Moodle-Learning-Management-System/C2/Installing-Moodle-on-Local-Server/Kannada

From Script | Spoken-Tutorial
Revision as of 16:40, 31 May 2019 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 Installing Moodle on Local Server ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, Moodle ಅನ್ನು ಡೌನ್ಲೋಡ್ ಮತ್ತು ಇನ್ಸ್ಟಾಲ್ ಮಾಡಲು ಕಲಿಯುವೆವು.
00:15 Moodle ಇನ್ಸ್ಟಾಲ್ ಮಾಡಲು, ನೀವು ಇವುಗಳನ್ನು ಬೆಂಬಲಿಸುವ ಸಿಸ್ಟಂ ಹೊಂದಿರಬೇಕು:

Apache 2.x (ಅಥವಾ ಹೆಚ್ಚಿನ ಆವೃತ್ತಿ),

00:23 MariaDB 5.5.30 (ಅಥವಾ ಯಾವುದೇ ಹೆಚ್ಚಿನ ಆವೃತ್ತಿ) ಮತ್ತು PHP 5.4.4 + ( ಅಥವಾ ಯಾವುದೇ ಹೆಚ್ಚಿನ ಆವೃತ್ತಿ).
00:36 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:44 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,
00:53 Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತೇನೆ.
00:59 ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು.
01:03 ಆದರೆ, Internet Explorer ಅನ್ನು ಮಾತ್ರ ಬಳಸಬಾರದು, ಇದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
01:11 ಮೊದಲು, ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
01:16 ಈ ಸರಣಿಯಲ್ಲಿನ ಹಿಂದಿನ ಟ್ಯುಟೋರಿಯಲ್ ಗಳನ್ನು ಸಹ ನೋಡಿ.

ಪೂರ್ವಾಪೇಕ್ಷಿತಗಳು ಲಭ್ಯವಿದೆ, ಡೇಟಾಬೇಸ್ ಅನ್ನು ಸರಿಯಾಗಿ ಸೆಟ್-ಅಪ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.

01:27 ನಮ್ಮ XAMPP ರನ್ ಆಗುತ್ತಿರಬೇಕು ಮತ್ತು ನಾವು username moodle-st ಯೊಂದಿಗೆ ಡೇಟಾಬೇಸ್ ಅನ್ನು ಸೆಟ್-ಅಪ್ ಮಾಡಿರಬೇಕು.
01:37 ಮೊದಲು, ವೆಬ್-ಬ್ರೌಸರ್ ಗೆ ಹೋಗಿ XAMPP ಅನ್ನು ಪ್ರಾರಂಭಿಸುತ್ತೇನೆ.
01:42 ಅಡ್ರೆಸ್-ಬಾರ್ ನಲ್ಲಿ, ಹೀಗೆ ಟೈಪ್ ಮಾಡಿ: http colon double slash 127 dot 0 dot 0 dot 1 ಮತ್ತು Enter ಅನ್ನು ಒತ್ತಿ.
01:56 ಸ್ಕ್ರೀನ್ ನ ಮೇಲ್ಗಡೆ ಬಲಭಾಗದ ಮೆನ್ಯೂನಲ್ಲಿ, PHPinfo ಮೇಲೆ ಕ್ಲಿಕ್ ಮಾಡಿ.
02:02 ಈಗ Ctrl + F ಕೀಗಳನ್ನು ಒತ್ತಿ ಮತ್ತು DOCUMENT underscore ROOT ಅನ್ನು ಹುಡುಕಿ.
02:10 ಇದು Apache Environment ಟೇಬಲ್ ನಲ್ಲಿ ಇದೆ.
02:14 DOCUMENT underscore ROOT ನ ವ್ಯಾಲ್ಯೂ, slash opt slash lampp slash htdocs ಅಥವಾ slash var slash www ಆಗಿರುತ್ತದೆ.
02:30 ನನ್ನ ಮಷಿನ್ ನಲ್ಲಿ, ಅದು slash opt slash lampp slash htdocs ಆಗಿದೆ.
02:37 ಈ ಪಾಥ್ ಅನ್ನು ಗುರುತಿಸಿಕೊಳ್ಳಿಸಿ. ನಾವು 'ಮೂಡಲ್' ಅನ್ನು ಇಲ್ಲಿ ಇನ್ಸ್ಟಾಲ್ ಮಾಡಲಿದ್ದೇವೆ.
02:43 ಈಗ 'ಮೂಡಲ್' ಅನ್ನು ಡೌನ್ಲೋಡ್ ಮಾಡಲು ಪ್ರಾರಂಭಿಸೋಣ.

'ಮೂಡಲ್' ನ ಅಧಿಕೃತ ವೆಬ್ಸೈಟ್ ಆಗಿರುವ moodle.org ಗೆ ಹೋಗಿ.

02:53 ಮೇಲಿನ ಮೆನ್ಯೂನಲ್ಲಿ, Downloads ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ, ಇತ್ತೀಚಿನ ಬಿಡುಗಡೆಯ MOODLE 3.3+ ಬಟನ್ ಮೇಲೆ ಕ್ಲಿಕ್ ಮಾಡಿ.

03:04 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, 'ಮೂಡಲ್' ನ ಇತ್ತೀಚಿನ ಸ್ಥಿರ ಆವೃತ್ತಿಯು 3.3 ಆಗಿತ್ತು.

ನೀವು ಪ್ರಯತ್ನಿಸಿದಾಗ ಅದು ಬೇರೆ ಆಗಿರಬಹುದು.

03:15 Download zip ಬಟನ್ ಮೇಲೆ ಕ್ಲಿಕ್ ಮಾಡಿ. ಇದು ನಮ್ಮ ಮಷಿನ್ ನಲ್ಲಿ, 'ಮೂಡಲ್' ಅನ್ನು ಡೌನ್ಲೋಡ್ ಮಾಡಲು ಪ್ರಾರಂಭಿಸುತ್ತದೆ.
03:22 ನಾನು ಈಗಾಗಲೇ ಈ ಫೈಲ್ ಅನ್ನು ಡೌನ್ಲೋಡ್ ಮಾಡಿದ್ದೇನೆ, ಇದು ನನ್ನ Downloads ಫೋಲ್ಡರ್ ನಲ್ಲಿದೆ. ಹೀಗಾಗಿ ನಾನು ಈ ಹಂತವನ್ನು ಬಿಟ್ಟುಬಿಡುತ್ತೇನೆ.
03:30 Ctrl + Alt + T ಕೀಗಳನ್ನು ಒಟ್ಟಿಗೆ ಒತ್ತುವ ಮೂಲಕ ಟರ್ಮಿನಲ್ ಅನ್ನು ತೆರೆಯಿರಿ.
03:36 ಟರ್ಮಿನಲ್ ನಲ್ಲಿ, ಡಿರೆಕ್ಟರೀ ಯನ್ನು Downloads ಗೆ ಬದಲಾಯಿಸುತ್ತೇನೆ.
03:40 ಇದನ್ನು ಮಾಡಲು, ಕಮಾಂಡ್ ಅನ್ನು ಹೀಗೆ ಟೈಪ್ ಮಾಡಿ: cd space Downloads ಮತ್ತು Enter ಅನ್ನು ಒತ್ತಿ.
03:48 ನಿಮ್ಮ ಸಿಸ್ಟಂ ನಲ್ಲಿ, ನೀವು ಮೂಡಲ್ ಅನ್ನು ಡೌನ್ಲೋಡ್ ಮಾಡಿದ 'ಪಾಥ್' ಅನ್ನು ಟೈಪ್ ಮಾಡಬೇಕು.
03:53 ನೀವು ಆ ಡಿರೆಕ್ಟರೀಯಲ್ಲಿ ಬಂದಾಗ, ಅಲ್ಲಿರುವ ಫೈಲ್ ಗಳನ್ನು ಲಿಸ್ಟ್ ಮಾಡಲು ls ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
04:01 ನನ್ನ Moodle ಇನ್ಸ್ಟಾಲ್ಲೇಶನ್ ಫೈಲ್ ಇಲ್ಲಿದೆ. ಇದರ ಹೆಸರು moodle hyphen latest hyphen 33 dot zip ಎಂದಿದೆ.
04:11 ಡೌನ್ಲೋಡ್ ಮಾಡುವಾಗ, ನೀವು ಅದಕ್ಕೆ ಬೇರೆ ಹೆಸರನ್ನು ಕೊಟ್ಟಿದ್ದರೆ (rename), ಆ ಫೈಲ್ ಅನ್ನು ನಿಮ್ಮ ಫೋಲ್ಡರ್ ನಲ್ಲಿ ಹುಡುಕಿ.
04:19 ಆಮೇಲೆ, ಈ 'ಝಿಪ್' ಫೈಲ್ ನಲ್ಲಿರುವುದನ್ನು moodle ಫೋಲ್ಡರ್ ನಲ್ಲಿ extract ಮಾಡಬೇಕು (ಹೊರಗೆತೆಗೆ).
04:26 'ಕಮಾಂಡ್ ಪ್ರಾಂಪ್ಟ್' ನಲ್ಲಿ, ಹೀಗೆ ಟೈಪ್ ಮಾಡಿ: sudo space unzip space moodle hyphen latest hyphen 33 dot zip space hyphen d space slash opt slash lampp slash htdocs slash. Enter ಅನ್ನು ಒತ್ತಿ.
04:51 Ctrl + L ಒತ್ತಿ ಟರ್ಮಿನಲ್ ಅನ್ನು ತೆರವುಗೊಳಿಸೋಣ.
04:56 ಈಗ, ಹೀಗೆ ಟೈಪ್ ಮಾಡಿ: cd space slash opt slash lampp slash htdocs ಮತ್ತು Enter ಅನ್ನು ಒತ್ತಿ.
05:06 ಈ ಡಿರೆಕ್ಟರೀಯಲ್ಲಿರುವ ಫೈಲ್ ಗಳನ್ನು ಲಿಸ್ಟ್ ಮಾಡಲು, ls ಎಂದು ಟೈಪ್ ಮಾಡಿ ಮತ್ತು Enter ಅನ್ನು ಒತ್ತಿ.
05:12 moodle ಎಂಬ ಹೊಸ ಫೋಲ್ಡರ್ ಅನ್ನು ಕ್ರಿಯೇಟ್ ಮಾಡಿರುವುದನ್ನು ನೀವು ನೋಡಬಹುದು.
05:18 moodle ಫೋಲ್ಡರ್ ನ owner ನಿಗೆ ಮತ್ತು group members ಗೆ read, write ಹಾಗೂ execute ಪರ್ಮಿಷನ್ ಗಳನ್ನು ಕೊಡೋಣ.
05:27 ಇದಕ್ಕಾಗಿ, ಹೀಗೆ ಟೈಪ್ ಮಾಡಿ: sudo space chmod space 777 space moodle slash ಮತ್ತು Enter ಅನ್ನು ಒತ್ತಿ.
05:39 ಕೇಳಿದರೆ, administrative ಪಾಸ್ವರ್ಡ್ ಅನ್ನು ಕೊಡಿ ಮತ್ತು Enter ಅನ್ನು ಒತ್ತಿ.
05:45 ಬ್ರೌಸರ್ ಗೆ ಹಿಂದಿರುಗಿ, ಹೀಗೆ ಟೈಪ್ ಮಾಡಿ: http colon double slash 127.0.0.1 slash moodle ಅಥವಾ http colon double slash localhost slash moodle
06:06 ಇಲ್ಲಿ ನನ್ನ localhost IP ಯನ್ನು ಟೈಪ್ ಮಾಡಿದ್ದೇನೆ.
06:10 IP, moodle ಅನ್ನು ಇನ್ಸ್ಟಾಲ್ ಮಾಡಿರುವ ಮಷಿನ್ ನ IP ಆಗಿರಬೇಕು.

ಗಮನಿಸಿ- ಹಿಂದೆ, moodle ಫೋಲ್ಡರ್ ನಲ್ಲಿಯೇ ನಾವು extract ಮಾಡಿದ್ದೆವು.

06:23 Enter ಅನ್ನು ಒತ್ತಿ. Moodle ಇನ್ಸ್ಟಾಲ್ಲೇಶನ್ ಪೇಜ್ ಅನ್ನು ನೀವು ನೋಡುವಿರಿ.
06:29 ಡೀಫಾಲ್ಟ್ ಆಗಿ, ನಾವು ಮೊದಲನೇ ಹಂತವಾದ Configuration ನಲ್ಲಿ ಇದ್ದೇವೆ.

ಗಮನಿಸಿ: Moodle ಅನ್ನು ಬಹು ಭಾಷೆಗಳಲ್ಲಿ ಇನ್ಸ್ಟಾಲ್ ಮಾಡಬಹುದು.

06:40 ಆದರೆ ನಾವು ಇಂಗ್ಲಿಷ್ ಭಾಷೆಗೆ ಮಾತ್ರ ಸೀಮಿತಗೊಳಿಸಲಿದ್ದೇವೆ.

ಹೀಗಾಗಿ, ಇಲ್ಲಿ English ಅನ್ನು ಆಯ್ಕೆಮಾಡಿ. Language ಡ್ರಾಪ್-ಡೌನ್ ಕೆಳಗೆ, Next ಬಟನ್ ಮೇಲೆ ಕ್ಲಿಕ್ ಮಾಡಿ.

06:52 ನಂತರ Paths ಎಂಬ ಪೇಜ್ ಇದೆ.

ಇಲ್ಲಿ Web address, Moodle directory ಹಾಗೂ Data directory ಗಳನ್ನು ವಿವರಿಸಲಾಗಿದೆ.

07:02 Web address- Moodle ಅನ್ನು ಇನ್ಸ್ಟಾಲ್ ಮಾಡಿದ ಮೇಲೆ ಅದನ್ನು ಆಕ್ಸೆಸ್ ಮಾಡಲು ಇರುವ URL ಆಗಿದೆ.
07:08 ಇದು, ನಾವು ಮೇಲೆ ನಮೂದಿಸಿದ URL ಆಗಿದ್ದು, ಅದನ್ನೇ ಇಲ್ಲಿ ತೋರಿಸಲಾಗಿದೆ:
07:14 Moodle directory ಫೋಲ್ಡರ್ ನಲ್ಲಿ, ಎಲ್ಲಾ Moodle ಕೋಡ್ ಲಭ್ಯವಿದೆ.
07:20 ಗಮನಿಸಿ - Web address ಮತ್ತು Moodle directory ಇವೆರಡೂ ಫೀಲ್ಡ್ ಗಳನ್ನು ಎಡಿಟ್ ಮಾಡಲು ಅಥವಾ ಬದಲಾಯಿಸಲು ಸಾಧ್ಯವಿಲ್ಲ.
07:31 ಆಮೇಲೆ Data directory ಇದೆ.

ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಂದ ಅಪ್ಲೋಡ್ ಮಾಡಲಾದ ಫೈಲ್ ಗಳಲ್ಲಿ ಇರುವ ಎಲ್ಲವನ್ನೂ ಈ ಫೋಲ್ಡರ್ ನಲ್ಲಿ ಸ್ಟೋರ್ ಮಾಡಲಾಗುತ್ತದೆ.

07:42 ಈ ಫೋಲ್ಡರ್, read ಹಾಗೂ write ಪರ್ಮಿಷನ್ ಗಳನ್ನು ಹೊಂದಿರಬೇಕು. ಆದ್ದರಿಂದ ಫೈಲ್ ಗಳನ್ನು ಇಲ್ಲಿ ಸ್ಟೋರ್ ಮಾಡಬಹುದು.
07:50 ಆದಾಗ್ಯೂ, ಸೆಕ್ಯೂರಿಟಿ ಕಾರಣಗಳಿಗಾಗಿ, ಇದು ವೆಬ್ ನಲ್ಲಿ ನೇರವಾಗಿ ಆಕ್ಸೆಸ್ ಆಗಬಾರದು.
07:57 ಆದ್ದರಿಂದ, ಅದನ್ನು ಇನ್ಸ್ಟಾಲ್ಲೇಶನ್ ಫೋಲ್ಡರ್ ನ ಹೊರಗೆ ಇಡಬೇಕಾಗುತ್ತದೆ.
08:03 lampp ಫೊಲ್ಡರ್ ನ ಒಳಗೆ moodledata, ಡೀಫಾಲ್ಟ್ Data directory ಆಗಿದೆ. ಇದನ್ನು installer ಕ್ರಿಯೇಟ್ ಮಾಡಲು ಪ್ರಯತ್ನಿಸುತ್ತದೆ.
08:11 ಆದಾಗ್ಯೂ, ಇಲ್ಲಿ ಫೋಲ್ಡರ್ ಅನ್ನು ರಚಿಸಲು ಅನುಮತಿ ಇಲ್ಲ. ಆದ್ದರಿಂದ, ಈ ಫೋಲ್ಡರ್ ಅನ್ನು ನಾವೇ ರಚಿಸಿ, ಅಗತ್ಯವಿರುವ ಪರ್ಮಿಷನ್ ಗಳನ್ನು ಕೊಡಬೇಕು.
08:23 ಟರ್ಮಿನಲ್ ವಿಂಡೋಗೆ ಹೋಗಿ.

ಪ್ರಾಂಪ್ಟ್ ನಲ್ಲಿ, ಹೀಗೆ ಟೈಪ್ ಮಾಡಿ: sudo space mkdir space slash opt slash lampp slash moodledata ಮತ್ತು Enter ಅನ್ನು ಒತ್ತಿ.

08:41 ಈಗ, ಹೀಗೆ ಟೈಪ್ ಮಾಡಿ: sudo space chmod space 777 space slash opt slash lampp slash moodledata ಮತ್ತು Enter ಅನ್ನು ಒತ್ತಿ.
08:57 ಬ್ರೌಸರ್ ಗೆ ಹಿಂದಿರುಗಿ ಮತ್ತು Next ಬಟನ್ ಮೇಲೆ ಕ್ಲಿಕ್ ಮಾಡಿ.
09:02 ಆನಂತರ, database configuration ಪೇಜ್ ಬರುತ್ತದೆ.

ಡ್ರಾಪ್-ಡೌನ್ ನಿಂದ MariaDBಅನ್ನು ಆಯ್ಕೆಮಾಡಿ ಮತ್ತು Next ಬಟನ್ ಮೇಲೆ ಕ್ಲಿಕ್ ಮಾಡಿ.

09:13 Database Host ಹೆಸರನ್ನು localhost ಎಂದು ಕೊಡುತ್ತೇನೆ.
09:18 ಈಗ, ನಾವು Database name, username ಹಾಗೂ password ಗಳನ್ನು ನಮೂದಿಸಬೇಕು.

ಇವುಗಳನ್ನು ಹಿಂದೆ phpMyAdmin ನಲ್ಲಿ ಕ್ರಿಯೇಟ್ ಮಾಡಿದ್ದೆವು.

09:30 ನಾನು database name ಅನ್ನು moodle-st ಎಂದು (ಮೂಡಲ್ ಹೈಫನ್ ಎಸ್ ಟಿ),
09:36 database user-name ಅನ್ನು moodle-st ಎಂದು,
09:41 ಮತ್ತು ನನ್ನ database password ಅನ್ನು moodle-st ಎಂದು ನಮೂದಿಸುವೆನು.
09:46 Table Prefix ಮತ್ತು ಇತರ ಫೀಲ್ಡ್ ಗಳನ್ನು ಇದ್ದ ಹಾಗೇ ಇಡಿ ಮತ್ತು Next ಮೇಲೆ ಕ್ಲಿಕ್ ಮಾಡಿ.
09:54 ನಾವು terms and conditions ಪೇಜ್ ಅನ್ನು ನೋಡುತ್ತೇವೆ.
09:59 ಇಲ್ಲಿ ನೀವು ಲೈಸೆನ್ಸ್ ಅಗ್ರೀಮೆಂಟ್ ಅನ್ನು (ಪರವಾನಗಿ ಒಪ್ಪಂದ) ಓದಿ, ಅದನ್ನು ಒಪ್ಪಿಕೊಳ್ಳಬೇಕು.

ಟೆಕ್ಸ್ಟ್ ಅನ್ನು ಓದಿ, ನಂತರ Continue ಮೇಲೆ ಕ್ಲಿಕ್ ಮಾಡಿ.

10:10 ಆಮೇಲೆ Server Checks ಪೇಜ್ ಅನ್ನು ನೋಡುತ್ತೇವೆ.

Your server environment meets all minimum requirements ಎಂಬ ಮೆಸೇಜ್ ಅನ್ನು ನೋಡಲು ಕೆಳಗೆ ಸ್ಕ್ರೋಲ್ ಮಾಡಿ.

10:23 ಇಲ್ಲಿ ತೋರಿಸಿರುವಂತೆ ನೀವು ಬೇರೆ ಎರರ್ ಗಳನ್ನು ಪಡೆಯಬಹುದು:

ಉತ್ತರಗಳಿಗೆ, ಈ ಟ್ಯುಟೋರಿಯಲ್ ನ Additional reading material ಲಿಂಕ್ ಅನ್ನು ನೋಡಿ.

10:33 Continue ಮೇಲೆ ಕ್ಲಿಕ್ ಮಾಡಿ.
10:36 ನಿಮ್ಮ ಇಂಟರ್ನೆಟ್ ವೇಗವನ್ನು ಅವಲಂಬಿಸಿ, ಇದು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

ನೀವು ಪೇಜ್ ಅನ್ನು ರಿಫ್ರೆಶ್ ಮಾಡಿದರೆ, ನಿಮಗೆ Site is being upgraded, please retry later ಎಂಬ ಎರರ್ ಮೆಸೇಜ್ ಸಿಗಬಹುದು.

10:50 ಹಾಗಿದ್ದಲ್ಲಿ, ದಯವಿಟ್ಟು ಸ್ವಲ್ಪ ಸಮಯದ ನಂತರ ರಿಫ್ರೆಶ್ ಮಾಡಿ.
10:54 ಇನ್ಸ್ಟಾಲ್ಲೇಶನ್ ಯಶಸ್ವಿಯಾದ ಮೆಸೇಜ್ ನಿಮಗೆ ಸಿಕ್ಕಾಗ, Continue ಅನ್ನು ಕ್ಲಿಕ್ ಮಾಡಿ.
11:00 ಮುಂದಿನ ಪೇಜ್, administrator configuration ಗಾಗಿ ಇದೆ.
11:05 Moodle Administrative ಪೇಜ್ ಗಾಗಿ, ನಿಮಗೆ ಬೇಕಾದ username ಅನ್ನು ನಮೂದಿಸಿ.

ನಾನು username ಅನ್ನು admin ಎಂದು ಕೊಡುತ್ತೇನೆ.

11:15 ಈಗ Moodle Administrator ಗಾಗಿ ಒಂದು ಪಾಸ್ವರ್ಡ್ ಅನ್ನು ಕೊಡಿ.

ಇಲ್ಲಿ ತೋರಿಸಿರುವಂತೆ, ಪಾಸ್ವರ್ಡ್ ಈ ನಿಯಮಗಳನ್ನು ಅನುಸರಿಸಬೇಕು.

11:26 ಪಾಸ್ವರ್ಡ್ ಅನ್ನು ನಮೂದಿಸಲು, Click to enter text ಲಿಂಕ್ ಮೇಲೆ ಕ್ಲಿಕ್ ಮಾಡಿ.
11:32 ನಾನು Spokentutorial1@ ಅನ್ನು, ನನ್ನ admin password ಎಂದು ನಮೂದಿಸುತ್ತೇನೆ. ಪಾಸ್ವರ್ಡ್ ಅನ್ನು ತೋರಿಸಲು Unmask ಐಕಾನ್ ಮೇಲೆ ಕ್ಲಿಕ್ ಮಾಡಿ.
11:43 ನಂತರದ ಬಳಕೆಗಾಗಿ, ನಿಮ್ಮ 'ಯೂಸರ್ ನೇಮ್' ಹಾಗೂ ಪಾಸ್ವರ್ಡ್ ಗಳನ್ನು ನೆನಪಿಟ್ಟುಕೊಳ್ಳಿ.
11:49 Email address ಒಂದು ಕಡ್ಡಾಯವಾದ ಫೀಲ್ಡ್ ಆಗಿದೆ.

ಇಲ್ಲಿ ನಾನು priyankaspokentutorial@gmail.com ಎಂದು ನಮೂದಿಸುತ್ತೇನೆ.

11:59 Select a country ಡ್ರಾಪ್-ಡೌನ್ ನಲ್ಲಿ, India ಅನ್ನು ಆಯ್ಕೆಮಾಡಿ.

timezone ಅನ್ನು Asia/Kolkata ಎಂದು ಆಯ್ಕೆಮಾಡಿ.

12:08 ನಾವು ಉಳಿದ ಫೀಲ್ಡ್ ಗಳನ್ನು ಅವುಗಳ ಡೀಫಾಲ್ಟ್ ವ್ಯಾಲ್ಯೂಗಳೊಂದಿಗೆ ಇಡುತ್ತೇವೆ.
12:13 ಕೆಳಗೆ ಸ್ಕ್ರೋಲ್ ಮಾಡಿ ಮತ್ತು Update Profile ಬಟನ್ ಮೇಲೆ ಕ್ಲಿಕ್ ಮಾಡಿ.
12:18 'ಮೂಡಲ್', ಸಂಪನ್ಮೂಲವನ್ನು ಬಳಸುವ ಸಾಫ್ಟ್ವೇರ್ ಆಗಿದೆ. ಪ್ರತಿ ಹಂತವೂ ಪೂರ್ಣಗೊಳ್ಳಲು ಸಮಯ ತೆಗೆದುಕೊಳ್ಳಬಹುದು.
12:27 ಮುಂದಿನ ಪೇಜ್ ಲೋಡ್ ಆಗಲು ನಿರೀಕ್ಷಿಸಿ, ಪೇಜ್ ಅನ್ನು ಮುಚ್ಚಬೇಡಿ ಅಥವಾ ರಿಫ್ರೆಶ್ ಮಾಡಬೇಡಿ.
12:34 ಮುಂದಿನ ಸ್ಕ್ರೀನ್ Front page settings ಗಾಗಿ ಇದೆ.

ಜನರು ನಮ್ಮ ‘ಮೂಡಲ್ ಸೈಟ್’ ಅನ್ನು ಭೇಟಿ ಮಾಡಿದಾಗ, ಈ ಪೇಜ್ ಅನ್ನು ನೋಡುತ್ತಾರೆ.

12:45 Full Site Name ನಲ್ಲಿ Digital India LMS ಎಂದು ನಮೂದಿಸಿ.
12:50 Short name for site ನಲ್ಲಿ, ಮತ್ತೊಮ್ಮೆDigital India LMS ನಮೂದಿಸಿ.

ನ್ಯಾವಿಗೇಷನ್ ಬಾರ್ ನಲ್ಲಿ, ಇದು 'ಮೂಡಲ್ ಸೈಟ್'ನ ಹೆಸರು ಆಗಿ ಕಾಣಿಸುತ್ತದೆ.

13:03 Front Page Summary ಯನ್ನು ನಾವು ಸಧ್ಯಕ್ಕೆ ಖಾಲಿ ಬಿಡೋಣ.

timezone ಅನ್ನು Asia/Kolkata ಎಂದು ಆಯ್ಕೆಮಾಡಿ.

13:11 ಮುಂದಿನ ಡ್ರಾಪ್-ಡೌನ್ Self Registration ಆಗಿದೆ.

ಇದನ್ನು ಸಕ್ರಿಯಗೊಳಿಸಿದರೆ, ಹೊಸ ಯೂಸರ್ ತಮ್ಮನ್ನು ತಾವೇ ನೋಂದಾಯಿಸಬಹುದು.

13:23 ಡ್ರಾಪ್-ಡೌನ್ ನಿಂದ, Disable ಅನ್ನು ಆಯ್ಕೆಮಾಡಿ.

ನಂತರ no-reply address ಟೆಕ್ಸ್ಟ್-ಬಾಕ್ಸ್ ಇದೆ.

13:31 ಈ ಫೀಲ್ಡ್ ನಲ್ಲಿ ಡೀಫಾಲ್ಟ್ ವ್ಯಾಲ್ಯೂ noreply@localhost ಆಗಿದೆ.

ಇದು ಸರಿಯಾದ ಇಮೇಲ್- ಐ ಡಿ ಆಗಿಲ್ಲ. ಆದ್ದರಿಂದ ಇದನ್ನು noreply@localhost.com ಗೆ ಬದಲಾಯಿಸಿ.

13:46 'ಮೂಡಲ್' ಗೆ ತೋರಿಸಲು ಯಾವುದೇ ಇಮೇಲ್ ID ಇಲ್ಲದಿರುವಾಗ, ಈ ಇಮೇಲ್ ID ಅನ್ನು From ವಿಳಾಸದಿಂದ ತೋರಿಸಲಾಗುತ್ತದೆ.
13:55 ಉದಾಹರಣೆಗೆ, ನನ್ನ ವಿಳಾಸವನ್ನು private ಎಂದು ಇಡಲು ನಾನು ಸೂಚಿಸಿದರೆ, ನನ್ನ ಪರವಾಗಿ ಕಳುಹಿಸಿದ ಎಲ್ಲಾ ಮೇಲ್ ಗಳು ಈ ಇಮೇಲ್ ID ಯನ್ನು ಹೊಂದಿರುತ್ತವೆ.

ಕೊನೆಯದಾಗಿ, Save Changes ಬಟನ್ ಮೇಲೆ ಕ್ಲಿಕ್ ಮಾಡಿ.

14:10 ನಾವು ಈಗ Moodle ಅನ್ನು ಬಳಸಲು ಸಿದ್ಧವಾಗಿದ್ದೇವೆ.

ನೀವು ಇಲ್ಲಿ ಹೊಸ ಸೈಟ್ ನ ಮುಂದಿನ ಪೇಜ್ ಅನ್ನು ನೋಡಬಹುದು.

14:17 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬರುತ್ತೇವೆ. ಸಂಕ್ಷಿಪ್ತವಾಗಿ,
14:23 ಈ ಟ್ಯುಟೋರಿಯಲ್ ನಲ್ಲಿ ನಾವು:

Moodle ಅನ್ನು, moodle.org ಯಿಂದ ಡೌನ್ಲೋಡ್ ಮಾಡಲು ಮತ್ತು ಲೋಕಲ್-ಸರ್ವರ್ ಮೇಲೆ ಅದನ್ನು ಇನ್ಸ್ಟಾಲ್ ಮಾಡಲು ಕಲಿತಿದ್ದೇವೆ.

14:33 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ.

ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.

14:41 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.

14:51 ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ: http://forums.spoken-tutorial.org

15:00 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆಯ್ಕೆ ಮಾಡಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಉತ್ತರಿಸುತ್ತಾರೆ.

15:10 ಸ್ಪೋಕನ್ ಟ್ಯುಟೋರಿಯಲ್ ಫೋರಮ್, ಈ ಟ್ಯುಟೋರಿಯಲ್ ನಲ್ಲಿ ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇದೆ.
15:15 ದಯವಿಟ್ಟು ಇದಕ್ಕೆ ಸಂಬಂಧಿಸದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
15:21 ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಡಿಮೆ ಗೊಂದಲವಿದ್ದರೆ, ನಾವು ಈ ಚರ್ಚೆಗಳನ್ನು ಕಲಿಕೆಯ ವಸ್ತುವಿನಂತೆ ಬಳಸಬಹುದು.
15:31 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
15:45 ಈ ಸ್ಕ್ರಿಪ್ಟ್, ಪ್ರಿಯಾಂಕಾ ಅವರ ಕೊಡುಗೆಯಾಗಿದೆ.

ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Sandhya.np14