Difference between revisions of "LibreOffice-Suite-Base/C3/Create-tables/Kannada"

From Script | Spoken-Tutorial
Jump to: navigation, search
 
Line 284: Line 284:
 
|-
 
|-
 
||08:44
 
||08:44
|| ಈ ಸ್ಕ್ರಿಪ್ಟ್ ನ ಅನುವಾದಕ ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ---------- .
+
|| ಈ ಸ್ಕ್ರಿಪ್ಟ್ ನ ಅನುವಾದಕ ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
ಧನ್ಯವಾದಗಳು.

Latest revision as of 17:03, 8 April 2020

Time Narration
00:00 ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್- ಟ್ಯುಟೋರಿಯಲ್ ಗೆ ಸ್ವಾಗತ.
00:04 ಈ ಟ್ಯೂಟೋರಿಯಲ್‌ ನಲ್ಲಿ ನಾವು,
00:07 a) ವ್ಯೂ ಗಳನ್ನು ರಚಿಸಿ ಮತ್ತು
00:09 b) ಕಾಪಿ ವಿಧಾನವನ್ನು ಬಳಸಿ,
00:11 ಟೇಬಲ್ ಅನ್ನು ರಚಿಸಲು ಕಲಿಯುವೆವು.
00:13 ಈಗ ನಮ್ಮ “ಲೈಬ್ರರಿ” ಡೇಟಾಬೇಸ್‌ ಗೆ ಹೋಗೋಣ.
00:16 ಎಡ ಪ್ಯಾನಲ್‌ ನಲ್ಲಿರುವ ‘Tables’ ಐಕಾನ್‌ ಮೇಲೆ ಕ್ಲಿಕ್‌ ಮಾಡೋಣ.
00:21 ಬಲ ಪ್ಯಾನಲ್‌ ನಲ್ಲಿ, ನಾವು ಟೇಬಲ್‌ ರಚಿಸುವ ಮೂರು ವಿಧಾನಗಳನ್ನು ನೋಡಬಹುದು.
00:26 ನಾವೀಗ ‘Create View’ ಎಂಬ ಆಯ್ಕೆಯನ್ನು ನೋಡೋಣ.
00:30 ಅದಕ್ಕಿಂತ ಮೊದಲು, ನಾವು ವ್ಯೂ ಗಳ ಕುರಿತು ಕಲಿಯೋಣ. ವ್ಯೂ ಅಂದರೇನು?
00:36 ವ್ಯೂ ಸಹ ಟೇಬಲ್‌ ನಂತೆಯೇ ಇರುತ್ತದೆ ಆದರೆ ಇದರಲ್ಲಿ ಡೇಟಾ ಇರುವುದಿಲ್ಲ.
00:43 ಇದು ಟೇಬಲ್‌ ಗಳಿಂದ ಅಥವಾ ಡೇಟಾಬೇಸ್‌ ನ ಇತರ ವ್ಯೂ ಗಳಿಂದ ಡೇಟಾವನ್ನು ಮರಳಿ ಪಡೆಯುವ ಒಂದು ‘ಕ್ವೆರಿ ಎಕ್ಸ್ಪ್ರೆಶನ್‌’ (query expression) ಎಂದು ಹೇಳಬಹುದು.
00:54 ನೋಡುವಾಗ, ಟೇಬಲ್‌ ನಂತೆಯೇ ಇದು ಡೇಟಾದ ಕಾಲಂಗಳು ಮತ್ತು ರೋ ಗಳನ್ನು ಹೊಂದಿದೆ.
01:00 ವ್ಯೂ ಗಳನ್ನು, ಸೀಮಿತ ಆಕ್ಸೆಸ್‌ ಅನ್ನು ಕೊಡಲು
01:06 ಅಥವಾ ಇದಕ್ಕೆ ಆಧಾರವಾದ ಟೇಬಲ್‌-ಕಾಲಂಗಳು ಮತ್ತು ಟೇಬಲ್‌-ಡೇಟಾಗಳ ರಚನೆ ಮತ್ತು ಹೆಸರುಗಳನ್ನು ಮರೆಮಾಡಲು ಬಳಸಬಹುದು.
01:13 ಉದಾಹರಣೆಗೆ, ಲೈಬ್ರರಿಯ ಎಲ್ಲಾ ಸದಸ್ಯರನ್ನು ಪಟ್ಟಿ ಮಾಡುವ ಒಂದು ಸರಳ ವ್ಯೂ ಅನ್ನು ನಾವು ರಚಿಸಬಹುದು.
01:21 ಮತ್ತು, ಗೌಪ್ಯತೆಯನ್ನು ಕಾಪಾಡಲು ಅವರ ಫೋನ್‌ ನಂಬರ್ ಗಳನ್ನು ಬಿಟ್ಟು ಬಿಡಬಹುದು.
01:27 ಇಲ್ಲಿ ಆಧರಿತ ಟೇಬಲ್‌, ‘Members’ ಆಗಿದೆ.
01:32 ಲೈಬ್ರರಿ ಡೇಟಾಬೇಸ್‌ ನ ಇತರ ಬಳಕೆದಾರರು ಇದನ್ನು ಆಕ್ಸೆಸ್‌ ಮಾಡಲು ಅವಕಾಶವಿದೆ ಆದರೆ Members ಟೇಬಲ್‌ ಗೆ ಸಾಧ್ಯವಿಲ್ಲ.
01:40 ಈ ರೀತಿ, ನಾವು ಸದಸ್ಯರ ಹೆಸರನ್ನು ಮಾತ್ರ ನೋಡಬಹುದು, ಆದರೆ ಫೋನ್‌ ನಂಬರ್ ನೋಡಲು ಸಾಧ್ಯವಿಲ್ಲ.
01:46 ಸರಿ, ನಾವೀಗ ಮೇನ್ ಬೇಸ್‌ ವಿಂಡೋಗೆ ಹಿಂದಿರುಗಿ, ಈ ವ್ಯೂ ಅನ್ನು ರಚಿಸೋಣ.
01:53 ಬಲಗಡೆಯ ಪ್ಯಾನಲ್‌ ನಲ್ಲಿ, ‘Create View’ ಮೇಲೆ ಕ್ಲಿಕ್‌ ಮಾಡೋಣ.
01:58 ಇಲ್ಲಿ, ‘View Design’ ಎಂಬ ಒಂದು ಹೊಸ ವಿಂಡೋ ಮತ್ತು ‘Add tables’ ಎಂಬ ಒಂದು ಪಾಪ್‌-ಅಪ್‌ ವಿಂಡೋಅನ್ನು ನೋಡುತ್ತಿದ್ದೇವೆ.
02:06 ‘Members’ ಮೇಲೆ ಕ್ಲಿಕ್‌ ಮಾಡೋಣ
02:09 ಮತ್ತು ಈ ಪಾಪ್‌- ಅಪ್‌ ವಿಂಡೋಅನ್ನು ಮುಚ್ಚೋಣ.
02:12 ಈಗ ‘View design’ ವಿಂಡೋದಲ್ಲಿದ್ದೇವೆ.
02:16 ‘MemberId’ ಮತ್ತು ‘Name’ ಫೀಲ್ಡ್‌ ಗಳ ಮೇಲೆ ಡಬಲ್‌-ಕ್ಲಿಕ್‌ ಮಾಡುವೆವು.
02:21 'Id' ಫೀಲ್ಡ್‌ ಸೇರಿಸುವುದು ಯಾವಾಗಲೂ ಉಪಯುಕ್ತವಾಗಿದೆ.
02:25 ಏಕೆಂದರೆ, ಈ ವ್ಯೂ ಅನ್ನು ಇತರ ಸಂಬಂಧಿತ ಟೇಬಲ್‌ ಜೊತೆ ಸೇರಿಸಲು ಇದು ನಮಗೆ ಸಹಾಯ ಮಾಡುತ್ತದೆ. ಉದಾಹರಣೆಗೆ, ‘BooksIssued’ ಟೇಬಲ್.
02:34 ನಾವು ಫಂಕ್ಷನ್ ಗಳು, ಕ್ರೈಟೀರಿಯಾ (ಮಾನದಂಡ) ಸೇರಿಸಬಹುದು ಮತ್ತು ಇದನ್ನು ನಮಗೆ ಬೇಕಾದಂತೆ ವರ್ಗೀಕರಿಸಬಹುದು (sort).
02:40 ಸದ್ಯಕ್ಕೆ, ಸದಸ್ಯರ ಹೆಸರುಗಳನ್ನು ಏರಿಕೆ ಕ್ರಮದಲ್ಲಿ ವರ್ಗೀಕರಿಸೋಣ.
02:45 ಇದಕ್ಕಾಗಿ, ಕೆಳಗಿನ ವಿಭಾಗದಲ್ಲಿ ‘Name’ ಕಾಲಂನಡಿ ಇರುವ ‘Sort’ ರೋನಲ್ಲಿ, ಖಾಲಿ ಸೆಲ್‌ ಮೇಲೆ ಕ್ಲಿಕ್‌ ಮಾಡೋಣ.
02:54 ನಂತರ ‘ascending’ ಮೇಲೆ ಕ್ಲಿಕ್‌ ಮಾಡೋಣ.
02:58 ನಮ್ಮ ಮೊದಲ ವ್ಯೂ ಅನ್ನು ಸೇವ್‌ ಮಾಡೋಣ.
03:01 ಇಲ್ಲಿ, ಈ ವ್ಯೂ ಗಾಗಿ ನಾವು ಒಂದು ವಿವರಣಾತ್ಮಕ ಹೆಸರನ್ನು ಟೈಪ್‌ ಮಾಡೋಣ –‘View: Members Name Only’.
03:10 ಮತ್ತು ‘OK ‘ ಬಟನ್‌ ಮೇಲೆ ಕ್ಲಿಕ್ ಮಾಡೋಣ.
03:14 ಆಧರಿತ ಡೇಟಾವನ್ನು ನೋಡಲು, ನಾವು ಮೇಲ್ಭಾಗದಲ್ಲಿ ‘Edit’ ಮೆನು ಮೇಲೆ ಕ್ಲಿಕ್‌ ಮಾಡೋಣ.
03:22 ನಂತರ, ಕೆಳಗೆ ‘Run Query’ ಮೇಲೆ ಕ್ಲಿಕ್‌ ಮಾಡೋಣ.
03:27 ಮೇಲ್ತುದಿಯಲ್ಲಿ, ʼಲೈಬ್ರರಿʼಯ ಎಲ್ಲಾ ಸದಸ್ಯರನ್ನು ಏರಿಕೆ ಕ್ರಮದಲ್ಲಿ ಪಟ್ಟಿ ಮಾಡಿರುವ ಹೊಸ ವಿಭಾಗವನ್ನು ನೋಡುತ್ತೇವೆ.
03:36 ನಮಗೆ ಯಾವುದೇ ಫೋನ್ ನಂಬರ್ ಗಳು ಕಾಣುತ್ತಿಲ್ಲ ಎಂದು ಗಮನಿಸಿ.
03:40 ಮತ್ತು ಇಲ್ಲಿ ನಮ್ಮ ಸರಳ ವ್ಯೂ ಇದೆ.
03:43 ನಮ್ಮ ಅಗತ್ಯತೆಗೆ ತಕ್ಕಂತೆ ನಾವು ವ್ಯೂ ಗಳನ್ನು ರಚಿಸಿ, ಅವುಗಳನ್ನು ಡಿಸೈನ್ ಮಾಡಬಹುದು.
03:48 ಮುಂದಿನ ಟಾಪಿಕ್ ಗೆ ಹೋಗುವ ಮೊದಲು, ಇಲ್ಲೊಂದು ಅಸೈನ್ಮೆಂಟ್ ಇದೆ.
03:53 ಸದಸ್ಯರಿಗೆ (Members) ಇಶ್ಯೂ ಮಾಡಿರುವ (Books Issued) ಮತ್ತು ಕೇವಲ ಚೆಕ್-ಇನ್ ಆಗದೇ ಇರುವ ಪುಸ್ತಕಗಳ ಒಂದು ವ್ಯೂ ಅನ್ನು ರಚಿಸಿ.
04:01 ಈ ವ್ಯೂ ನಲ್ಲಿ, ಈ ಫೀಲ್ಡ್ ಗಳನ್ನು ಸೇರಿಸಿ: ‘Book Titles, Member Names, Issue Date’ ಮತ್ತು ‘Return Date’.
04:12 ವ್ಯೂ ಅನ್ನು 'View: List of Books not checked in' ಎಂದು ಹೆಸರಿಸಿ.
04:20 ಸರಿ, ನಾವೀಗ ‘ಕಾಪಿ’ ವಿಧಾನವನ್ನು ಬಳಸಿ ಟೇಬಲ್ ಗಳನ್ನು ರಚಿಸಲು ಕಲಿಯೋಣ.
04:25 ಟೇಬಲ್ ರಚನೆಗಳು ಒಂದೇ ತೆರನಾಗಿರುತ್ತವೆ ಎಂದು ನಮಗೆ ಗೊತ್ತಿದ್ದರೆ, ಟೇಬಲ್ ರಚಿಸಲು ಇದು ಸುಲಭದ ವಿಧಾನವಾಗಿರುತ್ತದೆ.
04:33 ಇದಕ್ಕಾಗಿ, ನಮ್ಮ ಲೈಬ್ರರಿಯು ಡಿ.ವಿ.ಡಿ.ಗಳು ಮತ್ತು ಸಿ.ಡಿ.ಗಳನ್ನು ಹೊಂದಿದೆ ಎಂದು ನಾವು ಭಾವಿಸೋಣ.
04:39 ನಾವು ಈ ಡೇಟಾವನ್ನು “ಮೀಡಿಯಾ” ಎಂಬ ಹೊಸ ಟೇಬಲ್ ನಲ್ಲಿ ಸ್ಟೋರ್ ಮಾಡಬಹುದು.
04:44 ಉದಾಹರಣೆಗೆ, ಸಿ.ಡಿ. ಅಥವಾ ಡಿ.ವಿ.ಡಿ. ಶೀರ್ಷಿಕೆ ಮತ್ತು ಪ್ರಕಟಣೆಯ ವರ್ಷವನ್ನು ಹೊಂದಿರಬಹುದು.
04:51 ಆಡಿಯೋ ಮತ್ತು ವೀಡಿಯೋಗಳನ್ನು ಪ್ರತ್ಯೇಕಿಸಲು, “ಮೀಡಿಯಾ ಟೈಪ್” ಎಂಬ ಒಂದು ಫೀಲ್ಡ್ ಅನ್ನು ಸೇರಿಸೋಣ.
05:00 ಈಗ, ‘Books’ ಟೇಬಲ್, ಸರಿಸುಮಾರು ಒಂದೇ ರೀತಿಯ ಫೀಲ್ಡ್ ಗಳನ್ನು ಹೊಂದಿರುವುದರಿಂದ ನಾವು ‘Books’ ಟೇಬಲ್ ಅನ್ನು ಕಾಪಿ-ಪೇಸ್ಟ್ ಮಾಡಬಹುದು.
05:08 ನಂತರ, ಈ ಪ್ರಕ್ರಿಯೆಯಲ್ಲಿ ಫೀಲ್ಡ್ ಗಳು ಮತ್ತು ಟೇಬಲ್ ಹೆಸರನ್ನು ರಿನೇಮ್ ಮಾಡಬಹುದು.
05:14 ಇದು ಹೇಗೆಂದು ನೋಡೋಣ.
05:16 ನಾವೀಗ ಮುಖ್ಯ ಬೇಸ್-ವಿಂಡೋಗೆ ಹೋಗೋಣ.
05:19 ಇಲ್ಲಿ, ‘Books’ ಟೇಬಲ್ ಮೇಲೆ ರೈಟ್-ಕ್ಲಿಕ್ ಮಾಡೋಣ.
05:23 ಇಲ್ಲಿ ‘Copy’ ಆಯ್ಕೆಯನ್ನು ನೋಡಬಹುದು. ಇದರ ಮೇಲೆ ಕ್ಲಿಕ್ ಮಾಡೋಣ.
05:28 ನಂತರ ಅದರ ಮೇಲೆ ರೈಟ್-ಕ್ಲಿಕ್ ಮಾಡೋಣ.
05:31 ಇಲ್ಲಿರುವ ಬೇರೆ ಬೇರೆ ಆಯ್ಕೆಗಳನ್ನು ಗಮನಿಸಿ. ಇಲ್ಲಿ ‘Paste’ ಮತ್ತು ‘Paste Special’ ಸಹ ಇವೆ.
05:39 ನಾವು ನಿರ್ದಿಷ್ಟ ಫಾರ್ಮ್ಯಾಟ್ ನಲ್ಲಿ ಕಾಪಿ ಮತ್ತು ಪೇಸ್ಟ್ ಗಳನ್ನು ಬಳಸಬಹುದು.
05:44 ಸಾಧ್ಯವಿರುವ ಫಾರ್ಮ್ಯಾಟ್ ಗಳೆಂದರೆ ‘ಫಾರ್ಮ್ಯಾಟೆಡ್ ಟೆಕ್ಸ್ಟ್, HTML’ ಅಥವಾ ‘ಡೇಟಾ ಸೋರ್ಸ್ ಟೇಬಲ್’.
05:51 ಹೀಗೆ, ನಾವಿಲ್ಲಿ ಡೇಟಾಬೇಸ್ ಟೇಬಲ್ ಅನ್ನು ಆರಿಸಿಕೊಳ್ಳಬಹುದು
05:55 ಅಥವಾ ನಾವು ರೈಟ್- ಕ್ಲಿಕ್ ಮೆನುವಿನಿಂದ ‘Paste’ ಅನ್ನು ಆಯ್ಕೆಮಾಡಬಹುದು.
05:59 ಇದು ಒಂದು ವಿಜಾರ್ಡ್ ಅನ್ನು ತೆರೆಯುತ್ತದೆ. ಈ ವಿಂಡೋ ನಲ್ಲಿ ನಾವು,
06:03 ‘Table name’ಗಾಗಿ, ‘Media’ ಎಂದು ಟೈಪ್ ಮಾಡಿ, ನಮ್ಮ ಟೇಬಲ್ ಅನ್ನು ರಿನೇಮ್ ಮಾಡುವೆವು.
06:11 ಆಯ್ಕೆಗಳಲ್ಲಿ, 'Definition and data' ಮೇಲೆ ಕ್ಲಿಕ್ ಮಾಡುವೆವು.
06:16 ಈಗ ‘Next’ ಬಟನ್ ಮೇಲೆ ಕ್ಲಿಕ್ ಮಾಡೋಣ.
06:19 ಮುಂದಿನ ವಿಂಡೋನಲ್ಲಿ, ನಾವು ಕಾಲಂಗಳನ್ನು ಸೇರಿಸಲಿದ್ದೇವೆ.
06:23 ಇಲ್ಲಿ ವಿವರಣೆಗಾಗಿ ನಾವು ‘BookId, title’ ಮತ್ತು ‘publish-year’ ಗಳನ್ನು ಆರಿಸಿಕೊಳ್ಳೋಣ.
06:29 ಈಗ, ಎಡಗಡೆ ಇರುವ ಈ ಫೀಲ್ಡ್ ಗಳನ್ನು ಆಯ್ಕೆಮಾಡಿ, ಅವುಗಳನ್ನು ಬಲಗಡೆಗೆ ಸರಿಸಲು ಸಿಂಗಲ್- ಆರೋ- ಬಟನ್ ಅನ್ನು ಬಳಸುವೆವು.
06:39 ನಂತರ ‘Next’ ಬಟನ್ ಮೇಲೆ ಕ್ಲಿಕ್ ಮಾಡುವೆವು.
06:42 ಮುಂದಿನ ವಿಂಡೋದಲ್ಲಿ, ನಮ್ಮ ಕಾಲಂಗಳನ್ನು ನೋಡುತ್ತೇವೆ.
06:46 ಇಲ್ಲಿ, ಫೀಲ್ಡ್ ಗಳನ್ನು ರಿನೇಮ್ ಮಾಡಬಹುದು. ಅವುಗಳ ಡೇಟಾ-ಟೈಪ್ ಗಳನ್ನು ಸಹ ಬದಲಾಯಿಸಬಹುದು.
06:51 ನಾವು ‘BookId ‘ಯನ್ನು ‘MediaId’ ಎಂದು ರಿನೇಮ್ ಮಾಡಿ,
06:55 ನಂತರ ‘Create’ ಬಟನ್ ಮೇಲೆ ಕ್ಲಿಕ್ ಮಾಡುವೆವು.
06:59 ಮುಖ್ಯ ಬೇಸ್-ವಿಂಡೋನಲ್ಲಿ, ನಮ್ಮ ಹೊಸ ‘Media’ ಟೇಬಲ್ ಇದೆ.
07:05 ಈಗ, ಆಡಿಯೋ ಅಥವಾ ವೀಡಿಯೋ ಎಂಬ ಮಾಹಿತಿಗಾಗಿ, ‘MediaType’ ಎಂಬ ಹೊಸ ಫೀಲ್ಡ್ ಅನ್ನು ಸೇರಿಸಲು, ಈ ಟೇಬಲ್ ಅನ್ನು ಎಡಿಟ್ ಮಾಡೋಣ.
07:15 ಈಗ, ‘Table Design’ ವಿಂಡೋದಲ್ಲಿದ್ದೇವೆ.
07:19 ಇಲ್ಲಿ, ನಾವು ‘MediaType’ ಅನ್ನು ಕೊನೆಯ ಕಾಲಂ ಆಗಿ ಸೇರಿಸೋಣ.
07:24 ‘publishyear’ ಕೆಳಗಿನ ಸೆಲ್ ಮೇಲೆ ಕ್ಲಿಕ್ ಮಾಡೋಣ.
07:27 ಮತ್ತು, 'MediaType’ ಅನ್ನು ‘Field Name’ ಗಾಗಿ ನಮೂದಿಸಿ. ‘Field Type’ ಗಾಗಿ ‘Text’ ಎನ್ನೋಣ.
07:36 ಈಗ ಈ ಟೇಬಲ್ ಡಿಸೈನ್ ಅನ್ನು ಸೇವ್ ಮಾಡೋಣ. ಇಲ್ಲಿಗೆ ನಮ್ಮ ಕೆಲಸ ಮುಗಿಯಿತು.
07:41 ಹೀಗೆ, ‘ಕಾಪಿ’ ವಿಧಾನವನ್ನು ಬಳಸಿ, ನಾವು ಈಗಷ್ಟೇ ನಮ್ಮ ‘Media’ ಟೇಬಲ್ ಅನ್ನು ರಚಿಸಿದ್ದೇವೆ.
07:48 ಸರಿ, ಇಲ್ಲಿ ಇನ್ನೊಂದು ಅಸೈನ್ಮೆಂಟ್ ಇದೆ.
07:51 ‘Use Wizard to Create table’ ವಿಧಾನವನ್ನು ಬಳಸಿ, ಒಂದು ಟೇಬಲ್ ರಚಿಸಿ.
07:57 ಇಲ್ಲಿ ‘Assets’ ಸ್ಯಾಂಪಲ್ ಟೇಬಲ್ ಬಳಸಿ. ಮತ್ತು, ಇದನ್ನು ‘AssetsCopy’ ಎಂದು ರಿನೇಮ್ ಮಾಡಿ.
08:04 ಈ ವಿಧಾನದಲ್ಲಿಯ ವಿವಿಧ ಆಯ್ಕೆಗಳನ್ನು ತಿಳಿದುಕೊಳ್ಳಿ.
08:08 ಇಲ್ಲಿಗೆ, ನಾವು ‘ಲಿಬರ್ ಆಫಿಸ್ ಬೇಸ್’ ನಲ್ಲಿ ಟೇಬಲ್ ಗಳನ್ನು ರಚಿಸುವ ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
08:14 ಸಂಕ್ಷಿಪ್ತವಾಗಿ, ಇಲ್ಲಿ ನಾವು
08:17 a) ವ್ಯೂ ಗಳನ್ನು ರಚಿಸಿ ಮತ್ತು b) ಕಾಪಿ ವಿಧಾನವನ್ನು ಬಳಸಿ ಟೇಬಲ್ ಅನ್ನು ರಚಿಸಲು ಕಲಿತೆವು.
08:23 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org.

ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.

08:44 ಈ ಸ್ಕ್ರಿಪ್ಟ್ ನ ಅನುವಾದಕ ಮಂಗಳೂರಿನಿಂದ ಮೆಲ್ವಿನ್, ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14