Difference between revisions of "Moodle-Learning-Management-System/C2/Formatting-Course-material-in-Moodle/Kannada"

From Script | Spoken-Tutorial
Jump to: navigation, search
 
Line 27: Line 27:
 
| 01:06
 
| 01:06
 
| ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು:
 
| ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು:
ಮೂಡಲ್ ನಲ್ಲಿ '''teacher login''' ಅನ್ನು ಹೊಂದಿರಬೇಕು.  
+
ಮೂಡಲ್ ನಲ್ಲಿ '''teacher''' ಲಾಗಿನ್ ಅನ್ನು ಹೊಂದಿರಬೇಕು.  
 
ಅಡ್ಮಿನಿಸ್ಟ್ರೇಟರ್ ನಿಮಗೆ ಒಂದಾದರೂ ಕೋರ್ಸ್ ಅನ್ನು ಅಸೈನ್ ಮಾಡಿರಬೇಕು ಮತ್ತು ನಿಮ್ಮ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿರಬೇಕು.  
 
ಅಡ್ಮಿನಿಸ್ಟ್ರೇಟರ್ ನಿಮಗೆ ಒಂದಾದರೂ ಕೋರ್ಸ್ ಅನ್ನು ಅಸೈನ್ ಮಾಡಿರಬೇಕು ಮತ್ತು ನಿಮ್ಮ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿರಬೇಕು.  
 
|-
 
|-
Line 52: Line 52:
 
|-
 
|-
 
| 01:54
 
| 01:54
| ಈಗ ನಾವು ಸ್ವಲ್ಪ ಹೆಚ್ಚಿನ  '''course material ''' ಯನ್ನು ಸೇರಿಸುವೆವು.  
+
| ಈಗ ನಾವು ಸ್ವಲ್ಪ ಹೆಚ್ಚಿನ  ಕೋರ್ಸ್-ಮಟೀರಿಯಲ್ ಅನ್ನು ಸೇರಿಸುವೆವು.  
 
|-
 
|-
 
| 01:58
 
| 01:58
|ಮೂಡಲ್ ನಲ್ಲಿ ಎಲ್ಲಾ ಕೋರ್ಸ್ ಮಟೀರಿಯಲ್ ಗಳನ್ನು ರಿಸೋರ್ಸ್ ಎನ್ನುತ್ತಾರೆ. ಟೀಚರ್ ಇವುಗಳನ್ನು ಕಲಿಕೆಗೆ ಸಹಾಯಕ ಸಾಮಗ್ರಿಗಳೆಂದು ಬಳಸುತ್ತಾರೆ.  
+
|ಮೂಡಲ್ ನಲ್ಲಿ ಎಲ್ಲಾ ಕೋರ್ಸ್-ಮಟೀರಿಯಲ್ ಗಳನ್ನು ರಿಸೋರ್ಸ್ ಎನ್ನುತ್ತಾರೆ. ಟೀಚರ್ ಇವುಗಳನ್ನು ಕಲಿಕೆಗೆ ಸಹಾಯಕ ಸಾಮಗ್ರಿಗಳೆಂದು ಬಳಸುತ್ತಾರೆ.  
 
|-
 
|-
 
| 02:09
 
| 02:09
Line 253: Line 253:
 
|ಈ ಟ್ಯುಟೋರಿಯಲ್ ನಲ್ಲಿ ನಾವು:  
 
|ಈ ಟ್ಯುಟೋರಿಯಲ್ ನಲ್ಲಿ ನಾವು:  
 
ಮೂಡಲ್ ನಲ್ಲಿ ರಿಸೋರ್ಸ್ ಗಳು,  
 
ಮೂಡಲ್ ನಲ್ಲಿ ರಿಸೋರ್ಸ್ ಗಳು,  
'''course material''' ಅನ್ನು ಸೇರಿಸುವುದು,  
+
ಕೋರ್ಸ್ ಮಟೀರಿಯಲ್ ಅನ್ನು ಸೇರಿಸುವುದು,  
ಡಿಫಾಲ್ಟ್ ಟೆಕ್ಸ್ಟ್ ಎಡಿಟರ್ ನಲ್ಲಿ, ಫಾರ್ಮ್ಯಾಟಿಂಗ್ ಆಯ್ಕೆಗಳು ಇವುಗಳ ಕುರಿತು ಕಲಿತಿದ್ದೇವೆ.  
+
ಡಿಫಾಲ್ಟ್ ಟೆಕ್ಸ್ಟ್-ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳು ಇವುಗಳ ಕುರಿತು ಕಲಿತಿದ್ದೇವೆ.  
 
|-
 
|-
 
| 11:34
 
| 11:34

Latest revision as of 10:04, 27 January 2020

Time Narration
00:01 Formatting course material in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:

ಮೂಡಲ್ ನಲ್ಲಿ ರಿಸೋರ್ಸ್ ಗಳು, ಹೆಚ್ಚಿನ ಕೋರ್ಸ್ ಮಟೀರಿಯಲ್ ಅನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್- ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳು ಇವುಗಳ ಬಗ್ಗೆ ಕಲಿಯುವೆವು.

00:21 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:48 Internet Explorer ಅನ್ನು ಮಾತ್ರ ಬಳಸಬಾರದು. ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:56 ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಒಂದು ಮೂಡಲ್ ವೆಬ್ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು teacher ಎಂದು ನೋಂದಾಯಿಸಿದ್ದಾರೆ ಎಂದುಕೊಂಡಿದ್ದೇನೆ.
01:06 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು:

ಮೂಡಲ್ ನಲ್ಲಿ teacher ಲಾಗಿನ್ ಅನ್ನು ಹೊಂದಿರಬೇಕು. ಅಡ್ಮಿನಿಸ್ಟ್ರೇಟರ್ ನಿಮಗೆ ಒಂದಾದರೂ ಕೋರ್ಸ್ ಅನ್ನು ಅಸೈನ್ ಮಾಡಿರಬೇಕು ಮತ್ತು ನಿಮ್ಮ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿರಬೇಕು.

01:21 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:27 ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.
01:31 ನಿಮ್ಮ teacher username ಮತ್ತು password ವಿವರಗಳೊಂದಿಗೆ ಲಾಗಿನ್ ಮಾಡಿ.
01:36 ಈಗ ನಾವು ಟೀಚರ್ಸ್ ಡ್ಯಾಶ್-ಬೋರ್ಡ್ ನಲ್ಲಿದ್ದೇವೆ.
01:39 ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, My Courses ನ ಅಡಿಯಲ್ಲಿ Calculus ಅನ್ನು ನೋಡಿ.
01:45 Calculus ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ.
01:48 ನಾವು ಈಗಾಗಲೇ announcements ಮತ್ತು ಕೋರ್ಸ್ ನ ಕೆಲವು ವಿವರಗಳನ್ನು ಸೇರಿಸಿದ್ದೇವೆ.
01:54 ಈಗ ನಾವು ಸ್ವಲ್ಪ ಹೆಚ್ಚಿನ ಕೋರ್ಸ್-ಮಟೀರಿಯಲ್ ಅನ್ನು ಸೇರಿಸುವೆವು.
01:58 ಮೂಡಲ್ ನಲ್ಲಿ ಎಲ್ಲಾ ಕೋರ್ಸ್-ಮಟೀರಿಯಲ್ ಗಳನ್ನು ರಿಸೋರ್ಸ್ ಎನ್ನುತ್ತಾರೆ. ಟೀಚರ್ ಇವುಗಳನ್ನು ಕಲಿಕೆಗೆ ಸಹಾಯಕ ಸಾಮಗ್ರಿಗಳೆಂದು ಬಳಸುತ್ತಾರೆ.
02:09 ಇವುಗಳು ಉಪನ್ಯಾಸದ ಟಿಪ್ಪಣಿ (ಲೆಕ್ಚರ್ ನೋಟ್ಸ್), ಪುಸ್ತಕಗಳಂತಹ ಆಂತರಿಕ ಅಥವಾ Wikipedia links ಗಳಂತಹ ಬಾಹ್ಯ ರಿಸೋರ್ಸ್ ಗಳಾಗಿರಬಹುದು.
02:19 ಈಗ ಪ್ರಾರಂಭಿಸೋಣ.

ಪೇಜ್ ನ ಮೇಲೆ ಬಲಭಾಗದಲ್ಲಿರುವ ಗೇರ್ ಐಕಾನ್ ಮೇಲೆ, ನಂತರ Turn Editing On ಮೇಲೆ ಕ್ಲಿಕ್ ಮಾಡಿ.

02:29 ಗಮನಿಸಿ: ಕೋರ್ಸ್ ನಲ್ಲಿ ಯಾವುದೇ ಬದಲಾವಣೆ ಮಾಡಬೇಕಾದರೆ, Turn editing on ಅನ್ನು ಆಯ್ಕೆ ಮಾಡಿರಬೇಕು.
02:36 Basic Calculus ವಿಭಾಗದ ಕೆಳಗೆ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
02:44 ರಿಸೋರ್ಸ್ ಗಳ ಪಟ್ಟಿಯೊಂದಿಗೆ ಒಂದು ಪಾಪ್-ಅಪ್ ತೆರೆದುಕೊಳ್ಳುತ್ತದೆ.
02:48 ಕೆಳಕ್ಕೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ Page ಅನ್ನು ಆಯ್ಕೆ ಮಾಡಿ. ಯಾವುದೇ ರಿಸೋರ್ಸ್ ಅನ್ನು ನೀವು ಆಯ್ಕೆ ಮಾಡಿದಾಗ, ಬಲಭಾಗದಲ್ಲಿ ಅದರ ಬಗ್ಗೆ ಬರುವ ವಿವರಣೆಯನ್ನು ಓದಿ.
03:01 ಪಾಪ್-ಅಪ್ ಸ್ಕ್ರೀನ್ ನ ಕೆಳಗಿರುವ Add ಬಟನ್ಅನ್ನು ಕ್ಲಿಕ್ ಮಾಡಿ.
03:06 Name ಫೀಲ್ಡ್ ನಲ್ಲಿ, Lecture 1 Notes ಎಂದು ಟೈಪ್ ಮಾಡುವೆನು.
03:12 ನಂತರ, Description ಬಾಕ್ಸ್ ನಲ್ಲಿ, “Involutes and construction of Involute of circle” ಎಂದು ಟೈಪ್ ಮಾಡುವೆನು.
03:22 Display description on course page ಆಯ್ಕೆಯನ್ನು ಗುರುತು ಹಾಕಿ.
03:27 Page Content ಬಾಕ್ಸ್ ಅನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ. BasicCalculus-Involutes.odt ಫೈಲ್ ನಿಂದ ಟೆಕ್ಸ್ಟ್ ಅನ್ನು ಕಾಪಿ-ಪೇಸ್ಟ್ ಮಾಡಿ.
03:40 ನಾವು ಇಮೇಜ್ ಅನ್ನು ನಂತರ ಅಪ್ಲೋಡ್ ಮಾಡಲಿದ್ದೇವೆ. ಈ ಫೈಲ್, ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯವಿದೆ.
03:51 ಈಗ ಈ ಟೆಕ್ಸ್ಟ್ ಅನ್ನು ನಾವು ಫಾರ್ಮ್ಯಾಟ್ ಮಾಡೋಣ. ಮೆನ್ಯು ವಿಡ್ಜೆಟ್ಸ್ ಅನ್ನು ವಿಸ್ತರಿಸಲು, ಎಡಿಟರ್ ನ ಮೇಲೆ ಎಡಗಡೆಯಲ್ಲಿರುವ, ಡೌನ್- ಆರೋ (ಕೆಳಮುಖ ಆರೋ) ವನ್ನು ಕ್ಲಿಕ್ ಮಾಡಿ.
04:03 ನಾನು ಇಲ್ಲಿ ತೋರಿಸಿದಂತೆ, ಹೆಡಿಂಗ್ ಅನ್ನು ಎದ್ದು ಕಾಣುವಂತೆ ಮಾಡುವೆನು.
04:07 ಈ ಟೆಕ್ಸ್ಟ್-ಎಡಿಟರ್ ನಲ್ಲಿರುವ ಆಯ್ಕೆಗಳು, ಬೇರೆ ಯಾವುದೇ ಟೆಕ್ಸ್ಟ್-ಎಡಿಟರ್ ನಲ್ಲಿರುವಂತೆಯೆ ಇವೆ. ಇಲ್ಲಿ Bold, Italics, Unordered ಮತ್ತು Ordered lists ನಂತಹ ಆಯ್ಕೆಗಳನ್ನು ನಾವು ನೋಡಬಹುದು.
04:24 ಟೆಕ್ಸ್ಟ್ ಅನ್ನು hyperlink ಮತ್ತು unlink ಮಾಡಲು ಇಲ್ಲಿ ಆಯ್ಕೆಗಳಿವೆ.
04:30 ಇಲ್ಲಿ ಇಮೇಜ್ ಅನ್ನು ಸೇರಿಸಲು ಕೂಡ ಆಯ್ಕೆಯಿದೆ. ನಾವು “Figure 1 shows the involute of a circle” ಎಂಬ ಟೆಕ್ಸ್ಟ್ ಆದ ಮೇಲೆ ಒಂದು ಇಮೇಜ್ ಅನ್ನು ಸೇರಿಸೋಣ.
04:41 ಇಮೇಜ್ ಗಾಗಿ ಜಾಗವನ್ನು ಮಾಡಲು Enter ಅನ್ನು ಒತ್ತಿ. ನಂತರ Image ಐಕಾನ್ ಅನ್ನು ಕ್ಲಿಕ್ ಮಾಡಿ.
04:48 Image properties ಎಂಬ ವಿಂಡೊ ಕಾಣಿಸಿಕೊಳ್ಳುತ್ತದೆ. ನಿಮಗೆ ಹೊರಗಿನ ಇಮೇಜ್ ಅನ್ನು ಸೇರಿಸಬೇಕಾಗಿದ್ದರೆ, ಆ ಇಮೇಜ್ ನ URL ಅನ್ನು ಇಲ್ಲಿ ನಮೂದಿಸಬಹುದು.
04:58 ಇಮೇಜ್ ಅನ್ನು ಅಪ್ಲೋಡ್ ಮಾಡಲು, Browse Repositories ಬಟನ್ ಮೇಲೆ ಕ್ಲಿಕ್ ಮಾಡುವೆನು.
05:04 File Picker ಎಂಬ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
05:09 Upload a file ಮೇಲೆ ಕ್ಲಿಕ್ ಮಾಡಿ. ನಂತರ Choose File ಅಥವಾ Browse ಬಟನ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಮಶಿನ್ ನಿಂದ ಫೈಲ್ ಅನ್ನು ಆಯ್ಕೆಮಾಡಿ.
05:19 ಈ ಇಮೇಜ್ Code Files ಲಿಂಕ್ ನಲ್ಲಿ ಸಹ ಲಭ್ಯವಿದೆ. ನೀವು ಅದನ್ನು ಡೌನ್ಲೋಡ್ ಮಾಡಿ ಬಳಸಬಹುದು.
05:26 Upload this file ಬಟನ್ ಅನ್ನು ಕ್ಲಿಕ್ ಮಾಡಿ.
05:29 ನಾವು ಡಿಸ್ಕ್ರಿಪ್ಷನ್ ಅನ್ನು “This is the involute of a circle” ಎಂದು ಟೈಪ್ ಮಾಡುತ್ತೇವೆ.
05:36 ಕೊನೆಯಲ್ಲಿ, ಇಮೇಜ್ ಅನ್ನು ಸೇರಿಸಲು, Save image ಬಟನ್ ಅನ್ನು ಕ್ಲಿಕ್ ಮಾಡಿ.
05:42 ಮುಂದಿನ ಆಯ್ಕೆಯು media ವನ್ನು ಸೇರಿಸಲು ಇರುತ್ತದೆ. ಇದು URL, video ಅಥವಾ audio ಫೈಲ್ ಆಗಿರಬಹುದು. ಇದು ಹೊರಗಿನ URL ಆಗಿರಬಹುದು ಅಥವಾ ನಮ್ಮ ಮಶಿನ್ ನಿಂದ ಅಪ್ಲೋಡ್ ಮಾಡಬಹುದು.
05:58 ಮುಂದಿನ ಆಯ್ಕೆ Manage Files ಆಗಿದೆ. ಅದನ್ನು ಕ್ಲಿಕ್ ಮಾಡೋಣ.
06:04 Manage Files ಇದು ನಮಗೆ ಸ್ಟೋರ್ ಮಾಡಿ, ಡಿಸ್ಪ್ಲೇ ಮಾಡಬೇಕಾದ ಫೈಲ್ ಗಳಿಗಾಗಿ ಇರುವ ಆಯ್ಕೆಯಾಗಿದೆ. ಇದರಲ್ಲಿ assignment submissions, resource files ಇತ್ಯಾದಿಗಳು ಇರಬಹುದು.
06:17 ಈ ಕೋರ್ಸ್ ನಲ್ಲಿ, ಯಾವುದೇ ರಿಸೋರ್ಸ್ ಗಳು ಇವುಗಳನ್ನು ಬಳಸಬಹುದು. ಈಗ ತಾನೆ ನಾವು ಅಪ್ಲೋಡ್ ಮಾಡಿದ ಇಮೇಜ್ ಕೂಡ ಇಲ್ಲಿರುವುದನ್ನು ಗಮನಿಸಿ.
06:27 ಈ ಪಾಪ್-ಅಪ್ ಬಾಕ್ಸ್ ನ ಎಡಗಡೆಯಲ್ಲಿ ಮೂರು ಐಕಾನ್ ಗಳಿವೆ.
06:32 ಮೊದಲನೆಯದು File picker ಆಗಿದೆ. ಅದನ್ನು ಕ್ಲಿಕ್ ಮಾಡೋಣ.
06:37 ಇದರಲ್ಲಿ server files, recent files ಇತ್ಯಾದಿಗಳನ್ನು ನೋಡಲು ಆಯ್ಕೆಗಳಿವೆ. Server files ಗಳನ್ನು ಈ ಕೋರ್ಸ್ ನಲ್ಲಿ ಎಲ್ಲಿಯೋ ಬಳಸಲಾಗಿದ್ದು, ಇವುಗಳನ್ನು ಮತ್ತೆ ಬಳಸಬಹುದು.
06:52 ಈಗ X ಐಕಾನ್ ಅನ್ನು ಕ್ಲಿಕ್ ಮಾಡಿ, ನಾನು ಇದನ್ನು ಕ್ಲೋಸ್ ಮಾಡುವೆನು.
06:57 ನಂತರ ಎರಡನೇ ಐಕಾನ್ Create Folder ಅನ್ನು ಕ್ಲಿಕ್ ಮಾಡುವೆನು.
07:04 New folder name ಫೀಲ್ಡ್ ನಲ್ಲಿ ನಾವು Assignments ಎಂದು ಟೈಪ್ ಮಾಡೋಣ.
07:10 Assignments ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಕ್ಲಿಕ್ ಮಾಡಿ.
07:15 ನನ್ನ ಫೈಲ್ ಅನ್ನು ನಾನು Assignments ಫೋಲ್ಡರ್ ನಲ್ಲಿ ಎಳೆದು ತರುವೆನು.
07:20 ಈಗಷ್ಟೇ ಅಪ್ಲೋಡ್ ಮಾಡಿದ ಫೈಲ್ ಮೇಲೆ ಈಗ ಕ್ಲಿಕ್ ಮಾಡಿ.
07:24 ಈ ಪಾಪ್-ಅಪ್ ನಲ್ಲಿ, ಫೈಲ್ ನೇಮ್ ಮತ್ತು ಆಥರ್ ಅನ್ನು ಬದಲಾಯಿಸಲು ಹಾಗೂ ಡೌನ್ಲೋಡ್ ಮತ್ತು ಡಿಲೀಟ್ ಮಾಡಲು ಸಹ ಆಯ್ಕೆಗಳಿವೆ.
07:34 ನಾನು ಏನನ್ನೂ ಬದಲಾಯಿಸಲು ಇಚ್ಛಿಸುವುದಿಲ್ಲ. ಆದ್ದರಿಂದ ನಾನು ಪಾಪ್-ಅಪ್ ನ ಕೆಳಗಿರುವ Cancel ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.
07:41 ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಈ ಸಣ್ಣ ಅಸೈನ್ಮೆಂಟ್ ಅನ್ನು ಮಾಡಿ.

Reference Material ಎಂಬ ಫೋಲ್ಡರ್ ಅನ್ನು ರಚಿಸಿ. ಈ ಫೋಲ್ಡರ್, Files ಫೋಲ್ಡರ್ ನಲ್ಲಿಯೇ ಇದೆ ಮತ್ತು Assignments ಎಂಬ ಸಬ್-ಫೋಲ್ಡರ್ ನಲ್ಲಿ ಇಲ್ಲ ಎಂದು ಖಚಿತಪಡಿಸಿಕೊಳ್ಳಿ.

07:57 ಮೂರು ಫೈಲ್ ಗಳನ್ನು ಅಪ್ಲೋಡ್ ಮಾಡಿ. ಈ ಫೈಲ್ ಗಳನ್ನು ನೀವು ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ನೋಡುವಿರಿ.
08:05 ಈ ಅಸೈನ್ಮೆಂಟ್ ಮುಗಿಸಿದ ಮೇಲೆ, ಟ್ಯುಟೋರಿಯಲ್ ಅನ್ನು ಮತ್ತೆ ಮುಂದುವರೆಸಿ.
08:10 ನಿಮ್ಮ File manager, ಈಗ Assignments ಮತ್ತು Reference Material ಎಂಬ ಎರಡು ಫೋಲ್ಡರ್ ಗಳನ್ನು
08:18 ಮತ್ತು involutes-img1.png ಎಂಬ ಇನ್ನೊಂದು ಫೈಲ್ ಅನ್ನು ಹೊಂದಿರಬೇಕು.
08:26 ಮೇಲೆ ಬಲಭಾಗದಲ್ಲಿರುವ X ಐಕಾನ್ ಅನ್ನು ಕ್ಲಿಕ್ ಮಾಡಿ, ಪಾಪ್-ಅಪ್ ವಿಂಡೋವನ್ನು ಕ್ಲೋಸ್ ಮಾಡಿ.
08:33 ಮುಂದಿನ ಫಾರ್ಮ್ಯಾಟಿಂಗ್ ಆಯ್ಕೆಗಳು ಹೀಗಿವೆ:

Underline, Strikethrough, Subscript ಮತ್ತು Superscript.

08:45 ಇವುಗಳ ನಂತರ Align ಮತ್ತು indent ಆಯ್ಕೆಗಳಿವೆ. ಇವು, ಇನ್ನುಳಿದ ಟೆಕ್ಸ್ಟ್-ಎಡಿಟರ್ ನಲ್ಲಿ ಇರುವ ಹಾಗೆಯೇ ಕೆಲಸ ಮಾಡುತ್ತವೆ.
08:53 ಈಗ ಮುಂದಿನ ಆಯ್ಕೆ equation editor ಅನ್ನು ಹೇಗೆ ಬಳಸುವುದು ಎಂದು ನೋಡೋಣ.
08:59 ಸಮೀಕರಣವನ್ನು ಹೊಂದಿರುವ ಈ ವಾಕ್ಯವನ್ನು ನನಗೆ ಸೇರಿಸಬೇಕಾಗಿದೆ. ಹೀಗಾಗಿ ನಾನು equation editor ಐಕಾನ್ ಮೇಲೆ ಕ್ಲಿಕ್ ಮಾಡುತ್ತೇನೆ. ನಂತರ ಸಮೀಕರಣವನ್ನು ಟೈಪ್ ಮಾಡಲು ಇಕ್ವೇಷನ್-ಎಡಿಟರ್ ಅನ್ನು ಬಳಸುವೆನು.
09:14 Additional Reading Material ಲಿಂಕ್ ನಲ್ಲಿ, ಸಮೀಕರಣಗಳನ್ನು ಟೈಪ್ ಮಾಡಲು LaTeX ಅನ್ನು ಬಳಸುವುದರ ಬಗ್ಗೆ ವಿವರವು ಇದೆ. ಮುಗಿದ ನಂತರ Save equation ಬಟನ್ ಅನ್ನು ಕ್ಲಿಕ್ ಮಾಡಿ.
09:29 Insert character, insert table ಮತ್ತು clear formatting ಆಯ್ಕೆಗಳು, ಉಳಿದ ಟೆಕ್ಸ್ಟ್-ಎಡಿಟರ್ ನಲ್ಲಿರುವ ಹಾಗೇ ಕೆಲಸ ಮಾಡುತ್ತವೆ.
09:40 ಮುಂದಿನ ಎರಡು ಆಯ್ಕೆಗಳು Undo ಮತ್ತು Redo ಆಗಿವೆ. ಸೇವ್ ಮಾಡದೇ ಇರುವ ಟೆಕ್ಸ್ಟ್ ಇದ್ದಾಗ ಮಾತ್ರ ಇವು ಸಕ್ರಿಯ ಆಗಿರುತ್ತವೆ.
09:51 ಇದಾದ ನಂತರ, ಅಕ್ಸೆಸ್ಸಿಬಿಲಿಟಿ ಗಾಗಿ (accessibility) ಎರಡು ಆಯ್ಕೆಗಳು ಇವೆ. ಮೊದಲನೆಯದು Accessibility checker ಆಗಿದ್ದು, ಎರಡನೆಯದು screen reader helper ಆಗಿದೆ.
10:05 ಅಕ್ಸೆಸ್ಸಿಬಲ್ ವೆಬ್ಸೈಟ್ ಗಳು ಮತ್ತು ಈ ಆಯ್ಕೆಗಳ ಬಗ್ಗೆ ವಿವರಗಳು, Additional Reading Material ಲಿಂಕ್ ನಲ್ಲಿ ಲಭ್ಯವಿದೆ.
10:14 ಕೊನೆಯ ಆಯ್ಕೆಯು ಎಡಿಟರ್ ವ್ಯೂ ಮತ್ತು HTML (ಹೆಚ್.ಟಿ.ಎಮ್.ಎಲ್) ಕೋಡ್ ವ್ಯೂ ಗಳ ನಡುವೆ ಟಾಗಲ್ (ಬದಲಿಸುವ) ಮಾಡುವುದಾಗಿದೆ. ಇದನ್ನು ಇಮೇಜ್, ವಿಡಿಯೋ, ಪಿ.ಪಿ.ಟಿ, ಇಂಟರಾಕ್ಟೀವ್ ವಿಷಯ ಇತ್ಯಾದಿಗಳನ್ನು ಸೇರಿಸಲು ಬಳಸಬಹುದು.
10:30 HTML ಟಾಗಲ್ ಮೇಲೆ ಮತ್ತೆ ಕ್ಲಿಕ್ ಮಾಡಿ. ಇದು ನಮ್ಮನ್ನು ಮರಳಿ ಎಡಿಟರ್ ವ್ಯೂ ಗೆ ತರುತ್ತದೆ.
10:39 ಈ ವಿವರಣೆಗಾಗಿ ನಾನು ಟೆಕ್ಸ್ಟ್ ಅನ್ನು bold, italics ಮತ್ತು list ಆಯ್ಕೆಗಳನ್ನು ಬಳಸಿ ಫಾರ್ಮ್ಯಾಟ್ ಮಾಡಿರುವೆನು. ನಿಮ್ಮ ಕಂಟೆಂಟ್ ಗಾಗಿ ನೀವು ಹೀಗೆಯೇ ಮಾಡಿ.
10:52 ನೀವು ಫಾರ್ಮ್ಯಾಟ್ ಅನ್ನು ಮುಗಿಸಿದ ನಂತರ, ಕೆಳಗೆ ಸ್ಕ್ರೋಲ್ ಮಾಡಿ, Save and display ಬಟನ್ ಅನ್ನು ಕ್ಲಿಕ್ ಮಾಡಿ.
11:01 ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು.
11:05 ಸ್ಟುಡೆಂಟ್ Priya Sinha ಈ ಪೇಜ್ ಅನ್ನು ಹೀಗೆ ನೋಡುವಳು.
11:11 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,
11:19 ಈ ಟ್ಯುಟೋರಿಯಲ್ ನಲ್ಲಿ ನಾವು:

ಮೂಡಲ್ ನಲ್ಲಿ ರಿಸೋರ್ಸ್ ಗಳು, ಕೋರ್ಸ್ ಮಟೀರಿಯಲ್ ಅನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್-ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳು ಇವುಗಳ ಕುರಿತು ಕಲಿತಿದ್ದೇವೆ.

11:34 ಇಲ್ಲಿ ನಿಮಗಾಗಿ ಇನ್ನೊಂದು ಅಸೈನ್ಮೆಂಟ್ ಇದೆ.

Basic Calculus ನಲ್ಲಿ, resource ಎಂಬ ಒಂದು ಹೊಸ ಫೋಲ್ಡರ್ ಅನ್ನು ಸೇರಿಸಿ. File Manager ನಿಂದ ರೆಫರೆನ್ಸ್ ಫೈಲ್ ಗಳನ್ನು ಸೇರಿಸಿ. ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

11:51 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
12:00 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
12:10 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
12:14 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
12:27 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
12:38 ಧನ್ಯವಾದಗಳು.

Contributors and Content Editors

Anjana310312, Sandhya.np14