Difference between revisions of "Linux-AWK/C2/Conditional-statements-in-awk/Kannada"

From Script | Spoken-Tutorial
Jump to: navigation, search
 
Line 168: Line 168:
 
| 05:54
 
| 05:54
 
| ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:  
 
| ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:  
''' awk''' ನಲ್ಲಿ '''if, else, else if ''' ಗಳಂತಹ ಕಂಡಿಶನಲ್ ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ:
+
''' awk''' ನಲ್ಲಿ '''if, else, else if ''' ಗಳಂತಹ ಕಂಡಿಶನಲ್ ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ.
 
|-
 
|-
 
| 06:05
 
| 06:05

Latest revision as of 10:38, 15 July 2019

Time
Narration
00:01 Conditional statements in awk ಎಂಬ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, awk ನಲ್ಲಿಯ if, else, else if ಗಳ ಬಗ್ಗೆ ಕಲಿಯುವೆವು.
00:15 ನಾವು ಇದನ್ನು ಕೆಲವು ಉದಾಹರಣೆಗಳ ಮೂಲಕ ಮಾಡುವೆವು.
00:19 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux 16.04 ಆಪರೇಟಿಂಗ್ ಸಿಸ್ಟಂ ಹಾಗೂ

gedit ಟೆಕ್ಸ್ಟ್-ಎಡಿಟರ್ 3.20.1 ಅನ್ನು ಬಳಸುತ್ತಿದ್ದೇನೆ.

00:32 ನಿಮ್ಮ ಆಯ್ಕೆಯ ಯಾವುದೇ ಟೆಕ್ಸ್ಟ್-ಎಡಿಟರ್ ಅನ್ನು ನೀವು ಬಳಸಬಹುದು.
00:36 ಈ ಟ್ಯುಟೋರಿಯಲ್ ಅನ್ನು ಅಭ್ಯಾಸ ಮಾಡಲು, ನೀವು ನಮ್ಮ ವೆಬ್‌ಸೈಟ್‌ನಲ್ಲಿಯ ಹಿಂದಿನ awk ಟ್ಯುಟೋರಿಯಲ್ ಗಳನ್ನು ನೋಡಿರಬೇಕು.
00:43 ನಿಮಗೆ C ಅಥವಾ C++ ನಂತಹ ಯಾವುದೇ ಪ್ರೋಗ್ರಾಮಿಂಗ್ ಭಾಷೆಯ ಪರಿಚಯವಿರಬೇಕು.
00:50 ಇಲ್ಲದಿದ್ದರೆ, ದಯವಿಟ್ಟು ನಮ್ಮ ವೆಬ್‌ಸೈಟ್‌ನಲ್ಲಿನ ಈ ಟ್ಯುಟೋರಿಯಲ್ ಗಳನ್ನು ನೋಡಿ.
00:56 ಈ ಟ್ಯುಟೋರಿಯಲ್ ನಲ್ಲಿ ಬಳಸಲಾದ ಫೈಲ್‌ಗಳು, ಇದೇ ಪೇಜ್ ನಲ್ಲಿನ Code Files ಲಿಂಕ್‌ನಲ್ಲಿ ಲಭ್ಯವಿರುತ್ತವೆ.

ದಯವಿಟ್ಟು ಅವುಗಳನ್ನು ಡೌನ್‌ಲೋಡ್ ಮಾಡಿ, ಎಕ್ಸ್ಟ್ರ್ಯಾಕ್ಟ್ (extract) ಮಾಡಿ.

01:06 'ಕಂಡಿಶನಲ್ ಸ್ಟೇಟ್ಮೆಂಟ್', ಕ್ರಿಯೆಯನ್ನು ಮಾಡುವ ಮೊದಲು, ಸೂಚಿಸಲಾದ ಕಂಡಿಶನ್ ಅನ್ನು ಪರೀಕ್ಷಿಸಲು (check) ನಮಗೆ ಅನುಮತಿಸುತ್ತದೆ.
01:14 awk ನಲ್ಲಿ if, else, else-if ಗಳಂತಹ ಕಂಡಿಶನಲ್ ಸ್ಟೇಟ್ಮೆಂಟ್ ಗಳು ಹೇಗೆ ಕೆಲಸ ಮಾಡುತ್ತವೆ ಎಂದು ತಿಳಿದುಕೊಳ್ಳೋಣ.
01:22 ಯಾವುದೇ ಪ್ರೋಗ್ರಾಮಿಂಗ್ ಭಾಷೆಯಲ್ಲಿ ಇರುವಂತೆ, if -else ಸ್ಟೇಟ್ಮೆಂಟ್ ನ ಸಿಂಟ್ಯಾಕ್ಸ್ ಹೀಗಿದೆ:
01:28 if conditional-expression1 is true, then perform action1.
01:34 else if conditional-expression2 is true, then perform action 2.
01:41 ಇದರ ನಂತರ, ಹಲವಾರು else if ಸ್ಟೇಟ್ಮೆಂಟ್ ಗಳು ಇರಬಹುದು.
01:46 ಕೊನೆಯಲ್ಲಿ, ನಿರ್ದಿಷ್ಟಪಡಿಸಿದ ಯಾವುದೇ conditional expressions true ಆಗಿಲ್ಲದಿದ್ದರೆ, ಆಗ action n ಅನ್ನು ಮಾಡಲಾಗುವುದು.
01:54 else ಮತ್ತು else-if ಭಾಗಗಳು ಐಚ್ಛಿಕವಾಗಿವೆ.

ನಾವು ಒಂದು ಉದಾಹರಣೆಯನ್ನು ನೋಡೋಣ.

02:02 ನಾವು ಮೊದಲು ಬಳಸಿದ awkdemo.txt ಫೈಲ್ ಅನ್ನೇ ಮತ್ತೆ ಬಳಸುತ್ತೇವೆ.
02:10 8000 ರೂಪಾಯಿಗಳಿಗಿಂತ ಹೆಚ್ಚು ಸ್ಟೈಪೆಂಡ್‌ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ, ನಾವು ಅದನ್ನು 50% ಹೆಚ್ಚಿಸಬೇಕಾಗಿದೆ (increment) ಎಂದುಕೊಳ್ಳಿ.
02:19 ಈ ಕಂಡಿಶನ್ ಗಾಗಿ, ನಾವು ಒಂದು awk ಫೈಲ್ ಅನ್ನು ಕ್ರಿಯೇಟ್ ಮಾಡೋಣ.
02:23 ಇಲ್ಲಿ ತೋರಿಸಿರುವಂತೆ, ಈ ಕೆಳಗಿನ ಕೋಡ್ ಅನ್ನು ಟೆಕ್ಸ್ಟ್-ಎಡಿಟರ್ ನಲ್ಲಿ ಟೈಪ್ ಮಾಡಿ ಮತ್ತು ಅದನ್ನು cond dot awk ಎಂದು ಸೇವ್ ಮಾಡಿ.

ನಾನು ಇದನ್ನು ಈಗಾಗಲೇ ಮಾಡಿದ್ದೇನೆ.

02:34 ಇದೇ ಫೈಲ್ Code Files ಲಿಂಕ್ ನಲ್ಲಿ ಸಹ ಲಭ್ಯವಿದೆ.
02:39 ಈ ಕೋಡ್‌ನಲ್ಲಿ, ನಾವು ‘ಕೋಲನ್’ ಅನ್ನು 'ಔಟ್‌ಪುಟ್ ಫೀಲ್ಡ್ ಸೆಪರೇಟರ್' ಎಂದು ಸೆಟ್ ಮಾಡಿದ್ದೇವೆ.
02:45 ಮೊದಲನೆಯ print ಸ್ಟೇಟ್ಮೆಂಟ್, ಫೀಲ್ಡ್ ಗಳ ಶೀರ್ಷಿಕೆಗಳನ್ನು ಪ್ರಿಂಟ್ ಮಾಡುತ್ತದೆ.
02:50 ನಂತರ if ಸ್ಟೇಟ್ಮೆಂಟ್, 6 ನೇ ಫೀಲ್ಡ್ ನಲ್ಲಿಯ ವ್ಯಾಲ್ಯೂ 8000 ಗಿಂತ ಹೆಚ್ಚಿದೆಯೇ ಎಂದು ಪರೀಕ್ಷಿಸುತ್ತದೆ.
02:58 ‘ಹೌದು’ ಎಂದಾದರೆ, ಎರಡನೆಯ print ಸ್ಟೇಟ್ಮೆಂಟ್ ಅನ್ನು ಎಕ್ಸೀಕ್ಯೂಟ್ ಮಾಡಲಾಗುತ್ತದೆ.
03:03 print ಸ್ಟೇಟ್ಮೆಂಟ್ ನ ಒಳಗಿರುವ $6 into 1.5, 6 ನೇ ಫೀಲ್ಡ್ ನಲ್ಲಿಯ ವ್ಯಾಲ್ಯೂವನ್ನು 1.5 ರಿಂದ ಗುಣಿಸುತ್ತದೆ.
03:13 ಈಗ ಈ ಕೋಡ್ ಅನ್ನು ನಾವು ಎಕ್ಸೀಕ್ಯೂಟ್ ಮಾಡೋಣ.
03:16 CTRL, ALT ಮತ್ತು T ಕೀಗಳನ್ನು ಒತ್ತುವ ಮೂಲಕ 'ಟರ್ಮಿನಲ್' ಅನ್ನು ತೆರೆಯಿರಿ.
03:22 cd ಕಮಾಂಡ್ ಅನ್ನು ಬಳಸಿಕೊಂಡು, Code Files ಅನ್ನು ನೀವು ಡೌನ್‌ಲೋಡ್ ಮಾಡಿ, ಎಕ್ಸ್ಟ್ರ್ಯಾಕ್ಟ್ (extract) ಮಾಡಿರುವ ಫೋಲ್ಡರ್‌ಗೆ ಹೋಗಿ.
03:29 ಈಗ, ಹೀಗೆ ಟೈಪ್ ಮಾಡಿ: awk space hyphen capital F pipe symbol within double quotes space hyphen small f space cond dot awk space awkdemo dot txt.

Enter ಅನ್ನುಒತ್ತಿ.

03:49 ಕಂಡಿಶನ್ ಅನ್ನು ಪೂರೈಸಿದ ಕೇವಲ ಒಬ್ಬ ವಿದ್ಯಾರ್ಥಿಯ ರೆಕಾರ್ಡ್ ಅನ್ನು, ಹೆಚ್ಚಿಸಿದ ಸ್ಟೈಪೆಂಡ್ ನೊಂದಿಗೆ ಔಟ್ಪುಟ್ ತೋರಿಸುತ್ತದೆ.
03:57 ಈಗ, ನಿಯಮವು ಬದಲಾಗಿದೆ ಎಂದುಕೊಳ್ಳಿ: 8000 ರೂಪಾಯಿಗಳಿಗಿಂತ ಹೆಚ್ಚು ಪಡೆಯುವ ವಿದ್ಯಾರ್ಥಿಗಳಿಗೆ ಸ್ಟೈಪೆಂಡ್ ನಲ್ಲಿ 50% ಇನ್ಕ್ರಿಮೆಂಟ್,
04:07 ಇಲ್ಲದಿದ್ದರೆ 30% ಇನ್ಕ್ರಿಮೆಂಟ್ (increment) ಕೊಡಿ.

ನಾವು ಅದನ್ನು ಹೇಗೆ ಮಾಡಬಹುದು?

04:13 ನಾವು ಒಂದು else ಬ್ಲಾಕ್ ಅನ್ನು ಸೇರಿಸಬೇಕಾಗಿದೆ.
04:16 ಮತ್ತೊಮ್ಮೆ cond dot awk ಫೈಲ್ ಗೆ ಬದಲಾಯಿಸಿ.
04:21 ನಾವು ಈ ಕೆಳಗಿನ ಕೋಡ್ ನ ಸಾಲನ್ನು ಸೇರಿಸೋಣ.

ಕೊನೆಯ, ಮುಚ್ಚುವ 'ಕರ್ಲಿ ಬ್ರೇಸ್' ಮೊದಲು, Enter ಅನ್ನುಒತ್ತಿ.

04:30 else , Enter ಅನ್ನುಒತ್ತಿ.
04:33 print space dollar 2 comma dollar 6 comma dollar 6 into 1.3
04:42 ಫೈಲ್ ಅನ್ನು ಸೇವ್ ಮಾಡಿ ಮತ್ತು ಟರ್ಮಿನಲ್ ಗೆ ಬದಲಾಯಿಸಿ.
04:46 ಹಿಂದೆ ಎಕ್ಸೀಕ್ಯೂಟ್ ಮಾಡಲಾದ ಕಮಾಂಡ್ ಅನ್ನು ಪಡೆಯಲು, ಅಪ್-ಆರೋ (up arrow) ಕೀಯನ್ನು ಒತ್ತಿ ಮತ್ತು Enter ಅನ್ನು ಒತ್ತಿ.
04:53 ಈಗ ಔಟ್ಪುಟ್ ಅನ್ನು ಗಮನಿಸಿ.

ಯೋಜನಾ ಚೌಧರಿ ಈಮೊದಲು 1000 ಪಡೆಯುತ್ತಿದ್ದಳು. ಈಗ ಅವಳಿಗೆ 1300 ಸಿಗುತ್ತಿದೆ.

05:04 ನಿಯಮಗಳನ್ನು ಮತ್ತೆ ಬದಲಾಯಿಸೋಣ.

8000 ರೂಪಾಯಿಗಳಿಗಿಂತ ಹೆಚ್ಚು ಪಡೆಯುತ್ತಿರುವ ವಿದ್ಯಾರ್ಥಿಗೆ 50% ಇನ್ಕ್ರಿಮೆಂಟ್,

05:13 4000 ರೂಪಾಯಿಗಳಿಗಿಂತ ಹೆಚ್ಚು ಪಡೆಯುತ್ತಿರುವ ವಿದ್ಯಾರ್ಥಿಗೆ 40% ಇನ್ಕ್ರಿಮೆಂಟ್,

ಇಲ್ಲದಿದ್ದರೆ 30% ಇನ್ಕ್ರಿಮೆಂಟ್ ಕೊಡಿ.

05:23 ಕೋಡ್‌ಗೆ ಬದಲಾಯಿಸಿ. ತೋರಿಸಿರುವಂತೆ ಕೋಡ್ ಅನ್ನು ಅಪ್ಡೇಟ್ ಮಾಡಿ.
05:29 ಫೈಲ್ ಅನ್ನು ಸೇವ್ ಮಾಡಿ ಮತ್ತು ಟರ್ಮಿನಲ್ ಗೆ ಬದಲಾಯಿಸಿ.
05:33 ನಾನು ಟರ್ಮಿನಲ್ ಅನ್ನು ಖಾಲಿ ಮಾಡುತ್ತೇನೆ.
05:36 ಈಗ, ಹಿಂದೆ ಎಕ್ಸೀಕ್ಯೂಟ್ ಮಾಡಲಾದ ಕಮಾಂಡ್ ಅನ್ನು ಪಡೆಯಲು, ಅಪ್-ಆರೋ (up arrow) ಕೀಯನ್ನು ಒತ್ತಿ ಮತ್ತು Enter ಅನ್ನು ಒತ್ತಿ.
05:44 ಈ ಬಾರಿ, ವಿದ್ಯಾರ್ಥಿ ಮೀರಾ ನಾಯರ್ 40% ಹೆಚ್ಚಳವನ್ನು ಪಡೆದಿರುವುದನ್ನು ಗಮನಿಸಿ.
05:51 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
05:54 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:

awk ನಲ್ಲಿ if, else, else if ಗಳಂತಹ ಕಂಡಿಶನಲ್ ಸ್ಟೇಟ್ಮೆಂಟ್ ಗಳ ಬಗ್ಗೆ ಕಲಿತಿದ್ದೇವೆ.

06:05 ಒಂದು ಅಸೈನ್ಮೆಂಟ್:

ಈ ನಿಯಮಗಳ ಪ್ರಕಾರ ಗ್ರೇಡ್ ಗಳನ್ನು ಕೊಡಿ: mark 90 ಕ್ಕಿಂತ ಹೆಚ್ಚು ಅಥವಾ ಸಮ ಇದ್ದರೆ, ಗ್ರೇಡ್ A ಆಗಿರುತ್ತದೆ.

06:15 mark 80 ಕ್ಕಿಂತ ಹೆಚ್ಚು ಅಥವಾ ಸಮ ಇದ್ದು, 90 ಕ್ಕಿಂತ ಕಡಿಮೆ ಇದ್ದರೆ, ಗ್ರೇಡ್ B,
06:23 mark 70 ಕ್ಕಿಂತ ಹೆಚ್ಚು ಅಥವಾ ಸಮ ಇದ್ದು, 80 ಕ್ಕಿಂತ ಕಡಿಮೆ ಇದ್ದರೆ, ಗ್ರೇಡ್ C,
06:30 mark 60 ಕ್ಕಿಂತ ಹೆಚ್ಚು ಅಥವಾ ಸಮ ಇದ್ದು, 70 ಕ್ಕಿಂತ ಕಡಿಮೆ ಇದ್ದರೆ, ಗ್ರೇಡ್ D,

ಇಲ್ಲದಿದ್ದರೆ ಗ್ರೇಡ್ F ಆಗಿರುತ್ತದೆ.

06:41 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋ, “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
06:49 “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರವನ್ನು ಕೊಡುತ್ತದೆ.
06:58 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
07:02 ಈ 'ಸ್ಪೋಕನ್ ಟ್ಯುಟೋರಿಯಲ್' ನಲ್ಲಿ ನಿಮಗೆ ಪ್ರಶ್ನೆಗಳಿವೆಯೇ?

ದಯವಿಟ್ಟು ಈ ಸೈಟ್ ಗೆ ಭೆಟ್ಟಿಕೊಡಿ:

07:08 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.

ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.

07:20 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14