PHP-and-MySQL/C3/MySQL-Part-8/Kannada

From Script | Spoken-Tutorial
Revision as of 18:15, 18 June 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:00 ಪುನಃ ಸ್ವಾಗತ! ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಏನನ್ನು ಬದಲಿಸುವುದು ಮತ್ತು ಹೇಗೆ ಬದಲಿಸುವುದು ಎಂದು ಕಲಿತಿದ್ದೇವೆ.
00:09 ನಾವು ಅದನ್ನು ನೋಡಿದ್ದೇವೆ.
00:11 ಈಗ ನಾನು ನನ್ನ ಕೋಡ್ ಅನ್ನು ಪರೀಕ್ಷಿಸುವೆನು.
00:13 ನಾವು ನಮ್ಮ ಡಾಟಾಬೇಸ್ ಅನ್ನು ನೋಡಿದರೆ, ಅಲ್ಲಿ ಕೆಲವು ರೆಕಾರ್ಡ್ ಗಳಿವೆ.
00:17 ನಾನು ಡೇವಿಡ್ ಅವರ ರೆಕಾರ್ಡ್ ಅನ್ನು ಡಿಲೀಟ್ ಮಾಡುವೆನು ಏಕೆಂದರೆ ಇದು ಬೇರೆ ಟ್ಯುಟೋರಿಯಲ್ ನದ್ದಾಗಿದೆ.
00:23 ಡಿಲೀಟ್ ಆದ ನಂತರ ನಾವು Alex, Kyle, Emily ಮತ್ತು Dale ಇವರ ರೆಕಾರ್ಡ್ ಗಳನ್ನು ಹೊಂದಿದ್ದೇವೆ.
00:29 ನಾನು ಇಲ್ಲಿ Kyle ಅವರ ರೆಕಾರ್ಡ್ ಅನ್ನು ಉದಾಹರಣೆಯಾಗಿ ಬಳಸುವೆನು ಮತ್ತು ನಾನು ಇದನ್ನು ನಿರ್ದಿಷ್ಟವಾದ ವ್ಯಾಲ್ಯು ಗೆ ಬದಲಿಸುವೆನು.
00:34 ಈಗ ನಮ್ಮ ಪೇಜ್ ಅನ್ನು refresh ಮಾಡಿ, ಅದು ಅಪ್ಡೇಟ್ ಆಗುವುದೇ ಎಂದು ಖಚಿತಪಡಿಸಿಕೊಳ್ಳೋಣ.
00:38 ನಾನು ಇಲ್ಲಿ "Kyle" ಅನ್ನು ಆಯ್ಕೆ ಮಾಡಿಕೊಂಡು, ಅದನ್ನು "Karen" ಎಂದು ಬದಲಿಸಿ, Change ಅನ್ನು ಕ್ಲಿಕ್ ಮಾಡುವೆನು. ಮತ್ತು ಇಲ್ಲಿ ಎಲ್ಲವೂ ಮಾಯವಾಗಿದೆ.
00:46 ಈಗ ನಾನು ನನ್ನ table ಗೆ ಹಿಂದಿರುಗಿ ಅದನ್ನು ರಿಫ್ರೆಶ್ ಮಾಡಲು, Browse ಅನ್ನು ಕ್ಲಿಕ್ ಮಾಡುವೆನು.
00:50 ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು ಏನು ಬದಲಾಗದೇ ಇರುವುದನ್ನು ನೋಡಬಹುದು.
00:58 ಬಹುಷಃ ನಾನು ಒಂದು ತಪ್ಪನ್ನು ಮಾಡಿದ್ದೇನೆ. ನಾನು ಮಾಡಿದ ತಪ್ಪು ಎಂದರೆ ಇದು ಮೊದಲು name ಆಗಿತ್ತು, ಮತ್ತು ಈಗ ಇದನ್ನು value ಎಂದು ಬದಲಿಸುವೆನು.
01:06 ಇದನ್ನು name ಎನ್ನುವ ಬದಲು value ಎಂದು ಸೆಟ್ ಮಾಡಬೇಕು.
01:09 value ಇದು ಇಲ್ಲಿ ಏನನ್ನು ಆಯ್ಕೆ ಮಾಡಿಕೊಂಡಿರುವೆವೋ ಅದರ ವ್ಯಾಲ್ಯುವನ್ನು ಹಿಡಿದಿಟ್ಟುಕೊಳ್ಳುತ್ತದೆ ಹಾಗಾಗಿ ವ್ಯಾಲ್ಯು "$id" ಆಗಿರುತ್ತದೆ.
01:15 ನಾವು ನಮ್ಮ form ಅನ್ನು ಸಬ್ಮಿಟ್ ಮಾಡಿದಾಗ, ಇದು ಅದರ ಮೂಲಕ ಬರುತ್ತದೆ ಮತ್ತು ಇಲ್ಲಿ "id" ಯಲ್ಲಿರುವ value ಆಗಿರುತ್ತದೆ.
01:25 ಈಗ ನಾನು ಸಮಸ್ಯೆಯನ್ನು ಕಂಡುಹಿಡಿದು, ಅದನ್ನು ಸರಿಪಡಿಸಿದ್ದೇನೆ. ಈಗ ನಾನು ಹಿಂದಿರುಗಿ refresh ಮಾಡುವೆನು.
01:30 ಇಲ್ಲಿ ಈಗ ಮತ್ತೊಮ್ಮೆ "Kyle" ಅನ್ನು "Karen" ಎಂದು ಬದಲಿಸುವೆನು. ಈಗ Change ಅನ್ನು ಕ್ಲಿಕ್ ಮಾಡಿ. ಇಲ್ಲಿ ಏನೂ ಆಗಿಲ್ಲದಿರುವುದನ್ನು ನೀವು ನೋಡಬಹುದು.
01:37 ನಾನು ಡಾಟಾಬೇಸ್ ಗೆ ಪ್ರವೇಶಿಸಿದರೂ ನಾವು Alex, Kyle, Emily ಮತ್ತು Dale ಎಂದೇ ಹೊಂದಿದ್ದೇವೆ.
01:42 ನಾವು "Kyle" ಅನ್ನು "Karen" ಎಂದು ಬದಲಿಸಿರುವುದರಿಂದ, ನಮ್ಮ "id" ಯು ಕಣ್ಣಿಗೆ ಕಾಣುವ ಬದಲಾವಣೆಯನ್ನು ತೋರಿಸಿದೆ.
01:47 ಈಗ Browse ಅನ್ನು ಕ್ಲಿಕ್ ಮಾಡಿ, ಕೆಳಗೆ ಸ್ಕ್ರೋಲ್ ಮಾಡಿದರೆ, "Kyle" ಈಗ "Karen" ಎಂದು ಬದಲಾಗಿರುವುದನ್ನು ನೋಡಬಹುದು. .
01:54 ಹಾಗಾಗಿ ನೀವು ಈಗ ಫಾರ್ಮ್ ಗಳನ್ನು ಬಳಸಿ ವ್ಯಾಲ್ಯುಗಳನ್ನು ಅಪ್ಡೇಟ್ ಮಾಡಿರುವಿರಿ.
01:57 ನೀವು ಪಿ.ಎಚ್.ಪಿ ಯ ಕುರಿತು ಉತ್ತಮ ಜ್ಞಾನವನ್ನು ಹೊಂದಿದ್ದರೆ ಅಂದರೆ,

ಪಿ.ಎಚ್.ಪಿ. ಸಾಫ್ಟ್ ವೇರ್, ವಿಷಯಗಳನ್ನು ಹೇಗೆ ಕುಶಲತೆಯಿಂದ ಬಳಸುವುದು, If ಸ್ಟೇಟ್ಮೆಂಟ್ ಗಳನ್ನು ಬಳಸುವುದು ಹೇಗೆ, ವೇರಿಯೇಬಲ್ ಗಳನ್ನು ಪಾಸ್ ಮಾಡುವುದು, ವೇರಿಯೇಬಲ್ ಗಳನ್ನು ಪೋಸ್ಟ್ ಮಾಡುವುದು – ಇವುಗಳ ಕುರಿತು ಗೊತ್ತಿದ್ದರೆ ಇದು ತುಂಬ ಸರಳವಾಗಿದೆ.

02:15 ಈ ಟ್ಯುಟೋರಿಯಲ್ ನ ಪ್ರಾಥಮಿಕ ಸರಣಿಗಳನ್ನು ಸರಿಯಾಗಿ ನೋಡಿದ್ದರೆ ನಿಮಗೆ ಈ ವಿಷಯಗಳನ್ನು ಕಲಿಯಲು ಸುಲಭವಾಗುತ್ತದೆ.
02:20 ಈ ಟ್ಯುಟೋರಿಯಲ್ ನಲ್ಲಿ ಇಲ್ಲಿಯವರೆಗೆ ನಿವು ಇನ್ಸರ್ಟ್ ಮತ್ತು ಅಪ್ಡೇಟ್ ಮಾಡುವುದನ್ನು ಕಲಿತಿರುವಿರಿ.
02:28 ಕೊನೆಯದಾಗಿ ನಾನು ಡಿಲೀಟ್ ಮಾಡುವುದನ್ನು ತೋರಿಸುವೆನು.
02:34 ಈಗ ಡಿಲೀಟ್ ಮಾಡುವುದು ಹೇಗೆ ಎಂದು ತೋರಿಸಲು, ನಾನು ಈ ಪೇಜ್ ಅನ್ನು ಮುಚ್ಚುವೆನು ಮತ್ತು ಈ ಬಾಕ್ಸ್ ಅನ್ನು ತೆಗೆದು ಹಾಕಿ, ಇದನ್ನು ಎಡಿಟ್ ಮಾಡುವೆನು.
02:46 ನಾನು ಈ "Change" ಅನ್ನು "Delete" ಎಂದು ಬದಲಿಸುವೆನು.
02:49 ನಾನು ಇಲ್ಲಿ ತೋರಿಸಿರುವ ನಿರ್ದಿಷ್ಟವಾದ ಹೆಸರಿನ ರೆಕಾರ್ಡ್ ಅನ್ನು ಡಿಲೀಟ್ ಮಾಡುವೆನು.
02:55 ಇದನ್ನು ಮಾಡಲು, ನಾನು ಇಲ್ಲಿ "$lastname" ಅನ್ನು ಸೇರಿಸುವೆನು.
03:01 ಈಗ resend ಮಾಡುವುದು ಬೇಡ ಮತ್ತು ನಾವು "mysql.php" ಗೆ ಹಿಂದಿರುಗೋಣ.
03:08 ಇಲ್ಲಿ ನಾವು "Alex Garrett", "Karen Headen" - ನಾನು ಹಿಂದಿನ ಉದಾಹರಣೆಯಲ್ಲಿ ಬದಲಿಸಿದ ಹೆಸರು - ಮುಂತಾದವುಗಳನ್ನು ಹೊಂದಿದ್ದೇವೆ.
03:17 ಈಗ ನಾವು "Karen Headen" ಅನ್ನು ಕ್ಲಿಕ್ ಮಾಡಿ, ನಂತರ "Delete" ಅನ್ನು ಕ್ಲಿಕ್ ಮಾಡೋಣ. ಇದು ರೆಕಾರ್ಡ್ ಅನ್ನು ಡಿಲೀಟ್ ಮಾಡುವುದು.
03:24 ಆದರೆ ಅದು ಈಗ ಡಿಲೀಟ್ ಆಗಿಲ್ಲ.
03:27 ಮೊದಲು ನಮ್ಮ ಎಲ್ಲ ರೆಕಾರ್ಡ್ ಗಳೂ ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳೋಣ.
03:31 ಇಲ್ಲಿ ನೀವು ನೋಡುವಂತೆ ಎಲ್ಲ ರೆಕಾರ್ಡ್ ಗಳೂ ಸರಿಯಾಗಿವೆ ಮತ್ತು ನಾನು ಡಿಲೀಟ್ ಮಾಡಲು ಒಂದು ನಿರ್ದಿಷ್ಟವಾದ ರೆಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳುವೆನು.
03:37 ಈಗ "Emily Headen" ಎಂದುಕೊಳ್ಳೋಣ; ಹಾಗಾಗಿ ನಾನು ಡಿಲೀಟ್ ಮಾಡಲು "Emily Headen " ಅನ್ನು ಆಯ್ಕೆ ಮಾಡಿಕೊಳ್ಳುವೆನು.
03:45 ಈಗ ನಾವು ಇದನ್ನು "mysql ಅಂಡರ್ಸ್ಕೋರ್ delete.php" ಎಂಬ ಹೊಸ ಪೇಜ್ ಗೆ ಸಬ್ಮಿಟ್ ಮಾಡಬೇಕು.
03:52 ಇದಕ್ಕಾಗಿ ನಾನು "mysql ಅಂಡರ್ಸ್ಕೋರ್ delete.php" ಎಂಬ ಹೊಸ ಪೇಜ್ ಅನ್ನು ರಚಿಸುವೆನು.
03:59 ನಾವು ಈ ಹಿಂದೆ ಮಾಡಿದಂತೆಯೇ ಇಲ್ಲಿಯೂ ಮಾಡುವೆವು.
04:03 require "connect" ಅನ್ನು ಬಳಸಿ ಅದರ ಮೂಲಕ ಡಾಟಾಬೇಸ್ ಗೆ ಕನೆಕ್ಟ್ ಮಾಡಬೇಕು.
04:10 ಕ್ಷಮಿಸಿ ! ನಾವು require "connect.php" ಹಿಂದಿರುಗಿ ಅಲ್ಲಿ ವೇರಿಯೇಬಲ್ ಗಳನ್ನು ತೆಗೆದುಕೊಳ್ಳಬೇಕು.
04:22 ಈಗ ಇಲ್ಲಿ, $todelete ಎಂದು ಟೈಪ್ ಮಾಡೋಣ ಮತ್ತು ಅದು "$_POST" ವೇರಿಯೇಬಲ್ ಗೆ ಸಮವಾಗಿರಲಿ.
04:29 ನಾವು ಈ form ಅನ್ನು ಈ ಪೇಜ್ ಗೆ ಪೋಸ್ಟ್ ಮಾಡುತ್ತಿದ್ದೇವೆ ಮತ್ತು ಇಲ್ಲಿಯೂ ಕೆಲವು ವ್ಯಾಲ್ಯುಗಳನ್ನು ಬದಲಿಸೋಣ. .
04:34 ಇದು "todelete" ಆಗಿರಲಿ.
04:37 ಹಾಗಾಗಿ ನಾವು select name ಅನ್ನು "todelete" ಎಂದು ಬದಲಿಸೋಣ.
04:41 ಈಗ ಈ ಫಾರ್ಮ್ ನಲ್ಲಿ ಇಲ್ಲಿ ನೀವು ನೋಡಿದರೆ, ನಾನು ಇನ್ನೊಮ್ಮೆ ಕೋಡ್ ಅನ್ನು ಮತ್ತೆ ತೋರಿಸುವೆನು.
04:47 ಇಲ್ಲಿ ನಾವು ಪ್ರತಿ ರೆಕಾರ್ಡ್ ಗೂ ನಮ್ಮ name ನ ವ್ಯಾಲ್ಯುಗಳನ್ನು ಮತ್ತು id ವ್ಯಾಲ್ಯುಗಳನ್ನು ನೋಡಬಹುದು.
04:54 ಈಗ ನಾವು refresh ಮಾಡಿದರೆ, ಇಲ್ಲಿ ನಮ್ಮ form ನ ಹೆಸರು "todelete" ಆಗಿದೆ ಮತ್ತು ನಾವು ಪ್ರತಿಯೊಂದು ವ್ಯಾಲ್ಯುವನ್ನು ಗಣನೆಗೆ ತೆಗೆದುಕೊಳ್ಳುತ್ತಿದ್ದೇವೆ.
05:01 Emily ಯ ರೆಕಾರ್ಡ್ ಅನ್ನು ಆಯ್ಕೆ ಮಾಡಿದರೆ, ನಾವು id ಯು 3 ಆಗಿರುವ ರೆಕಾರ್ಡ್ ಅನ್ನು ಡಿಲೀಟ್ ಮಾಡುವೆವು.
05:08 ನಾವು ಈಗ ಕೋಡ್ ಗೆ ಹಿಂದಿರುಗೋಣ. ಇಲ್ಲಿ ನಾವು POST ವೇರಿಯೇಬಲ್ ಅನ್ನು ಹೊಂದಿರುವೆವು.
05:14 ಈಗ ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತೋರಿಸಲು ನಾನು ಒಂದು echo ಸ್ಟೇಟ್ ಮೆಂಟ್ ಅನ್ನು ಬಳಸುವೆನು.
05:20 ಇಲ್ಲಿ ನಾವು "Emily Headen" ಅನ್ನು ಹೊಂದಿದ್ದೇವೆ. ಮತ್ತು ಇಲ್ಲಿ 3 ಇದೆ ಇದರರ್ಥ ನಾವು ಇದನ್ನು ಟೇಬಲ್ ಅಥವಾ ಡಾಟಾಬೇಸ್ ನಲ್ಲಿ id ಯು 3 ಆಗಿರುವ ರೆಕಾರ್ಡ್ ಅನ್ನು ಡಿಲೀಟ್ ಮಾಡಲು ಬಳಸಬಹುದು.
05:30 ಇಲ್ಲಿ ನಾವು ಇನ್ನೊಂದು ಹೊಸ ವೇರಿಯೇಬಲ್ ಅನ್ನು ರಚಿಸುವೆವು ಮತ್ತು ನಾನು ಅದನ್ನು "mysql ಅಂಡರ್ಸ್ಕೋರ್ query()" ಎಂದು ಕರೆಯುವೆನು.
05:41 ಇದರ ಒಳಗೆ ನಾವು ಒಂದು ಹೊಸ ಕಮಾಂಡ್ ಗಳ ಸಮೂಹವನ್ನು ಬಳಸುವೆವು.
05:45 ನಾವು "DELETE FROM" ಎಂದು ಟೈಪ್ ಮಾಡಿ , ನಂತರ ಖಂಡಿತವಾಗಿಯೂ ನಮ್ಮ ಟೇಬಲ್ ನ ಹೆಸರನ್ನು ಸೂಚಿಸುವೆವು.
05:52 ಅದಕ್ಕಾಗಿ "people" ಎಂದು ಟೈಪ್ ಮಾಡಿ ನಂತರ "WHERE id equals "$todelete" ಎಂದು ಟೈಪ್ ಮಾಡೋಣ.
05:57 "$todelete" ಇದೊಂದು ವೇರಿಯೇಬಲ್ ಆಗಿದ್ದು, ಇದು ನಾವು ಈ ಲಿಸ್ಟ್ ನಿಂದ ಆಯ್ಕೆಮಾಡಿಕೊಂಡ ವ್ಯಕ್ತಿಯ ಐಡಿಯನ್ನು ಹೊಂದಿರುತ್ತದೆ.
06:03 ಈಗ ಇದನ್ನು ಪರೀಕ್ಷಿಸೋಣ. "Emily Headen" ಎಂದುಕೊಳ್ಳೋಣ.
06:08 Emily Headen ರೆಕಾರ್ಡ್ ನಮ್ಮ ಡಾಟಾಬೇಸ್ ನಲ್ಲಿ ಇನ್ನೂ ಇದೆಯೇ ಎಂದು ಪರೀಕ್ಷಿಸೋಣ.
06:13 ರೆಕಾರ್ಡ್ ಇದೆಯೇ ಎಂದು ನೋಡಲು refresh ಮಾಡೋಣ.
06:17 ಈಗ ನಾನು "Emily Headen" ಅನ್ನು ಕ್ಲಿಕ್ ಮಾಡಿ ಮತ್ತು Delete ಅನ್ನು ಕ್ಲಿಕ್ ಮಾಡುವೆನು, ಇಲ್ಲಿ ಏನೂ ಆಗಿಲ್ಲ.
06:22 ನಾವು ಏನನ್ನೂ ಎಕೋ ಮಾಡಿಲ್ಲ, ಆದರೆ ನಾವು ರಿಫ್ರೆಶ್ ಮಾಡಲು Browse ಅನ್ನು ಕ್ಲಿಕ್ ಮಾಡಿದಾಗ ನಾವು ಎಮಿಲಿ ಅವರ ರೆಕಾರ್ಡ್ ಡಾಟಾಬೇಸ್ ನಿಂದ ಡಿಲೀಟ್ ಆಗಿರುವುದನ್ನು ನೋಡಬಹುದು.
06:30 ನಾವು ಈ ಟ್ಯುಟೋರಿಯಲ್ ಸಮೂಹದಲ್ಲಿ,

ಡಾಟಾ ವನ್ನು ಇನ್ಸರ್ಟ್ ಮಾಡುವುದು ಹೇಗೆ, ಡಾಟಾ ವನ್ನು ರೀಡ್ ಮಾಡುವುದು ಹೇಗೆ, ಎಡಿಟ್ ಮಾಡುವುದು ಹೇಗೆ ಡಾಟಾವನ್ನು ಡಿಲೀಟ್ ಮಾಡುವುದು ಹೇಗೆ ಮತ್ತು ಇವುಗಳನ್ನು ಎಚ್.ಟಿ.ಎಮ್.ಎಲ್ ಫಾರ್ಮ್ ಗಳಲ್ಲಿ ಸೇರಿಸುವುದು ಹೇಗೆ ಎಂಬುದನ್ನು ತೋರಿಸುವ ಪ್ರಾಥಮಿಕ ಕಮಾಂಡ್ ಗಳ ಕುರಿತು ಕಲಿತಿದ್ದೇವೆ.

06:43 ನಾನು ಏನನ್ನಾದರೂ ಮರೆತಿದ್ದರೆ ನನಗೆ ತಿಳಿಸಿ, ನಾನು ಅದನ್ನು ಈ ಟ್ಯುಟೋರಿಯಲ್ ನ ಭಾಗಗಳಿಗೆ ಸೇರಿಸುವೆನು.
06:50 ಅಪ್ಡೇಟ್ ಗಳಿಗೆ ನನ್ನ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.
06:53 ನೀವು ಈ ಟ್ಯುಟೋರಿಯಲ್ ನಿಂದ ಸಂತೋಷ ಪಟ್ಟಿರುವಿರಿ ಎಂದು ಭಾವಿಸುವೆನು. ಧನ್ಯವಾದಗಳು.
06:55 ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14