Difference between revisions of "Linux/C2/Ubuntu-Desktop-16.04/Kannada"

From Script | Spoken-Tutorial
Jump to: navigation, search
Line 217: Line 217:
 
|-
 
|-
 
|| 06:43
 
|| 06:43
|| ಈ ವೆಬ್‌ಸೈಟ್‌ನಲ್ಲಿನ  '''Linux'''ಸ್ಪೋಕನ್ ಟ್ಯುಟೋರಿಯಲ್ ಸರಣಿಯಲ್ಲಿ, ‘ಟರ್ಮಿನಲ್ ಕಮಾಂಡ್’ ಗಳನ್ನು ಚೆನ್ನಾಗಿ ವಿವರಿಸಲಾಗಿದೆ.
+
|| ಈ ವೆಬ್‌ಸೈಟ್‌ನಲ್ಲಿನ  '''Linux''' ಸ್ಪೋಕನ್ ಟ್ಯುಟೋರಿಯಲ್ ಸರಣಿಯಲ್ಲಿ, ‘ಟರ್ಮಿನಲ್ ಕಮಾಂಡ್’ ಗಳನ್ನು ಚೆನ್ನಾಗಿ ವಿವರಿಸಲಾಗಿದೆ.
 
|-
 
|-
 
|| 06:49
 
|| 06:49

Revision as of 16:27, 11 July 2019

Time Narration
00:01 Ubuntu Linux Desktop 16.04 ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ, ನಾವು gnome environment ನಲ್ಲಿ (ಜಿನೋಮ್ ಎನ್ವಿರಾನ್ಮೆಂಟ್) ಉಬಂಟು ಲಿನಕ್ಸ್ ಡೆಸ್ಕ್-ಟಾಪ್ ಹಾಗೂ
00:17 ಉಬಂಟು ಡೆಸ್ಕ್ಟಾಪ್ ಮೇಲಿರುವ ಕೆಲವು ಸಾಮಾನ್ಯ ಅಪ್ಲಿಕೇಶನ್ ಗಳ ಬಗ್ಗೆ ಕಲಿಯುವೆವು.
00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux 16.04 O S ಅನ್ನು ಬಳಸುತ್ತಿದ್ದೇನೆ.
00:29 ಉಬಂಟು ಡೆಸ್ಕ್ಟಾಪ್ ಹೀಗೆ ಕಾಣುತ್ತದೆ.
00:33 ಸ್ಕ್ರೀನ್ ನ ಎಡಭಾಗದಲ್ಲಿ ನೀವು 'ಲಾಂಚರ್' ಅನ್ನು ನೋಡುತ್ತೀರಿ.
00:37 ನಾವು ಈ 'ಲಾಂಚರ್' ಅನ್ನು ಹೇಗೆ ಮರೆಮಾಡಬಹುದು?
00:40 ಇದನ್ನು ಮಾಡಲು, ಎಡಭಾಗದಲ್ಲಿರುವ 'ಲಾಂಚರ್' ಗೆ ಹೋಗಿ.

System Settings ಐಕಾನ್ ಮೇಲೆ ಕ್ಲಿಕ್ ಮಾಡಿ.

00:47 System Settings ವಿಂಡೋದಲ್ಲಿ, Appearance ಮೇಲೆ ಕ್ಲಿಕ್ ಮಾಡಿ.
00:51 Appearance ವಿಂಡೋದಲ್ಲಿ, Behavior ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
00:56 ಇಲ್ಲಿ, Auto-hide the Launcher ಅನ್ನು ON ಗೆ ಬದಲಾಯಿಸಿ.
01:01 ಈಗ 'ಲಾಂಚರ್' ಅನ್ನು ಅಡಗಿಸಲಾಗುತ್ತದೆ.
01:04 ಇಲ್ಲಿ ತೋರಿಸಿದಂತೆ 'ಲಾಂಚರ್' ಅನ್ನು ಮರೆಮಾಡಿದ್ದರೆ, ಅದನ್ನು ಮತ್ತೆ ಕಾಣುವಂತೆ ಮಾಡಬಹುದು.
01:10 ಹಾಗೆ ಮಾಡಲು, ಕರ್ಸರ್ ಅನ್ನು ಸ್ಕ್ರೀನ್ ನ ಎಡತುದಿಗೆ ಸರಿಸಿ.
01:15 'ಲಾಂಚರ್' ಗೋಚರಿಸುತ್ತದೆ.
01:18 ಕರ್ಸರ್ ಅನ್ನು ದೂರ ಸರಿಸಿದಾಗ 'ಲಾಂಚರ್' ಮತ್ತೆ ಮರೆಯಾಗುತ್ತದೆ.
01:23 Appearance ವಿಂಡೋಗೆ ಹಿಂದಿರುಗಿ. Auto-hide the Launcher ಅನ್ನು OFF ಗೆ ಬದಲಾಯಿಸಿ.
01:30 ವಿಂಡೋದ ಮೇಲಿನ ಎಡಭಾಗದಲ್ಲಿರುವ ಸಣ್ಣ X ಐಕಾನ್ ಅನ್ನು ಕ್ಲಿಕ್ ಮಾಡಿ, ಈ ವಿಂಡೋವನ್ನು ಮುಚ್ಚಿ.
01:37 ಗಮನಿಸಿ, ಡೀಫಾಲ್ಟ್ ಆಗಿ 'ಲಾಂಚರ್' ನಲ್ಲಿ ಕೆಲವು ಐಕಾನ್‌ಗಳಿವೆ.
01:42 'ಲಾಂಚರ್' ನ ಮೇಲ್ತುದಿಯಲ್ಲಿ, Dash home ಐಕಾನ್ ಅನ್ನು ನೀವು ನೋಡಬಹುದು.
01:47 Dash home ಒಂದು ಇಂಟರ್ಫೇಸ್ ಆಗಿದೆ. ಇದು ಒಂದು ಸ್ಕ್ರೀನ್ ನಲ್ಲಿ, ಉಬಂಟು ಲಿನಕ್ಸ್ ನಲ್ಲಿ ಎಲ್ಲ ಅಪ್ಲಿಕೇಶನ್ ಗಳಿಗೆ ಆಕ್ಸೆಸ್ ಅನ್ನು ಕೊಡುತ್ತದೆ.
01:55 Dash home ಅನ್ನು ತೆರೆಯಲು, ಅದರ ಮೇಲೆ ಕ್ಲಿಕ್ ಮಾಡಿ.
01:59 ಮೇಲ್ಭಾಗದಲ್ಲಿ ಪ್ರಮುಖವಾಗಿ ನೀವು 'ಸರ್ಚ್ ಬಾರ್' ಫೀಲ್ಡ್ ಅನ್ನು ನೋಡುತ್ತೀರಿ.
02:04 ಒಂದು ನಿರ್ದಿಷ್ಟ ಅಪ್ಲಿಕೇಶನ್ ಅನ್ನು ಗುರುತಿಸುವುದು ಹೇಗೆ? ನೀವು ಹುಡುಕುತ್ತಿರುವ ಅಪ್ಲಿಕೇಶನ್‌ ನ ಹೆಸರನ್ನು ಟೈಪ್ ಮಾಡಿ. ತಕ್ಷಣ ಅದನ್ನು ನೋಡುವಿರಿ.

ಇದು ಅಷ್ಟು ಸುಲಭವಾಗಿದೆ!

02:16 ನಾವು Calculator ಎಂಬ ಅಪ್ಲಿಕೇಶನ್ ಅನ್ನು ಹುಡುಕಲು ಪ್ರಯತ್ನಿಸೋಣ.
02:20 ಆದ್ದರಿಂದ, 'ಸರ್ಚ್ ಬಾರ್' ಫೀಲ್ಡ್ ನಲ್ಲಿ, C a l c (ಸಿ ಎ ಎಲ್ ಸಿ) ಎಂದು ಟೈಪ್ ಮಾಡಿ.
02:26 ತಮ್ಮ ಹೆಸರಿನಲ್ಲಿ c a l c ಯನ್ನು ಹೊಂದಿರುವ ಎಲ್ಲಾ ಅಪ್ಲಿಕೇಶನ್‌ಗಳನ್ನು ಪಟ್ಟಿ ಮಾಡಲಾಗುವುದು.
02:32 ಇಲ್ಲಿ ಗಮನಿಸಿ - LibreOffice Calc ಹಾಗೂ Calculator ಈ ಎರಡೂ ಲಿಸ್ಟ್ ನಲ್ಲಿವೆ.
02:37 Calculator ಐಕಾನ್ ಮೇಲೆ ಕ್ಲಿಕ್ ಮಾಡಿ.

ಈಗ Calculator ಅಪ್ಲಿಕೇಶನ್, ಸ್ಕ್ರೀನ್ ಮೇಲೆ ತೆರೆದುಕೊಳ್ಳುತ್ತದೆ.

02:45 ಅಂಕಗಣಿತ, ವೈಜ್ಞಾನಿಕ ಅಥವಾ ಆರ್ಥಿಕ ಲೆಕ್ಕಾಚಾರಗಳನ್ನು ಮಾಡಲು ಕ್ಯಾಲ್ಕ್ಯುಲೇಟರ್ ಸಹಾಯ ಮಾಡುತ್ತದೆ.
02:52 ನಾವು ಕೆಲವು ಸರಳವಾದ ಲೆಕ್ಕಗಳನ್ನು ಪ್ರಯತ್ನಿಸೋಣ.
02:55 5 asterisk 8 ಎಂದು ಟೈಪ್ ಮಾಡಿ ಮತ್ತು ಸಮಾನಾರ್ಥಕ ಚಿಹ್ನೆಯ (=) ಮೇಲೆ ಕ್ಲಿಕ್ ಮಾಡಿ. Enter ಅನ್ನು ಒತ್ತಿ.
03:02 ಸಮಾನಾರ್ಥಕ ಚಿಹ್ನೆಯ (=) ಮೇಲೆ ಕ್ಲಿಕ್ ಮಾಡುವ ಬದಲು, ನೀವು ಕೀಬೋರ್ಡ್‌ನಲ್ಲಿ Enter ಕೀಯನ್ನು ಸಹ ಒತ್ತಬಹುದು.
03:09 ಉತ್ತರವನ್ನು 'ಕ್ಯಾಲ್ಕ್ಯುಲೇಟರ್' ನಲ್ಲಿ ಪ್ರದರ್ಶಿಸಲಾಗುತ್ತದೆ.
03:13 ಹೀಗೆಯೇ, ನಾವು Calculator ಅಪ್ಲಿಕೇಶನ್ ಅನ್ನು ಬಳಸಿಕೊಂಡು, ಎಲ್ಲಾ ರೀತಿಯ ಲೆಕ್ಕಾಚಾರಗಳನ್ನು ಮಾಡಬಹುದು.
03:20 ಈಗ ವಿಂಡೋದ ಮೇಲಿನ ಎಡಭಾಗದಲ್ಲಿರುವ ಸಣ್ಣ X ಐಕಾನ್ ಅನ್ನು ಕ್ಲಿಕ್ ಮಾಡಿ, ಈ Calculator ನಿಂದ ಹೊರಗೆ ಬನ್ನಿ (exit).
03:28 Ubuntu Linux OS ನಲ್ಲಿಯ ಕೆಲವು ಪ್ರಮುಖ ಅಪ್ಲಿಕೇಶನ್‌ಗಳ ಪರಿಚಯ ಮಾಡಿಕೊಳ್ಳೋಣ.
03:34 ಅದಕ್ಕಾಗಿ, ಮತ್ತೆ Dash home ಗೆ ಹೋಗುವೆವು.
03:38 'ಸರ್ಚ್ ಬಾರ್' ನಲ್ಲಿ, gedit ಎಂದು ಟೈಪ್ ಮಾಡೋಣ. Ubuntu Linux OS ನಲ್ಲಿ, gedit ಡೀಫಾಲ್ಟ್ ಟೆಕ್ಸ್ಟ್-ಎಡಿಟರ್ ಆಗಿದೆ.
03:48 Text Editor ಐಕಾನ್, ಕೆಳಗೆ ಗೋಚರಿಸುತ್ತದೆ. ಅದನ್ನು ತೆರೆಯಲು, ಅದರ ಮೇಲೆ ಕ್ಲಿಕ್ ಮಾಡಿ.
03:55 ಸ್ಕ್ರೀನ್ ಮೇಲೆ ಈಗ ನೀವು ನೋಡುತ್ತಿರುವುದು gedit Text Editor ವಿಂಡೋ ಆಗಿದೆ.
04:00 ನಾನು ಸ್ವಲ್ಪ ಟೆಕ್ಸ್ಟ್ ಅನ್ನು ಇಲ್ಲಿ ಟೈಪ್ ಮಾಡುತ್ತೇನೆ.

ಉದಾಹರಣೆಗೆ, Hello World ಎಂದು ಟೈಪ್ ಮಾಡಿ.

04:07 ಫೈಲ್ ಅನ್ನು ಸೇವ್ ಮಾಡಲು, ಕೀಬೋರ್ಡ್ ಮೇಲೆ Ctrl ಹಾಗೂ S ಕೀಗಳನ್ನು ಒಟ್ಟಿಗೇ ಒತ್ತಿ.
04:14 ಪರ್ಯಾಯವಾಗಿ, ನಾವು File ಮೇಲೆ, ನಂತರ Save ಮೇಲೆ ಕ್ಲಿಕ್ ಮಾಡಬಹುದು.
04:20 ಈಗ, “Save as” ಎಂಬ ಒಂದು ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.

ಅದು, filename ಹಾಗೂ ಈ ಫೈಲ್ ಅನ್ನು ಎಲ್ಲಿ ಸೇವ್ ಮಾಡಬೇಕೆಂದು (location) ಕೇಳುತ್ತದೆ.

04:31 ನಾವು filename ಅನ್ನು "Hello.txt" ಎಂದು ಟೈಪ್ ಮಾಡೋಣ.
04:36 .txt ಇದು text file ನ ಡೀಫಾಲ್ಟ್ ಎಕ್ಸ್ಟೆನ್ಶನ್ (extension) ಆಗಿದೆ.
04:41 ಲೊಕೇಷನ್ ಗಾಗಿ, ನಾವು Desktop ಅನ್ನು ಆಯ್ಕೆ ಮಾಡೋಣ. ಕೆಳಗೆ Save ಬಟನ್ ಮೇಲೆ ಕ್ಲಿಕ್ ಮಾಡಿ.
04:49 ಈಗ ವಿಂಡೋದ ಮೇಲಿನ ಎಡಭಾಗದಲ್ಲಿರುವ ಸಣ್ಣ X ಐಕಾನ್ ಅನ್ನು ಕ್ಲಿಕ್ ಮಾಡಿ, ಈ gedit ವಿಂಡೋವನ್ನು ನಾವು ಮುಚ್ಚೋಣ.
04:57 Desktop ಮೇಲೆ, ನಾವು Hello.txt ಫೈಲ್ ಅನ್ನು ನೋಡಬಹುದು.

ಇದರ ಅರ್ಥ, ನಮ್ಮ ಟೆಕ್ಸ್ಟ್-ಫೈಲ್ ಅನ್ನು ಯಶಸ್ವಿಯಾಗಿ ಸೇವ್ ಮಾಡಲಾಗಿದೆ.

05:05 ಈ ಫೈಲ್ ಮೇಲೆ ಡಬಲ್- ಕ್ಲಿಕ್ ಮಾಡಿ ನಾನು ಅದನ್ನು ತೆರೆಯುತ್ತೇನೆ.
05:09 ಇಲ್ಲಿ ನೋಡಿ, ನಾವು ಬರೆದ ಟೆಕ್ಸ್ಟ್ ನೊಂದಿಗೆ ನಮ್ಮ ಟೆಕ್ಸ್ಟ್-ಫೈಲ್ ತೆರೆದಿದೆ.
05:14 gedit Text Editor ಬಗ್ಗೆ ಇಂಟರ್ನೆಟ್ ಬಹಳಷ್ಟು ಮಾಹಿತಿಯನ್ನು ಹೊಂದಿದೆ.
05:19 ಈ ವೆಬ್‌ಸೈಟ್‌ನಲ್ಲಿ, ಈ ವಿಷಯದ ಬಗ್ಗೆ ಸಹ ಕೆಲವು ಸ್ಪೋಕನ್ ಟ್ಯುಟೋರಿಯಲ್ ಗಳು ಲಭ್ಯವಿದೆ.
05:25 ಈ ಟೆಕ್ಸ್ಟ್-ಎಡಿಟರ್ ಅನ್ನು ಮುಚ್ಚೋಣ ಮತ್ತು ಇನ್ನೊಂದು ಅಪ್ಲಿಕೇಶನ್, ಎಂದರೆ Terminal ಅನ್ನು ನೋಡೋಣ.
05:32 ಇದಕ್ಕಾಗಿ ನಾವು ಮತ್ತೊಮ್ಮೆ Dash home ಗೆ ಹೋಗೋಣ.

ಈಗ, 'ಸರ್ಚ್ ಬಾರ್' ಫೀಲ್ಡ್ ನಲ್ಲಿ terminal ಎಂದು ಟೈಪ್ ಮಾಡಿ.

05:41 ಕೆಳಗೆ ಕಾಣಿಸುವ Terminal ಐಕಾನ್ ಮೇಲೆ ಕ್ಲಿಕ್ ಮಾಡಿ.
05:45 Terminal ವಿಂಡೋ ಸ್ಕ್ರೀನ್ ಮೇಲೆ ತೆರೆದುಕೊಳ್ಳುತ್ತದೆ.

ದಯವಿಟ್ಟು ಗಮನಿಸಿ: Terminal ಅನ್ನು ತೆರೆಯಲು, Ctrl+Alt+T ಶಾರ್ಟ್ಕಟ್ ಕೀಗಳಾಗಿವೆ.

05:55 'ಟರ್ಮಿನಲ್' ಅನ್ನು 'ಕಮಾಂಡ್ ಲೈನ್' ಎಂದು ಸಹ ಕರೆಯಲಾಗುತ್ತದೆ.

ಏಕೆಂದರೆ, ನೀವು ಇಲ್ಲಿಂದ ಕಂಪ್ಯೂಟರ್‌ಗೆ ಆದೇಶ ನೀಡಬಹುದು.

06:02 ವಾಸ್ತವವಾಗಿ, ಇದು GUI ಗಿಂತ ಹೆಚ್ಚು ಶಕ್ತಿಶಾಲಿಯಾಗಿದೆ.
06:06 ನಾನು ಮತ್ತೆ 'ಟರ್ಮಿನಲ್' ವಿಂಡೋಗೆ ಬದಲಾಯಿಸುತ್ತೇನೆ.
06:09 ಟರ್ಮಿನಲ್ ನ ಅನುಭವವನ್ನು ಪಡೆಯಲು, ಈಗ ನಾವು ಒಂದು ಸರಳವಾದ ಕಮಾಂಡ್ ಅನ್ನು ಟೈಪ್ ಮಾಡೋಣ.

'ls' ಎಂದು ಟೈಪ್ ಮಾಡಿ, Enter ಅನ್ನು ಒತ್ತಿ.

06:18 current directory ಯಲ್ಲಿಯ ಎಲ್ಲಾ ಫೈಲ್ ಗಳು ಮತ್ತು ಫೋಲ್ಡರ್‌ ಗಳ ಒಂದು ಲಿಸ್ಟ್ ಅನ್ನು ನೀವು ನೋಡಬಹುದು.
06:23 ಇಲ್ಲಿ, ಇದು Home folder ನಲ್ಲಿಯ ಫೈಲ್ ಗಳು ಮತ್ತು ಫೋಲ್ಡರ್‌ ಗಳನ್ನು ತೋರಿಸುತ್ತಿದೆ.
06:28 Home ಫೋಲ್ಡರ್ ಎಂದರೇನು? ಇದನ್ನು ನಾವು ಈ ಟ್ಯುಟೋರಿಯಲ್ ನಲ್ಲಿ ನಂತರ ನೋಡುತ್ತೇವೆ.
06:33 'ಟರ್ಮಿನಲ್' ನೊಂದಿಗೆ ನಾವು ಇನ್ನು ಹೆಚ್ಚು ಸಮಯ ಕಳೆಯುವುದಿಲ್ಲ.
06:37 ವಿಂಡೋದ ಮೇಲಿನ ಎಡಭಾಗದಲ್ಲಿರುವ ಸಣ್ಣ X ಐಕಾನ್ ಅನ್ನು ಕ್ಲಿಕ್ ಮಾಡಿ, terminal ಅನ್ನು ಮುಚ್ಚಿ.
06:43 ಈ ವೆಬ್‌ಸೈಟ್‌ನಲ್ಲಿನ Linux ಸ್ಪೋಕನ್ ಟ್ಯುಟೋರಿಯಲ್ ಸರಣಿಯಲ್ಲಿ, ‘ಟರ್ಮಿನಲ್ ಕಮಾಂಡ್’ ಗಳನ್ನು ಚೆನ್ನಾಗಿ ವಿವರಿಸಲಾಗಿದೆ.
06:49 ಈಗ, ನಾವು ಇನ್ನೊಂದು ಅಪ್ಲಿಕೇಶನ್, ಎಂದರೆ Firefox Web Browser ಅನ್ನು ನೋಡೋಣ.
06:55 ಮತ್ತೊಮ್ಮೆ, Dash home ಅನ್ನು ತೆರೆಯಿರಿ. ಸರ್ಚ್-ಬಾರ್ ನಲ್ಲಿ Firefox ಎಂದು ಟೈಪ್ ಮಾಡಿ.
07:01 Firefox Web Browser ಐಕಾನ್ ಮೇಲೆ ಕ್ಲಿಕ್ ಮಾಡಿ.
07:05 world wide web ಅನ್ನು ಆಕ್ಸೆಸ್ (access) ಮಾಡಲು, Firefox Web Browser ಅನ್ನು ಬಳಸಲಾಗುತ್ತದೆ.

ಈಗ Firefox browser ವಿಂಡೋ ತೆರೆದಿರುವುದನ್ನು ನಾವು ನೋಡಬಹುದು.

07:15 ನಾವು spoken tutorial ವೆಬ್ಸೈಟ್ ಗೆ ಹೋಗೋಣ.

ಇದಕ್ಕಾಗಿ, ಅಡ್ರೆಸ್-ಬಾರ್ ಮೇಲೆ ಕ್ಲಿಕ್ ಮಾಡಿ ಅಥವಾ ಕೀಬೋರ್ಡ್ ಮೇಲೆ F6 ಅನ್ನು ಒತ್ತಿ.

07:24 ಈಗ ನಾವು "spoken-tutorial.org" ಎಂದು ಟೈಪ್ ಮಾಡಿ, Enter ಅನ್ನು ಒತ್ತೋಣ.
07:31 ನೀವು ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೆ, ಸೂಚಿಸಲಾದ ವೆಬ್‌ಸೈಟ್‌ಗೆ 'ಫೈರ್‌ಫಾಕ್ಸ್', ಸಂಪರ್ಕವನ್ನು ಪಡೆಯುತ್ತದೆ.
07:37 ಬ್ರೌಸರ್ ನಲ್ಲಿ Spoken Tutorial Homepage ತೆರೆದುಕೊಳ್ಳುತ್ತದೆ.
07:41 ಈಮೊದಲು ವಿವರಿಸಿದಂತೆ ನಾವು ಇದನ್ನು ಮುಚ್ಚೋಣ ಮತ್ತು ಮುಂದಿನ ಅಪ್ಲಿಕೇಶನ್‌ ಗೆ ಹೋಗೋಣ.
07:47 ನಾವು ಮತ್ತೊಮ್ಮೆ Dash home ಗೆ ಹೋಗಿ, ಸರ್ಚ್-ಬಾರ್ ನಲ್ಲಿ office ಎಂದು ಟೈಪ್ ಮಾಡೋಣ.
07:53 ನೀವು Calc, Impress, Writer ಹಾಗೂ Draw ಗಳಂತಹ ವಿವಿಧ LibreOffice ಘಟಕಗಳನ್ನು ನೋಡುವಿರಿ.
08:01 Ubuntu Linux OS ನಲ್ಲಿ, LibreOffice ಡೀಫಾಲ್ಟ್ office ಅಪ್ಲಿಕೇಶನ್ ಆಗಿದೆ.
08:07 ಈ ಎಲ್ಲಾ ಘಟಕಗಳಿಗಾಗಿ ಅತ್ಯುತ್ತಮವಾದ ಟ್ಯುಟೋರಿಯಲ್ ಗಳು, 'ಸ್ಪೋಕನ್ ಟ್ಯುಟೋರಿಯಲ್' ವೆಬ್‌ಸೈಟ್‌ನಲ್ಲಿ ಲಭ್ಯವಿದೆ.
08:13 ಈಗ ನಾವು Video ಆಯ್ಕೆಯ ಬಗ್ಗೆ ತಿಳಿದುಕೊಳ್ಳೋಣ.
08:17 ಸರ್ಚ್-ಬಾರ್ ನಲ್ಲಿ video ಎಂದು ಟೈಪ್ ಮಾಡಿ.
08:20 ತೋರಿಸಲಾದ ಲಿಸ್ಟ್ ನಲ್ಲಿ, Videos ಎಂಬ ಒಂದು ಅಪ್ಲಿಕೇಶನ್ ಇದೆ.
08:25 ವೀಡಿಯೊಗಳು ಮತ್ತು ಹಾಡುಗಳನ್ನು ಪ್ಲೇ ಮಾಡಲು Videos ಅನ್ನು ಬಳಸಲಾಗುತ್ತದೆ. ಡೀಫಾಲ್ಟ್ ಆಗಿ, ಅದು open format ವೀಡಿಯೊ ಫೈಲ್ ಗಳನ್ನು ಮಾತ್ರ ಪ್ಲೇ ಮಾಡುತ್ತದೆ.
08:34 ನನ್ನ 'ಪೆನ್-ಡ್ರೈವ್' ನಿಂದ, ನಾನು ಒಂದು ಫೈಲ್ ಅನ್ನು ಪ್ಲೇ ಮಾಡುತ್ತೇನೆ.
08:38 ಈಗ ನನ್ನ ಮಷಿನ್ ನಲ್ಲಿ, ಪೆನ್-ಡ್ರೈವ್ ಅನ್ನು usb ಸ್ಲಾಟ್‌ ನಲ್ಲಿ ಸೇರಿಸುತ್ತಿದ್ದೇನೆ.

pen-drive ಫೋಲ್ಡರ್, ತಂತಾನೇ ತೆರೆದುಕೊಂಡಿದೆ.

08:47 ಅದು ತೆರೆಯದಿದ್ದರೆ, ನಾವು ಅದನ್ನು 'ಲಾಂಚರ್' ನಿಂದ ಆಕ್ಸೆಸ್ (access) ಮಾಡಬಹುದು.
08:52 ಲಾಂಚರ್ ನಲ್ಲಿ pen-drive ಐಕಾನ್ ಅನ್ನು ಗುರುತಿಸಿ.
08:56 ನಾವು ಇದರ ಮೇಲೆ ಕ್ಲಿಕ್ ಮಾಡಿದರೆ, ಇದು ಪೆನ್-ಡ್ರೈವ್ ನಲ್ಲಿ ಲಭ್ಯವಿರುವ ಫೈಲ್ ಗಳು ಮತ್ತು ಫೋಲ್ಡರ್ ಗಳನ್ನು ತೋರಿಸುತ್ತದೆ.
09:02 ಈಗ ಪ್ಲೇ ಮಾಡಲು ನಾನು big buck bunny.ogv ಎಂಬ ಮೂವೀ ಫೈಲ್ ಅನ್ನು ಆಯ್ಕೆ ಮಾಡುತ್ತೇನೆ.
09:08 ಇಲ್ಲಿ ನನ್ನ ಫೈಲ್ ಇದೆ. ಇದನ್ನು ತೆರೆಯಲು ನಾನು ಇದರ ಮೇಲೆ ಡಬಲ್-ಕ್ಲಿಕ್ ಮಾಡುವೆನು.
09:14 ಡೀಫಾಲ್ಟ್ ಆಗಿ, ಇದು Videos ನಲ್ಲಿ ತೆರೆಯುತ್ತದೆ.
09:17 ಈ ಮೂವಿ ತೋರಿಸುವುದನ್ನು ನಾವು ನಿಲ್ಲಿಸೋಣ.
09:20 Desktopಗೆ ಹೋಗಲು, Ctrl, Windows ಹಾಗೂ D ಕೀಗಳನ್ನು ಒತ್ತೋಣ.
09:26 ಈಗ ನಾವು ಈ Desktop ನ ಮೇಲೆ ಇನ್ನೂ ಕೆಲವು ಮುಖ್ಯವಾದ ವಿಷಯಗಳನ್ನು ನೋಡೋಣ.
09:31 Launcher ನಲ್ಲಿರುವ ಈ ಫೋಲ್ಡರ್ ಐಕಾನ್ ಅನ್ನು ಗಮನಿಸಿ. ಇದರ ಮೇಲೆ ಕ್ಲಿಕ್ ಮಾಡೋಣ.
09:37 Home ಫೋಲ್ಡರ್ ತೆರೆಯುತ್ತದೆ.
09:39 Ubuntu Linux ನಲ್ಲಿ, ಪ್ರತಿಯೊಬ್ಬ ಯೂಸರ್ ನು ಒಂದು ವಿಶಿಷ್ಟವಾದ Home ಫೋಲ್ಡರ್ ಅನ್ನು ಹೊಂದಿದ್ದಾನೆ.
09:44 'ಹೋಮ್ ಫೋಲ್ಡರ್' ಅನ್ನು ನಮ್ಮ ಮನೆ ಎಂದು ನಾವು ಹೇಳಬಹುದು. ಇಲ್ಲಿ ನಾವು ನಮ್ಮ ಫೈಲ್‌ ಮತ್ತು ಫೋಲ್ಡರ್‌ ಗಳನ್ನು ಸಂಗ್ರಹಿಸಬಹುದು.

ನಾವು ಅನುಮತಿ ಕೊಡದಿದ್ದರೆ, ಇತರರು ಅವುಗಳನ್ನು ನೋಡಲು ಸಾಧ್ಯವಿಲ್ಲ.

09:56 'ಫೈಲ್ ಪರ್ಮಿಷನ್ ಗಳ' ಬಗ್ಗೆ ಹೆಚ್ಚಿನ ಮಾಹಿತಿಯು Linux ಸ್ಪೋಕನ್-ಟ್ಯುಟೋರಿಯಲ್ ಸರಣಿಯಲ್ಲಿ ಲಭ್ಯವಿದೆ.
10:03 ನಾವು ಹಿಂದಿರುಗೋಣ.

ನಮ್ಮ Home ಫೋಲ್ಡರ್‌ ನಲ್ಲಿ, ನಾವು Desktop, Documents, Downloads ಗಳಂತಹ ಇತರ ಫೋಲ್ಡರ್‌ಗಳನ್ನು ನೋಡಬಹುದು.

10:14 Linux ನಲ್ಲಿ, ಎಲ್ಲವೂ ಫೈಲ್ ಆಗಿರುತ್ತದೆ.

ನಾವು Desktop ಫೋಲ್ಡರ್‌ ಮೇಲೆ ಡಬಲ್-ಕ್ಲಿಕ್ ಮಾಡಿ ಅದನ್ನು ತೆರೆಯೋಣ.

10:21 ಇಲ್ಲಿ, ನಾವು ಟೆಕ್ಸ್ಟ್-ಎಡಿಟರ್ ನಲ್ಲಿ ಸೇವ್ ಮಾಡಿದ ಅದೇ hello.txt ಫೈಲ್ ಅನ್ನು ನೋಡಬಹುದು.
10:28 ಆದ್ದರಿಂದ, ಈ ಫೋಲ್ಡರ್‌ ಹಾಗೂ Desktop ಒಂದೇ ಆಗಿವೆ.
10:32 ನಾನು ಈಗ ಈ ಫೋಲ್ಡರ್ ಅನ್ನು ಮುಚ್ಚುತ್ತೇನೆ.

ಈ ಟ್ಯುಟೋರಿಯಲ್ ನಲ್ಲಿರುವುದು ಇಷ್ಟೇ. ಸಂಕ್ಷಿಪ್ತವಾಗಿ,

10:39 ಈ ಟ್ಯುಟೋರಿಯಲ್ ನಲ್ಲಿ ನಾವು, ಉಬಂಟು ಡೆಸ್ಕ್-ಟಾಪ್, ಲಾಂಚರ್ ಮತ್ತು ಇದರಲ್ಲಿ ಲಭ್ಯವಿರುವ ಕೆಲವು ಐಕಾನ್ ಗಳು,
10:49 Calculator, Text Editor, Terminal, Firefox Web Browser, Videos ಗಳಂತಹ ಕೆಲವು ಸಾಮಾನ್ಯ ಅಪ್ಲಿಕೇಶನ್‌ಗಳು ಹಾಗೂ LibreOffice Suite ನ ಘಟಕಗಳು ಮತ್ತು Home ಫೋಲ್ಡರ್‌ ಬಗ್ಗೆಕಲಿತಿದ್ದೇವೆ.
11:04 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
11:12 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು, 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನು ಕೊಡುತ್ತದೆ.

ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.

11:25 ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ:

11:30 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆಯ್ಕೆ ಮಾಡಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. . ನಮ್ಮ ತಂಡದಿಂದ ಯಾರಾದರೂ ಉತ್ತರಿಸುತ್ತಾರೆ

11:40 ಸ್ಪೋಕನ್ ಟ್ಯುಟೋರಿಯಲ್ ಫೋರಮ್, ಈ ಟ್ಯುಟೋರಿಯಲ್ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇರುತ್ತದೆ.

ದಯವಿಟ್ಟು ಇದಕ್ಕೆ ಸಂಬಂಧಿಸದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.

11:50 ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಡಿಮೆ ಗೊಂದಲವಿದ್ದರೆ, ನಾವು ಈ ಚರ್ಚೆಗಳನ್ನು ಕಲಿಕೆಯ ವಸ್ತುವಿನಂತೆ ಬಳಸಬಹುದು.

11:59 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ:

12:11 ಈ ಸ್ಕ್ರಿಪ್ಟ್, "ಸ್ಪೋಕನ್ ಟ್ಯುಟೋರಿಯಲ್” ತಂಡದ ಕೊಡುಗೆಯಾಗಿದೆ.

ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು.

Contributors and Content Editors

Sandhya.np14