Difference between revisions of "LibreOffice-Suite-Base/C3/Create-Subforms/Kannada"

From Script | Spoken-Tutorial
Jump to: navigation, search
 
Line 347: Line 347:
 
|-
 
|-
 
||08:44
 
||08:44
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ  ಮೆಲ್ವಿನ್  ಮತ್ತು ಧ್ವನಿ ---------- .
+
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ  ಮೆಲ್ವಿನ್  ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
 
ಧನ್ಯವಾದಗಳು.
 
ಧನ್ಯವಾದಗಳು.
 
|-
 
|-

Latest revision as of 11:22, 7 April 2020

Time Narration


00:00 ‘ಲಿಬರ್ ಆಫಿಸ್ ಬೇಸ್’ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:04 ಈ ಟ್ಯುಟೋರಿಯಲ್‌ ನಲ್ಲಿ ನಾವು,
00:07 ಸಬ್‌-ಫಾರ್ಮ್‌ ಅನ್ನು ರಚಿಸಲು ಕಲಿಯುವೆವು.
00:09 ಇದಕ್ಕಾಗಿ ನಮ್ಮ ಪರಿಚಿತ “ಲೈಬ್ರರಿ” ಡೇಟಾಬೇಸ್‌ ಉದಾಹರಣೆಯೊಂದಿಗೆ ಮುಂದುವರಿಯೋಣ.
00:15 ನಾವು ಈ ಕೆಳಗಿನ ಸಂದರ್ಭವನ್ನು ಪರಿಗಣಿಸಲಿದ್ದೇವೆ:
00:18 ಲೈಬ್ರರಿಯ ಎಲ್ಲಾ ಸದಸ್ಯರನ್ನು ನಾವು ಹೇಗೆ ಪಟ್ಟಿ ಮಾಡಬಹುದು?
00:22 ಮತ್ತು, ಪ್ರತಿಯೊಬ್ಬ ಸದಸ್ಯನು ಇನ್ನೂ ಹಿಂದಿರುಗಿಸದ ಪುಸ್ತಕಗಳನ್ನು ಮಾತ್ರ ನಾವು ಹೇಗೆ ನೋಡಬಹುದು?
00:31 ಒಂದು ವಿಧಾನವೆಂದರೆ, ಲೈಬ್ರರಿಯ ಎಲ್ಲಾ ಸದಸ್ಯರನ್ನು ಪಟ್ಟಿ ಮಾಡಿ ಒಂದು ಫಾರ್ಮ್‌ ರಚಿಸುವುದು.
00:36 ನಂತರ, ಸದಸ್ಯರು ಇನ್ನೂ ಹಿಂದಿರುಗಿಸದ ಪುಸ್ತಕಗಳನ್ನು ಪಟ್ಟಿ ಮಾಡಲು, ಇದರ ಕೆಳಗೆ ಒಂದು ಸಬ್‌-ಫಾರ್ಮ್‌ ರಚಿಸುವುದು.
00:44 ಈ ಫಾರ್ಮ್‌ ಅನ್ನು ಡಿಸೈನ್ ಮಾಡಿದ ನಂತರ, ನಾವು ಅದನ್ನು ನವೀಕರಿಸಬಹುದು (update).
00:49 ಉದಾಹರಣೆಗೆ, ಸದಸ್ಯನು ಪುಸ್ತಕವನ್ನು ಹಿಂದಿರುಗಿಸಿದಾಗ, ನಾವು ಈ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು.
00:55 ಮತ್ತು, ನಾವು ಡಿಸೈನ್ ಮಾಡಲಿರುವ ಫಾರ್ಮ್‌ ನ ಮಾದರಿ ಸ್ಕ್ರೀನ್‌-ಶಾಟ್‌ ಇಲ್ಲಿದೆ.
01:01 ಗಮನಿಸಿ, ಇದು ಕೆಳಗೆ ಒಂದು ಸಬ್‌-ಫಾರ್ಮ್‌ ಅನ್ನು ಸಹ ತೋರಿಸುತ್ತದೆ.
01:06 ಈಗ ನಮ್ಮ “ಲೈಬ್ರರಿ” ಡೇಟಾಬೇಸ್‌ ತೆರೆಯೋಣ.
01:09 ನಮ್ಮ ಹಿಂದಿನ ಟ್ಯುಟೋರಿಯಲ್ ಗಳಲ್ಲಿ, ನಾವು ‘History of Books Issued to Members’ ಎಂಬ ಕ್ವೆರಿಯನ್ನು ರಚಿಸಿದ್ದೆವು.
01:17 ಈಗ ನಾವು ಈ ಕ್ವೆರಿಯನ್ನು ಮತ್ತು Members ಟೇಬಲ್ ಅನ್ನು ನಮ್ಮ ಹೊಸ ಫಾರ್ಮ್ ರಚಿಸುವುದಕ್ಕಾಗಿ ಬಳಸಲಿದ್ದೇವೆ.
01:25 ಮೊದಲಿಗೆ ಕ್ವೆರಿ ಹೆಸರಿನ ಮೇಲೆ ರೈಟ್- ಕ್ಲಿಕ್ ಮಾಡಿ ಅದನ್ನು ಕಾಪಿ ಮಾಡೋಣ. ನಂತರ ‘Paste’ ಮೇಲೆ ಕ್ಲಿಕ್ ಮಾಡೋಣ.
01:34 ಪಾಪ್- ಅಪ್ ವಿಂಡೋ ನಲ್ಲಿ, ಕ್ವೆರಿ ಹೆಸರಿಗಾಗಿ ಹೊಸ ಹೆಸರನ್ನು ಹೀಗೆ ಟೈಪ್ ಮಾಡೋಣ: ‘Books Not Returned’.
01:42 ಈಗ ‘Books Not Returned’ ಕ್ವೆರಿಯನ್ನು, ಎಡಿಟ್ ಮೋಡ್ ನಲ್ಲಿ ತೆರೆಯೋಣ.
01:48 ‘Query Design’ ವಿಂಡೋದಲ್ಲಿ, ಚೆಕ್- ಇನ್ ಆಗಿರದ ಪುಸ್ತಕಗಳನ್ನು ಮಾತ್ರ ತೋರಿಸಲು ನಾವು ಒಂದು ಕ್ರೈಟಿರಿಯನ್ (ಒರೆಗಲ್ಲು) ಸೇರಿಸೋಣ.
01:58 ಇದಕ್ಕಾಗಿ, ನಾವು ‘CheckedIn’ ಅಡಿಯಲ್ಲಿ, ‘Criterion’ ಕಾಲಂನಲ್ಲಿ ‘equals 0’ ಎಂದು ಟೈಪ್ ಮಾಡಿ,
02:06 ‘Enter’ ಅನ್ನು ಒತ್ತೋಣ.
02:09 ಈಗ ಈ ಕ್ವೆರಿಯನ್ನು ಸೇವ್ ಮಾಡಿ, ವಿಂಡೋಅನ್ನು ಮುಚ್ಚೋಣ.
02:13 ಮುಖ್ಯ ಬೇಸ್ ವಿಂಡೋದಲ್ಲಿ, ಎಡ ಪ್ಯಾನಲ್ ನಲ್ಲಿರುವ ‘Forms’ ಐಕಾನ್ ಮೇಲೆ,
02:20 ನಂತರ ‘Use Wizard to create Form’ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ.
02:25 ಈಗ Form ವಿಜಾರ್ಡ್ ಅನ್ನು ನಾವು ನೋಡಬಹುದು.
02:28 ನಮ್ಮ ಫಾರ್ಮ್ ಅನ್ನು ರಚಿಸಲು, ಎಡಭಾಗದಲ್ಲಿರುವ 8 ಹಂತಗಳನ್ನು ಅನುಸರಿಸೋಣ.
02:34 ‘step 1. field selection’ ನಲ್ಲಿ, ನಾವು ‘Table: Members’ ಅನ್ನುಆರಿಸಿಕೊಳ್ಳೋಣ.
02:40 ನಂತರ ಎಲ್ಲಾ ಫೀಲ್ಡ್ ಗಳನ್ನು ಬಲಗಡೆಗೆ ಸರಿಸಿ,
02:46 ‘Next’ ಬಟನ್ ಮೇಲೆ ಕ್ಲಿಕ್ ಮಾಡೋಣ.
02:49 ಈಗ ‘Step 2. Setup a subform’ ನಲ್ಲಿ ಇದ್ದೇವೆ.
02:54 ಇಲ್ಲಿ, ‘Add subform’ ಚೆಕ್-ಬಾಕ್ಸ್ ಅನ್ನು ಚೆಕ್ ಮಾಡಿ,
02:59 ನಂತರ ‘Subform based on manual selection of fields’ ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ.
03:07 ಈಗ ‘Step 3. Add subform fields’ ಗೆ ಹೋಗೋಣ.
03:11 ಇಲ್ಲಿ, ಕೆಲವು ನಿಮಿಷಗಳ ಹಿಂದೆ ತಯಾರಿಸಿದ ನಮ್ಮ ಹೊಸ ಕ್ವೆರಿಯನ್ನು ಕಾಲ್ ಮಾಡೋಣ.
03:18 ‘Tables or Queries’ ಎಂಬ ಡ್ರಾಪ್-ಡೌನ್ ನಿಂದ, ‘Query: Books Not Returned’ ಅನ್ನು ಆಯ್ಕೆಮಾಡೋಣ.
03:26 ಸ್ಕ್ರೀನ್ ನಲ್ಲಿ ತೋರಿಸಿರುವಂತೆ, ಲಭ್ಯವಿರುವ ಪಟ್ಟಿಯಿಂದ ಆಯ್ದ ಫೀಲ್ಡ್ ಗಳನ್ನು ನಾವು ಬಲಭಾಗಕ್ಕೆ ಸರಿಸುವೆವು. <pause>
03:37 ‘Next’ ಮೇಲೆ ಕ್ಲಿಕ್ ಮಾಡೋಣ.
03:39 ‘Step 4. Get joined fields’.
03:43 ಇಲ್ಲಿ, ನಾವು ಮೇಲಿನ ಎರಡು ಡ್ರಾಪ್- ಡೌನ್ ಗಳಿಂದ ‘MemberId’ ಫೀಲ್ಡ್ ಅನ್ನು ಆಯ್ಕೆ ಮಾಡುವೆವು. ಏಕೆಂದರೆ ಇದು ಮಾತ್ರ ಸಂಬಂಧಿತ ಫೀಲ್ಡ್ ಆಗಿದೆ.
03:53 ‘Next’ ಬಟನ್ ಮೇಲೆ ಕ್ಲಿಕ್ ಮಾಡೋಣ.
03:57 ‘Step 5. Arrange Controls’.
04:00 ಇಲ್ಲಿ, ನಾವು ಫಾರ್ಮ್ ಮತ್ತು ಸಬ್- ಫಾರ್ಮ್ ಗಾಗಿ, ಮೂರನೇ ಆಯ್ಕೆಯಾದ Data sheet ಅನ್ನು ಆಯ್ಕೆಮಾಡಿ,
04:08 Next ಬಟನ್ ಮೇಲೆ ಕ್ಲಿಕ್ ಮಾಡುವೆವು.
04:11 ‘Step 6. Set data entry’.
04:15 ಇಲ್ಲಿ, ನಾವು ಆಯ್ಕೆಗಳನ್ನು ಹಾಗೆಯೇ ಬಿಟ್ಟು Next ಮೇಲೆ ಕ್ಲಿಕ್ ಮಾಡುತ್ತೇವೆ.
04:22 ‘Step 7. Apply Styles’.
04:26 ಇಲ್ಲಿ ನಾವು ಫಾರ್ಮ್ ನ ಹಿನ್ನೆಲೆಗಾಗಿ Grey ಯನ್ನು ಆಯ್ಕೆಮಾಡೋಣ.
04:29 ನಂತರ ಕೊನೆಯ ಹಂತಕ್ಕೆ ಸಾಗೋಣ.
04:32 ‘Step 8. Set Name’.
04:36 ಇಲ್ಲಿ, ನಮ್ಮ ಫಾರ್ಮ್‌ ಗೆ ‘Members Who Need to Return Books’ ಎಂಬ ಒಂದು ವಿವರಣಾತ್ಮಕ ಹೆಸರನ್ನು ಕೊಡೋಣ:
04:45 ನಾವು ಇನ್ನಷ್ಟು ಬದಲಾವಣೆಗಳನ್ನು ಮಾಡಲಿದ್ದೇವೆ. ಆದ್ದರಿಂದ Modify form ಆಯ್ಕೆಯ ಮೇಲೆ ಕ್ಲಿಕ್ ಮಾಡೋಣ.
04:53 ಈಗ ‘Finish’ ಬಟನ್ ಮೇಲೆ ಕ್ಲಿಕ್ ಮಾಡೋಣ.
04:56 ‘Form Design’ ವಿಂಡೋದಲ್ಲಿ, ಎರಡು ಟ್ಯಾಬುಲರ್ ಡೇಟಾ-ಶೀಟ್ ಜಾಗಗಳು ಇರುವುದನ್ನು ಗಮನಿಸಿ.
05:04 ಮೇಲಿನದು ಫಾರ್ಮ್ ಮತ್ತು ಕೆಳಗೆ ಇರುವುದು ಸಬ್-ಫಾರ್ಮ್ ಆಗಿವೆ.
05:11 ನಾವೀಗ ಫಾರ್ಮ್ ಮೇಲ್ಗಡೆ ಒಂದು ಲೇಬಲ್ ಅನ್ನು ಸೇರಿಸೋಣ.
05:15 ಮೇಲ್ತುದಿಯಲ್ಲಿಯ Form Controls ಟೂಲ್ ಬಾರ್ ನಲ್ಲಿ, Label ಐಕಾನ್ ಮೇಲೆ ಕ್ಲಿಕ್ ಮಾಡಿ ಅದನ್ನು ಫಾರ್ಮ್ ನಲ್ಲಿ ಎಳೆಯೋಣ.
05:25 ಲೇಬಲ್ ಮೇಲೆ ಡಬಲ್-ಕ್ಲಿಕ್ ಮಾಡಿದರೆ, ಅದು ತನ್ನ ಪ್ರಾಪರ್ಟೀಸ್ ತೋರಿಸುತ್ತದೆ.
05:31 ಇಲ್ಲಿ, ಲೇಬಲ್ ಗಾಗಿ ‘Members of the Library’ ಎಂದು ಟೈಪ್ ಮಾಡಿ,
05:37 ಫಾಂಟ್ ಶೈಲಿಯನ್ನು ‘Arial, Bold’ ಮತ್ತು ‘Size 12’ ಎಂದು ಬದಲಾಯಿಸುವೆವು. <pause>
05:47 ಇದೇ ರೀತಿ, ಸ್ಕ್ರೀನ್ ನಲ್ಲಿ ತೋರಿಸಿರುವಂತೆ, ಸಬ್-ಫಾರ್ಮ್ ಮೇಲ್ಗಡೆ ಎರಡನೇ ಲೇಬಲ್ ಸೇರಿಸೋಣ.
05:55 ಇದನ್ನು ‘List of Books to be returned by the member’ ಎಂದು ಹೆಸರಿಸೋಣ. <pause>
06:00 ನಂತರ, ಸ್ಕ್ರೀನ್ ನಲ್ಲಿ ತೋರಿಸಿರುವಂತೆ ಫಾರ್ಮ್ ನ ಉದ್ದವನ್ನು ಕಡಿಮೆ ಮಾಡೋಣ.
06:07 ಮತ್ತು ಇಲ್ಲಿ Name ಫೀಲ್ಡ್ ನ ಉದ್ದವನ್ನು ನಾವು ಹೆಚ್ಚಿಸೋಣ. <pause>
06:13 ಹೀಗೆಯೇ, ಸಬ್-ಫಾರ್ಮ್ ನಲ್ಲಿ ‘Book title’ ಫೀಲ್ಡ್ ನ ಉದ್ದವನ್ನು ಹೆಚ್ಚಿಸೋಣ.
06:21 ಇಲ್ಲಿ, ನಾವು ಫಾಂಟ್ ಅನ್ನು ‘Arial, Bold’ ಮತ್ತು ‘Size 8’ ಎಂದು ಬದಲಾಯಿಸೋಣ.
06:28 ಫಾರ್ಮ್ ಗಾಗಿ ಬಿಳಿ ಮತ್ತು ಸಬ್-ಫಾರ್ಮ್ ಗಾಗಿ ‘Blue 8’ ಅನ್ನು ಹಿನ್ನೆಲೆ ಬಣ್ಣವಾಗಿ ಬಳಸೋಣ. <pause>
06:37 ನಂತರ, ‘MemberId’ ಕಾಲಂ ಮೇಲೆ ರೈಟ್-ಕ್ಲಿಕ್ ಮಾಡಿ, ‘Hide column’ ಆಯ್ಕೆಯನ್ನು ಆರಿಸಿಕೊಂಡು ಅದನ್ನು ಮರೆಮಾಡೋಣ.
06:47 ಸರಿ, ನಮ್ಮ ಕೆಲಸ ಮುಗಿಯಿತು. ಈಗ ಫಾರ್ಮ್ ವಿನ್ಯಾಸವನ್ನು ಸೇವ್ ಮಾಡಿ, ಅದನ್ನು ಪರೀಕ್ಷಿಸೋಣ.
06:54 ಮುಖ್ಯ ಬೇಸ್ ವಿಂಡೋದಲ್ಲಿ, ನಾವು ‘Members Who Need to Return Books’ ಫಾರ್ಮ್ ಮೇಲೆ ಡಬಲ್-ಕ್ಲಿಕ್ ಮಾಡಿ ಅದನ್ನು ತೆರೆಯೋಣ.
07:03 ಆ ಫಾರ್ಮ್ ಇಲ್ಲಿದೆ.
07:05 ಅಪ್ ಅಥವಾ ಡೌನ್ ಆರೋ ಕೀಗಳನ್ನು ಬಳಸಿ ಅಥವಾ ವಿವಿಧ ಸದಸ್ಯರ ಹೆಸರಿನ ಮೇಲೆ ಹಾಗೇ ಕ್ಲಿಕ್ ಮಾಡಿ,
07:12 ಸದಸ್ಯರ ಪಟ್ಟಿಯಲ್ಲಿ ಬ್ರೌಸ್ ಮಾಡೋಣ.
07:16 ಗಮನಿಸಿ,ಕೆಳಗಿನ ಸಬ್-ಫಾರ್ಮ್ ರಿಫ್ರೆಶ್ ಆಗುತ್ತಿದೆ ಮತ್ತು ಹಿಂದಿರುಗಿಸಬೇಕಾದ ಪುಸ್ತಕಗಳನ್ನು ತೋರಿಸುತ್ತಿದೆ.
07:23 ಸಬ್ ಫಾರ್ಮ್ ನಲ್ಲಿ, ನಾವು ಯಾವುದೇ ರೆಕಾರ್ಡ್ ಅನ್ನು ಆರಿಸೋಣ.
07:27 ‘ActualReturnDate’ ಫೀಲ್ಡ್ ನಲ್ಲಿ, ‘12/7/11’ ಎಂದು ಟೈಪ್ ಮಾಡೋಣ. ‘CheckedIn’ ಫೀಲ್ಡ್ ಅನ್ನು ಚೆಕ್ ಮಾಡೋಣ.
07:41 ಮತ್ತು, ‘Enter’ ಅನ್ನು ಒತ್ತೋಣ.
07:45 ಈಗ, ಕೆಳಗಡೆ ಇರುವ ಫಾರ್ಮ್ ನ್ಯಾವಿಗೇಶನ್ ಟೂಲ್-ಬಾರ್ ನಲ್ಲಿ ‘Refresh’ ಐಕಾನ್ ಮೇಲೆ ಕ್ಲಿಕ್ ಮಾಡಿ, ಫಾರ್ಮ್ ಅನ್ನು ರಿಫ್ರೆಶ್ ಮಾಡೋಣ.
07:56 ಈಗಷ್ಟೇ ನಾವು ಎಡಿಟ್ ಮಾಡಿದ ರೆಕಾರ್ಡ್, ಇಲ್ಲಿ ಪಟ್ಟಿಯಾಗಿಲ್ಲ ಎಂಬುದನ್ನು ಗಮನಿಸಿ.
08:02 ಅಂದರೆ, ಪುಸ್ತಕವನ್ನು ಹಿಂದಿರುಗಿಸಲಾಗಿದೆ ಅಥವಾ ಚೆಕ್-ಇನ್ ಮಾಡಲಾಗಿದೆ ಎಂದರ್ಥ.
08:07 ಹೀಗೆ, ಇಲ್ಲಿ ಸಬ್-ಫಾರ್ಮ್ ನೊಂದಿಗೆ ನಮ್ಮ ಫಾರ್ಮ್ ಇದೆ.
08:11 ಇಲ್ಲಿಗೆ ನಾವು ಲಿಬರ್ ಆಫಿಸ್ ಬೇಸ್ ನಲ್ಲಿ, ಸಬ್ ಫಾರ್ಮ್ ಗಳ ಕುರಿತ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
08:17 ಸಂಕ್ಷಿಪ್ತವಾಗಿ ನಾವು,
08:20 ಸಬ್-ಫಾರ್ಮ್ ಅನ್ನು ರಚಿಸಲು ಕಲಿತೆವು.
08:23 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, ರಾಷ್ಟ್ರೀಯ ಸಾಕ್ಷರತಾ ಮಿಷನ್, ICT, MHRD, ಭಾರತ ಸರ್ಕಾರದ ನೆರವು ಪಡೆದಿದೆ.

ಈ ಪ್ರೊಜೆಕ್ಟ್ ಅನ್ನು ಸಂಯೋಜಿಸಿದವರು: http://spoken-tutorial.org. ಕೆಳಗಿನ ಲಿಂಕ್ ನಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿದೆ.

08:44 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14