LibreOffice-Suite-Draw/C3/Polygons-and-Curves/Kannada

From Script | Spoken-Tutorial
Revision as of 15:46, 24 May 2016 by Vasudeva ahitanal (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration
00:01 ಲಿಬ್ರೆ ಆಫಿಸ್ ಡ್ರಾ ನಲ್ಲಿ “creating curves and polygons’” (ಕ್ರಿಯೇಟಿಂಗ್ ಕರ್ವ್ಸ್ ಮತ್ತು ಪಾಲಿಗಾನ್ಸ್) ಕುರಿತಾದ ಟ್ಯುಟೋರಿಯಲ್ ಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನೀವು ಡ್ರಾ ನಲ್ಲಿ ಪಾಲಿಗಾನ್ ಮತ್ತು ಕರ್ವ್ ಸ್ ಜೊತೆ ಹೇಗೆ ಕೆಲಸಮಾಡುವುದು ಎನ್ನುವುದನ್ನು ತಿಳಿಯುತ್ತೀರಿ.
00:14 ಈ ಟ್ಯುಟೋರಿಯಲ್ ನೋಡಲು ನೀವು ಲಿಬ್ರೆ ಓಫಿಸ್ ನ ಸಾಮಾನ್ಯ ಜ್ಞಾನ ಹೊಂದಿರಬೇಕು. ಇಲ್ಲವಾದಲ್ಲಿ ಸಂಬಂಧಿತ ಟ್ಯುಟೋರಿಯಲ್ ಗಾಗಿ ಈ ವೆಬ್ ಸೈಟ್ ಅನ್ನು ನೋಡಿ.
00:25 ಇಲ್ಲಿ ನಾವು,
  • ಉಬುಂಟು ಲಿನಕ್ಸ್ ನ 10. 04 ಆವೃತ್ತಿಯನ್ನು ಮತ್ತು
  • ಲಿಬ್ರೆ ಓಫಿಸ್ ಸ್ಯೂಟ್ ನ 3. 3. 4 ಆವೃತ್ತಿಯನ್ನು ಬಳಸುತ್ತೇವೆ.
00:34 ಪಾಲಿಗಾನ್ ಗಳೆಂದರೇನು? poly ಪದದ ಅರ್ಥ ವಿವಿಧ ಎಂದು. ವಿವಿಧ-ಪಾರ್ಶ್ವ ದ ಆಕೃತಿ ಯನ್ನು ಪಾಲಿಗಾನ್ ಎನ್ನುತ್ತೇವೆ.
00:43 ನಾವು ಈ ಸ್ಲೈಡ್ ನಲ್ಲಿ ತೋರಿಸಲ್ಪಟ್ಟಂತೆ ನಕ್ಷೆಯನ್ನು ಬಿಡಿಸುವ ವಿಧಾನವನ್ನು ಕಲಿಯಲಿದ್ದೇವೆ. ಈ ನಕ್ಷೆಯು ಮನೆಯಿಂದ ಶಾಲೆಗಿರುವ ದಾರಿಯನ್ನು ತೋರಿಸುತ್ತದೆ.
00:53 ಈ ಟ್ಯುಟೋರಿಯಲ್ ನ ಕೊನೆಯಲ್ಲಿ ನೀವು ಇದೇ ರೀತಿಯ ರೇಖಾಚಿತ್ರ ಬಿಡಿಸಲು ಶಕ್ತರಾಗುತ್ತೀರಿ.
01:00 ಈಗ ನಾವು ಡ್ರಾ ಗೆ ಬದಲಾಯಿಸಿಕೊಳ್ಳೋಣ. ನಾನು ಈ ಫೈಲ್ ಗೆ 'RouteMap' ಎಂದು ಹೆಸರಿಸಿ ಡೆಸ್ಕ್ ಟಾಪ್ ನಲ್ಲಿ ಸೇವ್ ಮಾಡಿದ್ದೇನೆ.
01:09 ಮೊದಲಯನೆಯದಾಗಿ, Grid view ಅನ್ನು ಸಕ್ರಿಯಗೋಳಿಸೋಣ. ಹಾಗೆ, View ಅನ್ನು ಕ್ಲಿಕ್ ಮಾಡಿ, Grid ಅನ್ನು ಆಯ್ಕೆಮಾಡಿ ಮತ್ತು ಅದರಲ್ಲಿ Display Grid ಅನ್ನು ಆಯ್ಕೆಮಾಡಿ.
01:19 ನಾವು ರೇಖಾಚಿತ್ರ ಪ್ರಾರಂಭ ಮಾಡುವ ಮೊದಲು, Page margin ಮತ್ತು Page orientation ಅನ್ನು ಸೆಟ್ ಮಾಡೋಣ.
01:26 ಕರ್ಸರ್ ಅನ್ನು Draw ಪೇಜ್ ನ ಮೇಲಿಡಿ. ಮತ್ತು Context menu ವಿಗಾಗಿ ರೈಟ್ ಕ್ಲಿಕ್ ಮಾಡಿ.
01:33 Page ಅನ್ನು ಆಯ್ಕೆ ಮಾಡಿ ಮತ್ತು Page Setup ಅನ್ನು ಕ್ಲಿಕ್ ಮಾಡಿ.
01:36 Page Setup ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
01:40 Format ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ ಮತ್ತುA4 ಅನ್ನು ಆಯ್ಕೆ ಮಾಡಿ ಮತ್ತು Orientation ಅನ್ನು Portrait ಎಂದು ಆಯ್ಕೆ ಮಾಡಿ.
01:49 Left, Right, Top ಮತ್ತು Bottom ಮಾರ್ಜಿನ್ ಗಳನ್ನು ಒಂದಕ್ಕೆ ಸೆಟ್ ಮಾಡಿ. ಮತ್ತು OK. ಯನ್ನು ಕ್ಲಿಕ್ ಮಾಡಿ.
01:57 ನಾವೀಗ ಡೀಫಾಲ್ಟ್ ಫಾಂಟ್ ಗಾತ್ರವನ್ನು ೨೪ ಕ್ಕೆ ಸೆಟ್ ಮಾಡೋಣ.
02:02 ಮೈನ್ ಮೆನುವಿನಿಂದ Format ಮತ್ತು Character ಅನ್ನು ಆಯ್ಕೆ ಮಾಡೋಣ.
02:06 Character ಎನ್ನುವ ಡೈಲಾಗ್-ಬಾಕ್ಸ್ ಕಾಣಸಿಗುತ್ತದೆ.
02:10 Fonts ಟಾಬ್ ಅನ್ನು ಕ್ಲಿಕ್ ಮಾಡಿ ಮತ್ತು ಅದರಲ್ಲಿನ Size ಫೀಲ್ಡ್ ನಲ್ಲಿ ಸ್ಕ್ರೋಲ್ ಡೌನ್ ಮಾಡುತ್ತ ೨೪ ಅನ್ನು ಸೆಲೆಕ್ಟ್ ಮಾಡಿ ಮತ್ತುOK ಯನ್ನು ಕ್ಲಿಕ್ ಮಾಡಿ.
02:18 ಇದರಿಂದ ಶೇಪ್ಸ್ ನ ಒಳಗಡೆ ಬರೆದ ಟೆಕ್ಸ್ಟ್ ಗಳು ಸ್ಪಷ್ಟವಾಗಿ ಗೋಚರಿಸುತ್ತದೆ ಎಂಬುವುದನ್ನು ಖಚಿತಪಡಿಸಬಹುದು.
02:24 ಈಗ ನಾವು ಮನೆ ಬಿಡಿಸುವುದರಿಂದ ಆರಂಭಿಸೋಣ.
02:28 ಮನೆಯನ್ನು ತೋರಿಸಲು ಚೌಕವನ್ನು ಸೇರಿಸೋಣ ಮತ್ತು ಅದರೊಳಗಡೆ "Home" ಎಂದು ಬರೆಯೋಣ.
02:37 ನಂತರ, ಮನೆಯ ಬಲಭಾಗ ದಲ್ಲಿ ಉದ್ಯಾನ ವನ್ನು ಬಿಡಿಸೋಣ.
02:42 ಉದ್ಯಾನವು ವಕ್ರ-ಆಕಾರದ ಆಯಾತವಾಗಿದೆ. ಮತ್ತು ಎಡಬದಿಯು ಬಲಬದಿಗಿಂತ ಅಗಲವಾಗಿದೆ.
02:51 ನಾವೀಗ ಪಾಲಿಗಾನ್ ನ್ನು, ಅದರ ಪ್ರಾತಿನಿಧ್ಯವನ್ನು ತೋರ್ಪ್ ಡಿಸಲು ಬಳಸೋಣ. ಪಾಲಿಗಾನ್ ನನ್ನು ಬಿಡಿಸಲು, Drawing ಟೂಲ್ ಬಾರ್ ಗೆ ಹೋಗೊಣ.
02:58 Curve ನ ಮೇಲೆ ಕ್ಲಿಕ್ ಮಾಡಿ ಮತ್ತು ಐಕಾನ್ ನ ಪಕ್ಕದಲ್ಲಿರುವ ಸಣ್ಣ ಕಪ್ಪು ಬಣ್ಣದ ಬಾಣದ ಗುರುತನ್ನು ಕ್ಲಿಕ್ ಮಾಡಿ.
03:04 ಈಗ, Polygon filled ಅನ್ನು ಆಯ್ಕೆಮಾಡಿ.
03:08 ಕರ್ಸರ್ ಅನ್ನು Draw ಪುಟದ ಮೇಲಿಡಿ. ಮೌಸ್ ನ ಎಡ ಬಟನ್ ಅನ್ನು ಹಿಡಿದಿಟ್ಟುಕ್ಕೊಂಡು ಕರ್ಸರ್ ಅನ್ನು ಕೆಳಗಡೆ ಎಳೆಯಿರಿ. ನಂತರ ಮೌಸ್ ಬಟನ್ ಅನ್ನು ಬಿಡಿ.
03:18 ನಾವೀಗ ಸರಳ ರೇಖೆಯನ್ನುಬಿಡಿಸಿದೆವು. ಮೌಸ್ ಅನ್ನು ಲಂಬ ತ್ರಿಕೋನ ಆಕಾರ ಬರುವವರೆಗೂ ಬಲಕ್ಕೆ ಎಳೆಯಿರಿ.
03:26 ಮೌಸ್ ನ ಎಡ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಮೌಸ್ ಅನ್ನು ಮೇಲ್ಮುಖವಾಗಿ ಎಳೆಯಿರಿ. ಈಗ, ಮೌಸ್ ನ ಎಡ ಬಟನ್ ಅನ್ನು ಎರಡು ಬಾರಿ ಕ್ಲಿಕ್ ಮಾಡಿ.
03:35 ನೀವು ಪಾಲಿಗಾನ್ ನನ್ನುಬಿಡಿಸಿದ್ದೀರಿ. ಈಗ ಅದರೊಳಗಡೆ "Park" ಎಂದು ಬರೆಯಿರಿ.
03:41 Park ನ ಪಕ್ಕದಲ್ಲಿ ಒಂದು Commercial Complex ಇದೆ. ಇದು ಕೂಡಾ ವಕ್ರವಾದ ಆಕಾರದ ಪಾಲಿಗಾನ್. ನಾವೀಗ ಅದನ್ನು ಬಿಡಿಸೋಣ!
03:50 Drawing ಟೂಲ್ ಬಾರ್ ಗೆ ಹೋಗಿ. Curve ಐಕಾನ್ ನ ಪಕ್ಕದಲ್ಲಿರುವ ಸಣ್ಣ ಕಪ್ಪು ಬಾಣದ ಗುರುತನ್ನು ಕ್ಲಿಕ್ ಮಾಡಿ ಮತ್ತುPolygon filled ಅನ್ನು ಕ್ಲಿಕ್ ಮಾಡಿ.
04:00 Draw ಪುಟದಲ್ಲಿ ಕರ್ಸರ್ ಅನ್ನು ಇಡಿ. ಎಡ ಮೌಸ್ ಬಟನ್ ನನ್ನು ಹಿಡಿಯುತ್ತಾ ಕೆಳಗಡೆ ಎಳೆಯಿರಿ.
04:07 ಈಗ, ಮೌಸ್ ಬಟನ್ ಅನ್ನು ಬಿಡಿ. ನೀವು ಸರಳ ರೇಖೆಯನ್ನು ನೋಡುವಿರಿ. ಮೌಸ್ ಅನ್ನು ತ್ರಿಕೋಣ ಆಕಾರ ಬರುವವರೆಗೆ ಎಡಬದಿ ಕೊಂಡೊಯ್ಯಿರಿ.
04:19 ಎಡ-ಮೌಸ್-ಬಟನ್ ನನ್ನು ಕ್ಲಿಕ್ ಮಾಡಿ ಮತ್ತು ಮೌಸ್ ಅನ್ನು ಮೇಲ್ಮುಖವಾಗಿ ಎಳೆಯಿರಿ. ಈಗ Shift ಕೀ ಯನ್ನು ಹಿಡಿದಿಟ್ಟುಕೊಳ್ಳುತ್ತಾ ಕರ್ಸರ್ ಅನ್ನು ಒಳಮುಖವಾಗಿ ಎಳೆಯಿರಿ.
04:31 ಎಡ ಮೌಸ್ ಬಟನ್ ಅನ್ನು ಎರಡು ಬಾರಿ ಕ್ಲಿಕ್ ಮಾಡಿ.
04:35 ನೀವೀಗ ಇನ್ನೊಂದು ಪಾಲಿಗಾನ್ ಅನ್ನು ಎಳೆದಿದ್ದೀರಿ. ನಾವೀಗ ಅದರೊಳಗಡೆ "Commercial Complex" ಎಂದು ಬರೆಯೋಣ.
04:45 ನಿಲುಗಡೆ ಪ್ರದೇಶವನ್ನು Drawing ಟೂಲ್ ಬಾರ್ ನಿಂದ ಬಿಡಿಸಲು ಈ ಹಿಂದಿನ ಹಂತವನ್ನು ಅನುಸರಿಸೋಣ, ಮೊದಲಿಗೆ Polygon filled ನ್ನು ಆಯ್ಕೆ ಮಾಡಿರಿ. ನಂತರ ಕರ್ಸರ್ ಅನ್ನು Draw ಪುಟ ದ ಮೇಲಿಡಿ. ಮತ್ತು ಪಾಲಿಗಾನ್ ಅನ್ನು ಬಿಡಿಸಿ.
05:02 ಈಗ, ನಾವು "Parking Lot" ಎಂದು ಅದರೊಳಗಡೆ ಬರೆಯೋಣ.
05:08 ನೆನಪಿಡಿ ನೀವೀಗ ನಿಮಿಗಿಷ್ಟ ಬಂದಷ್ಟು ಪಾರ್ಶ್ವಗಳ (ಕೋನಗಳ) ಪಾಲಿಗಾನ್ ಅನ್ನು ಬಿಡಿಸಬಹುದು.
05:14 ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಮತ್ತು ಈ ಅಸೈನ್ಮೆಂಟ್ ಅನ್ನು ಪ್ರಯತ್ನಿಸಿ. ಐದು ಪಾರ್ಶ್ವದ, ಆರು ಪಾರ್ಶ್ವದ ಮತ್ತು ಹತ್ತು ಪಾರ್ಶ್ವದ ಪಾಲಿಗಾನ್ ಅನ್ನು ಬಿಡಿಸಿ.
05:23 ಮನೆಯ ಬಲಬದಿಯಲ್ಲಿ ಒಂದು Rresidential Complex ಇದ್ದು, ಅದು ಆಯತಾಕಾರದಲ್ಲಿದೆ.
05:30 Drawing ಟೂಲ್ ಬಾರ್ ನಿಂದ Rectangle ಅನ್ನು ಆಯ್ಕೆ ಮಾಡಿ.
05:35 ನಂತರ ಮೌಸ್ ಅನ್ನು Draw ಪುಟದ ಮೇಲಿಡಿ ಮತ್ತು ಅದನ್ನು ಎಳೆಯುತ್ತ ಆಯತಾಕಾರವನ್ನು ಬಿಡಿಸಿ.
05:41 ನಾವಿದನ್ನು "Residential Complex" ಎಂದು ಹೆಸರಿಸೋಣ.
05:45 ಈ ಪ್ರದೇಶದಲ್ಲೊಂದು Play Ground ಕೂಡ ಇದೆ. ಇದರ ಆಕಾರವು ಉದ್ದನೆಯ ಆಯತಾಕಾರವಾಗಿದೆ.
05:53 Drawing ಟೂಲ್ ಬಾರ್ ನಿಂದ Polygon 45 degree Filled ಅನ್ನು ಸೆಲೆಕ್ಟ್ ಮಾಡಿ.
05:59 ಕರ್ಸರ್ ಅನ್ನುDraw ಪುಟದ ಮೇಲಿಡಿ. ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಕೆಳಗಡೆ ಎಳೆಯಿರಿ ಮತ್ತು ಬಿಡಿ.
06:07 ಮೌಸ್ ಅನ್ನು ಕ್ಲಿಕ್ ಮಾಡಿ ಮತ್ತು ಬಲಬದಿ ಕೊಂಡೊಯ್ದು ಬಿಡಿ. ಈಗ ಮೌಸ್ ಅನ್ನು ಕ್ಲಿಕ್ ಮಾಡಿ ಮೇಲ್ಮುಖವಾಗಿ ಎಳೆಯುತ್ತಾ ಆಯತವನ್ನು ಪೂರ್ಣಗೊಳಿಸಿ.
06:17 ಎಡ ಮೌಸ್ ಬಟನ್ ಅನ್ನು ಎರಡು ಬಾರಿ ಕ್ಲಿಕ್ ಮಾಡಿ.
06:21 ನೀವೀಗ ಇನ್ನೊಂದು ಪಾಲಿಗಾನ್ ಅನ್ನು ಬಿಡಿಸಿದಿರಿ!
06:25 ನಾವೀಗ "Play Ground" ಎಂದು ಅದರೊಳಗಡೆ ಬರೆಯೋಣ.
06:30 ಈಗ, ನಾವು ಆಟದ ಮೈದಾನದ ಪಕ್ಕ Lake ಅನ್ನು ಬಿಡಿಸೋಣ.
06:35 Drawing ಟೂಲ್ ಬಾರ್ ನಿಂದ Freeform Line filled ಅನ್ನು ಆಯ್ಕೆ ಮಾಡಿ.
06:40 Draw ಪುಟದಲ್ಲಿ, ಎಡ-ಮೌಸ್-ಬಟನ್ ಅನ್ನು ಒತ್ತಿರಿ ಮತ್ತು ಮೌಸ್ ಅನ್ನು ಅಪ್ರದಕ್ಷಿಣವಾಗಿ ತಿರುಗಿಸಿ. ಎಡ-ಮೌಸ್-ಬಟನ್ ಅನ್ನು ಬಿಡಿ.
06:52 ನಾವು ಸರೋವರವನ್ನು ಬಿಡಿಸಿದೆವು. ಈಗ ಅದರೊಳಗಡೆ "Lake" ಎಂದು ಬರೆಯೋಣ.
06:58 ಈ ಪ್ರದೇಶದ ಕೊನೆಯ ಕಟ್ಟಡ School. School campus ಕೂಡ ಪಾಲಿಗಾನ್ ರೂಪದಲ್ಲಿದೆ.
07:07 ಈಗ ಇದನ್ನು ನಮ್ಮ ನಕ್ಷೆಯಲ್ಲಿ ಬಿಡಿಸೋಣ. ಪುನಃ Drawing ಟೂಲ್ ಬಾರ್ ನಿಂದ Polygon 45 degree filled ಅನ್ನು ಆಯ್ಕೆಮಾಡೋಣ.
07:17 ನಂತರ, ನಾವು ಕರ್ಸರ್ ಅನ್ನು Draw ಪುಟದ ಮೇಲಿಡೋಣ ಮತ್ತು ಪಾಲಿಗಾನ್ ಅನ್ನು ಬಿಡಿಸೋಣ. ಕೊನೆಯಲ್ಲಿ, ಪಾಲಿಗಾನ್ ಅನ್ನು ಪೂರ್ತಿಗೊಳಿಸುತ್ತಾ ಮೌಸ್ ಅನ್ನು ಎರಡು ಬಾರಿ ಕ್ಲಿಕ್ ಮಾಡೋಣ.
07:28 ಈಗ ಅದರೊಳಗಡೆ "School Campus" ಎಂದು ಬರೆಯಿರಿ.
07:34 ನಾವೀಗ ಟೆಕ್ಸ್ಟ್ ಬಾಕ್ಸ್ ಅನ್ನು ಸೇರಿಸೋಣ ಮತ್ತು ಅದರೊಳಗಡೆ "School Main Gates" ಎಂದು ಬರೆಯೋಣ.
07:44 ನಾವೀಗ ಟೆಕ್ಸ್ಟ್-ಬಾಕ್ಸ್ ಅನ್ನು ತಿರುಗಿಸೋಣ ಮತ್ತು ಸರಿಯಾದ ಸ್ಥಾನದಲ್ಲಿಡೋಣ.
07:48 ಈಗ, ಮೈನ್ ಮೆನುವಿನಿಂದ Modify ಅನ್ನು ಆಯ್ಕೆಮಾಡಿ ಮತ್ತು Rotate ಅನ್ನು ಕ್ಲಿಕ್ ಮಾಡಿ.
07:54 handle ನ ಬಣ್ಣವು ಕೆಂಪು ಬಣ್ಣಕ್ಕೆ ತಿರುಗಿರುವುದನ್ನು ಗುರುತಿಸಿ. ಇದು ನಾವು Rotate ಮೋಡ್ ನಲ್ಲಿರುವದನ್ನು ಸೂಚಿಸುತ್ತದೆ.
08:02 ನೀವು ಎರಡು ಬದಿ ಬಾಣದ ಗುರುತು ಹೊಂದಿರುವ ಚಿಕ್ಕ ವ್ರತ್ತ ಖಂಡವನ್ನು ನೋಡಿದಿರಾ? ನಾವದನ್ನು ಬಾಕ್ಸ್ ಅನ್ನು ತಿರುಗಿಸಲು ಉಪಯೋಗಿಸುತ್ತೇವೆ.
08:09 ನಾವೀಗ ಕರ್ಸರ್ ಅನ್ನು ಟೆಕ್ಸ್ಟ್-ಬಾಕ್ಸ್ ನ ಬಲ ಮೇಲ್ಬದಿಯಲ್ಲಿರುವ ಕೊನೆಯ handle ನ ಮೇಲಿಡೋಣ. .
08:17 Rotation curve ಕಾಣಸಿಗುತ್ತದೆ.
08:21 ಎಡ-ಮೌಸ್ ಬಟನ್ ಅನ್ನು ಒತ್ತಿ. ಕರ್ವ್ ಅನ್ನು, ಅದು ಸರಿಯಾದ ಸ್ಥಾನದಲ್ಲಿ ಇರಿಸುವವವರೆಗೆ ಪ್ರದಕ್ಷಿಣಾಕಾರವಾಗಿ ಎಳೆಯಿರಿ.
08:30 ಈಗ, 'Rotate' mode ನಿಂದ ಹೊರಬರಲು Draw ಪುಟದ ಎಲ್ಲಿಯಾದರೂ ಕ್ಲಿಕ್ ಮಾಡಿ.
08:36 ನಾವೀಗ ಶಾಲೆಯ ಅಡ್ಡಪ್ರವೇಶವನ್ನು ಸಹ ತೋರಿಸೋಣ.
08:41 ಈ ಹಿಂದಿನ ಹಂತದಂತೆಯೇ, ಟೆಕ್ಸ್ಟ್ ಬಾಕ್ಸ್ ಅನ್ನು ಬರೆಯೋಣ ಮತ್ತು ಅದರೊಳಗಡೆ "School Side Entrance" ಎಂದು ನಮೂದಿಸೋಣ.
08:50 ಈಗ, ಬಾಣದ ಗುರುತನ್ನು ಉಪಯೋಗಿಸಿಕೊಂಡು ದಿಕ್ಕುಗಳನ್ನು ಬರೆಯೋಣ. ಮನೆಯಿಂದ ನಾವು ಬಲಬದಿಗೆ ತಿರುಗಬೇಕು.
08:57 Drawing ಟೂಲ್ ಬಾರ್ ನಿಂದ Line Ends with Arrow ಅನ್ನು ಆಯ್ಕೆ ಮಾಡೋಣ.
09:02 ಈಗ ನಾವು Draw ಪುಟಕ್ಕೆ ಹೋಗೋಣ ಮತ್ತು ರೇಖೆಯನ್ನು ಎಳೆಯೋಣ.
09:08 ನಂತರ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ ನ ಬಳಿ ನಡೆಯೋಣ. ಮತ್ತು ಎಡಬದಿ ತಿರುಗೋಣ.
09:14 ನಾವೀಗ ಮಾರ್ಗವನ್ನು ತೋರಿಸಲು ಇನ್ನೊಂದು ರೇಖೆಯನ್ನು ಎಳೆಯೋಣ.
09:19 ನಂತರ, ಆಟದ ಮೈದಾನದ ನಂತರ ಬಲಕ್ಕೆ ತಿರುಗಿ, ಕೆಳಕ್ಕೆ ನಡೆಯಿರಿ.
09:25 ನಂತರ ಶಾಲೆಯ ಮುಖ್ಯದ್ವಾರ ತಲುಪಲು ಪುನಃ ಬಲಬದಿ ತಿರುಗಿ.
09:32 ನಾವು ನಮ್ಮ ಮೊದಲನೇ ಮಾರ್ಗವನ್ನು ಬಿಡಿಸಿದೆವು. ಎರಡು ವಿಧವಾದ ಕರ್ವ್ಸ್ ಮತ್ತು ಪಾಲಿಗಾನ್ ಗಳನ್ನು ಬಿಡಿಸಿಬಹುದು ಎನ್ನುವುದನ್ನು ನೀವಿಲ್ಲಿ ಗಮನಿಸಿರಬಹುದು.
09:41 ಮೊದಲನೆಯದು Filled ಎನ್ನುವ ಆಯ್ಕೆಯನ್ನು ಉಪಯೋಗಿಸಿಕೊಂಡು ಮತ್ತು ಇನ್ನೊಂದು fill ಆಯ್ಕೆಯ ಹೊರತಾಗಿ. ಯಾವಾಗ ನೀವು Filled ಆಯ್ಕೆಯನ್ನು ಉಪಯೋಗಿಸುತ್ತೀರೋ ಆಗ ಕರ್ವ್ ಬಣ್ಣದಿಂದ ತುಂಬಿರುತ್ತದೆ.
09:52 ಕರ್ವ್ ಅನ್ನು ಬಿಡಿಸಲು, Curve ಟೂಲ್ ಬಾರ್ ನ ಪ್ರತಿಯೊಂದು ಆಯ್ಕೆಯು ಸಹ ಭಿನ್ನವಾದ ಮೌಸ್ ಕಾರ್ಯಾಚರಣೆಯ ಮಾದರಿಯನ್ನು ಹೊಂದಿರುವುದನ್ನೂ ನೀವು ಗಮನಿಸಿರಬಹುದು.
10:02 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ. Curve ಟೂಲ್ ಬಾರ್ ನ ಎಲ್ಲಾ ಆಯ್ಕೆಗಳನ್ನು ಉಪಯೋಗಿಸಿಕೊಂಡು ಕರ್ವ್ಸ್ ಮತ್ತು ಪಾಲಿಗಾನ್ ಅನ್ನು ಬಿಡಿಸಿ.
10:10 ಹೇಗೆ ಕರ್ಸರ್ ನ ಆಕಾರ ಮತ್ತು ಮೌಸ್ ನ ಕಾರ್ಯಾಚರಣೆ, ಕರ್ವ್ ಮತ್ತು ಪಾಲಿಗಾನ್ ನ ಪ್ರತಿಯೊಂದು ಆಯ್ಕೆಯೊಂದಿಗೆ ಬದಲಾಗುತ್ತದೆ ಎನ್ನುವುದನ್ನು ಗಮನಿಸಿ.
10:20 Filled ನ ಆಯ್ಕೆಯಲ್ಲಿ ನೀವು ಬಣ್ಣವನ್ನು ಬದಲಾಯಿಸಬಹದು ಎನ್ನುವುದನ್ನು ಪರಿಶೀಲಿಸಿ.
10:25 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ.
10:31 ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.

ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು:

  • ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
  • ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
10:45 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial. org
10:51 "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ.
11:04 ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿರುತ್ತದೆ.

http://spoken-tutorial. org\NMEICT-Intro

11:14 ಈ ಟ್ಯುಟೋರಿಯಲ್ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

Pratik kamble, Vasudeva ahitanal