LibreOffice-Suite-Base/C2/Tables-and-Relationships/Kannada

From Script | Spoken-Tutorial
Jump to: navigation, search
Time Narration
00:00 ಲಿಬ್ರೆ ಆಫೀಸ್ ಬೇಸ್ ನ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:04 ಈ ಟ್ಯುಟೋರಿಯಲ್ ನಲ್ಲಿ, ನಾವು ಲಿಬ್ರೆ ಆಫೀಸ್ ಬೇಸ್ ನಲ್ಲಿ ಟೇಬಲ್ಸ್ ಮತ್ತು ರಿಲೇಶನ್ ಶಿಪ್ ನ ಬಗ್ಗೆ ತಿಳಿದುಕೊಳ್ಳಲಿದ್ದೇವೆ.
00:10 ಇಲ್ಲಿ, ನಾವು ಟೇಬಲ್ ನಲ್ಲಿ ಡೇಟಾ ಅನ್ನು ಸೇರಿಸುವುದು,
00:16 ರಿಲೇಶನ್ ಶಿಪ್ ನ ಲಕ್ಷಣ ಮತ್ತು ಅದನ್ನು ತಯಾರಿಸುವುದನ್ನು ಕಲಿಯಲಿದ್ದೇವೆ.
00:19 ಹಿಂದಿನ ಲಿಬ್ರೆ ಆಫೀಸ್ ಬೇಸ್ ಟ್ಯುಟೋರಿಯಲ್ ನಲ್ಲಿ, ಬೇಸ್ ಮತ್ತು ಡೇಟಾ ಬೇಸ್ ನ ಪ್ರಾಥಮಿಕ ಅಂಶವನ್ನು ಪರಿಚಯಿಸಿದ್ದೇವೆ. ಮತ್ತು ಡೇಟಾ ಬೇಸ್ ಮತ್ತು ಟೇಬಲ್ ಅನ್ನು ತಯಾರಿಸುವುದನ್ನು ಕಲಿತಿದ್ದೇವೆ.
00:31 ಆ ಟ್ಯುಟೋರಿಯಲ್ ಕೋರ್ಸ್ ನ ಸಮಯದಲ್ಲಿ ನಾವು ಉದಾಹರಣೆಗಾಗಿ Library ಹೆಸರಿನ ಡೇಟಾ ಬೇಸ್ ಅನ್ನು ತಯಾರಿಸಿದ್ದೇವೆ. ಮತ್ತು ಬುಕ್ಸ್ ಟೇಬಲ್ ಅನ್ನು ಕೂಡ ತಯಾರಿಸಿದ್ದೇವೆ.
00:42 ಈ ಟ್ಯುಟೋರಿಯಲ್ ನಲ್ಲಿ, ನಾವು ಲೈಬ್ರರಿ ಡೇಟಾ ಬೇಸ್ ನಿಂದ ಶುರು ಮಾಡೋಣ. ಮತ್ತು ಟೇಬಲ್ ನಲ್ಲಿ ಡೇಟಾ ಅನ್ನು ಹೇಗೆ ಸೇರಿಸುವುದು ಎಂಬುದನ್ನು ಕಲಿಯೋಣ.
00:51 ಅದಕ್ಕಾಗಿ ಲಿಬ್ರೆ ಆಫೀಸ್ ಬೇಸ್ ಪ್ರೋಗ್ರಾಮ್ ಅನ್ನು ಆರಂಭಿಸೋಣ.
00:57 ಅದಕ್ಕಾಗಿ ನಾವು ಸ್ಕ್ರೀನ್ ನ (ಪರದೆಯ) ಕೆಳಗೆ ಎಡಭಾಗದಲ್ಲಿ Start ಬಟನ್ ಮೇಲೆ ಕ್ಲಿಕ್ ಮಾಡೋಣ.
01:03 All programs ಮೇಲೆ ಕ್ಲಿಕ್ ಮಾಡೋಣ. ಪುನಃ LibreOffice Suite ಮೇಲೆ ಕ್ಲಿಕ್ ಮಾಡೋಣ. ಮತ್ತು LibreOffice Base ಮೇಲೆ ಕ್ಲಿಕ್ ಮಾಡೋಣ.
01:12 ಏಕೆಂದರೆ ನಾವು ಹಿಂದಿನ ಟ್ಯುಟೋರಿಯಲ್ ನಲ್ಲಿ ಈಗಾಗಲೇ ಲೈಬ್ರರಿ ಡೇಟಾ ಬೇಸ್ ಅನ್ನು ತಯಾರಿಸಿದ್ದೇವೆ. ಈಗ ಅದನ್ನು ಓಪನ್ ಮಾಡುವುದಷ್ಟೆ.
01:21 ಇದನ್ನು ಮಾಡಲು, 'open an existing database file' ಆಪ್ಷನ್ ಮೇಲೆ ಕ್ಲಿಕ್ ಮಾಡೋಣ.
01:28 'Recently Used' ಡ್ರಾಪ್ ಡೌನ್ ಬಾಕ್ಸ್ ನಲ್ಲಿ ನಮ್ಮ ಲೈಬ್ರರಿ ಡೇಟಾ ಬೇಸ್ ಸ್ಪಷ್ಟವಾಗಿ ಕಾಣಿಸಬೇಕು (ಇರಬೇಕು).
01:35 ಹಾಗಾಗಿ, ಈಗ Finish ಬಟನ್ ಮೇಲೆ ಕ್ಲಿಕ್ ಮಾಡೋಣ.
01:38 ಇದು ನಿಮಗೆ ಕಾಣಿಸದಿದ್ದರೆ, ನಾವು ವಿಂಡೋಸ್ ಡೈರೆಕ್ಟರಿಯನ್ನು ಬ್ರೌಸ್ ಮಾಡಲು ಮಧ್ಯಭಾಗದಲ್ಲಿರುವ Open ಬಟನ್ ಮೇಲೆ ಕ್ಲಿಕ್ ಮಾಡಬಹುದು. ಅಲ್ಲಿ ಲೈಬ್ರರಿ ಡೇಟಾ ಬೇಸ್ ಸೇವ್ ಆಗಿದೆ.
01:50 ಅದು ಸಿಕ್ಕಿದ ಮೇಲೆ, filename ಮೇಲೆ ಕ್ಲಿಕ್ ಮಾಡೋಣ ಮತ್ತು Open ಬಟನ್ ಮೇಲೆ ಕ್ಲಿಕ್ ಮಾಡೋಣ.
01:57 ಲಿಬ್ರೆ ಆಫೀಸ್ ಬೇಸ್ ಪ್ರೋಗ್ರಾಮ್ ಈಗಾಗಲೇ ಓಪನ್ (ತೆರೆದಿದ್ದರೆ) ಇದ್ದರೆ, ನಾವು ಇಲ್ಲಿಂದ ಲಿಬ್ರೆ ಡೇಟಾ ಬೇಸ್ ಅನ್ನು ಓಪನ್ ಮಾಡಬಹುದು (ತೆರೆಯಬಹುದು).
02:07 ಮೇಲ್ಭಾಗದಲ್ಲಿರುವ File menu ನ ಮೇಲೆ ಕ್ಲಿಕ್ ಮಾಡಿ, ಆಮೇಲೆ Open ಬಟನ್ ಮೇಲೆ ಕ್ಲಿಕ್ ಮಾಡುವುದರಿಂದ,
02:14 ನಾವು ವಿಂಡೋಸ್ ಡೈರೆಕ್ಟರಿಯನ್ನು ಬ್ರೌಸ್ ಮಾಡುತ್ತೇವೆ. ಅಲ್ಲಿ ಲೈಬ್ರರಿ ಡೇಟಾ ಬೇಸ್ ಫೈಲ್ ಸೇವ್ ಆಗಿದೆ.
02:21 ಫೈಲ್ Library.odb ಮೇಲೆ ಕ್ಲಿಕ್ ಮಾಡೋಣ. ಮತ್ತು ಕೆಳಭಾಗದಲ್ಲಿರುವ Open ಬಟನ್ ಮೇಲೆ ಕ್ಲಿಕ್ ಮಾಡೋಣ.
02:31 ಈಗ ನಾವು ಲೈಬ್ರರಿ ಡೇಟಾ ಬೇಸ್ ನ ಒಳಗೆ ಇದ್ದೇವೆ.
02:35 ಎಡಗಡೆ ಪೆನಲ್ ನಲ್ಲಿ ಡೇಟಾ ಬೇಸ್ ನ ಸೂಚಿಯಲ್ಲಿರುವ Tables ಐಕಾನ್ ಮೇಲೆ ಕ್ಲಿಕ್ ಮಾಡೋಣ.
02:42 ರೈಟ್ (ಬಲಭಾಗದ) ಪೆನಲ್ ನ ಟೇಬಲ್ಸ್ ಸೂಚಿಯಲ್ಲಿ ಬುಕ್ಸ್ ಟೇಬಲ್ ಕಾಣಿಸುತ್ತಿರುವುದನ್ನು ಗಮನಿಸಿ.
02:48 ಈಗ ನಾವು ಬುಕ್ಸ್ ಟೇಬಲ್ ಮೇಲೆ ರೈಟ್ ಕ್ಲಿಕ್ ಮಾಡೋಣ.
02:53 ನೀವು ಇಲ್ಲಿಂದ ವಿವಿಧ ರೀತಿಯ ಆಪ್ಷನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದನ್ನು ಗಮನಿಸಿ.
02:58 ಈಗ ಈ ಟೇಬಲ್ ನಲ್ಲಿ ಡೇಟಾ ಅನ್ನು ಸೇರಿಸಲು 'open' ಬಟನ್ ಮೇಲೆ ಕ್ಲಿಕ್ ಮಾಡೋಣ.
03:04 ವಿಕಲ್ಪವಾಗಿ, ನಾವು ಇದನ್ನು ಓಪನ್ ಮಾಡಲು table name ನ ಮೇಲೆ ಡಬಲ್ ಕ್ಲಿಕ್ ಅನ್ನು ಕೂಡ ಮಾಡಬಹುದು.
03:10 'Books – Library – LibreOffice Base: Table Data View' ಹೆಸರಿನ ಶೀರ್ಷಕದೊಂದಿಗೆ ಒಂದು ಹೊಸ ವಿಂಡೋ ಓಪನ್ ಆಗುತ್ತದೆ (ತೆರೆಯುತ್ತದೆ).
03:20 ಈಗ ನಾವು ನೇರವಾಗಿ ಪ್ರತಿಯೊಂದು ಸೆಲ್ ನಲ್ಲಿಯೂ ವೆಲ್ಯೂಸ್ ಅನ್ನು ಟೈಪ್ ಮಾಡಿ ಬುಕ್ಸ್ ಟೇಬಲ್ ನಲ್ಲಿ ಡೇಟಾ ಎಂಟರ್ ಅನ್ನು ಆರಂಭಿಸಬಹುದು.
03:31 Bookid ಕಾಲಂ ಗಳು 'AutoField' ಆಗಿರುವುದನ್ನು ಗಮನಿಸಿ.
03:37 ಅಂದರೆ, ಬೇಸ್, ನಾವು ಇನ್ಸರ್ಟ್ ಮಾಡಿದ ಡೇಟಾದ ಪ್ರತಿಯೊಂದು ರೋ ಗೆ ಆರೋಹಣ ಸಂಖ್ಯೆಯನ್ನು ಸಹಜವಾಗಿಯೇ ನಿಯೋಜಿಸುತ್ತದೆ.
03:48 ಈಗ ಪರದೆಯ (screen) ಕೆಳಗೆ ತೋರಿಸುವ ಹಾಗೆ ಒಂದೊಂದೇ ರೋ ನ ಸೆಲ್ ನಲ್ಲಿ ಡೇಟಾ ಅನ್ನು ಇನ್ ಪುಟ್ ಮಾಡೋಣ.
04:22 ಹಾಗಾಗಿ, ಇಲ್ಲಿ ನಮ್ಮ ಹತ್ತಿರ ಟೇಬಲ್ ಬುಕ್ಸ್ ನಲ್ಲಿ ಸ್ಯಾಂಪಲ್ ಡೇಟಾದ 5 ರೋ (rows) ಗಳಿವೆ.
04:29 ಮೇಲ್ಭಾಗದಲ್ಲಿರುವ File menu ವಿನ ಮೇಲೆ ಕ್ಲಿಕ್ ಮಾಡಿ, ನಂತರ Close ಆಯ್ಕೆ ಮಾಡಿ, ವಿಂಡೋ ಅನ್ನು ಕ್ಲೋಸ್ ಮಾಡೋಣ.
04:39 ಇಲ್ಲಿ ನಿಮಗೆ ಒಂದು ಅಸೈನ್ ಮೆಂಟ್ ಇದೆ.
04:42 ಪ್ರತಿಯೊಂದು ಸದಸ್ಯನ ಮಾಹಿತಿ ಸಂಗ್ರಹವಾಗಿರುವಂತಹ ಒಂದು ಮೆಂಬರ್ಸ್ ಟೇಬಲ್ ಅನ್ನು ತಯಾರಿಸಿ. ಉದಾಹರಣೆಗೆ, ಸದಸ್ಯನ ಹೆಸರು ಮತ್ತು ಫೋನ್ ನಂಬರ್.
04:53 ಕೆಳಗೆ ನಮೂದಿಸಿದ ಮೂರು ಫೀಲ್ಡ್ ಗಳನ್ನು ಸೇರಿಸಿ.
04:57 Member Id ಯನ್ನು Field type Integer ನೊಂದಿಗೆ ಸೇರಿಸಿ ಹಾಗೂ ಇದನ್ನು ಪ್ರೈಮರಿ ಕೀ ಅನ್ನಾಗಿ ಮಾಡಿ.
05:06 Name ಅನ್ನು, Fieldtype Text ನೊಂದಿಗೆ
05:10 Phone ಅನ್ನು, Fieldtype Text ನೊಂದಿಗೆ ಸೇರಿಸಿ.
05:15 ಸರಿ, ನೀವು ಹೀಗೆ ಮಾಡಿದಾಗ, ಮೆಂಬರ್ಸ್ ಟೇಬಲ್ ಹೀಗೆ ಕಾಣಿಸುತ್ತದೆ.
05:22 ಈ ವಿಂಡೋ ಅನ್ನು ಕ್ಲೋಸ್ ಮಾಡೋಣ.
05:25 ಈಗ ನಾವು ಬುಕ್ಸ್ ಟೇಬಲ್ ಗಾಗಿ ಹೇಗೆ ಮಾಡಿದ್ದೇವೆಯೋ ಹಾಗೆ ಪರದೆಯ ಮೇಲೆ ಗೋಚರಿಸಿದ್ದನ್ನು ಮೆಂಬರ್ಸ್ ಟೇಬಲ್ ನಲ್ಲಿ 4 ಸ್ಯಾಂಪಲ್ ಮೆಂಬರ್ಸ್ ಅನ್ನು ಸೇರಿಸೋಣ.
05:46 ಅದನ್ನು ಮಾಡಿದ ಮೇಲೆ, ವಿಂಡೋ ಅನ್ನು ಕ್ಲೋಸ್ ಮಾಡೋಣ.
05:50 ಈಗ, ಮರಳಿ ಮುಖ್ಯ ವಿಂಡೋ ಗೆ ಹೋಗೋಣ ಮತ್ತು ಪುನಃ ಟೇಬಲ್ಸ್ ಐಕಾನ್ ಮೇಲೆ ಕ್ಲಿಕ್ ಮಾಡೋಣ.
05:57 ಮತ್ತು ಮೂರನೆಯ ಟೇಬಲ್: Books Issued ಅನ್ನು ತಯಾರಿಸೋಣ.
06:04 ಅದು ತಯಾರಾದ ಮೇಲೆ, Books Issued ಟೇಬಲ್ ನಲ್ಲಿ ಕೆಳಗೆ ನಮೂದಿಸಿರುವ ಫೀಲ್ಡ್ ಗಳು ಇರಬೇಕು:
06:09 Issue Id, Field type Integer. ಇದು ಪ್ರೈಮರಿ ಕೀ ಆಗಿರುತ್ತದೆ,
06:16 Book Id,Field type,Integer
06:20 Member Id ,Field type,Integer
06:24 Issue Date,Field type,Date
06:28 Return Date,Field type,Date
06:31 Actual Return Date,Field type,Date
06:35 ಮತ್ತು Checked In,Field type Yes/No Boolean
06:42 ಸರಿ, ನಾವು ಈಗ Books Issued ಟೇಬಲ್ ಅನ್ನು ತಯಾರಿಸಿದ್ದೇವೆ.
06:47 ಮತ್ತು ಈಗ ಇದರಲ್ಲಿ ಕೆಳಗಿರುವ ಸ್ಯಾಂಪಲ್ ಡೇಟಾ ಅನ್ನು ಸೇರಿಸೋಣ. ಅದನ್ನು ನೀವು ಪರದೆಯ ಮೇಲೆ ನೋಡಬಹುದು.
06:56 ಸದ್ಯ ಇದು ಪೂರ್ಣವಾದ ಅರ್ಥವನ್ನು ನೀಡದಿದ್ದರೂ, ಏನು ನಡೆಯುತ್ತಿದೆಯೆಂದು ನಮಗೆ ತಕ್ಷಣವೇ ತಿಳಿಯುತ್ತದೆ.
07:17 ಈಗ, ನಮ್ಮ ಹತ್ತಿರ ಸ್ಯಾಂಪಲ್ ಡೇಟಾದ ಜೊತೆಗೆ ನಮ್ಮ ಲೈಬ್ರರಿಯ ಡೇಟಾಬೇಸ್ ನಲ್ಲಿ ಮೂರು ಟೇಬಲ್ ಗಳೂ ಇವೆ.
07:25 ಈಗ ಡೇಟಾಬೇಸ್ ನಲ್ಲಿ ರಿಲೇಷನ್-ಶಿಪ್ ಪರಿಭಾಷೆ ಮಾಡುವುದನ್ನು ನಾವು ಕಲಿಯೋಣ.
07:31 ಹಾಗಾಗಿ, ನಾವು ಮಾಹಿತಿಯ ಮೂರು ವಿವಿಧ ಸೆಟ್ ಗಳನ್ನು ಸಂಗ್ರಹಿಸಲು ಮೂರು ಟೇಬಲ್ ಗಳನ್ನು ತಯಾರಿಸಿದ್ದೇವೆ.
07:38 Books, Members ಮತ್ತು Issue of Books to Members.
07:44 ಈಗ ನಾವು ಈ ಮೂರು ಟೇಬಲ್ ಗಳಲ್ಲಿ ಪ್ರತ್ಯೇಕ ಪುಸ್ತಕ, ಪ್ರತ್ಯೇಕ ಮೆಂಬರ್ ಮತ್ತು ಪ್ರತ್ಯೇಕ ಬುಕ್ ಇಶ್ಯೂ ಅನ್ನು ವಿಶಿಷ್ಟವಾಗಿ ಗುರುತಿಸಲು ಕಾಲಂಗಳನ್ನು ನಿರ್ಮಿಸೋಣ.
07:57 ಅವು ಪ್ರೈಮರಿ ಕೀಗಳಾಗಿವೆ.
08:00 ಪ್ರೈಮರಿ ಕೀನ ವಿವಿಧ ಅನುಕೂಲಗಳಲ್ಲಿ ಇದೂ ಒಂದು. ಏನೆಂದರೆ, ಇದು ಟೇಬಲ್ ಗಳ ನಡುವೆ ಇರುವ ರಿಲೇಷನ್-ಶಿಪ್ ಅನ್ನು ಸ್ಥಾಪಿಸಲು ಸಹಕರಿಸುತ್ತದೆ.
08:10 ಆದರೆ, ನಮಗೆ ರಿಲೇಷನ್-ಶಿಪ್ ಏಕೆ ಬೇಕು?
08:13 Books Issued ಟೇಬಲ್ ಅನ್ನು ನೋಡೋಣ. ಇಲ್ಲಿ ನಾವು Book Id ಮತ್ತು Member Id ಫೀಲ್ಡ್ಸ್ ಅನ್ನು ಕಾಣುತ್ತಿದ್ದೇವೆ.
08:23 ಅವು Books Issued ಟೇಬಲ್ ನಲ್ಲಿ ಯಾವ ವೆಲ್ಯೂ ಅನ್ನು ಬೇಕಾದರೂ ಇಡಬಹುದು.
08:28 ಆದರೆ, ಆ ವೆಲ್ಯೂಗಳು Books ಮತ್ತು Members ಟೇಬಲ್ ಗಳಲ್ಲಿ ಇರುವ ವೆಲ್ಯೂಗಳೊಂದಿಗೆ ಕ್ರಮವಾಗಿ ವ್ಯವಹರಿಸಬೇಕಾಗುತ್ತದೆ.
08:38 ಬುಕ್ಸ್ ಟೇಬಲ್ಸ್ ನಲ್ಲಿ Macbeth ನ Book Id 3 ಆಗಿದ್ದರೆ,
08:45 Books Issued ಟೇಬಲ್ಸ್ ನ Book Id 3 ಅನ್ನು ಬಳಸಿ ನಾವು ಈಗಲೂ ಸಹ ಅದೇ ಪುಸ್ತಕವನ್ನು ಉಲ್ಲೇಖಿಸಬಹುದು.
08:56 ಆದ್ದರಿಂದ, ಈ ಎರಡು ಟೇಬಲ್ ಗಳನ್ನು ಸ್ಪಷ್ಟವಾಗಿ ಸಂಯೋಜಿಸಲು ನಮಗೆ ಈಗಲೂ ಸಹ ಯಾವುದಾದರೂ ರೀತಿಯಲ್ಲಿ ಅವನ್ನು ಲಿಂಕ್ ಮಾಡುವ ಅವಶ್ಯಕತೆ ಇದೆ.
09:05 ಮತ್ತು ಉದಾಹರಣೆಗೆ, 2011ರ ಜೂನ್ 2 ನೇ ತಾರೀಖು ರವಿಕುಮಾರ್ ಗೆ 'Macbeth' ಅನ್ನು ಇಶ್ಯೂ ಮಾಡಲಾಗಿತ್ತು ಎಂಬುದನ್ನು ನೀವು ಹೇಗೆ ಪ್ರಮಾಣಿಸುತ್ತೀರಿ ?
09:16 ಅಥವಾ ಪುಸ್ತಕವು ಲೈಬ್ರರಿ ಸದಸ್ಯರಿಗೆ ಮಾತ್ರ ಜಾರಿ ಮಾಡಲ್ಪಟ್ಟಿದೆ, ಬೇರೆ ಯಾರಿಗೂ ಇಲ್ಲ ಎಂಬುದನ್ನು ನೀವು ಹೇಗೆ ನಿಶ್ಚಯಿಸುತ್ತೀರಿ ?
09:25 ರಿಲೇಷನ್-ಶಿಪ್ ಅನ್ನು ಸೆಟ್ ಅಪ್ ಮಾಡಿ ಇವೆಲ್ಲವನ್ನೂ ಸಾಧಿಸಬಹುದು. ಅದು ಡೇಟಾ ಅನ್ನು ಇಂಟರ್ ಲಿಂಕ್ ಮಾಡಲು ಸಹಕರಿಸುತ್ತದೆ.
09:34 ನಾವು ಸರಿಯಾದ ಫೀಲ್ಡ್ ಗಳನ್ನು ಲಿಂಕ್ ಮಾಡಿ, ಬುಕ್ಸ್ ಟೇಬಲ್ ಮತ್ತು ಮೆಂಬರ್ಸ್ ಟೇಬಲ್ ನಿಂದ ವೆಲ್ಯೂಗಳನ್ನು ಬಳಸಲು ಬೇಸ್ ಅನ್ನು ಫೋರ್ಸ್ ಮಾಡುವ ಅವಶ್ಯಕತೆ ಇದೆ.
09:46 ಅದು ಹೇಗೆಂದು ನೋಡೋಣ.
09:48 ಲಿಬ್ರೆ ಆಫೀಸ್ ಬೇಸ್ ನ ಮುಖ್ಯ ವಿಂಡೋಸ್ ನಲ್ಲಿ Tools ನ ಮೇಲೆ ಕ್ಲಿಕ್ ಮಾಡೋಣ ನಂತರ Relationships ನ ಮೇಲೆ ಕ್ಲಿಕ್ ಮಾಡೋಣ.
09:58 ಇದು ಒಂದು ಸಣ್ಣ ಪಾಪಪ್ ವಿಂಡೋ ಅನ್ನು ಓಪನ್ ಮಾಡುತ್ತದೆ,
10:03 ಇಲ್ಲಿ ನಾವು ಅತ್ಯಂತ ಮೇಲ್ಭಾಗದಲ್ಲಿರುವ ಟೇಬಲ್ ಅನ್ನು ಆಯ್ಕೆ ಮಾಡೋಣ ಮತ್ತು add ಬಟನ್ ಮೇಲೆ ಕ್ಲಿಕ್ ಮಾಡೋಣ ಮತ್ತು ಇನ್ನೆರಡು ಟೇಬಲ್ ಗಳಿಗೂ ಕೂಡ ಹಾಗೆಯೇ ಮಾಡೋಣ.
10:15 ಪಾಪಪ್ ವಿಂಡೋ ಅನ್ನು ಕ್ಲೋಸ್ ಮಾಡೋಣ.
10:18 ಈಗ, ನಾವು ಒಂದು ಲೈನ್ ನಲ್ಲಿ ಮೂರು ಟೇಬಲ್ ಗಳಾದ Books, Books Issued ಮತ್ತು Members ಅನ್ನು ನೋಡುತ್ತೇವೆ.
10:26 ಕ್ಲಿಕ್ ಮಾಡಿ, ಡ್ರ್ಯಾಗ್ ಮಾಡಿ ಮತ್ತು ಡ್ರಾಪ್ ಮಾಡಿ ಟೇಬಲ್ ಗಳಲ್ಲಿ ಸ್ಪೇಸ್ (ಜಾಗ) ಅನ್ನು ಹೆಚ್ಚಿಸೋಣ.
10:35 ಈಗ, ಬುಕ್ಸ್ ಟೇಬಲ್ ನಲ್ಲಿ Book Id ಮೇಲೆ ಕ್ಲಿಕ್ ಮಾಡೋಣ ಮತ್ತು ಅದನ್ನು Books Issued ಟೇಬಲ್ ನಲ್ಲಿರುವ Book Id ಯ ಮೇಲೆ ಡ್ರ್ಯಾಗ್ ಮಾಡಿ ಡ್ರಾಪ್ ಮಾಡೋಣ.
10:48 ಈ ಎರಡು ಫೀಲ್ಡ್ ನೇಮ್ ಗಳನ್ನು ಒಂದು ಲೈನ್ ಸಂಯೋಜಿಸುತ್ತಿರುವುದನ್ನು ಗಮನಿಸಿ. ಆದ್ದರಿಂದ, ಇಲ್ಲಿ ನಾವು ಒಂದು ರಿಲೇಷನ್ ಶಿಪ್ ಅನ್ನು ಸೆಟಪ್ ಮಾಡಿದ್ದೇವೆ !
10:57 MemberId ಗಾಗಿ ಇದನ್ನು ಪುನಃ ಮಾಡೋಣ.
11:02 ಮೆಂಬರ್ಸ್ ಟೇಬಲ್ ನಲ್ಲಿ Member Id ಯ ಮೇಲೆ ಕ್ಲಿಕ್ ಮಾಡೋಣ ಮತ್ತು Books Issued ಟೇಬಲ್ ನಲ್ಲಿ ಅದನ್ನುಡ್ರ್ಯಾಗ್ ಮಾಡಿ ಡ್ರಾಪ್ ಮಾಡೋಣ.
11:11 ಈಗ ನಾವು ಎರಡು ರಿಲೇಷನ್ ಶಿಪ್ಸ್ ಅನ್ನು ತಯಾರಿಸಿರುವುದನ್ನು ನೀವು ನೋಡಬಹುದು.
11:16 ಇದೇ ರಿಲೇಷನ್ ಶಿಪ್ಸ್ ಅನ್ನು ಸಂಸ್ಥಾಪಿಸುವ ರೀತಿ.
11:20 ಮತ್ತು ಇದಕ್ಕಾಗಿ ಇಂಟರ್ ಲಿಂಕ್ ಅರ್ಥಪೂರ್ಣ ಡೇಟಾ ಎನ್ನುವುದು ವಿವಿಧ ರೀತಿಯ ಟೇಬಲ್ ಗಳ ರಿಲೇಶನಲ್ ಡೇಟಾಬೇಸ್ ನಲ್ಲಿ ಸಂಗ್ರಹಿಸಲ್ಪಟ್ಟಿದೆ.
11:30 ಈಗ ನಾವು ಲಿಬ್ರೆ ಆಫೀಸ್ ನ ಟೇಬಲ್ಸ್ ಮತ್ತು ರಿಲೇಷನ್ ಶಿಪ್ಸ್ ಎಂಬ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
11:36 ಸಂಕ್ಷೇಪವಾಗಿ, ನಾವು ಟೇಬಲ್ ನಲ್ಲಿ ಡೇಟಾ ಅನ್ನು ಹೇಗೆ ಸೇರಿಸುವುದು ಮತ್ತು ರಿಲೇಶನ್ ಶಿಪ್ ನ ಪರಿಭಾಷೆ ಮತ್ತು ಅದನ್ನು ತಯಾರಿಸುವುದನ್ನು ಕಲಿತಿದ್ದೇವೆ.
11:45 ಈ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
11:57 ಈ ಪ್ರೊಜೆಕ್ಟ್ http://spoken-tutorial.org. ಮೂಲಕ ನಡೆಸಲಾಗಿದೆ.
12:03 ಈ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನ ಲಿಂಕ್-ನಲ್ಲಿ ಸಿಗುತ್ತದೆ.
12:08 ಈ ಟ್ಯುಟೋರಿಯಲ್ ನ ಅನುವಾದಕಿ ಡಾ. ನಾಗರತ್ನಾ ಹೆಗಡೆ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. ಧನ್ಯವಾದಗಳು.

Contributors and Content Editors

Vasudeva ahitanal