LibreOffice-Suite-Base/C4/Design-Refine-Database-Design-and-Normalization-Rules/Kannada

From Script | Spoken-Tutorial
Revision as of 11:57, 1 April 2020 by Sandhya.np14 (Talk | contribs)

(diff) ← Older revision | Latest revision (diff) | Newer revision → (diff)
Jump to: navigation, search
Time Narration


00:02 ಲಿಬರ್ ಆಫಿಸ್ ಬೇಸ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಲ್, ಡೇಟಾಬೇಸ್ ಡಿಸೈನ್ ಕುರಿತ ಹಿಂದಿನ ಟ್ಯುಟೋರಿಯಲ್ ನ ಮುಂದುವರಿದ ಭಾಗವಾಗಿದೆ.
00:11 ಇಲ್ಲಿ ನಾವು ಈ ಕೆಳಗಿನ ವಿಷಯಗಳನ್ನು ಕಲಿಯಲಿದ್ದೇವೆ:
00:15 7. ಡೇಟಾಬೇಸ್ ಡಿಸೈನ್ ಪರಿಷ್ಕರಿಸುವುದು,
00:18 8. ನಾರ್ಮಲೈಸೇಶನ್ ನಿಯಮಗಳನ್ನು ಅನ್ವಯಿಸುವುದು,
00:21 9. ಮತ್ತು ಡೇಟಾಬೇಸ್ ಡಿಸೈನ್ ಅನ್ನು ಪರೀಕ್ಷಿಸುವುದು.
00:25 ಕಳೆದ ಟ್ಯುಟೋರಿಯಲ್ ನಲ್ಲಿ ನಾವು, ಟೇಬಲ್ ಸಂಬಂಧಗಳನ್ನು ಸ್ಥಾಪಿಸುವುದಕ್ಕಾಗಿ ಪ್ರೈಮರಿ ಕೀಗಳು ಮತ್ತು ಫಾರಿನ್ ಕೀಗಳನ್ನು ವ್ಯವಸ್ಥೆಗೊಳಿಸುವುದನ್ನು ಕಲಿತೆವು.
00:34 ನಾವೀಗ `ಡೇಟಾಬೇಸ್ ಡಿಸೈನ್’ ಪ್ರಕ್ರಿಯೆಯನ್ನು ಮುಂದುವರಿಸೋಣ.
00:38 ಮೊದಲಿಗೆ, ನಮ್ಮ ಡೇಟಾಬೇಸ್ ಡಿಸೈನ್ ಅನ್ನು ಪರಿಷ್ಕರಿಸೋಣ.
00:42 ನಾವು ಆರಂಭಿಕ ವಿನ್ಯಾಸವನ್ನು ಹೊಂದಿರುವುದರಿಂದ, ನಾವು ಮಾದರಿ ಡೇಟಾದ ಜೊತೆ ಟೇಬಲ್ ಗಳನ್ನು ರಚಿಸಿ ನೆಲೆಸಬಹುದು.
00:50 ನಾವು ಮಾದರಿ ಕ್ವೆರಿಗಳು, ಫಾರ್ಮ್ ಗಳು ಮತ್ತು ರಿಪೋರ್ಟ್ ಗಳನ್ನು ರಚಿಸಬಹುದು ಮತ್ತು ನಮ್ಮ ಆರಂಭಿಕ ಪ್ರಶ್ನೆಗಳಿಗೆ ಉತ್ತರಿಸಲಾಗಿದೆಯೇ ಎಂಬುದನ್ನು ನೋಡಬಹುದು.
00:59 ಅನಗತ್ಯ ಡುಪ್ಲಿಕೇಶನ್ ಗಳನ್ನು ನಾವು ಪರೀಕ್ಷಿಸಬಹುದು ಮತ್ತು ವಿನ್ಯಾಸವನ್ನು ಮಾರ್ಪಾಡು ಮಾಡಿ ಅವುಗಳನ್ನು ಅಳಿಸಿ ಬಿಡಬಹುದು.
01:06 ನಾವು ಮರೆತು ಬಿಟ್ಟಿರುವ ಕಾಲಂಗಳನ್ನು ಸೇರಿಸಬಹುದು.
01:10 ಅಲ್ಲದೆ, ಡೇಟಾಬೇಸ್ ಇಂಟೆಗ್ರಿಟಿಯನ್ನು ಕಾರ್ಯಗತಗೊಳಿಸಲು ಲೈಬ್ರರಿ ಡೇಟಾಬೇಸ್ ಗೆ ಬ್ಯುಸಿನೆಸ್ ರೂಲ್ ಗಳನ್ನು ಸೇರಿಸಬಹುದು.
01:19 ಉದಾಹರಣೆಗೆ, ಬುಕ್ಸ್ ಟೇಬಲ್ ನ ಪ್ರೈಸ್ ಕಾಲಂ ಅಂಕಿಗಳನ್ನು ಹೊಂದಿರಬೇಕು.
01:24 ಇನ್ನೊಂದು ಬ್ಯುಸಿನೆಸ್ ರೂಲ್: ಪುಸ್ತಕವೊಂದನ್ನು ನೀಡಿದ ಒಂದು ತಿಂಗಳ ನಂತರವೇ ರಿಟರ್ನ್ ಡೇಟ್ ಬರುವಂತೆ ಮಾಡಬಹುದು.
01:32 ಅಥವಾ, ನಿರ್ದಿಷ್ಟ ಕ್ರಿಯೆ ಉಂಟಾದ ಸಂದರ್ಭದಲ್ಲಿ, ಮುಂದಿನ ಕ್ರಮಗಳನ್ನು ಪ್ರಚೋದಿಸಬೇಕು.
01:39 ಹೀಗೆ, ಪುಸ್ತಕ ಹಿಂತಿರುಗಿಸುವ ದಿನಾಂಕ ಮೀರಿದ್ದರೆ, ಸದಸ್ಯರಿಗೆ ಜ್ಞಾಪಿಸುವ ಇಮೇಲ್ ಅನ್ನು ಕಳುಹಿಸಲು ಡೇಟಾಬೇಸ್ ನಲ್ಲಿ ನಾವು ಕ್ರಮಗಳನ್ನು ವ್ಯವಸ್ಥೆಗೊಳಿಸಬಹುದು.
01:50 ಈ ರೀತಿ ನಾವು ಮರುವಿನ್ಯಾಸಗೊಳಿಸಿದಂತೆ, ಹೊಸ ಟೇಬಲ್ ಗಳು, ಕಾಲಂಗಳು, ನಿಯಮಗಳು ಅಥವಾ ನಿರ್ಬಂಧಗಳನ್ನು ನಾವು ಪರಿಚಯಿಸಬಹುದು.
01:58 ಹಾಗೂ, ಡೇಟಾ ಇಂಟೆಗ್ರಿಟಿಯ ನಷ್ಟವಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನಾವು ಹಿಂದಿನ ಹಂತಕ್ಕೆ ಹೋಗಬೇಕಾಗುತ್ತದೆ.
02:07 ನಂತರ ನಾವು ನಾರ್ಮಲೈಸೇಶನ್ ನಿಯಮಗಳನ್ನು ಅನ್ವಯಿಸಬಹುದು.
02:13 ಈ ಕೆಳಗಿನವುಗಳನ್ನು ನೋಡಲು ಇವುಗಳನ್ನು ಬಳಸಲಾಗುತ್ತದೆ:
02:17 a) ವ್ಯವಸ್ಥಿತವಾಗಿ ಜೋಡಿಸಲಾಗಿದೆಯೇ ಎಂದು ಮತ್ತು,
02:20 b)ನಾವು ಹಿಂದೆ ನೋಡಿದ ತಿದ್ದುಪಡಿಯ ಅನೊಮಲಿಗಳಿಂದ ಮುಕ್ತವಾಗಿದೆಯೇ ಎಂದು.
02:25 ಡೇಟಾಬೇಸ್ ಡಿಸೈನ್ ಗೆ ನಿಯಮಗಳು ಅಥವಾ ನಾರ್ಮಲ್ ಫಾರ್ಮ್ ಗಳನ್ನು ಅನ್ವಯಿಸುವ ಪ್ರಕ್ರಿಯೆಯನ್ನು ನಾರ್ಮಲೈಸೇಶನ್ ಎಂದು ಕರೆಯಲಾಗುತ್ತದೆ.
02:33 ನಮ್ಮ ಟ್ಯುಟೋರಿಯಲ್ ನಲ್ಲಿ ಮೊದಲ ಮೂರು ನಾರ್ಮಲ್ ಫಾರ್ಮ್ ಗಳನ್ನು ನೋಡೋಣ.
02:38 ಫಸ್ಟ್ ನಾರ್ಮಲ್ ಫಾರ್ಮ್ ಅನ್ನು ನಾವೀಗ ನೋಡೋಣ.

ಎಲ್ಲಾ ಕಾಲಂ ಮೌಲ್ಯಗಳು ಅಟೋಮಿಕ್ ಆಗಿರಬೇಕು ಎಂದು `ಫಸ್ಟ್ ನಾರ್ಮಲ್ ಫಾರ್ಮ್’ ಅಥವಾ 1NF ಹೇಳುತ್ತದೆ.

02:51 ಉದಾಹರಣೆಗೆ, ಬುಕ್ಸ್ ಟೇಬಲ್ ನಲ್ಲಿರುವ ಪ್ರೈಸ್ ಕಾಲಂ ನ ಪ್ರತಿ ಸೆಲ್ ಸಹ ಒಂದು ಮೌಲ್ಯವನ್ನು ಮಾತ್ರ ಹೊಂದಿರಬೇಕು.
02:59 ಅಂದರೆ, ಆ ಕಾಲಂ, ಪುಸ್ತಕದ ಒಂದು ಬೆಲೆಯನ್ನು ಹೊರತುಪಡಿಸಿ ಬೇರೆ ಏನನ್ನೂ ಹೊಂದಿರಬಾರದು.
03:07 ಇದೇ ರೀತಿ, ಆಥರ್ಸ್ ಟೇಬಲ್ ನ ಪ್ರತಿ ಫಸ್ಟ್ ನೇಮ್ ಸೆಲ್, ಲೇಖಕರ ಮೊದಲ ಹೆಸರನ್ನು ಮಾತ್ರ ಹೊಂದಿರಬೇಕು.
03:16 ಕಾಲಂಗಳ ಗುಂಪುಗಳ ಪುನರಾವರ್ತನೆ ಆಗಬಾರದು ಎಂದು ಸಹ ಫಸ್ಟ್ ನಾರ್ಮಲ್ ಫಾರ್ಮ್ ಹೇಳುತ್ತದೆ.
03:23 ಉದಾಹರಣೆಗೆ, ಪ್ರಕಾಶಕರೊಬ್ಬರು ಮೂರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಎಂದು ಭಾವಿಸೋಣ.
03:29 ಈಗ, ಪಬ್ಲಿಷರ್ಸ್ ಟೇಬಲ್ ರಚನೆಯು ಈ ಕೆಳಗಿನ ಕಾಲಂಗಳನ್ನು ಹೊಂದಿರುತ್ತದೆ:
03:34 ಪಬ್ಲಿಷರ್ Id, ಪಬ್ಲಿಷರ್, ಬುಕ್1, ಆಥರ್ 1, ಬುಕ್ 2, ಆಥರ್ 2, ಬುಕ್ 3, ಆಥರ್ 3.
03:47 ಇಲ್ಲಿ 'ಬುಕ್' ಮತ್ತು 'ಆಥರ್' ಗುಂಪುಗಳು ಮೂರು ಬಾರಿ ಪುನರಾವರ್ತನೆಯಾಗುವುದನ್ನು ಗಮನಿಸಿ.
03:52 ಹೀಗೆ, ಒಂದುವೇಳೆ ನಾವು ಇಂತಹ ಪುನರಾವರ್ತಿತ ಗುಂಪುಗಳನ್ನು ನೋಡಿದರೆ, ನಮ್ಮ ವಿನ್ಯಾಸವನ್ನು ನಾವು ಮರುಪರಿಶೀಲನೆಗೆ ಒಳಪಡಿಸಬೇಕು.
03:58 ಈಗ, ಒಂದುವೇಳೆ ಪ್ರಕಾಶಕರು ಇನ್ನೂ ಹತ್ತು ಪುಸ್ತಕಗಳನ್ನು ಪ್ರಕಟಿಸಿದರೆ, 20 ಕಾಲಂಗಳನ್ನು ಸೇರಿಸುವ ಮೂಲಕ ನಾವು ಟೇಬಲ್ ರಚನೆಯನ್ನು ಬದಲಾಯಿಸಬೇಕಾಗುತ್ತದೆ.
04:08 ಈ ರೀತಿ, ಡೇಟಾ ಬದಲಾದಂತೆ ಡೇಬಲ್ ವಿನ್ಯಾಸ ಒಂದೇ ರೀತಿ ಇರುವುದಿಲ್ಲ ಎಂಬುದನ್ನು ನಾವು ನೋಡಬಹುದು.
04:14 ಅಲ್ಲದೆ, ಪುಸ್ತಕ ಅಥವಾ ಲೇಖಕರ ಹೆಸರಿನ ಮೂಲಕ ಹುಡುಕುವುದು ಮತ್ತು ವರ್ಗೀಕರಿಸುವುದು ಸುದೀರ್ಘ ಕೆಲಸವೆನಿಸುತ್ತದೆ.
04:23 ಇದಕ್ಕಾಗಿ, ಟೇಬಲ್ ಅನ್ನು ಎರಡು ಅಥವಾ ಮೂರು ಟೇಬಲ್ ಗಳಾಗಿ ವಿಂಗಡಿಸಿ ನಾವು ಈ ನ್ಯೂನತೆಯನ್ನು ಸರಿಪಡಿಸಬಹುದು.
04:30 ನಮ್ಮ ಉದಾಹರಣೆಯಲ್ಲಿ, ಸ್ಕ್ರೀನ್ ನಲ್ಲಿರುವ ಚಿತ್ರದಲ್ಲಿ ತೋರಿಸಿರುವಂತೆ, ಮೇಲಿನ ಟೇಬಲ್ ಅನ್ನು ಪಬ್ಲಿಷರ್ಸ್, ಬುಕ್ಸ್ ಮತ್ತು ಆಥರ್ಸ್ ಆಗಿ ವಿಂಗಡಿಸುತ್ತೇವೆ.
04:41 ಈ ವಿನ್ಯಾಸವು ಟೇಬಲ್ ಅನ್ನು ಫಸ್ಟ್ ನಾರ್ಮಲ್ ಫಾರ್ಮ್ ಗೆ ತರುತ್ತದೆ.
04:47 ಮತ್ತು, ಪ್ರಕಾಶಕರು ಮತ್ತು ಪುಸ್ತಕಗಳ ಕುರಿತ ಡೇಟಾವು ಬದಲಾದಂತೆ ಟೇಬಲ್ ರಚನೆಗಳನ್ನು ಸ್ಥಿರವಾಗಿರಿಸುತ್ತದೆ.
04:56 ನಾವೀಗ ಸೆಕೆಂಡ್ ನಾರ್ಮಲ್ ಫಾರ್ಮ್ ಅನ್ನು ನೋಡೋಣ.
05:00 `ಟೇಬಲ್’ ಒಂದು 1NF ನಲ್ಲಿ ದ್ದರೆ, ಇದನ್ನು ಸೆಕೆಂಡ್ ನಾರ್ಮಲ್ ಫಾರ್ಮ್ ಅಥವಾ 2NF ಎಂದು ಕರೆಯಲಾಗುತ್ತದೆ.
05:07 ಹಾಗೂ ಪ್ರತಿ ನಾನ್-ಕೀ ಕಾಲಂ, ಇಡೀ ಪ್ರೈಮರಿ ಕೈಯನ್ನು ಅವಲಂಬಿಸಿರುತ್ತದೆ.
05:14 ಒಂದಕ್ಕಿಂತ ಹೆಚ್ಚು ಕಾಲಂ ಹೊಂದಿರುವ ಪ್ರೈಮರಿ ಕೀಯನ್ನು ನಾವು ಹೊಂದಿದ್ದಾಗ ಈ ನಿಯಮ ಅನ್ವಯವಾಗುತ್ತದೆ.
05:22 ಉದಾಹರಣೆಗೆ, ನಾವೀಗ ಈ ಕೆಳಗಿನ ಕಾಲಂಗಳ ಜೊತೆ ಬುಕ್ಸ್ ಇಶ್ಯುಡ್ ಕಾಲಂ ಅನ್ನು ಪರಿಗಣಿಸೋಣ.
05:29 BookId, MemberId, BookTitle ಮತ್ತು 'BookId' ಮತ್ತು 'MemberId' ಜೊತೆ IssueDate, ಟೇಬಲ್ ನಲ್ಲಿ ಪ್ರೈಮರಿ ಕೀ ರೂಪಿಸುತ್ತವೆ.
05:42 ಈಗ BookTitle ಕಾಲಂ ಅನ್ನು ಗಮನಿಸಿ.
05:45 ನಾವು `ಬುಕ್ಸ್’ ಟೇಬಲ್ ನಲ್ಲಿ `ಬುಕ್ ಐ.ಡಿ’ಯನ್ನು ಸುಧಾರಿಸಿ `ಬುಕ್ ಟೈಟಲ್’ ಪಡೆಯಬಹುದು.
05:52 ಅಂದರೆ, `ಬುಕ್ ಟೈಟಲ್,’ `ಬುಕ್ ಐ.ಡಿ’ಯನ್ನು ಅವಲಂಬಿಸಿದೆಯೇ ಹೊರತು, `ಮೆಂಬರ್ ಐ.ಡಿ’ಯನ್ನಲ್ಲ.
06:00 ಹೀಗೆ ಇದು ಇಡೀ ಪ್ರೈಮರಿ ಕೀಯನ್ನು ಅವಲಂಬಿಸಿಲ್ಲ.
06:06 ಈ ಟೇಬಲ್ ಅನ್ನು ಸೆಕೆಂಡ್ ನಾರ್ಮಲ್ ಫಾರ್ಕ್ ಗೆ ತರಲು, ನಾವು ಈ ಟೇಬಲ್ ನಿಮದ `ಬುಕ್ ಟೈಟಲ್’ ತೆಗೆಯಬೇಕು.
06:14 ಮತ್ತು `ಪ್ರೈಮರಿ ಕೀ’ ಹಾಗೂ ಕಾಲಂಗಳನ್ನು ಸಂಪೂರ್ಣವಾಗಿ ಅವಲಂಬಿಸಿರುವ ಕಾಲಂಗಳನ್ನು ಮಾತ್ರ ಉಳಿಸಿಕೊಳ್ಳಬೇಕು.
06:23 ಇಶ್ಯು ಡೇಟ್ ಕಾಲಂ ಅನ್ನು ಇಲ್ಲಿ ಉಳಿಸಿಕೊಳ್ಳಲಾಗುತ್ತದೆ, ಏಕೆಂದರೆ ಇದು ಸಂಪೂರ್ಣವಾಗಿ ಎರಡೂ `ಪ್ರೈಮರಿ ಕೀ’ ಫೀಲ್ಡ್ ಗಳನ್ನು ಅವಲಂಬಿಸಿದೆ.
06:31 ಈಗ, ಥರ್ಡ್ ನಾರ್ಮಲ್ ಫಾರ್ಮ್ ಅಂದರೆ ಏನು ಎಂಬುದನ್ನು ನೋಡೋಣ.
06:35 ಟೇಬಲ್ ಒಂದು 2NF ನಲ್ಲಿ ಇದ್ದರೆ ಮತ್ತು ಎಲ್ಲಾ ನಾನ್-ಕೀ ಕಾಲಂಗಳು ಪರಸ್ಪರ ಮುಕ್ತವಾಗಿದ್ದರೆ
06:42 ಇದನ್ನು ಥರ್ಡ್ ನಾರ್ಮಲ್ ಫಾರ್ಮ್ (3NF) ಎಂದು ಕರೆಯಲಾಗುತ್ತದೆ.
06:48 ಉದಾಹರಣೆಗೆ, ಬುಕ್ಸ್ ಇಶ್ಯುಡ್ ಟೇಬಲ್ ಅನ್ನು ಬುಕ್ಸ್ ಇಶ್ಯುಡ್ (ಪ್ರೈಮರಿ ಕೀ ಆಗಿ ಕಾರ್ಯನಿರ್ವಹಿಸುವ),
06:54 ಬುಕ್ ಟೈಟಲ್, ಮೆಂಬರ್, ಇಶ್ಯು ಡೇಟ್ ಮತ್ತು ರಿಟರ್ನ್ ಡೇಟ್ ಕಾಲಂಗಳ ಜೊತೆ ಪರಿಗಣಿಸೋಣ.
07:03 ಮತ್ತು ಲೈಬ್ರರಿಯ ವಾಪಸಾತಿ ದಿನಾಂಕದ ನೀತಿಯು ಬುಕ್ ಇಶ್ಯು ಡೇಟ್ ನ ನಂತರದ ಒಂದು ತಿಂಗಳು ಎಂದು ಭಾವಿಸೋಣ.
07:11 ಈಗ, ನಾನ್-ಕೀ ಕಾಲಂ ಆಗಿರುವ `ಇಶ್ಯು ಡೇಟ್’ ಕಾಲಂ ಅನ್ನು ಬಳಸಿ ರಿಟರ್ನ್ ಡೇಟ್ ಅನ್ನು ಬೇಸ್ ಲೆಕ್ಕ ಹಾಕುತ್ತದೆ.
07:19 ಅಂದರೆ, `ರಿಟರ್ನ್ ಡೇಟ್’ ನಿಜವಾಗಿಯೂ `ಇಶ್ಯು ಡೇಟ್’ ಅನ್ನು ಅವಲಂಬಿಸಿದೆಯೇ ಹೊರತು ಬೇರೆ ಯಾವುದೇ ಕಾಲಂಗಳನ್ನು ಅಲ್ಲ.
07:26 ಅಲ್ಲದೆ, `ರಿಟರ್ನ್ ಡೇಟ್’ ಫೀಲ್ಡ್ ನಲ್ಲಿ ನಾವು ಬೇರೆ ದಿನಾಂಕವನ್ನು ನಮೂಸಿದಿದರೆ, ಇದು ನಮ್ಮ ಲೈಬ್ರರಿಯ ನೀತಿಯನ್ನು ಉಲ್ಲಂಘಿಸುತ್ತದೆ.
07:37 ಹೀಗಾಗಿ, ಟೇಬಲ್ ಅನ್ನು `ಥರ್ಡ್ ನಾರ್ಮಲ್ ಫಾರ್ಮ್’ನಲ್ಲಿ ಇಡಲು, ನಾವು ಟೇಬಲ್ ನಿಂದ `ರಿಟರ್ನ್ ಡೇಟ್’ ಕಾಲಂ ಅನ್ನು ತೆಗೆದು ಬಿಡುತ್ತೇವೆ.
07:44 ಈಗ, ಮೊದಲು ಮೂರು ನಾರ್ಮಲ್ ಫಾರ್ಮ್ ಗಳನ್ನು ಹೇಗೆ ಅನ್ವಯಿಸಬಹುದು ಎಂಬುದು ನಮಗೆ ತಿಳಿದಿದೆ.
07:49 ಸಾಮಾನ್ಯವಾಗಿ ನಮ್ಮ ಡೇಟಾಬೇಸ್ ವಿನ್ಯಾಸವು 3NF ನಲ್ಲಿ ನಿಲ್ಲುತ್ತದೆ.
07:55 ನಾರ್ಮಲ್ ಫಾರ್ಮ್ ಗಳು ಮತ್ತು ಡೇಟಾಬೇಸ್ ಡಿಸೈನ್ ಕುರಿತ ಹೆಚ್ಚಿನ ಮಾಹಿತಿಗಾಗಿ ಸ್ಕ್ರೀನ್ ನಲ್ಲಿ ತೋರಿಸಿರುವ ವೆಬ್ ಸೈಟ್ ಗಳಿಗೆ ಭೇಟಿ ನೀಡಿ.
08:05 ಅಂತಿಮವಾಗಿ, ನಾವು ಡೇಟಾಬೇಸ್ ವಿನ್ಯಾಸ ಪ್ರಕ್ರಿಯೆಯ ಕುರಿತು ಚರ್ಚಿಸಿರುವುದರಿಂದ ನಾವೀಗ ನಮ್ಮ ಡೇಟಾಬೇಸ್ ವಿನ್ಯಾಸವನ್ನು ಪರೀಕ್ಷಿಸೋಣ.
08:12 ನಾವು ಡೇಟಾಬೇಸ್ ರಚನೆಯನ್ನು ರಚಿಸಬಹುದು.
08:16 ಇಲ್ಲಿ ನಾವು ಟೇಬಲ್ ಗಳು, ರಿಲೇಶನ್ ಶಿಪ್ ಗಳು, ರೂಲ್ ಗಳು ಅಥವಾ ಕಂಸ್ಟ್ರೇನ್ ಗಳು, ಫಾರ್ಮ್ ಗಳು, ಕ್ವೆರಿಗಳು ಮತ್ತು ರಿಪೋರ್ಟ್ ಗಳನ್ನು ರಚಿಸಬಹುದು.
08:24 ಮತ್ತು ನಾವು ಡೇಟಾಬೇಸ್ ಅನ್ನು ನೈಜ ಡೇಟಾ ಮತ್ತು ಬಳಕೆದಾರರೊಂದಿಗೆ ಪರೀಕ್ಷಿಸಬಹುದು.
08:29 ಡೇಟಾಬೇಸ್ ಗೆ ಡೇಟಾ ಸೇರ್ಪಡೆ, ಪರಿಷ್ಕರಣೆ, ಅಥವಾ ಅಳಿಸಲು ಫಾರ್ಮ್ ಗಳನ್ನು ಬಳಸಿ.
08:36 ರಿಪೋರ್ಟ್ ಫಲಿತಾಂಶಗಳು ಸರಿಯಾಗಿವೆಯೇ ಮತ್ತು ನಿಖರವಾಗಿವೆಯೇ ಎಂಬುದನ್ನು ನೋಡಲು ರಿಪೋರ್ಟ್ ಗಳನ್ನು ರನ್ ಮಾಡಿ.
08:42 ಬಳಕೆಗೆ ಡೇಟಾಬೇಸ್ ಸಿದ್ಧಗೊಂಡಂತೆ, ನಾವು ವೇಗಕ್ಕೆ ಸಂಬಂಧಿಸಿದಂತೆ ಕಾರ್ಯಕ್ಷಮತೆಯನ್ನು ಪರೀಕ್ಷಿಸಬಹುದು.
08:50 ಡೇಟಾವನ್ನು ವೇಗವಾಗಿ ಪಡೆಯಲು ನಾವು ಟೇಬಲ್ ಗಳಿಗೆ ಇಂಡೆಕ್ಸ್ ಗಳನ್ನು ಸೇರಿಸಬಹುದು.
08:55 ಮತ್ತು ನಮ್ಮ ಡೇಟಾಬೇಸ್ ಅಪ್ಲಿಕೇಶನ್ ಯಶಸ್ವಿಯಾಗಿ ಕೆಲಸ ಮಾಡಲು, ನಾವು ಆಗಾಗ ಡೇಟಾಬೇಸ್ ನಿರ್ವಹಣೆಯನ್ನು ಮಾಡಬೇಕು.
09:03 ಈಗ ನಾವು ಈ ಹಂತವನ್ನು ಮುಗಿಸಿರುವುದರಿಂದ, ಇಲ್ಲೊಂದು ಅಸೈನ್ ಮೆಂಟ್ ನೀಡಲಾಗಿದೆ:
09:08 ಮೀಡಿಯಾ ಎನ್ನುವ ಎಂಟಿಟಿಯನ್ನು ಲೈಬ್ರರಿ ಡೇಟಾಬೇಸ್ ಡಿಸೈನ್ ಗೆ ಸೇರಿಸಿ.
09:14 'ಮೀಡಿಯಾ'ವು ಡಿ.ವಿ.ಡಿ ಗಳು ಮತ್ತು ಸಿ.ಡಿ ಗಳನ್ನು ಹೊಂದಿದ್ದು ಅವು ಧ್ವನಿ ಅಥವಾ ವೀಡಿಯೋ ರೂಪದಲ್ಲಿರಬಹುದು.
09:21 ಪುಸ್ತಕಗಳಂತೆಯೇ, ಡಿ.ವಿ.ಡಿ ಗಳು ಮತ್ತು ಸಿ.ಡಿ ಗಳನ್ನು ಲೈಬ್ರರಿ ಸದಸ್ಯರಿಗೆ ನೀಡಬಹುದು.
09:28 ಡೇಟಾಬೇಸ್ ಡಿಸೈನ್ ಪ್ರಕ್ರಿಯೆಯನ್ನು ಅನುಸರಿಸಿ.
09:31 ಮತ್ತು ಮೂರು ನಾರ್ಮಲ್ ಫಾರ್ಮ್ ಗಳನ್ನು ನಿಮ್ಮ ವಿನ್ಯಾಸಕ್ಕೆ ಅನ್ವಯಿಸಿ.
09:37 ಇದರೊಂದಿಗೆ ನಾವು ಲಿಬರ್ ಆಫಿಸ್ ಬೇಸ್ ನಲ್ಲಿ ಡೇಟಾಬೇಸ್ ಡಿಸೈನ್ ಕುರಿತ ಟ್ಯುಟೋರಿಯಲ್ ನ ಮೂರನೇ ಭಾಗದ ಕೊನೆಯ ಹಂತಕ್ಕೆ ಬಂದಿದ್ದೇವೆ.
09:45 ಸಂಕ್ಷಿಪ್ತವಾಗಿ ನಾವು, ಡೇಟಾಬೇಸ್ ಡಿಸೈನ್ ಕುರಿತು ಈ ಕೆಳಗಿನ ವಿಷಯಗಳನ್ನು ಕಲಿತೆವು:
09:50 7. ಡೇಟಾಬೇಸ್ ವಿನ್ಯಾಸವನ್ನು ಪರಿಷ್ಕರಿಸುವುದು.
09:52 8. ನಾರ್ಮಲೈಸೇಶನ್ ನಿಯಮಗಳನ್ನು ಅನ್ವಯಿಸುವುದು.
09:55 9. ಮತ್ತು ಡೇಟಾಬೇಸ್ ವಿನ್ಯಾಸವನ್ನು ಪರೀಕ್ಷಿಸುವುದು.
09:58 ಸ್ಪೋಕನ್ ಟ್ಯುಟೋರಿಯಲ್ ಯೋಜನೆಯು ಟಾಕ್ ಟು ಎ ಟೀಚರ್ ಯೋಜನೆಯ ಒಂದು ಭಾಗವಾಗಿದೆ. ಇದು ಭಾರತ ಸರ್ಕಾರದ ಎಂ.ಎಚ್.ಆರ್.ಡಿ.ಯ ಐ.ಸಿ.ಟಿ. ಮೂಲಕ ನ್ಯಾಷನಲ್ ಮಿಷನ್ ಆನ್ ಎಜುಕೇಶನ್ ನಿಂದ ನೆರವು ಪಡೆದಿದೆ.
10:10 ಈ ಯೋಜನೆಯನ್ನು ಸಂಯೋಜಿಸಿದವರು http://spoken-tutorial.org.
10:15 ಮುಂದಿನ ಲಿಂಕ್ ನಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
10:20 ಈ ಸ್ಕ್ರಿಪ್ಟ್ ನ ಅನುವಾದಕ ಮೆಲ್ವಿನ್, ಮಂಗಳೂರು ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

NaveenBhat, Sandhya.np14