೀಟ್ ನಲ್ಲಿನ ಸೆಲ್ ಅನ್ನು ಪ್ರಚಲಿತದಲ್ಲಿರುವ ಶೀಟ್ ನಲ್ಲಿ ರೆಫ್ರೆನ್ಸ್ ಮಾಡಲು,
00:37 ಇಲ್ಲಿ,ಎರಡು ಸ್ಪ್ರೆಡ್ ಶೀಟ್ ಗಳನ್ನು ಸೇವ್ ಮಾಡಿದಾದಲ್ಲಿ ಬೇರೆ ಸ್ಪ್ರೆಡ್ ಶೀಟ್ ನ ಸೆಲ್ ಅನ್ನು ಕೂಡ ರೆಫ್ರೆನ್ಸ್ ಮಾಡಲು ಅವಕಾಶವನ್ನು ಮಾಡಿಕೊಡುತ್ತದೆ.
00:44 Personal-Finance-Tracker.ods ಅನ್ನು ಓಪನ್ ಮಾಡೋಣ.
00:49 ನಮ್ಮ ಫೈಲ್ ನಲ್ಲಿರುವ sheet 1, Personal Finance Tracker ನ ಸ್ಪ್ರೆಡ್ ಶೀಟ್ ಅನ್ನು ಹೊಂದಿದೆ.
00:55 “Spent” ಮತ್ತು “Received” ಕಲಮ್ ಗಳಲ್ಲಿ ನಾನು ಕೆಲವೊಂದಿಷ್ಟು ಮೊತ್ತಗಳನ್ನು ಸೇರಿಸಿದ್ದೇನೆ.
01:04 “Cost” ಮತ್ತು “Spent” ನ ಅಡಿಯಲ್ಲಿರುವ ಅಂಶಗಳ ಒಟ್ಟು ಮೊತ್ತವನ್ನು ಕ್ರಮವಾಗಿ ಕಂಡು ಹಿಡಿಯೋಣ.
01:11 C9 ಸೆಲ್ ಅನ್ನು ಕ್ಲಿಕ್ ಮಾಡೋಣ ಮತ್ತು “ಸಮ ಚಿನ್ಹೆ SUM” ಎಂಬ ಸೂತ್ರವನ್ನು ಮತ್ತು ಬಂಧಕದೊಳಗೆ(ಬ್ರೆಸಸ್) “C3 ವಿವರಾಣಾತ್ಮಕ ಚಿನ್ಹೆ C7” ಎಂದು ನಮೂದಿಸೋಣ.
01:24 ಅನಂತರ “Enter” ಕೀಲಿಯನ್ನು ಒತ್ತಿರಿ.
01:27 D9 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಹಿಂದಿನ ಸೂತ್ರವನ್ನೇ ಬಳಸಿ ಮೊತ್ತವನ್ನು ಕಂಡು ಹಿಡಿಯಿರಿ.
01:36 ಈಗ, ಸೆಲ್ ರೆಫ್ರೆನ್ಸಿಂಗ್ ಅನ್ನು ಬಳಸಿ, ಹೊಸ ಸ್ಪ್ರೆಡ್ ಶೀಟ್ ನಲ್ಲಿ “Cost” ಮತ್ತು “Spent” ನ ಅಡಿಯಲ್ಲಿನ ಅಂಶಗಳ ಮೊತ್ತವನ್ನು ಪ್ರದರ್ಶಿಸೋಣ.
01:45 “Sheet 2” ಟ್ಯಾಬ್ ಅನ್ನು ಕ್ಲಿಕ್ ಮಾಡಿ.
01:48 ಈಗ ಹೊಸ ಶೀಟ್ ಓಪನ್ ಆಗಿದೆ.
01:51 A1 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅದರೊಳಗೆ COMPONENT ಎನ್ನುವ ಶೀರ್ಷಿಕೆಯನ್ನು(ಹೆಡ್ಡಿಂಗ್) ನಮೂದಿಸಿ.
02:00 B1 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ BALANCE ಎನ್ನುವ ಶೀರ್ಷಿಕೆಯನ್ನು ನಮೂದಿಸಿ.
02:07 ಶೀರ್ಷಿಕೆಗಳ ಅಡಿಯಲ್ಲಿ , ಅಂಶಗಳ(ಕಾಂಪೊನೆಂಟ್) ಹೆಸರುಗಳನ್ನು ನಮೂದಿಸೋಣ.
02:12 A3 ಕೋಶವನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ “COST” ಎಂದು ನಮೂದಿಸಿ . Enter ಕೀಲಿಯನ್ನು ಒತ್ತಿರಿ.
02:19 “COST”, ನ ಅಡಿಯಲ್ಲಿ “SPENT” ಎನ್ನುವ ಅಂಶವನ್ನು A4 ಸೆಲ್ ನಲ್ಲಿ ನಮೂದಿಸಿ.
02:27 ಈಗ, ಖಾಲಿಯಿರುವ B3 ಸೆಲ್ ಅನ್ನು ಕ್ಲಿಕ್ ಮಾಡಿ.
02:31 B3 ಮತ್ತು B4 ಸೆಲ್ ಗಳು COST ಮತ್ತು SPENT ಶೀರ್ಷಿಕೆಯ ಅಡಿಯಲ್ಲಿ ,
02:38 “Sheet 1” ನಲ್ಲಿ ಲೆಕ್ಕಾಚಾರ ಮಾಡಿದ ರೀತಿಯಲ್ಲಿ ಸಂಪೂರ್ಣ ಮೊತ್ತವನ್ನು ಪ್ರದರ್ಶಿಸುತ್ತವೆ.
02:41 ಇದು ರೆಫ್ರೆನ್ಸಿಂಗ್ ನಿಂದ ಸಾಧ್ಯ.
02:44 B3 ಸೆಲ್ ನಲ್ಲಿ ರೆಫ್ರೆನ್ಸ್ ಅನ್ನು ಮಾಡಲು, ಇನ್ ಪುಟ್ ಲೈನ್ ನ ಬದಿಯಲ್ಲಿರುವ “ ಸಮ ” ಚಿನ್ಹೆಯನ್ನು ಕ್ಲಿಕ್ ಮಾಡಿ.
02:53 ಈಗ, ಶೀಟ್ ಟ್ಯಾಬ್ ನಲ್ಲಿ Sheet 1 ಅನ್ನು ಕ್ಲಿಕ್ ಮಾಡಿ.
02:59 ಈ ಶೀಟ್ ನಲ್ಲಿ ನಾವು Costs ಶೀರ್ಷಿಕೆಯ ಅಡಿಯಲ್ಲಿ ಒಟ್ಟು ಮೊತ್ತವನ್ನು ಹೊಂದಿರುವ C9 ಸೆಲ್ ಅನ್ನು ಕ್ಲಿಕ್ ಮಾಡೋಣ.
03:07 ಇನ್ ಪುಟ್ ಲೈನ್ ನಲ್ಲಿ Sheet 1 dot C9 ಎನ್ನುವುದು ಪ್ರದರ್ಶಿತವಾಗಿರುವುದನ್ನು ಗಮನಿಸಿ.
03:15 ಇನ್ ಪುಟ್ ಲೈನ್ ಪಕ್ಕದಲ್ಲಿನ “ ಅನ್ವೇಷಕ(ಚೆಕ್) ” ಚಿನ್ಹೆಯನ್ನು ಕ್ಲಿಕ್ ಮಾಡಿ.
03:20 “Sheet 1” ಟ್ಯಾಬ್ ನಲ್ಲಿರುವ “Costs” ಶೀರ್ಷಿಕೆಯ ಅಡಿಯಲ್ಲಿನ ದತ್ತಾಂಶಗಳ(ಡೇಟಾ) ಒಟ್ಟು ಮೊತ್ತ “Sheet 2 “ ಟ್ಯಾಬ್ ನ B3 ಸೆಲ್ ನಲ್ಲಿ ತಾನಾಗಿಯೇ ನಮೂದಿತವಾಗಿರುವುದನ್ನು ಗಮನಿಸಿ.
03:34 ಹೀಗೆಯೇ , ಇತರ ದತ್ತಾಂಶಗಳ ಒಟ್ಟು ಮೊತ್ತವನ್ನು ರೆಫ್ರೆನ್ಸಿಂಗ್ ಮೂಲಕ ನಮೂದಿಸಬಹುದು.
03:41 ಹೆಚ್ಚಿನ ದತ್ತಾಂಶಗಳನ್ನು ಹೊಂದಿರುವ ಅನೇಕ ಶೀಟ್ ಗಳ ದತ್ತಾಂಶಗಳನ್ನು ಸಂಕ್ಷಿಪ್ತಗೊಳಿಸಲು ರೆಫ್ರೆನ್ಸಿಂಗ್ ಅನ್ನು ಬಳಸಬಹುದು.
03:49 ಈಗ, ಕ್ಯಾಲ್ಕ್ ಶೀಟ್ ನಲ್ಲಿ ಹೈಪರ್ ಲಿಂಕ್ ಗಳನ್ನು ರಚಿಸಲು ಕಲಿಯೋಣ.
03:55 ನೀವು ಹೈಪರ್ ಲಿಂಕ್ ಗಳನ್ನು

ಸ್ಪ್ರೆಡ್ ಶೀಟ್ ಒಳಗಿನ ವಿವಿಧ ಪ್ರದೇಶಗಳಿಗೆ, ವಿವಿಧ ಫೈಲ್ ಗಳಿಗೆ , ಇನ್ನಿತರ ವೆಬ್ ಸೈಟ್ ಗಳಿಗೂ ಹೋಗಲು (jump) ಬಳಸಬಹುದು.

04:06 Personal-Finance-Tracker.ods ನಲ್ಲಿ ಪರ್ಸನಲ್ ಫೈನಾನ್ಸ್ ಟ್ರ್ಯಾಕರ್ Sheet 1 ನಲ್ಲಿಯೂ ಉಳಿದ ಅಂಶಗಳು “Sheet 2” ನಲ್ಲಿಯೂ ಲಭ್ಯ.
04:17 ಈಗ Sheet 1 ರಿಂದ Sheet 2 ಗೆ ಇವುಗಳನ್ನು ಸ್ಥಳಾಂತರಿಸೋಣ.
04:22 ಮೊದಲಿಗೆ, “Sheet 1” ಟ್ಯಾಬ್ ಅನ್ನು ಕ್ಲಿಕ್ ಮಾಡಿ.
04:25 ಇಲ್ಲಿ B14 ಸೆಲ್ ಅನ್ನು ಕ್ಲಿಕ್ ಮಾಡಿ ಮತ್ತು ಅಲ್ಲಿ ”Sheet 2” ಎಂದು ನಮೂದಿಸಿ.
04:33 ಇನ್ ಪುಟ್ ಲೈನ್ ನಲ್ಲಿ “Sheet 2” ಎಂದು ಪ್ರದರ್ಶಿತವಾಗಿರುವುದನ್ನು ಗಮನಿಸಿ.
04:38 ಇನ್ ಪುಟ್ ಲೈನ್ ನಲ್ಲಿನ “Sheet 2” ಎಂಬುವುದನ್ನು ಸೆಲೆಕ್ಟ್ ಮಾಡಿ.
04:44 ಆ ಪಠ್ಯವನ್ನು ಆರಿಸಿದ ನಂತರ ಟೂಲ್ ಬಾರ್ ನಲ್ಲಿನ Hyperlink ಐಕಾನ್ ಅನ್ನು ಕ್ಲಿಕ್ ಮಾಡಿ.
04:51 Hyperlink ಡಯಲಾಗ್ ಬಾಕ್ಸ್ ಕಾಣಿಸುತ್ತದೆ.
04:55 ಎಡ ಬದಿಯಲ್ಲಿನ Document ವಿಕಲ್ಪವನ್ನು ಅನ್ನು ಕ್ಲಿಕ್ ಮಾಡಿ.
04:59 ಡಯಲಾಗ್ ಬಾಕ್ಸ್ ನಲ್ಲಿನ “Target in document” ಐಕಾನ್ ಅನ್ನು ಕ್ಲಿಕ್ ಮಾಡಿ.
05:04 “Target in document” ಡಯಲಾಗ್ ಬಾಕ್ಸ್ ಕಾಣುತ್ತದೆ.
05:08 ಈಗ, Sheet ವಿಕಲ್ಪದ ಬದಿಯಲ್ಲಿನ “ಕೂಡಿಸುವ” ಚಿನ್ಹೆಯನ್ನು ಅನ್ನು ಕ್ಲಿಕ್ ಮಾಡಿ.
05:13 ಪ್ರದರ್ಶಿತವಾಗುವ ಡಯಲಾಗ್ ಬಾಕ್ಸ್ ನಲ್ಲಿನ Sheet 2 ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.
05:18 “Apply” ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು Close ಬಟನ್ ಅನ್ನು ಕ್ಲಿಕ್ ಮಾಡಿ.
05:24 ಈಗ, Hyperlink ಡಯಲಾಗ್ ಬಾಕ್ಸ್ ನಲ್ಲಿ, Apply ಮತ್ತು “Close” ಅನ್ನು ಕ್ಲಿಕ್ ಮಾಡಿ.
05:32 ಒಂದು ಸೆಲ್ ನಲ್ಲಿ “Sheet 2” ಎಂದು ಹೈಲೈಟ್ ಆಗಿರುವ “Sheet 1” ಟ್ಯಾಬ್ ಕಾಣಿಸುತ್ತದೆ.
05:40 ಈಗ, “Sheet 2” ಎಂಬ ಪಠ್ಯದ ಮೇಲೆ ಕ್ಲಿಕ್ ಮಾಡಿ , ಇದು ನಮ್ಮನ್ನು Costs ಗೆ balance ಅನ್ನು ನಮೂದಿಸಿದ ಶೀಟ್ ಗೆ ಒಯ್ಯುತ್ತದೆ.
05:51 ನಾವೀಗ ಹೈಪರ್ ಲಿಂಕ್ ಅನ್ನು ರಚಿಸಿದ್ದೇವೆ!
05:55 ಹೈಪರ್ ಲಿಂಕ್ ಅನ್ನು ತೆಗಿಯಲು, ಹೈಪರ್ ಲಿಂಕ್ ಆಗಿರುವ “Sheet 2” ಪಠ್ಯವನ್ನು ಸೆಲೆಕ್ಟ್ ಮಾಡಿ.
06:01 ರೈಟ್ ಕ್ಲಿಕ್ ಮಾಡಿ ಮತ್ತು ಕಾಂಟೆಕ್ಸ್ಟ್ ಮೆನುವಿನಿಂದ Default Formatting ವಿಕಲ್ಪವನ್ನು ಕ್ಲಿಕ್ ಮಾಡಿ.
06:09 ಈಗ ಆ ಪಠ್ಯ ಹೈಪರ್ ಲಿಂಕ್ ಆಗಿರುವುದಿಲ್ಲ.
06:12 ಈಗದು ಡಾಕಿಮೆಂಟ್ ನಲ್ಲಿರುವ ಒಂದು ಸಾಮಾನ್ಯ ಲಿಖಿತವಷ್ಟೇ.
06:16 ನಾವು ಮಾಡಿರುವ ಬದಲಾವಣೆಗಳನ್ನು undo ಮಾಡೋಣ.
06:20 ಇಲ್ಲಿಗೆ ಲಿಬ್ರೆ ಆಫಿಸ್ ಕ್ಯಾಲ್ಕ್ ನ ಮೇಲಿನ ಈ ಟ್ಯುಟೋರಿಯಲ್ ಮುಕ್ತಾಯವಾಗುತ್ತದೆ.
06:25 ಇಲ್ಲಿ ನಾವು:

ಕ್ಯಾಲ್ಕ್ ನಲ್ಲಿ ಬೇರೆ ಶೀಟ್ ಗಳಿಗೆ ರೆಫ್ರೆನ್ಸ್ ಮಾಡುವುದನ್ನು.

06:31 ಕ್ಯಾಲ್ಕ್ ನಲ್ಲಿ ಹೈಪರ್ ಲಿಂಕ್ ಅನ್ನು ಬಳಸುವುದನ್ನು ಕಲಿತಿದ್ದೇವೆ.
06:36 ಈ ಕೆಳಗಿನ ಲಿಂಕ್ ಗಳನ್ನು ಬಳಸಿ ವೀಡಿಯೋಗಳನ್ನು ನೋಡಿ:
06:40 ಅಲ್ಲಿ ಸ್ಪೋಕನ್ ಟ್ಯುಟೋರಿಯಲ್ ನ ಸಾರಾಂಶವು ಲಭ್ಯವಾಗುತ್ತದೆ.
06:43 ನಿಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
06:47 ಈ ಪಾಠವನ್ನಾಧರಿಸಿ ಸ್ಫೋಕನ್ ಟ್ಯುಟೋರಿಯಲ್ ನ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
06:52 ಯಾರು ಆನ್¬-ಲೈನ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
06:56 ಹೆಚ್ಚಿನ ಮಾಹಿತಿಗಾಗಿ, contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
07:03 ಈ ಪಾಠವು Talk to a Teacher project ಎಂಬ ಪರಿಯೋಜನೆಯ ಭಾಗವಾಗಿದೆ.
07:07 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಶನ್ ICT, MHRD, ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
07:15 ಈ ಮಿಶನ್ ನ ಬಗೆಗಿನ ಹೆಚ್ಚಿನ ಮಾಹಿತಿಯು spoken hyphen tutorial dot org slash NMEICT hyphen Intro ದಲ್ಲಿ ಲಭ್ಯ.
07:25 ಈ ಟ್ಯುಟೋರಿಯಲ್ ನ ಅನುವಾದಕ ಪ್ರಜ್ವಲ್ ಮತ್ತು ಪ್ರವಾಚಕ ಐ.ಐ.ಟಿ ಬಾಂಬೆಯಿಂದ ವಾಸುದೇವ ಧನ್ಯವಾದಗಳು.

Contributors and Content Editors

PoojaMoolya, Pratik kamble, Vasudeva ahitanal