Ubuntu-Linux-on-Virtual-Box/C2/Installing-VirtualBox-in-Windows-OS/Kannada

From Script | Spoken-Tutorial
Revision as of 18:25, 25 July 2019 by Nancyvarkey (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
Narration
00:01 Windows ಆಪರೇಟಿಂಗ್ ಸಿಸ್ಟಮ್ ನಲ್ಲಿ, Installing VirtualBox (ಇನ್ಸ್ಟಾಲಿಂಗ್ ವರ್ಚ್ಯುವಲ್ ಬಾಕ್ಸ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು, ವರ್ಚ್ಯುವಲ್ ಬಾಕ್ಸ್ ಅನ್ನು ಡೌನ್ಲೋಡ್ ಮಾಡುವುದು ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ ನಲ್ಲಿ ಅದನ್ನು ಇನ್ಸ್ಟಾಲ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
00:18 ಈ ಟ್ಯುಟೋರಿಯಲ್ ಅನ್ನು: Windows ಆಪರೇಟಿಂಗ್ ಸಿಸ್ಟಮ್ ನ ೧೦ ನೆ ಆವೃತ್ತಿ,
00:24 VirtualBox ನ 5.2.18 ನೆ ಆವೃತ್ತಿ,
00:29 Firefox (ಫೈರ್-ಫಾಕ್ಸ್) ವೆಬ್ ಬ್ರೌಸರ್ ಇವುಗಳನ್ನು ಬಳಸಿ ರೆಕಾರ್ಡ್ ಮಾಡಲಾಗಿದೆ.
00:32 ಆದರೆ ನೀವು ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ಬಳಸಬಹುದು.
00:38 ನಾವು ಆರಂಭಿಸುವ ಮೊದಲು, ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.
00:44 ವರ್ಚ್ಯುವಲ್ ಬಾಕ್ಸ್ ಎಂದರೇನು?

VirtualBox- ಇದೊಂದು ವರ್ಚ್ಯುವಲೈಝೇಶನ್ ಗಾಗಿ ಇರುವ ಉಚಿತ ಹಾಗು ಓಪನ್ ಸೋರ್ಸ್ ಸಾಫ್ಟ್ ವೇರ್ ಆಗಿದೆ.

00:52 ಇದು, ಬೇಸ್ ಮಶಿನ್ ಅರ್ಥಾತ್ ಹೋಸ್ಟ್ ನಲ್ಲಿ, ಅನೇಕ ಆಪರೇಟಿಂಗ್ ಸಿಸ್ಟಮ್ ಗಳನ್ನು ಇನ್ಸ್ಟಾಲ್ ಮಾಡಿ, ಬಳಸಲು ನಮಗೆ ಅನುಮತಿಸುತ್ತದೆ.
01:00 ಬೇಸ್ ಮಶಿನ್, ವಿಂಡೋಸ್, ಲಿನಕ್ಸ್ ಅಥವಾ ಮ್ಯಾಕ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರಬಹುದು.
01:07 ವರ್ಚ್ಯುವಲ್ ಬಾಕ್ಸ್ ನಲ್ಲಿ ಒಂದು OS ಅನ್ನು ಇನ್ಸ್ಟಾಲ್ ಮಾಡಲು, ಬೇಸ್ ಮಶಿನ್ ಈ ಕೆಳಗಿನ ಕಾನ್ಫಿಗರೇಷನ್ ಅನ್ನು ಹೊಂದಿರಬೇಕು:
01:15 i 3 (ಐ ೩) ಅಥವಾ ಅದಕ್ಕಿಂತ ಹೆಚ್ಚಿನ ಪ್ರೊಸೆಸರ್,
01:19 4 ಜಿ ಬಿ ಅಥವಾ ಅದಕ್ಕಿಂತ ಹೆಚ್ಚಿನ RAM,
01:23 50 ಜಿ ಬಿ ಅಥವಾ ಅದಕ್ಕಿಂತ ಹೆಚ್ಚು ಖಾಲಿ ಸ್ಪೇಸ್ ಹೊಂದಿರುವ ಹಾರ್ಡ್ ಡಿಸ್ಕ್ ಮತ್ತು ಬಯೋಸ್ ನಲ್ಲಿ ವರ್ಚ್ಯುವಲೈಜೇಷನ್ ಅನ್ನು ಸಕ್ರಿಯಗೊಳಿಸಿರಬೇಕು.
01:34 ಇದು ವರ್ಚ್ಯುವಲ್ ಬಾಕ್ಸ್ ಸಲೀಸಾಗಿ ಕೆಲಸ ಮಾಡುವುದನ್ನು ಖಚಿತಪಡಿಸುತ್ತದೆ.
01:40 ಒಂದುವೇಳೆ, ಬೇಸ್ ಮಶಿನ್, ವಿಂಡೋಸ್ OS ಅನ್ನು ಹೊಂದಿದ್ದಲ್ಲಿ, ಆಗ ಅದು ಈ ಕೆಳಗಿನ ಆವೃತ್ತಿಗಳಲ್ಲಿ ಯಾವುದಾದರೂ ಒಂದು ಆಗಿರಬೇಕು.
01:47 Windows 7,
01:49 Windows 8 ಅಥವಾ Windows 10.
01:53 ಈಗ ನಾವು ಇನ್ಸ್ಟಾಲೇಷನ್ ಅನ್ನು ಆರಂಭಿಸೋಣ.
01:56 ವರ್ಚ್ಯುಯಲ್ ಬಾಕ್ಸ್ ನ ಇತ್ತೀಚಿನ ಆವೃತ್ತಿಯನ್ನು ಡೌನ್ಲೋಡ್ ಮಾಡಲು, ವೆಬ್ ಬ್ರೌಸರ್ ನಲ್ಲಿ ಈ ಲಿಂಕ್ ಗೆ ಹೋಗಿ: www dot virtualbox dot org slash wiki slash Downloads.
02:14 ನಾನು ನನ್ನ ಕಂಪ್ಯೂಟರ್ ನಲ್ಲಿ, ಫೈರ್-ಫಾಕ್ಸ್ ವೆಬ್-ಬ್ರೌಸರ್ ನಲ್ಲಿ ಈಗಾಗಲೇ ಈ "ಯು ಆರ್ ಎಲ್" ಅನ್ನು ಓಪನ್ ಮಾಡಿದ್ದೇನೆ.
02:21 ಅನೇಕ ಹೋಸ್ಟ್ ಗಳಿಗಾಗಿ, ವರ್ಚ್ಯುವಲ್ ಬಾಕ್ಸ್ ನ ಇತ್ತೀಚಿನ ಆವೃತ್ತಿಯನ್ನು ಡೌನ್ಲೋಡ್ ಮಾಡುವ ಲಿಂಕ್ ಅನ್ನು ಈ ಪೇಜ್ ತೋರಿಸುತ್ತದೆ.
02:30 ಇದನ್ನು ರೆಕಾರ್ಡ್ ಮಾಡುವ ಸಮಯದಲ್ಲಿ, ವರ್ಚ್ಯುವಲ್ ಬಾಕ್ಸ್ ನ ಹೊಸ ಆವೃತ್ತಿ 5.2.18 ಆಗಿತ್ತು.
02:39 ಮುಂದೆ ಈ ಟ್ಯುಟೋರಿಯಲ್ ಅನ್ನು ನೀವು ನೋಡುವಾಗ, ಇದು ಬೇರೆ ಆಗಿರಬಹುದು.
02:44 ಈಗ Windows hosts ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
02:48 ಇದು Windows OS ಗಾಗಿ, ವರ್ಚ್ಯುವಲ್ ಬಾಕ್ಸ್ ಅನ್ನು ಡೌನ್ಲೋಡ್ ಮಾಡುವುದು.
02:53 ನಿಮ್ಮ ಇಂಟರ್ನೆಟ್ ನ ವೇಗಕ್ಕೆ ಅನುಗುಣವಾಗಿ, ಡೌನ್ಲೋಡ್ ಆಗಲು ಸ್ವಲ್ಪ ಸಮಯ ಬೇಕಾಗಬಹುದು.
02:58 ಗಮನಿಸಿ: ವರ್ಚ್ಯುವಲ್ ಬಾಕ್ಸ್ ಅನ್ನು ಇನ್ಸ್ಟಾಲ್ ಮಾಡುವ ಮೊದಲು, ನಮ್ಮ ಮಷಿನ್ ನಲ್ಲಿ Virtualization (ವರ್ಚ್ಯುವಲೈಜೇಷನ್) ಸಕ್ರಿಯವಾಗಿದೆಯೇ ಎಂದು ನಾವು ಖಚಿತಪಡಿಸಿಕೊಳ್ಳಬೇಕು.
03:08 Windows 8 ಅಥವಾ 10 ಮಶಿನ್ ನಲ್ಲಿ, Virtualization ಅನ್ನು ಸಕ್ರಿಯಗೊಳಿಸಲಾಗಿದೆಯೇ ಎಂದು ನಾವು ಪರಿಶೀಲಿಸೋಣ.
03:16 ವಿಂಡೋದ ಕೆಳತುದಿಯ ಎಡಭಾಗದಲ್ಲಿರುವ ಟಾಸ್ಕ್-ಬಾರ್ ಗೆ ಹೋಗಿ. ರೈಟ್- ಕ್ಲಿಕ್ ಮಾಡಿ ಮತ್ತು Task Manager ಅನ್ನು ಆಯ್ಕೆ ಮಾಡಿ.
03:25 Task manager (ಟಾಸ್ಕ್ ಮ್ಯಾನೇಜರ್) ಎಂಬ ವಿಂಡೋ ತೆರೆದುಕೊಳ್ಳುತ್ತದೆ.
03:29 ನೀವು ಇದನ್ನು ಮೊದಲ ಬಾರಿಗೆ ತೆರೆಯುತ್ತಿದ್ದರೆ, ಈ ವಿಂಡೋದ ಕೆಳಗೆ ಇರುವ More details ನ ಮೇಲೆ ಕ್ಲಿಕ್ ಮಾಡಿ. ನಂತರ Performance ಎಂಬ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
03:40 Performance ಟ್ಯಾಬ್ ನಲ್ಲಿ, ಕೆಳಗೆ ಬಲಭಾಗದಲ್ಲಿರುವ Virtualization ಗೆ ಹೋಗಿ.
03:46 ಇದು, ನಮ್ಮ ಮಶಿನ್ ನಲ್ಲಿ Virtualization ಸಕ್ರಿಯ (enable) ಆಗಿದೆಯೋ ಇಲ್ಲವೋ ಎಂದು ಹೇಳುತ್ತದೆ.
03:53 ಇದು ಸಕ್ರಿಯ ಆಗಿರದಿದ್ದರೆ, ದಯವಿಟ್ಟುಇದನ್ನು BIOS (ಬಯೋಸ್) ಸೆಟ್ಟಿಂಗ್ಸ್ ನಲ್ಲಿ ಸಕ್ರಿಯಗೊಳಿಸಿ.
03:59 ಕಂಪ್ಯೂಟರ್ ನಿಂದ ಕಂಪ್ಯೂಟರ್ ಗೆ ಬಯೋಸ್ ಸೆಟ್ಟಿಂಗ್ಸ್ ಬದಲಾಗುವುದರಿಂದ, ಇಲ್ಲಿ ನಾವು ಅದನ್ನು ಮಾಡಿತೋರಿಸಲು ಸಾಧ್ಯವಿಲ್ಲ.
04:06 ನೀವು ತಂತ್ರಜ್ಞ ಆಗಿರದಿದ್ದರೆ, ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ನ ಸಹಾಯದಿಂದ ಇದನ್ನು ಮಾಡಿ.
04:13 ಬಯೋಸ್ ನಲ್ಲಿ Virtualization ಆಯ್ಕೆಯು ಲಭ್ಯವಿರದಿದ್ದರೆ, ನಾವು ಆ ಮಷಿನ್ ನಲ್ಲಿ ವರ್ಚ್ಯುವಲ್ ಬಾಕ್ಸ್ ಅನ್ನು ಇನ್ಸ್ಟಾಲ್ ಮಾಡಲು ಸಾಧ್ಯವಿಲ್ಲ.
04:22 ನನ್ನ ಮಶಿನ್ ನಲ್ಲಿ ಇದು ಈಗಾಗಲೇ Enabled (ಎನೇಬಲ್ಡ್) ಆಗಿದೆ.
04:26 ಈಗ, ಮೇಲ್ಗಡೆ ಬಲಮೂಲೆಯಲ್ಲಿರುವ x ಐಕಾನ್ ಅನ್ನು ಕ್ಲಿಕ್ ಮಾಡಿ ಟಾಸ್ಕ್-ಬಾರ್ ಅನ್ನು ಕ್ಲೋಸ್ ಮಾಡಿ.
04:33 ಈಗ ನಾವು ವರ್ಚ್ಯುವಲ್ ಬಾಕ್ಸ್ ಅನ್ನು ಇನ್ಸ್ಟಾಲ್ ಮಾಡೋಣ.
04:37 ನಾವು VirtualBox.exe ಫೈಲ್ ಅನ್ನು ಡೌನ್ಲೋಡ್ ಮಾಡಿರುವ ಫೋಲ್ಡರ್ ಗೆ ಹೋಗಿ.
04:43 ಈಗ ಫೈಲ್ ನ ಮೇಲೆ ರೈಟ್-ಕ್ಲಿಕ್ ಮಾಡಿ ಮತ್ತು Run as Administrator ಅನ್ನು ಆಯ್ಕೆಮಾಡಿ.
04:49 ಈಗ ಕಾಣಿಸಿಕೊಳ್ಳುವ User Account Control ಡಯಲಾಗ್-ಬಾಕ್ಸ್ ನಲ್ಲಿ Yes ಅನ್ನು ಕ್ಲಿಕ್ ಮಾಡಿ.
04:56 ಒಂದು ವೆಲ್-ಕಮ್ ಮೆಸೇಜ್ ನೊಂದಿಗೆ, Oracle VM VirtualBox 5.2.18 Setup (ಒರಾಕಲ್ ವಿಎಮ್ ವರ್ಚ್ಯುವಲ್ ಬಾಕ್ಸ್ 5.2.18 ಸೆಟ್ ಅಪ್) ಎಂಬ ವಿಂಡೋ ಕಾಣಿಸಿಕೊಳ್ಳುತ್ತದೆ.
05:06 ಮುಂದುವರಿಯಲು, ವಿಂಡೋದ ಕೆಳಭಾಗದಲ್ಲಿರುವ Next ಬಟನ್ ನ ಮೇಲೆ ಕ್ಲಿಕ್ ಮಾಡಿ.
05:12 ಮುಂದಿನ ಸ್ಕ್ರೀನ್, Custom Setup ಆಗಿದೆ.
05:16 ನಾವು ಇನ್ಸ್ಟಾಲೇಷನ್ ನ ಲೊಕೇಷನ್ ಅನ್ನು ಬೇಕಾದರೆ ಬದಲಿಸಬಹುದು.
05:22 Browse ಬಟನ್ ನ ಮೇಲೆ ಕ್ಲಿಕ್ ಮಾಡಿ, ನಂತರ ಇನ್ಸ್ಟಾಲೇಷನ್ ಗೆ ಬೇಕಾದ ಲೊಕೇಷನ್ ಅನ್ನು ಆಯ್ಕೆ ಮಾಡಿ.
05:29 ನಾನು ಡಿಫಾಲ್ಟ್ ಲೊಕೇಷನ್ ನಲ್ಲಿಯೇ ಇನ್ಸ್ಟಾಲ್ ಮಾಡಲು ಇಷ್ಟಪಡುತ್ತೇನೆ. ಆದ್ದರಿಂದ ಇದನ್ನು ಹಾಗೇ ಬಿಡುತ್ತೇನೆ.
05:35 ಮುಂದುವರಿಯಲು, ವಿಂಡೋದ ಕೆಳಭಾಗದಲ್ಲಿರುವ Next ಬಟನ್ ಅನ್ನು ಕ್ಲಿಕ್ ಮಾಡಿ.
05:40 ಮುಂದಿನ Custom Setup ಸ್ಕ್ರೀನ್ ನಲ್ಲಿ, ನಾವು ನಮ್ಮ ಅವಶ್ಯಕತೆಗೆ ಅನುಗುಣವಾಗಿ ಕೆಲವು ವೈಶಿಷ್ಟ್ಯಗಳನ್ನು ಆರಿಸಿಕೊಳ್ಳಬಹುದು.

ಡಿಫಾಲ್ಟ್ ಆಗಿ, ಎಲ್ಲಾ ಆಯ್ಕೆಗಳನ್ನು ಆರಿಸಲಾಗುವುದು.

05:52 ವಿಂಡೋದ ಕೆಳಭಾಗದಲ್ಲಿರುವ Next ಬಟನ್ ಅನ್ನು ಕ್ಲಿಕ್ ಮಾಡಿ.
05:56 ಮುಂದಿನ ವಿಂಡೋ, ನೆಟ್ವರ್ಕ್ ಗೆ ಸಂಬಂಧಿಸಿದ ಕೆಲವು ಎಚ್ಚರಿಕೆಯ ಸಂದೇಶಗಳನ್ನು ತೋರಿಸುತ್ತದೆ.
06:01 ಇನ್ಸ್ಟಾಲೇಶನ್ ಸಮಯದಲ್ಲಿ, ತಾತ್ಕಾಲಿಕವಾಗಿ ಇಂಟರ್ನೆಟ್ ಸಂಪರ್ಕವು ಕಡಿತಗೊಳ್ಳುತ್ತದೆ ಎಂದು ಈ ಸಂದೇಶವು ಹೇಳುತ್ತದೆ.
06:09 ವಿಂಡೋದ ಕೆಳಭಾಗದಲ್ಲಿರುವ Yes ಬಟನ್ ಅನ್ನು ಕ್ಲಿಕ್ ಮಾಡಿ.
06:13 ಈಗ ಮತ್ತೆ ನಮ್ಮನ್ನು Ready to Install ಸ್ಕ್ರೀನ್ ಗೆ ಕಳಿಸಲಾಗುತ್ತದೆ.
06:18 ಇನ್ಸ್ಟಾಲೇಷನ್ ಅನ್ನು ಆರಂಭಿಸಲು Install ಬಟನ್ ನ ಮೇಲೆ ಕ್ಲಿಕ್ ಮಾಡಿ.
06:22 ಈ ಇನ್ಸ್ಟಾಲೇಷನ್ ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು.
06:25 ನೀವು Windows Security ಎಂಬ ಪಾಪ್-ಅಪ್ ವಿಂಡೋಅನ್ನು ನೋಡಬಹುದು.
06:30 ನಾವು ಸಾಫ್ಟ್ವೇರ್ ಅನ್ನು ಇನ್ಸ್ಟಾಲ್ ಮಾಡಲು ಬಯಸುತ್ತೇವೆಯೇ ಎಂದು ಇದು ಕೇಳುತ್ತದೆ.

Install ಬಟನ್ ನ ಮೇಲೆ ಕ್ಲಿಕ್ ಮಾಡಿ.

06:39 ಆದ ನಂತರ, ನಾವು “Oracle VM VirtualBox installation is complete” ಎಂಬ ಸಂದೇಶವನ್ನು ನೋಡಬಹುದು.
06:47 ಈ ಸ್ಕ್ರೀನ್ ನಲ್ಲಿ, “Start Oracle VM VirtualBox after installation” ಎಂಬ ಆಯ್ಕೆ ಇದೆ. ಡಿಫಾಲ್ಟ್ ಆಗಿ, ಇದು ಆಯ್ಕೆ ಆಗಿರುತ್ತದೆ.
06:58 ನನಗೆ "ವಿ ಎಮ್" ಅನ್ನು ತಕ್ಷಣ ಲಾಂಚ್ ಮಾಡುವುದು ಬೇಕಾಗಿಲ್ಲ. ಹೀಗಾಗಿ ನಾನು ಅದನ್ನು ಅನ್-ಸೆಲೆಕ್ಟ್ ಮಾಡುವೆನು.
07:03 ಕೊನೆಯದಾಗಿ, Finish ಬಟನ್ ಮೇಲೆ ಕ್ಲಿಕ್ ಮಾಡಿ.
07:08 ಈಗ ಡೆಸ್ಕ್ ಟಾಪ್ ನ ಮೇಲೆ, ನಾವು VirtualBox ನ ಶಾರ್ಟ್ಕಟ್ ಐಕಾನ್ ಅನ್ನು ನೋಡಬಹುದು.
07:16 ಅಪ್ಲಿಕೇಷನ್ ಅನ್ನು ಪ್ರಾರಂಭಿಸಲು, VirtualBox ಐಕಾನ್ ನ ಮೇಲೆ ಡಬಲ್-ಕ್ಲಿಕ್ ಮಾಡಿ.
07:21 VirtualBox ಅಪ್ಲಿಕೇಷನ್ ತೆರೆದುಕೊಳ್ಳುತ್ತದೆ. ಇನ್ಸ್ಟಾಲೇಷನ್ ಯಶಸ್ವಿಯಾಗಿದೆ ಎಂದು ಇದು ಸೂಚಿಸುತ್ತದೆ.
07:28 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ,
07:34 ಈ ಟ್ಯುಟೋರಿಯಲ್ ನಲ್ಲಿ, ನಾವು Virtualization (ವರ್ಚ್ಯುವಲೈಜೇಷನ್) ಸಕ್ರಿಯವಾಗಿದೆಯೇ ಎಂದು ಪರಿಶೀಲಿಸಲು ಮತ್ತು
07:41 Windows 10 ಮಶಿನ್ ನಲ್ಲಿ, VirtualBox ಅನ್ನು ಡೌನ್ಲೋಡ್ ಮಾಡಲು ಮತ್ತು ಇನ್ಸ್ಟಾಲ್ ಮಾಡಲು ಕಲಿತಿದ್ದೇವೆ.
07:46 ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
07:54 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.
08:02 ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
08:06 ಈ ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ? ದಯವಿಟ್ಟು ಈ ವೆಬ್ಸೈಟ್ ಅನ್ನು ಭೇಟಿ ಮಾಡಿ.
08:12 ನಿಮಗೆ ಪ್ರಶ್ನೆ ಇರುವ ನಿಮಿಷ ಮತ್ತು ಸೆಕೆಂಡ್ ಗಳನ್ನು ಆಯ್ಕೆಮಾಡಿ. ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಅವುಗಳಿಗೆ ಉತ್ತರಿಸುವರು.
08:23 ಸ್ಪೋಕನ್ ಟ್ಯುಟೋರಿಯಲ್ ಫೋರಮ್, ಈ ಟ್ಯುಟೋರಿಯಲ್ ನ ಬಗ್ಗೆ ವಿಶಿಷ್ಟ ಪ್ರಶ್ನೆಗಳಿಗಾಗಿ ಇದೆ.
08:29 ದಯವಿಟ್ಟು ಸಂಬಂಧಿಸದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
08:34 ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಿಮೆ ಗೊಂದಲವಿದ್ದರೆ, ನಾವು ಈ ಚರ್ಚೆಗಳನ್ನು ಕಲಿಸುವ ವಿಷಯವನ್ನಾಗಿ ಬಳಸಬಹುದು.
08:43 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯ ಪಡೆದಿದೆ. ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.
08:55 ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್ ಮತ್ತು ವಿಡಿಯೋಗಳು, NVLI ಮತ್ತು ಸ್ಪೋಕನ್ ಟ್ಯುಟೋರಿಯಲ್ ತಂಡದವರ ಕೊಡುಗೆಯಾಗಿವೆ.

ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ನವೀನ್ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Nancyvarkey, Sandhya.np14