LibreOffice-Suite-Writer/C2/Typing-text-and-basic-formatting/Kannada

From Script | Spoken-Tutorial
Revision as of 14:58, 8 March 2013 by Sneha (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search

Resources for recording Typing text and Basic Formatting


Time NARRATION
00:01 ಲಿಬ್ರೆ ಆಫೀಸ್ ರೈಟರ್ ನ ಟೈಪಿಂಗ್ ಟೆಕ್ಸ್ಟ್ ಮತ್ತು ಬೇಸಿಕ್ ಫಾರ್ಮೆಟಿಂಗ್ ಸ್ಪೋಕೇನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
00:07 ಈ ಬೋಧನೆಯಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ.
00:10 ರೈಟರ್ ನಲ್ಲಿ ಅಲೈನಿಂಗ್ ಟೆಕ್ಸ್ಟ್
00:12 ಬುಲೆಟ್ಸ್ ಮತ್ತು ನಮ್ ಬರಿಂಗ್
00:14 ರೈಟರ್ ನಲ್ಲಿ ಕಟ್, ಕೋಪಿ ಮತ್ತು ಪೇಸ್ಟ್ ಆಯ್ಕೆಗಳು.
00:18 ಬೋಲ್ಡ್, ಅಂಡರ್ಲೈನ್ ಮತ್ತು ಇಟೆಲಿಕ್ಸ್ ಆಯ್ಕೆಗಳು.
00:21 ರೈಟರ್ ನಲ್ಲಿ ಫಾಂಟ್ ಹೆಸರು, ಫಾಂಟ್ ಗಾತ್ರ, ಫಾಂಟ್ ಕಲರ್
00:26 ಸರಳ ಪಠ್ಯ ದಾಖಲೆಗಳನ್ನು ಇವುಗಳಿಗೆ ಹೋಲಿಸಿದರೆ ದಾಖಲೆಗಳಲ್ಲಿ ಈ ವೈಶಿಷ್ಟ್ಯಗಳ ಅಳವಡಿಕೆ ಹೆಚ್ಚು ಆಕರ್ಷಿಸುವಂತೆ ಮಾಡುತ್ತದೆ ಮತ್ತು ಓದಲು ಸುಲಭ.
00:36 ಇಲ್ಲಿ ನಾವು Ubuntu Linux 10.04 ನಮ್ಮ ಒಪೆರಟಿಂಗ್ ಸಿಸ್ಟಮ್ ಆಗಿ ಬಳಸುತ್ತೇವೆ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4.
00:47 ನಾವು ರೈಟರ್ ನಲ್ಲಿ ಮೊದಲಿಗೆ ಅಲೈನಿಂಗ್ ಟೆಕ್ಸ್ಟ್ ನ ಬಗ್ಗೆ ಕಲಿಯೋಣ.
00:50 ನೀವು ರೈಟರ್ ನಲ್ಲಿ ನಿಮ್ಮ ಆಯ್ಕೆಯ ಒಂದು ಹೊಸ ಡಾಕ್ಯುಮೆಂಟ್ ತೆರೆಯಬಹುದು ಮತ್ತು ವೈಶಿಷ್ಟ್ಯಗಳನ್ನು ಅಳವಡಿಸಬಹುದು.
00:57 ನಾವು ಈಗಾಗಲೇ ಕೊನೆಯ ಬೋಧನೆ ಯಲ್ಲಿ ಫೈಲೇ ಹೆಸರು "resume.odt" ಕ್ರಿಯೇಟ್ ಮಾಡಿರುವ ಕಾರಣ ನಾವು ಈ ಫೈಲ್ ಅನ್ನು ತೆರೆಯುತಿದ್ದೇವೆ.
01:08 ನಾವು ಹಿಂದೆಯೇ “RESUME” ಎಂದು ಟೈಪ್ ಮಾಡಿ ಮತ್ತು ಅದನ್ನು ಪುಟದ ಸೆಂಟರ್ನಲ್ಲಿ ಜೋಡಿಸಿದ್ದೇವೆ.
01:14 ಆದ್ದರಿಂದ, ಪದವನ್ನು ಸೆಲೆಕ್ಟ್ ಮಾಡಿ “Align Left” ಆಯ್ಕೆಯನ್ನು ಕ್ಲಿಕ್ ಮಾಡಿ. ನೀವು ನೋಡಬಹುದು “RESUME” ಪದ left-align ಆಗಿದೆ. ಎಂದರೆ ಇದು ಡಾಕ್ಯುಮೆಂಟ್ ಪುಟದ ಎಡ ಅಂಚಿಗೆ ಸಾಗುತ್ತದೆ.
01:25 ಒಂದು ವೇಳೆ ನಾವು “Align Right” ಆಯ್ಕೆಯನ್ನು ಕ್ಲಿಕ್ ಮಾಡಿದರೆ, ನೀವು ನೋಡಬಹುದು “RESUME” ಪದ ಪುಟದ ಬಲ ಭಾಗಕ್ಕೆ ಅಲೈನ್ ಆಗಿದೆ.
01:32 ನಾವು “Justify” ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ, ನೀವು ನೋಡಬಹುದು “RESUME” ಪದ ಸಮಾನವಾಗಿ ಪುಟದ ಬಲ ಮತ್ತು ಎಡ ಅಂಚು ನಡುವೆ ಜೋಡಿಸಲಾಗಿದೆ.
01:44 ನೀವು ಒಂದು ಸಾಲು ಅಥವಾ ವಾಕ್ಯವೃಂದಗಳ ಹೊಂದಿರುವಾಗ, ಈ ವೈಶಿಷ್ಟ್ಯವು ಹೆಚ್ಚು ಸ್ಪಷ್ಟ.
01:51 ಇದನ್ನು undo ಮಾಡಿ
01:54 ಸ್ವತಂತ್ರ ಪಾಯಿಂಟ್ಸ್ ಗಳನ್ನೂ ಬರೆಯಲು ಬುಲೆಟ್ಸ್ ಮತ್ತು ನಮ್ ಬರಿಂಗ್ ಬಳಸಲಾಗುತ್ತದೆ.
01:58 ಪ್ರತಿಯೊಂದು ಪಾಯಿಂಟ್ಸ್ ಬುಲ್ಲೆಟ್ ಅಥವಾ ನಂಬರ್ ನಿಂದ ಆರಂಭವಾಗುತದೆ.
02:02 ಈ ರೀತಿ ಒಂದು ದಾಖಲೆಯಲ್ಲಿ ಬರೆದ ವಿಭಿನ್ನ ಪಾಯಿಂಟ್ಸ್ ಗಳ ನಡುವೆ ವ್ಯತ್ಯಾಸ ತಿಳಿಯಬಹುದು.
02:07 ಇದನ್ನು ಮಾಡಲು ಮೊದಲು ಮೆನು ಬಾರ್ ನಲ್ಲಿ “Format” ಆಯ್ಕೆಯನ್ನು ಕ್ಲಿಕ್ ಮಾಡಿ ನಂತರ “Bullets and Numbering” ಅನ್ನು ಕ್ಲಿಕ್ ಮಾಡಿ .
02:15 ನೀವು “Bullets and Numbering” ಆಯ್ಕೆಯನ್ನು ಕ್ಲಿಕ್ ಮಾಡಿದ ನಂತರ ನೀವು ನೋಡುವ ಸಂವಾದ ಪೆಟ್ಟಿಗೆ, ನಿಮಗೆ ಡಾಕ್ಯುಮೆಂಟ್ನಲ್ಲಿ ಅನ್ವಯಿಸಬಹುದಾದ ವಿವಿಧ ಶೈಲಿಗಳನ್ನು ವಿಭಿನ್ನ ಟ್ಯಾಬ್ ಅಡಿಯಲ್ಲಿ ಒದಗಿಸುತ್ತದೆ.
02:26 ನಮ್ ಬೇರಿಂಗ್ ಇದೇ ರೀತಿಯಲ್ಲಿ ಮಾಡಲಾಗುತ್ತದೆ, ನಮ್ ಬೇರಿಂಗ್ ಆಯ್ಕೆಯನ್ನು ಸೆಲೆಕ್ಟ್ ಮಾಡುದರಿಂದ ಪ್ರತಿ ಸಾಲು ಹೊಸ ಸಂಖ್ಯೆಯಿಂದ ಪ್ರಾರಂಭವಾಗುತ್ತದೆ.
02:34 “Numbering type” ಶೈಲಿಯ ಅಡಿಯಲ್ಲಿ ಎರಡನೇ ಶೈಲಿಯನ್ನು ಕ್ಲಿಕ್ ಮಾಡಿ.
02:40 ಈಗ “OK” ಬಟ್ಟನ್ ಅನ್ನು ಕ್ಲಿಕ್ ಮಾಡಿ.
02:42 ನೀವು ಈಗ ನಿಮ್ಮ ಮೊದಲ ಸ್ಟೇಟ್ಮೆಂಟ್ ಬರೆಯಲು ರೆಡಿಯಾಗಿದ್ದಿರಿ.
02:46 ಬರೆಯಿರಿ “NAME: RAMESH”
02:50 ಈಗ, ಸ್ಟೇಟ್ಮೆಂಟ್ ಬರೆದ ನಂತರ “Enter” ಕೀ ಅನ್ನು ಪ್ರೆಸ್ ಮಾಡಿ, ನೀವು ಒಂದು ಹೊಸ ಬುಲ್ಲೆಟ್ ಪಾಯಿಂಟ್ ಅಥವಾ ಹೊಸ ಹೆಚ್ಚಿನ ಸಂಖ್ಯೆಯನ್ನು ನೋಡಬಹುದು.
03:05 ನೀವು ಆಯ್ಕೆ ಸ್ವರೂಪದ ಪ್ರಕಾರ ಬುಲೆಟ್ ಒಳಗೆ ಬುಲೆಟ್ ಜೊತೆಗೆ ಸಂಖ್ಯೆಗಳ ಒಳಗೆ ಸಂಖ್ಯೆಗಳು.
03:13 ಆದುದರಿಂದ ನಾವು ನಮ್ಮ ಎರಡನೇ ಸ್ಟೇಟ್ಮೆಂಟ್ ಅನ್ನು “ FATHER’S NAME colon MAHESH” ಎಂದು ಬರೆಯುವ.
03:20 ಪುನಹ “Enter” ಕೀ ಅನ್ನು ಪ್ರೆಸ್ ಮಾಡಿ “MOTHER’S NAME colon SHWETA” ಎಂದು ಬರೆಯಿರಿ.
03:27 ಹಾಗೆಯೇ, ನಾವು “FATHERS OCCUPATION colon GOVERNMENT SERVANT” ಮತ್ತು “MOTHERS OCCUPATION colon HOUSEWIFE” ಎಂದು ಬೇರೆ ಬೇರೆ

ಪಾಯಿಂಟ್ಸ್ ನಲ್ಲಿ ಬರೆಯುತ್ತೇವೆ.

03:39 ನೀವು ಟ್ಯಾಬ್ ಮತ್ತು ಶಿಫ್ಟ್ ಟ್ಯಾಬ್ ಕೀ ಅನ್ನು ಬಳಸಿ ಬುಲೆಟ್ಸ್ ಹೆಚ್ಚಿಸಲು ಮತ್ತು ಕ್ರಮವಾಗಿ ಬುಲೆಟ್ ಫಾರ್ ಇಂಡೆಂಟ್ ಕಡಿಮೆ ಮಾಡಲು ಉಪಯೋಗಿಸಬಹುದು.
03:47 "ಬುಲೆಟ್ಸ್ ಮತ್ತು ಸಂಖ್ಯೆಗಳ" ಆಯ್ಕೆಯನ್ನು ಆಫ್ ಮಾಡಲು, ಮೊದಲಿಗೆ HOUSEWIFE ಪದದ ಮುಂದೆ ಕರ್ಸರ್ ಅನ್ನು ಇಡಿ ನಂತರ “Enter” ಕೀ ಅನ್ನು ಪ್ರೆಸ್ ಮಾಡಿ “Bullets and Numbering” ಸಂವಾದ ಪೆಟ್ಟಿಗೆಯಲ್ಲಿ “ Numbering Off” ಆಯ್ಕೆಯನ್ನು ಕ್ಲಿಕ್ ಮಾಡಿ.
04:03 ನೀವು ನೋಡಬಹುದು ಬುಲೆಟ್ ಶೈಲಿಯು ನೀವು ಟೈಪ್ ಮಾಡುವ ಹೊಸ ಪದಕ್ಕೆ ಲಭ್ಯವಿಲ್ಲ.
04:10 ನಮ್ಮ ಡಾಕ್ಯುಮೆಂಟ್ ಅಲ್ಲಿ ಎರಡು ಬಾರಿ "NAME" ಎಂಬ ಪದ ಟೈಪ್ ಆಗಿದೆ ಎಂದು ಗಮನಿಸಿ.
04:14 ಎಲ್ಲ ಕಡೆಯಲ್ಲಿಯೂ ಒಂದೇ ಅಕ್ಷರ ಬರೆಯುವ ಬದಲಾಗಿ ರೈಟರ್ ನಲ್ಲಿ “Copy” ಮತ್ತು “Paste” ಆಯ್ಕೆಗಳನ್ನು ಬಳಸಬಹುದು.
04:21 ಅವುಗಳನ್ನು ಹೇಗೆ ಮಾಡುವುದು ಎಂದು ಕಲಿಯೋಣ.
04:24 ಈಗ ನಾವು “MOTHER’S NAME” ಎಂಬ ಪದದಿಂದ “NAME” ಎಂಬ ಪದವನ್ನು ಡಿಲೀಟ್ ಮಾಡುವ, ಮತ್ತು copy ಮತ್ತು paste ಆಯ್ಕೆಯನ್ನು ಬಳಸಿಕೊಂಡು “NAME”

ಪದವನ್ನು ಪುನಹ ಬರೆಯುವ.

04:33 “FATHER’S NAME” ಪದದಲ್ಲಿ ಮೊದಲ ಪದ "NAME" ಅನ್ನು ಕ್ರಸರ್ ಡ್ರ್ಯಾಗ್ ಮಾಡುವ ಮೂಲಕ ಆಯ್ಕೆ ಮಾಡಿಕೊಳ್ಳಿ.
04:40 ಈಗ ಮೌಸ್ ನ ಬಲಕ್ಕೆ ಕ್ಲಿಕ್ ಮಾಡಿ “Copy” ಆಯ್ಕೆಯನ್ನು ಕ್ಲಿಕ್ ಮಾಡಿ.
04:45 “MOTHER’S”. ಪದದ ನಂತರ ಕ್ರಸರ್ ಇರಿಸಿ.
04:48 ಪುನಹ ಮೌಸ್ ನ ಬಲಕ್ಕೆ ಕ್ಲಿಕ್ ಮಾಡಿ, “Paste” ಆಯ್ಕೆಯನ್ನು ಕ್ಲಿಕ್ ಮಾಡಿ.
04:54 ನೀವು ನೋಡಬಹುದು “NAME” ಪದ ಸ್ವಯಂಚಾಲಿತವಾಗಿ paste ಆಗುತ್ತದೆ.
04:57 ಈ ಆಯ್ಕೆಗಳು ಲಭ್ಯವಿದೆ ಹಾಗೂ ಶೋರ್ಟ್ಕಟ್ ಕೀಲಿಗಳನ್ನು ಇವೆ, CTRL+C copy ಮಾಡಲು CTRL+V paste ಮಾಡಲು.
05:08 ದೊಡ್ಡ ಪ್ರಮಾಣದ ದಾಖಲೆಗಳನ್ನು ಬರೆಯುವಾಗ ಈ ವೈಶಿಷ್ಟ್ಯವು ತುಂಬಾ ಸಹಾಯಕವಾಗಿದೆ, ಇಲ್ಲಿ ನೀವು ಪದೇ ಪದೇ ಸಂಪೂರ್ಣ ಟೆಕ್ಸ್ಟ್ ಬರೆಯಬೇಕಾಗಿಲ್ಲ.
05:19 ದಾಖಲೆಯಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಒಂದು ಟೆಕ್ಸ್ಟ್ ಅನ್ನು ಸರಿಸಲು ಸಲುವಾಗಿ. ನೀವು “Cut” ಮತ್ತು “paste” ಆಯ್ಕೆಯನ್ನು ಕೂಡ ಉಪಯೋಗಿಸಬಹುದು
05:26 ಈಗ ನೋಡುವ ಹೇಗೆ ಮಾಡುದೆಂದು.
05:29 ಈಗ ಮೊದಲಿಗೆ “MOTHER’S” ನೇಮ್ ನಂತರದ “NAME” ಪದವನ್ನು ಡಿಲೀಟ್ ಮಾಡಿ.
05:34 ಈ ಪದವನ್ನು cut ಮತ್ತು paste ಮಾಡುವ ಸಲುವಾಗಿ, ಮೊದಲಿಗೆ “FATHERS NAME” ಸ್ಟೇಟ್ಮೆಂಟ್ ನಲ್ಲಿ “NAME” ಪದವನ್ನು ಸೆಲೆಕ್ಟ್ ಮಾಡಿ.
05:40 ಮೌಸ್ ನ ಬಲಕ್ಕೆ ಕ್ಲಿಕ್ ಮಾಡಿ ನಂತರ “Cut” ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಗಮನಿಸಿ “FATHER'S” ಪದದ ಮುಂದಿನ ಪದ "NAME" ಪದ ಲಭ್ಯವಿಲ್ಲ, ಇದರ ಅರ್ಥ ಇದು cut ಆಗಿದೆ ಅಥವಾ ಡಿಲೀಟ್ ಆಗಿದೆ.
05:54 ಈಗ “MOTHER’S” ಪದದ ನಂತರ ಕರ್ಸರ್ ಇರಿಸಿ ಮೌಸ್ ನ ಬಲಕ್ಕೆ ಕ್ಲಿಕ್ ಮಾಡಿ.
05:59 “Paste” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
06:02 ನೀವು ಈಗ ಇಲ್ಲಿ ನೋಡಬಹುದು “MOTHER'S” ಪದದ ನಂತರ paste ಆಗಿದೆ.
06:07 cut ಮಾಡಲು ಶೋರ್ಟ್ಕಟ್ ಕೀ - CTRL+X.
06:11 ಆದ್ದರಿಂದ, ಟೆಕ್ಸ್ಟ್ copy ಮತ್ತು cut ಮಾಡುವ ನಡುವಿನ ಒಂದೇ ವ್ಯತ್ಯಾಸವೆಂದರೆ “Copy” ಆಯ್ಕೆಯು ಅದರ ಜಾಗದಲ್ಲಿ copy ಮಾಡಿದ ಮೂಲ ಪದ ಇಡುತ್ತದೆ ಆದರೆ “Cut” ಆಯ್ಕೆಯು ತನ್ನ ಮೂಲ ಸ್ಥಳದಿಂದ cut ಮಾಡಿದ ಪದವನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ.
06:27 Father’s ಹೆಸರಿನ ಮುಂದೆ “name” ಪದವನ್ನು paste ಮಾಡಿ ಮತ್ತು ಮುಂದುವರೆಯಲು
06:31 “EDUCATION DETAILS” ಎಂಬ ಹೊಸ ಹೆಡ್ಡಿಂಗ್ ಅನ್ನು ಬರೆಯಿರಿ.
06:35 ರೈಟರ್ ನಲ್ಲಿ “Bullets and Numbering” ಕಲಿಕೆಯ ನಂತರ, ನಾವು ಈಗ “Font name” ಮತ್ತು “Font size” ಅನ್ನು ಬದಲಾಯಿಸಲು ಅಥವಾ ಅನ್ವಯಿಸುವುದು ಹೇಗೆ ಎಂದು ತಿಳಿಯಬಹುದು.
06:45 ಈಗ ಮೇಲಿರುವ ಫಾರ್ಮಾಟ್ ಟೂಲ್ ಬಾರ್ನಲ್ಲಿ “Font Name” ಎಂಬ ಫೀಲ್ಡ್ ಅನ್ನು ಹೊಂದಿದ್ದೇವೆ.
06:52 ಫಾಂಟ್ ಹೆಸರು ಸಾಮಾನ್ಯವಾಗಿ ಪೂರ್ವನಿಯೋಜಿತವಾಗಿ “Liberation Serif” ಎಂದು ಹೊಂದಿಸಲಾಗಿದೆ.
06:57 ಫಾಂಟ್ ಹೆಸರನ್ನು ನಮ್ಮ ಟೆಕ್ಸ್ಟ್ ಗೆ ಬೇಕಿರುವ ಫಾಂಟ್ ಆಯ್ಕೆಮಾಡಲು ಮತ್ತು ಬದಲಾಯಿಸಲು ಬಳಸಲಾಗುತ್ತದೆ.
07:04 ಉದಾಹರಣೆಗೆ, “Education Details” ಹೆಡ್ಡಿಂಗ್ ಗೆ ಬೇರೆ ಫಾಂಟ್ ಶೈಲಿ ಮತ್ತು ಫಾಂಟ್ ಗಾತ್ರ ನಿಡುವ.
07:11 ಆದ್ದರಿಂದ ಮೊದಲು “Education details” ಟೆಕ್ಸ್ಟ್ ಸೆಲೆಕ್ಟ್ ಮಾಡಿ, ಮತ್ತೆ “Font Name” ಫೀಲ್ಡ್ ನಲ್ಲಿ down arrow ಅನ್ನು ಕ್ಲಿಕ್ ಮಾಡಿ.
07:19 ನೀವು ಫಾಂಟ್ ಹೆಸರಿನ ಡ್ರಾಪ್ ಡೌನ್ ಮೆನುವಿನಲ್ಲಿ ವಿವಿಧ ಆಯ್ಕೆಗಳನ್ನು ನೋಡಬಹುದು.
07:25 “Liberation Sans” ಅನ್ನು ಹುಡುಕಿ ಸರಳವಾಗಿ ಅದರ ಮೇಲೆ ಕ್ಲಿಕ್.
07:29 ಆಯ್ದ ಟೆಕ್ಸ್ಟ್ ನ ಫಾಂಟ್ ಬದಲಾವಣೆಯನ್ನು ನೀವು ನೋಡಬಹುದು
07:34 "ಫಾಂಟ್ ಹೆಸರು" ಫೀಲ್ಡ್ ನ ಜೊತೆಗೆ, ನಾವು "ಫಾಂಟ್ ಗಾತ್ರ" ಫೀಲ್ಡ್ ಅನ್ನು ಕೂಡ ಹೊಂದಿದ್ದೇವೆ.
07:38 ಹೆಸರೇ ಸೂಚಿಸುವಂತೆ, "ಫಾಂಟ್ ಗಾತ್ರ" ಅನ್ನು ಗಾತ್ರ ಹೆಚ್ಚಿಸಲು ಅಥವಾ ಕಡಿಮೆ ಮಾಡಲು ಬಳಸಲಾಗುತ್ತದೆ ಅಥವಾ ನೀವು ಬರೆಯಲು ಇಚ್ಚಿಸುವ ಆಯ್ಕೆ ಮಾಡಿದ ಟೆಕ್ಸ್ಟ್ ಅಥವಾ ಹೊಸ ಸೆಟ್ ಫಾಂಟ್ ಗಾತ್ರ ಬದಲಾಯಿಸಬಹುದು.
07:52 ಆದ್ದರಿಂದ, ಮೊದಲಿಗೆ “EDUCATION DETAILS” ಟೆಕ್ಸ್ಟ್ ಅನ್ನು ಸೆಲೆಕ್ಟ್ ಮಾಡಿ.
07:55 ಫಾಂಟ್ ಗಾತ್ರ ಪ್ರಸ್ತುತ 12 ಎಂದು ತೋರಿಸುತ್ತದೆ.
07:58 ಈಗ "ಫಾಂಟ್ ಗಾತ್ರ" ಫೀಲ್ಡ್ ನಲ್ಲಿ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ ನಂತರ 11 ಕ್ಲಿಕ್ ಮಾಡಿ.
08:05 ನೀವು ಟೆಕ್ಸ್ಟ್ ನ ಫಾಂಟ್ ಗಾತ್ರ ಕಡಿಮೆಯಾಗುದನ್ನು ನೀವು ನೋಡಬಹುದು.
08:09 ಫಾಂಟ್ ಗಾತ್ರ ವನ್ನು ಈ ರೀತಿಯಲ್ಲಿ ಹೆಚ್ಚಿಸಬಹುದು.
08:13 ಫಾಂಟ್ ಗಾತ್ರ ತಿಳಿದನಂತರ, ನಾವು ರೈಟರ್ ನಲ್ಲಿ ಫಾಂಟ್ ಬಣ್ಣ ಬದಲಾಯಿಸುವುದು ಹೇಗೆ ಎಂದು ನೋಡೋಣ.
08:21 "ಫಾಂಟ್ ಬಣ್ಣವನ್ನು ನಿಮ್ಮ ಡಾಕ್ಯುಮೆಂಟ್ ಅಲ್ಲಿ ಅಥವಾ ಕೆಲವು ಸಾಲುಗಳನ್ನು ಟೈಪ್ ಮಾಡಿರುವಲ್ಲಿ ಬಣ್ಣವನ್ನು ಆಯ್ಕೆ ಮಾಡಲು ಬಳಸಲಾಗುತ್ತದೆ.
08:27 ಉದಾಹರಣೆಗೆ, ಹೆಡ್ಡಿಂಗ್ “EDUCATION DETAILS” ಗೆ ಬಣ್ಣ ಹಾಕುವ
08:32 ಆದ್ದರಿಂದ ಪುನಹ “EDUCATION DETAILS” ಪದವನ್ನು ಆಯ್ಕೆ ಮಾಡಿ.
08:36 ಈಗ ಟೂಲ್ಬಾರ್ ರಲ್ಲಿ "ಫಾಂಟ್ ಬಣ್ಣ" ಆಯ್ಕೆಯ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ ತದನಂತರ “Light green” ಬಣ್ಣವನ್ನು ಟೆಕ್ಸ್ಟ್ ಗೆ ಅನ್ವಯಿಸಳು “Light green” ಬಣ್ಣದ ಬಾಕ್ಸ್ ಮೇಲೆ ಕ್ಲಿಕ್ ಮಾಡಿ.
08:48 ಆದ್ದರಿಂದ ನೀವು ಈಗ ನೋಡಬಹುದು ನಿಮ್ಮ ಹೆಡ್ಡಿಂಗ್ ಹಸಿರು ಬಣ್ಣದಲ್ಲಿ ಇದೆ.
08:52 ಫಾಂಟ್ ಗಾತ್ರ ಆಯ್ಕೆಯ ಮುಂದೆ ನೀವು " ಬೋಲ್ಡ್ "" ಇಟಾಲಿಕ್ "ಮತ್ತು" ಅಂಡರ್ಲೈನ್" ಈ ಮೂರು ಆಯ್ಕೆಗಳನ್ನು ನೋಡಬಹುದು.
09:00 ಹೆಸರೇ ಸೂಚಿಸುವಂತೆ, ಈ ನಿಮ್ಮ ಟೆಕ್ಸ್ಟ್ ಅನ್ನು ಬೋಲ್ಡ್ ಅಥವಾ ಇಟಾಲಿಕ್ ಅಥವಾ ಅಂಡರ್ಲೈನ್ ಆಗಿ ತೋರಿಸುತ್ತದೆ.
09:07 ಆದುದರಿಂದ ಮೊದಲು ಹೆಡ್ಡಿಂಗ್ “EDUCATION DETAILS” ಅನ್ನು ಸೆಲೆಕ್ಟ್ ಮಾಡಿ.
09:11 ಈಗ ಟೆಕ್ಸ್ಟ್ ಬೋಲ್ಡ್ ಮಾಡಲು 'ಬೋಲ್ಡ್' ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
09:15 ಆಯ್ಕೆಮಾಡಿದ ಟೆಕ್ಸ್ಟ್ ಬೋಲ್ಡ್ ಆಗಿರುವುದನ್ನು ನೀವು ನೋಡಬಹುದು.
09:19 ಅದೇ ರೀತಿಯಲ್ಲಿ, ನೀವು “Italic” ಐಕಾನ್ ಮೇಲೆ ಕ್ಲಿಕ್ ಮಾಡಿದರೆ ಟೆಕ್ಸ್ಟ್ ಇಟಾಲಿಕ್ ಆಗಿ ಮಾರ್ಪಡುತ್ತದೆ.
09:25 "ಅಂಡರ್ಲೈನ್" ಕ್ಲಿಕ್ ಮಾಡಿ.
09:26 'Underline' ಐಕಾನ್ ಕ್ಲಿಕ್ ಮಾಡುದರಿಂದ ನಿಮ್ಮ ಟೆಕ್ಸ್ಟ್ ಅಂಡರ್ಲೈನ್ ಆಗಿರುತ್ತದೆ.
09:31 ನೀವು ನೋಡಬಹುದು ಆಯ್ಕೆ ಮಾಡಿದ ಟೆಕ್ಸ್ಟ್ ಅಂಡರ್ಲೈನ್ ಆಗಿದೆ
09:35 ಹೆಡ್ಡಿಂಗ್ ಅನ್ನು “bold” ಮತ್ತು “underlined” ಆಗಿ ಇಡುವ ಸಲುವಾಗಿ, “italic” ಆಯ್ಕೆಯನ್ನು ಡಿಸೆಲೆಕ್ಟ್ ಮಾಡಲು ಅದರ ಮೇಲೆ ಪುನಹ ಕ್ಲಿಕ್ ಮಾಡಿ ಮತ್ತು ಇತರ

ಎರಡು ಆಯ್ಕೆಗಳನ್ನು ಹಾಗೆಯೆ ಇಡಿ.

09:45 ಆದ್ದರಿಂದ ಹೆಡ್ಡಿಂಗ್ ಈಗ ಬೋಲ್ಡ್ ಮತ್ತು ಅಂಡರ್ಲೈನ್ ಆಗಿದೆ.
09:50 ಇದು ಸ್ಪೋಕನ್ ಟ್ಯುಟೋರಿಯಲ್ ನ ಲಿಬ್ರೆ ಆಫೀಸ್ ರೈಟರ್ ನ ಕೊನೆಯಲ್ಲಿ ನಮ್ಮನ್ನು ತೆರೆದಿಡುತ್ತದೆ
09:55 ನಾವು ಕಲಿತ, ಸಾರಾಂಶ:
09:57 ರೈಟರ್ ನಲ್ಲಿ ಅಲೈನಿಂಗ್ ಟೆಕ್ಸ್ಟ್
10:00 ಬುಲೆಟ್ಸ್ ಮತ್ತು ನಮ್ ಬರಿಂಗ್
10:02 ರೈಟರ್ ನಲ್ಲಿ ಕಟ್, ಕೋಪಿ ಮತ್ತು ಪೇಸ್ಟ್ ಆಯ್ಕೆಗಳು.
10:05 ಬೋಲ್ಡ್, ಅಂಡರ್ಲೈನ್ ಮತ್ತು ಇಟೆಲಿಕ್ಸ್ ಆಯ್ಕೆಗಳು.
10:09 ರೈಟರ್ ನಲ್ಲಿ ಫಾಂಟ್ ಹೆಸರು, ಫಾಂಟ್ ಗಾತ್ರ, ಫಾಂಟ್ ಕಲರ್
10:13 COMPREHENSIVE ಅಸೈನ್ಮೆಂಟ್
10:16 ಬುಲೆಟ್ಸ್ ಮತ್ತು ನಮ್ ಬರಿಂಗ್ ಅನ್ನು ಆಕ್ಟಿವೇಟ್ ಮಾಡಿ.
10:18 ಸ್ಟೈಲ್ ಅನ್ನು ಆಯ್ಕೆ ಮಾಡಿ ಮತ್ತು ಕೆಲವು ಪಾಯಿಂಟ್ಸ್ ಅನ್ನು ಬರೆಯಿರಿ.
10:22 ಕೆಲವು ಟೆಕ್ಸ್ಟ್ ಅನ್ನು ಆಯ್ಕೆ ಮಾಡಿ ಮತ್ತು ಫಾಂಟ್ ಹೆಸರನ್ನು “Free Sans” ಮತ್ತು ಫಾಂಟ್ ಗಾತ್ರವನ್ನು “16” ಗೆ ಬದಲಾಯಿಸಿ.
10:29 ಟೆಕ್ಸ್ಟ್ ಅನ್ನು “Italics” ಆಗಿ ಮಾಡಿ.
10:32 ಫಾಂಟ್ ಬಣ್ಣವನ್ನು ರೆಡ್ ಬಣ್ಣಕ್ಕೆ ಬದಲಾಯಿಸಿ.
10:35 ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊವನ್ನು ವೀಕ್ಷಿಸಿ.
10:38 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ.
10:41 ನಿಮಗೆ ಉತ್ತಮ ಬ್ಯಾಂಡ್ವಿಡ್ತ್ ಇಲ್ಲದೆ ಹೋದರೆ, ನೀವು ಡೌನ್ಲೋಡ್ ಮಾಡಿ ನೋಡಬಹುದು.
10:46 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ spoken ಟ್ಯುಟೋರಿಯಲ್ಸ್ ಗಳನ್ನೂ ಉಪಯೋಗಿಸಿ ಕೊಂಡು ಕಾರ್ಯಗಾರ ನಡೆಸುತ್ತದೆ
10:52 ಆನ್ಲೈನ್ ಟೆಸ್ಟ್ ನಲ್ಲಿ ಪಾಸ್ ಆದವರಿಗೆ certificates ನೀಡುತ್ತದೆ.
10:55 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು contact@spoken-tutorial.org ಗೆ ಬರೆಯಿರಿ
11:02 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ವಿಭಾಗವಾಗಿದೆ,
11:06 ಇದು ಭಾರತ ಸರ್ಕಾರದ ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, ಎಂಎಚ್ಆರ್ ಡಿ ಯಿಂದ ಸ್ಪೂರ್ತಿಗೊಂಡಿದೆ.
11:14 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
11:18 ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ org ಸ್ಲಾಶ್ NMEICT ಹೈಫನ್ ಇಂಟ್ರೋ
11:25 ಈ ಟ್ಯುಟೋರಿಯಲ್ ________ ಕೊಡುಗೆಯಾಗಿದ್ದು (ಅನುವಾದಕ ಮತ್ತು narrator ಹೆಸರು)
11:30 ಸೇರಿರುವುದಕ್ಕಾಗಿ ವಂದನೆಗಳು

Contributors and Content Editors

Gaurav, PoojaMoolya, Sneha, Vasudeva ahitanal