Git/C2/Basic-commands-of-Git/Kannada

From Script | Spoken-Tutorial
Jump to: navigation, search
Time
Narration
00:01 Basic commands of Git (ಬೇಸಿಕ್ ಕಮಾಂಡ್ಸ್ ಆಫ್ ಗಿಟ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ, ನಾವು:
  • 'ಗಿಟ್ ರಿಪಾಸಿಟರಿ' ಹಾಗೂ
  • Git ನ ಕೆಲವು ಮುಖ್ಯ ಕಮಾಂಡ್ ಗಳ ಬಗ್ಗೆ ಕಲಿಯುವೆವು.
00:13 ಈ ಟ್ಯುಟೋರಿಯಲ್ ಗಾಗಿ, ನಾನು:
  • 'Ubuntu Linux' (ಉಬಂಟು ಲಿನಕ್ಸ್) 14.04
  • 'Git' 2.3.2. ಮತ್ತು
  • 'gedit' ಟೆಕ್ಸ್ಟ್-ಎಡಿಟರ್ ಇವುಗಳನ್ನು ಬಳಸುತ್ತಿದ್ದೇನೆ.
00:23 ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು.
00:27 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಟರ್ಮಿನಲ್ ನ ಮೇಲೆ ಲಿನಕ್ಸ್ ಕಮಾಂಡ್ ಗಳನ್ನು ರನ್ ಮಾಡಲು ತಿಳಿದಿರಬೇಕು.
00:34 ಇಲ್ಲದಿದ್ದಲ್ಲಿ, ಸಂಬಂಧಿತ 'Linux' ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.
00:40 ಈಗ, 'Git ರಿಪಾಸಿಟರಿ' ಎಂದರೆ ಏನು ಎಂಬುದನ್ನು ನಾವು ನೋಡುವೆವು.
00:44 'ಗಿಟ್ ರಿಪಾಸಿಟರಿ', ಒಂದು ಫೋಲ್ಡರ್ ಆಗಿದೆ. ನಮ್ಮ ಪ್ರೊಜೆಕ್ಟ್ ನ ಎಲ್ಲ ಡೇಟಾಅನ್ನು ಇದರಲ್ಲಿ ಸ್ಟೋರ್ ಮಾಡಲಾಗುವುದು.
00:50 ಇದನ್ನು ಸ್ಥಳೀಯ ಮಷಿನ್ ಅಥವಾ ದೂರದ ಮಷಿನ್ ಮೇಲೆ ಇರಿಸಬಹುದು.
00:55 ಒಂದು ಸಾಮಾನ್ಯ ಫೋಲ್ಡರ್ ಹಾಗೂ 'ಗಿಟ್ ರಿಪಸಿಟರಿ'ಗಳ ನಡುವಿನ ವ್ಯತ್ಯಾಸವೇನೆಂದರೆ-
01:00 ಸಾಮಾನ್ಯ ಫೋಲ್ಡರ್, ಫೈಲ್ ಗಳು ಮತ್ತು ಡಿರೆಕ್ಟರಿಗಳನ್ನು ಮಾತ್ರ ಒಳಗೊಂಡಿರುತ್ತದೆ.
01:04 ಆದರೆ ‘ಗಿಟ್ ರಿಪಾಸಿಟರಿ’, ಹಲವು ಫೈಲ್ ಮತ್ತು ಡಿರೆಕ್ಟರಿಗಳನ್ನು ಅವುಗಳ ಸಂಪೂರ್ಣ ಇತಿಹಾಸದೊಂದಿಗೆ ಒಳಗೊಂಡಿರುತ್ತದೆ.
01:11 ನಾವು ಈಗ, ನಮ್ಮ ಲೋಕಲ್ ಮಷಿನ್ ನಲ್ಲಿ ಒಂದು ‘ಗಿಟ್ ರಿಪಾಸಿಟರಿ’ಯನ್ನು ಕ್ರಿಯೇಟ್ ಮಾಡಲು ಕಲಿಯೋಣ.
01:17 ಟರ್ಮಿನಲ್ ಅನ್ನು ಓಪನ್ ಮಾಡಲು 'Ctrl+Alt+T' ಕೀಗಳನ್ನು ಒಟ್ಟಿಗೆ ಒತ್ತಿ.
01:22 ನನ್ನ ಮಷಿನ್ ನ 'Home' ಡಿರೆಕ್ಟರಿಯಲ್ಲಿ, ನಾನು ‘ಗಿಟ್ ರಿಪೊಸಿಟರಿ’ಗಾಗಿ ಒಂದು ಡಿರೆಕ್ಟರಿಯನ್ನು ಕ್ರಿಯೇಟ್ ಮಾಡುವೆನು.
01:28 ನಿಮ್ಮ ಮಷಿನ್ ನಲ್ಲಿ, ನೀವು ಡಿರೆಕ್ಟರಿಯನ್ನು ಎಲ್ಲಿಯಾದರೂ ಕ್ರಿಯೇಟ್ ಮಾಡಬಹುದು.
01:33 ನಾವು ಡೀಫಾಲ್ಟ್ ಆಗಿ, ನಮ್ಮ 'Home' ಡಿರೆಕ್ಟರಿಯಲ್ಲಿ ಇದ್ದೇವೆ.
01:37 ಹೀಗೆ ಟೈಪ್ ಮಾಡಿ: “mkdir” ಸ್ಪೇಸ್ “mywebpage” ಮತ್ತು ‘Enter’ ಅನ್ನು ಒತ್ತಿ.
01:44 ಹೀಗೆ, ನಾವು ಈಗ "mywebpage" ( ಮೈ ವೆಬ್ ಪೇಜ್) ಎಂಬ ಒಂದು ಡಿರೆಕ್ಟರಿಯನ್ನು ನಮ್ಮ 'Home' ಡಿರೆಕ್ಟರಿಯಲ್ಲಿ ಕ್ರಿಯೇಟ್ ಮಾಡಿದ್ದೇವೆ.
01:49 ಈ ಡಿರೆಕ್ಟರಿಯ ಒಳಗೆ ಹೋಗಲು, ಹೀಗೆ ಟೈಪ್ ಮಾಡಿ: “cd” ಸ್ಪೇಸ್ “mywebpage” ಮತ್ತು ‘Enter’ ಅನ್ನು ಒತ್ತಿ.
02:00 "mywebpage" ಡಿರೆಕ್ಟರಿಯನ್ನು ‘ಗಿಟ್ ರಿಪಾಸಿಟರಿ’ಯನ್ನಾಗಿ ಮಾಡಲು, ಹೀಗೆ ಟೈಪ್ ಮಾಡಿ: “git” ಸ್ಪೇಸ್ “init” ಮತ್ತು ‘Enter’ ಅನ್ನು ಒತ್ತಿ.
02:08 ನೀವು, “Initialized empty Git repository” ಎಂಬ ಮೆಸೇಜನ್ನು ನೋಡಬಹುದು.
02:13 ಇದು, 'Git', ಯಶಸ್ವಿಯಾಗಿ ಇನಿಶಿಯಲೈಸ್ ಆಗಿರುವುದನ್ನು ಸೂಚಿಸುತ್ತದೆ ಮತ್ತು
02:17 ಇದು, ನಮ್ಮ ಸಿಸ್ಟಂನಲ್ಲಿ ‘ಗಿಟ್ ರಿಪಾಸಿಟರಿ’ಯನ್ನು ಕ್ರಿಯೇಟ್ ಮಾಡಿರುವ ಪಾಥ್ ಆಗಿದೆ.
02:24 ಇನಿಶಿಯಲೈಸ್ ಮಾಡಿದ ನಂತರ, “mywebpage” ಫೋಲ್ಡರ್ ನ ಒಳಗೆ, ಅಡಗಿರುವ ಒಂದು 'dot git' ಫೋಲ್ಡರ್ ಕ್ರಿಯೇಟ್ ಆಗುವುದು.
02:32 ಈ ಅಡಗಿಕೊಂಡಿರುವ ಫೋಲ್ಡರ್ ಅನ್ನು ನೋಡಲು, ಹೀಗೆ ಟೈಪ್ ಮಾಡಿ: “ls” ಸ್ಪೇಸ್ ಹೈಫನ್ “a” ಮತ್ತು ‘Enter’ ಅನ್ನು ಒತ್ತಿ.
02:39 ಇದು 'dot git' ಫೋಲ್ಡರ್ ಅನ್ನು ತೋರಿಸುತ್ತದೆ. ಈ 'dot git' ಫೋಲ್ಡರ್ ಅನ್ನು ಡಿಲೀಟ್ ಮಾಡಿದರೆ ಇಡೀ ರಿಪಾಸಿಟರಿ ಡಿಲೀಟ್ ಆಗುವುದು.
02:47 ಹೀಗಾಗಿ, ಈ 'dot git' ಫೋಲ್ಡರ್ ನೊಂದಿಗೆ ನೀವು ಅತ್ಯಂತ ಎಚ್ಚರಿಕೆಯಿಂದ ಇರಬೇಕು.
02:51 ಈಗ, ನಾವು 'Git' ಗೆ ನಮ್ಮ ಐಡೆಂಟಿಟಿಯನ್ನು ಸೇರಿಸಬೇಕು.
02:55 ಇಮೇಲ್ ಅಡ್ರೆಸ್ ಅನ್ನು ಕೊಡಲು, ಹೀಗೆ ಟೈಪ್ ಮಾಡಿ: 'git space config space hyphen hyphen global space user dot email space priya[dot]spoken@gmail.com' ಮತ್ತು ‘Enter’ ಅನ್ನು ಒತ್ತಿ.
03:12 ಇಲ್ಲಿ, ನಾನು 'priya[dot]spoken[at]gmail[dot]com' ಬಳಸಿದ್ದೇನೆ.
03:18 ನೀವು, ನಿಮ್ಮ ಸ್ವಂತದ ಸರಿಯಾಗಿರುವ ಇಮೇಲ್-ಅಡ್ರೆಸ್ ಅನ್ನು ಬಳಸಬಹುದು.
03:21 ಯೂಸರ್-ನೇಮ್ ಅನ್ನು ಕೊಡಲು, ಹೀಗೆ ಟೈಪ್ ಮಾಡಿ: 'git space config space hyphen hyphen global space user dot name space Priya' ಮತ್ತು ‘Enter’ ಅನ್ನು ಒತ್ತಿ.
03:36 ನಾನು "Priya" ಅನ್ನು ಯೂಸರ್-ನೇಮ್ ಎಂದು (username) ಬಳಸಿದ್ದೇನೆ. ದಯವಿಟ್ಟು ನೀವು "Priya" ದ ಬದಲಿಗೆ ನಿಮ್ಮ ಹೆಸರನ್ನು ಬಳಸಿ.
03:43 ನಾವು ಕೊಟ್ಟಿರುವ ‘name’ ಹಾಗೂ ‘email address’ ಗಳು, 'Git' ನಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಯ ಗುರುತುಗಳಾಗಿವೆ.
03:51 ನಂತರ 'commit' ಮೆಸೇಜನ್ನು ಕೊಡಲು, ನಾನು 'gedit' ಟೆಕ್ಸ್ಟ್ ಎಡಿಟರ್ ಅನ್ನು ಕಾನ್ಫಿಗರ್ ಮಾಡುವೆನು.
03:57 ಹೀಗೆ ಟೈಪ್ ಮಾಡಿ: 'git space config space hyphen hyphen global space core dot editor space gedit' ಮತ್ತು ‘Enter’ ಅನ್ನು ಒತ್ತಿ.
04:09 ಈಗ, 'gedit' ಅನ್ನು 'Git' ಗೆ ಸಂರಚಿಸಲಾಗಿದೆ (configure).
04:14 ಇಲ್ಲಿ, 'global' ಫ್ಲ್ಯಾಗ್ ಐಚ್ಛಿಕವಾಗಿದೆ.
04:17 'global' ಫ್ಲ್ಯಾಗ್ ನ ಬಗ್ಗೆ ಇನ್ನೂ ಹೆಚ್ಚು ತಿಳಿಯಲು, ನಾವು ನಮ್ಮ ಸ್ಲೈಡ್ ಗಳಿಗೆ ಹಿಂದಿರುಗುವೆವು.
04:22 ಒಂದೇ ಮಷಿನ್ ನಲ್ಲಿ ಒಂದಕ್ಕಿಂತ ಹೆಚ್ಚು ರಿಪಾಸಿಟರಿಗಳನ್ನು ಕ್ರಿಯೇಟ್ ಮಾಡಬಹುದು.
04:26 ನೀವು 'ಹೈಫನ್ ಹೈಫನ್ global' ಫ್ಲ್ಯಾಗ್ ಅನ್ನು ಬಳಸಿದರೆ, ಸೆಟ್ಟಿಂಗ್ ಅನ್ನು ಮಷಿನ್ ನಲ್ಲಿಯ ಎಲ್ಲ ರಿಪಾಸಿಟರಿಗಳಿಗೆ ಅನ್ವಯಿಸಲಾಗುವುದು.
04:34 ಆದ್ದರಿಂದ, ನೀವು ಒಂದು ಹೊಸ ‘ಗಿಟ್ ರಿಪೊಸಿಟರಿ’ಯನ್ನು ಕ್ರಿಯೇಟ್ ಮಾಡಿದಾಗಲೆಲ್ಲ ಡೀಫಾಲ್ಟ್ ಆಗಿ ಈ ಸೆಟ್ಟಿಂಗ್ ಅನ್ನು ಅನ್ವಯಿಸಲಾಗುವುದು.
04:42 ನಿಮಗೆ ಯಾವುದೇ ಒಂದು ನಿರ್ದಿಷ್ಟ ರಿಪಾಸಿಟರಿಗೆ ಮಾತ್ರ ಐಡೆಂಟಿಟೀ ಬೇಕಾಗಿದ್ದರೆ ಆಗ 'ಹೈಫನ್ ಹೈಫನ್ global' ಫ್ಲ್ಯಾಗ್ ಅನ್ನು ಬಳಸಬೇಡಿ.
04:49 ಟರ್ಮಿನಲ್ ಗೆ ಹಿಂದಿರುಗಿ.
04:51 ಈಗ, ನಾವು ಈ ಮೊದಲು ಸೆಟ್ ಮಾಡಿದ ಐಡೆಂಟಿಟೀಯ ಕಾನ್ಫಿಗರೇಶನ್ ನ ವಿವರಗಳನ್ನು ಪರಿಶೀಲಿಸೋಣ.
04:57 ಹೀಗೆ ಟೈಪ್ ಮಾಡಿ: 'git space config space hyphen hyphen list' ಮತ್ತು ‘Enter’ ಅನ್ನು ಒತ್ತಿ.
05:04 ಈಗ, 'ಎಡಿಟರ್ ನೇಮ್, ಇಮೇಲ್ ಅಡ್ರೆಸ್' ಹಾಗೂ 'ಯೂಸರ್ ನೇಮ್' ಗಳನ್ನು ನೀವು ನೋಡಬಹುದು.
05:10 ಮಾಡಿತೋರಿಸಲು, ನಾನು 'html' ಫೈಲ್ ಗಳನ್ನು ಬಳಸುತ್ತಿರುವೆನು.
05:14 ನೀವು, ನಿಮಗೆ ಇಷ್ಟವಾದ ಯಾವುದೇ ವಿಧದ ಫೈಲನ್ನು ಬಳಸಬಹುದು. ಉದಾಹರಣೆಗೆ, ಟೆಕ್ಸ್ಟ್ ಫೈಲ್ ಗಳು ಅಥವಾ doc ಫೈಲ್ ಗಳು.
05:22 ಟರ್ಮಿನಲ್ ಗೆ ಹಿಂದಿರುಗಿ. ನಾನು ಪ್ರಾಂಪ್ಟ್ ಅನ್ನು ತೆಗೆದುಹಾಕುತ್ತೇನೆ.
05:26 ಈಗ, ಹೀಗೆ ಟೈಪ್ ಮಾಡಿ: 'gedit space mypage.html space ampersand'.
05:34 ನೀವು ಬೇರೊಂದು ಫೈಲನ್ನು ಬಳಸುತ್ತಿದ್ದರೆ, ಆಗ "mypage.html" ನ ಬದಲಾಗಿ ಆ ಫೈಲ್ ನ ಹೆಸರನ್ನು ಕೊಡಿ.
05:41 ನಾವು ಪ್ರಾಂಪ್ಟ್ ಅನ್ನು ಮುಕ್ತಗೊಳಿಸಲು '&' (ಆಂಪರ್ಸಂಡ್) ಅನ್ನು ಬಳಸುತ್ತೇವೆ. ಈಗ ‘Enter’ ಅನ್ನು ಒತ್ತಿ.
05:47 ಈ ಮೊದಲು ಸೇವ್ ಮಾಡಿದ ನನ್ನ 'Writer' ಡಾಕ್ಯೂಮೆಂಟ್ ನಿಂದ, ನಾನು ಸ್ವಲ್ಪ ಕೋಡ್ ಅನ್ನು ಈ ಫೈಲ್ ನಲ್ಲಿ ಕಾಪಿ-ಪೇಸ್ಟ್ ಮಾಡುತ್ತೇನೆ.
05:54 ಹೀಗೆಯೇ, ನಿಮ್ಮ ಫೈಲ್ ನಲ್ಲಿ ಏನಾದರೂ ಸೇರಿಸಿ.
05:58 ಈಗ, ನನ್ನ ಫೈಲನ್ನು ಸೇವ್ ಮಾಡುವೆನು.
06:00 ಹೀಗಾಗಿ, ನನ್ನ ಹತ್ತಿರ ಸ್ವಲ್ಪ ಕೋಡ್ ಅನ್ನು ಹೊಂದಿರುವ ಒಂದು 'html' ಫೈಲ್ ಇದೆ.
06:05 ಸೂಚನೆ: ನಾನು 'mypage.html' ಅನ್ನು ಬಳಸಿದಲ್ಲೆಲ್ಲ ನೀವು ನಿಮ್ಮ ಫೈಲ್ ನ ಹೆಸರನ್ನು ಸೇರಿಸಬೇಕು.
06:13 ಆಮೇಲೆ, ನಾವು "mypage.html" ಫೈಲನ್ನು ಅನುಸರಿಸಲು ಗಿಟ್ ಅನ್ನು ಕೇಳುವೆವು.
06:18 ಟರ್ಮಿನಲ್ ಗೆ ಹಿಂದಿರುಗಿ, ಹೀಗೆ ಟೈಪ್ ಮಾಡಿ: 'git space add space mypage.html' ಮತ್ತು ‘Enter’ ಅನ್ನು ಒತ್ತಿ.
06:27 ಈಗ, ನಾವು ಗಿಟ್ ನ ಈಗಿನ ಸ್ಟ್ಯಾಟಸ್ ಅನ್ನು ಪರಿಶೀಲಿಸುವೆವು. ಆದ್ದರಿಂದ, ಹೀಗೆ ಟೈಪ್ ಮಾಡಿ: 'git space status' ಮತ್ತು ‘Enter’ ಅನ್ನು ಒತ್ತಿ.
06:36 ನೀವು “new file: mypage.html” ಅನ್ನು ನೋಡಬಹುದು. ಗಿಟ್, "mypage.html" ಫೈಲ್ ಗೆ ಮಾಡಿದ ಬದಲಾವಣೆಗಳನ್ನು ಅನುಸರಿಸಲು ಆರಂಭಿಸಿದೆ ಎಂದು ಇದರ ಅರ್ಥ.
06:48 ಇದನ್ನು 'ಟ್ರ್ಯಾಕಿಂಗ್' (tracking) ಎಂದು ಕರೆಯಲಾಗುತ್ತದೆ.
06:51 ನಾವು ನಮ್ಮ 'mypage.html' ಫೈಲ್ ಗೆ ಹಿಂದಿರುಗೋಣ
06:55 ಮತ್ತು ಈ ಫೈಲ್ ಗೆ ಇನ್ನೂ ಕೆಲವು ಸಾಲು ಕೋಡ್ ಅನ್ನು ಸೇರಿಸೋಣ.
06:58 ಈಮೊದಲು ಮಾಡಿದಂತೆ, ನನ್ನ 'Writer' ಫೈಲ್ ನಿಂದ ಕಾಪಿ-ಪೇಸ್ಟ್ ಮಾಡುವೆನು.
07:06 ಫೈಲನ್ನು ಸೇವ್ ಮಾಡಿ ಮತ್ತು ಕ್ಲೋಸ್ ಮಾಡಿ.
07:10 ಆಮೇಲೆ ಟರ್ಮಿನಲ್ ಗೆ ಹಿಂದಿರುಗಿ. ಮೊದಲು ಮಾಡಿದಂತೆ, 'Git' ನ ಈಗಿನ ಸ್ಟ್ಯಾಟಸ್ ಅನ್ನು ಪರಿಶೀಲಿಸಲು, ಹೀಗೆ ಟೈಪ್ ಮಾಡಿ: 'git space status' ಮತ್ತು ‘Enter’ ಅನ್ನು ಒತ್ತಿ.
07:21 ಅದು, “Changes not staged for commit:” ಹಾಗೂ “modified: mypage.html” ಎಂದು ತೋರಿಸುತ್ತದೆ.
07:28 'ಸ್ಟೇಜಿಂಗ್ ಏರಿಯಾ'ಗೆ, ನಾವು ಮಾಡಿದ ಬದಲಾವಣೆಗಳನ್ನು ಸೇರಿಸಲಾಗಿಲ್ಲ ಎಂದು ಇದರ ಅರ್ಥ.
07:34 'ಸ್ಟೇಜಿಂಗ್ ಏರಿಯಾ'ದ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲು, ನಾವು ನಮ್ಮ ಸ್ಲೈಡ್ ಗಳಿಗೆ ಹಿಂದಿರುಗೋಣ.
07:39 'ಸ್ಟೇಜಿಂಗ್ ಏರಿಯಾ', ಕಮೀಟ್ ಮಾಡಬೇಕಾದ ಬದಲಾವಣೆಗಳ ಮಾಹಿತಿಯನ್ನು ಸಂಗ್ರಹ ಮಾಡುವ ಒಂದು ಫೈಲ್ ಆಗಿದೆ.
07:46 ಫೈಲ್ ನಲ್ಲಿರುವ ವಿಷಯಗಳನ್ನು ಕಮೀಟ್ ಮಾಡುವ ಮೊದಲು ಅವುಗಳನ್ನು 'ಸ್ಟೇಜಿಂಗ್ ಏರಿಯಾ'ಗೆ ಸೇರಿಸಬೇಕು.
07:51 ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ 'ಕಮೀಟ್' ನ ಬಗ್ಗೆ ಇನ್ನೂ ಹೆಚ್ಚು ಚರ್ಚಿಸುವೆವು.
07:56 ಹಳೆಯ 'Git' ಆವೃತ್ತಿಗಳು, 'staging area' ಗೆ ಬದಲಾಗಿ 'index' ಎಂಬ ಪದವನ್ನು ಬಳಸುತ್ತಿದ್ದವು.
08:01 ಈಗ, ಫೈಲ್ ನ ‘ಸ್ಟೇಜಿಂಗ್ ಏರಿಯಾ’ ಗೆ ಹೊಸ ಬದಲಾವಣೆಗಳನ್ನು ಹೇಗೆ ಸೇರಿಸುವುದೆಂದು ನಾವು ನೋಡೋಣ.
08:07 ಟರ್ಮಿನಲ್ ಗೆ ಹಿಂದಿರುಗಿ. ನಾನು ಪ್ರಾಂಪ್ಟ್ ಅನ್ನು ತೆಗೆದುಹಾಕುತ್ತೇನೆ.
08:11 ಹೀಗೆ ಟೈಪ್ ಮಾಡಿ: 'git space add space mypage dot html' ಮತ್ತು 'Enter' ಅನ್ನು ಒತ್ತಿ.
08:19 Git ಸ್ಟ್ಯಾಟಸ್ ಅನ್ನು ನೋಡಲು, ಹೀಗೆ ಟೈಪ್ ಮಾಡಿ: “git” ಸ್ಪೇಸ್ “status” ಮತ್ತು ‘Enter’ ಅನ್ನು ಒತ್ತಿ.
08:26 ಈಗ ನೀವು “Changes to be committed: ” ಎಂಬ ಮೆಸೇಜನ್ನು ನೋಡಬಹುದು.
08:30 ಎಂದರೆ, ಫೈಲ್ ಅನ್ನು 'ಸ್ಟೇಜಿಂಗ್ ಏರಿಯಾ'ಗೆ (staging area) ಸೇರಿಸಲಾಗಿದೆ ಮತ್ತು ಅದನ್ನು ಈಗ ‘ಕಮೀಟ್’ ಮಾಡಬಹುದು ಎಂದರ್ಥ.
08:37 ಈಗ, ನಾವು ಈ ಘಟ್ಟದಲ್ಲಿ ನಮ್ಮ ಕೋಡ್ ಅನ್ನು ಫ್ರೀಜ್ ಮಾಡುವೆವು.
08:40 ನಮ್ಮ ಕೆಲಸದಲ್ಲಿ, ನಾವು ಒಂದು ನಿರ್ದಿಷ್ಟ್ಟ ಹಂತವನ್ನು ಮುಟ್ಟಿದಾಗ ‘ರಿಪಾಸಿಟರೀ’ಯಲ್ಲಿ ಅವುಗಳನ್ನು ಸೇವ್ ಮಾಡಬಹುದು. ಇದನ್ನು ‘ಕಮೀಟ್’ ಎಂದು ಕರೆಯಲಾಗುವುದು.
08:49 ಪ್ರತಿಯೊಂದು ಕಮೀಟ್ ಅನ್ನು 'ಯೂಸರ್ ನೇಮ್, ಇಮೇಲ್-id, ಡೇಟ್, ಟೈಮ್' ಮತ್ತು ‘ಕಮೀಟ್ ಮೆಸೇಜ್’ ಗಳ ಮಾಹಿತಿಯೊಂದಿಗೆ ಸೇವ್ ಮಾಡಲಾಗುವುದು.
08:57 ಈಗ, ನಾವು ಹೇಗೆ ‘ಕಮೀಟ್’ ಮಾಡುವುದೆಂದು ನೋಡೋಣ. ಟರ್ಮಿನಲ್ ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: 'git space commit' ಮತ್ತು ‘Enter’ ಅನ್ನು ಒತ್ತಿ.
09:07 'gedit ಟೆಕ್ಸ್ಟ್ ಎಡಿಟರ್', ‘ಕಮೀಟ್ ಮೆಸೇಜ್’ಅನ್ನು ಪಡೆಯಲು ತನ್ನಷ್ಟ್ಟಕ್ಕೆ ತಾನೇ ತೆರೆದುಕೊಳ್ಳುತ್ತದೆ.
09:13 ನಾನು ಮೊದಲನೇ ಸಾಲಿನಲ್ಲಿ, ‘ಕಮೀಟ್ ಮೆಸೇಜ್’ಅನ್ನು “Initial commit” ಎಂದು ಟೈಪ್ ಮಾಡುವೆನು.
09:18 ನಿಮಗೆ ಬೇಕಾದ ಯಾವುದೇ ಮಾಹಿತಿಯುಕ್ತ ಮೆಸೇಜನ್ನು ನೀವು ಟೈಪ್ ಮಾಡಬಹುದು.
09:22 ಇಲ್ಲಿ, ಕೆಲವು ಸಾಲುಗಳು ಹ್ಯಾಶ್ ನೊಂದಿಗೆ ಆರಂಭವಾಗುವುದನ್ನು ನೀವು ನೋಡಬಹುದು. ನೀವು ಅವುಗಳನ್ನು ಇದ್ದ ಹಾಗೆಯೇ ಇಡಬಹುದು ಅಥವಾ ಡಿಲೀಟ್ ಮಾಡಬಹುದು.
09:30 ದಯವಿಟ್ಟು ‘ಹ್ಯಾಶ್ ಲೈನ್’ನ ಮೊದಲು ಅಥವಾ ನಂತರ ‘ಕಮೀಟ್ ಮೆಸೇಜ್’ ಅನ್ನು ಬರೆಯಿರಿ.
09:35 ಇನ್ನುಮುಂದೆ, ಈ ‘ಕಮೀಟ್ ಮೆಸೇಜ್’ ನಿಂದ ನಾವು ಇಲ್ಲಿಯವರೆಗೆ ಮಾಡಿರುವುದನ್ನು ಗುರುತಿಸಬಹುದು.
09:41 ನಾನು ಎಡಿಟರ್ ಅನ್ನು ಸೇವ್ ಮಾಡಿ ನಂತರ ಕ್ಲೋಸ್ ಮಾಡುತ್ತೇನೆ.
09:44 ನೀವು:
  • ‘ಕಮೀಟ್ ಮೆಸೇಜ್’
  • ನಾವು ಎಷ್ಟು ಫೈಲ್ ಗಳನ್ನು ಬದಲಾಯಿಸಿದ್ದೇವೆ
  • ನಾವು ಎಷ್ಟು ಸೇರ್ಪಡೆ ಮಾಡಿದ್ದೇವೆ ಮತ್ತು
  • ಫೈಲ್ ನ ಹೆಸರು ಈ ವಿವರಗಳನ್ನು ನೋಡುವಿರಿ.
09:56 ಈಗ ನಾವು 'git log' ಎಂಬ ಕಮಾಂಡನ್ನು ಬಳಸಿ, 'commit' ನ ವಿವರಗಳನ್ನು ನೋಡೋಣ.
10:00 ಹೀಗೆ ಟೈಪ್ ಮಾಡಿ: ' git space log' ಮತ್ತು ‘Enter’ ಅನ್ನು ಒತ್ತಿ.
10:06 ನಾವು ನಮ್ಮ ರಿಪಾಸಿಟರೀಯಲ್ಲಿ ಒಂದೇ ಒಂದು 'ಕಮೀಟ್' ಅನ್ನು (commit) ಹೊಂದಿದ್ದೇವೆ.
10:09 ಅದು ಒಂದು ವಿಶಿಷ್ಟ ID ಯನ್ನು ತೋರಿಸುತ್ತದೆ. ಇದನ್ನು 'ಕಮೀಟ್ ಹ್ಯಾಶ್' ಅಥವಾ 'SHA-1 ಹ್ಯಾಶ್' ಎಂದು ಕರೆಯಲಾಗುತ್ತದೆ.
10:16 'SHA-1 ಹ್ಯಾಶ್' ನ ಬಗ್ಗೆ ಇನ್ನೂ ಹೆಚ್ಚು ತಿಳಿಯಲು ನಮ್ಮ ಸ್ಲೈಡ್ ಗಳಿಗೆ ಹಿಂದಿರುಗಿ.
10:20 'SHA-1' ಹ್ಯಾಶ್, 40 ಅಲ್ಫಾ-ನ್ಯೂಮೆರಿಕ್ ಅಕ್ಷರಗಳ ಒಂದು ಏಕಮಾತ್ರ ID ಆಗಿದೆ.
10:25 ಗಿಟ್, ತನ್ನ ಡೇಟಾಬೇಸ್ ನಲ್ಲಿಯ ಎಲ್ಲ ಮಾಹಿತಿಯನ್ನು 'ಹ್ಯಾಶ್ ವ್ಯಾಲ್ಯೂ'ದ ಮೂಲಕ ಸ್ಟೋರ್ ಮಾಡುತ್ತದೆ.
10:31 'ಗಿಟ್ ಕಮೀಟ್' ಗಳು 'SHA-1 ಹ್ಯಾಶ್' ನಿಂದ ಗುರುತಿಸಲ್ಪಡುತ್ತವೆ.
10:35 'SHA-1 ಹ್ಯಾಶ್' ನ ಪ್ರಾಮುಖ್ಯತೆಯನ್ನು ನೀವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ತಿಳಿಯುವಿರಿ.
10:41 ನಾವು ನಮ್ಮ ಟರ್ಮಿನಲ್ ಗೆ ಹಿಂದಿರುಗೋಣ.
10:43 ಇದು 'commit' ನ ಆಥರ್ ನೇಮ್, (Author), ಇಮೇಲ್ ಅಡ್ರೆಸ್, ಡೇಟ್, ಟೈಮ್ ಹಾಗೂ ಈಮೊದಲು ನಾವು ಕೊಟ್ಟಿರುವ 'ಕಮೀಟ್ ಮೆಸೇಜ್' ಗಳಂತಹ ವಿವರಗಳನ್ನು ತೋರಿಸುತ್ತದೆ.
10:56 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ.
11:00 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ, ನಾವು:
  • 'ಗಿಟ್ ರಿಪಾಸಿಟರಿ' ಮತ್ತು
  • 'git init, status, commit' ಹಾಗೂ 'log' ಗಳಂತಹ Git ನ ಕೆಲವು ಪ್ರಮುಖ ಕಮಾಂಡ್ ಗಳನ್ನು ಕಲಿತಿದ್ದೇವೆ.
11:14 ಒಂದು ಅಸೈನ್ಮೆಂಟ್- ನಿಮ್ಮ ಮಷಿನ್ ನಲ್ಲಿ ಒಂದು ಡಿರೆಕ್ಟರೀಯನ್ನು ಕ್ರಿಯೇಟ್ ಮಾಡಿ ಮತ್ತು ಅದನ್ನು ರಿಪಾಸಿಟರೀಯನ್ನಾಗಿ ಮಾಡಿ.
11:20 ಒಂದು ಟೆಕ್ಸ್ಟ್-ಫೈಲನ್ನು ಕ್ರಿಯೇಟ್ ಮಾಡಿ ಹಾಗೂ ಅದರಲ್ಲಿ ಕೆಲವು ವಿಷಯಗಳನ್ನು ಸೇರಿಸಿ.
11:25 ಫೈಲನ್ನು ಗಿಟ್ ರಿಪಾಸಿಟರೀಯ ಸ್ಟೇಜಿಂಗ್ ಏರಿಯಾಗೆ ಸೇರಿಸಿ.
11:29 ಫೈಲನ್ನು ನಿಮ್ಮ ರಿಪಾಸಿಟರೀಗೆ 'ಕಮೀಟ್' ಮಾಡಿ.
11:32 ಮತ್ತು, 'git log' ಕಮಾಂಡನ್ನು ಬಳಸಿ 'commit' ನ ವಿವರಗಳನ್ನು ನೋಡಿ.
11:35 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.

ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.

11:43 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ: contact@spoken-tutorial.org

11:55 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ.
12:02 ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ:

[1]

12:08 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..

ವಂದನೆಗಳು.

Contributors and Content Editors

Sandhya.np14