QGIS/C3/Table-Joins-and-Spatial-Joins/Kannada

From Script | Spoken-Tutorial
Revision as of 21:53, 22 December 2020 by NaveenBhat (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 QGIS ನಲ್ಲಿ Table Joins ಮತ್ತು Spatial Joins ಕುರಿತ ಈ ಟ್ಯುಟೋರಿಯಲ್ ಗೆ ಸುಸ್ವಾಗತ.
00:08 ಈ ಟ್ಯುಟೋರಿಯಲ್ ನಲ್ಲಿ, ಎರಡು ಡೇಟಾ-ಸೆಟ್ ಗಳನ್ನು, ಸಾಮಾನ್ಯ ಕ್ಷೇತ್ರ ಮತ್ತು ಅದೇ spatial data ಗಳನ್ನು ಹೊಂದಿರುವ attribute tables ಗೆ ಸೇರಿಸಲು ನಾವು ಕಲಿಯುತ್ತೇವೆ.
00:19 ಇಲ್ಲಿ ನಾನು,

Ubuntu Linux OS ವರ್ಶನ್ 16.04

00:26 QGIS ವರ್ಶನ್ 2.18 ಗಳನ್ನು ಉಪಯೋಗಿಸುತ್ತಿದ್ದೇನೆ.
00:30 ಈ ಟ್ಯುಟೋರಿಯಲ್ ಕಲಿಯುವವರಿಗೆ QGIS ಇಂಟರ್ಫೇಸ್ ಪರಿಚಯವಿರಬೇಕು.
00:36 ಪೂರ್ವಾಪೇಕ್ಷಿತ QGIS ಟ್ಯುಟೋರಿಯಲ್ಗಳಿಗಾಗಿ, ದಯವಿಟ್ಟು ಈ ವೆಬ್ಸೈಟ್ಗೆ ಭೇಟಿ ನೀಡಿ.
00:42 ಪ್ಲೇಯರ್ ಕೆಳಗೆ ಇರುವ Code files ಲಿಂಕ್ನಲ್ಲಿ ನೀಡಲಾದ ಫೋಲ್ಡರ್ ಡೌನ್ಲೋಡ್ ಮಾಡಿ.
00:48 ಡೌನ್ಲೋಡ್ ಮಾಡಿದ ಜಿಪ್ ಫೈಲ್ನ ಕಂಟೆಂಟ್ಗಳನ್ನು ಹೊರತೆಗೆಯಿರಿ ಮತ್ತು ಅದನ್ನು ಫೋಲ್ಡರ್ನಲ್ಲಿ ಸೇವ್ ಮಾಡಿ.
00:54 ನಾನು ಈಗಾಗಲೇ Code files ಗಳನ್ನು ಡೌನ್ಲೋಡ್ ಮಾಡಿದ್ದೇನೆ, ಎಕ್ಸ್ಟ್ಯಾಕ್ಟ್ ಮಾಡಿ Desktop ನಲ್ಲಿ ಸೇವ್ ಮಾಡಿದ್ದೇನೆ.
01:01 ಫೋಲ್ಡರ್ ತೆರೆಯಲು ಡಬಲ್ ಕ್ಲಿಕ್ ಮಾಡಿ.
01:04 ಎಕ್ಸ್ಟ್ರ್ಯಾಕ್ಟ್ ಮಾಡಿದ ಫೋಲ್ಡರ್ ನಲ್ಲಿ Stations.shp ಅನ್ನು ಲೊಕೇಟ್ ಮಾಡಿ.
01:09 Stations.shp ಫೈಲ್ ಭಾರತದಾದ್ಯಂತ ಹವಾಮಾನ ಕೇಂದ್ರಗಳು ಅಥವಾ ವಾಯು ಕೇಂದ್ರಗಳ ಸ್ಥಳಗಳನ್ನು ತೋರಿಸುತ್ತದೆ.
01:17 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು ಅಗತ್ಯವಿರುವ ಇತರ ಫೈಲ್ಗಳನ್ನು ಸಹ ನಾವು ಇಲ್ಲಿ ಹೊಂದಿದ್ದೇವೆ.
01:23 attribute tables ಗಳನ್ನು ಸೇರಿಸುವುದು ಎಂದರೆ ಎರಡು ಡೇಟಾ-ಸೆಟ್ಗಳ ನಡುವೆ ಎಟ್ರಿಬ್ಯೂಟ್ ಡೇಟಾ ಅನ್ನು ಸಂಯೋಜಿಸುವುದು.
01:30 ಟೇಬಲ್ ಸೇರಿಸಲು ಎರಡು ಮಾರ್ಗಗಳಿವೆ,

Table Join ಅಂದರೆ, ಒಂದು ಅಥವಾ ಹೆಚ್ಚು ಸಾಮಾನ್ಯ ಕಾಲಮ್ಡೆಟಾ ಹೊಂದಿರುವ ಟೆಬಲ್ ಗಳನ್ನು ಸೇರಿಸುವುದು.

01:40 Spatial Join ಅಂದರೆ ಒಂದೇ spatial data ಹೊಂದಿರುವ ಟೆಬಲ್ಸ್ ಗಳನ್ನು ಸೇರಿಸುವುದು.
01:46 ಈ ಟ್ಯುಟೋರಿಯಲ್ ನಲ್ಲಿ ನಾವು ಎರಡೂ ವಿಧಾನಗಳನ್ನು ಪ್ರದರ್ಶಿಸುತ್ತೇವೆ.
01:50 ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಈ ವೆಬ್ಸೈಟ್ಗೆ ಭೇಟಿ ನೀಡಿ.
01:54 QGIS ಇಂಟರ್ಫೇಸ್ ಅನ್ನು ತೆರೆಯಿರಿ.
01:57 ಮೊದಲಿಗೆ, ನಾವು ಸಾಮಾನ್ಯ ಕ್ಷೇತ್ರವನ್ನು ಹೊಂದಿರುವ attribute tables ಗಳನ್ನು ಸೇರಿಸುತ್ತೇವೆ.
02:02 ಎಡಭಾಗದಲ್ಲಿರುವ ಟೂಲ್ಬಾರ್ನಿಂದ Add Vector Layer ಟೂಲ್ ಕ್ಲಿಕ್ ಮಾಡಿ.
02:07 Add Vector Layer ಡೈಲಾಗ್ ಬೊಕ್ಸ್ ತೆರೆಯುತ್ತದೆ.
02:10 Dataset ಫೀಲ್ಡ್ ನ ಪಕ್ಕದಲ್ಲಿರುವ Browse ಬಟನ್ ಕ್ಲಿಕ್ ಮಾಡಿ.

ಒಂದು ಡೈಲಾಗ್ ಬೊಕ್ಸ್ ತೆರೆಯುತ್ತದೆ.

02:17 Desktop ನಲ್ಲಿರುವ Code files ಫೋಲ್ಡರ್ನಿಂದ Stations.shp ಗೆ ನೆವಿಗೇಟ್ ಮಾಡಿ.
02:22 Open ಬಟನ್ ಕ್ಲಿಕ್ ಮಾಡಿ.
02:25 Add vector layer ಡೈಲಾಗ್ ಬೊಕ್ಸ್ ನಲ್ಲಿ, Open ಬಟನ್ ಕ್ಲಿಕ್ ಮಾಡಿ.
02:30 Stations.shp layer ಅನ್ನು ಲೇಯರ್ಸ್ ಪ್ಯಾನೆಲ್ನಲ್ಲಿ ಸೇರಿಸಲಾಗುತ್ತದೆ.
02:35 ಅನುಗುಣವಾದ ನಕ್ಷೆ ಕ್ಯಾನ್ವಾಸ್ನಲ್ಲಿ ಗೋಚರಿಸುತ್ತದೆ.
02:39 ಈ ನಕ್ಷೆಯು ಭಾರತದ ವಿವಿಧ ರಾಜ್ಯಗಳಲ್ಲಿರುವ ಹವಾಮಾನ ಕೇಂದ್ರಗಳಿಗೆ ಅನುಗುಣವಾಗಿ ಪಾಯಿಂಟ್ ವೈಶಿಷ್ಟ್ಯಗಳನ್ನು ತೋರಿಸುತ್ತದೆ.
02:47 ಲೇಯರ್ ಗಾಗಿ attribute table ಅನ್ನು ತೆರೆಯೋಣ.
02:51 ಲೇಯರ್ಸ್ ಪ್ಯಾನೆಲ್ ನಲ್ಲಿ, Stations.shp ಮೇಲೆ ರೈಟ್ ಕ್ಲಿಕ್ ಮಾಡಿ.
02:56 ಕೊಂಟೆಕ್ಸ್ಟ್ ಮೆನುವಿನಿಂದ Open Attribute Table ಆಯ್ಕೆಯನ್ನು ಆರಿಸಿ.
03:01 Attribute table ತೆರೆಯುತ್ತದೆ.
03:03 ಕೇವಲ ಒಂದು ಎಟ್ರಿಬ್ಯೂಟ್ ಡಿಸ್ಟ್ರಿಕ್ಟ್ ಗಾಗಿ ಡೇಟಾ ಲಭ್ಯವಿದೆ ಎಂಬುದನ್ನು ಗಮನಿಸಿ.
03:10 attribute table ಅನ್ನು ಮಿನಿಮೈಸ್ ಮಾಡಿ.
03:13 ಈಗ ನಾವು ಮತ್ತೊಂದು ಡೇಟಾ-ಸೆಟ್ ಅನ್ನು ಸೇರಿಸುತ್ತೇವೆ, ಅದು ಲೇಯರ್ಸ್ ಪ್ಯಾನೆಲ್ ಗೆ ಸ್ಪ್ರೆಡ್ಶೀಟ್ ಆಗಿದೆ.

ಈ ಡೇಟಾ ಸೆಟ್ CSV ಫಾರ್ಮ್ಯಾಟ್ ನಲ್ಲಿದೆ.

03:23 ಮೆನು ಬಾರ್ನಲ್ಲಿ Layer ಮೆನು ಕ್ಲಿಕ್ ಮಾಡಿ.

Add layer ಮೇಲೆ ಕ್ಲಿಕ್ ಮಾಡಿ.

03:30 ಸಬ್ ಮೆನುವಿನಿಂದ Add Delimited Text Layer ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:35 ಒಂದು ಡೈಲಾಗ್ ಬೊಕ್ಸ್ ತೆರೆಯುತ್ತದೆ.
03:38 File Name ಕ್ಷೇತ್ರದ ಪಕ್ಕದಲ್ಲಿರುವ Browse ಬಟನ್ ಕ್ಲಿಕ್ ಮಾಡಿ.
03:43 ಒಂದು ಡೈಲಾಗ್ ಬೊಕ್ಸ್ ತೆರೆಯುತ್ತದೆ.
03:46 Desktopನಲ್ಲಿರುವ Code files ಫೋಲ್ಡರ್ನಿಂದ Rainfall.csv ಫೈಲ್ಗೆ ನ್ಯಾವಿಗೇಟ್ ಮಾಡಿ.

Open ಬಟನ್ ಕ್ಲಿಕ್ ಮಾಡಿ.

03:54 Delimited Text File ಡೈಲಾಗ್ ಬೊಕ್ಸ್ ನಲ್ಲಿ, CSV ಯನ್ನು ಫೈಲ್ ಫೊರ್ಮ್ಯಾಟ್ ಆಗಿ ಆರಿಸಿ.
04:01 Geometry definition ಅನ್ನು No geometry ಎಂದು ಆರಿಸಿ.

ಇತರ ಎಲ್ಲ ಕ್ಷೇತ್ರಗಳನ್ನು ಹಾಗೇ ಬಿಡಿ.

04:09 OK ಬಟನ್ ಕ್ಲಿಕ್ ಮಾಡಿ.
04:12 'QGIS' ಕ್ಯಾನ್ವಾಸ್ನಲ್ಲಿ, Rainfall layer ಅನ್ನು ಲೇಯರ್ಗಳ ಪೆನಲ್ ನಲ್ಲಿ ಸೇರಿಸಲಾಗುತ್ತದೆ.
04:18 Rainfall layer ಮೇಲೆ ರೈಟ್ ಕ್ಲಿಕ್ ಮಾಡಿ.
04:21 ಕೊಂಟೆಕ್ಸ್ಟ್ ಮೆನ್ಯುವಿನಲ್ಲಿ Open Attribute Table ಅನ್ನು ಕ್ಲಿಕ್ ಮಾಡಿ.
04:26 Attribute table ತೆರೆಯುತ್ತದೆ.

attribute table ವಿವಿಧ ಜಿಲ್ಲೆಗಳಿಗೆ ಜನವರಿ ಯಿಂದ ಡಿಸೆಂಬರ್ ವರೆಗೆ ಮಳೆಯ ಡೇಟಾವನ್ನು ಹೊಂದಿದೆ.

04:37 Stations attribute table ಅನ್ನು ಮೆಕ್ಸಿಮೈಜ್ ಮಾಡಿ ಮತ್ತು ಟೇಬಲ್ಸ್ ಎರಡನ್ನೂ ಹೋಲಿಕೆ ಮಾಡಿ.
04:43 ದಯವಿಟ್ಟು ಗಮನಿಸಿ, District ಕ್ಷೇತ್ರವು Rainfall ಮತ್ತು Stations layers ಎರಡರಲ್ಲೂ ಸಾಮಾನ್ಯವಾಗಿದೆ.
04:50 ಈಗ ನಾವು attribute data ವನ್ನು Rainfall layer ನಿಂದ Stations layer ಗೆ ಸೇರಿಸುತ್ತೇವೆ.
04:56 Stations attribute tableನಲ್ಲಿ District ಎಂಬ ಹೆಸರಿನ ಒಂದೇ ಒಂದು ಕಾಲಮ್ ಇದೆ.
05:02 ನಾವು Rainfall data ಅನ್ನು Stations attribute tableಗೆ ಸೇರಿಸುತ್ತೇವೆ.
05:07 attribute tables ಅನ್ನು ಕ್ಲೋಸ್ ಮಾಡಿ.
05:10 Layers Panel ನಲ್ಲಿ Stations layer ಅನ್ನು ಆರಿಸಿ.
05:14 ಈ ಲೇಯರ್ Rainfall layer ಲೇಯರ್ ನಿಂದ ಹೊಸ ಡೇಟಾವನ್ನು ಪಡೆಯುತ್ತದೆ.
05:19 Stations layer ಅನ್ನು ರೈಟ್ ಕ್ಲಿಕ್ ಮಾಡಿ.
05:22 ಕೊಂಟೆಕ್ಸ್ಟ್ ಮೆನುವಿನಿಂದ Properties ಆಯ್ಕೆಯನ್ನು ಕ್ಲಿಕ್ ಮಾಡಿ.
05:26 Layer Properties ಡೈಲಾಗ್ ಬೊಕ್ಸ್ ತೆರೆಯುತ್ತದೆ.

ಎಡ ಪೆನಲ್ ನಿಂದ Joins ಅನ್ನು ಕ್ಲಿಕ್ ಮಾಡಿ.

05:33 ಹೊಸ ವಿಂಡೋದಲ್ಲಿ, ಕೆಳಗಿನ ಎಡ ಮೂಲೆಯಲ್ಲಿರುವ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ.
05:39 Add vector join ಡೈಲಾಗ್ ಬೊಕ್ಸ್ ತೆರೆಯುತ್ತದೆ.
05:43 ಇಲ್ಲಿ ನಾವು Join layer, Join field ಮತ್ತು Target field ಆಯ್ಕೆಗಳನ್ನು ಕಾಣುತ್ತೇವೆ.
05:51 Join layer ಇದು Rainfall layer ಆಗಿರುತ್ತದೆ, ಇದರಿಂದ ಡೇಟಾವನ್ನು Stations attribute table ಗೆ ಸೇರಿಸಲಾಗುತ್ತದೆ.
05:59 ಇಲ್ಲಿ Rainfall layer ಈಗಾಗಲೇ ಸೆಲೆಕ್ಟ್ ಆಗಿದೆ.
06:03 Join field ಇದು ಒಂದು ಫೀಲ್ಡ್ ಅಥವಾ ಸೇರಿಸಬೇಕಾದ Rainfall table ನಲ್ಲಿ ಎಟ್ರಿಬ್ಯೂಟ್ ಆಗಿದೆ.
06:10 Join field ನಲ್ಲಿ, ಡ್ರೊಪ್ ಡೌನ್ ನಿಂದ District ಅನ್ನು ಆರಿಸಿ.
06:15 ಟಾರ್ಗೆಟ್ ಫೀಲ್ಡ್ ಎನ್ನುವುದು ಸ್ಟೇಷನ್ಸ್ ಟೇಬಲ್ 'ನಲ್ಲಿ ಸೇರಿಸಬೇಕಾದ ಕ್ಷೇತ್ರವಾಗಿದೆ.
06:20 Target field ನಲ್ಲಿ, District ಇದು ಈಗಾಗಲೇ ಆಯ್ಕೆಯಾಗಿದೆ.
06:25 ಈ ಕ್ಷೇತ್ರವು ಎರಡೂ ಟೇಬಲ್ ಗೂ ಸಾಮಾನ್ಯವಾಗಿದೆ.
06:29 Choose which fields are joined ಚೆಕ್ ಬೊಕ್ಸ್ ಅನ್ನು ಚೆಕ್ ಮಾಡಿ.
06:34 ಕೆಳಗಿನ ಟೆಕ್ಸ್ಟ್ ಬೊಕ್ಸ್ ಅನ್ನು ಈಗ ಎಲ್ಲಾ ಕಾಲಮ್ಗಳು ಮತ್ತು ಚೆಕ್ಬಾಕ್ಸ್ಗಳೊಂದಿಗೆ ಪೊಪ್ಯುಲೇಟ್ ಮಾಡಲಾಗಿದೆ.
06:41 ಟೆಕ್ಸ್ಟ್ ಬೊಕ್ಸ್ ನಲ್ಲಿ January ಯಿಂದ Annual Average ಕಾಲಮ್ಗಳಿಗಾಗಿ ಬೊಕ್ಸ್ ಗಳನ್ನು ಚೆಕ್ ಮಾಡಿ.
06:48 Add vector join ಡೈಲಾಗ್ ಬೊಕ್ಸ್ ಅನ್ನು ಕ್ಲೋಸ್ ಮಾಡಲು OK ಬಟನ್ ಒತ್ತಿರಿ.
06:53 Layer Properties ಡೈಲಾಗ್ ಬೊಕ್ಸ್ ನಲ್ಲಿ , ಸೇರಿಸಿದ ಲೇಯರ್ ಮತ್ತು ಕಾಲಮ್ಗಳ ಮಾಹಿತಿಯನ್ನು ಮೇಲ್ಭಾಗದಲ್ಲಿ ಸೂಚಿಸಲಾಗುತ್ತದೆ.
07:02 Apply ಬಟನ್ ಅನ್ನೂ, ನಂತರ OK ಬಟನ್ ಅನ್ನೂ ಕ್ಲಿಕ್ ಮಾಡಿ.
07:06 QGISಇಂಟರ್ಫೇಸ್ನಲ್ಲಿ, ಈ ಹಿಂದೆ ತೋರಿಸಿರುವಂತೆ Stations layerಗಾಗಿ attribute table ಅನ್ನು ತೆರೆಯಿರಿ.
07:14 ಈ ಟೇಬಲ್ ಎಲ್ಲಾ ನಿಲ್ದಾಣಗಳಿಗೆ Rainfall data ವನ್ನು ತೋರಿಸುತ್ತದೆ ಎಂಬುದನ್ನು ಗಮನಿಸಿ.
07:20 attribute table ಅನ್ನು ಕ್ಲೋಸ್ ಮಾಡಿ.
07:23 ಮುಂದೆ, ಸ್ಥಳದ ಪ್ರಕಾರ ಎರಡು ಡೇಟಾ-ಸೆಟ್ಗಳ attribute tableಅನ್ನು ಹೇಗೆ ಸೇರಬೇಕೆಂದು ನಾವು ಕಲಿಯುತ್ತೇವೆ.
07:30 ಲೇಯರ್ ಪ್ಯಾನೆಲ್ಗೆ ಮತ್ತೊಂದು ಲೇಯರ್ ಅನ್ನು ಸೇರಿಸೋಣ.
07:34 ಇದಕ್ಕಾಗಿ Add Vector Layer ಟೂಲ್ ಅನ್ನು ಕ್ಲಿಕ್ ಮಾಡಿ.
07:38 Add Vector Layer ಡೈಲಾಗ್ ಬೊಕ್ಸ್ ನಲ್ಲಿ, Browse ಬಟನ್ ಕ್ಲಿಕ್ ಮಾಡಿ.
07:43 'ಡೆಸ್ಕ್ಟಾಪ್' ನಲ್ಲಿರುವ Code files ಫೋಲ್ಡರ್ನಿಂದ Admin.shp ಗೆ ನ್ಯಾವಿಗೇಟ್ ಮಾಡಿ.
07:49 Open ಬಟನ್ ಕ್ಲಿಕ್ ಮಾಡಿ.
07:51 Add Vector Layer ಡೈಲಾಗ್ ಬೊಕ್ಸ್ ನಲ್ಲಿ Open ಬಟನ್ ಕ್ಲಿಕ್ ಮಾಡಿ.
07:56 Admin layer ಈಗ Layers Panel ಗೆ ಸೇರ್ಪಡೆಯಾಗಿದೆ.
08:00 Admin layer ನಕ್ಷೆಯು ಭಾರತದ ಆಡಳಿತಾತ್ಮಕ ರಾಜ್ಯ ಗಡಿಗಳನ್ನು ತೋರಿಸುತ್ತದೆ.
08:07 ಲೇಯರ್ಸ್ ಪೆನಲ್ ನಲ್ಲಿ Admin layer ಅನ್ನು ಕ್ಲಿಕ್ ಮಾಡಿ.
08:11 ಡ್ರ್ಯಾಗ್ ಮಾಡಿ ಮತ್ತು ಅದನ್ನು Stations layer ಕೆಳಗೆ ತನ್ನಿ.
08:15 ಈಗ ನಾವು ವಿವಿಧ ರಾಜ್ಯಗಳಲ್ಲಿರುವ ಪಾಯಿಂಟ್ ವೈಶಿಷ್ಟ್ಯಗಳನ್ನು ವೀಕ್ಷಿಸಬಹುದು.
08:20 Admin layer ಗಾಗಿ Attribute table ತೆರೆಯಿರಿ.
08:24 attribute tableರಾಜ್ಯಗಳಿಗೆ ಸಂಬಂಧಿಸಿದ ಮಾಹಿತಿಯನ್ನು ತೋರಿಸುತ್ತದೆ.
08:29 Admin attribute table ಅನ್ನು ಮಿನಿಮೈಸ್ ಮಾಡಿ.

ಪುನಃ Stations attribute table ಅನ್ನು ತೆರೆಯಿರಿ.

08:36 ಈಗ ನಾವು ಸ್ಟೇಷನ್ಸ್ ಲೇಯರ್ ಮತ್ತು ಅಡ್ಮಿನ್ ಲೇಯರ್ ಗಾಗಿ ಸ್ಥಳದಿಂದ attributes ಗಳನ್ನು ಸೇರಿಸುತ್ತೇವೆ.
08:43 ಎರಡೂ attribute tables ಗಳನ್ನು ಕ್ಲೋಸ್ ಮಾಡಿ.
08:47 Vector ಮೆನ್ಯೂ ಕ್ಲಿಕ್ ಮಾಡಿ.
08:48 ಮೆನು ಕೆಳಗೆ ಸ್ಕ್ರಾಲ್ ಮಾಡಿ ಮತ್ತು Data Management Tools ಕ್ಲಿಕ್ ಮಾಡಿ.
08:53 ಸಬ್ ಮೆನ್ಯುವಿನಿಂದ Join attributes by location ಅನ್ನು ಸೆಲೆಕ್ಟ್ ಮಾಡಿ.
08:58 Join attributes by location ಡೈಲಾಗ್ ಬೊಕ್ಸ್ ತೆರೆಯುತ್ತದೆ.
09:02 Target vector layer ಗಾಗಿ ಡ್ರಾಪ್-ಡೌನ್ ಕ್ಲಿಕ್ ಮಾಡಿ
09:05 attribute table ಗೆ ಸೇರಿಸಲು ಇಲ್ಲಿ ನಾವು ಟಾರ್ಗೆಟ್ ವೆಕ್ಟರ್ ಲೇಯರ್ ಅನ್ನು ನಿರ್ದಿಷ್ಟಪಡಿಸಬೇಕು.
09:12 ನಮ್ಮ ಸಂದರ್ಭದಲ್ಲಿ ನಾವು ಹೊಸ ಡೇಟಾ ಅನ್ನು ಸ್ಟೇಷನ್ಸ್ ಲೇಯರ್‌ಗೆ ಸೇರಿಸಬೇಕಾಗಿದೆ.
09:17 ಆದ್ದರಿಂದ Stations layer ಟಾರ್ಗೆಟ್ ಲೇಯರ್ ಆಗಿದೆ.
09:21 ಆದ್ದರಿಂದ ನಾವು ಡ್ರಾಪ್-ಡೌನ್ ನಿಂದ Stations [EPSG: 4326] ಅನ್ನು ಟಾರ್ಗೆಟ್ ಲೇಯರ್ ಎಂದು ಆಯ್ಕೆ ಮಾಡುತ್ತೇವೆ.
09:29 Join vector layer ಗಾಗಿ ಡ್ರಾಪ್-ಡೌನ್ ಕ್ಲಿಕ್ ಮಾಡಿ.
09:33 ಇಲ್ಲಿ ನಾವು ಟಾರ್ಗೆಟ್ ಲೇಯರ್ ನೊಂದಿಗೆ ಸೇರಿಸಲು ಬಯಸುವ ಲೇಯರ್ ಅನ್ನು ಆರಿಸಬೇಕಾಗುತ್ತದೆ.
09:40 ಡ್ರೊಪ್ ದೌನ್ ನಿಂದ Admin [EPSG: 4326] ಅನ್ನು ಆರಿಸಿ.
09:45 ಇಲ್ಲಿ ನಮಗೆ attributes ಗಳನ್ನು ಜೊಇನ್ ಮಾಡಲು ಹಲವಾರು ಆಯ್ಕೆಗಳಿವೆ.
09:50 ವಿವಿಧ ರಾಜ್ಯಗಳಲ್ಲಿರುವ ಹವಾಮಾನ ಕೇಂದ್ರಗಳನ್ನು ಕಂಡುಹಿಡಿಯಲು ನಾವು ಆಸಕ್ತಿ ಹೊಂದಿದ್ದೇವೆ.
09:56 ಆದ್ದರಿಂದ Geometric predicate ಅಡಿಯಲ್ಲಿ, ನಾವು within ಚೆಕ್-ಬಾಕ್ಸ್ ಆಯ್ಕೆ ಮಾಡುತ್ತೇವೆ.

ಸ್ಕ್ರೋಲ್ ಡೌನ್ ಮಾಡಿ.

10:04 Open output file after running algorithm ಗಾಗಿ ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ.
10:10 ಉಳಿದ ಸೆಟ್ಟಿಂಗ್ಸ್ ಗಳನ್ನು ಹಾಗೇ ಬಿಡಿ.

Run ಬಟನ್ ಕ್ಲಿಕ್ ಮಾಡಿ.

10:17 ಕೆಳಭಾಗದಲ್ಲಿರುವ ಸ್ಟೇಟಸ್ ಬಾರ್, ಅಲ್ಗೋರಿದಮ್ ನ ಪ್ರಗತಿಯನ್ನು ತೋರಿಸುತ್ತದೆ.

ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ ಕಾಯಿರಿ.

10:25 ಕ್ಯಾನ್ವಾಸ್‌ನಲ್ಲಿ, Joined layer ಎಂಬ ಹೊಸ ಲೇಯರ್, ಲೇಯರ್ಸ್ ಪ್ಯಾನೆಲ್ ನಲ್ಲಿ ಸೇರ್ಪಡೆಗೊಂಡಿದೆ.
10:32 Joined layer ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು attribute table ತೆರೆಯಿರಿ.
10:37 ಈ ಟೇಬಲ್ ಸ್ಟೇಷನ್ಸ್ ಲೇಯರ್ನಲ್ಲಿನ ಪ್ರತಿಯೊಂದು ಬಿಂದುವಿಗೆ Admin layer ನಿಂದ ಎಲ್ಲಾ ಎಟ್ರಿಬ್ಯೂಟ್ಸ್ ಗಳನ್ನು ಒಳಗೊಂಡಿದೆ.
10:45 ಪ್ರತಿಯೊಂದು ಪಾಯಿಂಟ್ ವೈಶಿಷ್ಟ್ಯವು ರಾಜ್ಯದ ಬಗ್ಗೆ ಮಾಹಿತಿಯನ್ನು ಹೊಂದಿದೆ.
10:49 attribute table ಅನ್ನು ಕ್ಲೋಸ್ ಮಾಡಿ.
10:52 ಯೋಜನೆಯನ್ನು ಸೇವ್ ಮಾಡಲು, ಮೆನು ಬಾರ್‌ನಿಂದ Project ಮೆನು ಕ್ಲಿಕ್ ಮಾಡಿ.

Save As ಅನ್ನು ಆಯ್ಕೆ ಮಾಡಿ.

11:01 ಸೂಕ್ತವಾದ ಹೆಸರನ್ನು ನೀಡಿ ಮತ್ತು ಅನುಕೂಲಕರ ಸ್ಥಳವನ್ನು ಆಯ್ಕೆ ಮಾಡಿ.
11:06 Save ಬಟನ್ ಒತ್ತಿರಿ.
11:10 ಸಾರಾಂಶವನ್ನು ನೋಡೋಣ.
11:12 ಈ ಟ್ಯುಟೋರಿಯಲ್ ನಲ್ಲಿ, ಎರಡು ಡೇಟಾ-ಸೆಟ್ ಗಳನ್ನು, ಸಾಮಾನ್ಯ ಕ್ಷೇತ್ರ ಮತ್ತು ಅದೇ spatial data ಗಳನ್ನು ಹೊಂದಿರುವ attribute tables ಗೆ ಸೇರಿಸಲು ನಾವು ಕಲಿತೆವು.
11:22 ಪಾಠ-ನಿಯೋಜನೆಯಾಗಿ,

ಜೂನ್‌ನಿಂದ ಡಿಸೆಂಬರ್‌ವರೆಗೆ stations data ದೊಂದಿಗೆ rainfall data ಸೇರಿಸಿ.

11:30 Code files ಫೊಲ್ಡರ್ ನಲ್ಲಿರುವ Rainfall.csv ಮತ್ತು Stations.shp ಫೈಲ್ ಗಳನ್ನು ಉಪಯೋಗಿಸಿ.
11:37 ಸಮಾಪ್ತಿಯ ನಂತರ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಬೇಕು.
11:41 ಕೆಳಗಿನ ಲಿಂಕ್ನಲ್ಲಿರುವ ವೀಡಿಯೊ ಸ್ಪೋಕನ್ ಟ್ಯುಟೋರಿಯಲ್ ಯೋಜನೆಯನ್ನು ಕುರಿತು ವಿವರಿಸುತ್ತದೆ.

ದಯವಿಟ್ಟು ಅದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ.

11:48 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡ, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ನಮ್ಮ ಆನ್ಲೈನ್ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ.

ವಿವರಗಳಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

11:58 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆರಿಸಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.

12:02 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಗೆ NMEICT, MHRD, ಭಾರತ ಸರ್ಕಾರ ಧನಸಹಾಯ ನೀಡುತ್ತದೆ.

ಹೆಚ್ಚಿನ ವಿವರಗಳಿಗಾಗಿ, ಇಲ್ಲಿ ತೋರಿಸಿರುವ ಲಿಂಕ್ಗೆ ಭೇಟಿ ನೀಡಿ.

12:10 ಅನುವಾದ ಮತ್ತು ಧ್ವನಿ ಶ್ರೀ ನವೀನ ಭಟ್ಟ ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

NaveenBhat