Difference between revisions of "Moodle-Learning-Management-System/C2/Question-bank-in-Moodle/Kannada"

From Script | Spoken-Tutorial
Jump to: navigation, search
Line 403: Line 403:
 
|  13:38
 
|  13:38
 
|  ಈಗ ನಾವು ಈ ಕ್ವಶ್ಚನ್ ಬ್ಯಾಂಕ್ ನಲ್ಲಿ  10 ಪ್ರಶ್ನೆಗಳನ್ನು ಹೊಂದಿದ್ದೇವೆ.  
 
|  ಈಗ ನಾವು ಈ ಕ್ವಶ್ಚನ್ ಬ್ಯಾಂಕ್ ನಲ್ಲಿ  10 ಪ್ರಶ್ನೆಗಳನ್ನು ಹೊಂದಿದ್ದೇವೆ.  
ಅವುಗಳಲ್ಲಿ 6 ಪ್ರಶ್ನೆಗಳು '''Evolutes''' ನಿಂದ ಮತ್ತು 4 ಪ್ರಶ್ನೆಗಳು '''Involutes '''  ಸಬ್-ಕೆಟಗರಿಯಿಂದ ಬಂದಿವೆ. |-  
+
ಅವುಗಳಲ್ಲಿ 6 ಪ್ರಶ್ನೆಗಳು '''Evolutes''' ನಿಂದ ಮತ್ತು 4 ಪ್ರಶ್ನೆಗಳು '''Involutes '''  ಸಬ್-ಕೆಟಗರಿಯಿಂದ ಬಂದಿವೆ.
 +
|-  
 
|  13:51
 
|  13:51
 
|  ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
 
|  ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.

Revision as of 21:03, 4 December 2019

Time Narration
00:01 ಮೂಡಲ್ ನಲ್ಲಿ Question bank ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ Question bank ,
00:12 ಪ್ರಶ್ನೆಗಳ ವರ್ಗ ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಹೇಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿಯುವೆವು.
00:19 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:26 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
00:34 Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.

ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:44 ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:52 ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು teacher ಆಗಿ ನೋಂದಾಯಿಸಿದ್ದಾರೆ ಮತ್ತು ಒಂದಾದರೂ ಕೋರ್ಸ್ ಅಸೈನ್ ಮಾಡಿರುವರು ಎಂದು ಭಾವಿಸುತ್ತದೆ.
01:03 ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿದೆ ಎಂದೂ ಭಾವಿಸುತ್ತದೆ.
01:09 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:16 ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ಗೆ ಟೀಚರ್ ಆಗಿ ಲಾಗಿನ್ ಆಗಿ.
01:24 ನಾನು ಈ ಟ್ಯುಟೋರಿಯಲ್ ನಲ್ಲಿ ಬಳಸಿದ ಎಲ್ಲಾ ಟೆಕ್ಸ್ಟ್ ಅನ್ನು ಒಳಗೊಂಡಿರುವ ಟೆಕ್ಸ್ಟ್ ಫೈಲ್ ಅನ್ನು Code files ಲಿಂಕ್ ನಲ್ಲಿ ಇಟ್ಟಿರುವೆನು.

ದಯವಿಟ್ಟು “Mytextfile.txt” ಫೈಲ್ ಅನ್ನು ಡೌನ್ಲೋಡ್ ಮಾಡಿಕೊಂಡು, ನಿಮ್ಮ ಮಶಿನ್ ನಲ್ಲಿ ತೆರೆಯಿರಿ.

01:40 ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ , Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ.
01:45 ನಾವು ಕ್ವಶ್ಚನ್ ಬ್ಯಾಂಕ್ ಅನ್ನು ಕಲಿಯುವುದರೊಂದಿಗೆ ಪ್ರಾರಂಭಿಸೋಣ.
01:49 Question bank (ಕ್ವಶ್ಚನ್ ಬ್ಯಾಂಕ್) ಎಂದರೆ ಒಂದು ವಿಷಯಕ್ಕೆ (ಟಾಪಿಕ್) ಸಂಬಂಧಿಸಿ ಜೋಡಿಸಿದ ಪ್ರಶ್ನೆಗಳ ಸಮೂಹವಾಗಿದೆ.
01:55 ಕ್ವಶ್ಚನ್ ಬ್ಯಾಂಕ್ ನಲ್ಲಿರುವ ಪ್ರಶ್ನೆಗಳನ್ನು ಅನೇಕ ಕ್ವಿಝ್ ಗಳಲ್ಲಿ ಬಳಸಬಹುದು.
02:01 ಇದು ಪ್ರತಿ ಶೈಕ್ಷಣಿಕ ವರ್ಷಕ್ಕೆ ಅಥವಾ ಬೇರೆ ಬೇರೆ ಬ್ಯಾಚ್(ತಂಡ) ಗಳಿಗೆ, ವಿಭಿನ್ನವಾದ ಕ್ವಿಝ್ ಗಳನ್ನು ರಚಿಸಲು ಸಹಾಯಕವಾಗಿದೆ.
02:09 ಬ್ರೌಸರ್ ಗೆ ಹಿಂದಿರುಗಿ.
02:11 ಮೇಲೆ ಬಲಗಡೆಯಿರುವ, ಗೇರ್ ಐಕಾನ್ ಅನ್ನೂ, ನಂತರ ಕೊನೆಯಲ್ಲಿರುವ More… ಲಿಂಕ್ ಅನ್ನೂ ಕ್ಲಿಕ್ ಮಾಡಿ.
02:18 ನಾವು Course Administration ಪೇಜ್ ಗೆ ಕರೆದೊಯ್ಯಲ್ಪಡುವೆವು.
02:22 ಕೆಳಕ್ಕೆ ಸ್ಕ್ರೋಲ್ ಮಾಡಿ, Question bank ವಿಭಾಗವನ್ನು ಲೊಕೇಟ್ ಮಾಡಿ.
02:27 ಈ ವಿಭಾಗದಲ್ಲಿ, Categories ಲಿಂಕ್ ಅನ್ನು ಕ್ಲಿಕ್ ಮಾಡಿ.
02:30 Add category ವಿಭಾಗವನ್ನು ನೋಡಿ.
02:34 Parent category ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ.
02:37 ಇಲ್ಲಿ, Top ಇದು ಈ ಕೋರ್ಸ್ ನ (ಮೇಲ್ಮಟ್ಟದ ವರ್ಗ) ಟಾಪ್ ಲೆವೆಲ್ ಕೆಟಗರಿ ಯಾಗಿದೆ.
02:42 ಡಿಫಾಲ್ಟ್ ಆಗಿ ಆಯ್ಕೆಯಾಗಿರದೇ ಇದ್ದಲ್ಲಿ, Default for Calculus, ಅನ್ನು ಆಯ್ಕೆ ಮಾಡಿ.
02:49 Name ಫೀಲ್ಡ್ ನಲ್ಲಿ, Basic Calculus ಎಂದು ಟೈಪ್ ಮಾಡಿ.
02:54 ಪೇಜ್ ನ ಕೆಳಗೆ ಇರುವ, Add Category ಬಟನ್ ಅನ್ನು ಕ್ಲಿಕ್ ಮಾಡಿ.

ಇದೇ ರೀತಿಯಲ್ಲಿ, ನಾವು ಇನ್ನೂ ಕೆಟಗರಿ(ವರ್ಗ) ಗಳನ್ನು ಸೇರಿಸಬಹುದು.

03:04 ನಾನು ಇಲ್ಲಿ ಮಾಡಿದಂತೆ, ಕ್ಯಾಲ್ಕ್ಯುಲಸ್ ಕೋರ್ಸ್ ಗೆ ಕೆಟಗರಿಗಳ ಹಯರಾರ್ಕಿ(ಶ್ರೇಣಿ) ಯನ್ನು ರಚಿಸಿ.
03:11 Questions ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಪ್ರಶ್ನೆಗಳನ್ನು ಸಿದ್ಧಪಡಿಸುವ ಪೇಜ್ ಗೆ ಹೋಗಿ.
03:17 ಕೆಳಗಿರುವ Create a new question ಬಟನ್ ಅನ್ನು ಕ್ಲಿಕ್ ಮಾಡಿ.
03:22 ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
03:25 ನೀವು ಸೇರಿಸಲು ಬಯಸುವ ಪ್ರಶ್ನೆಯ ವಿಧವನ್ನು ಆಯ್ಕೆ ಮಾಡಿ.
03:29 ಪ್ರಶ್ನೆಯ ವಿಧದ ಕುರಿತು ವಿವರವಾದ ವಿವರಣೆ, ಬಲಭಾಗದಲ್ಲಿ ಕಾಣಿಸುತ್ತದೆ.
03:35 ನಾನು Multiple choice ಅನ್ನು ಆಯ್ಕೆ ಮಾಡುವೆನು.
03:39 ಪಾಪ್-ಅಪ್ ನ ಕೆಳಗಡೆಯಿರುವ Add ಬಟನ್ ಅನ್ನು ಕ್ಲಿಕ್ ಮಾಡಿ.
03:43 ಈಗ ನೀವು ಪ್ರಶ್ನೆಯನ್ನು ಸೇರಿಸಲು ಬಯಸುವ category ಯನ್ನು ಆಯ್ಕೆ ಮಾಡಿ.

Evolutes ಅನ್ನುಆಯ್ಕೆ ಮಾಡುವೆನು.

03:51 Question name ಫೀಲ್ಡ್ ನಲ್ಲಿ, MCQ with single correct answer ಎಂದು ಟೈಪ್ ಮಾಡುವೆನು.
03:57 Question text ಏರಿಯಾದಲ್ಲಿ ಈ ಪ್ರಶ್ನೆಯನ್ನು ಟೈಪ್ ಮಾಡಿ.

Mytextfile.txt ಫೈಲ್ ನಿಂದ ಕಾಪಿ ಮಾಡಿ, ಪೇಸ್ಟ್ ಮಾಡಬಹುದು.

04:07 Default Mark ಇದು 1 ಎಂದು ಸೆಟ್ ಆಗಿರುತ್ತದೆ ಮತ್ತು ನಾನು ಇದನ್ನು 1 ಎಂದೇ ಬಿಡುವೆನು.
04:12 ಮುಂದಿನ ಆಯ್ಕೆ General feedback ಆಗಿದೆ. ಇಲ್ಲಿನ ಟೆಕ್ಸ್ಟ್ಅನ್ನು ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಿದ ಮೇಲೆ , ಅವರಿಗೆ ತೋರಿಸಲಾಗುತ್ತದೆ.
04:23 ಇದನ್ನು ಪ್ರಶ್ನೆಗೆ ವಿವರವಾದ ಉತ್ತರವನ್ನು ತೋರಿಸಲು ಸಹ ಬಳಸಬಹುದು.

ನಾನು ಇಲ್ಲಿ ಮಾಡಿರುವಂತೆ ಟೆಕ್ಸ್ಟ್ ಅನ್ನು ಟೈಪ್ ಅಥವಾ ಕಾಪಿ ಪೇಸ್ಟ್ ಮಾಡಿ.

04:34 ಈಗ One or multiple answers ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ.
04:39 ಇಲ್ಲಿ ನಾವು - Multiple answers allowed

One answer only ಎಂಬ ಎರಡು ಆಯ್ಕೆಗಳನ್ನು ನೋಡಬಹುದು.

04:46 ನಾನು ಈ ಎರಡೂ ಆಯ್ಕೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂದು ತೋರಿಸುವೆನು.
04:49 ಮೊದಲಿಗೆ ನಾನು One answer only ಅನ್ನು ಆಯ್ಕೆ ಮಾಡುವೆನು
04:53 ಡಿಫಾಲ್ಟ್ ಆಗಿ, Shuffle the choices ಚೆಕ್ ಬಾಕ್ಸ್ ಚೆಕ್ ಆಗಿರುತ್ತದೆ. ಪ್ರತಿ ಬಾರಿ ಕ್ವಿಝ್ ಅನ್ನು ಪ್ರಯತ್ನಿಸಿದಾಗಲೂ, ಉತ್ತರದ ಆಯ್ಕೆಗಳು ಷಫಲ್ ಆಗಿರುವುದನ್ನು ಖಚಿತ ಪಡಿಸುತ್ತದೆ.
05:06 Answers ವಿಭಾಗವನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ.
05:10 ಇಲ್ಲಿ ಪ್ರತಿ ಆಯ್ಕೆಯು grade ಮತ್ತು feedback ಗಳೊಂದಿಗೆ ಸಂಯೋಜಿತವಾಗಿರುವುದನ್ನು ಗಮನಿಸಿ.
05:17 ಇಲ್ಲಿ ತೋರಿಸಿರುವಂತೆ Choice 1 ಎಂದುಟೈಪ್ ಮಾಡಿ.
05:20 ಈಗ ಈ ಪ್ರಶ್ನೆಗೆ , Choice 1 ಸರಿಯಾದ ಉತ್ತರವಾಗಿದೆ.
05:25 ಹಾಗಾಗಿ ನಾನು Grade ನಲ್ಲಿ 100% ಅನ್ನು ಆಯ್ಕೆ ಮಾಡುವೆನು.
05:30 Grade ಡ್ರಾಪ್ ಡೌನ್ ನಲ್ಲಿ, ಪ್ರತಿ ಆಯ್ಕೆಗೆ ನಾವು ಭಾಗಶಃ ಅಂಕವನ್ನಾಗಲೀ,ಋಣಾತ್ಮಕ ಅಂಕವನ್ನಾಗಲೀ ಕೊಡಬಹುದು.
05:38 ನೀವು ಇವುಗಳನ್ನು ಮೂಡಲ್ ನಲ್ಲಿ ಪ್ರಾವೀಣ್ಯತೆಯನ್ನು ಪಡೆದ ಮೇಲೆ ವಿವರವಾಗಿ ಕಲಿಯಬಹುದು.
05:43 ಈ ಉತ್ತರವನ್ನು ಆಯ್ಕೆ ಮಾಡಿದ ವಿದ್ಯಾರ್ಥಿಗಳಿಗೆ ಫೀಡ್ ಬ್ಯಾಕ್ ಅನ್ನು Feedback ಟೆಕ್ಸ್ಟ್ ಏರಿಯಾದಲ್ಲಿ ಬರೆಯಬಹುದು. ನಾನು “Correct” ಎಂದು ಟೈಪ್ ಮಾಡುವೆನು.
05:53 ಉಳಿದ choices ಮತ್ತು grades ಗಳಲ್ಲಿ, ನಾನು ಇಲ್ಲಿ ಮಾಡಿರುವಂತೆ ಭರ್ತಿಮಾಡಿ.
06:01 ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, Multiple Tries ಅನ್ನು ಕ್ಲಿಕ್ ಮಾಡಿ, ಅದನ್ನು ವಿಸ್ತರಿಸಿ.
06:08 ಗಮನಿಸಿ.: Penalty for each incorrect try ಫೀಲ್ಡ್ ಡಿಫಾಲ್ಟ್ ಆಗಿ 33.33% ಎಂದಿದೆ.
06:18 ಅಂದರೆ ವಿದ್ಯಾರ್ಥಿಗಳಿಗೆ ತಪ್ಪು ಉತ್ತರಕ್ಕೆ ದಂಡ ವಿಧಿಸಲಾಗುತ್ತದೆ.
06:24 ನೀವು ಇದನ್ನು ಹೀಗೇ ಇಡಬಹುದು ಅಥವಾ ಇಲ್ಲಿ ತೋರಿಸಿರುವ ಯಾವುದೇ ಶೇಕಡಾ ಆಯ್ಕೆಗೆ ಬದಲಿಸಬಹುದು.
06:31 ನಾನು 0%, ಎಂದು ಆಯ್ಕೆ ಮಾಡುವೆನು ಏಕೆಂದರೆ ನಾನು ತಪ್ಪು ಉತ್ತರಗಳಿಗೆ ದಂಡವಿಧಿಸುವುದಿಲ್ಲ.
06:39 ನಂತರ ಕೆಳಕ್ಕೆ ಸ್ಕ್ರೋಲ್ ಮಾಡಿ, ಪೇಜ್ ನ ಕೆಳಗಡೆಯಿರುವ Save changes ಬಟನ್ ಅನ್ನು ಕ್ಲಿಕ್ ಮಾಡಿ.
06:46 ಈಗ ನಮ್ಮ ಪ್ರಶ್ನೆಗಳು Question Bank ಗೆ ಸೇರಿರುವುದನ್ನು ನೋಡಬಹುದು.
06:51 ಪ್ರಶ್ನೆಯ ಟೈಟಲ್ ನ ಮುಂದಿರುವ ನಾಲ್ಕು ಐಕಾನ್ ಗಳನ್ನು ಗಮನಿಸಿ.
06:57 ಪ್ರಶ್ನೆಯನ್ನು edit, duplicate, preview ಮತ್ತು delete ಮಾಡಲು ಇರುವ ಆಯ್ಕೆಗಳಾಗಿವೆ.
07:06 ಕ್ವಿಝ್ ನಲ್ಲಿ ಪ್ರಶ್ನೆಗಳು ಹೇಗೆ ಕಾಣುತ್ತವೆ ಎಂದು ನೋಡಲು, Preview ಐಕಾನ್ ಅನ್ನು ಕ್ಲಿಕ್ ಮಾಡಿ.
07:13 ಆಯ್ಕೆ ಮಾಡಿದ ಪ್ರಶ್ನೆಗಳು ಮತ್ತು ಅವುಗಳ ಆಯ್ಕೆಗಳು ಒಂದು ಪಾಪ್-ಅಪ್ ವಿಂಡೊದಲ್ಲಿ ತೆರೆದುಕೊಳ್ಳುತ್ತದೆ.
07:19 Fill in correct responses ಬಟನ್ ಅನ್ನು ಕ್ಲಿಕ್ ಮಾಡಿ. ಇದು ಪ್ರಶ್ನೆಗಳು, ಆಯ್ಕೆಗಳು ಮತ್ತು ಸರಿ ಉತ್ತರಗಳನ್ನು ಪರಿಶೀಲಿಸಲು ಸಹಾಯಕವಾಗಿದೆ.
07:29 Submit and finish ಬಟನ್ ಅನ್ನು ಕ್ಲಿಕ್ ಮಾಡಿ.
07:32 ಇದು ವಿದ್ಯಾರ್ಥಿಯು ಪ್ರಶ್ನೆಗೆ ಉತ್ತರಿಸಾದ ಮೇಲೆ ನೋಡಬಹುದಾದ ಫೀಡ್-ಬ್ಯಾಕ್ ಅನ್ನು ತೋರಿಸುತ್ತದೆ.
07:38 ಯಾವಾಗ ಹೊಸ ಪ್ರಶ್ನೆಯನ್ನು ಸೇರಿಸುವಿರೋ ಆಗ ಅದನ್ನು ಮರು ಪರೀಕ್ಷಿಸಲು ಪ್ರಿವಿವ್ಯೂ ವನ್ನು ಮಾಡಿ.
07:44 ಪಾಪ್ ಅಪ್ ವಿಂಡೋ ವನ್ನು ಕ್ಲೋಸ್ ಮಾಡಲು, Close preview ಬಟನ್ ಅನ್ನು ಕ್ಲಿಕ್ ಮಾಡಿ.
07:49 ಈಗ ಒಂದಕ್ಕಿಂದ ಹೆಚ್ಚು ಸರಿ ಉತ್ತರಗಳನ್ನು ಹೊಂದಿರುವ, MCQ ಅನ್ನು ರಚಿಸೋಣ.
07:54 ಹಿಂದಿನ ಹಂತಗಳನ್ನು ಅನುಸರಿಸಿ ನಾನು ಒಂದು MCQ ವನ್ನು ರಚಿಸಿದ್ದೇನೆ. ದಯವಿಟ್ಟು ನೀವು ಅದೇ ರೀತಿ ಮಾಡಿ.
08:01 One or multiple answers ಡ್ರಾಪ್ ಡೌನ್ ನಲ್ಲಿ ನಾನು ಈ ಬಾರಿ, Multiple answers allowed ಅನ್ನು ಆಯ್ಕೆ ಮಾಡುವೆನು.
08:10 choice1 ಮತ್ತು 2 ಮತ್ತು ಅವುಗಳ grade ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ.

ಇಲ್ಲಿ ನಾನು ಎರಡಕ್ಕೂ 50% grade ಅನ್ನು ಆಯ್ಕೆ ಮಾಡಿರುವೆನು.

08:20 ಒಂದೇ ಸರಿಯಾದ ಉತ್ತರವನ್ನು ಕೊಡುವ ವಿದ್ಯಾರ್ಥಿಗಳು ಅರ್ಧ ಅಂಕವನ್ನು ಪಡೆದುಕೊಳ್ಳುತ್ತಾರೆ.
08:26 ಮತ್ತು ಎರಡೂ ಉತ್ತರಗಳನ್ನು ಸರಿಯಾಗಿ ಟಿಕ್ ಮಾಡುವ ವಿದ್ಯಾರ್ಥಿಗಳು ಒಂದು ಅಂಕವನ್ನು ಪಡೆದುಕೊಳ್ಳುತ್ತಾರೆ.
08:32 choice 3 ಮತ್ತು 4 ಮತ್ತು ಅವುಗಳ grade ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ.
08:38 ಮತ್ತು ನಾನು Penalty for each incorrect try ಫೀಲ್ಡ್ ಅನ್ನು 0% ಎಂದು ಆಯ್ಕೆ ಮಾಡುವೆನು.
08:44 ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು Save changes ಬಟನ್ ಅನ್ನು ಕ್ಲಿಕ್ ಮಾಡಿ.
08:49 ಮುಂದೆ,Short answer ಪ್ರಶ್ನೆಗಳನ್ನು ಸೇರಿಸೋಣ.
08:53 ಇಲ್ಲಿ ಪ್ರತಿ ಪ್ರಶ್ನೆಗು ವಿದ್ಯಾರ್ಥಿಯು ಒಂದು ಪದ ಅಥವ ನುಡಿಗಟ್ಟನ್ನು (ಫ್ರೇಸ್) ಉತ್ತರವಾಗಿ ನೀಡಬೇಕು.
09:00 Create a new question ಬಟನ್ ನ ಮೇಲೆ ಕ್ಲಿಕ್ ಮಾಡಿ, ನಂತರ Short answer ಆಯ್ಕೆಯನ್ನು ಡಬಲ್ ಕ್ಲಿಕ್ ಮಾಡಿ.
09:08 ಪ್ರಶ್ನೆಯನ್ನು ಇಲ್ಲಿ ತೋರಿಸಿರುವಂತೆ ರಚಿಸಿ.
09:11 Case sensitivity ಡ್ರಾಪ್ ಡೌನ್ ನಲ್ಲಿ No, case is unimportant ಅನ್ನು ಆಯ್ಕೆ ಮಾಡಿ.
09:18 ಈ ಪ್ರಶ್ನೆಗೆ ಸರಿಯಾದ ಉತ್ತರ “same logarithmic spiral” ಎಂದಾಗಿದೆ.
09:24 ನಾನು

“same spiral” ಅಥವಾ “same logarithmicಅಥವಾ spiral” ಎಂದು ಉತ್ತರಿಸಿದವರಿಗೂ ಪೂರ್ಣ ಅಂಕವನ್ನು ಕೊಡಲು ಬಯಸುವೆನು.

09:35 ಆದರೆ, ವಿದ್ಯಾರ್ಥಿಯು “logarithmic spiral” ಎಂದು ಉತ್ತರಿಸಿದರೆ, ನಾನು ಅರ್ಧ ಅಂಕವನ್ನು ಕೊಡುವೆನು.
09:43 answers ವಿಭಾಗಕ್ಕೆ ಸ್ಕ್ರೋಲ್ ಮಾಡಿ.
09:46 Answer 1 ಮತ್ತು 2 ಹಾಗು ಅವುಗಳ grade ಗಳನ್ನು ಕ್ರಮವಾಗಿ ಇಲ್ಲಿ ತೋರಿಸಿರುವಂತೆ ನಮೂದಿಸಿ.
09:52 Answer 1 ಟೆಕ್ಸ್ಟ್ ನಲ್ಲಿರುವ asterix ಚಿಹ್ನೆಯನ್ನು ಗಮನಿಸಿ.

Asterix ಅನ್ನು ಯಾವುದೇ ಅಕ್ಷರಗಳಿಗೆ ಹೊಂದಿಸಲು ವೈಲ್ಡ್ ಕಾರ್ಡ್ ಆಗಿ ಬಳಸಬಹುದು.

10:02 ಉದಾಹರಣೆಗೆ ಒಂದು ವಿದ್ಯಾರ್ಥಿಯು The evolute of a logarithmic spiral is the same logarithmic spiral. ಎಂದು ಬರೆದರೆ, ಆ ಉತ್ತರಕ್ಕೆ ಪೂರ್ಣ ಅಂಕವನ್ನು ಕೊಡಲಾಗುತ್ತದೆ.
10:15 Answer 3 ಮತ್ತು ಅದರ grade ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.
10:20 ಇಲ್ಲಿ ಉತ್ತರದಲ್ಲಿ asterix ಚಿಹ್ನೆ ಇಲ್ಲದಿರುವುದನ್ನು ಗಮನಿಸಿ.
10:24 ಉದಾಹರಣೆಗೆ, ಒಂದು ವಿದ್ಯಾರ್ಥಿಯು, The evolute of a logarithmic spiral is not the same logarithmic spiral. ಎಂದು ಬರೆದಿದ್ದಲ್ಲಿ, ಆ ಉತ್ತರಕ್ಕೆ ಯಾವುದೇ ಅಂಕವನ್ನು ಕೊಡಲು ಆಗುವುದಿಲ್ಲ.
10:37 Answer 4 ಮತ್ತು ಅದರ grade ಅನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.
10:43 ನಾನು ಈ ಉತ್ತರಕ್ಕೆ 50% ಅಂಕವನ್ನು ಕೊಟ್ಟಿರುವುದನ್ನು ಗಮನಿಸಿ.
10:48 ಫೀಡ್-ಬ್ಯಾಕ್ ಟೆಕ್ಸ್ಟ್ ಏರಿಯಾದಲ್ಲಿ, “You need to specify that it’s the same spiral and not any spiral” ಎಂದು ಟೈಪ್ ಮಾಡಿ.
10:57 ಈ ವಿವರಣೆಯು ವಿದ್ಯಾರ್ಥಿಗೆ ಫೀಡ್-ಬ್ಯಾಕ್ ಆಗಿ ಕಾಣಿಸುತ್ತದೆ.
11:02 ಇನ್ನೊಮ್ಮೆ, ನಾನು Penalty for each incorrect try ಫೀಲ್ಡ್ ನಲ್ಲಿ 0% ಎಂದೇ ಇಡುವೆನು.
11:09 ನಂತರ ಕೆಳಕ್ಕೆ ಸ್ಕ್ರೋಲ್ ಮಾಡಿ, Save changes ಬಟನ್ ಅನ್ನು ಕ್ಲಿಕ್ ಮಾಡಿ.
11:14 ಈಗ Numerical ಪ್ರಶ್ನೆಯನ್ನು ಸೇರಿಸೋಣ.
11:18 Create a new question ಬಟನ್ ಅನ್ನು ಕ್ಲಿಕ್ ಮಾಡಿ, ನಂತರ Numerical ಆಯ್ಕೆಯನ್ನು ಡಬಲ್ ಕ್ಲಿಕ್ ಮಾಡಿ.
11:26 ಇಲ್ಲಿ ತೋರಿಸಿರುವಂತೆ ಪ್ರಶ್ನೆಯನ್ನು ರಚಿಸಿ.
11:29 ಈ ಪ್ರಶ್ನೆಗೆ ಸರಿಯಾದ ಉತ್ತರೆ, 5mm ಎಂದಾಗಿದೆ.

ಆದರೆ ವಿದ್ಯಾರ್ಥಿಯು 4.5mm ಮತ್ತು 5.5mm ಗಳ ನಡುವಿನ ಉತ್ತರವನ್ನು ಕೊಟ್ಟರೆ ಸಮ್ಮತಿಸಬಹುದು.

11:41 ಇಲ್ಲಿ ಎರರ್ ಮಾರ್ಜಿನ್ 0.5 ಆಗಿದೆ.
11:45 Answers ವಿಭಾಗಕ್ಕೆ ಸ್ಕ್ರೋಲ್ ಮಾಡಿ.
11:48 Answers, Error ಮತ್ತು grade ಗಳನ್ನು ಇಲ್ಲಿ ತೋರಿಸಿರುವಂತೆ ನಮೂದಿಸಿ.
11:53 Unit handling ವಿಭಾಗವನ್ನು ವಿಸ್ತರಿಸಿ.

Unit handling ಡ್ರಾಪ್ ಡೌನ್ ನಲ್ಲಿ ಮೂರು ಆಯ್ಕೆಗಳಿವೆ.

12:00 ನಾನು- The unit must be given, and will be graded ಆಯ್ಕೆಯನ್ನು ಆರಿಸಿಕೊಳ್ಳುವೆನು.
12:07 Unit penalty field, ಡಿಫಾಲ್ಟ್ ಆಗಿ 0.1 ಅನ್ನು ತೋರಿಸುತ್ತಿದೆ. ನಾನು ಅದನ್ನು 0.5 ಎಂದು ಮಾಡುವೆನು.
12:16 ಹಾಗಾಗಿ ವಿದ್ಯಾರ್ಥಿಯು ಯುನಿಟ್ ಅನ್ನು ಬರೆಯದೇ ಉತ್ತರವನ್ನು ಸರಿಯಾಗಿ ಬರೆದಿದ್ದರೆ ಅರ್ಧ ಅಂಕವನ್ನು ಪಡೆಯುವನು.
12:23 Units are input using ಡ್ರಾಪ್-ಡೌನ್ ನಲ್ಲಿ ನಾನು the text input element ಆಯ್ಕೆಯನ್ನು ಆರಿಸುವೆನು.
12:31 ಅಂದರೆ ವಿದ್ಯಾರ್ಥಿಯು ಉತ್ತರದೊಂದಿಗೆ ಯುನಿಟ್ ಅನ್ನು ಟೈಪ್ ಮಾಡಲೇ ಬೇಕು.
12:37 Units ವಿಭಾಗವನ್ನು ವಿಸ್ತರಿಸಿ.
12:40 ಯುನಿಟ್ ಅನ್ನು mm ಎಂದೂ ಮತ್ತು multiplier ಅನ್ನು 1 ಎಂದೂ ನಮೂದಿಸಿ. ಅಂದರೆ, ಉತ್ತರದ ಆಯ್ಕೆಗಳು mm ನಲ್ಲಿರಬೇಕು ಎಂದರ್ಥ. .
12:50 ಇನ್ನೊಮ್ಮೆ ನಾನು ,Penalty for each incorrect try ಫೀಲ್ಡ್ ಅನ್ನು 0% ಎಂದೇ ಇಡುವೆನು.
12:57 ಮತ್ತೆ ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು Save changes ಬಟನ್ ಅನ್ನು ಕ್ಲಿಕ್ ಮಾಡಿ.
13:02 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.

ಸಂಕ್ಷಿಪ್ತವಾಗಿ,

13:08 ಈ ಟ್ಯುಟೋರಿಯಲ್ ನಲ್ಲಿ ನಾವು: ಮೂಡಲ್ ನಲ್ಲಿ Question bank ,
13:14 ಪ್ರಶ್ನೆಗಳ ವರ್ಗ(ಕೆಟಗರಿ) ಮತ್ತು ಕ್ವಶ್ಚನ್ ಬ್ಯಾಂಕ್ ಗೆ ಹೇಗೆ ಪ್ರಶ್ನೆಗಳನ್ನು ಸೇರಿಸುವುದು ಹೇಗೆ ಎಂದು ಕಲಿತಿದ್ದೇವೆ.
13:22 ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ. ಕ್ವಶ್ಚನ್ ಬ್ಯಾಂಕ್ ಗೆ ಇನ್ನಷ್ಟು ಪ್ರಶ್ನೆಗಳನ್ನು ಸೇರಿಸಿ.
13:28 ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.
13:34 ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಮಾಡಿದ ಮೇಲೆ ಪುನರಾರಂಭಿಸಿ.
13:38 ಈಗ ನಾವು ಈ ಕ್ವಶ್ಚನ್ ಬ್ಯಾಂಕ್ ನಲ್ಲಿ 10 ಪ್ರಶ್ನೆಗಳನ್ನು ಹೊಂದಿದ್ದೇವೆ.

ಅವುಗಳಲ್ಲಿ 6 ಪ್ರಶ್ನೆಗಳು Evolutes ನಿಂದ ಮತ್ತು 4 ಪ್ರಶ್ನೆಗಳು Involutes ಸಬ್-ಕೆಟಗರಿಯಿಂದ ಬಂದಿವೆ.

13:51 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
14:00 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
14:10 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
14:14 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
14:27 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14