Ubuntu-Linux-on-Virtual-Box/C2/Installing-Ubuntu-Linux-OS-in-a-VirtualBox/Kannada

From Script | Spoken-Tutorial
Jump to: navigation, search
Time
Narration
00:01 Installing Ubuntu Linux OS in a VirtualBox ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ ನಾವು, Windows ಬೇಸ್-ಮಷಿನ್ ಮೇಲೆ, ವರ್ಚ್ಯುವಲ್ ಬಾಕ್ಸ್ ನಲ್ಲಿ, Ubuntu Linux 16.04 ಅನ್ನು ಹೇಗೆ ಇನ್ಸ್ಟಾಲ್ ಮಾಡುವುದೆಂದು ಕಲಿಯುವೆವು.
00:18 ಈ ಟ್ಯುಟೋರಿಯಲ್ ಅನ್ನು: Windows OS ಆವೃತ್ತಿ 10,
00:23 VirtualBox ಆವೃತ್ತಿ 5.2.18,
00:27 Ubuntu Linux 16.04 OS ಇವುಗಳನ್ನು ಬಳಸಿ ರೆಕಾರ್ಡ್ ಮಾಡಲಾಗಿದೆ.
00:31 ನಾವು ಆರಂಭಿಸುವ ಮೊದಲು, ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ.
00:36 'ವರ್ಚ್ಯುವಲ್ ಬಾಕ್ಸ್' ನಲ್ಲಿ ಒಂದು OS ಅನ್ನು ಇನ್ಸ್ಟಾಲ್ ಮಾಡಲು, ಬೇಸ್-ಮಶಿನ್ ಈ ಕೆಳಗಿನ ಕಾನ್ಫಿಗರೇಷನ್ ಅನ್ನು ಹೊಂದಿರಬೇಕು:
00:43 i 3 (ಐ ೩) ಅಥವಾ ಅದಕ್ಕಿಂತ ಹೆಚ್ಚಿನ ಪ್ರೊಸೆಸರ್,
00:46 4 GB ಅಥವಾ ಅದಕ್ಕಿಂತ ಹೆಚ್ಚಿನ RAM (ರ್ಯಾ ಮ್),
00:49 50 GB (ಜಿ ಬಿ) ಅಥವಾ ಅದಕ್ಕಿಂತ ಹೆಚ್ಚು ಖಾಲಿ ಸ್ಪೇಸ್ ಹೊಂದಿರುವ ಹಾರ್ಡ್ ಡಿಸ್ಕ್ ಮತ್ತು
00:54 BIOS ನಲ್ಲಿ (ಬಯೋಸ್) Virtualization (ವರ್ಚ್ಯುವಲೈಜೇಷನ್) ಅನ್ನು ಸಕ್ರಿಯಗೊಳಿಸಿರಬೇಕು (enabled).
00:58 ಇದು ವರ್ಚ್ಯುವಲ್ ಬಾಕ್ಸ್, ಸಲೀಸಾಗಿ ಕೆಲಸ ಮಾಡುವುದನ್ನು ಖಚಿತಪಡಿಸುತ್ತದೆ.
01:03 ನಾವು ಇನ್ಸ್ಟಾಲ್ ಮಾಡುವುದನ್ನು ಆರಂಭಿಸುವ ಮೊದಲು, System type , 32-bit ಇದೆಯೇ ಅಥವಾ 64-bit ಆಗಿದೆಯೇ ಎಂದು ದಯವಿಟ್ಟು ಪರೀಕ್ಷಿಸಿ.
01:12 ಇದನ್ನು ಮಾಡಲು, Start ಮೆನ್ಯು ದ ಪಕ್ಕದಲ್ಲಿರುವ ಸರ್ಚ್-ಬಾಕ್ಸ್ ಗೆ ಹೋಗಿ. ಹೀಗೆ ಟೈಪ್ ಮಾಡಿ: About your PC.
01:22 About your PC ಯನ್ನು ಆಯ್ಕೆಮಾಡಿ.
01:25 System type ನ ಅಡಿಯಲ್ಲಿ, ನಾವು Windows32-bit ಅಥವಾ 64-bit ಆವೃತ್ತಿಗಳಲ್ಲಿ ಯಾವುದನ್ನು ರನ್ ಮಾಡುತ್ತಿದ್ದೇವೆ ಎಂದು ನೋಡಬಹುದು.
01:34 ಇಲ್ಲಿ, ನನ್ನದು 64-bit Windows ಆಗಿದೆ.
01:39 ನಿಮ್ಮ ಸಿಸ್ಟಂ-ಟೈಪ್ ಗೆ ಅನುಸಾರವಾಗಿ, ಈ ಲಿಂಕ್ ನಿಂದ ಸೂಕ್ತವಾದ Ubuntu Linux 16.04 ISO ಅನ್ನು ಡೌನ್ಲೋಡ್ ಮಾಡಿ:

http colon double slash releases dot ubuntu dot com slash 16.04

01:59 32-bit ಗಾಗಿ, ಇದು ಹೀಗಿದೆ:

ubuntu hyphen 16.04.5 hyphen desktop hyphen i386 dot iso

02:12 64-bit ಗಾಗಿ, ಇದು ಹೀಗಿದೆ:

ubuntu hyphen 16.04.5 hyphen desktop hyphen amd64 dot iso

02:26 ಈಮೊದಲು ಹೇಳಿದಂತೆ, ನನ್ನ Windows System type, 64-bit ಆಗಿದೆ.
02:31 ಆದ್ದರಿಂದ, ಇಲ್ಲಿ ವಿವರಣೆಗಾಗಿ ನಾನು ubuntu hyphen 16.04.5 hyphen desktop hyphen amd64.iso ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ.
02:45 ಮೊದಲು, 'ವರ್ಚ್ಯುವಲ್ ಬಾಕ್ಸ್' ನ (VirtualBox) ಒಳಗೆ, 'ವರ್ಚ್ಯುವಲ್ ಮಷಿನ್' ಅನ್ನು (virtual machine) ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾವು ಕಲಿಯುವೆವು.
02:52 ಡೆಸ್ಕ್-ಟಾಪ್ ನ (Desktop) ಮೇಲೆ, VirtualBox ಅನ್ನು ಲಾಂಚ್ ಮಾಡಲು, ಅದರ ಐಕಾನ್ ಮೇಲೆ ಡಬಲ್-ಕ್ಲಿಕ್ ಮಾಡಿ.
02:59 VirtualBox ವಿಂಡೋದ ಮೇಲ್ಗಡೆ, New ಎಂಬ ನೀಲಿ ಬಣ್ಣದ ಐಕಾನ್ ಅನ್ನು ಗುರುತಿಸಿ, ಅದನ್ನು ಕ್ಲಿಕ್ ಮಾಡಿ.
03:06 ಈಗ ತೆರೆದುಕೊಳ್ಳುವ Create Virtual Machine ವಿಂಡೋದಲ್ಲಿ, Name and Operating system ಎಂಬ ಪೇಜ್ ಅನ್ನು ನಾವು ನೋಡಬಹುದು.
03:14 Name ಎಂಬ ಟೆಕ್ಸ್ಟ್-ಬಾಕ್ಸ್ ನ ಅಡಿಯಲ್ಲಿ, ನಿಮಗೆ ಕೊಡಬೇಕಾದ ಹೆಸರನ್ನು ಟೈಪ್ ಮಾಡಿ.

ನಾನು Ubuntu ಎಂದು ಟೈಪ್ ಮಾಡುವೆನು.

03:22 ಆಮೇಲೆ, Type ಎಂಬ ಡ್ರಾಪ್-ಡೌನ್ ನಲ್ಲಿ, Linux ಅನ್ನು ಆಯ್ಕೆಮಾಡಿ.
03:27 Version ಎಂಬ ಡ್ರಾಪ್-ಡೌನ್ ನಿಂದ, ನಾನು Ubuntu (64-bit) ಅನ್ನು ಆಯ್ಕೆ ಮಾಡುವೆನು.
03:33 ಒಂದುವೇಳೆ, ನಿಮ್ಮ ಬೇಸ್ ಮಷಿನ್ 32-bit ಆಗಿದ್ದರೆ, ಆಗ ಡ್ರಾಪ್-ಡೌನ್ ನಿಂದ, Ubuntu (32-bit) ಅನ್ನು ಆಯ್ಕೆಮಾಡಿ.
03:40 ಮತ್ತು, ವಿಂಡೋದ ಕೆಳಗೆ ಇರುವ Next ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
03:44 ಮುಂದಿನ ಪೇಜ್, Memory size ಆಗಿದೆ.

ಇಲ್ಲಿ, ನಾವು 'ವರ್ಚ್ಯುವಲ್ ಮಷಿನ್'ಗಾಗಿ RAM ನ ಸೈಜ್ ಅನ್ನು ನಿಗದಿ ಮಾಡುತ್ತೇವೆ.

03:52 RAM ಗಾಗಿ, ಸೈಜ್ ಅನ್ನು ನಿಗದಿ ಮಾಡಲು, ಸ್ಲೈಡರ್ ಅಥವಾ ಟೆಕ್ಸ್ಟ್-ಬಾಕ್ಸ್ ಅನ್ನು ಬಳಸಿ.
03:58 ಯೂನಿಟ್ MB ಎಂದು ಇರುವುದರಿಂದ, ನಾನು ಟೆಕ್ಸ್ಟ್-ಬಾಕ್ಸ್ ನಲ್ಲಿ 4048 ಎಂದು ಟೈಪ್ ಮಾಡುವೆನು.
04:05 ಇದು 4GB RAM ಅನ್ನು, ಈ 'ವರ್ಚುವಲ್ ಮಷಿನ್'ಗಾಗಿ ನಿಗದಿ ಮಾಡುವುದು.
04:11 'ಬೇಸ್ ಮಷಿನ್' ನ ಸಿಸ್ಟಮ್-ಮೆಮರಿ ಕೇವಲ 4 GB ಆಗಿದ್ದರೆ, ಆಗ ವರ್ಚುವಲ್- ಮಷಿನ್ ಗಾಗಿ 2 GB ಯನ್ನು ನಿಗದಿಮಾಡಿ.
04:19 ಈಗ, ವಿಂಡೋದ ಕೆಳಭಾಗದಲ್ಲಿರುವ Next ಬಟನ್ ಮೇಲೆ ಕ್ಲಿಕ್ ಮಾಡಿ.
04:24 Hard disk ಪೇಜ್ ನಲ್ಲಿ, ನಾವು ಯಾವ ರೀತಿಯ 'ವರ್ಚುವಲ್ ಹಾರ್ಡ್ ಡಿಸ್ಕ್' ಅನ್ನು ಬಳಸುವವರಿದ್ದೇವೆ ಎಂದು ನಿರ್ಧರಿಸಬೇಕು.
04:32 ನಾನು ಒಂದು ಹೊಸ ವರ್ಚುವಲ್- ಮಷಿನ್ ಅನ್ನು ತಯಾರಿಸುತ್ತಿದ್ದೇನೆ. ಹೀಗಾಗಿ, ನಾನು Create a virtual hard disk now ಅನ್ನು ಆಯ್ಕೆಮಾಡುತ್ತೇನೆ.
04:39 ಈಗಾಗಲೇ 'ಡೀಫಾಲ್ಟ್' ಆಗಿ, ಈ ಆಯ್ಕೆಯು ನಿಮಗಾಗಿ ಆಯ್ಕೆ ಆಗಿರಬಹುದು.
04:44 ಕೆಳಗೆ ಇರುವ Create ಬಟನ್ ಮೇಲೆ ಕ್ಲಿಕ್ ಮಾಡಿ.
04:48 Hard disk file type ನಲ್ಲಿ, VDI (Virtual Disk Image) ಅನ್ನು ಆಯ್ಕೆಮಾಡಿ. ಮತ್ತು, ವಿಂಡೋದ ಕೆಳಭಾಗದಲ್ಲಿರುವ Next ಬಟನ್ ಮೇಲೆ ಕ್ಲಿಕ್ ಮಾಡಿ.
04:59 Storage on physical hard disk ಎಂಬ ಮುಂದಿನ ಪೇಜ್ ನಲ್ಲಿ, ನಮ್ಮ 'ಹಾರ್ಡ್ ಡಿಸ್ಕ್ ಸ್ಟೋರೇಜ್' ಹೇಗಿರಬೇಕು ಎಂದು ನಾವು ನಿರ್ಧರಿಸಬೇಕು. ಇಲ್ಲಿ ಎರಡು ಆಯ್ಕೆಗಳಿವೆ.
05:11 Dynamically allocated ಎಂಬ ಆಯ್ಕೆಯು, ಬಳಕೆಯನ್ನು ಆಧರಿಸಿ 'ಹಾರ್ಡ್ ಡಿಸ್ಕ್ ಸ್ಟೋರೇಜ್' ಅನ್ನು ಹೆಚ್ಚಿಸುವುದು.
05:19 Fixed Size, ನಾವು ಹೇಳಿದಷ್ಟು ಸೈಜ್ ಅನ್ನು ನಿಗದಿಪಡಿಸುವುದು.

ನಾನು Fixed size ಅನ್ನು ಆರಿಸಿಕೊಳ್ಳುತ್ತೇನೆ.

05:27 ಮುಂದುವರಿಯಲು, ಈಗ Next ಬಟನ್ ಮೇಲೆ ಕ್ಲಿಕ್ ಮಾಡಿ.
05:31 File location and size ಎಂಬ ಮುಂದಿನ ಪೇಜ್, 'ಹಾರ್ಡ್-ಡಿಸ್ಕ್ ಸೈಜ್' ಅನ್ನು ನಿಗದಿಪಡಿಸಲು ಆಗಿದೆ.
05:38 ಇಲ್ಲಿ ನಾವು ಮೊದಲು ಕೊಟ್ಟಿರುವ 'Ubuntu' ಎಂಬ ಹೆಸರನ್ನು ನೀವು ನೋಡಬಹುದು.
05:44 ಅಲ್ಲದೆ, ಬಲಗಡೆಯಲ್ಲಿ ನಾವು ಒಂದು ಫೋಲ್ಡರ್ ನ ಐಕಾನ್ ಅನ್ನು ನೋಡಬಹುದು.
05:48 ನಿಮಗೆ ಈ 'ವರ್ಚುವಲ್ ಡಿಸ್ಕ್ ಇಮೇಜ್' ಅನ್ನು ಬೇರೊಂದು ಸ್ಥಳದಲ್ಲಿ (ಲೊಕೇಷನ್) ಸೇವ್ ಮಾಡಬೇಕಾಗಿದ್ದರೆ, ಈ ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಮುಂದುವರೆಯಿರಿ. ನಾನು ಈ ವಿವರಣೆಯಲ್ಲಿ, ಈ ಭಾಗವನ್ನು ಬಿಟ್ಟುಬಿಡುತ್ತೇನೆ.
06:02 ನಂತರ, 'ಹಾರ್ಡ್-ಡಿಸ್ಕ್ ಸೈಜ್'ಅನ್ನು ನಿಗದಿಪಡಿಸಲು, ಸ್ಲೈಡರ್ ಅಥವಾ ಟೆಕ್ಸ್ಟ್-ಬಾಕ್ಸ್ ಅನ್ನು ಬಳಸಿ.
06:09 ಶಿಫಾರಸು ಮಾಡಲಾದ ಸೈಜ್ 10GB ಆಗಿದೆ. ಆದರೆ ನಾನು ಇದನ್ನು 20GBಗೆ ಬದಲಾಯಿಸುವೆನು.
06:16 ಆಮೇಲೆ, ಕೆಳಗೆ Create ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
06:20 ಇದು, ಇಲ್ಲಿಯವರೆಗೆ ನಾವು ಒದಗಿಸಿದ ವಿವರಗಳೊಂದಿಗೆ ಹೊಸದೊಂದು ' ವರ್ಚುವಲ್ ಮಷಿನ್ ಬೇಸ್' (Virtual Machine base) ಅನ್ನು ಕ್ರಿಯೇಟ್ ಮಾಡುತ್ತದೆ. ಇದು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಬಹುದು.
06:31 'ವರ್ಚುವಲ್ ಮಷಿನ್' ಕ್ರಿಯೇಟ್ ಆದ ನಂತರ, ಎಡಭಾಗದಲ್ಲಿ ನಾವು ಅದನ್ನು ನೋಡಬಹುದು.
06:37 ಈಗಷ್ಟೇ ನಾವು ಕ್ರಿಯೇಟ್ ಮಾಡಿರುವ 'ವರ್ಚುವಲ್ ಮಷಿನ್' - Ubuntu ಇಲ್ಲಿದೆ.
06:42 ನಾವು 'ವರ್ಚುವಲ್ ಮಷಿನ್', ಎಂದರೆ VMಅನ್ನು ಯಶಸ್ವಿಯಾಗಿ ಕ್ರಿಯೇಟ್ ಮಾಡಿದ್ದೇವೆ ಎಂದು ಇದು ಸೂಚಿಸುತ್ತದೆ.
06:49 ನಂತರ, ನಾವು ಇದರ ಮೇಲೆ Ubuntu Linux 16.04 ಅನ್ನು ಇನ್ಸ್ಟಾಲ್ ಮಾಡೋಣ.
06:55 ಡೀಫಾಲ್ಟ್ ಆಗಿ 'ವರ್ಚುವಲ್ ಮಷಿನ್', Power off ಮೋಡ್ ನಲ್ಲಿ ಇರುವುದು.
07:00 'ವರ್ಚುವಲ್ ಮಷಿನ್' Ubuntu ಅನ್ನು ಆಯ್ಕೆಮಾಡಿ. ಆಮೇಲೆ, ಮೇಲ್ಗಡೆ ಹಸಿರು ಬಣ್ಣದ ಬಾಣದ ಗುರುತಿನ Start ಬಟನ್ ಮೇಲೆ ಕ್ಲಿಕ್ ಮಾಡಿ.
07:09 ಒಂದು ಹೊಸ ವಿಂಡೋ ಪಾಪ್-ಅಪ್ ಆಗುವುದು. ಮತ್ತು, ನಮಗೆ virtual optical disk file ಅಥವಾ physical optical drive ಅನ್ನು ಆಯ್ಕೆ ಮಾಡಲು ಕೇಳುವುದು.

ಫೋಲ್ಡರ್ ಐಕಾನ್ ಅನ್ನು ಗುರುತಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.

07:22 ಈಗ, ಬ್ರೌಸ್ ಮಾಡಿ ಮತ್ತು ubuntu hyphen 16.04.5 hyphen desktop hyphen amd64.iso ಫೈಲ್ ಅನ್ನು ಆಯ್ಕೆಮಾಡಿ. ಇದನ್ನು ಮೊದಲೇ ನಾವು ಡೌನ್ಲೋಡ್ ಮಾಡಿದ್ದೆವು.
07:37 ಮತ್ತು, ಕೆಳಗಡೆ Open ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
07:41 ಈಗ ನಮ್ಮನ್ನು ಮತ್ತೆ ಹಿಂದಿನ ಸ್ಕ್ರೀನ್ ಗೆ ಕಳಿಸಲಾಗುವುದು.

ಗಮನಿಸಿ: ಈಗ ubuntu hyphen 16.04.5 hyphen desktop hyphen amd64.iso ಅನ್ನು ಸೆಲೆಕ್ಟ್ ಮಾಡಲಾಗಿದೆ.

07:56 ಇನ್ಸ್ಟಾಲೇಶನ್ ಅನ್ನು ಆರಂಭಿಸಲು, ಕೆಳಗಡೆ Start ಬಟನ್ ಮೇಲೆ ಕ್ಲಿಕ್ ಮಾಡಿ.
08:02 Ubuntu Linux ಲೋಡ್ ಆಗುತ್ತಿರುವುದನ್ನು ಇಲ್ಲಿ ನಾವು ನೋಡಬಹುದು.
08:07 ನಾವು ನೋಡುವ ಮೊದಲನೆಯ ಸ್ಕ್ರೀನ್, ಮೂರು ಆಯ್ಕೆಗಳನ್ನು ಹೊಂದಿದೆ.
08:11 ಎಡಭಾಗದಲ್ಲಿ, ನಾವು ಭಾಷೆಗಳ ಒಂದು ಲಿಸ್ಟ್ ಅನ್ನು ನೋಡಬಹುದು. ನಿಮಗಿಷ್ಟವಾದ ಒಂದು ಭಾಷೆಯನ್ನು ಆರಿಸಿಕೊಳ್ಳಿ.
08:18 ಡೀಫಾಲ್ಟ್ ಆಗಿ, English ಆಯ್ಕೆಯಾಗಿದೆ. ನಾನು ಇದನ್ನು ಹೀಗೆಯೇ ಇಡುತ್ತೇನೆ.
08:25 ಮಧ್ಯದಲ್ಲಿ, ನಾವು Try Ubuntu ಹಾಗೂ Install Ubuntu ಎಂಬ ಎರಡು ಆಯ್ಕೆಗಳನ್ನು ನೋಡಬಹುದು.
08:31 ಇನ್ಸ್ಟಾಲ್ ಮಾಡುವ ಮೊದಲು, ನೀವು Ubuntu ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಬಯಸಿದರೆ, Try Ubuntu ಮೇಲೆ ಕ್ಲಿಕ್ ಮಾಡಿ.
08:38 ಇಲ್ಲವಾದರೆ, ನೇರವಾಗಿ Install Ubuntuಮೇಲೆ ಕ್ಲಿಕ್ ಮಾಡಿ.

ನಾನು Install Ubuntu ಆಯ್ಕೆಯ ಮೇಲೆ ಕ್ಲಿಕ್ ಮಾಡುವೆನು.

08:47 ಮುಂದಿನ ಪೇಜ್, ಎರಡು ಆಯ್ಕೆಗಳನ್ನು ತೋರಿಸುತ್ತದೆ.

Downloading update while installing Ubuntu ಮತ್ತು Installing some third-party software...

09:00 ನಾನು ಇವುಗಳನ್ನು ಬಿಟ್ಟುಬಿಡುತ್ತೇನೆ ಮತ್ತು ಕೆಳಗಡೆ Continue ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ.
09:05 Ubuntu Linux ಇನ್ಸ್ಟಾಲೇಶನ್ ಮಾಡುವಾಗ, ಮೂರನೆಯ ಪೇಜ್, ಮುಖ್ಯ ಹಂತಗಳಲ್ಲಿ ಒಂದಾಗಿದೆ.

ಇಲ್ಲಿ, Ubuntu Linux ಅನ್ನು ಎಲ್ಲಿ ಇನ್ಸ್ಟಾಲ್ ಮಾಡುವುದೆಂದು ನಾವು ನಿರ್ಧರಿಸಬೇಕು.

09:18 Something else - ನಾವು ನಮ್ಮ ಮಷಿನ್ ನಲ್ಲಿ VirtualBox ಇಲ್ಲದೆಯೇ Ubuntu ಅನ್ನು ನೇರವಾಗಿ ಇನ್ಸ್ಟಾಲ್ ಮಾಡುತ್ತಿದ್ದರೆ, ಇದೊಂದು ಒಳ್ಳೆಯ ಆಯ್ಕೆಯಾಗಿದೆ.
09:28 ಈ ಆಯ್ಕೆಯೊಂದಿಗೆ, ನಮ್ಮ ಬೇಸ್-ಮಷಿನ್ ನಲ್ಲಿ ನಾವು dual boot OS ಅನ್ನು ಹೊಂದಿರಬಹುದು.
09:34 ನಾನು ಒಂದು 'ವರ್ಚ್ಯುವಲ್ ಬಾಕ್ಸ್' ನ ಮೇಲೆ ಕೆಲಸ ಮಾಡುತ್ತಿರುವುದರಿಂದ, Erase disk and install Ubuntu ಅನ್ನು ಆಯ್ಕೆಮಾಡುವೆನು.
09:41 ಈ ಆಯ್ಕೆಯು, ಇಡೀ Virtual hard disk ಅನ್ನು ಅಳಿಸಿಹಾಕುವುದು. ಮತ್ತು, Ubuntu OS ಅನ್ನು ಒಂದೇ ವಿಭಾಗವಾಗಿ ಇನ್ಸ್ಟಾಲ್ ಮಾಡುವುದು.
09:49 ಆಮೇಲೆ ಕೆಳಗೆ ಇರುವ Install Now ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
09:53 Write the changes to the disks? ಎಂಬ ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
09:59 ಇಲ್ಲಿ, Continue ಬಟನ್ ಮೇಲೆ ಕ್ಲಿಕ್ ಮಾಡಿ.
10:03 ನಂತರ Where are you? ಎಂಬ ಪೇಜ್ ಬರುತ್ತದೆ.

ನಾನು India ದಲ್ಲಿ ಇದ್ದೇನೆ, ಹೀಗಾಗಿ ನಾನು India ಅನ್ನು ಗುರುತಿಸುವೆನು.

10:11 ಕೆಳಗೆ ಇರುವ ಟೆಕ್ಸ್ಟ್-ಬಾಕ್ಸ್ ನಲ್ಲಿ, ಅದು Kolkata ಎನ್ನುತ್ತದೆ.

ನಮ್ಮ ಆಯ್ಕೆಯನ್ನು ಆಧರಿಸಿ, ಅದು ಟೈಮ್-ಝೋನ್ ಅನ್ನು ಸೆಟ್ ಮಾಡುವುದು.

10:21 ಕೆಳಗಡೆಯ Continue ಮೇಲೆ ಕ್ಲಿಕ್ ಮಾಡಿ.
10:24 ಈಗ, ನಾವು ನಮ್ಮ Keyboard layout ಅನ್ನು ಆಯ್ಕೆಮಾಡಬೇಕು.
10:28 ಡೀಫಾಲ್ಟ್ ಆಗಿ, ಎರಡೂ ಬದಿಗಳಲ್ಲಿ English (US) ಆಯ್ಕೆಯಾಗುವುದು.
10:34 ನಿಮಗೆ ಬೇರೆ ಭಾಷೆ ಬೇಕಾಗಿದ್ದರೆ, ನೀವು ಬಯಸಿದ ಆಯ್ಕೆಯನ್ನು ಆರಿಸಿಕೊಳ್ಳಿ.

ನಾನು English (US) ಅನ್ನು ಹಾಗೇ ಇಡುತ್ತೇನೆ.

10:42 ಕೆಳಗೆ ಇರುವ Continue ಬಟನ್ ಮೇಲೆ ಕ್ಲಿಕ್ ಮಾಡಿ.
10:46 ಕೊನೆಯ ಹಂತವು, ಲಾಗ್-ಇನ್ ವಿವರಗಳನ್ನು ಕೊಡುವುದಾಗಿದೆ.

ನಾನು Your name ಫೀಲ್ಡ್ ಅನ್ನು spoken ಎಂದು ತುಂಬುವೆನು.

10:55 ತಕ್ಷಣ, ನಮ್ಮ ಇನ್ಪುಟ್ ಅನ್ನು ಆಧರಿಸಿ Computer’s name ಹಾಗೂ Pick a username ಫೀಲ್ಡ್ ಗಳನ್ನು ತುಂಬಲಾಗುವುದು.

ನೀವು ಬಯಸಿದರೆ, ಈ ವ್ಯಾಲ್ಯೂಗಳನ್ನು ನೀವು ಬದಲಾಯಿಸಬಹುದು.

11:07 ಬಳಿಕ, Choose a password ಟೆಕ್ಸ್ಟ್-ಬಾಕ್ಸ್ ನಲ್ಲಿ, ನಿಮ್ಮ Ubuntu Linux OS ಗಾಗಿ ಪಾಸ್ವರ್ಡ್ ಅನ್ನು ಟೈಪ್ ಮಾಡಿ. ನಾನು spoken ಎಂದು ಟೈಪ್ ಮಾಡುವೆನು.
11:18 Confirm your password ಟೆಕ್ಸ್ಟ್-ಬಾಕ್ಸ್ ನಲ್ಲಿ, ಮತ್ತೆ ಅದೇ ಪಾಸ್ವರ್ಡ್ ಅನ್ನು ಟೈಪ್ ಮಾಡಿ.
11:24 ದಯವಿಟ್ಟು ಈ ಪಾಸ್ವರ್ಡ್ ಅನ್ನು ಬರೆದಿಟ್ಟುಕೊಳ್ಳಿ. ಏಕೆಂದರೆ, ಇದು ಈ Ubuntu Linux OS ಗಾಗಿ admin password ಆಗಿದೆ.
11:32 ಪಾಸ್ವರ್ಡ್ ಟೆಕ್ಸ್ಟ್-ಬಾಕ್ಸ್ ನ ಕೆಳಗೆ, ನಾವು ಇನ್ನೂ ಕೆಲವು ಆಯ್ಕೆಗಳನ್ನು ನೋಡಬಹುದು.

ನಾನು Require my password to login ಅನ್ನು ಆಯ್ಕೆಮಾಡುವೆನು.

11:42 ಯೂಸರ್ ನು ಪ್ರತಿಸಲ ಲಾಗ್-ಇನ್ ಮಾಡಿದಾಗ, ಅವನು ಪಾಸ್ವರ್ಡ್ ಅನ್ನು ನಮೂದಿಸಲು ಇದು ಒತ್ತಾಯ ಮಾಡುವುದು.
11:49 ಇನ್ಸ್ಟಾಲೇಶನ್ ಅನ್ನು ಮುಂದುವರೆಸಲು Continueಮೇಲೆ ಕ್ಲಿಕ್ ಮಾಡಿ.
11:53 ಇನ್ಸ್ಟಾಲೇಶನ್ ಪೂರ್ತಿಗೊಳ್ಳಲು ಸ್ವಲ್ಪ ಸಮಯ ಬೇಕಾಗಬಹುದು.
11:58 ಇನ್ಸ್ಟಾಲೇಶನ್ ಪೂರ್ತಿಗೊಂಡ ನಂತರ, Installation Complete ಎಂದು ಹೇಳುವ ಒಂದು ಡೈಲಾಗ್-ಬಾಕ್ಸ್ ಅನ್ನು ನಾವು ನೋಡಬಹುದು.
12:06 ಈ ಡೈಲಾಗ್-ಬಾಕ್ಸ್ ನಲ್ಲಿ, Restart Now ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
12:11 Ubuntu ಲೋಡ್ ಆಗುತ್ತಿದೆ ಎಂದು ಹೇಳುತ್ತಿರುವ ಒಂದು ಸ್ಕ್ರೀನ್ ಕಾಣಿಸಿಕೊಳ್ಳುತ್ತದೆ.

ಇನ್ಸ್ಟಾಲೇಶನ್ ಮೀಡಿಯಮ್ ಅನ್ನು ತೆಗೆದುಹಾಕಲು, Enter ಅನ್ನು ಒತ್ತಲು ಇದು ನಮಗೆ ಸೂಚಿಸುವುದು.

12:20 ಉದಾಹರಣೆಗೆ: CD/USB Stick ಇತ್ಯಾದಿ.

ನಿಮ್ಮ ಕೀಬೋರ್ಡ್ ಮೇಲಿನ Enter ಅನ್ನು ಒತ್ತಿ.

12:28 ಇದು ಈ 'ವರ್ಚುವಲ್ ಮಷಿನ್' ಅನ್ನು ಆರಂಭಿಸುತ್ತದೆ ಮತ್ತು ನಮ್ಮನ್ನು 'ಲಾಗ್-ಇನ್ ಪೇಜ್' ಗೆ ಕರೆದೊಯ್ಯುತ್ತದೆ.
12:34 ಇನ್ಸ್ಟಾಲೇಶನ್ ಮಾಡುವಾಗ ನಾವು ಕೊಟ್ಟ ವಿವರಗಳೊಂದಿಗೆ ಲಾಗ್-ಇನ್ ಮಾಡಿ.
12:39 Ubuntu 16.04 Desktop ಗೆ ನಮ್ಮನ್ನು ಕರೆತರಲಾಗಿದೆ.

ನಾವು ಇನ್ಸ್ಟಾಲೇಶನ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ ಎಂದು ಇದು ಸೂಚಿಸುತ್ತದೆ.

12:49 Ubuntu ವನ್ನು ಮುಚ್ಚಿಬಿಡಲು, ಮೇಲ್ಗಡೆ ಬಲಮೂಲೆಯಲ್ಲಿರುವ 'ಪಾವರ್' (power) ಐಕಾನ್ ಮೇಲೆ ಕ್ಲಿಕ್ ಮಾಡಿ. ಮತ್ತು, Shut Down ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
12:58 ಈಗ ಕಾಣಿಸಿಕೊಳ್ಳುವ ಪಾಪ್-ಅಪ್ ನಲ್ಲಿ, ದೊಡ್ಡ Shut Down ಬಟನ್ ಮೇಲೆ ಕ್ಲಿಕ್ ಮಾಡಿ.
13:04 ಕೂಡಲೆ, Ubuntu ವಿಂಡೋ ಮುಚ್ಚಿಬಿಡುತ್ತದೆ ಮತ್ತು ನಾವು VirtualBox manager ಗೆ ಹಿಂದಿರುಗಿದ್ದೇವೆ.
13:11 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

13:16 ಈ ಟ್ಯುಟೋರಿಯಲ್ ನಲ್ಲಿ ನಾವು 'ವರ್ಚ್ಯುವಲ್ ಬಾಕ್ಸ್' ನಲ್ಲಿ, 'ವರ್ಚುವಲ್ ಮಷಿನ್' ಅನ್ನು ಕ್ರಿಯೇಟ್ ಮಾಡಲು, ಮತ್ತು
13:24 'ವರ್ಚುವಲ್ ಮಷಿನ್' ಮೇಲೆ, Ubuntu Linux 16.04 ಅನ್ನು ಇನ್ಸ್ಟಾಲ್ ಮಾಡಲು ಕಲಿತಿದ್ದೇವೆ.
13:30 ಈ ಲಿಂಕ್ ನಲ್ಲಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
13:38 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.

13:50 ದಯವಿಟ್ಟು ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
13:54 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.

ಈ ಮಿಶನ್ ನ ಕುರಿತು ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.

14:06 ಈ ಟ್ಯುಟೋರಿಯಲ್ ನ ಸ್ಕ್ರಿಪ್ಟ್ ಮತ್ತು ವೀಡಿಯೋಗಳು, NVLI ಮತ್ತು ಸ್ಪೋಕನ್ ಟ್ಯುಟೋರಿಯಲ್ ತಂಡದವರ ಕೊಡುಗೆಯಾಗಿವೆ.

ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Nancyvarkey, Sandhya.np14