PHP-and-MySQL/C4/User-Password-Change-Part-1/Kannada

From Script | Spoken-Tutorial
Revision as of 11:39, 10 July 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಸ್ವಾಗತ, ಈ ಟ್ಯುಟೋರಿಯಲ್ ನಲ್ಲಿ ನಾವು ಬಳಕೆದಾರನು ತನ್ನ ಪಾಸ್ವರ್ಡ್ ಅನ್ನು ಹೇಗೆ ಬದಲಿಸಿಕೊಳ್ಳಬಹುದು ಎಂದು ತೋರಿಸುವೆವು.
00:08 ಇಲ್ಲಿ ನಾವು ಬಳಕೆದಾರನು ಬಯಸಿದರೆ, ಅವರ ಪಾಸ್ವರ್ಡ್ ಅನ್ನು ಬದಲಿಸಲು ಇರುವ ಆಯ್ಕೆಗಳನ್ನು ಕೊಡುವುದು ಹೇಗೆ ಎಂದು ಕಲಿಯುವೆವು.
00:13 ಇದು ತುಂಬ ಸಮಯವನ್ನು ತೆಗೆದುಕೊಳ್ಳಬಾರದು. ಇದನ್ನು ಮೂರು ಭಾಗಗಳಲ್ಲಿ ಹೇಳಿಕೊಡಲಾಗುತ್ತದೆ.
00:18 ನಾವು ಬಳಕೆದಾರರಿಗೆ ಒಂದು ಫಾರ್ಮ್ ಅನ್ನು ಕೊಡುವೆವು ಮತ್ತು ಅದರಲ್ಲಿ ಹಳೆಯ ಪಾಸ್ವರ್ಡ್ ಅನ್ನು ಮತ್ತು ಎರಡು ಬಾರಿ ಹೊಸ ಪಾಸ್ವರ್ಡ್ ಅನ್ನು ಟೈಪ್ ಮಾಡಲು ಹೇಳುವೆವು.
00:27 ನಾವು ಅವರ ಹಳೆಯ ಪಾಸ್ವರ್ಡ್ ಅನ್ನು ಡಾಟಾಬೇಸ್ ನಲ್ಲಿರುವುದರ ಜೊತೆಗೆ ಪರೀಕ್ಷಿಸುವೆವು.
00:31 ನೆನಪಿಡಿ. ಅವು ಎನ್ಕ್ರಿಪ್ಟ್ ಆಗಿರುತ್ತವೆ.
00:33 ನಂತರ ನಾವು ಎರಡು ಹೊಸ ಪಾಸ್ವರ್ಡ್ ಗಳನ್ನು, ಸರಿಹೊಂದುತ್ತವೆಯೇ ಅಥವಾ ತಪ್ಪು ಮಾಡಿದ್ದಾರೆಯೆ ಎಂದು ನೋಡಲು ಹೋಲಿಕೆ ಮಾಡುವೆವು.
00:39 ನಂತರ sql code ಗಳನ್ನು ಬಳಸಿ, ಡಾಟಾಬೇಸ್ ಅನ್ನು ಅಪ್ಡೇಟ್ ಮಾಡುವೆವು.
00:44 ಮೊದಲಿಗೆ ನನ್ನ ಮೆಂಬರ್ ಪೇಜ್ ನಲ್ಲಿ ಸೆಷನ್ ಅನ್ನು, ಇಲ್ಲಿ ಕಾಣುತ್ತಿರುವ "session_start()" ನಂತೆಯೆ ಆರಂಭಿಸುವೆನು.
00:53 ನಾನು ಇದನ್ನು ನನ್ನ ಪೇಜ್ ನ ಮೇಲ್ಭಾಗದಲ್ಲಿ ಕಾಪಿ ಮಾಡಿ, ಪೇಸ್ಟ್ ಮಾಡುವೆನು. ನಾವು ಸೆಷನ್ ಅನ್ನು ಆರಂಭಿಸಿದ್ದೇವೆ.
00:59 ನಾವು "$user" ಎಂಬ ವೇರಿಯೇಬಲ್ ಅನ್ನು ಬಳಸಬೇಕು. ಇದು ನಾವು ಇಲ್ಲಿ ಸೆಟ್ ಮಾಡಿದ '$_SESSION' ಗೆ ಸಮವಾಗಿರುತ್ತದೆ.
01:09 ನಾವು ಅವರ ಪಾಸ್ವರ್ಡ್ ಅನ್ನು ಬದಲಿಸಲು ಆರಂಭಿಸುವ ಅಥವಾ ಅವರು ಪಾಸ್ವರ್ಡ್ ಅನ್ನು ಬದಲಿಸುವ ಮೊದಲು, ಬಳಕೆದಾರರು ಲಾಗಿನ್ ಆಗಿದ್ದಾರೆಯೇ ಎಂದು ನಾವು ಪರೀಕ್ಷಿಸಬೇಕು- ನಾನು ಈ ಕೋಡ್ ನ ಕುರಿತು ಮಾತನಾಡುತ್ತಿದ್ದೇನೆ.
01:19 ಈ "user" ವೇರಿಯೇಬಲ್ ಅನ್ನು, ಇಲ್ಲಿರುವ ನಮ್ಮ "session" ನೇಮ್ ಆಗಿ ಸೆಟ್ ಮಾಡುವೆನು.
01:24 ನಾವು “ if the user exists” ಎಂದು ಕಂಡಿಷನ್ ಕೊಡೋಣ. ಆಗ ಅವರು ಪಾಸ್ವರ್ಡ್ ಅನ್ನು ಬದಲಿಸಬಹುದು. ಇಲ್ಲವಾದಲ್ಲಿ, ನಾವು ಪೇಜ್ ಅನ್ನು ಕಿಲ್ ಮಾಡಿ, “You must be logged in to change your password" ಎಂದು ಮೆಸೇಜ್ ಕೊಡೋಣ.
01:41 ಇದು ಲಾಗಿನ್ ಆಗಿರುವ ಬಳಕೆದಾರರಿಗೆ ಇರುವ ಬ್ಲಾಕ್ ಆಗಿದೆ. ಈಗ ಬಳಕೆದಾರ ಲಾಗಿನ್ ಆಗಿದ್ದಾರೆ ಎಂದು ಭಾವಿಸಿ, ಅಸ್ತಿತ್ವವನ್ನು ಪರೀಕ್ಷಿಸಿ, ನಂತರ ಭರ್ತಿ ಮಾಡಲು ಒಂದು ಫಾರ್ಮ್ ಅನ್ನು ನಾವು ಕೊಡಬೇಕು.
01:49 ಇಲ್ಲಿ ನಮ್ಮ ಕೋಡ್ ಅನ್ನು ಎಕೋ ಮಾಡುವೆನು. ಇದು ನಮ್ಮ ಫಾರ್ಮ್ ಆಗಿರುವುದು. ಇದು ತಂತಾನೆ ಸಬ್ಮಿಟ್ ಆಗುವ ಫಾರ್ಮ್ ಆಗಿರುತ್ತದೆ. ಇದು "change password dot php" ಗೆ ಹಿಂದಿರುಗುತ್ತದೆ. ನಾನು ಇಲ್ಲಿ ಫಾರ್ಮ್ ಅನ್ನು ಮುಗಿಸುವೆನು.
02:14 ಅದು ನಾವು ಈಗಾಗಲೇ ಇರುವ ಪೇಜ್ ಆಗಿದೆ. ಈಗ ಎಲ್ಲ ವಿವರಗಳನ್ನು ಪರೀಕ್ಷಿಸೋಣ.
02:21 ಈ ಫಾರ್ಮ್ ನ method ಇದು POST ಆಗಿದೆ. ಏಕೆಂದರೆ, ಪಾಸ್ವರ್ಡ್ ನ ಮಾಹಿತಿಗಳನ್ನು ಯು.ಆರ್.ಎಲ್ ನಲ್ಲಿ ತೋರಿಸುವುದು ನಮಗೆ ಬೇಡ.
02:30 ನಂತರ ಇಲ್ಲಿ ಕೆಲವು ಇನ್ಪುಟ್ ಬಾಕ್ಸ್ ಗಳನ್ನು ರಚಿಸೋಣ.

ಮೊದಲನೆಯದು, “Old password:” ಇದು ಪಾಸ್ವರ್ಡ್ ವಿಧವಾಗಿರುವುದಿಲ್ಲ. ಇದರಲ್ಲಿ ನಮೂದಿಸಿದ ಡಾಟಾವನ್ನು ಅಡಗಿಸುವ ಅಗತ್ಯವಿಲ್ಲ. ಹಾಗಾಗಿinput type ಇದು "text" ಆಗಿರಲಿ ಮತ್ತು name ಇದು "oldpassword" ಆಗಿರಲಿ.

02:48 ನಾನು ಇಲ್ಲಿ ಒಂದು ಪ್ಯಾರಾಗ್ರಾಫ್ ಬ್ರೇಕ್ ಅನ್ನು ಹಾಕುವೆನು. ನಂತರ "New password:" ನಾನು ಇದರ input type ಅನ್ನು "password" ಎಂದು ರಚಿಸುವೆನು. ಹಾಗಾಗಿ ಇದನ್ನು ಎಲ್ಲರಿಂದ ಅಡಗಿಸಲಾಗುತ್ತದೆ. ಇದರ name, ಇದು “new password” ಎಂದು ಆಗಿರುವುದು.
03:02 ನಾನು ಇಲ್ಲೊಂದು ಲೈನ್ ಬ್ರೇಕ್ ಅನ್ನು ಹಾಕುವೆನು. ಈಗ ಈ ವಾಕ್ಯವನ್ನು ಕಾಪಿ ಮಾಡಿ ಪೇಸ್ಟ್ ಮಾಡಿ, ಕೆಲವು ಬದಲಾವಣೆಗಳನ್ನು ಮಾಡುವೆನು. ಇದರ ಲೇಬಲ್ ಅನ್ನು “Repeat new password” ಎಂದೂ ಮತ್ತು name ಅನ್ನು "repeat new password" ಎಂದು ಬದಲಿಸಿ, ಒಂದು ಪ್ಯಾರಾಗ್ರಾಫ್ ಬ್ರೇಕ್ ಅನ್ನು ಹಾಕುವೆನು.
03:23 ಕೊನೆಯದಾಗಿ, ನಮಗೆ ಒಂದು “submit" ಬಟನ್ ಬೇಕು. ಇದರ name "submit" ಆಗಿರಲಿ. ನಾವು ಇದನ್ನು ಒತ್ತಿದ್ದಾರೆಯೇ ಎಂದು ಪರೀಕ್ಷಿಸಬಹುದು. ಇದರ value "Change password" ಎಂದಿರಲಿ.
03:33 ಸರಿ.. ಈಗ ನಮ್ಮ ಪೇಜ್ ಗೆ ಹೋಗೋಣ. ನಾನು ಇಲ್ಲಿ ಮೆಂಬರ್ ಪೇಜ್ ನಲ್ಲಿ ಒಂದು ಲಿಂಕ್ ಅನ್ನು ಸೇರಿಸುವೆನು. ಇದು ನಮ್ಮ ಪಾಸ್ವರ್ಡ್ ಅನ್ನು ಬದಲಿಸಲು ಸಹಾಯ ಮಾಡುತ್ತದೆ.
03:40 ಈಗ ನಾನು ನನ್ನ ವಿವರಗಳನ್ನು ಬಳಸಿ ಲಾಗಿನ್ ಆಗುವೆನು. ಈಗ ಸದ್ಯಕ್ಕೆ ನನ್ನ ಪಾಸ್ವರ್ಡ್ “abc" ಎಂದಾಗಿದೆ ಮತ್ತು ನನ್ನ 'username' ಈಗ “Alex” ಎಂದಿರಲಿ.
03:48 Login ಅನ್ನು ಕ್ಲಿಕ್ ಮಾಡಿ. ಇದು "Welcome Alex" ಎಂದು ಹೇಳುತ್ತದೆ. ಇಲ್ಲಿ member page ಇದೆ. ಸೆಷನ್ ಸೆಟ್ ಆಗಿದೆ. ಈಗ ನಾವು ಲಾಗೌಟ್ ಆಗ ಬಯಸಿದರೆ, ಲಾಗೌಟ್ ಆಗಬಹುದು. ಆದರೆ, ನಮಗೆ ಇನ್ನೊಂದು ಆಯ್ಕೆ ಅಂದರೆ ನಮ್ಮ ಪಾಸ್ವರ್ಡ್ ಅನ್ನು ಬದಲಿಸಲು ಬೇಕು.
04:01 ನಾವು ನಮ್ಮ "member dot php" ಪೇಜ್ ಗೆ ಹಿಂದಿರುಗೋಣ. ನಾನು ಇನ್ನೊಂದು ಲಿಂಕ್ ಅನ್ನು ರಚಿಸುವೆನು.
04:08 ಅದು “Change password” ಎಂದಾಗಿರುವುದು.
04:11 ಇದು “change password dot php"ಗೆ ನಮ್ಮನ್ನು ಕರೆದೊಯ್ಯುವುದು.
04:14 ಹಾಗಾಗಿ ನಾವು ರಿಫ್ರೆಶ್ ಮಾಡಿದರೆ, ನಾವು ಇನ್ನೊಂದು ಆಯ್ಕೆಯನ್ನು ಪಡೆದಿದ್ದೇವೆ. ಇಲ್ಲಿ ಕ್ಲಿಕ್ ಮಾಡಿ ಮತ್ತು ನಾವು ಆಗಲೇ ರಚಿಸಿದ ಒಂದು ಫಾರ್ಮ್ ಅನ್ನು ಪಡೆಯುವೆವು. ಇಲ್ಲಿ ನಾನು ನನ್ನ ಹಳೆಯ ಪಾಸ್ವರ್ಡ್ ಅನ್ನು ಮತ್ತು ಇಲ್ಲಿ ಹೊಸ ಪಾಸ್ವರ್ಡ್ ಅನ್ನು ಟೈಪ್ ಮಾಡುವೆನು.
04:26 "Change password" ಅನ್ನು ಕ್ಲಿಕ್ ಮಾಡಿ. ಆದರೆ ಇಲ್ಲಿ ಏನೂ ಆಗಿಲ್ಲ. ಈಗ ಇದು ಸಬ್ಮಿಟ್ ಆಗಿದೆಯೇ ಇಲ್ಲವೇ ಎಂದು ನಾವು ಪರೀಕ್ಷಿಸಬೇಕು. ಈ ಹೆಚ್ಚಿನ ಸಾಲನ್ನು ಅಳಿಸಿ.
04:38 ಇಲ್ಲಿ ಒಂದು if ಸ್ಟೇಟ್ಮೆಂಟ್ ಅನ್ನು ರಚಿಸಿ. ಅದು “if POST submit” ಎಂದಿರಲಿ. ಅಂದರೆ ಬಳಕೆದಾರನು ಈ ಸಬ್ಮಿಟ್ ಬಟನ್ ಅನ್ನು ಒತ್ತಿದ್ದಾರೆಯೇ ಎಂದಾಗಿರುತ್ತದೆ. ಇಲ್ಲಿ name ಇದು 'submit' ಎಂದಿದೆ. ಹಾಗಾಗಿಯೇ ನಾವು ಇಲ್ಲಿ 'submit' ಎಂದು ಬರೆದಿರುವುದನ್ನು ಪಡೆದಿದ್ದೇವೆ.
04:52 ಬಳಕೆದಾರ ಇದನ್ನು ಸಬ್ಮಿಟ್ ಮಾಡಿದ್ದರೆ, ನಾವು ಇಲ್ಲಿ ನಮ್ಮ ಪಾಸ್ವರ್ಡ್ ಅನ್ನು ಬದಲಿಸುವೆವು.
04:59 ಇಲ್ಲವಾದರೆ, ಅಂದರೆ ಬಳಕೆದಾರ ಸಬ್ಮಿಟ್ ಮಾಡದೇ ಇದ್ದರೆ, ನಾವು ಈ ಕೋಡ್ ಅನ್ನು ಎಕೋ ಮಾಡುವೆವು.
05:05 ಬಳಕೆದಾರ ಸಬ್ಮಿಟ್ ಮಾಡಿರದೇ ಇದ್ದರೆ, ಅವರಿಗೆ ಈ ಫಾರ್ಮ್ ಅನ್ನು ಸಬ್ಮಿಟ್ ಮಾಡಲು ಇದನ್ನು ತೋರಿಸಬೇಕು.
05:12 ಈಗ ಮುಂದೆ ಹೋಗಿ ಇದನ್ನು ಪರೀಕ್ಷಿಸೋಣ. ಈಗ ಇದು ಕಾರ್ಯ ನಿರ್ವಹಿಸುತ್ತಿದೆಯೇ ಎಂದು ನೋಡಲು “test” ಎಂದು ಎಕೋ ಮಾಡೋಣ.
05:18 ಈಗ ಹಿಂದಿರುಗಿ ಭರ್ತಿ ಮಾಡೋಣ. ಆದರೆ ನಿಜವಾಗಿಯೂ ನಾವು ಏನನ್ನು ತುಂಬಿಸುವುದು ಬೇಕಿಲ್ಲ. ಕೇವಲ submit ಬಟನ್ ಅನ್ನು ಕ್ಲಿಕ್ ಮಾಡೋಣ. ನಾವು “test” ಎಂದು ಎಕೋ ಆಗಿರುವುದನ್ನು ನೋಡಬಹುದು. ಇದು ನಮ್ಮ ಫಾರ್ಮ್ ಯಶಸ್ವಿಯಾಗಿ ಸಬ್ಮಿಟ್ ಆಗಿದೆ ಎಂದು ತೋರಿಸುತ್ತದೆ.
05:34 ಈಗ ನಾವು ಪಾಸ್ವರ್ಡ್ ಅನ್ನು ಬದಲಿಸಲು ಆರಂಭಿಸಬೇಕು. ಇದನ್ನು ಅಳಿಸಿ ಮತ್ತು ಇಲ್ಲಿ “check fields” ಎಂದು ಕಮೆಂಟ್ ಮಾಡೋಣ.
05:40 ಇಲ್ಲಿ ನಾವು ಕೆಲವು ವೇರಿಯೇಬಲ್ ಗಳನ್ನು ಸೆಟ್ ಮಾಡಬೇಕು. '$old password' ಇದು 'POST' ವೇರಿಯೇಬಲ್ “old password” ಗೆ ಸಮವಾಗಿರಬೇಕು. ನಾವು ಇಲ್ಲಿ ಕೆಳಗೆ ಫಾರ್ಮ್ ನಲ್ಲಿ ಈ ಹೆಸರನ್ನು ಕೊಟ್ಟಿದ್ದೇವೆ.
05:55 ನಾವು ಸಬ್ಮಿಟ್ ಮಾಡುವ ಪ್ರತಿಯೊಂದು ವ್ಯಾಲ್ಯುವಿಗೆ ಇದನ್ನು ನಕಲು ಮಾಡುವೆನು.
06:00 ಮುಂದಿನದು “new password”, ನಂತರ “repeat new password” ಆಗಿವೆ. ಇವುಗಳನ್ನು ಬದಲಿಸೋಣ.
06:10 ಇವು ಸರಿಯಾಗಿ ಕೆಲಸ ಮಾಡುತ್ತಿವೆ ಎಂದು ಖಚಿತ ಪಡಿಸಿಕೊಳ್ಳಲು, “old password”, “new password” ಮತ್ತು ”repeat new password” ಗಳನ್ನು ಎಕೋ ಮಾಡುವುದು ಉತ್ತಮ ಎಂದು ನಾನು ಶಿಫಾರಸು ಮಾಡುವೆನು.
06:25 ಇದು form ನ ಅಸ್ತಿತ್ವವನ್ನು ಪರೀಕ್ಷಿಸುತ್ತದೆ. ಫಾರ್ಮ್ ಸಬ್ಮಿಟ್ ಆಗಿದೆಯೇ ಎಂದು ಪರೀಕ್ಷಿಸುತ್ತದೆ. ಇಲ್ಲಿ ನಮ್ಮ ವೇರಿಯೇಬಲ್ ಮತ್ತು ಪೋಸ್ಟ್ ವೇರಿಯೇಬಲ್ ಗಳನ್ನು ಈ ವೇರಿಯೇಬಲ್ ಗಳಲ್ಲಿ ಪಡೆದಿದ್ದೇವೆ.
06:38 ಈಗ ಎಲ್ಲವೂ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸಲು, ನಾನು ಬಾಕ್ಸ್ ನಲ್ಲಿ ಟೈಪ್ ಮಾಡಿರುವುದನ್ನು ಎಕೋ ಮಾಡುವೆನು.
06:40 ನನ್ನ ಹಳೆಯ ಪಾಸ್ವರ್ಡ್ “abc” ಮತ್ತು ಹೊಸ ಪಾಸ್ವರ್ಡ್ “123” ಎಂದಾಗಿದೆ. Change password ಅನ್ನು ಕ್ಲಿಕ್ ಮಾಡಿ. abc, 123 ಮತ್ತು 123 ಎಂದು ಪಡೆದಿದ್ದೇವೆ.
06:52 ಫಾರ್ಮ್ ನ ಮಾಹಿತಿಗಳು ಸಬ್ಮಿಟ್ ಆಗಿವೆ. ಎಲ್ಲಿಯೂ ಸ್ಪೆಲ್ಲಿಂಗ್ ತಪ್ಪು ಇಲ್ಲ. ನಾನು ನನ್ನ ಬಳಕೆದಾರ ಹೊಸ ಪಾಸ್ವರ್ಡ್ ಅನ್ನು ಸೆಟ್ ಮಾಡಲು ಸಾಧ್ಯವಿದೆ ಎಂಬ ವಿಶ್ವಾಸವನ್ನು ಹೊಂದಿದ್ದೇನೆ.
07:00 ನಾನು ಇಲ್ಲಿಗೆ ಈ ಟ್ಯುಟೋರಿಯಲ್ ಅನ್ನು ಮುಗಿಸುತ್ತೇನೆ. ಮುಂದಿನ ಭಾಗದಲ್ಲಿ, ನಾನು ಡಾಟಾಬೇಸ್ ನಲ್ಲಿ ಹಳೆಯ ಪಾಸ್ವರ್ಡ್ ಮತ್ತು ಹೊಸ ಪಾಸ್ವರ್ಡ್ ಗಳನ್ನು ಹೇಗೆ ಪರೀಕ್ಷೆ ಮಾಡುವುದು, ಹೊಸ ಪಾಸ್ವರ್ಡ್ ಮತ್ತು ಪುನರಾವರ್ತಿತ ಪಾಸ್ವರ್ಡ್ ಹೊಂದಿಕೆಯಾಗುತ್ತದೆಯೇ ಎಂದು ಪರೀಕ್ಷಿಸುವುದು ಮತ್ತು ಯೂಸರ್ ಪಾಸ್ವರ್ಡ್ ಅನ್ನು ಬದಲಿಸುವುದು ಇವುಗಳ ಕುರಿತು ಕಲಿಸುತ್ತೇನೆ.
07:24 ಧನ್ಯವಾದಗಳು. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14