Moodle-Learning-Management-System/C2/Users-in-Moodle/Kannada

From Script | Spoken-Tutorial
Revision as of 22:52, 30 October 2019 by Sandhya.np14 (Talk | contribs)

Jump to: navigation, search
Time Narration
00:01 Users in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:

ಯೂಸರ್ ಅನ್ನು ಸೇರಿಸುವುದು, ಯೂಸರ್ ಪ್ರೊಫೈಲ್ ಅನ್ನು ಎಡಿಟ್ ಮಾಡುವುದು, ದೊಡ್ಡ ಪ್ರಮಾಣದಲ್ಲಿ ಯೂಸರ್ ಗಳನ್ನು ಅಪ್ಲೋಡ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.

00:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,

Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:43 ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:51 ಈ ಟ್ಯುಟೋರಿಯಲ್ ಅನ್ನು ಕಲಿಯುವವರು, ತಮ್ಮ Moodle ವೆಬ್ಸೈಟ್ ನಲ್ಲಿ ಕೆಲವು ಕೋರ್ಸ್ ಗಳನ್ನು ರಚಿಸಿರಬೇಕು. ಇಲ್ಲದಿದ್ದರೆ, ಈ ವೆಬ್ಸೈಟ್ ನಲ್ಲಿ ಹಿಂದಿನ Moodle ಟ್ಯುಟೋರಿಯಲ್ ಗಳನ್ನು ನೋಡಿ.
01:05 ಬ್ರೌಸರ್ ಗೆ ಬದಲಾಯಿಸಿ. ನಿಮ್ಮ ಅಡ್ಮಿನ್ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಗಳನ್ನು ಬಳಸಿ moodle ವೆಬ್ಸೈಟ್ ನಲ್ಲಿ ಲಾಗ್-ಇನ್ ಮಾಡಿ.
01:14 ಈಗ ನಾವು Moodle ನಲ್ಲಿ ಹೊಸ user ಅನ್ನು ಹೇಗೆ ಕ್ರಿಯೇಟ್ ಮಾಡುವುದು ಎಂದು ನೋಡೋಣ.
01:19 Navigation block ನಲ್ಲಿ, Site Administration ಮೇಲೆ, ನಂತರ Users ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
01:28 Add a new user ಆಯ್ಕೆಯನ್ನು ಕ್ಲಿಕ್ ಮಾಡಿ.
01:32 ನಾನು username ಅನ್ನು adminuser2 ಎಂದು ನಮೂದಿಸುವೆನು.
01:37 ಕೆಳಗೆ New Password ಫೀಲ್ಡ್ ಗೆ ಸ್ಕ್ರೋಲ್ ಮಾಡಿ.

Click to enter text ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಿ.

01:45 ದಯವಿಟ್ಟು ಗಮನಿಸಿ: ಪಾಸ್ವರ್ಡ್, ಇಲ್ಲಿ ಕೊಟ್ಟಿರುವ ನಿಯಮಗಳನ್ನು ಅನುಸರಿಸಬೇಕು.
01:51 ನಾನು ನನ್ನ ಪಾಸ್ವರ್ಡ್ ಅನ್ನು Spokentutorial1@ ಎಂದು ನಮೂದಿಸುವೆನು.
01:57 Force password change ಚೆಕ್-ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
02:02 ಹೊಸ ಯೂಸರ್ ನು ಮೊದಲ ಬಾರಿ ಲಾಗ್-ಇನ್ ಮಾಡಿದಾಗ, ತಮ್ಮ ಪಾಸ್ವರ್ಡ್ ಅನ್ನು ಬದಲಿಸಲು ಇದು ಅವರಿಗೆ ಒತ್ತಾಯ ಮಾಡುತ್ತದೆ.
02:10 ಇಲ್ಲಿ ತೋರಿಸಿದಂತೆ, ಇನ್ನುಳಿದ ವಿವರಗಳನ್ನು ನಿಮ್ಮ ಆಯ್ಕೆಯ ಪ್ರಕಾರ ನಮೂದಿಸಿ.
02:16 Email display ಯಲ್ಲಿ ನಾನು, Allow everyone to see my email address ಅನ್ನು ಆಯ್ಕೆ ಮಾಡಿರುವುದನ್ನು ಗಮನಿಸಿ. ಏಕೆಂದರೆ, ನಂತರ ನಾನು ಈ ಯೂಸರ್ ಅನ್ನು admin user ಎಂದು ಮಾಡುವವನಿದ್ದೇನೆ.
02:30 ಆದರೆ ಉಳಿದ ಯೂಸರ್ ಗಳಾದ teachers ಮತ್ತು students ಗಳಿಗೆ ಇದನ್ನು ಬಳಸದಿದ್ದರೆ ಒಳ್ಳೆಯದು.
02:37 ಈಗ ಸಧ್ಯಕ್ಕೆ ನಾವು City/Town ಫೀಲ್ಡ್ ಅನ್ನು ಖಾಲಿ ಬಿಡುವೆವು. ನಂತರ ಈ user ಅನ್ನು ಎಡಿಟ್ ಮಾಡುವಾಗ ಇದನ್ನು ಅಪ್ಡೇಟ್ ಮಾಡೋಣ.
02:47 ನಂತರ, ಇಲ್ಲಿ ತೋರಿಸಿರುವಂತೆ country ಮತ್ತು timezone ಅನ್ನು ಆಯ್ಕೆಮಾಡಿ.
02:52 ಇನ್ನುಳಿದ ಎಲ್ಲಾ ಫೀಲ್ಡ್ ಗಳು ಡಿಫಾಲ್ಟ್ ಗೆ ಸೆಟ್ ಆಗಿರಲಿ.
02:56 ನಂತರ ಕೆಳಗೆ ಸ್ಕ್ರೋಲ್ ಮಾಡಿ, Create user ಬಟನ್ ಅನ್ನು ಕ್ಲಿಕ್ ಮಾಡಿ.
03:01 ಈಗ ನಾವು ಎರಡು user ಗಳನ್ನು ಹೊಂದಿದ್ದೇವೆ. ಈಗ ತಾನೆ ನಾವು ರಚಿಸಿದ System Admin2 user ನ ಮೇಲೆ ಕ್ಲಿಕ್ ಮಾಡಿ.
03:10 ಬಲಭಾಗದಲ್ಲಿರುವ Edit Profile ಲಿಂಕ್ ನ ಮೇಲೆ ಕ್ಲಿಕ್ ಮಾಡಿ, ಈ ಯೂಸರ್ ನ ಪ್ರೊಫೈಲ್ ಅನ್ನು ಎಡಿಟ್ ಮಾಡಬಹುದು. ಈಗ City/Town ಟೆಕ್ಸ್ಟ್ ಬಾಕ್ಸ್ ನಲ್ಲಿ Mumbai ಎಂದು ನಮೂದಿಸೋಣ.
03:22 ನಂತರ ಕೆಳಕ್ಕೆ ಸ್ಕ್ರೋಲ್ ಮಾಡಿ, Update profile ಬಟನ್ ನ ಮೇಲೆ ಕ್ಲಿಕ್ ಮಾಡಿ. ಹೀಗೆಯೇ ನಾವು ಯಾವುದೇ ಯೂಸರ್ ಗಾಗಿ, ಯಾವುದೇ ವಿವರವನ್ನು ಎಡಿಟ್ ಮಾಡಬಹುದು.
03:33 ಈ ಹೊಸ ಯೂಸರ್ ನ ಬಲಭಾಗದಲ್ಲಿರುವ ಮೂರು ಐಕಾನ್ ಗಳನ್ನು ನೋಡಿ. ಅವುಗಳು ಏನು ಮಾಡುವವೆಂದು ನೋಡಲು ಮೌಸ್ ಅನ್ನು ಅದರ ಮೇಲೆ ನಡೆದಾಡಿಸಿ.
03:43 delete ಐಕಾನ್, ಯೂಸರ್ ಅನ್ನು ಡಿಲೀಟ್ ಮಾಡುವುದು.

ಗಮನಿಸಿ: ಯೂಸರ್ ಅನ್ನು ಡಿಲೀಟ್ ಮಾಡುವುದರಿಂದ ಯೂಸರ್ ನ ಕೋರ್ಸ್ ರೆಜಿಸ್ಟ್ರೇಷನ್, ಗ್ರೇಡ್ ಮುಂತಾದ ಎಲ್ಲಾ ಡೇಟಾಗಳೂ ಡಿಲೀಟ್ ಆಗುವವು. ಆದ್ದರಿಂದ ಈ ಆಯ್ಕೆಯನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕು.

04:03 eye ಐಕಾನ್ ಯೂಸರ್ ಅನ್ನು ಸಸ್ಪೆಂಡ್ ಮಾಡುವುದು. ಸಸ್ಪೆಂಡ್ ಮಾಡುವುದು ಎಂದರೆ ಯೂಸರ್ ಅಕೌಂಟ್ ಅನ್ನು ಡಿ-ಆಕ್ಟಿವೇಟ್ ಮಾಡುವುದು.
04:13 ಅಂದರೆ ಯೂಸರ್ ಇನ್ನು ಮುಂದೆ ಲಾಗ್-ಇನ್ ಮಾಡಲು ಸಾಧ್ಯವಿಲ್ಲ, ಆದರೆ ಅವರ ರೆಜಿಸ್ಟ್ರೇಷನ್, ಗ್ರೇಡ್ ಇತ್ಯಾದಿಗಳು ಸುರಕ್ಷಿತವಾಗಿರುತ್ತವೆ.
04:24 ಯೂಸರ್ ಅನ್ನು ಡಿಲೀಟ್ ಮಾಡುವುದಕ್ಕಿಂತ ಇದು ಒಳ್ಳೆಯದು.
04:29 ಮುಂದಿನ ಬಳಕೆಗಾಗಿ ಇದು ಎಲ್ಲಾ ರೆಕಾರ್ಡ್ ಗಳನ್ನು ಸೇವ್ ಮಾಡಿರುತ್ತದೆ. ನೀವು ಯೂಸರ್ ಅನ್ನು ಯಾವಾಗ ಬೇಕಾದರೂ ಆಕ್ಟಿವೇಟ್ ಮಾಡಬಹುದು.
04:37 ಮುಂದಿನದು gear ಐಕಾನ್. ಇದು ನಮ್ಮನ್ನು Edit profile ಪೇಜ್ ಗೆ ಕರೆದೊಯ್ಯುತ್ತದೆ.
04:43 ಗಮನಿಸಿ : Admin User ನ ಬದಿಯಲ್ಲಿ delete ಮತ್ತು suspend ಐಕಾನ್ ಗಳನ್ನು ತೋರಿಸಲಾಗಿಲ್ಲ.
04:51 ಏಕೆಂದರೆ main system administrator ಅನ್ನು ಡಿಲೀಟ್ ಅಥವಾ ಡಿಆಕ್ಟಿವೇಟ್ ಮಾಡಲು ಸಾಧ್ಯವಿಲ್ಲ.
04:59 ಈಗ, ಒಂದೇಸಲ ಅನೇಕ ಯೂಸರ್ ಗಳನ್ನು ಸೇರಿಸುವುದನ್ನು ಕಲಿಯೋಣ.
05:05 ಇದಕ್ಕಾಗಿ, ನಾವು ಕೆಲವು ಡೇಟಾದೊಂದಿಗೆ , ನಿರ್ದಿಷ್ಟವಾದ ಫೈಲ್ ಫಾರ್ಮ್ಯಾಟ್ ನಲ್ಲಿ ಒಂದು ಫೈಲ್ ಅನ್ನು ಅಪ್ಲೋಡ್ ಮಾಡಬೇಕು. ಆ ಫೈಲ್ ಟೈಪ್ CSV ಆಗಿದೆ.
05:16 ವಿವರಣೆಗಾಗಿ ನಾನು ಈಗಾಗಲೇ ರಚಿಸಿದ user-details-upoad.csv ಎಂಬ ಫೈಲ್ ಅನ್ನು ಓಪನ್ ಮಾಡುವೆನು.
05:25 ನಾನು LibreOffice Suite ನ ಸ್ಪ್ರೆಡ್-ಶೀಟ್ ಘಟಕವಾದ LibreOffice Calc ಅನ್ನು ಬಳಸುತ್ತಿದ್ದೇನೆ.
05:32 ಈ ಫೈಲ್, ಕೆಳಗಿನ ಕಾಲಮ್ ಗಳನ್ನು ಹೊಂದಿದೆ.

username,

password,

firstname,

lastname,

email. ಈ ಐದು ಫೀಲ್ಡ್ ಗಳು ಕಡ್ಡಾಯವಾಗಿವೆ.

05:47 ಇಲ್ಲಿ ಹೇಳಿರುವ ಇನ್ನು ಕೆಲವು ಫೀಲ್ಡ್ ಗಳು ಐಚ್ಛಿಕವಾಗಿವೆ:

institution,

department,

phone1,

address,

course1,

role1.

05:58 ಗಮನಿಸಿ: ಫೀಲ್ಡ್ ಗಳ ಹೆಸರುಗಳು ಇಲ್ಲಿ ಸ್ಪ್ರೆಡ್-ಶೀಟ್ ನಲ್ಲಿ ಕೊಟ್ಟಿರುವಂತೆಯೇ ಇರಬೇಕು ಅಂದರೆ ಸಣ್ಣ ಅಕ್ಷರದಲ್ಲಿಯೇ (ಲೊವರ್ ಕೇಸ್) ಇರಬೇಕು. ಇಲ್ಲವಾದಲ್ಲಿ, ಅಪ್ಲೋಡ್ ಎರರ್ ಅನ್ನು ಕೊಡುವುದು.
06:11 ಯೂಸರ್ ಅನ್ನು ಒಂದೇ ಕೋರ್ಸ್ ಗೆ ಸೇರಿಸಬೇಕಾಗಿದ್ದರೆ, ನಾವು ಫೀಲ್ಡ್ ನ ಟೈಟಲ್ ಗೆ ಸಫಿಕ್ಸ್ ಅನ್ನು 1 ಎಂದು ಕೊಡುವೆವು.
06:19 ಯೂಸರ್ ಅನ್ನು ಹೆಚ್ಚು ಕೋರ್ಸ್ ಗಳಿಗೆ ಸೇರಿಸಬೇಕಾಗಿದ್ದರೆ, course2, role2 ಎಂದು ಹೆಚ್ಚಿನ ಕಾಲಮ್ ಗಳನ್ನು ಸೇರಿಸಿ.
06:29 ಗಮನಿಸಿ: course1 ಫೀಲ್ಡ್ ನಲ್ಲಿ ನೀವು Course short name ಮತ್ತು role1 ಫೀಲ್ಡ್ ನಲ್ಲಿ Role short name ಅನ್ನು ಕೊಡಬೇಕು.
06:39 Role short name, ವಿದ್ಯಾರ್ಥಿಗಾಗಿ student ಮತ್ತು ಶಿಕ್ಷಕನಿಗಾಗಿ editingteacher ಎಂದು ಇರುತ್ತದೆ.
06:47 ನಾವು ಈ CSV ಫೈಲ್ ನಲ್ಲಿ ಮೂರು ಯೂಸರ್ ಗಳನ್ನು ಹೊಂದಿದ್ದೇವೆ.

System Admin2 ಯೂಸರ್ ಅನ್ನು ಈಗಾಗಲೇ ಕ್ರಿಯೇಟ್ ಮಾಡಿದ್ದೇವೆ. ಒಂದು ಯೂಸರ್, ಐದು ಕಡ್ಡಾಯವಾದ ಫೀಲ್ಡ್ ಗಳನ್ನು ಮಾತ್ರ ಹೊಂದಿದ್ದು, ಉಳಿದ ಫೀಲ್ಡ್ ಗಳು ಐಚ್ಛಿಕವಾಗಿವೆ ಎಂದು ತೋರಿಸುತ್ತಿದೆ. ಇನ್ನೊಂದು ಯೂಸರ್, ಎಲ್ಲಾ ವಿವರಗಳನ್ನು ಹೊಂದಿದೆ.

07:08 ಈ ಟ್ಯುಟೋರಿಯಲ್ ನ Code files ವಿಭಾಗದಲ್ಲಿ ಈ CSV ಫೈಲ್ ಲಭ್ಯವಿದೆ. ನೀವು ಅದನ್ನು ಡೌನ್ಲೋಡ್ ಮಾಡಿ ಬಳಸಬಹುದು.
07:17 ಈ ಟ್ಯುಟೋರಿಯಲ್ ನ Additional Reading Material, CSV ಫೈಲ್ ರಚನೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊಂದಿದೆ.
07:25 ಈಗ ಬ್ರೌಸರ್ ವಿಂಡೋ ಗೆ ಹಿಂದಿರುಗೋಣ.
07:29 Navigation ಬ್ಲಾಕ್ ನಲ್ಲಿ, Site Administration ನ ಮೇಲೆ ಕ್ಲಿಕ್ ಮಾಡಿ.
07:34 ನಂತರ Users ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. Accounts ವಿಭಾಗದಲ್ಲಿ Upload Users ಅನ್ನು ಕ್ಲಿಕ್ ಮಾಡಿ.
07:43 Choose a file ಬಟನ್ ನ ಮೇಲೆ ಕ್ಲಿಕ್ ಮಾಡಿ. File picker ಎಂಬ ಒಂದು ಹೊಸ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
07:51 ಈಗಾಗಲೇ ಆ ಲಿಂಕ್ ನಲ್ಲಿ ಪಾಪ್-ಅಪ್ ವಿಂಡೋ ಇಲ್ಲದಿದ್ದರೆ, ಎಡ ಮೆನ್ಯುವಿನಲ್ಲಿರುವ Upload a file ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
07:59 ನಿಮ್ಮಇಂಟರ್ಫೇಸ್ ನ ಮೇಲೆ ಕಾಣಿಸಿಕೊಳ್ಳುವ Browse / Choose a file ಬಟನ್ ನ ಮೇಲೆ ಕ್ಲಿಕ್ ಮಾಡಿ. ಸೇವ್ ಮಾಡಿರುವ ಫೋಲ್ಡರ್ ಅನ್ನು ಬ್ರೌಸ್ ಮಾಡಿ, CSV ಫೈಲ್ ಅನ್ನು ಆಯ್ಕೆಮಾಡಿ.
08:11 ಉಳಿದ ಎಲ್ಲಾ ಫೀಲ್ಡ್ ಗಳನ್ನು ಡಿಫಾಲ್ಟ್ ಆಗೇ ಇಡೋಣ.
08:15 ಪೇಜ್ ನ ಕೆಳಭಾಗದಲ್ಲಿರುವ Upload this file ಬಟನ್ ನ ಮೇಲೆ ಕ್ಲಿಕ್ ಮಾಡಿ.
08:21 ಈಗ ಟೆಕ್ಸ್ಟ್ ಏರಿಯಾ ದಲ್ಲಿ ಬರೆಯಲಾದ ಫೈಲ್ ನೇಮ್ ನೊಂದಿಗೆ, ಇದೇ ಸ್ಕ್ರೀನ್ ರಿಫ್ರೆಶ್ ಆಗುತ್ತದೆ.
08:27 ಈಗ ಕೆಳಗಿರುವ ಬಟನ್ Upload users ಎಂದು ಬದಲಾಗಿದೆ. ಈ ಬಟನ್ ನ ಮೇಲೆ ಕ್ಲಿಕ್ ಮಾಡಿ.
08:35 ನಾವು ಅಪ್ಲೋಡ್ ಮಾಡುತ್ತಿರುವ ಯೂಸರ್ ಗಳ preview ಅನ್ನು ಮುಂದಿನ ಪೇಜ್ ತೋರಿಸುತ್ತದೆ. ವ್ಯಾಲ್ಯು ಗಳು ಸರಿಯಾಗಿವೆಯೇ ಎಂದು ನೋಡಿಕೊಳ್ಳಿ. ಈಗ Settings ವಿಭಾಗವನ್ನು ಪರಿಶೀಲಿಸಿ.
08:48 Upload type ಡ್ರಾಪ್- ಡೌನ್, ನಾಲ್ಕು ಆಯ್ಕೆಗಳನ್ನು ಹೊಂದಿದೆ.
08:53 ಇಲ್ಲಿರುವ ಯೂಸರ್ ಗಳ ರೆಕಾರ್ಡ್ ಗಳನ್ನು ಅಪ್ಡೇಟ್ ಮಾಡಲು, ಈ ಮೂರು ಆಯ್ಕೆಗಳನ್ನು ಬಳಸಬಹುದು. ನಾವು Add new only, skip existing users ಅನ್ನು ಆಯ್ಕೆಮಾಡುವೆವು.
09:05 ಎಂದರೆ, ಇಲ್ಲಿusername ಈಗಾಗಲೇ ಇದ್ದರೆ, ಅದನ್ನು ಮತ್ತೆ ಸೇರಿಸಲಾಗುವುದಿಲ್ಲ.
09:11 New user password ಡ್ರಾಪ್-ಡೌನ್ ನಲ್ಲಿ, Field required in file ಅನ್ನು ಆಯ್ಕೆಮಾಡಿ.
09:17 Force password change ನ ಅಡಿಯಲ್ಲಿ , All ಅನ್ನು ಆಯ್ಕೆಮಾಡಿ. ಇದು, ಎಲ್ಲಾ ಯೂಸರ್ ಗಳಿಗೆ ಅವರು ಮೊದಲನೇ ಸಲ ಲಾಗ್-ಇನ್ ಮಾಡಿದಾಗ ಪಾಸ್ವರ್ಡ್ ಅನ್ನು ಬದಲಿಸಲು ಸೂಚಿಸುವುದು.
09:27 ಈ ವಿಭಾಗದಲ್ಲಿ, ಉಳಿದ ಫೀಲ್ಡ್ ಗಳನ್ನು ನಾವು ಡಿಫಾಲ್ಟ್ ಆಗಿ ಬಿಡೋಣ.
09:32 ಈಗ ನಾವು Default values ವಿಭಾಗವನ್ನು ನೋಡೋಣ.
09:36 Email display ಅಡಿಯಲ್ಲಿ, Allow only other course members to see my email address ಅನ್ನು ಆಯ್ಕೆಮಾಡಿ.
09:44 ಎಲ್ಲಾ ಯೂಸರ್ ಗಳಿಗೂ ಡಿಫಾಲ್ಟ್ ಫೀಲ್ಡ್ ಗಳು ಒಂದೇ ಆಗಿದ್ದರೆ, ನೀವು ಅವುಗಳನ್ನು ಕೊಡಬಹುದು. ಈ ಫೀಲ್ಡ್ ಗಳನ್ನು ಅಪ್ಲೋಡ್ ಮಾಡಲಾದ ಎಲ್ಲಾ ಯೂಸರ್ ಗಳಿಗೆ ಬಳಸಲಾಗುವುದು.
09:55 ನಾನು City/Town ನಲ್ಲಿ, Mumbai ಎಂದು ಟೈಪ್ ಮಾಡುವೆನು.
09:59 ನಂತರ Show more… ಅನ್ನು ಕ್ಲಿಕ್ ಮಾಡುವೆನು. ಇಲ್ಲಿ ನಾವು ಡೇಟಾವನ್ನು ನಮೂದಿಸಬಹುದಾದ ಅನೇಕ ಫೀಲ್ಡ್ ಗಳಿವೆ.
10:07 ಆದರೆ ಗಮನಿಸಿ, ಅವುಗಳಲ್ಲಿ ಯಾವುದೂ ಕಡ್ಡಾಯವಲ್ಲ. ಹೀಗಾಗಿ ನಾನು ಈಗ ಅವುಗಳನ್ನು ಖಾಲಿ ಬಿಡುವೆನು.
10:15 ಪೇಜ್ ನ ಕೆಳಗಿರುವ Upload users ಬಟನ್ ನ ಮೇಲೆ ಕ್ಲಿಕ್ ಮಾಡಿ.
10:20 ಇಲ್ಲಿ ತೋರಿಸಿರುವ Upload users results ಟೇಬಲ್ ನ ಸ್ಟೇಟಸ್ ಕಾಲಮ್ ಅನ್ನು ನೋಡಿ.
10:27 ಮೊದಲ user ಗಾಗಿ, ಸ್ಟೇಟಸ್ ಮೆಸೇಜ್ ಹೀಗಿದೆ:

User not added - already registered.

10:35 ಈ ಯೂಸರ್ ಸಿಸ್ಟಮ್ ನಲ್ಲಿ ಈಗಾಗಲೇ ಇರುವುದರಿಂದ ಇದನ್ನು ಬಿಡಲಾಗಿದೆ.
10:40 ಇನ್ನುಳಿದ ಯೂಸರ್ ಗಳನ್ನು New user ಗಳೆಂದು ಸೇರಿಸಲಾಗಿದೆ.
10:45 ಇಲ್ಲಿ ತೋರಿಸಲಾದ ಸ್ಟೇಟಸ್ ಅನ್ನು ನೋಡಿ.
10:49 ಪಾಸ್ವರ್ಡ್ ನ ನಿಯಮಗಳನ್ನು ಅನುಸರಿಸದ ಪಾಸ್ವರ್ಡ್ ಗಳು Weak passwords ಆಗಿರುತ್ತವೆ.
10:54 ಇವು ಸಿಸ್ಟಮ್ ನಲ್ಲಿ ಅಪ್ಲೋಡ್ ಆಗುತ್ತವೆ. ಆದರೂ ಸಹ, ಯಾವಾಗಲೂ strong ಪಾಸ್ವರ್ಡ್ ಗಳಿದ್ದರೆ ಒಳ್ಳೆಯದು.
11:01 Continue ಬಟನ್ ನ ಮೇಲೆ ಕ್ಲಿಕ್ ಮಾಡಿ. ಈಗ ನಾವು ರಚಿಸಿದ ಎಲ್ಲಾ ಯೂಸರ್ ಗಳನ್ನು ನೋಡೋಣ.
11:08 Site Administration ನ ಮೇಲೆ, ನಂತರ Users ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. Accounts ವಿಭಾಗದ ಅಡಿಯಲ್ಲಿ, Browse list of users ನ ಮೇಲೆ ಕ್ಲಿಕ್ ಮಾಡಿ.
11:20 ಈಗ ನಾವು ನಾಲ್ಕು ಯೂಸರ್ ಗಳನ್ನು ಹೊಂದಿದ್ದೇವೆ.
11:23 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಈಗ ಸಾರಾಂಶವನ್ನು ನೋಡೋಣ.
11:29 ಈ ಟ್ಯುಟೋರಿಯಲ್ ನಲ್ಲಿ ನಾವು:

ಯೂಸರ್ ಅನ್ನು ಸೇರಿಸುವುದು, ಯೂಸರ್ ಪ್ರೊಫೈಲ್ ಅನ್ನು ಎಡಿಟ್ ಮಾಡುವುದು, ದೊಡ್ಡ ಪ್ರಮಾಣದಲ್ಲಿ ಯೂಸರ್ ಗಳನ್ನು ಅಪ್ಲೋಡ್ ಮಾಡುವುದು ಇವುಗಳ ಬಗ್ಗೆ ಕಲಿತಿದ್ದೇವೆ.

11:39 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
11:47 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
11:55 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
12:00 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
12:11 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
12:15 ಧನ್ಯವಾದಗಳು.

Contributors and Content Editors

Sandhya.np14