Difference between revisions of "Linux-AWK/C2/Variables-and-Operators-in-awk/Kannada"

From Script | Spoken-Tutorial
Jump to: navigation, search
(Created page with "{| border=1 | <center>'''Time'''</center> | <center>'''Narration'''</center> |- | 00:01 | '''Variables and operators in awk command''' ಎಂಬ ಈ ಸ್ಪೋಕನ್ ಟ...")
 
Line 19: Line 19:
 
|-
 
|-
 
| 00:20
 
| 00:20
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು '''Ubuntu Linux 16.04'''
+
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು '''Ubuntu Linux 16.04''' ಅನ್ನು ಬಳಸುತ್ತಿದ್ದೇನೆ.
ಅನ್ನು ಬಳಸುತ್ತಿದ್ದೇನೆ.
+
 
|-
 
|-
 
|00:26
 
|00:26
Line 72: Line 71:
 
|-
 
|-
 
| 01:58
 
| 01:58
| 'ಟರ್ಮಿನಲ್' ನ ಮೇಲೆ ಹೀಗೆ ಟೈಪ್ ಮಾಡಿ - '''awk space '''opening single quote opening curly brace small '''x '''equal to '''1 '''semicolon capital '''X '''equal to within double quotes capital '''A '''semicolon small '''a''' equal to within double quotes '''awk '''semicolon small '''b''' equal to within double quotes '''tutorial.'''  
+
| 'ಟರ್ಮಿನಲ್' ನ ಮೇಲೆ ಹೀಗೆ ಟೈಪ್ ಮಾಡಿ -'' '''awk space '''opening single quote opening curly brace small '''x '''equal to '''1 '''semicolon capital '''X '''equal to within double quotes capital '''A '''semicolon small '''a''' equal to within double quotes '''awk '''semicolon small '''b''' equal to within double quotes '''tutorial.'''''
 
'''Enter''' ಅನ್ನು ಒತ್ತಿ.
 
'''Enter''' ಅನ್ನು ಒತ್ತಿ.
 
|-
 
|-
Line 345: Line 344:
 
| 12:45
 
| 12:45
 
| ಆಪರೇಟರ್ ಗಳು,
 
| ಆಪರೇಟರ್ ಗಳು,
BEGIN ಹಾಗೂ END ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ.
+
'''BEGIN''' ಹಾಗೂ '''END''' ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ.
 
|-
 
|-
 
| 12:49
 
| 12:49

Revision as of 21:50, 16 July 2019

Time
Narration
00:01 Variables and operators in awk command ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು –

ಯೂಸರ್ ಡಿಫೈನ್ಡ್ ವೇರಿಯೆಬಲ್ ಗಳು,

00:12 ಆಪರೇಟರ್ ಗಳು,

BEGIN ಹಾಗೂ END ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿಯುವೆವು.

00:17 ನಾವು ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು Ubuntu Linux 16.04 ಅನ್ನು ಬಳಸುತ್ತಿದ್ದೇನೆ.
00:26 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ಈ ವೆಬ್‌ಸೈಟ್‌ನಲ್ಲಿಯ ಹಿಂದಿನ Linux ಟ್ಯುಟೋರಿಯಲ್ ಗಳನ್ನು ನೋಡಿರಬೇಕು.
00:33 ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಬಳಸುವ ‘ಬೇಸಿಕ್ ಆಪರೇಟರ್’ ಗಳ ಪರಿಚಯವಿರಬೇಕು.
00:41 ಇಲ್ಲದಿದ್ದರೆ, ದಯವಿಟ್ಟು ಸಂಬಂಧಿತ ಟ್ಯುಟೋರಿಯಲ್ ಗಳನ್ನು ನಮ್ಮ ವೆಬ್‌ಸೈಟ್‌ನಲ್ಲಿ ನೋಡಿ.
00:47 awk ಫಿಲ್ಟರ್ ಮತ್ತು ಪ್ರೋಗ್ರಾಮಿಂಗ್ ಭಾಷೆಯ ಸಾಮರ್ಥ್ಯವನ್ನು ಒಟ್ಟುಗೂಡಿಸುತ್ತದೆ.
00:52 ಹೀಗಾಗಿ, ಅದು ವೇರಿಯೆಬಲ್, ಕಾನ್ಸ್ಟಂಟ್ (constant), ಆಪರೇಟರ್ ಇತ್ಯಾದಿಗಳನ್ನು ಸಮರ್ಥಿಸುತ್ತದೆ.
00:58 ನಾವು awk ನಲ್ಲಿಯ 'ವೇರಿಯಬಲ್' ಅನ್ನು ನೋಡೋಣ.
01:02 'ವೇರಿಯಬಲ್'- ಇದು, ವ್ಯಾಲ್ಯೂವನ್ನು ಸೂಚಿಸುವ ಒಂದು ಐಡೆಂಟಿಫೈಯರ್ ಆಗಿದೆ.
01:07 Awk, 'ಯೂಸರ್ ಡಿಫೈನ್ಡ್ ವೇರಿಯೆಬಲ್' ಗಳು (user-defined variables) ಹಾಗೂ 'ಬಿಲ್ಟ್ ಇನ್ ವೇರಿಯೆಬಲ್' ಗಳು (built-in variables) ಎರಡನ್ನೂ ಬೆಂಬಲಿಸುತ್ತದೆ.
01:12 ನಾವು ಈ ಟ್ಯುಟೋರಿಯಲ್ ನಲ್ಲಿ 'ಯೂಸರ್ ಡಿಫೈನ್ಡ್ ವೇರಿಯೆಬಲ್' ಗಳ ಬಗ್ಗೆ ಕಲಿಯುವೆವು.
01:17 'ಯೂಸರ್ ಡಿಫೈನ್ಡ್ ವೇರಿಯೆಬಲ್' ಗಳಿಗೆ, ವೇರಿಯೆಬಲ್ ಡಿಕ್ಲೆರೇಶನ್ ಬೇಕಾಗಿಲ್ಲ.
01:22 ವೇರಿಯೆಬಲ್ ಗಳನ್ನು ಪ್ರಕಟವಾಗಿ ಇನಿಶಿಯಲೈಜ್ ಮಾಡಬೇಕಾಗಿಲ್ಲ.
01:26 Awk ಸ್ವತಃ ತಾನೇ ಅವುಗಳನ್ನು ಸೊನ್ನೆ ಅಥವಾ null ಸ್ಟ್ರಿಂಗ್ ಗೆ ಇನಿಶಿಯಲೈಜ್ ಮಾಡುತ್ತದೆ.
01:32 'ವೇರಿಯಬಲ್', ಒಂದು ಅಕ್ಷರದಿಂದ ಪ್ರಾರಂಭವಾಗಬೇಕು. ನಂತರ ಅಕ್ಷರಗಳು, ಅಂಕಿಗಳು ಮತ್ತು ಅಂಡರ್‌ಸ್ಕೋರ್‌ಗಳನ್ನು ಹೊಂದಿರಬೇಕು.

ವೇರಿಯೆಬಲ್' ಗಳು ಕೇಸ್-ಸೆನ್ಸಿಟಿವ್ ಆಗಿವೆ.

01:43 ಹೀಗಾಗಿ, ದೊಡ್ಡಕ್ಷರ “S” ಇರುವ Salary ಮತ್ತು ಸಣ್ಣಕ್ಷರ “s” ಇರುವ salary ಎರಡು ವಿಭಿನ್ನ ವೇರಿಯೆಬಲ್ ಗಳಾಗಿವೆ.
01:50 ಈಗ ಕೆಲವು ಉದಾಹರಣೆಗಳನ್ನು ನೋಡೋಣ.
01:53 CTRL, ALT ಮತ್ತು T ಕೀಗಳನ್ನು ಒತ್ತುವ ಮೂಲಕ 'ಟರ್ಮಿನಲ್' ಅನ್ನು ತೆರೆಯಿರಿ.
01:58 'ಟರ್ಮಿನಲ್' ನ ಮೇಲೆ ಹೀಗೆ ಟೈಪ್ ಮಾಡಿ - awk space opening single quote opening curly brace small x equal to 1 semicolon capital X equal to within double quotes capital A semicolon small a equal to within double quotes awk semicolon small b equal to within double quotes tutorial.

Enter ಅನ್ನು ಒತ್ತಿ.

02:25 ಹೀಗೆ ಟೈಪ್ ಮಾಡಿ: print small x, Enter ಅನ್ನು ಒತ್ತಿ.
02:29 print capital X , Enter ಅನ್ನು ಒತ್ತಿ.
02:34 print a , Enter ಅನ್ನು ಒತ್ತಿ.
02:37 print b , Enter ಅನ್ನು ಒತ್ತಿ.
02:40 print a space b , Enter ಅನ್ನು ಒತ್ತಿ.
02:44 print small x space b , Enter ಅನ್ನು ಒತ್ತಿ.
02:49 print small x plus capital X closing curly brace, closing single quote

ಮತ್ತು Enter ಅನ್ನು ಒತ್ತಿ.

02:57 ನಾವು filename ಅನ್ನು ಕೊಟ್ಟಿಲ್ಲ. ಆದ್ದರಿಂದ, awk ಗೆ, 'ಸ್ಟ್ಯಾಂಡರ್ಡ್ ಇನ್ಪುಟ್' ನಿಂದ ಇನ್ಪುಟ್ ಅನ್ನು ಕೊಡಬೇಕಾಗುತ್ತದೆ.
03:03 ಆದ್ದರಿಂದ, ನಾವು ಯಾವುದೇ ಅಕ್ಷರವನ್ನು ಟೈಪ್ ಮಾಡಬಹುದು. ಇಲ್ಲಿ a ಎನ್ನಿ. ನಂತರ Enter ಅನ್ನು ಒತ್ತಿ.
03:10 ಈ ಉದಾಹರಣೆಯು ಕೆಲವು ವಿಷಯಗಳನ್ನು ತೋರಿಸುತ್ತದೆ.

ವೇರಿಯೆಬಲ್ ಗಳನ್ನು ಸಂಖ್ಯೆಯಿಂದ ಇನಿಶಿಯಲೈಜ್ ಮಾಡಬಹುದು.

03:18 ಇದನ್ನು ಒಂದೇ ಅಕ್ಷರ ಅಥವಾ ಸ್ಟ್ರಿಂಗ್ ನೊಂದಿಗೆ ಸಹ ಇನಿಶಿಯಲೈಜ್ ಮಾಡಬಹುದು.
03:23 ವ್ಯಾಲ್ಯೂ, ಒಂದು ಅಕ್ಷರ ಅಥವಾ ಸ್ಟ್ರಿಂಗ್ ಆಗಿದ್ದರೆ, ಅದನ್ನು 'ಡಬಲ್ ಕೋಟ್ಸ್' ನಲ್ಲಿರಿಸಿ ವೇರಿಯೇಬಲ್ ಅನ್ನು ಇನಿಶಿಯಲೈಜ್ ಮಾಡಲಾಗುತ್ತದೆ.
03:31 ನಾವು ವೇರಿಯೇಬಲ್ ಗಳ ವ್ಯಾಲ್ಯೂಗಳನ್ನು ನೋಡಬಹುದು.
03:35 ಗಮನಿಸಿ, ಸಣ್ಣ x ಹಾಗೂ ದೊಡ್ಡ X ಗಳನ್ನು ವಿಭಿನ್ನ ವೇರಿಯೇಬಲ್ ಗಳೆಂದು ಪರಿಗಣಿಸಲಾಗುತ್ತದೆ.
03:41 ವೇರಿಯೇಬಲ್ ಗಳು ಕೇಸ್-ಸೆನ್ಸಿಟಿವ್ ಎಂದು ಇದು ತೋರಿಸುತ್ತದೆ.
03:45 ಅಲ್ಲದೆ, ಎರಡು ಸ್ಟ್ರಿಂಗ್ ಗಳನ್ನು ಹೇಗೆ ಜೋಡಿಸಬಹುದೆಂದು (concatenate) ಇದು ತೋರಿಸುತ್ತದೆ.
03:50 ಇಲ್ಲಿ, ಸಣ್ಣ a ಹಾಗೂ ಸಣ್ಣ b ಈ ವೇರಿಯೇಬಲ್ ಗಳನ್ನು ಜೋಡಿಸಲಾಗಿದೆ.
03:55 ಆದ್ದರಿಂದ, 'ಸ್ಟ್ರಿಂಗ್ ಕಾಂಕ್ಯಾಟಿನೇಶನ್ ಆಪರೇಟರ್' (string concatenation operator) ಒಂದು ಸ್ಪೇಸ್ ಮಾತ್ರ ಆಗಿದೆ.
04:00 ಹೀಗೆಯೇ, ನಾವು ಸಂಖ್ಯೆ ಸಣ್ಣ x ಹಾಗೂ ಸ್ಟ್ರಿಂಗ್ b ಗಳನ್ನು ಜೋಡಿಸಿದಾಗ, x ಸ್ಟ್ರಿಂಗ್ ಗೆ ತಂತಾನೇ ಪರಿವರ್ತನೆ ಆಗುತ್ತದೆ.

ಮತ್ತು, ಜೋಡಿಸಲಾದ ಔಟ್ಪುಟ್, 1tutorial (1 ಟ್ಯುಟೋರಿಯಲ್) ಎಂದಾಗುತ್ತದೆ.

04:13 ಈ ಸ್ಟ್ರಿಂಗ್, ತಂತಾನೇ ಏಕೆ ಪರಿವರ್ತನೆ ಆಗುತ್ತದೆ?
04:16 ಏಕೆಂದರೆ, awk, ಇಲ್ಲಿ x ಮತ್ತು b ಗಳ ನಡುವೆ, 'ಸ್ಟ್ರಿಂಗ್ ಕಾಂಕ್ಯಾಟಿನೇಶನ್ ಆಪರೇಟರ್' ಆದ ಸ್ಪೇಸ್ ಅನ್ನು ನೋಡುತ್ತದೆ.
04:25 ಈಗ, small x plus capital X ನ ಔಟ್ಪುಟ್ ಅನ್ನು ನೋಡಿ.

ಇಲ್ಲಿ, arithmetic operator plus ಇದೆ.

04:33 ಹೀಗಾಗಿ X, ತಂತಾನೇ ಸೊನ್ನೆಗೆ ಬದಲಾಗಿದೆ ಮತ್ತು ಸಂಕಲನದ ಔಟ್ಪುಟ್ ಸಂಖ್ಯೆ 1 ಆಗಿದೆ.
04:42 ಇಲ್ಲಿಯವರೆಗೆ, ಕೆಲವು ಆಪರೇಟರ್‌ಗಳನ್ನು ನೋಡಿದ್ದೇವೆ. ನಾವು ಬಳಸಬಹುದಾದ ಇತರ ಆಪರೇಟರ್‌ಗಳನ್ನು ನೋಡೋಣ.
04:49 ಎಕ್ಸ್ಪ್ರೆಶನ್ ಗಳಲ್ಲಿ (expression) ವಿವಿಧ ಆಪರೇಟರ್‌ಗಳನ್ನು ಬಳಸಬಹುದು.
04:53 ದಯವಿಟ್ಟು ಇಲ್ಲಿ ವೀಡಿಯೊವನ್ನು ನಿಲ್ಲಿಸಿ ಮತ್ತು ಇಲ್ಲಿ ವಿವರಿಸಲಾದ ಎಲ್ಲಾ ಆಪರೇಟರ್‌ಗಳನ್ನು ನೋಡಿ.
04:58 ಈ ಬೇಸಿಕ್ ಆಪರೇಟರ್‌ಗಳ ಪರಿಚಯ ನಿಮಗೆ ಇದೆ ಎಂದು ನಾನು ಭಾವಿಸುತ್ತೇನೆ.
05:02 ಇಲ್ಲದಿದ್ದರೆ, C and C++ ಸರಣಿಯಲ್ಲಿ operators ಬಗ್ಗೆ ಇರುವ ಟ್ಯುಟೋರಿಯಲ್ ಗಳಿಗಾಗಿ, ದಯವಿಟ್ಟು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ.
05:09 ಈ ಎಲ್ಲಾ ಆಪರೇಟರ್‌ಗಳ ಕಾರ್ಯವನ್ನು ನಾನು ವಿವರವಾಗಿ ಚರ್ಚಿಸುವುದಿಲ್ಲ.
05:14 'ಸ್ಟ್ರಿಂಗ್ ಮ್ಯಾಚಿಂಗ್ ಆಪರೇಟರ್' ಮಾತ್ರ ಇದಕ್ಕೆ ಹೊರತಾಗಿದೆ. ಇದು ನಿಮಗೆ ಹೊಸದಾಗಿರಬಹುದು.

ಇದನ್ನು ಒಂದು ಉದಾಹರಣೆಯೊಂದಿಗೆ ತಿಳಿದುಕೊಳ್ಳೋಣ.

05:23 Code files ಲಿಂಕ್ ನಲ್ಲಿ, awkdemo.txt ಹೆಸರಿನ ಒಂದು ಫೈಲ್ ಅನ್ನು ಒದಗಿಸಲಾಗಿದೆ.

ದಯವಿಟ್ಟು ಅದನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಡೌನ್‌ಲೋಡ್ ಮಾಡಿ.

05:31 'ಟರ್ಮಿನಲ್' ಗೆ ಬದಲಾಯಿಸಿ.

Ctrl ಮತ್ತು D ಕೀಗಳನ್ನು ಒತ್ತಿ ಹಿಂದಿನ ಪ್ರಕ್ರಿಯೆಯನ್ನು ಕೊನೆಗೊಳಿಸೋಣ.

05:38 'ಟರ್ಮಿನಲ್' ಅನ್ನು ಖಾಲಿ ಮಾಡುತ್ತೇನೆ.
05:41 ಈಗ, cd ಕಮಾಂಡ್ ಅನ್ನು ಬಳಸಿಕೊಂಡು, ನೀವು awkdemo.txt ಫೈಲ್ ಅನ್ನು ಸೇವ್ ಮಾಡಿರುವ ಫೋಲ್ಡರ್‌ಗೆ ಹೋಗಿ.
05:48 ಈಗ ನಾವು ಈ ಫೈಲ್ ಅನ್ನು ನೋಡೋಣ.
05:52 ಉತ್ತೀರ್ಣರಾದ, ಆದರೆ 80 ಕ್ಕಿಂತ ಕಡಿಮೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ನಮಗೆ ಹುಡುಕಬೇಕಾಗಿದೆ ಎನ್ನೋಣ.
05:58 ಈ ಸಂದರ್ಭದಲ್ಲಿ, ನಾವು ಎರಡು ವಿಭಿನ್ನ ಫೀಲ್ಡ್ ಗಳನ್ನು ಹೋಲಿಸಬೇಕಾಗಿದೆ.
06:02 ಇಂತಹ ಸಂದರ್ಭಗಳಲ್ಲಿ, ನಾವು 'awk' ನ ರಿಲೇಶನಲ್ ಆಪರೇಟರ್‌ಗಳನ್ನು ಬಳಸಬಹುದು.
06:07 ಈ ಆಪರೇಟರ್‌ಗಳು ಸ್ಟ್ರಿಂಗ್ ಗಳು ಮತ್ತು ಸಂಖ್ಯೆಗಳು ಎರಡನ್ನೂ ಹೋಲಿಸಬಹುದು.
06:12 'ಟರ್ಮಿನಲ್' ನಲ್ಲಿ ಹೀಗೆ ಟೈಪ್ ಮಾಡಿ:

awk space hyphen capital F within double quotes vertical bar space within single quotes dollar 5 equal to equal to within double quotes Pass space ampersand ampersand space dollar 4 less than 80 space within curly braces print space plus plus x comma dollar 2 comma dollar 4 comma dollar 5 space awkdemo.txt ಮತ್ತು Enter ಅನ್ನು ಒತ್ತಿ.

06:54 ಈ ಕಮಾಂಡ್ ಹಲವಾರು ವಿಷಯಗಳನ್ನು ತೋರಿಸುತ್ತದೆ.

ಮೊದಲನೆಯದಾಗಿ, ನಾವು ಒಂದು 'ಸ್ಟ್ರಿಂಗ್' ಅನ್ನು ಐದನೇ ಫೀಲ್ಡ್ ನೊಂದಿಗೆ ಹೋಲಿಸುತ್ತೇವೆ.

07:01 ಎರಡನೆಯದಾಗಿ, ನಾವು ನಾಲ್ಕನೇ ಫೀಲ್ಡ್ ಅನ್ನು ಸಂಖ್ಯೆಯೊಂದಿಗೆ ಮಾತ್ರ ಹೋಲಿಸುತ್ತೇವೆ.
07:06 ಮೂರನೆಯದಾಗಿ, ಆಂಪರ್‌ಸಂಡ್ ಆಪರೇಟರ್ ಅನ್ನು ಬಳಸಿ, ಎರಡು ಅಥವಾ ಹೆಚ್ಚು ಹೋಲಿಕೆಗಳನ್ನು ನಾವು ಜೋಡಿಸಬಹುದು ಎಂದು ನೋಡುತ್ತೇವೆ.
07:13 ನಿರ್ದಿಷ್ಟ ಸಂಖ್ಯೆಗಳು ಅಥವಾ ಸ್ಟ್ರಿಂಗ್ ಗಳ ಬದಲಿಗೆ, ನಾವು 'ರೆಗ್ಯುಲರ್ ಎಕ್ಸ್ಪ್ರೆಶನ್' ಗಳನ್ನು (regular expression) ಸಹ ಹೋಲಿಸಬಹುದು.
07:19 ಸ್ಲೈಡ್‌ನಲ್ಲಿ ನಾವು ನೋಡಿದಂತೆ, ಈ ಉದ್ದೇಶಕ್ಕಾಗಿ ನಾವು 'ಟಿಲ್ಡೆ' ಮತ್ತು ‘ಉದ್ಗಾರವಾಚಕ ಚಿಹ್ನೆ, ಟಿಲ್ಡೆ' ಆಪರೇಟರ್‌ಗಳನ್ನು ಹೊಂದಿದ್ದೇವೆ.
07:27 ಈಗ, ಉತ್ತೀರ್ಣರಾದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳನ್ನು ನಮಗೆ ಹುಡುಕಬೇಕಾಗಿದೆ ಎಂದುಕೊಳ್ಳಿ.
07:32 “computer”, ಸಣ್ಣ ಮತ್ತು ದೊಡ್ಡ C ಅನ್ನು ಹೊಂದಿರಬಹುದು. ಆದ್ದರಿಂದ, ನಾವು 'ರೆಗ್ಯುಲರ್ ಎಕ್ಸ್ಪ್ರೆಶನ್' ಅನ್ನು ಬಳಸುತ್ತೇವೆ.
07:40 ನಾವು ಹೀಗೆ ಟೈಪ್ ಮಾಡುತ್ತೇವೆ -

awk space hyphen capital F within double quotes pipe symbol space within single quote dollar 5 equal to equal to within double quotes Pass ampersand ampersand space dollar 3 tilde slash within square brackets small c capital C computers slash space within curly braces print space plus plus small x comma dollar 2 comma dollar 3 comma dollar 5 space awkdemo.txt ಮತ್ತು Enter ಅನ್ನು ಒತ್ತಿ.

08:24 ನಾವು ಹೋಲಿಕೆಯನ್ನು ನಿರಾಕರಿಸಲು ಬಯಸಿದರೆ, exclamation tilde ಆಪರೇಟರ್ ಅನ್ನು ಬಳಸಿ ನಾವು ಇದನ್ನು ಮಾಡಬಹುದು.
08:30 ಉತ್ತೀರ್ಣರಾಗಿರುವ ಎಲ್ಲಾ ನಾನ್-ಕಂಪ್ಯೂಟರ್ ವಿದ್ಯಾರ್ಥಿಗಳ ಪಟ್ಟಿಯು ಈಗ ನಮಗೆ ಬೇಕಾಗಿದೆ ಎಂದುಕೊಳ್ಳಿ.
08:35 ಹಿಂದಿನ ಕಮಾಂಡ್ ಅನ್ನು ಪಡೆಯಲು, ಆಪ್-ಆರೋವನ್ನು (up arrow) ಬಳಸಿ.
08:39 dollar 3 ಪಕ್ಕದಲ್ಲಿ, ಉದ್ಗಾರವಾಚಕ (exclamation) ಚಿಹ್ನೆಯನ್ನು ಸೇರಿಸಿ ಮತ್ತು Enter ಅನ್ನು ಒತ್ತಿ.
08:47 ನಂತರ, ಇದೇ ಫೈಲ್‌ನಲ್ಲಿಯ ಖಾಲಿ ಸಾಲುಗಳ (blank lines) ಸಂಖ್ಯೆಯನ್ನು ಎಣಿಸೋಣ.
08:52 ಫೈಲ್ ಅನ್ನು ತೆರೆಯಿರಿ ಮತ್ತು ಇಲ್ಲಿ ಎಷ್ಟು ಖಾಲಿ ಸಾಲುಗಳಿವೆ ಎಂದು ನೋಡಿ.

ಇದು 3 ಖಾಲಿ ಸಾಲುಗಳನ್ನು ಹೊಂದಿದೆ.

09:00 ಈಗ, awk ಅನ್ನು ಬಳಸಿ ಖಾಲಿ ಸಾಲುಗಳ ಸಂಖ್ಯೆಯನ್ನು ಎಣಿಸಲು, ಹೀಗೆ ಟೈಪ್ ಮಾಡಿ:

awk space within single quote within front slash caret symbol dollar space within curly braces x equal to x plus 1 semicolon space print x space awkdemo.txt Enter ಅನ್ನು ಒತ್ತಿ.

09:26 ಕೊನೆಯ ಉತ್ತರವಾಗಿ ನಮಗೆ 3 ಸಿಕ್ಕಿದೆ.
09:30 ಕ್ಯಾರಟ್ ಚಿಹ್ನೆಯು ಸಾಲಿನ ಆರಂಭವನ್ನು ಮತ್ತು ಡಾಲರ್ ಚಿಹ್ನೆಯು ಸಾಲಿನ ಅಂತ್ಯವನ್ನು ಸೂಚಿಸುತ್ತದೆ.
09:37 ಆದ್ದರಿಂದ, ಒಂದು ಖಾಲಿ ಸಾಲನ್ನು 'ರೆಗ್ಯುಲರ್ ಎಕ್ಸ್ಪ್ರೆಶನ್- ಕ್ಯಾರೆಟ್-ಡಾಲರ್' ನಿಂದ ಮ್ಯಾಚ್ ಮಾಡಲಾಗುತ್ತದೆ.
09:43 ಗಮನಿಸಿ, ನಾವು x ನ ವ್ಯಾಲ್ಯೂವನ್ನು ಇನಿಶಿಯಲೈಸ್ ಮಾಡಿಲ್ಲ. Awk , x ಅನ್ನು ಆರಂಭಿಕ ವ್ಯಾಲ್ಯೂ ಸೊನ್ನೆಗೆ ಇನಿಶಿಯಲೈಸ್ ಮಾಡಿದೆ.
09:51 ಈ ಕಮಾಂಡ್, ನಮಗೆ ಖಾಲಿ ಸಾಲುಗಳ ಸಂಖ್ಯೆಯನ್ನು ಕೊಡುತ್ತಿರುತ್ತದೆ.

ಏಕೆಂದರೆ, ಪ್ರತಿ ಬಾರಿಯೂ ಒಂದು ಖಾಲಿ ಸಾಲು ಕಂಡುಬಂದಾಗ, x ಅನ್ನು ಹೆಚ್ಚಿಸಿ ನಂತರ ಪ್ರಿಂಟ್ ಮಾಡಲಾಗುತ್ತದೆ.

10:02 ನಮ್ಮ ಕೊನೆಯ ಕಮಾಂಡ್ ನಲ್ಲಿ, ಖಾಲಿ ಸಾಲುಗಳ ಚಾಲನೆಯಲ್ಲಿರುವ ಎಣಿಕೆಯನ್ನು ನೋಡಿದ್ದೇವೆ.

ಆದರೆ ನಮಗೆ ಖಾಲಿ ಸಾಲುಗಳ ಒಟ್ಟು ಸಂಖ್ಯೆಯನ್ನು ಮಾತ್ರ ಪ್ರಿಂಟ್ ಮಾಡಬೇಕಾಗಿದೆ ಎಂದುಕೊಳ್ಳಿ.

10:12 ಇಡೀ ಫೈಲ್ ಅನ್ನು ಕ್ರಮಿಸಿದ ನಂತರ, ನಮಗೆ x ಅನ್ನು ಒಮ್ಮೆ ಮಾತ್ರ ಪ್ರಿಂಟ್ ಮಾಡಬೇಕಾಗಿದೆ.
10:19 ಔಟ್‌ಪುಟ್ ಎಂದರೆ ಏನು ಎಂದು ಹೇಳುವ ಶೀರ್ಷಿಕೆಯನ್ನು ಕೊಡಲು ಸಹ ನಾವು ಬಯಸಬಹುದು.
10:25 ಅಂತಹ ಅವಶ್ಯಕತೆಗಳಿಗಾಗಿ awk, BEGIN ಮತ್ತು END ವಿಭಾಗಗಳನ್ನು ಒದಗಿಸುತ್ತದೆ.
10:30 BEGIN ವಿಭಾಗವು, ಪ್ರಿ-ಪ್ರೊಸೆಸ್ಸಿಂಗ್ ಗಾಗಿ ಪ್ರೊಸೀಜರ್ ಗಳನ್ನು ಒಳಗೊಂಡಿದೆ.
10:34 ಮೇನ್ ಇನ್ಪುಟ್ ಲೂಪ್ ಅನ್ನು ಎಕ್ಸೀಕ್ಯೂಟ್ ಮಾಡುವ ಮೊದಲು, ಈ ವಿಭಾಗವನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ.
10:40 END ವಿಭಾಗವು, ಪೋಸ್ಟ್-ಪ್ರೊಸೆಸ್ಸಿಂಗ್ ಗಾಗಿ ಪ್ರೊಸೀಜರ್ ಗಳನ್ನು ಒಳಗೊಂಡಿರಬಹುದು.
10:45 ‘ಮೇನ್ ಇನ್ಪುಟ್ ಲೂಪ್’ ಕೊನೆಗೊಂಡ ನಂತರ, ಈ ವಿಭಾಗವನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ.

BEGIN ಹಾಗೂ END ಪ್ರೊಸೀಜರ್ ಗಳು ಐಚ್ಛಿಕವಾಗಿವೆ.

10:55 ನಾವು ಇದನ್ನು ಹೇಗೆ ಮಾಡಬೇಕೆಂದು ಕಲಿಯೋಣ.

ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ: awk space opening single quote BEGIN in caps within curly brace print space within double quotes The number of empty lines in awkdemo are , Enter ಅನ್ನು ಒತ್ತಿ.

11:14 within front slash caret symbol dollar symbol space within curly braces x equal to x plus 1

Enter ಅನ್ನು ಒತ್ತಿ.

11:26 end space within curly braces print space x close single quote space awkdemo.txt ಮತ್ತು Enter ಅನ್ನು ಒತ್ತಿ.
11:39 ನೋಡಿ, ನಮಗೆ ಬೇಕಾದ ಔಟ್‌ಪುಟ್ ಸಿಗಲಿಲ್ಲ!

ನಮಗೆ ಔಟ್ಪುಟ್ 3 ಎಂದು ಸಿಗಬೇಕು, ಏಕೆಂದರೆ ಫೈಲ್ ನಲ್ಲಿ ನಾವು 3 ಖಾಲಿ ಸಾಲುಗಳನ್ನು ಹೊಂದಿದ್ದೇವೆ.

11:48 ಇದು ಏಕೆ ಹೀಗಾಯಿತು? ವಾಸ್ತವವಾಗಿ, ನಾವು end ಅನ್ನು ಅಪ್ಪರ್-ಕೇಸ್ END ಎಂದು ಬರೆದಿರಬೇಕು.
11:54 ಆದ್ದರಿಂದ, ನಾವು ಕಮಾಂಡ್ ಅನ್ನು ಮಾರ್ಪಡಿಸೋಣ.
11:57 ಎಕ್ಸೀಕ್ಯೂಟ್ ಮಾಡಿದ ಹಿಂದಿನ ಕಮಾಂಡ್ ಅನ್ನು ಪಡೆಯಲು, 'ಟರ್ಮಿನಲ್' ನಲ್ಲಿ ಅಪ್-ಆರೋ ಕೀಯನ್ನು ಒತ್ತಿ.
12:03 ಈಗ ಲೋವರ್-ಕೇಸ್ end ಅನ್ನು, ಅಪ್ಪರ್-ಕೇಸ್ END ಗೆ ಬದಲಾಯಿಸಿ.

Enter ಅನ್ನು ಒತ್ತಿ.

12:11 ಈಗ ಖಾಲಿ ಸಾಲುಗಳ ಒಟ್ಟು ಸಂಖ್ಯೆಯನ್ನು ಔಟ್‌ಪುಟ್‌ನಲ್ಲಿ ತೋರಿಸಲಾಗಿದೆ.
12:16 ನಂತರ, ನಾವು 'awkdemo.txt' ಫೈಲ್‌ನಲ್ಲಿ ನೋಡಿದ ಎಲ್ಲ ವಿದ್ಯಾರ್ಥಿಗಳ ಸರಾಸರಿ ವೇತನವನ್ನು ಕಂಡುಹಿಡಿಯೋಣ.
12:24 ಅದನ್ನು ಪಡೆಯಲು, 'ಟರ್ಮಿನಲ್' ನಲ್ಲಿ ತೋರಿಸಿದಂತೆ ಕಮಾಂಡ್ ಅನ್ನು ಟೈಪ್ ಮಾಡಿ

ಮತ್ತು Enter ಅನ್ನು ಒತ್ತಿ. ನಮಗೆ ಬೇಕಾದ ಔಟ್ಪುಟ್ ಸಿಗುತ್ತದೆ.

12:35 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ,
12:40 ಈ ಟ್ಯುಟೋರಿಯಲ್ ನಲ್ಲಿ ನಾವು, awk ನಲ್ಲಿ:

ಯೂಸರ್ ಡಿಫೈನ್ಡ್ ವೇರಿಯೆಬಲ್ ಗಳು,

12:45 ಆಪರೇಟರ್ ಗಳು,

BEGIN ಹಾಗೂ END ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ.

12:49 ಒಂದು ಅಸೈನ್ಮೆಂಟ್:

ಕೊನೆಯ ಫೀಲ್ಡ್ ನ ವ್ಯಾಲ್ಯೂ 5000 ಕ್ಕಿಂತ ಹೆಚ್ಚಿರುವ ಮತ್ತು ವಿದ್ಯಾರ್ಥಿಯು Electrical department ಸೇರಿರುವ ಪ್ರತಿಯೊಂದು ಸಾಲನ್ನು ಪ್ರಿಂಟ್ ಮಾಡಿ.

13:00 ಔಟ್‌ಪುಟ್‌ನಲ್ಲಿ, ಎಲ್ಲ ವಿದ್ಯಾರ್ಥಿಗಳ ಸರಾಸರಿ ಅಂಕಗಳನ್ನು “Average marks” ಎಂಬ ಶೀರ್ಷಿಕೆಯೊಂದಿಗೆ ಪ್ರಿಂಟ್ ಮಾಡಿ.
13:07 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
13:14 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನು ಕೊಡುತ್ತದೆ.
13:23 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
13:27 ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ:

13:32 ನೀವು ಪ್ರಶ್ನೆಯನ್ನು ಹೊಂದಿರುವ ನಿಮಿಷ ಮತ್ತು ಸೆಕೆಂಡ್ ಅನ್ನು ಆಯ್ಕೆ ಮಾಡಿ.

ನಿಮ್ಮ ಪ್ರಶ್ನೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. ನಮ್ಮ ತಂಡದಿಂದ ಯಾರಾದರೂ ಉತ್ತರಿಸುತ್ತಾರೆ.

13:42 ಸ್ಪೋಕನ್ ಟ್ಯುಟೋರಿಯಲ್ ಫೋರಮ್, ಈ ಟ್ಯುಟೋರಿಯಲ್ ಬಗ್ಗೆ ನಿರ್ದಿಷ್ಟ ಪ್ರಶ್ನೆಗಳಿಗಾಗಿ ಇರುತ್ತದೆ.
13:47 ದಯವಿಟ್ಟು ಇದಕ್ಕೆ ಸಂಬಂಧಿಸದ ಮತ್ತು ಸಾಮಾನ್ಯ ಪ್ರಶ್ನೆಗಳನ್ನು ಪೋಸ್ಟ್ ಮಾಡಬೇಡಿ.
13:51 ಇದು ಗೊಂದಲವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕಡಿಮೆ ಗೊಂದಲವಿದ್ದರೆ, ನಾವು ಈ ಚರ್ಚೆಗಳನ್ನು ಕಲಿಕೆಯ ವಸ್ತುವಿನಂತೆ ಬಳಸಬಹುದು.

13:59 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

14:10 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14