STEMI-2017/C2/Introduction-to-Kallows-Device/Kannada

From Script | Spoken-Tutorial
Revision as of 16:37, 7 August 2020 by PoojaMoolya (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time
NARRATION
00:01 kallows STEMI kit ಬಗೆಗಿನ ಟ್ಯುಟೋರಿಯಲ್’ಗೆ ಸ್ವಾಗತ
00:07 ಈ ಟ್ಯುಟೋರಿಯಲ್’ನಲ್ಲಿ ನಾವು ಕಲಿಯಲಿರುವುದು

ECG ಲೀಡ್, ರಕ್ತದೊತ್ತಡದ ಪಟ್ಟಿ, SpO2ಗಳ ಸ್ಥಾನ, ECG ತೆಗೆದುಕೊಳ್ಳುವುದು ಮತ್ತು ರಕ್ತದೊತ್ತಡ ಮತ್ತು SpO2 ಪರೀಕ್ಷಿಸುವುದು

00:22 ಈ ಟ್ಯುಟೋರಿಯಲ್ ಅಭ್ಯಸಿಸಲು ನಿಮ್ಮ ಬಳಿ kallows STEMI kit ಇರಬೇಕು
00:28 STEMI kit’ನಲ್ಲಿ

ಒಂದು Android ಟ್ಯಾಬ್, Mobmon ಯಂತ್ರ 12.0, ಬ್ಲೂಟೂತ್ ರಕ್ತದೊತ್ತಡ ಪರೀಶೀಲಕ ಯಂತ್ರ

00:39 ECG ಎಲೆಕ್ಟ್ರೋಡ್’ಗಳು, SpO2 ಪರೀಕ್ಷಕ, wifi ಮುದ್ರಕ, ವಿದ್ಯುತ್ ವಾಹಕ ಇವೆ
00:48 ಇದು Mobmon ಯಂತ್ರ,
00:52 ಇದನ್ನು ಚಾಲನೆಗೊಳಿಸುವ ಗುಂಡಿ ಮತ್ತು ಚಾರ್ಜ್ ಮಾಡುವ ಪೋರ್ಟ್ ಎಡಬದಿಯಲ್ಲಿವೆ
00:58 SpO2 ಹಾಗೂ ECG ಪೋರ್ಟ್’ಗಳು ಹಿಂದಿವೆ
01:03 ಈ ಕೇಬಲ್/ತಂತಿಯನ್ನು mobmon ಯಂತ್ರದ ECG ಪೋರ್ಟ್’ನೊಳಕ್ಕೆ ತೂರಿಸಿ
01:10 ಸಂಪರ್ಕಿಸಿದ ನಂತರ, ಸ್ಕ್ರೂ ಸಹಾಯದಿಂದ ಸಂಪರ್ಕವನ್ನು ಭದ್ರಗೊಳಿಸಿ
01:17 ಮುಂದೆ SpO2 ಪರೀಕ್ಷಕದ ಬಗ್ಗೆ ತಿಳಿಯೋಣ
01:21 ಈ ಪರೀಕ್ಷಕಕ್ಕೆ ಎರಡು ಭಾಗ. ಒಕ್ಸಿಮೆಟ್ರಿ ಸಂಪರ್ಕತಂತಿ ಮತ್ತು ಸೆನ್ಸರ್
01:29 SpO2 ಪರೀಕ್ಷಕವನ್ನು ಹೇಗೆ ಜೋಡಿಸುವುದೆಂದು ತಿಳಿಯೋಣ
01:34 oximetry ತಂತಿಯನ್ನು mobmon ಯಂತ್ರದ SpO2 ಸಂಪರ್ಕಸೇತುವಿಗೆ ಸೇರಿಸಿರಿ
01:41 ಸರಿಯಾಗಿ ಸೇರಿಸಿದಾಗ ಹೀಗೆ ಕಾಣುತ್ತದೆ
01:45 ರೋಗಿಯ ಬೆರಳನ್ನು ಸೆನ್ಸರ್’ನ ಕೊನೆಗೆ ಚಿತ್ರದಲ್ಲಿ ಕಾಣುವಂತೆ ಸೇರಿಸಬೇಕು
01:54 ಸೆನ್ಸರ್’ನ ಜಾಗವನ್ನು ಆಯ್ಕೆ ಮಾಡುವಾಗ, ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶ – ಜಾಗದಲ್ಲಿ ಅಪಧಮನಿಯ ನಾಳ, ರಕ್ತದೊತ್ತಡದ ಪಟ್ಟಿ ಅಥವಾ ರಕ್ತನಾಳ-ದ್ರಾವಣವನ್ನು ಒಳಗೆ ಕಳುಹಿಸಲು ಇರುವ ತೂತು ಇರಬಾರದು
02:09 oximetry ಪರೀಕ್ಷಿಸಲು ಸಾಮಾನ್ಯವಾದ ಜಾಗಗಳು

ವಯಸ್ಕರಿಗೆ ಮತ್ತು ಮಕ್ಕಳಿಗೆ : ಕೈ ಅಥವಾ ಕಾಲಿನ ಬೆರಳುಗಳು, ಕಿವಿಯ ಕೆಳಭಾಗ

02:23 ಶಿಶುಗಳಿಗೆ : ಪಾದ ಅಥವಾ ಅಂಗೈ ಮತ್ತು ಕೈ ಅಥವಾ ಕಾಲಿನ ಹೆಬ್ಬೆರಳು
02:31 ಗಮನಿಸಿ

ಪುನರ್ಬಳಕೆಯ ಸೆನ್ಸರ್’ಗಳನ್ನು ಒಂದೇ ಜಾಗದಲ್ಲಿ ಗರಿಷ್ಠ 4 ಘಂಟೆಯ ಅವಧಿಗೆ ಬಳಸಬಹುದು. ಚರ್ಮದ ಆರೋಗ್ಯದ ದೃಷ್ಟಿಯಿಂದ ಈ ಜಾಗವನ್ನು ಪರಿಶೀಲಿಸುತ್ತಿರಬೇಕು


02:47 ಒದ್ದೆಯಾದ ಅಥವಾ ಹಾಳಾದ ಸೆನ್ಸರ್ ಬಳಸಕೂಡದು. ಎಲೆಕ್ಟ್ರೋ-ಸರ್ಜರಿಯ ಸಂದರ್ಭ ಅಥವಾ ಬೇರೆ ವಿದ್ಯುತ್ ಉಪಕರಣಗಳ ಬಳಕೆಯ ಸಂದರ್ಭ ಅವು ಸುಟ್ಟಗಾಯಗಳನ್ನು ಉಂಟುಮಾಡಬಹುದು.
03:00 SpO2 ಸೆನ್ಸರ್’ನ ಅಸಮರ್ಪಕ ಬಳಕೆಯಿಂದ ಅಂಗಾಂಶದ ಹಾನಿಯಾಗಬಹುದು
03:08 ಸೆನ್ಸರ್’ನ ಸಂಪರ್ಕದ ಸಮಯದಲ್ಲಾಗಲಿ, ತೆಗೆಯುವ ಸಂದರ್ಭದಲ್ಲಾಗಲಿ ಅಥವಾ ಸಂಗ್ರಹದ ಸಂದರ್ಭದಲ್ಲಾಗಲಿ ಸುಮ್ಮನೆ ತಿರುಗಿಸಬೇಡಿ
03:20 ಶಸ್ತ್ರಚಿಕಿತ್ಸಾ ದೀಪ, ಬಿಲಿರುಬಿನ್ ದೀಪ ಅಥವಾ ಸೂರ್ಯಪ್ರಕಾಶದ ವಿಪರೀತ ಬೆಳಕಿನ ಕಾರಣದಿಂದ ಅಥವಾ ಸೆನ್ಸರ್ ಬಹಳ ಬಿಗಿಯಾಗಿದ್ದರೆ ಮಿಡಿತದ ಪತ್ತೆಯಾಗದಿರಬಹುದು
03:37 ಮುಂದೆ, ನಾವು ರಕ್ತದೊತ್ತಡದ ಪಟ್ಟಿಯ ಸ್ಥಾನದ ಬಗ್ಗೆ ತಿಳಿಯೋಣ
03:42 ಪಟ್ಟಿಯ ಸಂಪರ್ಕವನ್ನು ಬ್ಲೂಟೂತ್ ಯಂತ್ರದ NIBP ಸಂಪರ್ಕಸ್ಥಾನದೊಂದಿಗೆ ಮಾಡಿರಿ
03:49 ರೋಗಿಯ ಅಂಗವನ್ನು ಅಳತೆ ಮಾಡಿ ಸರಿಯಾದ ಪಟ್ಟಿಯ ಗಾತ್ರ ಆಯ್ಕೆ ಮಾಡಿರಿ. ಪಟ್ಟಿಯ ಅಗಲ ಮೊಣಕೈ ಮತ್ತು ಭುಜದ ನಡುವಿನ ದೂರದ ಮೂರನೇ ಎರಡು ಭಾಗದಷ್ಟಿರಲಿ.
04:04 NIBP ಪಟ್ಟಿಯನ್ನು ಸುತ್ತಿರಿ. ಮೊದಲ ಆದ್ಯತೆಯ ಜಾಗ ಎಡಗೈ ಆಗಿರಲಿ, ಚಿತ್ರದಲ್ಲಿ ತೋರಿಸಿದಂತೆ
04:14 NIBP ಪಟ್ಟಿಯನ್ನು ಸರಿಯಾದ ಅಳತೆಗಾಗಿ ರೋಗಿಯ ಅಂಗಕ್ಕೆ ಬಿಗಿಯಾಗಿ ಸುತ್ತಿರಬೇಕು.
04:21 Start ಗುಂಡಿಯನ್ನು ಒತ್ತಿ ಬ್ಲೂಟೂತ್ BP Monitor ಅನ್ನು ಆರಂಭಿಸಿ.
04:26 ಗಮನಿಸಿ: ಸರಿಯಿಲ್ಲದ ಬಳಕೆಯಿಂದ ತಪ್ಪಾದ ಅಳತೆಗಳು ಉಂಟಾಗಬಹುದು.

ಪಟ್ಟಿಯನ್ನು ಬಿಗಿಯಾಗಿ ಕಟ್ಟದೇ ಇರುವುದು ಸರಿಯಲ್ಲದ ಅಳತೆಯ ಪಟ್ಟಿಯನ್ನು ಬಳಸುವುದು ಪಟ್ಟಿಯನ್ನು ಹೃದಯದ ಸರಿಸಮವಾದ ಎತ್ತರದಲ್ಲಿ ಬಳಸದೇ ಇರುವುದು ತೂತಾದ ಪಟ್ಟಿಯನ್ನು ಬಳಸುವುದು ರೋಗಿಯು ಅಲುಗಾಡುತ್ತಿರುವುದು

04:52 SpO2 ಮತ್ತು BP ಪಟ್ಟಿಯನ್ನು ಒಂದೇ ಕೈಗೆ ಸಿಕ್ಕಿಸಬೇಡಿ. ಇದು ತಪ್ಪು ಎಚ್ಚರಿಕೆಯನ್ನು ತಡೆಗಟ್ಟಲು ಆಗಿರುತ್ತದೆ
05:03 NIBP ಅನ್ನು ಅಲೆಯುತ್ತಿರಲು, ಪಟ್ಟಿಯ ಕೊಳವೆ ಗೋಜಲಾಗಿಲ್ಲ ಮತ್ತು ಹರಿವು ಸರಿಯಾಗಿದೆ ಎಂದು ಖಚಿತಪಡಿಸಿಕೊಳ್ಳಿ
05:12 ECG ಲೀಡ್’ಗಳ ಸ್ಥಾನಗಳನ್ನು ತಿಳಿಯೋಣ
05:18 ಚರ್ಮದ ಉತ್ತಮ ತಯಾರಿಕೆ ಮತ್ತು ಸರಿಯಾದ ಎಲೆಕ್ಟ್ರೋಡ್ ಸ್ಥಾಪನೆಯಿಂದ ಉತ್ತಮ ECG ಪಡೆಯಬಹುದು
05:27 ರೋಗಿಯ ತಯಾರು ಮಾಡಲು ಇವುಗಳನ್ನು ಮಾಡಬೇಕು ಎಲೆಕ್ಟ್ರೋಡ್’ನ ಜಾಗವನ್ನು ಶುಚಿಗೊಳಿಸಿ ರೋಮವನ್ನು ಕತ್ತರಿಸಿಹಾಕಬೇಕು
05:37 ಚರ್ಮವನ್ನು ಉತ್ತಮ ಸ್ಪಿರಿಟ್ ದ್ರವದಿಂದ ಶುಚಿಗೊಳಿಸಿ ಹೊರಗಿನ ತ್ವಚೆಯನ್ನು ತೆಗೆದುಹಾಕಿರಿ. ಚರ್ಮವು ಕೆಂಪು ಬಣ್ಣಕ್ಕೆ ತಿರುಗುತ್ತದೆ
05:50 ಎಲೆಕ್ಟ್ರೋಡ್’ನಿಂದ ಒಣ-ಅರೆ-ದ್ರಾವಣವನ್ನು ತೆಗೆಯಿರಿ. ಅವುಗಳನ್ನು ಮಾಂಸವಿಲ್ಲದ ಮತ್ತು ಕೂದಲಿಲ್ಲದ ಜಾಗದಲ್ಲಿ ಅಂಟಿಸಿ
06:01 ಉತ್ತಮ ಗುಣಮಟ್ಟದ (ವಿದ್ಯುತ್-ವಾಹಕ) ಅರೆ-ದ್ರಾವಣವನ್ನು ಉಪಯೋಗಿಸಿ. ಚರ್ಮದೊಂದಿಗೆ ಉತ್ತಮ ಸಂಪರ್ಕಕ್ಕೋಸ್ಕರ ಎಲೆಕ್ಟ್ರೋಡ್ ಮೇಲೆ ಸಾಕಷ್ಟು ಪ್ರಮಾಣದಲ್ಲಿ ಅರೆ-ದ್ರಾವಣವಿರಲಿ.
06:15 ಗಮನಿಸಿ:

ಎಲೆಕ್ಟ್ರೋಡ್’ನ ವಾಹಕ ಭಾಗವಾದ ಲೀಡ್ ಮತ್ತು ತಂತಿಯು ಬೇರೆ ಯಾವುದೇ ವಾಹಕ ಭಾಗದೊಂದಿಗೆ ಸಂಪರ್ಕಕ್ಕೆ ಬಾರದಿರಲಿ

06:27 ಹಾನಿಯಾದ ಎಲೆಕ್ಟ್ರೋಡ್ ಲೀಡ್ ಉಪಯೋಗ ಬೇಡ
06:31 ಎಲೆಕ್ಟ್ರೋಡ್’ಗಳು ಸಡಿಲವಾಗದಿರಲಿ. ಸಡಿಲವಾಗಿದ್ದರೆ ತಪ್ಪಾದ ಸೂಚನೆಗಳನ್ನು ನೀಡುತ್ತವೆ ಹಾಗೂ ಹೃದಯ ಸಂಬಂಧಿ ಎಚ್ಚರಿಕೆ ತೋರುತ್ತದೆ. ಇದು ಸರಿಯಲ್ಲ.


06:43 ಎಲೆಕ್ಟ್ರೋಡ್’ಗಳನ್ನೂ ಈ ಜಾಗದಲ್ಲಿ ಇಡಬೇಕು

RA: ಬಲಭಾಗದ intraclavicular ಜಾಗ LA: ಎಡಭಾಗದ intraclavicular ಜಾಗ

06:56 V1: ನಾಲ್ಕನೇ ಪಕ್ಕೆಲುಬಿನ ನಡುವಿನ ಎದೆಮೂಳೆಯ ಬಲತುದಿಯ ಜಾಗ

V2: ನಾಲ್ಕನೇ ಪಕ್ಕೆಲುಬಿನ ನಡುವಿನ ಎದೆಮೂಳೆಯ ಎಡತುದಿಯ ಜಾಗ

07:10 V3: V2 ಮತ್ತು V4 ನಡುವಿನ ಐದನೇ ಪಕ್ಕೆಲುಬಿನ ಜಾಗ

V4: ಐದನೇ ಪಕ್ಕೆಲುಬಿನ ನಡುವಿನ ಎಡಭಾಗದ ಮಧ್ಯದ ಗೆರೆ

07:22 V5: ಐದನೇ ಪಕ್ಕೆಲುಬಿನ ನಡುವಿನ ಎಡಭಾಗದ ಮುಂಭಾಗದ ಕಂಕುಳಿನ ಗೆರೆ

V6: ಐದನೇ ಪಕ್ಕೆಲುಬಿನ ನಡುವಿನ ಎಡಭಾಗದ ಮಧ್ಯದ ಕಂಕುಳಿನ ಗೆರೆ

07:36 RL : ತೊಡೆಸಂಧಿಯ ಮೂಳೆನಾರಿನ ಮೇಲಿನ ಕೆಳ ಬಲಭಾಗದ ಹೊಟ್ಟೆಯ ಭಾಗ

LL: ತೊಡೆಸಂಧಿಯ ಮೂಳೆನಾರಿನ ಮೇಲಿನ ಕೆಳ ಎಡಭಾಗದ ಹೊಟ್ಟೆಯ ಭಾಗ

07:53 ವಿದ್ಯುತ್ ತಂತಿ ಮತ್ತು ರೋಗಿಯ ತಂತಿ ಒಂದನ್ನೊಂದು ದಾಟದಂತೆ ನೋಡಿಕೊಳ್ಳಿ
07:59 mobmon ಯಂತ್ರವನ್ನು ಪವರ್ ಆನ್/ಆಫ್ ಗುಂಡಿ ಒತ್ತಿ ಆರಂಭ ಮಾಡಿರಿ
08:05 STEMI ಯಂತ್ರದ ECG ಟ್ಯಾಬ್ ಅನ್ನು ಆಯ್ಕೆ ಮಾಡಿ ECG ಲೈವ್ ಸ್ಟ್ರೀಮ್ ಪುಟದಲ್ಲಿ ECG ನೋಡಿರಿ.
08:15 ಸಾರಾಂಶ ತಿಳಿಯೋಣ
08:16 ಈ ಟ್ಯುಟೋರಿಯಲ್’ನಲ್ಲಿ ನಾವು

ECG ಲೀಡ್’ಗಳ, BP ಪಟ್ಟಿಯ ಮತ್ತು SpO2 ಯಂತ್ರದ ಸ್ಥಾನದ ಬಗ್ಗೆ ECG ಅಲೆಯುವ ಬಗ್ಗೆ ರಕ್ತದೊತ್ತಡ ಮತ್ತು SpO2 ಅಲೆಯುವ ಬಗ್ಗೆ ಕಲಿತೆವು

08:31 STEMI ಇಂಡಿಯಾ

ಒಂದು ಸೇವಾಸಂಸ್ಥೆಯಾಗಿದ್ದು ಹೃದಯಾಘಾತಕ್ಕೊಳಗಾದ ರೋಗಿಗಳ ವಿಶೇಷ ಕಾಳಜಿಯನ್ನು ವಹಿಸುವ ವಿಷಯದಲ್ಲಿ ವಿಳಂಬವಾಗದಂತೆ ಹಾಗೂ ಇದರಿಂದ ಸಾವು ಸಂಭವಿಸುವುದು ಕಡಿಮೆಯಾಗುವ ಬಗ್ಗೆ ಕಾರ್ಯ ನಿರ್ವಹಿಸುತ್ತದೆ

08:45 ಸ್ಪೋಕನ್ ಟ್ಯುಟೋರಿಯಲ್ ಯೋಜನೆ, IIT ಬಾಂಬೆ NMEICT, MHRD, ಭಾರತ ಸರ್ಕಾರ ಇದರಿಂದ ಅನುದಾನಿತವಾಗಿದೆ. ವಿವರಗಳಿಗೆ http://spoken-tutorial.org ನೋಡಿರಿ
09:00 ಈ ಟ್ಯುಟೋರಿಯಲ್ STEMI ಇಂಡಿಯಾ ಮತ್ತು ಸ್ಪೋಕನ್ ಟ್ಯುಟೋರಿಯಲ್ ಇವುಗಳ ಸಹಯೋಗದಲ್ಲಿ ಮೂಡಿಬಂದಿದೆ.

ನಾನು ರಾಕೇಶ್ ವಿರಮಿಸುತ್ತೇನೆ. ಧನ್ಯವಾದ.

Contributors and Content Editors

PoojaMoolya