Digital-Divide/C2/How-to-buy-the-train-ticket/Kannada

From Script | Spoken-Tutorial
Jump to: navigation, search
Time Narration
00:01 Online Train booking ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ, ನಾವು:

'irctc' ಯಲ್ಲಿ ಟಿಕೆಟ್ ಅನ್ನು ಹೇಗೆ ಆಯ್ಕೆಮಾಡುವುದು

00:13 * ಪ್ರಯಾಣಿಸಲು ಸೆಕ್ಟರ್ ಅನ್ನು ಆಯ್ಕೆಮಾಡುವುದು
00:16 * ರೈಲು ಮತ್ತು ಪ್ರಯಾಣದ ದರ್ಜೆಯನ್ನು ಆಯ್ಕೆಮಾಡುವುದು
00:19 * ಯೂಸರ್ ನ ಮಾಹಿತಿಯನ್ನು ಕೊಡುವುದು ಮತ್ತು “e-ticket” ಅಥವಾ “i-ticket” ಎಂದು ನಿರ್ಧರಿಸುವುದು

ಇತ್ಯಾದಿಗಳ ಬಗ್ಗೆ ಕಲಿಯುವೆವು.

00:24 ಮೊದಲನೆಯ ಸಲ 'debit card' ಅನ್ನು ಬಳಸುವುದು ಹೇಗೆ ಮತ್ತು ಇದನ್ನು ಆನ್-ಲೈನ್ ಟಿಕೆಟ್ ಅನ್ನು ಖರೀದಿಸಲು ಹೇಗೆ ಬಳಸುವುದು ಎಂಬುದನ್ನು ಸಹ ನಾನು ಮಾಡಿತೋರಿಸುವೆನು.
00:32 ಟಿಕೆಟ್ ಅನ್ನು ಖರೀದಿಸಲು ಏನು ಅವಶ್ಯವಿದೆ? ಹಣ ಪಾವತಿ ಮಾಡಲು ಈ ಕೆಳಗಿನವುಗಳಲ್ಲಿ ಯಾವುದೇ ಒಂದರ ಅಗತ್ಯವಿದೆ -
00:36 * ATM ಕಾರ್ಡ್ ನೊಂದಿಗೆ ಬ್ಯಾಂಕ್ ನ ಖಾತೆ
00:39 * ಆನ್-ಲೈನ್ ವ್ಯವಹಾರದ ಸೌಲಭ್ಯವನ್ನು ಹೊಂದಿರುವ ಬ್ಯಾಂಕ್ ನ ಖಾತೆ
00:43 * ಕ್ರೆಡಿಟ್ ಕಾರ್ಡ್.
00:44 ಮತ್ತು, ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವ ಕಂಪ್ಯೂಟರ್ ಖಂಡಿತವಾಗಿಯೂ ಬೇಕು.
00:48 ನಾನು ಈ ಕೆಳಗಿನ ವಿಧಾನವನ್ನು ಆಯ್ಕೆಮಾಡುವೆನು.
00:50 ನನ್ನ ಹತ್ತಿರ 'ICICI ATM ಕಾರ್ಡ್' ಇದೆ.
00:53 ಇದು 'VISA ಡೆಬಿಟ್ ಕಾರ್ಡ್' ಸಹ ಆಗಿದೆ.
00:56 ಹೀಗಾಗಿ, ನಾವು ಈಗ ಒಂದು ಟಿಕೆಟ್ ಅನ್ನು ಖರೀದಿಸೋಣ.
00:59 'Username' ಅನ್ನು ಹೀಗೆ ಟೈಪ್ ಮಾಡುತ್ತೇನೆ: kannan underscore mou, 'Password'... ಇಲ್ಲಿ 'login' ಮಾಡುವೆನು.
01:12 ನನಗೆ Mumbai ಯಿಂದ ಹೋಗಬೇಕಾಗಿದೆ ಎಂದುಕೊಳ್ಳಿ. ನಾನು 4 ಅಕ್ಷರಗಳನ್ನು ಟೈಪ್ ಮಾಡಿದ ತಕ್ಷಣ ಅದು ಸೂಚಿಸುತ್ತದೆ. ನನಗೆ “Mumbai Central” ಅನ್ನು ಆಯ್ಕೆಮಾಡಬೇಕು. ನಾನು "SURA" , ಈ 4 ಅಕ್ಷರಗಳನ್ನು ಟೈಪ್ ಮಾಡಿ ಅದಕ್ಕಾಗಿ ಕಾಯುತ್ತೇನೆ.
01:26 ವಾಸ್ತವವಾಗಿ, ನನಗೆ ಸೂರತ್ ಗೆ ಹೋಗಬೇಕಾಗಿದೆ.
01:28 ಸ್ಟೇಶನ್ ಕೋಡ್ ಗಳು- “Bombay Central” ಗಾಗಿ 'BCT' ಮತ್ತು “Surat” ಗಾಗಿ 'ST' ಇರುವುದನ್ನು ಗಮನಿಸಿ.
01:35 ಇನ್ನುಮುಂದೆ, ನಾನು BCT ಹಾಗೂ ST ಗಳನ್ನು ನೇರವಾಗಿ ಟೈಪ್ ಮಾಡಬಹುದು. ಉದಾಹರಣೆಗೆ - ನಾವು ಇದನ್ನು ಡಿಲೀಟ್ ಮಾಡಿ BCT ಎಂದು ಟೈಪ್ ಮಾಡುತ್ತೇವೆ; ಇದನ್ನು ಇದ್ದ ಹಾಗೆಯೇ ಇಡುತ್ತೇವೆ.
01:47 'Date' .. ನಾನು 23rd December ಅನ್ನು ಆಯ್ಕೆಮಾಡಿ ಉಳಿದವುಗಳನ್ನು ಇದ್ದಂತೆಯೇ ಆಯ್ಕೆಮಾಡುತ್ತೇನೆ. 'e-ಟಿಕೆಟ್' ಮತ್ತು 'General'.
01:55 e-ಟಿಕೆಟ್ ಅಥವಾ i-ಟಿಕೆಟ್ ಗಳ ಬಗ್ಗೆ ನಾನು ನಂತರ ಹೇಳುತ್ತೇನೆ – ಯಾವ ಆಯ್ಕೆಗಳಿವೆ,
01:59 ವ್ಯತ್ಯಾಸಗಳೇನು, ಈಎಲ್ಲವನ್ನೂ ನಂತರ ವಿವರಿಸುವೆನು.
02:02 ರೈಲುಗಳನ್ನು ಹುಡುಕುತ್ತೇನೆ, 'Train name'... ಬಲಕ್ಕೆ ಸರಿಸುತ್ತೇನೆ ಮತ್ತು
02:08 ಇಲ್ಲಿ ಬಹಳಷ್ಟು ರೈಲುಗಳಿರುವುದನ್ನು ನೋಡುತ್ತೇನೆ. ನಾನು ಫಾಂಟ್ ಅನ್ನು ಸ್ವಲ್ಪ ಚಿಕ್ಕದು ಮಾಡುತ್ತೇನೆ.
02:11 ಇದರಿಂದ, ಅವುಗಳೆಲ್ಲವನ್ನೂ ನಾವು ನೋಡಬಹುದು.
02:15 ನನಗೆ '12935' ನಂಬರಿನ ರೈಲಿನಲ್ಲಿ ಹೋಗಬೇಕಾಗಿದೆ ಎಂದುಕೊಳ್ಳಿ.
02:19 ಹೀಗಾಗಿ, ‘2S’ ಎಂದರೆ, ಎರಡನೆಯ ದರ್ಜೆಯಲ್ಲಿ ಕುಳಿತುಕೊಳ್ಳಲು ಟಿಕೆಟ್ ಗಳು ನನಗೆ ಲಭ್ಯವಿದೆಯೋ ಹೇಗೆ ಎಂದು ನೋಡುತ್ತೇನೆ.
02:24 ಸ್ವಲ್ಪ ಸ್ಕ್ರೋಲ್-ಡೌನ್ ಮಾಡುತ್ತೇನೆ. ತಕ್ಷಣ ಇದು ‘ವೇಟ್ ಲಿಸ್ಟ್’ನಲ್ಲಿ (ನಿರೀಕ್ಷಣಾಪಟ್ಟಿ) ಇದೆ ಎಂದು ಹೇಳುತ್ತದೆ.
02:29 ಇದು ‘ವೇಟ್ ಲಿಸ್ಟ್’ನಲ್ಲಿ ಇದ್ದರೂ ಪರವಾಗಿಲ್ಲ. ನಾನು ಇದನ್ನು ಕಾಯ್ದಿರಿಸಬೇಕು.
02:34 ಆದ್ದರಿಂದ, ನಾನು ಇದನ್ನು ಕ್ಲಿಕ್ ಮಾಡುತ್ತೇನೆ. ನನಗೆ “The 'From' station that you have selected does not exist on the route. Choose one of these....” ಎಂಬ ಮೆಸೇಜ್ ಸಿಗುತ್ತದೆ.
02:44 ನನಗೆ 'Bandra Terminus' ಅನ್ನು ಆಯ್ಕೆಮಾಡಬೇಕಾಗಿದೆ ಅಂದುಕೊಳ್ಳಿ. ನಾನು ಇದನ್ನು ಬುಕ್ ಮಾಡುತ್ತೇನೆ.
02:57 ಸರಿ..ಈಗ ಹೀಗೆ ಟೈಪ್ ಮಾಡುತ್ತೇನೆ - Name: “Kannan Moudgalya”, “Age-53”, “Male”, “Berth preference” ಅನ್ನು “Window seat” ಎಂದು ಆಯ್ಕೆಮಾಡುತ್ತೇನೆ.
03:12 ಇದು ನಮಗೆ “Senior Citizen” ಎಂಬ ಬಟನ್ ಅನ್ನು ಕೊಡುತ್ತದೆ ಮತ್ತು ನನಗೆ “passenger's age should be 60 years or more” ಎಂಬ ಮೆಸೇಜ್ ಸಿಗುತ್ತದೆ. ನಾನು 'OK' ಎನ್ನುತ್ತೇನೆ.
03:22 ಒಂದುವೇಳೆ ನಾನು, 'Female Senior Citizen' (ಹಿರಿಯ ನಾಗರಿಕ ಮಹಿಳೆ) ಆಗಿದ್ದರೆ ಆಗ ಇದು “passenger's age should be 58 years or more” ಎಂದು ಹೇಳುತ್ತದೆ.
03:31 ಆದ್ದರಿಂದ, ಹಿರಿಯ ನಾಗರಿಕರೆಂದು (senior citizen) ಪರಿಗಣಿಸಲು, ಮಹಿಳೆಯರಿಗೆ ವಯಸ್ಸು 58 ಮತ್ತು ಪುರುಷರಿಗೆ 60 ಆಗಿರಬೇಕು.
03:39 ಹಿರಿಯ ನಾಗರಿಕರಿಗಾಗಿ (senor citizen) ರಿಯಾಯಿತಿ ಇರುತ್ತದೆ.
03:41 ನಾನು 'Male' ಗೆ ಹಿಂದಿರುಗುತ್ತೇನೆ. 'Window Seat'.
03;45 ನಾನು ಇದೆಲ್ಲದರ ಬಗ್ಗೆ ಚಿಂತಿಸುವುದಿಲ್ಲ. 'E37745A' ಈ ಇಮೇಜನ್ನು ಮಾತ್ರ ಸೇರಿಸಬೇಕು.
03:58 'Go' ಅನ್ನು ಒತ್ತುತ್ತೇನೆ.
04:03 ಇದು ವಿವರಗಳನ್ನು ಕೊಡುತ್ತದೆ ಮತ್ತು Total Amount (ಒಟ್ಟು ಮೊತ್ತ) Rs. 99 ಎಂದು ಹೇಳುತ್ತದೆ.
04:11 ಈಗ ನಾನು ಹಣವನ್ನು ಪಾವತಿ ಮಾಡಬೇಕು. ಇದನ್ನು ಕ್ಲಿಕ್ ಮಾಡುತ್ತೇನೆ.
04:20 ನಾನು ಇವುಗಳಲ್ಲಿ ಯಾವುದೇ ಕಾರ್ಡನ್ನು ಹೊಂದಿರಬಹುದು.
04:22 ನಾನು- 'Credit card' ಅನ್ನು ಹೊಂದಿರಬಹುದು, 'Net Banking' ಸೌಲಭ್ಯವನ್ನು ಬಳಸಬಹುದು, 'Debit Card', 'cash card' ಇತ್ಯಾದಿಗಳನ್ನು ಬಳಸಬಹುದು.
04:29 ಹೆಚ್ಚಿನ ಜನರಿಗೆ ಇದು ಸುಲಭವಾಗಿ ಸಿಗುವಂತೆ ಮಾಡಲು, ನಾನು ‘ಡೆಬಿಟ್ ಕಾರ್ಡ್’ನ ಬಳಕೆಯನ್ನು ಮಾಡಿತೋರಿಸುತ್ತೇನೆ.
04:38 ಇವುಗಳಲ್ಲಿ ಒಂದನ್ನು ನಾನು ಆಯ್ಕೆಮಾಡಬೇಕು. ಆದರೆ ದುರದೃಷ್ಟವಶಾತ್ ನನ್ನ ಹತ್ತಿರ ಇರುವ ICICI ಬ್ಯಾಂಕ್ ಕಾರ್ಡ್ ಇಲ್ಲಿ ಇಲ್ಲ.
04:46 ಆದರೆ ಇಲ್ಲಿ ಪಟ್ಟಿ ಮಾಡದೇ ಇರುವ ಯಾವುದೇ ಕಾರ್ಡ್ ಗಾಗಿ, ಅದು Visa ಅಥವಾ Master ‘ಡೆಬಿಟ್ ಕಾರ್ಡ್’' ಆಗಿದ್ದರೆ, ಇಲ್ಲಿ ಕ್ಲಿಕ್ ಮಾಡಿ ಎಂದು ಇದು ಹೇಳುತ್ತದೆ.
04:55 ಆದ್ದರಿಂದ ನಾನು ಇಲ್ಲಿ ಕ್ಲಿಕ್ ಮಾಡುತ್ತೇನೆ. ನನಗೆ “The following banks Visa / Master debit cards can be used to make online transaction as on date” ಎಂಬ ಮೆಸೇಜ್ ಸಿಗುತ್ತದೆ.
05:09 ICICI ಬ್ಯಾಂಕ್ ಅನ್ನು ಪಟ್ಟಿ ಮಾಡಲಾಗಿದೆ. ಇದನ್ನು ಕ್ಲೋಸ್ ಮಾಡುತ್ತೇನೆ. ಇವುಗಳಲ್ಲಿ ಒಂದನ್ನು ಆರಿಸಿಕೊಳ್ಳುತ್ತೇನೆ.
05:16 ನಾನು ಈ 'Visa/Master' ಅನ್ನು ಆರಿಸಿಕೊಳ್ಳುವೆನು. ಇಲ್ಲಿ 'Card Type', 'Visa' ಆಗಿದೆ.
05:23 ನನ್ನ ಹತ್ತಿರ ಇರುವ 'ATM' ಕಾರ್ಡ್ ನ ನಂಬರನ್ನು ನಾನು ತೋರಿಸುತ್ತಿಲ್ಲ.
05:27 ನೀವು, ನಿಮ್ಮ 'debit card' (ಡೆಬಿಟ್ ಕಾರ್ಡ್) ನ ಮೇಲೆ ಇರುವ 16 (ಹದಿನಾರು) ಅಂಕಿಗಳ ಸಂಖ್ಯೆಯನ್ನು, ನಂತರ 'Credit Card Expiry' ದಿನಾಂಕ, ಆನಂತರ
05:39 'CVV Number', ಇವುಗಳನ್ನು ಎಂಟರ್ ಮಾಡಬೇಕು (ನಮೂದಿಸಬೇಕು). ಇದು, ಮೂರು ಅಂಕಿಗಳ ಸಂಖ್ಯೆಯಾಗಿದೆ… ನಿಮ್ಮ ಕಾರ್ಡ್ ನ ಹಿಂಭಾಗದಲ್ಲಿರುವ ಕೊನೆಯ ಮೂರು ಅಂಕಿಗಳು.
05:44 ಮುಂದಿನದು, ನಿಮ್ಮ 'signature' ಆಗಿದೆ. ಈ ಮಾಹಿತಿಯನ್ನು ಸೇರಿಸಿದ ನಂತರ ನಾನು 'Buy' ಎಂಬ ಬಟನ್ ಅನ್ನು ಒತ್ತಬೇಕು.
05:52 ನಾನು ಈಗ ಅದನ್ನು ಮಾಡುತ್ತೇನೆ. ನನಗೆ 'ICICI' ಬ್ಯಾಂಕ್ ನಿಂದ ಈ ಕೆಳಗಿನ ಮೆಸೇಜ್ ಸಿಗುತ್ತದೆ.
05:57 ಈ ಕಾರ್ಡನ್ನು ಆನ್-ಲೈನ್ ವ್ಯವಹಾರಕ್ಕಾಗಿ ರಜಿಸ್ಟರ್ ಮಾಡಲು
06:04 ನಾನು ’validity date , Date Of Birth', ನಂತರ ನನ್ನ 'ATM PIN ' ನಂಬರ್ ಗಳನ್ನು ಕೊಡಬೇಕು.
06:09 ನಾನು ಇದನ್ನು ದೊಡ್ಡದು ಮಾಡುತ್ತೇನೆ. ಹೀಗಾಗಿ, ಇದು ಏನಿದೆ ಎಂದು ನೀವು ನೋಡಬಹುದು.
06:14 ನಾನು ಈ ಎಲ್ಲವನ್ನು ನಮೂದಿಸುತ್ತೇನೆ. ಆದರೆ ಇದನ್ನು ನಿಮಗೆ ತೋರಿಸಬೇಕಾಗಿದೆ.
06:21 ನಾನು ಇದನ್ನು ಮಾಡಿದ ತಕ್ಷಣ ನನಗೆ ಇಲ್ಲಿ ಕೊಟ್ಟಿರುವ ಮೆಸೇಜ್ ಸಿಗುತ್ತದೆ.
06:26 ಈಗ 6 ಅಂಕಿಗಳ ಸಂಖ್ಯೆಯನ್ನು ಕೊಡುತ್ತಿದ್ದೇನೆ. ಇದನ್ನು ನಾನು ಸರಿಯಾಗಿ ಆರಿಸಿಕೊಳ್ಳಬೇಕು. ಇದನ್ನು ನೆನಪಿಟ್ಟುಕೊಳ್ಳುವುದು ನನಗೆ ಸುಲಭವಾಗಿರಬೇಕು, ಇತರರಿಗೆ ಅಲ್ಲ.
06:36 ಪಾಸ್ವರ್ಡ್ ಅನ್ನು ಸರಿಯಾಗಿ ಕ್ರಿಯೇಟ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಲು, ಇದನ್ನು ನಾನು ಎರಡು ಸಲ ಟೈಪ್ ಮಾಡಬೇಕು. ಇದು ಟೈಪ್ ಮಾಡುವಾಗಿನ ತಪ್ಪುಗಳನ್ನು ತಡೆಗಟ್ಟುವುದು.
06:45 ನೆನಪಿಡಿ, ನೀವು ಈ ಪಾಸ್ವರ್ಡ್ ಅನ್ನು ಒಂದುಸಲ ಮಾತ್ರ ಕ್ರಿಯೇಟ್ ಮಾಡುತ್ತೀರಿ.
06:48 ಇನ್ನುಮುಂದೆ, ನೀವು ನಿಮ್ಮ ಡೆಬಿಟ್-ಕಾರ್ಡ್ ನೊಂದಿಗೆ ಈ ಪಾಸ್ವರ್ಡ್ ಅನ್ನು ಉಪಯೋಗಿಸುವಿರಿ. ಇದನ್ನು ದೃಢಪಡಿಸಲು, ನಾನು 'submit' ಮಾಡುತ್ತೇನೆ.
07:00 ನನಗೆ "Congratulations! The ticket has been booked...." ಎಂಬ ಮೆಸೇಜ್ ಸಿಗುತ್ತದೆ.
07:06 PNR ನಂಬರ್ ಸಹಿತ, ಟಿಕೆಟ್ ನ ಬಗ್ಗೆ ಎಲ್ಲ ಮಾಹಿತಿಗಳನ್ನು ಸಹ ಕೊಟ್ಟಿರುವುದನ್ನು ಗಮನಿಸಿ.
07:13 ವೇಟ್-ಲಿಸ್ಟ್ ನಲ್ಲಿರುವ ನಮ್ಮ ಟಿಕೆಟ್, ಪ್ರಯಾಣವನ್ನು ಆರಂಭಿಸುವ ಮೊದಲು ಖಚಿತವಾಗಿದೆಯೇ ಎಂಬುದನ್ನು ನೋಡಲು ಇದನ್ನು ನಾವು ಅನುಸರಿಸಬೇಕು.
07:21 ಈಗ ನಾವು, IRCTC ಯಿಂದ ಕಳಿಸಲಾದ ಸ್ವಯಂಚಾಲಿತ ಇಮೇಲ್ ಅನ್ನು ನೋಡುತ್ತಿದ್ದೇವೆ. ಟಿಕೆಟ್ ನ ವಿವರಗಳು ಇಲ್ಲಿವೆ.
07:29 ನಿಮಗೆ ಬೇಕಾದರೆ ಪ್ರಿಂಟ್-ಔಟ್ ಅನ್ನು ತೆಗೆದುಕೊಳ್ಳಬಹುದು. ನಾವು ಸ್ಲೈಡ್ ಗಳಿಗೆ ಹಿಂದಿರುಗೋಣ.
07:36 ನಾನು ಸ್ಲೈಡ್ ಗೆ ಹಿಂದಿರುಗಿದ್ದೇನೆ. ಮುಂದೆ ಏನು ಮಾಡುವುದು?
07:39 ನೀವು ಟಿಕೆಟ್ ನ ಪ್ರಿಂಟ್-ಔಟ್ ಅನ್ನು ತೆಗೆದುಕೊಳ್ಳಬಹುದು.
07:42 ನೀವು ಪ್ರಯಾಣಿಸುವ ಮೊದಲು ವೇಟ್-ಲಿಸ್ಟ್ ನಲ್ಲಿರುವ ಟಿಕೆಟ್ ದೃಢಪಟ್ಟಿರಬೇಕು.
07:47 ವೇಟ್-ಲಿಸ್ಟ್ ನಲ್ಲಿರುವಾಗ ಪಡೆದುಕೊಂಡ ಪ್ರಿಂಟ್-ಔಟ್ ಸಾಕು.
07:51 ನೀವು ಇದನ್ನು ಮತ್ತೊಮ್ಮೆ ಪ್ರಿಂಟ್ ಮಾಡಬೇಕಾಗಿಲ್ಲ.
07:53 ಟಿಕೆಟ್, ಈಗಾಗಲೇ ಖಚಿತವಾಗಿದ್ದರೆ (confirmed) ಯಾವ ತೊಂದರೆಯೂ ಇಲ್ಲ.
07:58 ಈ ಟ್ಯುಟೋರಿಯಲ್ ನಲ್ಲಿ ನಾನು ತೋರಿಸಿದ ವಿಧಾನವು ಸಾರ್ವತ್ರಿಕವಾಗಿದೆಯೇ?
08:03 ವಿವಿಧ ATM ಕಾರ್ಡ್ ಗಳಲ್ಲಿ ಸಣ್ಣ ವ್ಯತ್ಯಾಸಗಳಿರಬಹುದು.
08:07 ಕ್ರೆಡಿಟ್-ಕಾರ್ಡ್ ಗಳಿಗಾಗಿ ವಿಧಾನವು ಹೀಗೆಯೇ ಇದೆ. ‘ಆನ್-ಲೈನ್’ ಬ್ಯಾಂಕ್ ವ್ಯವಹಾರವು ಹೀಗೆಯೇ ಇದೆ.
08:14 ಆದರೆ, ಒಟ್ಟಾರೆ ಪ್ರಕ್ರಿಯೆಯು ಎಲ್ಲಾ ವಿಧಾನಗಳಲ್ಲಿ:
08:20 * ಕಾರ್ಡ್ ಅಥವಾ ಅಕೌಂಟ್ ನ ಮಾಹಿತಿಯನ್ನು ಕೊಡಲು
08:23 * ಪಾಸ್ವರ್ಡ್ ಅನ್ನು ಕೊಡಲು ಒಂದೇರೀತಿಯಾಗಿದೆ.

ಕೆಲವುಸಲ ನಿಮ್ಮ ಮೊಬೈಲ್ ಫೋನ್ ಗೆ ಕಳಿಸಲಾದ ತಾತ್ಕಾಲಿಕ ಕೋಡ್ ನ ಅವಶ್ಯವಿದೆ.

08:31 'e-ಟಿಕೆಟ್’ ಅನ್ನು ಖರೀದಿಸಬೇಕೋ ಅಥವಾ ‘i-ಟಿಕೆಟ್’ ಅನ್ನು? ಇದು ಮುಂದಿನ ಪ್ರಶ್ನೆ ಆಗಿದೆ.
08:36 ಮೊದಲು ನಾವು 'e-ಟಿಕೆಟ್' ನೊಂದಿಗೆ ಆರಂಭಿಸುವೆವು. ಇದನ್ನು ನೀವು ಕೊನೆಯ ಗಳಿಗೆಯಲ್ಲಿ ಸಹ ಖರೀದಿಸಬಹುದು.
08:41 ನಿಮಗೆ ಪ್ರಿಂಟರ್ ಅಥವಾ ಸ್ಮಾರ್ಟ್ ಫೋನ್ ನ ಅಗತ್ಯವಿದೆ. ಆದಾಗ್ಯೂ, ಇದು ಕಳೆದಹೋದರೆ ಹೇಗೆ ಎಂದು ಚಿಂತಿಸಬೇಡಿ.
08:48 ನೀವು ಇದನ್ನು ಕಳೆದುಕೊಂಡರೆ, ಇನ್ನೊಂದು ಪ್ರಿಂಟ್-ಔಟ್ ಅನ್ನು ಯಾವಾಗಲೂ ತೆಗೆದುಕೊಳ್ಳಬಹುದು.
08:51 ಆದಾಗ್ಯೂ, ಪ್ರಯಾಣದ ಸಮಯದಲ್ಲಿ ನಿಮಗೆ “ಐಡೆಂಟಿಟಿ ಪ್ರೂಫ್” ಬೇಕು.
08:55 i-ಟಿಕೆಟ್ ಇದ್ದರೆ, ಇದನ್ನು ‘ಕುರಿಯರ್’ ನಿಂದ ಕಳಿಸಲಾಗುವುದು. ಆದರೆ, ಇದಕ್ಕಾಗಿ ನೀವು ಸುಮಾರು Rs-50 ಅನ್ನು ಪಾವತಿಮಾಡಬೇಕು.
09:03 ಅಂಚೆಯಿಂದ ನಿಮಗೆ ಇದು ತಲುಪಲು 2-3 ದಿನಗಳು ಬೇಕು.
09:07 ಎಲ್ಲ ಊರು ಮತ್ತು ಹಳ್ಳಿಗಳಿಗೆ ಅಂಚೆಯ ಬಟವಾಡೆಯು ಲಭ್ಯವಿಲ್ಲ.
09:11 ರದ್ದುಗೊಳಿಸುವುದನ್ನು ಟಿಕೆಟ್-ಕೌಂಟರ್ ಗಳಲ್ಲಿ ಮಾತ್ರ ಮಾಡಬಹುದು.
09:15 i-ಟಿಕೆಟ್ ನೊಂದಿಗೆ ನೀವು ಪ್ರಯಾಣಿಸುವಾಗ ನಿಮಗೆ “ಐಡೆಂಟಿಟಿ ಪ್ರೂಫ್”ನ ಅವಶ್ಯಕತೆಯಿಲ್ಲ.
09:21 “ಐಡೆಂಟಿಟಿ ಪ್ರೂಫ್” ಎಂದರೇನು?
09:22 ನಿಮ್ಮ ಫೋಟೋಅನ್ನು ಹೊಂದಿರುವ, ಸರಕಾರದಿಂದ ನೀಡಲಾದ ಯಾವುದೇ ಕಾರ್ಡ್ ಆಗಿದೆ. ಇದು:
09:26 * 'PAN' ಕಾರ್ಡ್
09:27 * ಇಲೆಕ್ಶನ್ ಕಾರ್ಡ್
09:28 * ಡ್ರೈವಿಂಗ್ ಲೈಸೆನ್ಸ್ ಅಥವಾ
09:29 * ಪಾಸ್ಪೋರ್ಟ್, ಇವುಗಳಲ್ಲಿ ಯಾವುದಾದರೂ ಒಂದು ಆಗಿರಬೇಕು.
09:33 ಇದನ್ನು ವಿವರಿಸುವ ಒಂದು ವೆಬ್ಸೈಟ್ ಅನ್ನು ಈಗ ನಾನು ಓಪನ್ ಮಾಡಿದ್ದೇನೆ. ನಿಮ್ಮ ಫೋಟೋದೊಂದಿಗೆ ಇವುಗಳಲ್ಲಿ ಯಾವುದಾದರೂ ಒಂದನ್ನು ತೆಗೆದುಕೊಂಡು ಹೋಗಬೇಕು.
09:41 ನಾವು ಸ್ಲೈಡ್ ಗಳಿಗೆ ಹಿಂದಿರುಗೋಣ.
09:43 ಇಲ್ಲಿ, ರಿಯಾಯಿತಿ ದರಗಳು ಲಭ್ಯವಿರುತ್ತವೆ.
09:46 ಇಲ್ಲಿ, ಒಂದು ಉಪಯುಕ್ತ ಸೈಟ್ ಅನ್ನು ಕೊಡಲಾಗಿದೆ. ಈಗ ನಾವು ಈ ಸೈಟ್ ಗೆ ಭೇಟಿಕೊಡೋಣ.
09:55 ನಾನು ಸ್ಲೈಡ್ ಗಳಿಗೆ ಹಿಂದಿರುಗಿದ್ದೇನೆ. ಹಿರಿಯ ನಾಗರಿಕರು (Senior citizens) ಸುಮಾರು 40% ರಿಯಾಯಿತಿಯನ್ನು ಪಡೆಯುತ್ತಾರೆ.
10:01 “ಹಿರಿಯ ನಾಗರಿಕ” ಎಂದರೆ ಯಾರು? ಪುರುಷರಿಗೆ- ವಯಸ್ಸು 60 ವರ್ಷ ಮತ್ತು ಮೇಲ್ಪಟ್ಟು ಹಾಗೂ ಸ್ತ್ರೀಯರಿಗೆ ಇದು 58 ವರ್ಷ ಮತ್ತು ಮೇಲ್ಪಟ್ಟು ಆಗಿರುತ್ತದೆ.
10:09 ಯಾವುದೇ ರಿಯಾಯಿತಿಗಾಗಿ, ಪ್ರಯಾಣದ ಸಮಯದಲ್ಲಿ ನಮಗೆ ಪುರಾವೆಯು ಬೇಕಾಗುತ್ತದೆ.
10:15 ಪ್ರಯಾಣಿಸುವಾಗ ಏನನ್ನು ತೆಗೆದುಕೊಂಡು ಹೋಗಬೇಕು? ನೀವು 'e-ಟಿಕೆಟ್' ಅನ್ನು ಬುಕ್ ಮಾಡಿದರೆ, ನಿಮ್ಮ ಟಿಕೆಟ್ ನ ಯಾವುದೇ ಒಂದು ಪುರಾವೆ - ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಒಂದು 'e-copy' ಅಥವಾ ಟಿಕೆಟ್ ನ ಪ್ರಿಂಟ್-ಔಟ್ (ಮುದ್ರಿತ ಪ್ರತಿ) ಮತ್ತು ನಿಮ್ಮ ‘ಐಡೆಂಟಿಟೀ ಕಾರ್ಡ್’ (ಗುರುತಿನ ಚೀಟಿ) ಇವುಗಳು ಬೇಕಾಗುತ್ತವೆ.
10:29 ಅಥವಾ 'i-ಟಿಕೆಟ್' ಅನ್ನು ಪಡೆಯಿರಿ.
10:32 ಈಮೊದಲು ಹೇಳಿದಂತೆ, i-ಟಿಕೆಟ್ ನ ವಿಷಯದಲ್ಲಿ ಐಡೆಂಟಿಟಿ (ಗುರುತು) ಪುರಾವೆ ಬೇಕಾಗಿಲ್ಲ.
10:37 ನಿಮಗಾಗಿ ಈ ಕೆಳಗಿನ ಉಪಯುಕ್ತ ಸಲಹೆಗಳನ್ನು ಕೊಡುತ್ತೇನೆ.
10:40 ದಯವಿಟ್ಟು ಮುಂಚಿತವಾಗಿ ಕಾಯ್ದಿರಿಸಿ:
10:42 * ಪ್ರಯಾಣ ಮಾಡುವ ಅವಕಾಶಗಳು ಕಡಿಮೆ ಇದ್ದರೂ ಪರವಾಗಿಲ್ಲ.
10:46 ನೀವು ಟಿಕೆಟ್ ಗಳನ್ನು ಯಾವಾಗಲೂ ರದ್ದುಗೊಳಿಸಬಹುದು. ಹೀಗೆ ಮಾಡಿದರೆ ನೀವು ಸ್ವಲ್ಪ ಹಣವನ್ನು ಕಳೆದುಕೊಳ್ಳುವಿರಿ.
10:51 ಆದಾಗ್ಯೂ, ಟಿಕೆಟ್ ಅನ್ನು ಹೊಂದಿರದೇ ಇರುವುದಕ್ಕಿಂತ ಇದು ಉತ್ತಮ.
10:55 * ನೀವು ಟಿಕೆಟ್ ಅನ್ನು ಕೊನೆಯ ಗಳಿಗೆಯಲ್ಲಿ ಖರೀದಿಸಲು ಸಾಧ್ಯವಿಲ್ಲ.
10:57 * IRCTC ವೆಬ್ಸೈಟ್ ಶೀಘ್ರವಾಗಿದ್ದಾಗ ಬುಕ್ ಮಾಡಿ -
11:01 ಸಾಮಾನ್ಯವಾಗಿ ನಡುಮಧ್ಯಾಹ್ನದಲ್ಲಿ ಅಥವಾ ರಾತ್ರಿಯಲ್ಲಿ ಅದು ಶೀಘ್ರವಾಗಿರಬಹುದು.
11:06 ನಿಮಗೆ ಸಾಧ್ಯವಾದರೆ 8 to 10 AM ಅನ್ನು ತಪ್ಪಿಸಿ.
11:10 ಮುಂದಿನ ಟ್ಯುಟೋರಿಯಲ್ ನಲ್ಲಿ ನಾವು, IRCTC ಯ ಮೂಲಕ ಬುಕ್ ಮಾಡಲಾದ ಟಿಕೆಟ್ ಗಳನ್ನು ನಿರ್ವಹಿಸುವುದರ ಬಗ್ಗೆ,
11:18 * ಹಿಂದಿನ ಬುಕಿಂಗ್ ಅನ್ನು ಹೇಗೆ ನೋಡುವುದು
11:20 * PNR ಸ್ಟ್ಯಾಟಸ್ ಅನ್ನು ಹೇಗೆ ನೋಡುವುದು
11:23 * ಮತ್ತು ಟಿಕೆಟ್ ಅನ್ನು ಹೇಗೆ ರದ್ದುಗೊಳಿಸುವುದು (cancel) ಇತ್ಯಾದಿಗಳನ್ನು ಚರ್ಚಿಸುವೆವು.
11:25 ನಾನು ಈಗ 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಬಗ್ಗೆ ಹೇಳುವೆನು.
11:28 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.

http://spoken-tutorial.org/what_is_ spoken_tutorial.

11:35 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
11:38 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
11:43 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:
11:45 * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ
11:48 * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
11:51 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

11:54 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
11:58 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
12:03 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

http://spoken-tutorial.org/NMEICT-Intro.

12:12 ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
12:15 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕಿ ಗ್ಲೋರಿಯಾ.

ಧನ್ಯವಾದಗಳು.

Contributors and Content Editors

Sandhya.np14