PERL/C2/Data-Structures/Kannada

From Script | Spoken-Tutorial
Jump to: navigation, search
Time Narration
00:00 Perlನಲ್ಲಿ Data Structures (ಡೇಟಾ ಸ್ಟ್ರಕ್ಚರ್ಸ್) ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು, Perl ನಲ್ಲಿ ಲಭ್ಯವಿರುವ ‘ಡೇಟಾ ಸ್ಟ್ರಕ್ಚರ್’ಗಳ ಬಗ್ಗೆ ಕಲಿಯುವೆವು.
00:11 ಇಲ್ಲಿ, ನಾನು Ubuntu Linux 12.04 ಆಪರೇಟಿಂಗ್ ಸಿಸ್ಟಂ ಹಾಗೂ Perl 5.14.2 ಇವುಗಳನ್ನು ಬಳಸುತ್ತಿದ್ದೇನೆ.
00:18 gedit ‘ಟೆಕ್ಸ್ಟ್ ಎಡಿಟರ್’ಅನ್ನು ಸಹ ಬಳಸುತ್ತಿರುವೆನು.
00:22 ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು.
00:25 ನೀವು Perl (ಪರ್ಲ್) ನಲ್ಲಿ ವೇರಿಯೆಬಲ್ ಗಳ ಬಗ್ಗೆ ತಿಳಿದಿರುವುದು ಅವಶ್ಯಕ.
00:29 ‘ಕಾಮೆಂಟ್ಸ್, ಲೂಪ್ಸ್’ ಮತ್ತು ‘ಕಂಡಿಶನಲ್ ಸ್ಟೇಟ್ಮೆಂಟ್ಸ್’ ಗಳ ಬಗ್ಗೆ ತಿಳಿದಿರುವುದು ಹೆಚ್ಚು ಅನುಕೂಲಕರ.
00:36 ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು ದಯವಿಟ್ಟು spoken tutorial ವೆಬ್ಸೈಟ್ ಮೇಲೆ ನೋಡಿ.
00:41 Perl, 3 (ಮೂರು) ಪ್ರಕಾರದ ‘ಡೇಟಾ ಸ್ಟ್ರಕ್ಚರ್’ಗಳನ್ನು ಹೊಂದಿದೆ:
00:44 * ಸ್ಕೇಲಾರ್ (Scalar)
00:45 * ಆರೇ (Array)
00:46 * ಹ್ಯಾಶ್ (Hash), ಇದನ್ನು ‘ಅಸೋಸಿಯೇಟಿವ್ ಆರೇ’ (Associative Array) ಎಂದು ಸಹ ಕರೆಯಲಾಗುತ್ತದೆ.
00:50 ಸ್ಕೇಲಾರ್ (Scalar): ಈ ಪ್ರಕಾರದ ‘ಡೇಟಾ ಸ್ಟ್ರಕ್ಚರ್’, ಯಾವುದೇ ಡೇಟಾ-ಟೈಪ್ ನ ವ್ಯಾಲ್ಯೂಅನ್ನು ಇಟ್ಟುಕೊಳ್ಳುತ್ತದೆ.
00:56 ಡೇಟಾ-ಟೈಪ್, ಸ್ಟ್ರಿಂಗ್, ನಂಬರ್, ಡಬಲ್ ಇತ್ಯಾದಿ ಆಗಿರಬಹುದು.
01:01 ಇದು ಯಾವುದೇ ಒಂದು ‘ಆರೇ’ಯ ಅಥವಾ ಹ್ಯಾಶ್ ನ ರೆಫರೆನ್ಸ್ ಅನ್ನು ಸಹ ಇಟ್ಟುಕೊಳ್ಳಬಹುದು.
01:06 ಸೂಚನೆ: Perl ನಲ್ಲಿ Reference ಎಂಬುದನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ವಿವರಿಸಲಾಗುವುದು.
01:11 ಸ್ಕೇಲಾರ್ ಟೈಪ್ ನ ‘ಡೇಟಾ ಸ್ಟ್ರಕ್ಚರ್’, ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿದಷ್ಟೇ ಸರಳವಾಗಿದೆ.
01:16 $count = 12 ಸೆಮಿಕೋಲನ್.
01:20 $string = ಸಿಂಗಲ್ ಕೋಟ್ಸ್ ನಲ್ಲಿ 'I am scalar of type string' ಸೆಮಿಕೋಲನ್.
01:26 ನಾವು ಸ್ಕೇಲಾರ್ ನ ಮೇಲೆ ಈ ಕೆಳಗಿನ ಕ್ರಿಯೆಗಳನ್ನು (operations) ಮಾಡಬಹುದು.
01:30 * ಇದಕ್ಕೆ ಒಂದು ವ್ಯಾಲ್ಯೂ ಅನ್ನು ಅಸೈನ್ ಮಾಡುವುದು.
01:32 * ಒಂದು ಸ್ಕೇಲಾರ್ ಗೆ ಇನ್ನೊಂದು ಸ್ಕೇಲಾರ್ ಅನ್ನು ಅಸೈನ್ ಮಾಡುವುದು.
01:35 * ‘ನಂಬರ್ ಟೈಪ್’ನ ಸ್ಕೇಲಾರ್ ಗಳ ಮೇಲೆ ಸಂಕಲನ, ವ್ಯವಕಲನದಂತಹ ಅಂಕಗಣಿತದ ಕ್ರಿಯೆಗಳನ್ನು ಮಾಡುವುದು.
01:41 * ‘ಸ್ಟ್ರಿಂಗ್ ಸ್ಕೇಲಾರ್’ನ ಮೇಲೆ concatenation (ಕೊಂಕ್ಯಾಟಿನೇಶನ್), substr (ಸಬ್ s-t-r) ಗಳಂತಹ ‘ಸ್ಟ್ರಿಂಗ್ ಆಪರೇಶನ್’ಗಳನ್ನು ಮಾಡುವುದು.
01:48 ಈಗ ನಾವು ‘ಸ್ಕೇಲಾರ್ ಡೇಟಾ ಸ್ಟ್ರಕ್ಚರ್’ನ ಒಂದು ಉದಾಹರಣೆಯನ್ನು ನೋಡೋಣ.
01:52 ‘ಟರ್ಮಿನಲ್’ ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: 'gedit scalars ಡಾಟ್ pl ಸ್ಪೇಸ್ &' ಮತ್ತು Enter ಅನ್ನು ಒತ್ತಿ.
02:01 ಇದು, 'gedit' ನಲ್ಲಿ, 'scalars dot pl' ಎಂಬ ಫೈಲನ್ನು ಓಪನ್ ಮಾಡುವುದು.
02:05 ಸ್ಕ್ರೀನ್ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
02:09 ಇದು ಡಿಕ್ಲೆರೇಶನ್ ಮತ್ತು ಸ್ಕೇಲರ್ ಗೆ ಅಸೈನ್ಮೆಂಟ್ ಆಗಿದೆ.
02:13 ಇವುಗಳು, ‘ನಂಬರ್ ಟೈಪ್’ ಸ್ಕೇಲಾರ್ ನ ಮೇಲೆ ಮಾಡಬಹುದಾದ ಅಂಕಗಣಿತದ ಕೆಲವು ಕ್ರಿಯೆಗಳಾಗಿವೆ.
02:19 ಇವುಗಳು, ‘ಸ್ಟ್ರಿಂಗ್ ಟೈಪ್’ ಸ್ಕೇಲಾರ್ ನ ಮೇಲೆ ಮಾಡಬಹುದಾದ ‘ಸ್ಟ್ರಿಂಗ್ ಆಪರೇಶನ್’ಗಳಾಗಿವೆ.
02:25 'substr', ಸ್ಟ್ರಿಂಗ್ ನ ಒಂದು ಭಾಗವನ್ನು ಔಟ್ಪುಟ್ ನಂತೆ ಕೊಡುವ PERL ಫಂಕ್ಷನ್ ಆಗಿದೆ.
02:30 ಇಲ್ಲಿ, ‘ಇಂಡೆಕ್ಸ್ 0’ (ಜೀರೊ) ಸ್ಟ್ರಿಂಗ್ ನ ಆರಂಭವನ್ನು ಎಂದರೆ, ನಾವು ಎಲ್ಲಿಂದ ಸ್ಟ್ರಿಂಗ್ ಅನ್ನು ಆಯ್ಕೆಮಾಡಬೇಕು ಎಂಬುದನ್ನು ಸೂಚಿಸುತ್ತದೆ.
02:39 ಮತ್ತು 11, ನಮಗೆ ಎಲ್ಲಿಯವರೆಗೆ ಸ್ಟ್ರಿಂಗ್, ಔಟ್ಪುಟ್ ನಲ್ಲಿ ಇರಬೇಕಾಗಿದೆ ಎಂಬ ಆಫ್ಸೆಟ್ ಅನ್ನು ಸೂಚಿಸುತ್ತದೆ.
02:46 ಫೈಲನ್ನು ಸೇವ್ ಮಾಡಲು 'Ctrl + s' ಒತ್ತಿ.
02:50 ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು Perl ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ:
02:55 perl scalars ಡಾಟ್ pl ಮತ್ತು Enter ಅನ್ನು ಒತ್ತಿ.
03:00 ‘ಟರ್ಮಿನಲ್’ನ ಮೇಲೆ ತೋರಿಸಲಾದ ಔಟ್ಪುಟ್ ಅನ್ನು ಹೈಲೈಟ್ ಮಾಡಿದೆ.
03:05 ಈಗ ನಾವು, Perl ನಲ್ಲಿ ‘ಆರೇ’ (array) ಎಂಬ ‘ಡೇಟಾ ಸ್ಟ್ರಕ್ಚರ್’ಅನ್ನು ನೋಡೋಣ.
03:09 ‘ಆರೇ’ (array): ಇದು ಎಲಿಮೆಂಟ್ ಗಳ ಒಂದು ಲಿಸ್ಟ್ ಆಗಿದೆ.
03:12 ಎಲಿಮೆಂಟ್ ಗಳು ಸ್ಟ್ರಿಂಗ್, ನಂಬರ್ ಇತ್ಯಾದಿ ಆಗಿರಬಹುದು.
03:16 ಇದು ಒಂದು ಇಂಡೆಕ್ಸ್ ಅನ್ನು ಹೊಂದಿದೆ. ‘ಆರೇ’ಯ ಮೇಲೆ ವಿವಿಧ ಆಪರೇಶನ್ ಗಳನ್ನು ಮಾಡಲು ಇದನ್ನು ಬಳಸಲಾಗುವುದು.
03:22 ಇಂಡೆಕ್ಸ್, ಸೊನ್ನೆಯಿಂದ ಆರಂಭವಾಗುತ್ತದೆ.
03:25 ಇತರ ಪ್ರೊಗ್ರಾಮಿಂಗ್ ಭಾಷೆಗಳಂತೆ, Perl ನಲ್ಲಿ, ಆರೇಯನ್ನು ಅಥವಾ ಅದರ ಸೈಜ್ ಅನ್ನು ಬಳಸುವ ಮುನ್ನ ಡಿಕ್ಲೇರ್ ಮಾಡಬೇಕಾದ ಅವಶ್ಯಕತೆಯಿಲ್ಲ.
03:33 ‘Perl ಆರೇ’, ಅದಕ್ಕೆ ಸೇರಿಸಿದ ಅಥವಾ ಅದರಿಂದ ತೆಗೆದುಹಾಕಿದ ಎಲಿಮೆಂಟ್ ಗಳಿಗೆ ಅನುಸಾರವಾಗಿ ಹಿಗ್ಗುತ್ತದೆ ಅಥವಾ ಕುಗ್ಗುತ್ತದೆ.
03:39 ‘ಆರೇ’ಯನ್ನು ಬರೆಯಲು ಸಿಂಟ್ಯಾಕ್ಸ್ ಹೀಗಿದೆ:
03:41 ಆಟ್ ದ ರೇಟ್ variableName ಸ್ಪೇಸ್ ಇಕ್ವಲ್ ಟು ಸ್ಪೇಸ್ ಓಪನ್ ಬ್ರಾಕೆಟ್, ಕಾಮಾದಿಂದ ಬೇರ್ಪಡಿಸಿದ ಎಲಿಮೆಂಟ್ ಗಳ ಲಿಸ್ಟ್, ಕ್ಲೋಸ್ ಬ್ರಾಕೆಟ್ ಸೆಮಿಕೋಲನ್.
03:54 ಈಗ ನಾವು, ‘ಆರೇ’ (array) ‘ಡೇಟಾ ಸ್ಟ್ರಕ್ಚರ್’ನ ಒಂದು ಉದಾಹರಣೆಯನ್ನು ನೋಡೋಣ.
03:57 ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: gedit perlArray ಡಾಟ್ pl ಸ್ಪೇಸ್ & (ಆಂಪರ್ಸಂಡ್) ಮತ್ತು Enter ಅನ್ನು ಒತ್ತಿ.
04:08 ಇದು, gedit ನಲ್ಲಿ 'perlArray ಡಾಟ್ pl' ಎಂಬ ಫೈಲನ್ನು ಓಪನ್ ಮಾಡುವುದು.
04:12 ಸ್ಕ್ರೀನ್ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
04:18 ಇದು ‘ನಂಬರ್ ಟೈಪ್’ನ ಎಲಿಮೆಂಟ್ ಗಳನ್ನು ಹೊಂದಿರುವ ‘ನಂಬರ್ ಆರೇ’ ಆಗಿದೆ.
04:23 ಇದು, ಸ್ಟ್ರಿಂಗ್ ಟೈಪ್ ನ ಎಲಿಮೆಂಟ್ ಗಳನ್ನು ಹೊಂದಿರುವ ‘ಸ್ಟ್ರಿಂಗ್ ಆರೇ’ ಆಗಿದೆ.
04:29 ಈ ಆರೇ, ನಂಬರ್ ಮತ್ತು ಸ್ಟ್ರಿಂಗ್ ಎರಡೂ ಟೈಪ್ ನ ಎಲಿಮೆಂಟ್ ಗಳನ್ನು ಹೊಂದಿದೆ.
04:34 ಈ ಉದಾಹರಣೆಯು Perl ನ ವಿವಿಧ ಪ್ರಕಾರದ ಆರೇಗಳನ್ನು ತೋರಿಸುತ್ತದೆ.
04:39 Perl ನಲ್ಲಿ, ‘ಆರೇ’ಯನ್ನು ಈ ರೀತಿಯಲ್ಲಿ ನಾವು ಪ್ರಿಂಟ್ ಮಾಡಬಹುದು.
04:43 ಫೈಲನ್ನು ಸೇವ್ ಮಾಡಲು 'Ctrl + S' ಒತ್ತಿ.
04:47 ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು Perl ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ:
04:52 'perl perlArray ಡಾಟ್ pl' ಮತ್ತು Enter ಅನ್ನು ಒತ್ತಿ.
04:59 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗಿದೆ.
05:04 ಈಗ ನಾವು, Perl ನಲ್ಲಿ ‘ಹ್ಯಾಶ್’ (Hash) ಎಂಬ ‘ಡೇಟಾ ಸ್ಟ್ರಕ್ಚರ್’ಅನ್ನು ನೋಡೋಣ.
05:08 ‘ಹ್ಯಾಶ್’ (Hash), ಪರ್ಯಾಯವಾಗಿ ‘ಅಸೋಸಿಯೇಟಿವ್ ಆರೇ’ (Associative Array) ಎಂದು ಕರೆಯಲ್ಪಡುತ್ತದೆ.
05:12 ಇದು ‘ಕೀ-ವ್ಯಾಲ್ಯೂ’ ಜೋಡಿಯ ‘ಡೇಟಾ ಸ್ಟ್ರಕ್ಚರ್’ ಆಗಿದೆ.
05:15 ‘ಹ್ಯಾಶ್’ನಲ್ಲಿ ‘ಕೀ’ ಏಕಮಾತ್ರ (unique) ಆಗಿದೆ.
05:18 ಒಂದುವೇಳೆ, ಒಂದೇ ‘ಕೀ’ಯನ್ನು ಮತ್ತೊಮ್ಮೆ ಸೇರಿಸಿದರೆ ಆಗ ಆ ‘ಕೀ’ಯ ವ್ಯಾಲ್ಯೂ, ಇತ್ತೀಚೆಗೆ ಅಸೈನ್ ಮಾಡಿದ ‘ಕೀ’ಯ ವ್ಯಾಲ್ಯೂದಿಂದ ಅತಿಕ್ರಮಿಸಲ್ಪಡುತ್ತದೆ.
05:28 ‘ವ್ಯಾಲ್ಯೂ’, ನಕಲು (duplicate) ಆಗಿರಬಹುದು.
05:30 ಇದು ಸಹ ಯಾವುದೇ ಡೇಟಾ ಟೈಪ್ ನ ‘ವ್ಯಾಲ್ಯೂ’ಅನ್ನು ಹೊಂದಬಹುದು.
05:34 ‘ಹ್ಯಾಶ್’ನ ಸಿಂಟ್ಯಾಕ್ಸ್ ಹೀಗಿದೆ:
05:36 ಪರ್ಸೆಂಟೇಜ್ ವೇರಿಯೆಬಲ್-ನೇಮ್ ಸ್ಪೇಸ್ ಇಕ್ವಲ್ ಟು ಸ್ಪೇಸ್ ಓಪನ್ ಬ್ರಾಕೆಟ್
05:41 Enter ಅನ್ನು ಒತ್ತಿ.
05:42 ಸಿಂಗಲ್ ಕೋಟ್ ಕೀ-ನೇಮ್ ಸಿಂಗಲ್ ಕೋಟ್ ಸ್ಪೇಸ್ ಇಕ್ವಲ್ ಟು ಗ್ರೇಟರ್ ದ್ಯಾನ್ ಸೈನ್ ಸ್ಪೇಸ್ ವ್ಯಾಲ್ಯೂ ಕಾಮಾ
05:50 Enter ಅನ್ನು ಒತ್ತಿ.
05:52 ಸಿಂಗಲ್ ಕೋಟ್ ಕೀ-ನೇಮ್ ಸಿಂಗಲ್ ಕೋಟ್ ಸ್ಪೇಸ್ ಇಕ್ವಲ್ ಟು ಗ್ರೇಟರ್ ದ್ಯಾನ್ ಸೈನ್ ಸ್ಪೇಸ್ ವ್ಯಾಲ್ಯೂ
05:58 Enter ಅನ್ನು ಒತ್ತಿ.
06:00 ಕ್ಲೋಸ್ ಬ್ರಾಕೆಟ್ ಸೆಮಿಕೋಲನ್.
06:03 ಈಗ ನಾವು ‘ಹ್ಯಾಶ್’ (hash) ‘ಡೇಟಾ ಸ್ಟ್ರಕ್ಚರ್’ನ ಒಂದು ಉದಾಹರಣೆಯನ್ನು ನೋಡೋಣ.
06:07 ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ:
06:10 gedit perlHash ಡಾಟ್ pl ಸ್ಪೇಸ್ & (ಆಂಪರ್ಸಂಡ್) ಮತ್ತು Enter ಅನ್ನು ಒತ್ತಿ.
06:18 ಇದು, 'gedit' ನಲ್ಲಿ 'perlHash ಡಾಟ್ pl' ಎಂಬ ಫೈಲನ್ನು ಓಪನ್ ಮಾಡುತ್ತದೆ.
06:22 ಸ್ಕ್ರೀನ್ ಮೇಲೆ ತೋರಿಸಿದಂತೆ ಈ ಕೆಳಗಿನ ಕೋಡ್ ಅನ್ನು ಟೈಪ್ ಮಾಡಿ.
06:27 ಈ ಹ್ಯಾಶ್, ಒಂದು Subject ನಲ್ಲಿ ಪಡೆದ Marks ಅನ್ನು ಸೂಚಿಸುತ್ತದೆ.
06:31 ಈ ಉದಾಹರಣೆಯು ಹ್ಯಾಶ್ ನ ಬಳಕೆಯನ್ನು ತೋರಿಸುತ್ತದೆ.
06:35 ಹ್ಯಾಶ್ ಅನ್ನು ಹೇಗೆ ಪ್ರಿಂಟ್ ಮಾಡುವುದೆಂದು ಈಗ ನಾವು ನೋಡೋಣ.
06:38 ಸಧ್ಯಕ್ಕೆ, ನಾನು ಹ್ಯಾಶ್ ಅನ್ನು ಪ್ರಿಂಟ್ ಮಾಡಿದ ರೀತಿಯನ್ನು ಮಾತ್ರ ನೋಡಿ.
06:42 ವಿಸ್ತಾರವಾದ ವಿವರಣೆಯನ್ನು ಮುಂದಿನ ಟ್ಯುಟೋರಿಯಲ್ ನಲ್ಲಿ ಕೊಡಲಾಗುವುದು.
06:47 ಫೈಲನ್ನು ಸೇವ್ ಮಾಡಲು 'Ctrl + S' ಒತ್ತಿ.
06:50 ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು Perl ಸ್ಕ್ರಿಪ್ಟ್ ಅನ್ನು ಹೀಗೆ ಎಕ್ಸಿಕ್ಯೂಟ್ ಮಾಡಿ:
06:55 'perl perlHash ಡಾಟ್ pl' ಮತ್ತು Enter ಅನ್ನು ಒತ್ತಿ.
07:01 ‘ಟರ್ಮಿನಲ್’ನ ಮೇಲೆ, ಈ ಕೆಳಗಿನ ಔಟ್ಪುಟ್ ಅನ್ನು ತೋರಿಸಲಾಗಿದೆ.
07:05 ಸಂಕ್ಷಿಪ್ತವಾಗಿ,
07:06 ಈ ಟ್ಯುಟೋರಿಯಲ್ ನಲ್ಲಿ ನಾವು, Perl ನಲ್ಲಿ ಸ್ಯಾಂಪಲ್ ಪ್ರೊಗ್ರಾಂಗಳನ್ನು ಬಳಸಿ
07:09 * ಸ್ಕೇಲಾರ್ (scalar)
07:10 * ಆರೇ (Array) ಮತ್ತು
07:11 * ಹ್ಯಾಶ್ (Hash) ‘ಡೇಟಾ ಸ್ಟ್ರಕ್ಚರ್’ ಗಳನ್ನು ಕಲಿತಿದ್ದೇವೆ.
07:15 ನಿಮಗಾಗಿ ಇಲ್ಲಿ ಒಂದು ಅಸೈನ್ಮೆಂಟ್ ಇದೆ.
07:17 ಸ್ಕೇಲಾರ್ ವೇರಿಯೆಬಲ್ ಅನ್ನು ಡಿಕ್ಲೇರ್ ಮಾಡಿ.
07:19 ಅದಕ್ಕೆ float ಟೈಪ್ ನ ವ್ಯಾಲ್ಯೂ ಅನ್ನು ಅಸೈನ್ ಮಾಡಿ. ನಂತರ ಅದನ್ನು ಪ್ರಿಂಟ್ ಮಾಡಿ.
07:23 'Red', 'Yellow' ಮತ್ತು 'Green' ಕಲರ್ ಗಳ ಒಂದು ‘ಆರೇ’ಯನ್ನು ಡಿಕ್ಲೇರ್ ಮಾಡಿ ಮತ್ತು ಪ್ರಿಂಟ್ ಮಾಡಿ.
07:28 Employee Name ಮತ್ತು ಅವರ department ನ ‘ಹ್ಯಾಶ್’ ಒಂದನ್ನು ಡಿಕ್ಲೇರ್ ಮಾಡಿ ಮತ್ತು ಪ್ರಿಂಟ್ ಮಾಡಿ.
07:33 Hint: 'Employee' =>(ಇಕ್ವಲ್ ಟು ಗ್ರೇಟರ್ ದ್ಯಾನ್ ಸೈನ್) 'John' ಕಾಮಾ
07:38 'Department' =>( ಇಕ್ವಲ್ ಟು ಗ್ರೇಟರ್ ದ್ಯಾನ್ ಸೈನ್) 'Engineering'.
07:42 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ.
07:46 ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
07:49 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
07:53 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
07:59 *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
08:03 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:

contact@spoken-tutorial.org

08:10 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ.
08:15 ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
08:22 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

spoken hyphen tutorial dot org slash NMEICT hyphen Intro.

08:33 ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ.
08:35 IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ .
08:38 ವಂದನೆಗಳು.

Contributors and Content Editors

Pratik kamble, Sandhya.np14, Vasudeva ahitanal