Difference between revisions of "Moodle-Learning-Management-System/C2/Courses-in-Moodle/Kannada"

From Script | Spoken-Tutorial
Jump to: navigation, search
 
Line 325: Line 325:
 
|-
 
|-
 
| 13:12
 
| 13:12
| 15th October 2017 ಗೆ ಆರಂಭವಾಗುವಂತೆ ಕೋರ್ಸ್ ಗಳನ್ನು ಎಡಿಟ್ ಮಾಡಿ.
+
| '''15th October 2017''' ಗೆ ಆರಂಭವಾಗುವಂತೆ ಕೋರ್ಸ್ ಗಳನ್ನು ಎಡಿಟ್ ಮಾಡಿ.
 
|-
 
|-
 
| 13:18
 
| 13:18

Latest revision as of 14:25, 20 January 2020

Time Narration
00:01 Courses in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:

ಕೋರ್ಸ್ ಅನ್ನು ತಯಾರಿಸುವುದು ಮತ್ತು ಅವುಗಳಲ್ಲಿ ಕ್ರಿಯೆಗಳನ್ನು ನಿರ್ವಹಿಸುವುದರ ಬಗ್ಗೆ ಕಲಿಯುವೆವು.

00:16 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:24 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,

Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ.

00:38 ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು.
00:42 ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:50 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಮೂಡಲ್ ನಲ್ಲಿ categories ಅನ್ನು ಕ್ರಿಯೇಟ್ ಮಾಡುವುದರ ಬಗ್ಗೆ ತಿಳಿದಿರಬೇಕು.
00:56 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:03 ಬ್ರೌಸರ್ ಗೆ ಬದಲಾಯಿಸಿ ಮತ್ತು ನಿಮ್ಮ moodle ಹೋಮ್-ಪೇಜ್ ಅನ್ನು ತೆರೆಯಿರಿ. XAMPP ಸರ್ವೀಸ್ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.
01:11 ನಿಮ್ಮ admin username ಮತ್ತು ಪಾಸ್ವರ್ಡ್ ಗಳೊಂದಿಗೆ ಲಾಗ್-ಇನ್ ಮಾಡಿ.
01:16 ಈಗ ನಾವು ‘Admin’ ಡ್ಯಾಶ್-ಬೋರ್ಡ್’ ನಲ್ಲಿದ್ದೇವೆ.
01:19 ಎಡಭಾಗದಲ್ಲಿ, ನ್ಯಾವಿಗೇಶನ್ ಮೆನ್ಯೂವನ್ನು ತೆರೆಯಲು drawer ಮೆನ್ಯೂ ಮೇಲೆ ಕ್ಲಿಕ್ ಮಾಡಿ.
01:25 ಇದರಲ್ಲಿ Site Administration ಮೇಲೆ ಕ್ಲಿಕ್ ಮಾಡಿ.
01:29 Courses ಟ್ಯಾಬ್ ಮೇಲೆ, ನಂತರ Manage courses and categories ಮೇಲೆ ಕ್ಲಿಕ್ ಮಾಡಿ.
01:36 ಇಲ್ಲಿ Mathematics ಎಂಬ ಒಂದೇ ಒಂದು ‘ಕ್ಯಾಟೆಗರಿ’ ಮತ್ತು
01:41 ನಾವು ಮೊದಲು ಕ್ರಿಯೇಟ್ ಮಾಡಿದ್ದ 1st Year Maths ಹಾಗೂ 2nd Year Maths ಎಂಬ ಎರಡು 'ಸಬ್ ಕ್ಯಾಟೆಗರಿ' ಗಳು ಮಾತ್ರ ಇರುವುದನ್ನು ಗಮನಿಸಿ.
01:50 ಈಗ ನಾವು Mathematics ನ ಅಡಿಯಲ್ಲಿ, ಒಂದು ಹೊಸ 'ಕೋರ್ಸ್' ಅನ್ನು ಕ್ರಿಯೇಟ್ ಮಾಡೋಣ.
01:55 ಇದಕ್ಕಾಗಿ, Create new course ಮೇಲೆ ಕ್ಲಿಕ್ ಮಾಡಿ.
01:59 Add a new course ಸ್ಕ್ರೀನ್ ನಲ್ಲಿ, ಎಲ್ಲಾ ಫೀಲ್ಡ್ ಗಳನ್ನು ನೋಡಲು, ಮೇಲೆ ಬಲಭಾಗದಲ್ಲಿ Expand All ಮೇಲೆ ಕ್ಲಿಕ್ ಮಾಡಿ.
02:12 Course full name ಟೆಕ್ಸ್ಟ್-ಬಾಕ್ಸ್ ನಲ್ಲಿ, Calculus ಎಂದು ಟೈಪ್ ಮಾಡುವೆವು.
02:18 Course short name ನಲ್ಲಿ, ನಾವು ಮತ್ತೆ Calculus ಎಂದು ಟೈಪ್ ಮಾಡುವೆವು.
02:24 breadcrumbs ನಲ್ಲಿ ಹಾಗೂ 'ಕೋರ್ಸ್' ಗೆ ಸಂಬಂಧಿತ ಇ-ಮೇಲ್ ಗಳಲ್ಲಿ, Course short name ಅನ್ನು ಬಳಸಲಾಗುವುದು.
02:31 ಇದು course full name ಗಿಂತ ಭಿನ್ನವಾಗಿರಬಹುದು.
02:35 ನಾವು ನೋಡುವಂತೆ, Course Category ಯು Mathematics ಆಗಿದೆ.
02:40 ಮುಂದಿನ ಆಯ್ಕೆಯು Course visibility ಆಗಿದೆ. ಡೀಫಾಲ್ಟ್ ಆಗಿ, Show ಅನ್ನು ಆಯ್ಕೆಮಾಡಲಾಗಿದೆ.
02:48 Visible ಸೆಟ್ಟಿಂಗ್, ಇತರ ಕೋರ್ಸ್‌ಗಳ ಜೊತೆಗೆ ಈ 'ಕೋರ್ಸ್' ಅನ್ನು ತೋರಿಸಲಾಗುತ್ತದೆಯೆ ಅಥವಾ ಇಲ್ಲವೇ ಎಂದು ನಿರ್ಧರಿಸುತ್ತದೆ.
02:56 ಅಡಗಿಸಲಾದ 'ಕೋರ್ಸ್', ಆ ಕೋರ್ಸ್ ಅನ್ನು ಅಸೈನ್ ಮಾಡಿದವರಿಗೆ, ಎಂದರೆ Admin, Course creator, Teacher, Manager ಇವರಿಗೆ ಮಾತ್ರ ಕಾಣಿಸುತ್ತದೆ.
03:08 ಸದ್ಯಕ್ಕೆ, ಈ ಸೆಟ್ಟಿಂಗ್ ಅನ್ನು ನಾವು ಹಾಗೆಯೇ ಬಿಡುವೆವು.
03:12 ನಂತರ Course start date ಇದೆ.
03:16 ಸೆಮೆಸ್ಟರ್ ಆರಂಭದ ದಿನದಂತಹ ಒಂದು ನಿರ್ದಿಷ್ಟ ದಿನಾಂಕದಂದು 'ಕೋರ್ಸ್' ಆರಂಭವಾಗುತ್ತಿದ್ದರೆ, ಅದನ್ನು start date ನಲ್ಲಿ ಆಯ್ಕೆಮಾಡಿ.
03:25 ಇದರರ್ಥ, start date ವರೆಗೆ ಈ 'ಕೋರ್ಸ್' ವಿದ್ಯಾರ್ಥಿಗಳಿಗೆ ಕಾಣಿಸುವುದಿಲ್ಲ.
03:32 ಡೀಫಾಲ್ಟ್ ಆಗಿ, Course end date ಅನ್ನು ಸಕ್ರಿಯಗೊಳಿಸಿ, ಕೋರ್ಸ್ ಅನ್ನು ಕ್ರಿಯೇಟ್ ಮಾಡಿದ ದಿನಾಂಕಕ್ಕೆ ಅದನ್ನು ಸೆಟ್ ಮಾಡಲಾಗಿದೆ.
03:42 ಚೆಕ್‌ಬಾಕ್ಸ್ ಕ್ಲಿಕ್ ಮಾಡಿ ಅದನ್ನು ನಿಷ್ಕ್ರಿಯಗೊಳಿಸುತ್ತೇನೆ. ಇದರರ್ಥ, ಈ ಕೋರ್ಸ್ ಎಂದಿಗೂ ಮುಗಿಯುವುದಿಲ್ಲ.
03:51 ಆದಾಗ್ಯೂ, 'ಕೋರ್ಸ್' ಗೆ ಅಂತಿಮ ದಿನಾಂಕವಿದ್ದರೆ, ನೀವು ಇಲ್ಲಿ ಚೆಕ್‌ಬಾಕ್ಸ್ ಅನ್ನು ಸಕ್ರಿಯಗೊಳಿಸಬಹುದು.

ನಂತರ ನಿಮ್ಮ ಅಗತ್ಯಕ್ಕೆ ಅನುಸಾರವಾಗಿ ದಿನಾಂಕವನ್ನು ಆಯ್ಕೆ ಮಾಡಿ.

04:02 ದಯವಿಟ್ಟು ಗಮನಿಸಿ: ಆಯ್ದ end date ನಂತರ, ವಿದ್ಯಾರ್ಥಿಗಳಿಗೆ ಈ 'ಕೋರ್ಸ್' ಕಾಣಿಸುವುದಿಲ್ಲ.

ನಾನು ಇದನ್ನು ನಿಷ್ಕ್ರಿಯವಾಗಿಸುತ್ತೇನೆ.

04:13 Course ID number , Category ID number ನ ಹಾಗೆಯೇ ಇದೆ.

Course ID number ಒಂದು ಐಚ್ಛಿಕ ಫೀಲ್ಡ್ ಆಗಿದೆ.

04:22 ಇದು ಅಡ್ಮಿನ್ ಯೂಸರ್ ಗಳಿಗಾಗಿ, 'ಕೋರ್ಸ್' ಅನ್ನು ಆಫ್‌ಲೈನ್ ಕೋರ್ಸ್‌ಗಳೊಂದಿಗೆ ಗುರುತಿಸಲಿಕ್ಕಾಗಿ ಇರುತ್ತದೆ.
04:28 ಒಂದುವೇಳೆ ನಿಮ್ಮ ಕಾಲೇಜ್ ಕೋರ್ಸ್‌ಗಳಿಗಾಗಿ 'ಐಡಿ' ಗಳನ್ನು ಬಳಸುತ್ತಿದ್ದರೆ, ನೀವು ಆ course ID ಅನ್ನು ಇಲ್ಲಿ ಬಳಸಬಹುದು.

ಈ ಫೀಲ್ಡ್, ಇತರ ಮೂಡಲ್ ಬಳಕೆದಾರರಿಗೆ ಕಾಣಿಸುವುದಿಲ್ಲ.

04:40 ಈ ಫೀಲ್ಡ್, ಐಚ್ಛಿಕವಾಗಿದೆ ಮತ್ತು ವೆಬ್‌ಸೈಟ್‌ನಲ್ಲಿ ಎಲ್ಲಿಯೂ ಇದನ್ನು ಪ್ರದರ್ಶಿಸುವುದಿಲ್ಲ. ನಾನು ಇದನ್ನು ಖಾಲಿಯಾಗಿ ಇಟ್ಟುಬಿಡುತ್ತೇನೆ.
04:49 ಆಮೇಲೆ, Description ನ ಕೆಳಗೆ, ನಾವು Course Summary ಮತ್ತು Course Summary files ಎಂಬ 2 ಫೀಲ್ಡ್ ಗಳನ್ನು ನೋಡಬಹುದು.
04:59 Course summary- ಇದೊಂದು ಐಚ್ಛಿಕ ಆದರೆ ಮುಖ್ಯವಾದ ಫೀಲ್ಡ್ ಆಗಿದೆ. ಏಕೆಂದರೆ, user ನು (ಬಳಕೆದಾರ) ಹುಡುಕುವಾಗ, course summary ಟೆಕ್ಸ್ಟ್ ಅನ್ನು ಸಹ ಸ್ಕ್ಯಾನ್ ಮಾಡಲಾಗುತ್ತದೆ.
05:13 ಇಲ್ಲಿ Topic ಗಳ ಹೆಸರುಗಳನ್ನು ಪಟ್ಟಿ ಮಾಡುವುದು ಒಳ್ಳೆಯದು.

ಹೀಗೆ ಟೈಪ್ ಮಾಡಿ: Topics covered in this Calculus course are: Limits, Graph of a function, Factorial.

05:29 ಕೋರ್ಸ್‌ ಗಳ ಪಟ್ಟಿಯೊಂದಿಗೆ, Course summary ಯನ್ನು ಸಹ ಪ್ರದರ್ಶಿಸಲಾಗುತ್ತದೆ.
05:35 Course summary ಫೈಲ್ ಗಳನ್ನು, Course summary files ಫೀಲ್ಡ್ ನಲ್ಲಿಯೇ ಅಪ್ಲೋಡ್ ಮಾಡಬೇಕು.
05:42 ಡೀಫಾಲ್ಟ್ ಆಗಿ, jpg, gif ಹಾಗೂ png ವಿಧದ ಫೈಲ್ ಗಳನ್ನು ಮಾತ್ರ course summary files ಗಾಗಿ ಅನುಮತಿಸಲಾಗುತ್ತದೆ.

ನನಗೆ ಯಾವುದೇ ಫೈಲ್ ಅನ್ನು ಅಪ್‌ಲೋಡ್ ಮಾಡಬೇಕಾಗಿಲ್ಲ. ಆದ್ದರಿಂದ ಇದನ್ನು ಹಾಗೆಯೇ ಬಿಡುತ್ತೇನೆ.

05:57 ವಿದ್ಯಾರ್ಥಿಗಳಿಗಾಗಿ ಸಂಪನ್ಮೂಲಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸಲಾದ ವಿಧಾನವನ್ನು Course format ಸೂಚಿಸುತ್ತದೆ.
06:06 Format ಡ್ರಾಪ್‌ಡೌನ್‌ನಲ್ಲಿ, 4 ಆಯ್ಕೆಗಳಿವೆ -

Single Activity Format, Social Format, Topics Format ಮತ್ತು Weekly Format.

06:20 ಇಲ್ಲಿ ವಾರದಿಂದ ವಾರಕ್ಕೆ ನಡೆಯುವ ಕೋರ್ಸ್‌ಗಳು ಇವೆ.
06:24 ನಿಮ್ಮ ಕೋರ್ಸ್ ಹಾಗೆ ಇದ್ದರೆ, Weekly format ಅನ್ನು ಆಯ್ಕೆಮಾಡಿ.
06:30 ಕೋರ್ಸ್‌ನ ಪ್ರತಿಯೊಂದು ವಾರಕ್ಕಾಗಿ, ಮೂಡಲ್ start date ಮತ್ತು end date ಗಳೊಂದಿಗೆ ಒಂದು ವಿಭಾಗವನ್ನು ರಚಿಸುತ್ತದೆ.
06:39 Topic (ವಿಷಯ) ಗಳಿಗೆ ಅನುಸಾರವಾಗಿ ನಡೆಯುವ ಕೋರ್ಸ್‌ಗಳು ಇವೆ. ನಿಮ್ಮ ಕೋರ್ಸ್ ಹಾಗೆ ಇದ್ದರೆ, Topics format ಅನ್ನು ಆಯ್ಕೆಮಾಡಿ.
06:49 ಮೂಡಲ್, ಕೋರ್ಸ್‌ನ ಪ್ರತಿಯೊಂದು topic ಗಾಗಿ ಒಂದು ವಿಭಾಗವನ್ನು ರಚಿಸುತ್ತದೆ.
06:55 Topics format, ಈ ಫೀಲ್ಡ್ ಗಾಗಿ ಡೀಫಾಲ್ಟ್ ವ್ಯಾಲ್ಯೂ ಆಗಿದೆ. ನಾವು ಅದನ್ನು ಹಾಗೆಯೇ ಇಡುತ್ತೇವೆ.
07:03 ಡೀಫಾಲ್ಟ್ ಆಗಿ, ವಿಭಾಗಗಳ ಸಂಖ್ಯೆ 4 ಆಗಿದೆ.
07:07 ನಿಮ್ಮ ಕೋರ್ಸ್ ಅನ್ನು 4 ಕ್ಕಿಂತ ಹೆಚ್ಚು ಅಥವಾ ಕಡಿಮೆ topic ಗಳಲ್ಲಿ ವಿಂಗಡಿಸಿದ್ದರೆ, ಅದಕ್ಕೆ ಅನುಸಾರವಾಗಿ ಈ ಫೀಲ್ಡ್ ಅನ್ನು ಬದಲಾಯಿಸಿ.

ನಾನು ಈ ಸಂಖ್ಯೆಯನ್ನು 5 ಎಂದು ಮಾಡುತ್ತೇನೆ.

07:20 ಇತರ ಫಾರ್ಮ್ಯಾಟ್ ಗಳನ್ನು ನಾವು ನಂತರದ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸುತ್ತೇವೆ.
07:25 ಇನ್ನುಳಿದ ಆಯ್ಕೆಗಳನ್ನು ನಾವು ಹಾಗೆಯೇ ಬಿಡೋಣ.

ಪೇಜ್ ನ ಕೆಳಗೆ ಸ್ಕ್ರೋಲ್ ಮಾಡಿ ಮತ್ತು Save and display ಬಟನ್ ಮೇಲೆ ಕ್ಲಿಕ್ ಮಾಡಿ.

07:36 ನಮ್ಮನ್ನು Enrolled Users ಎಂಬ ಪೇಜ್ ಗೆ ಕಳಿಸಲಾಗಿದೆ. user enrollment ಬಗ್ಗೆ ನಾವು ನಂತರದ ಟ್ಯುಟೋರಿಯಲ್ ನಲ್ಲಿ ಕಲಿಯುತ್ತೇವೆ.
07:46 ಸದ್ಯಕ್ಕೆ, ನಾವು Mathematics ಕ್ಯಾಟೆಗರಿಯ ಅಡಿಯಲ್ಲಿ, ನಮ್ಮ ಮೊದಲ ಕೋರ್ಸ್ Calculus ಅನ್ನು ಯಶಸ್ವಿಯಾಗಿ ರಚಿಸಿದ್ದೇವೆ.
07:56 ನಾವು ಈ course ಪೇಜ್ ನಲ್ಲಿರುವಾಗ, ಎಡಭಾಗದಲ್ಲಿರುವ ಮೆನ್ಯೂ ಬದಲಾಗಿರುವುದನ್ನು ಗಮನಿಸಿ.
08:03 ಎಡಭಾಗದಲ್ಲಿರುವ ನ್ಯಾವಿಗೇಷನ್ ಮೆನ್ಯೂ, ನಾವು ರಚಿಸಿದ ಕೋರ್ಸ್ ಗೆ ಸಂಬಂಧಿಸಿದ ಮೆನ್ಯೂಗಳನ್ನು ಹೊಂದಿದೆ.

ಇವು Participants, Grades ಇತ್ಯಾದಿಗಳನ್ನು ಒಳಗೊಂಡಿವೆ.

08:15 ಎಡಗಡೆ, Calculus ಎಂಬ ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ.
08:20 ಇಲ್ಲಿ 5 Topic ಗಳು ಕಾಣುತ್ತಿರುವುದನ್ನು ನಾವು ನೋಡಬಹುದು. ಇವುಗಳನ್ನು Topic 1, Topic 2 … ಹೀಗೆ ಹೆಸರಿಸಲಾಗಿದೆ.

ಈ ಮೊದಲು, ಸಂಖ್ಯೆ 5 ಅನ್ನು ನಾವು ಕೊಟ್ಟಿದ್ದೆವು ಎಂದು ನೆನಪಿಸಿಕೊಳ್ಳಿ.

08:34 ಪೇಜ್ ನ ಮೇಲಿನ ಬಲಭಾಗದಲ್ಲಿರುವ ಗೇರ್-ಐಕಾನ್ ಮೇಲೆ ಕ್ಲಿಕ್ ಮಾಡಿ.
08:39 ಆಮೇಲೆ Edit settings ಮೇಲೆ ಕ್ಲಿಕ್ ಮಾಡಿ.

ಈ ಕೋರ್ಸ್ ಅನ್ನು ಕ್ರಿಯೇಟ್ ಮಾಡಿದಾಗ, ನಾವು ಇದ್ದ ಪೇಜ್ ಅನ್ನೇ ಹೋಲುವ ಒಂದು ಪೇಜ್ ಅನ್ನು ಇದು ತೆರೆಯುತ್ತದೆ.

08:51 ಈ ಪೇಜ್ ನಲ್ಲಿ, ನಾವು ಹಿಂದಿನ ಸೆಟ್ಟಿಂಗ್‌ಗಳ ಬದಲಾವಣೆಗಳನ್ನು ಮಾಡಬಹುದು.

ನಾನು Course start date ಅನ್ನು 15th October 2017 ಗೆ ಬದಲಾಯಿಸುತ್ತೇನೆ.

09:04 ಪೇಜ್ ನ ಕೆಳಗೆ ಸ್ಕ್ರೋಲ್ ಮಾಡಿ ಮತ್ತು Save and display ಬಟನ್ ಮೇಲೆ ಕ್ಲಿಕ್ ಮಾಡಿ.
09:11 ಗೇರ್ ಮೆನ್ಯೂದ ಅಡಿಯಲ್ಲಿರುವ ಇತರ ಸಬ್-ಮೆನ್ಯೂಗಳನ್ನು ನಂತರ ನಾವು ಕಲಿಯುತ್ತೇವೆ.
09:17 ಈಗ ನಮ್ಮ ಕೋರ್ಸ್‌ ನ ರಚನೆಯನ್ನು ಸ್ವಲ್ಪ ಬದಲಾಯಿಸೋಣ.
09:22 Site administration ಮೇಲೆ ಕ್ಲಿಕ್ ಮಾಡಿ.

Courses ಮೇಲೆ, ಆನಂತರ Manage courses and categories ಮೇಲೆ ಕ್ಲಿಕ್ ಮಾಡಿ.

09:31 ನಾವು ಕ್ರಿಯೇಟ್ ಮಾಡಿದ ಕೋರ್ಸ್ ಅನ್ನು ನೋಡಲು, Mathematics ಕ್ಯಾಟೆಗರಿಯ ಮೇಲೆ ಕ್ಲಿಕ್ ಮಾಡಿ. ಕೋರ್ಸ್‌ನ ಬಲಭಾಗದಲ್ಲಿರುವ 3 ಐಕಾನ್‌ಗಳನ್ನು ಗಮನಿಸಿ.
09:42 ಐಕಾನ್‌ಗಳು ಏನಿವೆ ಎಂಬುದನ್ನು ನೋಡಲು ಅವುಗಳ ಮೇಲೆ ಕರ್ಸರ್ ಅನ್ನು ನಡೆದಾಡಿಸಿ.
09:46 ಗೇರ್-ಐಕಾನ್ ಕೋರ್ಸ್ ಅನ್ನು ಎಡಿಟ್ ಮಾಡಲು, delete ಅಥವಾ trash ಐಕಾನ್ ಕೋರ್ಸ್ ಅನ್ನು ಡಿಲೀಟ್ ಮಾಡಲು
09:55 ಮತ್ತು, ಕಣ್ಣಿನ ಐಕಾನ್ ಕೋರ್ಸ್ ಅನ್ನು ಮರೆಮಾಡಲು ಆಗಿದೆ.
10:01 ಅಡಗಿಸಲಾದ ಕೋರ್ಸ್ ಅನ್ನು ಸೂಚಿಸಲು ಕಣ್ಣಿನ ಐಕಾನ್ ಗೆ ಕ್ರಾಸ್ ಮಾಡಿರುತ್ತದೆ.
10:07 course settings ಅನ್ನು ಎಡಿಟ್ ಮಾಡಲು, ನಾವು ಕೋರ್ಸ್ ನ ಹೆಸರಿನ ಬಲಭಾಗದಲ್ಲಿರುವ ಗೇರ್ ಐಕಾನ್ ಮೇಲೆ ಕ್ಲಿಕ್ ಮಾಡಬಹುದು.
10:14 ನನಗೆ Course Summary ಯನ್ನು ಮಾರ್ಪಡಿಸಿ ಅದರಲ್ಲಿ ಈಗಿರುವ ವಿಷಯಗಳಿಗೆ Binomials ಅನ್ನು ಸೇರಿಸಬೇಕಾಗಿದೆ. ಉಳಿದ ಸೆಟ್ಟಿಂಗ್‌ಗಳು ಇದ್ದಹಾಗೇ ಇರಲಿ.
10:25 ಪೇಜ್ ನ ಕೆಳಗೆ ಸ್ಕ್ರೋಲ್ ಮಾಡಿ ಮತ್ತು ಈ ಬಾರಿ Save and return ಬಟನ್ ಮೇಲೆ ಕ್ಲಿಕ್ ಮಾಡಿ.
10:34 ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇಲ್ಲಿದೆ: Mathematics ಕ್ಯಾಟೆಗರಿಯ ಅಡಿಯಲ್ಲಿ, Linear Algebra ಎಂಬ ಒಂದು ಹೊಸ ಕೋರ್ಸ್ ಅನ್ನು ರಚಿಸಿ.
10:44 ಸಧ್ಯಕ್ಕೆ ಈ ಕೋರ್ಸ್ ಅನ್ನು ಅಡಗಿಸಿಡಿ.
10:47 course summary ಯಲ್ಲಿ ಕೆಳಗಿನ ವಿಷಯಗಳನ್ನು ನಮೂದಿಸಿ: Linear equations, Matrices ಮತ್ತು Vectors.

Save and Return ಬಟನ್ ಮೇಲೆ ಕ್ಲಿಕ್ ಮಾಡಿ.

11:00 ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ. ಅಸೈನ್ಮೆಂಟ್ ಅನ್ನು ಮಾಡಿದ ನಂತರ ಮತ್ತೆ ಮುಂದುವರಿಸಿ.
11:06 Mathematics ನ ಅಡಿಯಲ್ಲಿ, ನಾವು ಈಗ 2 ಕೋರ್ಸ್‌ಗಳನ್ನು ಹೊಂದಿದ್ದೇವೆ: Calculus ಹಾಗೂ Linear Algebra.
11:14 ಈಗ courses ನ ಬದಿಯಲ್ಲಿ ಒಂದು ಹೊಸ ಐಕಾನ್ ಕಾಣಿಸಿಕೊಂಡಿದೆ ಎಂಬುದನ್ನು ಗಮನಿಸಿ.
11:20 ಮೇಲೆ ಮತ್ತು ಕೆಳಗಿನ ಬಾಣದ ಚಿಹ್ನೆಗಳು, ಕೋರ್ಸ್‌ಗಳ ಕ್ರಮವನ್ನು ಹೊಂದಿಸಲು ಇರುತ್ತವೆ.
11:26 ಡ್ರ್ಯಾಗ್ ಮತ್ತು ಡ್ರಾಪ್ ಸೌಲಭ್ಯವನ್ನು ಬಳಸಿಕೊಂಡು, ನಾವು ಕ್ರಮವನ್ನು ಬದಲಾಯಿಸಬಹುದು.

Calculus ಕೋರ್ಸ್ ಅನ್ನು ನಾವು Linear Algebra ಕೋರ್ಸ್‌ ನ ಮೇಲ್ಗಡೆ ಸರಿಸೋಣ.

11:36 ಈ ಎರಡೂ ಕೋರ್ಸ್‌ ಗಳು 1 ನೇ ವರ್ಷದ ವಿದ್ಯಾರ್ಥಿಗಳಿಗಾಗಿ ಇವೆ.

ಆದ್ದರಿಂದ, ಅವುಗಳನ್ನು 1st Year Maths ಸಬ್-ಕ್ಯಾಟೆಗರಿ ಅಡಿಯಲ್ಲಿ ಸೇರಿಸೋಣ.

11:47 ಈ 2 ಕೋರ್ಸ್‌ಗಳನ್ನು ಆಯ್ಕೆಮಾಡಲು, ಅವುಗಳ ಎಡಗಡೆಯಿರುವ ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ.
11:53 ಆಮೇಲೆ Move selected courses to ಎಂಬ ಡ್ರಾಪ್-ಡೌನ್ ನಲ್ಲಿ, Mathematics / 1st year Maths ಅನ್ನು ಆಯ್ಕೆಮಾಡಿ.
12:02 ಮತ್ತು Move ಬಟನ್ ಮೇಲೆ ಕ್ಲಿಕ್ ಮಾಡಿ.
12:04 ನಮಗೆ -Successfully moved 2 courses into 1st year Maths ಎಂಬ ಮೆಸೇಜ್ ಸಿಗುತ್ತದೆ.
12:14 Mathematics ನ ಅಡಿಯಲ್ಲಿ, ಕೋರ್ಸ್‌ಗಳ ಸಂಖ್ಯೆ 0 (ಸೊನ್ನೆ) ಆಗಿದ್ದು, 1st year Maths ನ ಅಡಿಯಲ್ಲಿ 2 ಆಗಿರುವುದನ್ನು ಗಮನಿಸಿ.
12:24 1st year Maths ಸಬ್-ಕ್ಯಾಟೆಗರಿ ಮೇಲೆ ಕ್ಲಿಕ್ ಮಾಡಿ.
12:28 ಈ ಸಬ್-ಕ್ಯಾಟೆಗರಿಯ ಅಡಿಯಲ್ಲಿ, ಪಟ್ಟಿ ಮಾಡಿರುವ ನಮ್ಮ ಕೋರ್ಸ್‌ಗಳನ್ನು ನಾವು ನೋಡಬಹುದು.
12:33 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.

ಸಂಕ್ಷಿಪ್ತವಾಗಿ,

12:38 ಈ ಟ್ಯುಟೋರಿಯಲ್ ನಲ್ಲಿ ನಾವು:

ಕೋರ್ಸ್ ಅನ್ನು ತಯಾರಿಸುವುದು ಮತ್ತು ಕೋರ್ಸ್‌ ಗಳಲ್ಲಿ edit, move ಗಳಂತಹ ಕ್ರಿಯೆಗಳನ್ನು ಹೇಗೆ ನಿರ್ವಹಿಸುವುದು ಎಂದು ಕಲಿತಿದ್ದೇವೆ.

12:50 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:

Mathematicsನ ಕೆಳಗೆ, 2nd Year Maths ಎಂಬ ‘ಸಬ್ ಕ್ಯಾಟೆಗರಿ’ಗೆ,

13:00 Multivariable calculus ಮತ್ತು Advanced Algebra ಎಂಬ 2 ಕೋರ್ಸ್ ಗಳನ್ನು ಸೇರಿಸಿ.
13:06 ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Code files ಲಿಂಕ್ ಅನ್ನು ನೋಡಿ.
13:12 15th October 2017 ಗೆ ಆರಂಭವಾಗುವಂತೆ ಕೋರ್ಸ್ ಗಳನ್ನು ಎಡಿಟ್ ಮಾಡಿ.
13:18 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
13:26 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
13:36 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
13:40 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
13:53 ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14