Difference between revisions of "PHP-and-MySQL/C4/Sending-Email-Part-1/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- |00:00 |ನಮಸ್ಕಾರ. ವೆಬ್ಸೈಟ್ ನಲ್ಲಿ ಬಳಕೆದಾರನನ್ನು ರೆಜಿಸ್ಟ...")
 
 
Line 46: Line 46:
 
|-
 
|-
 
|01:59
 
|01:59
|ಇಲ್ಲಿ '''form''' ಅನ್ನು ಮುಗಿಯುವುದು.  
+
|ಇಲ್ಲಿ '''form''' ಮುಗಿಯುವುದು.  
 
|-
 
|-
 
|02:02
 
|02:02

Latest revision as of 09:35, 17 May 2020

Time Narration
00:00 ನಮಸ್ಕಾರ. ವೆಬ್ಸೈಟ್ ನಲ್ಲಿ ಬಳಕೆದಾರನನ್ನು ರೆಜಿಸ್ಟರ್ ಮಾಡುವಾಗ ಬಳಸುವ ಇಮೇಲ್ ಸ್ಕ್ರಿಪ್ಟ್ ಅನ್ನು ತಯಾರಿಸಲು ನಾನು ಈಗ ಕಲಿಸುವೆನು.
00:12 ಅವರು ದಾಖಲಾಗಿದ್ದನ್ನು ಖಚಿತಪಡಿಸುವ ಇ-ಮೇಲ್ ಅನ್ನು ನೀವು ಹೇಗೆ ಕಳುಹಿಸುಬಹುದು? ಒಂದು "Send me an email" ಎಂಬ ಸ್ಕ್ರಿಪ್ಟ್ ಅನ್ನು ರಚಿಸಿ, ನಾನು ಅದನ್ನು ಭಾಗಶಃ ಮಾಡುವೆನು.
00:24 ಇದೊಂದು HTML form ಆಗಿರುವುದು. ಇದರಲ್ಲಿ ನೀವು, ಸಬ್ಜೆಕ್ಟ್ (ವಿಷಯ) , ಮೆಸೇಜ್ (ಸಂದೇಶ) ಬರೆದು ಸೂಚಿಸಲಾದ ಅಡ್ರೆಸ್ (ವಿಳಾಸ) ಗೆ ಕಳಿಸಬಹುದು.
00:34 ಹಾಗಾಗಿ ನಾನು $address ಎಂಬ ಒಂದು ವೇರಿಯೇಬಲ್ ಅನ್ನು ರಚಿಸುವೆನು.
00:39 ನಾನು ಇಲ್ಲಿ ನನ್ನ "hotmail" ನ ಅಡ್ರೆಸ್ ಅನ್ನು ಬರೆಯುವೆನು.
00:48 ನಾನು ನನ್ನ ಈಗಿನ "hotmail" ಪೇಜ್ ಅನ್ನು ತೆರೆದು "Inbox" ಅನ್ನು ಕ್ಲಿಕ್ ಮಾಡಿದಾಗ, ಇಲ್ಲಿ ನನಗೆ ಯಾವುದೇ ಇ-ಮೇಲ್ ಬಂದಿಲ್ಲ.
00:55 ಈಗ ಸದ್ಯಕ್ಕೆ ಯಾವುದೇ ಹೊಸ ಇಮೇಲ್ ಗಳಿಲ್ಲ.
01:05 ನನ್ನ address ವೇರಿಯೇಬಲ್ ನಲ್ಲಿ ಈ ವಿಳಾಸವನ್ನು ಇದೆ. ನಾನು ಈ ವೇರಿಯೇಬಲ್ ಹೆಸರನ್ನು $to ಎಂದು ಬದಲಿಸುವೆನು.
01:13 ನಾನು ಇದನ್ನು ಕಳುಹಿಸಲು, mail ಫಂಕ್ಷನ್ ಅನ್ನು ಬಳಸುವೆನು.
01:17 ಇಲ್ಲಿ from ಮತ್ತು subject ಇರಲಿ.
01:21 ಇಲ್ಲಿ $subject, "Email from PHPAcademy" ಎಂದಿರಲಿ.
01:32 ನಂತರ, ಸಬ್ಮಿಟ್ ಮಾಡಲು ಒಂದು HTML (ಎಚ್.ಟಿ.ಎಮ್.ಎಲ್) ಫಾರ್ಮ್ ಬೇಕು. ತಾನಾಗಿಯೇ ಸಬ್ಮಿಟ್ ಆಗುವ ಫಾರ್ಮ್ ಅನ್ನು ರಚಿಸುವೆನು.
01:39 ಇಲ್ಲಿ ಸ್ವಲ್ಪ html ಕೋಡ್ ಅನ್ನು ಬರೆಯೋಣ. ಇಲ್ಲಿ form ಇದೆ. ಇದು "send me an email dot php" ಎಂದು ಈ ಪೇಜ್ ಗೆ ಸಬ್ಮಿಟ್ ಮಾಡುವುದು.
01:54 method, POST ಆಗಿರುವುದು.
01:59 ಇಲ್ಲಿ form ಮುಗಿಯುವುದು.
02:02 ಇಲ್ಲಿ ಸೂಚಿಸಿದ ಇ-ಮೇಲ್ ವಿಳಾಸಕ್ಕೆ ತಾನು ಕಳಿಸಬೇಕಾದ ವಿಷಯವನ್ನು ಬಳಕೆದಾರನು ಇಲ್ಲಿ ಟೈಪ್ ಮಾಡಬಹುದು.
02:10 ಫಾರ್ಮ್ ಅನ್ನು ರಚಿಸುವಾಗ, ನೀವು ನಿರ್ದಿಷ್ಟವಾದ ವಿಳಾಸಕ್ಕೆ ಕಳುಹಿಸಬೇಕು ಎಂದು ಸೂಚಿಸಬಹುದು.
02:18 ಇದು ಕೇವಲ "send me an email" ಸ್ಕ್ರಿಪ್ಟ್, ನೀವು ನಿಮ್ಮ ವೆಬ್ಸೈಟ್ ನಲ್ಲಿ ಸೇರಿಸಲು ಬಯಸುವ ಇ-ಮೇಲ್ ಆಗಿರುತ್ತದೆ.
02:27 ಈಗ ನಾವು ಒಂದು "text" ಇನ್ಪುಟ್ ಅನ್ನು ಸೇರಿಸಬೇಕು.
02:31 ಇದು ನನಗೆ ಇ ಮೇಲ್ ಅನ್ನು ಕಳುಹಿಸುವ ವ್ಯಕ್ತಿಯ ಹೆಸರಾಗಿದೆ.
02:34 ಇಲ್ಲಿ type "text" ಮತ್ತು name ಗಾಗಿ "name" ಎಂದಿದೆ.
02:39 ಸಧ್ಯಕ್ಕೆ "max length" ಇದು 20 ಎನ್ನೋಣ.
02:45 ಇದರ ಕೆಳಗೆ ನಾವು ಒಂದು " text area " ಅನ್ನು ರಚಿಸೋಣ.
02:49 ನಾನು "textarea" ಎಂದು ಟೈಪ್ ಮಾಡಿ, ಹಾಗೆಯೇ ಮುಗಿಸುತ್ತೇನೆ.
02:53 ನಂತರ ಇದರ name ಅನ್ನು "message" ಎನ್ನೋಣ.
02:59 ಇಲ್ಲಿ ಪ್ಯಾರಾಗ್ರಾಫ್ ನ ಆರಂಭ ಮತ್ತು ಕೊನೆಯನ್ನು ಸೂಚಿಸುವ ಟ್ಯಾಗ್ ಗಳಿರಲಿ.
03:04 ಮತ್ತು ಇಲ್ಲಿ ಕೆಳಗೆ ಒಂದು ಸಬ್ಮಿಟ್ ಬಟನ್ ಇರಲಿ. ಅದರ value, "Send"
03:14 ಅಥವಾ "Send me this", ಎಂದಿರಲಿ.
03:17 ಈಗ ನೀವು ನಮ್ಮ ಪೇಜ್ ಗೆ ಬಂದು ಇಲ್ಲಿ ಈ ಪೇಜ್ ಅನ್ನು ಆಯ್ಕೆ ಮಾಡಿದರೆ,
03:21 ಇಲ್ಲಿ name ಗಾಗಿ ಮತ್ತು ಇಲ್ಲಿ message ಗಾಗಿ ಜಾಗ ಇದೆ.
03:25 ಇಲ್ಲಿ "Name:" ಎಂದು, ಇಲ್ಲಿ "Message:" ಎಂದೂ ಟೈಪ್ ಮಾಡುವೆನು.
03:31 ಈಗ ಇದು ಚೆನ್ನಾಗಿ ಕಾಣುತ್ತಿದೆ. ಇಲ್ಲಿ ನಮ್ಮ "Name:" ಮತ್ತು "Message:" ಬಾಕ್ಸ್ ಗಳಿವೆ.
03:38 ನಾವು ಈ ಬಟನ್ ಅನ್ನು ಕ್ಲಿಕ್ ಮಾಡಿದಾಗ , ಇ-ಮೇಲ್ ಅನ್ನು ಕಳುಹಿಸಲಾಗುತ್ತದೆ.
03:44 ಮೊದಲಿಗೆ ನಾವು ನಮ್ಮ ಪಿ.ಎಚ್.ಪಿ. ಕೋಡ್ ನಲ್ಲಿ, ಸಬ್ಮಿಟ್ ಬಟನ್ ಅನ್ನು ಒತ್ತಲಾಗಿದೆಯೇ ಎಂದು ಪರೀಕ್ಷಿಸಬೇಕು.
03:53 ಅದಕ್ಕಾಗಿ ಇಲ್ಲಿ ಒಂದು if ಸ್ಟೇಟ್ಮೆಂಟ್ ಇದೆ. ನಮ್ಮ ಕಂಡಿಷನ್ TRUE ಆಗಿದ್ದಾಗ ಎಕ್ಸಿಕ್ಯೂಟ್ ಆಗುವ ಬ್ಲಾಕ್ ಕರ್ಲಿ ಬ್ರ್ಯಾಕೆಟ್ ನಲ್ಲಿದೆ.
04:01 condition ಅನ್ನು ಬ್ರ್ಯಾಕೆಟ್ ನಲ್ಲಿ ಬರೆಯಬೇಕು.
04:05 ಕಂಡಿಷನ್, "submit" ಬಟನ್ ನ POST ವೇರಿಯೇಬಲ್ ಆಗಿರುತ್ತದೆ.
04:15 ಸಬ್ಮಿಟ್ ಬಟನ್ ವ್ಯಾಲ್ಯುವನ್ನು ಹೊಂದಿದೆ.
04:19 ಅಂದರೆ, "submit" ಬಟನ್ ಅನ್ನು ಒತ್ತಿದ್ದರೆ, ಇದು "Send me this" ಎಂಬ value ವನ್ನು ಹೊಂದಿರುತ್ತದೆ.
04:30 ಅಂದರೆ, ಫಾರ್ಮ್ ಅನ್ನು ಸಬ್ಮಿಟ್ ಮಾಡಲಾಗಿದೆ. ಏಕೆಂದರೆ ಆ ಬಟನ್ ಅನ್ನು ಒತ್ತಲಾಗಿದೆ.
04:37 ಈಗ ಇಲ್ಲಿ ನಾವು ಮಾಡಬೇಕಾದ ಮೊದಲ ಕೆಲಸ, ಫಾರ್ಮ್ ನಿಂದ ಡೇಟಾವನ್ನು ಪಡೆಯುವುದು.
04:44 ಅದು ಫಾರ್ಮ್ ಅನ್ನು ಸಬ್ಮಿಟ್ ಮಾಡಿ, ಇ-ಮೇಲ್ ಅನ್ನು ಕಳಿಸಿದ ವ್ಯಕ್ತಿಯ ಹೆಸರಾಗಿದೆ.
04:49 ಅವರ ಹೆಸರು "name" ಎಂಬ ಈ ಫೀಲ್ಡ್ ನಲ್ಲಿ ಇರುತ್ತದೆ.
04:56 ಇಲ್ಲಿ $message ಕೂಡ ಇದೆ. ಈ ವೇರಿಯೇಬಲ್ ನ ರಚನೆಯನ್ನು ಇಲ್ಲಿ ನಕಲು ಮಾಡಿ ಅಲ್ಲಿ 'message' ಎನ್ನೋಣ.
05:08 ಇದನ್ನು ಪರೀಕ್ಷಿಸಲು ನಾನು echo $name ಎನ್ನುವೆನು.
05:12 ಮತ್ತು ಅದರಲ್ಲಿ $message ಅನ್ನು ಜೋಡಿಸುವೆನು.
05:17 ಈಗ ಇದನ್ನು ಪರೀಕ್ಷಿಸೋಣ. ಇಲ್ಲಿ ನಾನು "Alex" ಎಂದು
05:21 ಮತ್ತು ಇಲ್ಲಿ "Hi there!" ಎಂದು ಟೈಪ್ ಮಾಡುವೆನು.
05:23 "Send me this" ಅನ್ನು ಕ್ಲಿಕ್ ಮಾಡಿ. ಇಲ್ಲಿ "Alex" ಮತ್ತು "Hi there!" ಬಂದಿದೆ.
05:28 ಈಗ form ಡೇಟಾ ಸರಿಯಾಗಿ ಸಬ್ಮಿಟ್ ಆಗಿದೆ ಎಂದು ನಮಗೆ ತಿಳಿಯಿತು.
05:33 ಈ ವೀಡಿಯೋ ದ ಮುಂದಿನ ಭಾಗದಲ್ಲಿ, ಇದನ್ನು ವ್ಯಾಲಿಡೇಟ್ ಮಾಡುವ ಬಗ್ಗೆ ಮತ್ತು ಇಲ್ಲಿ ಹೇಳಿದ ಇ-ಮೇಲ್ ಐಡಿಗೆ ಈ ಇ-ಮೇಲ್ ಅನ್ನು ಕಳುಹಿಸುವ ಬಗ್ಗೆ ಕಲಿಯುವೆವು.
05:42 ಮುಂದಿನ ಭಾಗದಲ್ಲಿ ಮತ್ತೆ ಭೇಟಿಯಾಗೋಣ.
05:45 ಈ ಸ್ಕ್ರಿಪ್ಟ್ ನ ಅನುವಾದಕಿ, ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

NaveenBhat, Sandhya.np14